ಉದ್ಘಾಟಿಸಲಾದ ಕಾಮಗಾರಿಗಳು ವಿಸ್ತೃತ ಶ್ರೇಣಿಗೆ ಸಂಬಂಧಿಸಿದ್ದು ಭಾರತದ ಪ್ರಗತಿಯ ಪಥಕ್ಕೆ ಚೈತನ್ಯ ನೀಡುತ್ತವೆ
ಕೇರಳದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಸುಧಾರಣೆಗೆ ಭಾರತ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ
ಗಲ್ಫ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯರಿಗೆ ಸರ್ಕಾರ ಪೂರ್ಣ ಬೆಂಬಲ ನೀಡಿದೆ
ತಮ್ಮ ಮನವಿಗೆ ಸ್ಪಂದಿಸಿದ ಮತ್ತು ಗಲ್ಫ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ವಿಶೇಷ ಕಾಳಜಿ ತೋರಿದ ಗಲ್ಫ್ ಸಾಮ್ರಾಜ್ಯಕ್ಕೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇರಳದ ಕೊಚ್ಚಿಯಲ್ಲಿಂದು ಹಲವು ಯೋಜನೆಗಳನ್ನು ಉದ್ಘಾಟಿಸಿ, ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕೇರಳದ ರಾಜ್ಯಪಾಲರು, ಕೇರಳದ ಮುಖ್ಯಮಂತ್ರಿ, ಕೇಂದ್ರ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ಕೇಂದ್ರದ ಸಹಾಯಕ ಸಚಿವರಾದ ಶ್ರೀ ಮನ್ಸುಖ್ ಮಾಂಡವೀಯ, ಶ್ರೀ ವಿ. ಮುರಳೀಧರನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ, ಪ್ರಧಾನಮಂತ್ರಿಯವರು ಇಂದು ಉದ್ಘಾಟಿಸಲಾದ ಕಾಮಗಾರಿಗಳು ವಿಸ್ತೃತ ವಲಯದ್ದಾಗಿವೆ. ಅವು ಭಾರತದ ಪ್ರಗತಿಯ ಪಥಕ್ಕೆ ಚೈತನ್ಯ ನೀಡುತ್ತವೆ. ಇಂದು ಉದ್ಘಾಟನೆಯಾದ ಪ್ರೊಪಿಲೀನ್ ಡೆರೆವೇಟಿವ್ ಪೆಟ್ರೋ ರಾಸಾಯನಿಕ ಯೋಜನೆ (ಪಿಡಿಪಿಪಿ) ವಿದೇಶಿ ವಿನಿಮಯವನ್ನು ಉಳಿಸುವ ಕಾರಣ ಇದು ಆತ್ಮನಿರ್ಭರತೆಯತ್ತ ಭಾರತದ ಪ್ರಯಾಣವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ವ್ಯಾಪಕ ಶ್ರೇಣಿಯ ಕೈಗಾರಿಕೆಗಳು ಗಳಿಕೆಯ ಜೊತೆಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಅಂತೆಯೇ, ಆರ್.ಓ.-ಆರ್.ಓ. ಹಡಗು ಸೇವೆಯೊಂದಿಗೆ, ರಸ್ತೆಯ ಸುಮಾರು ಮೂವತ್ತು ಕಿಲೋಮೀಟರ್ ದೂರವು 3.5 ಕಿಲೋಮೀಟರ್ ಜಲ ಮಾರ್ಗವಾಗುವ ಮೂಲಕ, ರಸ್ತೆಯ ಮೇಲಿನ ದಟ್ಟಣೆ ಕಡಿಮೆ ಮಾಡಿ, ಹೆಚ್ಚಿನ ಅನುಕೂಲತೆ, ವಾಣಿಜ್ಯ ಮತ್ತು ಸಾಮರ್ಥ್ಯವರ್ಧನೆಗೆ ಕಾರಣವಾಗುತ್ತದೆ ಎಂದರು.

ಭಾರತ ಸರ್ಕಾರ ಕೇರಳದ ಪ್ರವಾಸೋದ್ಯಮ ಮೂಲಸೌಕರ್ಯ ಸುಧಾರಣೆ ಕುರಿತಂತೆ ಹಲವು ಪ್ರಯತ್ನ ಕೈಗೊಂಡಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಸಾಗರಿಕ, ಕೊಚ್ಚಿನ ಅಂತಾರಾಷ್ಟ್ರೀಯ ಟರ್ಮಿನಲ್ ಉದ್ಘಾಟನೆ ಇದಕ್ಕೆ ಒಂದು ಉದಾಹರಣೆಯಾಗಿದೆ ಎಂದರು. ಸಾಗರಿಕ ಕ್ಯ್ರೂಸ್ ಟರ್ಮಿನಲ್ ಒಂದು ಲಕ್ಷ ಕ್ರ್ಯೂಸ್ ಅತಿಥಿಗಳಿಗೆ ಸೇವೆ ಒದಗಿಸಲಿದೆ ಎಂದರು. ಅಂತಾರಾಷ್ಟ್ರೀಯ ಪ್ರವಾಸದ ಸಾಂಕ್ರಾಮಿಕ ಸಂಬಂಧಿತ ನಿರ್ಬಂಧಗಳ ನಡುವೆಯೂ ಸ್ಥಳೀಯ ಪ್ರವಾಸೋದ್ಯಮದ ಹೆಚ್ಚಳವನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಸ್ಥಳೀಯ ಪ್ರವಾಸೋದ್ಯಮದಲ್ಲಿರುವವರಿಗೆ ಜೀವನೋಪಾಯವನ್ನು ಹೆಚ್ಚಿಸಲು ಮತ್ತು ನಮ್ಮ ಸಂಸ್ಕೃತಿ ಮತ್ತು ನಮ್ಮ ಯುವಕರ ನಡುವಿನ ಸಂಪರ್ಕವನ್ನು ಗಾಢವಾಗಿಸಲು ಇದೊಂದು ಉತ್ತಮ ಅವಕಾಶವಾಗಿದೆ ಎಂದು ಅವರು ಹೇಳಿದರು. ನಾವೀನ್ಯಪೂರ್ಣ ಪ್ರವಾಸೋದ್ಯಮ ಸಂಬಂಧಿತ ಉತ್ಪನ್ನಗಳ ಬಗ್ಗೆ ಚಿಂತಿಸಲು ಅವರು ನವೋದ್ಯಮಗಳಿಗೆ ಕರೆ ನೀಡಿದರು. ಕಳೆದ ಐದು ವರ್ಷಗಳಲ್ಲಿ ಭಾರತದ ಪ್ರವಾಸೋದ್ಯಮ ಕ್ಷೇತ್ರವು ಉತ್ತಮವಾಗಿ ಬೆಳೆಯುತ್ತಿದೆ ಎಂಬುದನ್ನು ಪ್ರಧಾನಮಂತ್ರಿಯವರು ಗಮನಿಸಿದರು. ವಿಶ್ವ ಪ್ರವಾಸೋದ್ಯಮ ಸೂಚ್ಯಂಕ ಶ್ರೇಯಾಂಕದಲ್ಲಿ ಭಾರತವು ಅರವತ್ತೈದರಿಂದ ಮೂವತ್ತನಾಲ್ಕನೇ ಸ್ಥಾನಕ್ಕೆ ಜಿಗಿದಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಸಾಮರ್ಥ್ಯವರ್ಧನೆ ಮತ್ತು ಭವಿಷ್ಯ ಸಿದ್ಧ ಮೂಲಸೌಕರ್ಯಗಳು ರಾಷ್ಟ್ರೀಯ ಅಭಿವೃದ್ಧಿಯ ಎರಡು ಪ್ರಮುಖ ಅಂಶಗಳಾಗಿವೆ. ಇಂದು ವಿಜ್ಞಾನ ಸಾಗರದ ಅಭಿವೃದ್ಧಿ ಕಾರ್ಯ ಮತ್ತು ದಕ್ಷಿಣ ಕಲ್ಲಿದ್ದಲು ಬರ್ತ್ ಮರು ನಿರ್ಮಾಣ ಈ ಎರಡೂ ಅಂಶಗಳಿಗೆ ಕೊಡುಗೆ ನೀಡಲಿವೆ ಎಂದರು. ಕೊಚ್ಚಿ ಹಡಗು ಪ್ರದೇಶದ ವಿಜ್ಞಾನ ಸಾಗರ, ಹೊಸ ಜ್ಞಾನ ಆವರಣ, ಸಾಗರ ವಿಜ್ಞಾನ ಅಧ್ಯಯನ ಮಾಡಲು ಬಯಸುವವರಿಗೆ ನೆರವಾಗಲಿದೆ ