ಇಂದು ಆರಂಭವಾಗುತ್ತಿರುವ ಅಭಿವೃದ್ಧಿ ಕಾರ್ಯಗಳು ಕೇರಳದ ಎಲ್ಲ ಭಾಗದಲ್ಲೂ ಹರಡಿವೆ ಮತ್ತು ಎಲ್ಲ ವಲಯಗಳನ್ನೂ ಸಹ ಒಳಗೊಂಡಿದೆ
ಕಳೆದ ಆರು ವರ್ಷಗಳಿಂದೀಚೆಗೆ ಭಾರತದ ಸೌರಶಕ್ತಿ ಸಾಮರ್ಥ್ಯ 13 ಪಟ್ಟು ಹೆಚ್ಚಳ
ನಮ್ಮ ಅನ್ನದಾತರನ್ನು ಊರ್ಜಾದಾತರನ್ನಾಗಿ ಮಾಡಲು ಸೌರವಲಯದೊಂದಿಗೆ ರೈತರ ಬೆಸುಗೆ
ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕೆ ಯಾವುದೇ ಜಾತಿ, ಬಣ್ಣ, ಜನಾಂಗ, ಲಿಂಗ, ಧರ್ಮ ಅಥವಾ ಭಾಷೆ ಇಲ್ಲ: ಪ್ರಧಾನಮಂತ್ರಿ

ಕೇರಳದ ರಾಜ್ಯಪಾಲರಾದ ಶ್ರೀ ಅರಿಫ್ ಮೊಹಮ್ಮದ್ ಖಾನ್, ಕೇರಳದ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್, ನನ್ನ ಸಂಪುಟ ಸಹೋದ್ಯೋಗಿಗಳಾದ ಆರ್.ಕೆ.ಸಿಂಗ್, ಶ್ರೀ ಹರ್ದೀಪ್ ಸಿಂಗ್ ಪುರಿ ಮತ್ತು ಇತರೆ ಗಣ್ಯ ಅತಿಥಿಗಳೇ.

ಮಿತ್ರರೇ,

ನಮಸ್ಕಾರಂ ಕೇರಳ..! ಕೆಲ ದಿನಗಳ ಹಿಂದಷ್ಟೇ ಪೆಟ್ರೋಲಿಯಂ ವಲಯದ ಯೋಜನೆಗಳನ್ನು ಉದ್ಘಾಟಿಸಲು ನಾನು ಕೇರಳಕ್ಕೆ ಆಗಮಿಸಿದ್ದೆ, ಇಂದು ಮತ್ತೆ ನಾನು ನಿಮ್ಮೊಂದಿಗಿದ್ದೇನೆ, ಅದಕ್ಕಾಗಿ ತಂತ್ರಜ್ಞಾನಕ್ಕೆ ಕೃತಜ್ಞತೆಗಳು. ಕೇರಳದ ಅಭಿವೃದ್ಧಿಯ ಪಯಣದಲ್ಲಿ ನಾವು ಮಹತ್ವದ ಹೆಜ್ಜೆಗಳನ್ನಿಡುತ್ತಿದ್ದೇವೆ. ಇಂದು ಆರಂಭವಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಇಡೀ ಕೇರಳದಾದ್ಯಂತ ಹರಡಿವೆ ಮತ್ತು ಅವು ಎಲ್ಲ ವಲಯಗಳನ್ನು ಒಳಗೊಂಡಿದೆ. ಭಾರತದ ಪ್ರಗತಿಗೆ ಉತ್ಕೃಷ್ಟ ಕೊಡುಗೆ ನೀಡುತ್ತಿರುವ ಸುಂದರ ರಾಜ್ಯ ಕೇರಳದ ಜನರ ಸಬಲೀಕರಣಕ್ಕೆ ಮತ್ತು ಶಕ್ತಿ ತುಂಬಲು ನಾವು ಬದ್ಧವಾಗಿದ್ದೇವೆ.

2000 ಮೆಗಾ ವ್ಯಾಟ್ ಸಾಮರ್ಥ್ಯದ ಪುಗಲೂರು-ತ್ರಿಶೂರ್ ಹೈ ವೋಲ್ಟೇಜ್ ಡೈರೆಕ್ಟ್ ಕರೆಂಟ್ ಸಿಸ್ಟಂ ಅನ್ನು ಇಂದು ಉದ್ಘಾಟಿಸಲಾಗಿದೆ. ರಾಷ್ಟ್ರೀಯ ಗ್ರಿಡ್ ಜೊತೆ ಸಂಪರ್ಕ ಸಾಧಿಸಲಾದ ಕೇರಳದ ಮೊದಲ ಎಚ್ ವಿಡಿಸಿ ಇಂಟರ್ ಕನೆಕ್ಷನ್ ಯೋಜನೆಯಾಗಿದೆ. ತ್ರಿಶೂರ್ ಕೇರಳದ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿದೆ. ಇನ್ನು ಮುಂದೆ ಅದು ಶಕ್ತಿ ಕೇಂದ್ರವೂ ಸಹ ಆಗಲಿದೆ. ಇದರಿಂದ ರಾಜ್ಯದ ಭಾರಿ ವಿದ್ಯುತ್ ಬೇಡಿಕೆಯನ್ನು ಈಡೇರಿಸಲು, ವಿದ್ಯುತ್ ವರ್ಗಾವಣೆಗೆ ಸಹಕಾರಿಯಾಗಲಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ ಪ್ರಸರಣಕ್ಕೆ ವಿಎಸ್ ಸಿ ಕನ್ವರ್ಟರ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಇದು ನಮ್ಮೆಲ್ಲರಿಗೂ ಹೆಮ್ಮಯ ವಿಷಯವಾಗಿದೆ.

ಮಿತ್ರರೇ,

ಕೇರಳದಲ್ಲಿನ ಆಂತರಿಕ ವಿದ್ಯುತ್ ಮೂಲಗಳು ನೈಸರ್ಗಿಕ ಖುತುಮಾನಗಳನ್ನು ಆಧರಿಸಿದೆ. ಇದರಿಂದಾಗಿ ಕೇರಳ ರಾಜ್ಯ ಬಹುತೇಕ ರಾಷ್ಟ್ರೀಯ ಗ್ರಿಡ್ ನಿಂದ್ ವಿದ್ಯುತ್ ಆಮದಿನ ಮೇಲೆ ಹೆಚ್ಚಿನ ಅವಲಂಬಿತವಾಗಿದೆ. ಈ ಅಂತರವನ್ನು ನೀಗಿಸಲಾಗಿದೆ, ಇದನ್ನು ಸಾಧಿಸುವಲ್ಲಿ ಎಚ್ ವಿಡಿಸಿ ವ್ಯವಸ್ಥೆ ಸಹಕಾರಿಯಾಗಿದೆ. ಇನ್ನು ವಿದ್ಯುತ್ ಲಭ್ಯತೆ ವಿಶ್ವಾಸಾರ್ಹವಾಗಿರಲಿದೆ. ಮನೆಗಳಿಗೆ ಮತ್ತು ಕೈಗಾರಿಕಾ ಘಟಕಗಳಿಗೆ ವಿದ್ಯುತ್ ವಿತರಣಾ ಜಾಲದ ಅಂತರ-ರಾಜ್ಯ ಪ್ರಸರಣಾ ಬಲವರ್ಧನೆ ಕೂಡ ಅಷ್ಟೇ ಪ್ರಮುಖವಾಗಿ ಆಗಬೇಕಿದೆ. ಈ ಯೋಜನೆಯ ಬಗ್ಗೆ ಸಂತಸಪಡುವ ಇನ್ನೊಂದು ವಿಚಾರವಿದೆ. ಈ ಯೋಜನೆಯಲ್ಲಿ ಬಳಕೆ ಮಾಡಿರುವ ಎಚ್ ವಿಡಿಸಿ ಸಾಧನ ಭಾರತದಲ್ಲಿಯೇ ತಯಾರಿಸಲಾಗಿದೆ ಮತ್ತು ಇದು ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಬಲ ತಂದಿದೆ.

ಮಿತ್ರರೇ,

ನಾವು ಕೇವಲ ಪ್ರಸರಣಾ ಯೋಜನೆಯನ್ನು ಲೋಕಾರ್ಪಣೆಗೊಳಿಸುತ್ತಿಲ್ಲ, ನಾವು ವಿದ್ಯುತ್ ಉತ್ಪಾದನಾ ಯೋಜನೆಯನ್ನೂ ಸಹ ಹೊಂದಿದ್ದೇವೆ. 50 ಮೆಗಾ ವ್ಯಾಟ್ ಸಾಮರ್ಥ್ಯದ ಮತ್ತೊಂದು ಶುದ್ಧ ಇಂಧನ ಆಸ್ತಿ, ಕಾಸರಗೋಡು ಸೌರ ವಿದ್ಯುತ್ ಯೋಜನೆಯನ್ನು ಲೋಕಾರ್ಪಣೆ ಮಾಡುತ್ತಿರುವುದು ಹೆಮ್ಮೆಯಾಗಿದೆ. ಇದು ನಮ್ಮ ಹಸಿರು ಮತ್ತು ಶುದ್ಧ ಇಂಧನ ಕನಸು ಸಾಕಾರವಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಭಾರತ ಸೌರಶಕ್ತಿಗೆ ಹೆಚ್ಚಿನ ಪ್ರಾಮುಖ್ಯವನ್ನು ನೀಡುತ್ತಿದೆ. ಸೌರಶಕ್ತಿಯಿಂದ ನಾವು ಸಾಕಷ್ಟು ಪ್ರಯೋಜನ ಪಡೆದಿದ್ದೇವೆ, ಹವಾಮಾನ ವೈಪರೀತ್ಯದ ವಿರುದ್ಧ ನಮ್ಮ ಹೋರಾಟ ಬಲಿಷ್ಠವಾಗಿದೆ ಮತ್ತು ನಮ್ಮ ಉದ್ದಿಮೆದಾರರಿಗೆ ಅದರಿಂದ ಉತ್ತೇಜನ ದೊರಕಿದೆ. ನಮ್ಮ ಅನ್ನದಾತರನ್ನು ಊರ್ಜಾದಾತರನ್ನಾಗಿ ಮಾಡಲು ನಮ್ಮ ರೈತರನ್ನು ಸೌರ ವಲಯದ ಜೊತೆ ಬೆಸೆಯುವ ಕಾರ್ಯ ಪ್ರಗತಿಯಲ್ಲಿದೆ. ಪಿಎಂ-ಕುಸುಮ್ ಯೋಜನೆಯಡಿ ರೈತರಿಗೆ 20ಸಾವಿರ ಸೌರ ವಿದ್ಯುತ್ ಪಂಪ್ ಗಳನ್ನು ನೀಡಲಾಗಿದೆ. ಆರು ವರ್ಷಗಳಿಂದೀಚೆಗೆ ಭಾರತದ ಸೌರಶಕ್ತಿ ಸಾಮರ್ಥ್ಯ 13 ಪಟ್ಟು ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಸೌರ ಮೈತ್ರಿಯ ಮೂಲಕ ಭಾರತ ಇಡೀ ವಿಶ್ವವನ್ನು ಒಂದುಗೂಡಿಸಿದೆ.

