ರಾಷ್ಟ್ರಪತಿಗಳ ಭಾಷಣವು ಇತ್ತೀಚಿನ ದಿನಗಳಲ್ಲಿ ಭಾರತದ ಗಮನಾರ್ಹ ಅಭಿವೃದ್ಧಿ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ ಮತ್ತು ಭವಿಷ್ಯದ ಬಗ್ಗೆ ಸ್ಪಷ್ಟ ನಿರ್ದೇಶನವನ್ನು ತೋರಿಸುತ್ತದೆ: ಪ್ರಧಾನಮಂತ್ರಿ

ಇಂದು ಸಂಸತ್ತಿನ ಬಜೆಟ್ ಅಧಿವೇಶನದ ಆರಂಭದಲ್ಲಿ ಉಭಯ ಸದನಗಳನ್ನುದ್ದೇಶಿಸಿ ಮಾಡಿದ ರಾಷ್ಟ್ರಪತಿಗಳ ಭಾಷಣವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. “ಇಂದಿನ ಭಾಷಣವು ಸಮಗ್ರ ಮತ್ತು ಒಳನೋಟವುಳ್ಳದ್ದಾಗಿತ್ತು. ಇದು ಭವಿಷ್ಯಕ್ಕಾಗಿ ಸ್ಪಷ್ಟ ನಿರ್ದೇಶನವನ್ನು ಉಲ್ಲೇಖಿಸುವುದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಭಾರತದ ಗಮನಾರ್ಹ ಅಭಿವೃದ್ಧಿ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ..

“ಇಂದಿನ ಭಾಷಣದಲ್ಲಿ, ವಿಕಸಿತ ಭಾರತವನ್ನು ನಿರ್ಮಿಸುವ ಮೇಲಿನ ಒತ್ತು ಸಂಪೂರ್ಣವಾಗಿ ಸೆರೆಹಿಡಿಯಲ್ಪಟ್ಟಿದೆ. ಇದು ಬಲವಾದ ಮತ್ತು ಸ್ವಾವಲಂಬಿ ರಾಷ್ಟ್ರವನ್ನು ನಿರ್ಮಿಸುವ ನಮ್ಮ ಹಂಚಿಕೆಯ ಆಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ” ಎಂದು  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಮನಿಸಿದರು. "ಸುಧಾರಣಾ ಎಕ್ಸ್ಪ್ರೆಸ್ ಅನ್ನು ಮತ್ತಷ್ಟು ವೇಗಗೊಳಿಸಲು ಮತ್ತು ನಾವೀನ್ಯತೆ ಮತ್ತು ಉತ್ತಮ ಆಡಳಿತದ ಮೇಲಿನ ಒತ್ತು ನೀಡುವ ನಮ್ಮ ಸಾಮೂಹಿಕ ಬದ್ಧತೆಯನ್ನು ಇದು ಪುನರುಚ್ಚರಿಸಿತು" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಈ ಸಂದೇಶ ತಿಳಿಸಿದ್ದಾರೆ:

"ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಅವರು ಮಾಡಿದ ಸ್ಪೂರ್ತಿದಾಯಕ ಭಾಷಣದೊಂದಿಗೆ ಇಂದು ಸಂಸತ್ತಿನ ಬಜೆಟ್ ಅಧಿವೇಶನ ಪ್ರಾರಂಭವಾಯಿತು. ನಮ್ಮ ಸಂಸದೀಯ ಸಂಪ್ರದಾಯಗಳಲ್ಲಿ, ಈ ಭಾಷಣವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ, ಏಕೆಂದರೆ ಇದು ಮುಂಬರುವ ತಿಂಗಳುಗಳಲ್ಲಿ ನಮ್ಮ ರಾಷ್ಟ್ರದ ಅಭಿವೃದ್ಧಿ ಪ್ರಯಾಣಕ್ಕೆ ಮಾರ್ಗದರ್ಶನ ನೀಡುವ ನೀತಿ ನಿರ್ದೇಶನ ಮತ್ತು ಸಾಮೂಹಿಕ ಸಂಕಲ್ಪವನ್ನು ವಿವರಿಸುತ್ತದೆ.

