ಶೇರ್
 
Comments
ಸ್ವಾತಂತ್ರ್ಯದ 70 ವರ್ಷಗಳ ನಂತರವೂ, ದುರದೃಷ್ಟಕರವಾಗಿ  18,000 ಕ್ಕಿಂತಲೂ ಹೆಚ್ಚು ಹಳ್ಳಿಗಳು ಅಂಧಕಾರದಲ್ಲಿ ಉಳಿದಿತ್ತು : ಪ್ರಧಾನಿ ಮೋದಿ
2005 ರಲ್ಲಿ ಯುಪಿಎ ಸರಕಾರವು ಪ್ರತಿ ಹಳ್ಳಿಯನ್ನು 2009 ರೊಳಗೆ ವಿದ್ಯುನ್ಮಾನಗೊಳಿಸುವುದಾಗಿ ಭರವಸೆ ನೀಡಿತು. ಆಡಳಿತ ಪಕ್ಷದ ಅಂದಿನ ಅಧ್ಯಕ್ಷ ಪ್ರತಿ ಮನೆಗೆ ವಿದ್ಯುತ್ ತರುವ ಬಗ್ಗೆ ಮಾತನಾಡಿದರು . ಅದರಲ್ಲಿ ಯಾವುದೂ ಸಂಭವಿಸಲಿಲ್ಲ: ಪ್ರಧಾನಮಂತ್ರಿ 
ಕೆಂಪು ಕೋಟೆಯಿಂದ  ನಾನು ಪ್ರತಿ ಗ್ರಾಮವನ್ನೂ ವಿದ್ಯುನ್ಮಾನಗೊಳಿಸುತ್ತೇವೆಂದು  ಘೋಷಿಸಿದೆ. ನಾವು ನಮ್ಮ ಮಾತನ್ನು ಉಳಿಸಿಕೊಂಡಿದ್ದೇವೆ  ಮತ್ತು ಪ್ರತಿ ಹಳ್ಳಿಗೆ ವಿದ್ಯುತ್ ನೀಡಿದ್ದೇವೆ : ಪ್ರಧಾನಮಂತ್ರಿ 
ವಿದ್ಯುಚ್ಛಕ್ತಿಯಿಲ್ಲದ 18,000 ರಲ್ಲಿ ಸುಮಾರು 14,500 ಗ್ರಾಮಗಳು ಪೂರ್ವ ಭಾರತದಲ್ಲಿದ್ದವು. ನಾವು ಇದನ್ನು ಬದಲಾಯಿಸಿದ್ದೇವೆ: ಪ್ರಧಾನಿ ಮೋದಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 2014ರಿಂದ ವಿದ್ಯುತ್ ಸೌಲಭ್ಯ ಪಡೆದಿರುವ ದೇಶಾದ್ಯಂತದ ಹಳ್ಳಿಗಳ ನಾಗರಿಕರೊಂದಿಗೆ ಸಂವಾದ ನಡೆಸಿದರು. ಪ್ರಧಾನಮಂತ್ರಿ ಪ್ರತಿ ಮನೆಗೂ ಸಹಜ ವಿದ್ಯುತ್ ಯೋಜನೆ – ಸೌಭಾಗ್ಯ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಯವರು ವಿಡಿಯೋ ಸಂವಾದದ ಮೂಲಕ ನಡೆಸುತ್ತಿರುವ ಸರಣಿಯ 10ನೇ ಸಂವಾದ ಇದಾಗಿತ್ತು.

 

ಇತ್ತೀಚೆಗೆ ವಿದ್ಯುದ್ದೀಕರಣಗೊಂಡ 18000 ಗ್ರಾಮಗಳ ಜನರೊಂದಿಗೆ ಸಂವಾದ ನಡೆಸಿ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, “ಕತ್ತಲನ್ನು ನೋಡದವರು ಪ್ರಕಾಶದ ಅರ್ಥವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ, ಯಾರು ಕತ್ತಲಲ್ಲಿ ತಮ್ಮ ಬದುಕನ್ನು ಕಳೆದಿರುವುದಿಲ್ಲವೋ ಅವರಿಗೆ ಬೆಳಕಿನ ಮೌಲ್ಯ ತಿಳಿಯುವುದಿಲ್ಲ”ಎಂದರು.

 

ತಮ್ಮ ಸಂವಾದದ ವೇಳೆ ಪ್ರಧಾನಮಂತ್ರಿಯವರು ಎನ್.ಡಿ.ಎ. ಸರ್ಕಾರ ಅಧಿಕಾರವಹಿಸಿಕೊಂಡ ತರುವಾಯ ಸಾವಿರಾರು ಹಳ್ಳಿಗಳಿಗೆ ವಿದ್ಯುತ್ ಕಲ್ಪಿಸಲಾಗಿದೆ ಎಂದರು. ಹಿಂದಿನ ಸರ್ಕಾರಗಳು ನೀಡುತ್ತಿದ್ದ ಸುಳ್ಳು ಭರವಸೆಗಳಿಗೆ ಪ್ರತಿಯಾಗಿ ಪ್ರಸಕ್ತ ಸರ್ಕಾರ, ಪ್ರತಿಯೊಂದು ಗ್ರಾಮವನ್ನೂ ವಿದ್ಯುದ್ದೀಕರಿಸುವ ಕಾರ್ಯ ಮಾಡುತ್ತಿದೆ ಎಂದರು. ಸರ್ಕಾರ ಕೇವಲ ವಿದ್ಯುದ್ದೀಕರಣದ ಬಗ್ಗೆ ಮಾತ್ರ ಗಮನ ಹರಿಸುತ್ತಿಲ್ಲ ಜೊತೆಗೆ ದೇಶದಾದ್ಯಂತ ವಿತರಣಾ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿದೆ ಎಂದು ಪ್ರಧಾನಿ ಹೇಳಿದರು.

 

ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿದ್ದರೂ ವಿದ್ಯುದ್ದೀಕರಣಗೊಳ್ಳದ ಈ 18 ಸಾವಿರ ಗ್ರಾಮಗಳು ಕಳೆದ ನಾಲ್ಕು ವರ್ಷಗಳಲ್ಲಿ ವಿದ್ಯುದ್ದೀಕರಣಗೊಂಡಿವೆ ಎಂದು ತಿಳಿಸಿದರು. ಕೊನೆಯದಾಗಿ ವಿದ್ಯುದ್ದೀಕರಣಗೊಂಡ ಗ್ರಾಮ ಈಶಾನ್ಯ ವಲಯದ ಮಣಿಪುರದ ಲಿಯ್ಸಾಂಗ್ ಆಗಿದ್ದು, ಇದು 2018ರ ಏಪ್ರಿಲ್ 28ರಂದು ಬೆಳಕು ಕಂಡಿತೆಂದರು. ಕೊನೆಯ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಕಲ್ಪಿಸುವುದು ಕಷ್ಟದಾಯಕವಾಗಿತ್ತು, ಕಾರಣ ಅವು ಸಂಪರ್ಕದ ಕೊರತೆಯಿರುವ ದೂರದ ಪ್ರದೇಶ, ಗಿರಿ ಪ್ರದೇಶದಲ್ಲಿದ್ದವು ಎಂದರು. ಎಲ್ಲ ತೊಡಕುಗಳ ನಡುವೆಯೂ ಒಂದು ಸಮರ್ಪಿತ ತಂಡದ ಜನರು ಶ್ರಮಪಟ್ಟು ದುಡಿದು ಎಲ್ಲ ಹಳ್ಳಿಗಳನ್ನೂ ವಿದ್ಯುದ್ದೀಕರಿಸುವ ಕನಸು ನನಸು ಮಾಡಿದರೆಂದರು.

 

ಸರ್ಕಾರ ವಿದ್ಯುತ್ ರಹಿತ 18 ಸಾವಿರ ಗ್ರಾಮಗಳ ಪೈಕಿ 14,582 ಗ್ರಾಮಗಳನ್ನು ಹೊಂದಿದ್ದ ಪೂರ್ವ ಭಾರತದ ಪರಿಸ್ಥಿತಿಯನ್ನು ಬದಲಾಯಿಸಿದೆ, ಇದರಲ್ಲಿ 5790 ಗ್ರಾಮಗಳು ಈಶಾನ್ಯದಲ್ಲಿದ್ದವು ಎಂದರು. ಸಂಪೂರ್ಣ ವಿದ್ಯುದ್ದೀಕರಣದೊಂದಿಗೆ ಸರ್ಕಾರ ಈಶಾನ್ಯ ಭಾರತದ ಅಭಿವೃದ್ಧಿಗೆ ಆದ್ಯತೆ ನೀಡಿದೆ, ಈಗ ಪೂರ್ವ ಭಾರತ ಭಾರತದ ಅಭಿವೃದ್ಧಿಯ ಪಯಣದಲ್ಲಿ ಇನ್ನೂ ದೊಡ್ಡ ಪಾತ್ರ ವಹಿಸಬಹುದಾಗಿದೆ ಎಂದರು.

 

ದೇಶದಲ್ಲಿ ಪ್ರತಿಯೊಂದು ಮನೆಯನ್ನೂ ವಿದ್ಯುತ್ ನಿಂದ ಬೆಳಗುವ ಉದ್ದೇಶದೊಂದಿಗೆ ಪ್ರಧಾನಮಂತ್ರಿ ಪ್ರತಿ ಮನೆಗೂ ಸಹಜ ವಿದ್ಯುತ್ ಯೋಜನೆ ಆರಂಭಿಸಲಾಗಿದೆ. 86 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಈಗವರೆಗೆ ಯೋಜನೆಯ ಮೂಲಕ ವಿದ್ಯುತ್ ಪೂರೈಸಲಾಗಿದೆ ಎಂದರು. ಸುಮಾರು 4 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕದ ಖಾತ್ರಿ ಪಡಿಸಲು ಯೋಜನೆಯನ್ನು ಅಭಿಯಾನದೋಪಾದಿಯಲ್ಲಿ ಮಾಡಲಾಗಿದೆ ಎಂದರು.

 

ಪ್ರಧಾನಮಂತ್ರಿಯವರೊಂದಿಗೆ ಸಂವಾದ ನಡೆಸಿದ ದೂರದ ಗ್ರಾಮಗಳ ಫಲಾನುಭವಿಗಳು ವಿದ್ಯುತ್ ತಮ್ಮ ಬದುಕನ್ನು ಎಂದೆಂದಿಗೂ ಪರಿವರ್ತಿಸಿದೆ ಎಂದು ತಿಳಿಸಿದರು. ಸೂರ್ಯಾಸ್ತಕ್ಕೂ ಮೊದಲೇ ಕೆಲಸ ಮುಗಿಸಿ, ಮಕ್ಕಳಿಗೆ ಸೀಮೆಎಣ್ಣೆ ದೀಪದಲ್ಲಿ ಓದುವಂತೆ ಬಲವಂತ ಮಾಡುತ್ತಿದ್ದ ಬದುಕನ್ನು ವಿದ್ಯುದ್ದೀಕರಣ ಸುಗಮಗೊಳಿಸಿದೆ ಎಂದರು. ಬಹುತೇಕ ಫಲಾನುಭವಿಗಳು, ತಮ್ಮ ಬದುಕಿನ ಗುಣಮಟ್ಟದಲ್ಲಿ ಸಮಗ್ರ ಸುಧಾರಣೆ ಆಗಿದೆ ಎಂದರು. ತಮ್ಮ ಮನೆಗಳಿಗೆ ಬೆಳಕು ತಂದಿದ್ದಕ್ಕಾಗಿ ಪ್ರಧಾನಮಂತ್ರಿಯವರಿಗೆ ಫಲಾನುಭವಿಗಳು ಧನ್ಯವಾದ ಅರ್ಪಿಸಿದರು.

 

 

 

 

 

 

 

 

 

 

 

 

 

 

Click here to read full text speech

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Big dip in terrorist incidents in Jammu and Kashmir in last two years, says government

Media Coverage

Big dip in terrorist incidents in Jammu and Kashmir in last two years, says government
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 30 ಜುಲೈ 2021
July 30, 2021
ಶೇರ್
 
Comments

PM Modi extends greetings on International Tiger Day, cites healthy increase in tiger population

Netizens praise Modi Govt’s efforts in ushering in New India