ಮಿತ್ರರೇ,

ನಮ್ಮ ನಗರಗಳು ಪ್ರಗತಿಯ ಎಂಜಿನ್ ಗಳು ಮತ್ತು ಆವಿಷ್ಕಾರದ ಶಕ್ತಿ ಕೇಂದ್ರಗಳು. ನಮ್ಮ ನಗರಗಳಲ್ಲಿ ಮೂರು ವಿಧದ ಉತ್ತೇಜನಕಾರಿ ಪ್ರವೃತ್ತಿ ಕಂಡುಬರುತ್ತಿದೆ, ಅವುಗಳೆಂದರೆ ತಾಂತ್ರಿಕ ಅಭಿವೃದ್ಧಿ, ಅನುಕೂಲಕರ ಜನಸಂಖ್ಯೆ ಮತ್ತು ಹೆಚ್ಚುತ್ತಿರುವ ದೇಶಿಯ ಬೇಡಿಕೆ. ಈ ವಲಯದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲು ನಾವು ಸ್ಮಾರ್ಟ್ ಸಿಟಿ ಮಿಷನ್ ಯೋಜನೆ ಕೈಗೆತ್ತಿಕೊಂಡಿದ್ದೇವೆ. ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ನಿರ್ಮಿಸಿರುವ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು, ಉತ್ತಮ ಯೋಜನೆ ಮತ್ತು ನಿರ್ವಹಣೆಗೆ ನಗರಗಳಿಗೆ ಸಹಕಾರಿಯಾಗಿವೆ. 54 ಕಮಾಂಡ್ ಕೇಂದ್ರಗಳು ಈಗಾಗಲೇ ಕಾರ್ಯಾರಂಭ ಮಾಡಿವೆ ಎಂಬ ವಿಷಯ ಹಂಚಿಕೊಳ್ಳಲು ಸಂತಸವಾಗುತ್ತಿದೆ ಮತ್ತು ಅಂತಹ 30 ಕೇಂದ್ರಗಳ ನಿರ್ಮಾಣ ಕಾಮಗಾರಿ ನಾನಾ ಹಂತದಲ್ಲಿವೆ. ಈ ಕೇಂದ್ರಗಳು ಸಾಂಕ್ರಾಮಿಕದ ದಿನಗಳಲ್ಲಿ ವಿಶೇಷ ರೀತಿಯಲ್ಲಿ ಉಪಯುಕ್ತವಾದವು. ಸ್ಮಾರ್ಟ್ ಸಿಟಿ ಮಿಷನ್ ಯೋಜನೆಯಡಿ ಕೇರಳದ ಎರಡು ನಗರಗಳಿದ್ದು, ಕೊಚ್ಚಿ ಸ್ಮಾರ್ಟ್ ಸಿಟಿಯಲ್ಲಿ ಈಗಾಗಲೇ ಕಮಾಂಡ್ ಸೆಂಟರ್ ಆರಂಭವಾಗಿದೆ ಮತ್ತು ತಿರುವಂತನಪುರಂ ಸ್ಮಾರ್ಟ್ ಸಿಟಿ ಯೋಜನೆಯ ಕಮಾಂಡ್ ಕೇಂದ್ರ ಸಿದ್ಧವಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ, ಕೊಚ್ಚಿ ಮತ್ತು ತಿರುವನಂತಪುರಂ ಎರಡೂ ನಗರಗಳು ಸಾಕಷ್ಟು ಪ್ರಗತಿ ಸಾಧಿಸಿವೆ. ಈವರೆಗೆ ಎರಡು ಸ್ಮಾರ್ಟ್ ಸಿಟಿಗಳಲ್ಲಿ 773 ಕೋಟಿ ಮೊತ್ತದ 27 ಯೋಜನೆಗಳು ಪೂರ್ಣಗೊಂಡಿವೆ ಮತ್ತು 2000 ಕೋಟಿ ಮೊತ್ತದ 68 ಯೋಜನೆಗಳು ಪ್ರಗತಿಯಲ್ಲಿವೆ.

ಮಿತ್ರರೇ,

ನಗರ ಸೌಕರ್ಯವನ್ನು ಸುಧಾರಿಸಲು ಮತ್ತೊಂದು ಉಪಕ್ರಮ ಅಮೃತ್ ಯೋಜನೆ ಜಾರಿಗೊಳಿಸಲಾಗಿದೆ. ಅಮೃತ್ ನಗರಗಳಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಮೂಲಸೌಕರ್ಯ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ನೆರವಾಗುತ್ತಿದೆ. ಕೇರಳದಲ್ಲಿ ಅಮೃತ್ ಯೋಜನೆಯಡಿ 1100 ಕೋಟಿಗೂ ಅಧಿಕ ಮೊತ್ತದಲ್ಲಿ ಒಟ್ಟು 175 ನೀರು ಪೂರೈಕೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. 9 ಅಮೃತ್ ನಗರಗಳ ಸಮಗ್ರ ಅಭಿವೃದ್ಧಿ ವ್ಯಾಪ್ತಿ ಕೈಗೊಳ್ಳಲಾಗಿದೆ. ಇಂದು ನಾವು 70 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಿರುವ ಪ್ರತಿದಿನ 75 ಎಂಎಲ್ ಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಅರಿವುಕ್ಕರದಲ್ಲಿ ಉದ್ಘಾಟಿಸಿದ್ದೇವೆ. ಇದು 13ಲಕ್ಷ ಜನಸಂಖ್ಯೆಯ ಜೀವನ ಮಟ್ಟ ಸುಧಾರಿಸುವುದಲ್ಲದೆ, ತಿರುವನಂತಪುರಂಗೆ ಈ ಮೊದಲು ಪ್ರತಿದಿನ ಒರ್ವ ವ್ಯಕ್ತಿಗೆ 100 ಲೀಟರ್ ನೀರು ಪೂರೈಸಲಾಗುತ್ತಿತ್ತು, ಇದೀಗ ಆ ಪ್ರಮಾಣ 150 ಲೀಟರ್ ಗೆ ಏರಿಕೆಯಾಗಲಿದೆ.

ಮಿತ್ರರೇ,

ಇಂದು ನಾವು ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯನ್ನು ಆಚರಿಸುತ್ತಿದ್ದೇವೆ, ಶಿವಾಜಿ ಅವರ ಜೀವನ ದೇಶದಾದ್ಯಂತ ಎಲ್ಲ ಜನರಿಗೂ ಪ್ರೇರಣೆ ನೀಡುತ್ತದೆ. ಶಿವಾಜಿ ಅವರು ಸ್ವರಾಜ್ಯಕ್ಕೆ ಒತ್ತು ನೀಡಿದ್ದರು. ಆ ಮೂಲಕ ಅಭಿವೃದ್ಧಿಯ ಫಲ ಸಮಾಜದ ಎಲ್ಲ ವರ್ಗಗಳಿಗೂ ತಲುಪಬೇಕೆಂದು ಬಯಸಿದ್ದರು. ಛತ್ರಪತಿ ಶಿವಾಜಿ ಮಹಾರಾಜರು ಅವರು ಭಾರತೀಯ ಕರಾವಳಿಯೊಂದಿಗೆ ವಿಶೇಷ ಸಂಬಂಧ ಹೊಂದಿದ್ದರು. ಒಂದೆಡೆ ಅವರು ಬಲಿಷ್ಠ ನೌಕಾ ಪಡೆಯನ್ನು ಕಟ್ಟಿದ್ದರು ಮತ್ತು ಮತ್ತೊಂದೆಡೆ ಕರಾವಳಿಯ ಅಭಿವೃದ್ಧಿಗೆ ಮತ್ತು ಮೀನುಗಾರರ ಕಲ್ಯಾಣಕ್ಕೆ ಅಹರ್ನಿಶಿ ದುಡಿದಿದ್ದರು. ನಮ್ಮ ಸರ್ಕಾರ ಅವರ ದೂರದರ್ಶಿತ್ವವನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಭಾರತ ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಸಾಧನೆಯತ್ತ ಸಾಗಿದೆ.

ರಕ್ಷಣಾ ಮತ್ತು ಬಾಹ್ಯಾಕಾಶ ವಲಯಗಳಲ್ಲಿ ಮಹತ್ವದ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಈ ಪ್ರಯತ್ನಗಳಿಂದಾಗಿ ಹಲವು ಪ್ರತಿಭಾವಂತ ಭಾರತೀಯ ಯುವಕರಿಗೆ ಸಾಕಷ್ಟು ಅವಕಾಶಗಳು ಸಿಗುತ್ತವೆ. ಅಂತೆಯೇ, ಅತ್ಯುತ್ತಮ ಕರಾವಳಿ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ದೊಡ್ಡ ಯೋಜನೆ ಆರಂಭವಾಗಿದೆ. ಭಾರತ ನೀಲಿ ಆರ್ಥಿಕತೆಯಲ್ಲಿ ಸಾಕಷ್ಟು ಹಣ ಹೂಡಿಕೆ ಮಾಡುತ್ತಿದೆ. ನಾವು ನಮ್ಮ ಮೀನುಗಾರರ ಪ್ರಯತ್ನಗಳನ್ನು ಗೌರವಿಸುತ್ತೇವೆ. ಮೀನುಗಾರರ ಸಮುದಾಯಕ್ಕೆ ನಾವು ಕೈಗೊಂಡಿರುವ ಪ್ರಯತ್ನಗಳು, ಹೆಚ್ಚಿನ ಸಾಲ, ಅಧಿಕ ತಂತ್ರಜ್ಞಾನ ಬಳಕೆ, ಶ್ರೇಷ್ಠ ಗುಣಮಟ್ಟದ ಮೌಲಸೌಕರ್ಯ ಮತ್ತು ಸರ್ಕಾರದ ಬೆಂಬಲ ನೀತಿಗಳನ್ನು ಆಧರಿಸಿವೆ. ಮೀನುಗಾರರಿಗೂ ಇದೀಗ ಕಿಸಾನ್ ಕ್ರೆಡಿಟ್ ಕಾರ್ಡ್ ಗಳು ಲಭ್ಯವಾಗುತ್ತಿವೆ. ನೀರಿನಲ್ಲಿ ನೌಕೆಗಳನ್ನು ನಡೆಸಲು ಆಧುನಿಕ ತಂತ್ರಜ್ಞಾನವನ್ನು ನಾವು ಪ್ರೋತ್ಸಾಹಿಸುತ್ತಿದ್ದೇವೆ. ಅವರು ಬಳಕೆ ಮಾಡುವ ದೋಣಿಗಳು ಆಧುನೀಕರಣ ಕಾರ್ಯ ಪ್ರಗತಿಯಲ್ಲಿದೆ. ಸರ್ಕಾರದ ನೀತಿಗಳು ಭಾರತ ಸಮುದ್ರದ ಆಹಾರ ಉತ್ಪನ್ನಗಳ ರಫ್ತು ತಾಣವಾಗುವುದನ್ನು ಖಾತ್ರಿಪಡಿಸುತ್ತವೆ. ಈ ವರ್ಷದ ಬಜೆಟ್ ನಲ್ಲೇ, ಕೊಚ್ಚಿಯಲ್ಲಿ ಮೀನುಗಾರಿಕೆ ಬಂದರು ನಿರ್ಮಾಣವನ್ನು ಪ್ರಕಟಿಸಲಾಗಿದೆ.