ಇಂದಿನ ಭಾಷಣವು ಸಮಗ್ರ ಮತ್ತು ಒಳನೋಟವುಳ್ಳದ್ದಾಗಿತ್ತು. ಇದು ಇತ್ತೀಚಿನ ದಿನಗಳಲ್ಲಿ ಭಾರತದ ಗಮನಾರ್ಹ ಅಭಿವೃದ್ಧಿ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ ಮತ್ತು ಭವಿಷ್ಯಕ್ಕಾಗಿ ಸ್ಪಷ್ಟ ದಿಕ್ಕನ್ನು ತೋರಿಸುತ್ತದೆ. ವಿಕಸಿತ ಭಾರತವನ್ನು ನಿರ್ಮಿಸುವ ಮೇಲಿನ ಒತ್ತು ಸಂಪೂರ್ಣವಾಗಿ ಸೆರೆಹಿಡಿಯಲ್ಪಟ್ಟಿದೆ, ಇದು ಬಲವಾದ ಮತ್ತು ಸ್ವಾವಲಂಬಿ ರಾಷ್ಟ್ರವನ್ನು ನಿರ್ಮಿಸುವ ನಮ್ಮ ಹಂಚಿಕೆಯ ಆಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ. ರೈತರು, ಯುವಕರು, ಬಡವರು ಮತ್ತು ದೀನದಲಿತರಿಗಾಗಿ ನಿರಂತರ ಪ್ರಯತ್ನಗಳನ್ನು ಉಲ್ಲೇಖಿಸುವ ವ್ಯಾಪಕ ಶ್ರೇಣಿಯ ವಿಷಯಗಳನ್ನು ಸಹ ಈ ಭಾಷಣವು ಒಳಗೊಂಡಿದೆ. ಸುಧಾರಣಾ ಎಕ್ಸ್ ಪ್ರೆಸ್ ಅನ್ನು ಮತ್ತಷ್ಟು ವೇಗಗೊಳಿಸಲು ಮತ್ತು ನಾವೀನ್ಯತೆ ಮತ್ತು ಉತ್ತಮ ಆಡಳಿತದ ಮೇಲಿನ ಒತ್ತು ನೀಡುವ ನಮ್ಮ ಸಾಮೂಹಿಕ ಬದ್ಧತೆಯನ್ನು ಇದು ಈ ಮೂಲಕ ಪುನರುಚ್ಚರಿಸಿತು."

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PSBs post record ₹1.98 trillion net profit in FY26 amid robust growth

Media Coverage

PSBs post record ₹1.98 trillion net profit in FY26 amid robust growth
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam, emphasising on the harmony of strength and capability
May 13, 2026
Prime Minister recalls the 1998 Nuclear tests as a defining moment in our nation’s resolve

The Prime Minister, Shri Narendra Modi today recalled the historic Nuclear tests conducted by India in Pokhran in May 1998, describing them as a defining moment in our nation's resolve. “After the May 11 tests, the entire world brought pressure to bear on India, but we demonstrated that no power can bend India”, Shri Modi remarked.

The Prime Minister shared a Sanskrit verse-

“एवं परस्परापेक्षा शक्तिशक्तिमतोः स्थिता ।

न शिवेन विना शक्तिर्न शक्त्या विना शिवः।।”

The Prime Minister wrote on X;

“1998 में इसी दिन भारत ने जो परमाणु परीक्षण किए थे, उनसे दुनिया को पता चला कि हमारे देश की इच्छाशक्ति कितनी अटल है! 11 मई के टेस्ट के बाद पूरी दुनिया का दबाव भारत पर था, लेकिन हमने दिखाया कि कोई भी ताकत भारत को झुका नहीं सकती।

एवं परस्परापेक्षा शक्तिशक्तिमतोः स्थिता ।

न शिवेन विना शक्तिर्न शक्त्या विना शिवः।।”