QuoteThe role of civil servants should be of minimum government and maximum governance: PM Modi
QuoteTake decisions in the national context, which strengthen the unity and integrity of the country: PM to civil servants
QuoteMaintain the spirit of the Constitution as you work as the steel frame of the country: PM to civil servants

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇಂದು ಗುಜರಾತ್‌ನ ಕೆವಾಡಿಯಾದಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಮುಸ್ಸೂರಿಯ ಎಲ್ಬಿಎಸ್ಎನ್ಎನಲ್ಲಿ  ತರಬೇತಿ ಪಡೆಯುತ್ತಿರುವ ಭಾರತೀಯ ನಾಗರಿಕ ಸೇವೆಗಳ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಇದು 2019 ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾದ ಸಮಗ್ರ ಫೌಂಡೇಶನ್ ಕೋರ್ಸ್ AARAMBH ನ ಒಂದು ಭಾಗವಾಗಿದೆ.

|

ತರಬೇತಿ ಪಡೆಯುತ್ತಿರುವ ಅಧಿಕಾರಿಗಳು ಪ್ರಸ್ತುತಪಡಿಸಿದ ಪ್ರಾತ್ಯಕ್ಷಿಕೆಗಳಿಗೆ ಸಾಕ್ಷಿಯಾದ ನಂತರ ಮಾತನಾಡಿದ ಪ್ರಧಾನಮಂತ್ರಿಯವರು, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ "ದೇಶದ ನಾಗರಿಕರಿಗೆ ಸೇವೆ ಸಲ್ಲಿಸುವುದು ನಾಗರಿಕ ಸೇವಕನ ಅತ್ಯುನ್ನತ ಕರ್ತವ್ಯವಾಗಿದೆ" ಎಂಬ ತತ್ವವನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದರು.

ರಾಷ್ಟ್ರದ ಹಿತಾಸಕ್ತಿಗಳ ಹಿನ್ನೆಲೆಯಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಂತೆ ಮತ್ತು ದೇಶದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸುವಂತೆ ಶ್ರೀ ಮೋದಿ ಯುವ ಅಧಿಕಾರಿಗಳಿಗೆ ಸೂಚಿಸಿದರು. ಇಲಾಖೆಯ ವ್ಯಾಪ್ತಿ ಅಥವಾ ಅವರು ಕೆಲಸ ಮಾಡುತ್ತಿರುವ ಪ್ರದೇಶದ ಹೊರತಾಗಿಯೂ ನಾಗರಿಕ ಸೇವೆಯ ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರಗಳು ಯಾವಾಗಲೂ ಜನಸಾಮಾನ್ಯರ ಹಿತದೃಷ್ಟಿಯಿಂದ ಇರಬೇಕು ಎಂದು ಅವರು ಒತ್ತಿ ಹೇಳಿದರು.

|

ದೇಶದ “ಉಕ್ಕಿನ ಚೌಕಟ್ಟಿನ”ಗಮನವು ಕೇವಲ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುವುದಕ್ಕೆ ಮಾತ್ರ ಸೀಮಿತವಾಗದೇ ರಾಷ್ಟ್ರದ ಪ್ರಗತಿಗೆ ಕೆಲಸ ಮಾಡುವುದಾಗಿರಬೇಕು. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಇದು ಹೆಚ್ಚು ಮುಖ್ಯವಾಗುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು.

ತರಬೇತಿಯ ಮಹತ್ವ ಮತ್ತು ಹೊಸ ಗುರಿಗಳನ್ನು ಸಾಧಿಸಲು, ದೇಶದಲ್ಲಿ ಹೊಸ ವಿಧಾನಗಳು ಮತ್ತು ಹೊಸ ಮಾರ್ಗಗಳನ್ನು ಅಳವಡಿಸಿಕೊಳ್ಳಲು ಕೌಶಲ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಅದರ ಪ್ರಮುಖ ಪಾತ್ರವನ್ನು ಶ್ರೀ ನರೇಂದ್ರ ಮೋದಿಯವರು ತಿಳಿಸಿದರು.