ಮಿತ್ರರೇ,

ಮಲೆಯಾಳಂನ ಶ್ರೇಷ್ಠ ಕವಿ ಕುಮಾರನಶಾನ್ ಅವರು, “ನಾನು ನಿಮ್ಮ ಜಾತಿಯನ್ನು ಕೇಳುತ್ತಿಲ್ಲ ಸಹೋದರಿ, ನನಗೆ ಬಾಯಾರಿಕೆ ಆಗಿದೆ. ನಾನು ನೀರು ಕೇಳುತ್ತಿದ್ದೀನಿ’’ ಎಂದು ಹೇಳಿದ್ದರು. ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಯಾವುದೇ ಜಾತಿ, ಬಣ್ಣ, ಜನಾಂಗ, ಲಿಂಗ ಅಥವಾ ಧರ್ಮ ಅಥವಾ ಭಾಷೆ ಇರುವುದಿಲ್ಲ. ಎಲ್ಲರಿಗಾಗಿ ಅಭಿವೃದ್ಧಿ ಮತ್ತು ಸಬ್ ಕಾ ಸಾಥ್, ಸಬ್ ಕ ವಿಕಾಸ್ ಮತ್ತು ಸಬ್ ಕ ವಿಶ್ವಾಸದ ಮಂತ್ರವಾಗಿದೆ. ಅಭಿವೃದ್ಧಿ ನಮ್ಮ ಗುರಿಯಾಗಿದೆ ಮತ್ತು ಅಭಿವೃದ್ಧಿಯೇ ನಮ್ಮ ಧರ್ಮವಾಗಿದೆ. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ತಮ್ಮ ಕನಸು ಸಾಕಾರಕ್ಕೆ ನಾನು ಕೇರಳದ ಜನರು ಬೆಂಬಲ ಕೋರುತ್ತೇನೆ. ನಂದ್ರಿ ನಮಸ್ಕಾರಂ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Bharat Tex showcases India's cultural diversity through traditional garments: PM Modi

Media Coverage

Bharat Tex showcases India's cultural diversity through traditional garments: PM Modi
NM on the go

Nm on the go

Always be the first to hear from the PM. Get the App Now!
...
PM Modi urges everyone to stay calm and follow safety precautions after tremors felt in Delhi
February 17, 2025

The Prime Minister, Shri Narendra Modi has urged everyone to stay calm and follow safety precautions after tremors felt in Delhi. Shri Modi said that authorities are keeping a close watch on the situation.

The Prime Minister said in a X post;

“Tremors were felt in Delhi and nearby areas. Urging everyone to stay calm and follow safety precautions, staying alert for possible aftershocks. Authorities are keeping a close watch on the situation.”