ಆಚಾರ್ಯ ಜೆ.ಬಿ. ಕೃಪಲಾನಿ ಮತ್ತು ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮವಾರ್ಷಿಕೋತ್ಸವದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದರು.

“ಆಚಾರ್ಯ ಜೆ.ಬಿ. ಕೃಪಲಾನಿ ಮತ್ತು ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮವಾರ್ಷಿಕೋತ್ಸವದಂದು ಅವರನ್ನು ಸ್ಮರಿಸುತ್ತಿದ್ದೇವೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ವಹಿಸಿದ್ದ ಪ್ರಮುಖಪಾತ್ರ ಹಾಗೂ ಸಾರ್ವಜನಿಕ ಕಲ್ಯಾಣ, ಸಮಾನತೆ, ಶಿಕ್ಷಣ ಮತ್ತು ನ್ಯಾಯ ಮುಂತಾದ ಕ್ಷೇತ್ರಗಳಿಗೆ ಅವರು ನೀಡಿದ್ದ ಪ್ರಾಧಾನ್ಯತೆಯನ್ನು ಎಂದಿಗೂ ಮರೆಯಲಾಗದು” ಎಂದು ಪ್ರಧಾನಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.