ಶೇರ್
 
Comments
Technology can be beneficial in reducing poverty to a great extent: PM Modi
High Speed Rail project project would bring in latest technology and ensure fast-paced progress: PM Modi
Whether it is railways, highways, waterways or airways, we are focusing on all areas. Integrated transport system is the dream of new India: PM
Our efforts are to provide benefits of new technology to the common man: PM Modi
Economic development has a direct relation with productivity. Our aim is: More productivity with high-speed connectivity: PM Modi

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆ ಅವರಿಂದು ಮುಂಬೈ ಮತ್ತು ಅಹ್ಮದಾಬಾದ್ ನಡುವಿನ ಭಾರತದ ಪ್ರಥಮ ಅತಿ ವೇಗದ ರೈಲು ಯೋಜನೆಗೆ ಜಂಟಿಯಾಗಿ ಶಂಕುಸ್ಥಾಪನೆ ನೆರವೇರಿಸಿದರು.

 

 

ಈ ಸಂದರ್ಭದಲ್ಲಿ ಅಹ್ಮದಾಬಾದ್ ನಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ನವ ಭಾರತದ ಇಚ್ಛಾಶಕ್ತಿ ಮತ್ತು ಅಪೇಕ್ಷೆಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಭಾರತದ ಜನತೆಯನ್ನು ಅಭಿನಂದಿಸಿದ ಅವರು, ಅತಿ ವೇಗದ ರೈಲು ಯೋಜನೆಯು ಪ್ರಗತಿಗೆ ವೇಗ ನೀಡುವುದಲ್ಲದೆ ಅತಿ ಶೀಘ್ರ ಫಲಿತಾಂಶವನ್ನೂ ಕೊಡುತ್ತದೆ ಎಂದರು. ಅತಿ ವೇಗದ ಸಂಪರ್ಕದೊಂದಿಗೆ ಉತ್ಪಾದನೆ ಹೆಚ್ಚಿಸುವುದಕ್ಕೆ ಸರ್ಕಾರ ಗಮನ ಹರಿಸಿದೆ ಎಂದರು. ಭಾರತಕ್ಕೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡುತ್ತಿರುವ ಜಪಾನ್ ಗೆ ಧನ್ಯವಾದ ಅರ್ಪಿಸಿದರು. ಅತಿ ಅಲ್ಪಾವಧಿಯಲ್ಲಿ ಈ ಯೋಜನೆ ಆರಂಭವಾಗಿರುವುದಕ್ಕೆ ಅವರು ಪ್ರಧಾನಿ ಅಬೆ ಅವರನ್ನು ಅಭಿನಂದಿಸಿದರು .

ಅತಿ ವೇಗದ ರೈಲು ಯೋಜನೆಯು ಕೇವಲ ಎರಡು ನಗರಗಳನ್ನು ಮಾತ್ರ ಹತ್ತಿರ ತರುತ್ತಿಲ್ಲ, ಜೊತೆಗೆ ನೂರಾರು ಕಿಲೋ ಮೀಟರ್ ದೂರದಲ್ಲಿ ಬದುಕುತ್ತಿರುವವರನ್ನೂ ಹತ್ತಿರ ತರುತ್ತದೆ ಎಂದರು. ಹೊಸ ಆರ್ಥಿಕ ವ್ಯವಸ್ಥೆಯು ಮುಂಬೈ - ಅಹ್ಮದಾಬಾದ್ ಕಾರಿಡಾರ್ ನಲ್ಲಿ ಅಭಿವೃದ್ಧಿಯಾಗಲಿದೆ ಮತ್ತು ಇಡೀ ಪ್ರದೇಶ ಒಂದೇ ಆರ್ಥಿಕ ವಲಯವಾಗಿ ಬದಲಾಗುತ್ತದೆ ಎಂದರು.

ಸಾಮಾನ್ಯ ಜನರಿಗೆ ಲಾಭ ದೊರೆತಾಗ ಮಾತ್ರವೇ ತಂತ್ರಜ್ಞಾನ ಉಪಯುಕ್ತವಾಗುತ್ತದೆ ಎಂದು ಪ್ರಧಾನಿ ಹೇಳಿದರು. ಈ ಯೋಜನೆಯಲ್ಲಿನ ತಂತ್ರಜ್ಞಾನದ ವರ್ಗಾವಣೆ ಭಾರತೀಯ ರೈಲ್ವೆಗೆ ಉಪಯುಕ್ತವಷ್ಟೇ ಅಲ್ಲ, ಇದು ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೂ ಉತ್ತೇಜನ ನೀಡುತ್ತದೆ ಎಂದರು. ಈ ಯೋಜನೆ ಪರಿಸರ ಸ್ನೇಹಿ ಮತ್ತು ಮಾನವ ಸ್ನೇಹಿಯಾಗಿದೆ ಎಂದರು. ಅತಿ ವೇಗದ ಕಾರಿಡಾರ್ ವಲಯದಲ್ಲಿ ಭವಿಷ್ಯದಲ್ಲಿ ತ್ವರಿತ ಅಭಿವೃದ್ಧಿಗೆ ಸಹಕಾರಿ ಎಂದರು.

ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಾಧ್ಯವಾದಷ್ಟೂ ಅತಿ ಕಡಿಮೆ ಅವಧಿಯಲ್ಲಿ ಈ ಯೋಜನೆ ಪೂರ್ಣಗೊಳಿಸಲು ಎಲ್ಲರೂ ಒಗ್ಗೂಡಿ ಶ್ರಮಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಪ್ರಧಾನಿ ಶಿಂಜೋ ಅಬೆ ಮಾತನಾಡಿ, ಭಾರತ- ಜಪಾನ್ ಪಾಲುದಾರಿಕೆ ವಿಶಿಷ್ಠ, ವ್ಯೂಹಾತ್ಮಕ ಮತ್ತು ಜಾಗತಿಕವಾದ್ದು ಎಂದು ಹೇಳಿದರು. ಭಾರತದ ಸೌಂದರ್ಯವನ್ನು ತಾವು ಕೆಲವೇ ವರ್ಷಗಳಲ್ಲಿ ಬುಲೆಟ್ ರೈಲಿನ ಕಿಟಕಿಯಿಂದ ನೋಡ ಬಯಸುವುದಾಗಿ ಹೇಳಿದರು.

 

 

 

 

 

 

 

 

 

 

 

 

 

 

 

 

 

 

Click here to read full text of speech

 

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
Bhupender Yadav writes: What the Sengol represents

Media Coverage

Bhupender Yadav writes: What the Sengol represents
...

Nm on the go

Always be the first to hear from the PM. Get the App Now!
...
PM condoles loss of lives due to train accident in Odisha
June 02, 2023
ಶೇರ್
 
Comments

The Prime Minister, Shri Narendra Modi has expressed deep grief over the loss of lives due to train accident in Odisha.

In a tweet, the Prime Minister said;

"Distressed by the train accident in Odisha. In this hour of grief, my thoughts are with the bereaved families. May the injured recover soon. Spoke to Railway Minister @AshwiniVaishnaw and took stock of the situation. Rescue ops are underway at the site of the mishap and all possible assistance is being given to those affected."