ಶೇರ್
 
Comments
My Government's "Neighbourhood First" and your Government's "India First" policies have strengthened our bilateral cooperation in all sectors: PM
In the coming years, the projects under Indian assistance will bring even more benefits to the people of the Maldives: PM

ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರು ಜಂಟಿಯಾಗಿ ಮಾಲ್ಡೀವ್ಸ್‌ನಲ್ಲಿನ ಹಲವಾರು ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತದಲ್ಲಿ ತಯಾರಾದ ಕರಾವಳಿ ಕಾವಲು ಪಡೆಯ ಹಡಗು ಕಾಮಿಯಾಬ್ ಅನ್ನು ಮಾಲ್ಡೀವ್ಸ್ ಗೆ ಉಡುಗೊರೆಯಾಗಿ ನೀಡುವುದು, ರುಪೇ ಕಾರ್ಡ್ ಬಿಡುಗಡೆ, ಮಾಲೆಯಲ್ಲಿ ಎಲ್ಇಡಿ ದೀಪಗಳ ಅಳವಡಿಕೆ, ಸಮುದಾಯ ಅಭಿವೃದ್ಧಿ ಯೋಜನೆಗಳು, ಮೀನು ಸಂಸ್ಕರಣಾ ಘಟಕಗಳ ಆರಂಭ ಇವುಗಳಲ್ಲಿ ಸೇರಿವೆ.

ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಸೋಲಿಹ್ ಅವರನ್ನು ಅಭಿನಂದಿಸಿದ ಪ್ರಧಾನಿಯವರು, ಇದು ಭಾರತ – ಮಾಲ್ಡೀವ್ಸ್ ಸಂಬಂಧದಲ್ಲಿ ಮಹತ್ವದ ವರ್ಷವಾಗಿದೆ ಎಂದು ಹೇಳಿದರು.

ಭಾರತದ, ನೆರೆಹೊರೆಯವರು ಮೊದಲು ನೀತಿ ಮತ್ತು ಮಾಲ್ಡೀವ್ಸ್ ನ ಭಾರತವೇ ಮೊದಲು ನೀತಿ ಎಲ್ಲಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಿದೆ ಎಂದು ಪ್ರಧಾನಿ ಹೇಳಿದರು.

ತ್ವರಿತ ಇಂಟರ್‌ಸೆಪ್ಟರ್ ಕರಾವಳಿ ಕಾವಲು ಪಡೆಯ ಹಡಗು ಕಾಮಿಯಾಬ್ ಕುರಿತು ಮಾತನಾಡಿದ ಪ್ರಧಾನಿಯವರು, ಇದು ಮಾಲ್ಡೀವ್ಸ್‌ನ ಕಡಲ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಸಾಗರ ಆರ್ಥಿಕತೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದರು.

ದ್ವೀಪ ಸಮುದಾಯದ ಜನ ಜೀವನವನ್ನು ಬೆಂಬಲಿಸುವ ತೀವ್ರ ಪರಿಣಾಮದ ಸಮುದಾಯ ಅಭಿವೃದ್ಧಿ ಯೋಜನೆಗಳ ಸಹಭಾಗಿತ್ವದ ಬಗ್ಗೆ ಪ್ರಧಾನಿಯವರು ಸಂತಸ ವ್ಯಕ್ತಪಡಿಸಿದರು.

ಜನರ ನಡುವಿನ ಸಂಪರ್ಕವು ಎರಡೂ ದೇಶಗಳ ನಡುವಿನ ನಿಕಟ ಸಂಬಂಧದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದ ಪ್ರಧಾನಿಯವರು, ಈ ಹಿನ್ನೆಲೆಯಲ್ಲಿ, ಮಾಲ್ಡೀವ್ಸ್‌ ಭೇಟಿ ನೀಡುವ ಭಾರತದ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ. ದೆಹಲಿ, ಮುಂಬೈ ಮತ್ತು ಬೆಂಗಳೂರಿನಿಂದ ಮೂರು ನೇರ ವಿಮಾನಗಳು ಈ ವಾರದಲ್ಲಿ ಪ್ರಾರಂಭವಾಗಿವೆ ಎಂದು ಹೇಳಿದರು. ರುಪೇ ಪಾವತಿ ವ್ಯವಸ್ಥೆಯ ಆರಂಭದಿಂದ ಭಾರತೀಯರ ಮಾಲ್ಡೀವ್ಸ್‌ ಪ್ರವಾಸ ಮತ್ತಷ್ಟು ಸುಲಭವಾಗುತ್ತದೆ ಎಂದು ಅವರು ಹೇಳಿದರು.

ಹುಲ್ ಹುಲ್ಮಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಮತ್ತು ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಬಗ್ಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, 34 ದ್ವೀಪಗಳಲ್ಲಿ ನೀರು ಮತ್ತು ನೈರ್ಮಲ್ಯ ಯೋಜನೆಯ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಪ್ರಧಾನಿ ಹೇಳಿದರು.

ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು ಮಾಲ್ಡೀವ್ಸ್ ಜೊತೆ ಸಹಭಾಗಿತ್ವವನ್ನು ಮುಂದುವರೆಸುವ ತಮ್ಮ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ ಮತ್ತು ಸುರಕ್ಷತೆಗಾಗಿ ಎರಡೂ ದೇಶಗಳು ಸಹಕಾರವನ್ನು ಹೆಚ್ಚಿಸುತ್ತವೆ ಎಂದು ಪ್ರಧಾನಿಯವರು  ಹೇಳಿದರು.

 

 

Click here to read full text speech

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
India creates history, vaccinates five times more than the entire population of New Zealand in just one day

Media Coverage

India creates history, vaccinates five times more than the entire population of New Zealand in just one day
...

Nm on the go

Always be the first to hear from the PM. Get the App Now!
...
PM condoles loss of lives due to drowning in Latehar district, Jharkhand
September 18, 2021
ಶೇರ್
 
Comments

The Prime Minister, Shri Narendra Modi has expressed deep grief over the loss of lives due to drowning in Latehar district, Jharkhand. 

The Prime Minister Office tweeted;

"Shocked by the loss of young lives due to drowning in Latehar district, Jharkhand. In this hour of sadness, condolences to the bereaved families: PM @narendramodi"