ಹಿಂದಿಗಿಂತ ಭಿನ್ನವಾಗಿ, ದೇಶದಲ್ಲಿ ಈಗ ಮಾನವ ಸಂಪನ್ಮೂಲ ತರಬೇತಿಯಲ್ಲಿ ಆಧುನಿಕ ವಿಧಾನಗಳನ್ನು ಒತ್ತಿ ಹೇಳಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು. ಕಳೆದ 2-3 ವರ್ಷಗಳಲ್ಲಿ ನಾಗರಿಕ ಸೇವೆ ಅಧಿಕಾರಿಗಳ ತರಬೇತಿ ಮಾದರಿಯಲ್ಲಿನ ಬದಲಾವಣೆಯ ಬಗ್ಗೆ ಅವರು ಗಮನಸೆಳೆದರು. ಸಮಗ್ರ ಫೌಂಡೇಶನ್ ಕೋರ್ಸ್ 'ಆರಂಭ್' ಕೇವಲ ಒಂದು ಆರಂಭವಲ್ಲ, ನೂತನ ಸಂಪ್ರದಾಯದ ಸಂಕೇತವಾಗಿದೆ ಎಂದು ಅವರು ತಿಳಿಸಿದರು.

ನಾಗರಿಕ ಸೇವೆಗಳ ಇತ್ತೀಚಿನ ಸುಧಾರಣೆಗಳಲ್ಲಿ ಮಿಷನ್ ಕರ್ಮಯೋಗಿಯ ಬಗ್ಗೆ ಶ್ರೀ ಮೋದಿಯವರು ಪ್ರಸ್ತಾಪಿಸಿದರು. ಇದು ನಾಗರಿಕ ಸೇವೆಯ ಅಧಿಕಾರಿಗಳಲ್ಲಿ ಹೆಚ್ಚು ಸೃಜನಶೀಲ ಮತ್ತು ಆತ್ಮವಿಶ್ವಾಸ ತುಂಬುವ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

ಟಾಪ್–ಡೌನ್ ವಿಧಾನದಿಂದ ಸರ್ಕಾರ ನಡೆಯುವುದಿಲ್ಲ ಎಂದು ಪ್ರಧಾನಿ ಹೇಳಿದರು. ಸಾರ್ವಜನಿಕರಿಗಾಗಿ ನೀತಿಗಳನ್ನು ರೂಪಿಸುವಾಗ ಅವರನ್ನು ಒಳಗೊಳ್ಳುವುದು  ಬಹಳ ಮುಖ್ಯವಾಗಿದೆ. ಜನರು ಸರ್ಕಾರದ ಹಿಂದಿರುವ ನಿಜವಾದ ಪ್ರೇರಕ ಶಕ್ತಿ ಎಂದು ಅವರು ಹೇಳಿದರು.

|

 

 

|

 

|

ಪ್ರಸ್ತುತ ವಿಧಾನದಲ್ಲಿ ದೇಶದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಅಧಿಕಾರಿ ವರ್ಗವೂ ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತವನ್ನು ಖಚಿತಪಡಿಸಬೇಕು ಎಂದರು. ನಾಗರಿಕರ ಜೀವನದಲ್ಲಿ ಹಸ್ತಕ್ಷೇಪ ಕಡಿಮೆಯಾಗುವಂತೆ ಮತ್ತು ಜನಸಾಮಾನ್ಯರು ಸಬಲರಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಕರೆ ಕೊಟ್ಟರು.

ಆತ್ಮನಿರ್ಭರವಾಗುವ ದೇಶದ ಪ್ರಯತ್ನಗಳಲ್ಲಿ ನಾಗರಿಕ ಸೇವೆಯ ಅಧಿಕಾರಿಗಳು ಸ್ಥಳೀಯತೆಗೆ ಆದ್ಯತೆ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಪ್ರಧಾನಿಯವರು ಒತ್ತಾಯಿಸಿದರು.

 

 

 

 

 

 

 

 

Click here to read full text speech

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Summer in the Gulf: India’s celebration of mango exports reaches Abu Dhabi

Media Coverage

Summer in the Gulf: India’s celebration of mango exports reaches Abu Dhabi
NM on the go

Nm on the go

Always be the first to hear from the PM. Get the App Now!
...
Prime Minister condoles the loss of lives in an accident in Sambhal, Uttar Pradesh
July 05, 2025
QuotePM announces ex-gratia from PMNRF

Prime Minister Shri Narendra Modi today condoled the loss of lives in an accident in Sambhal, Uttar Pradesh. He announced an ex-gratia of Rs. 2 lakh from PMNRF for the next of kin of each deceased and Rs. 50,000 to the injured.

The PMO India handle in post on X said:

“Deeply saddened by the loss of lives in an accident in Sambhal, Uttar Pradesh. Condolences to those who have lost their loved ones in the mishap. May the injured recover soon.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi”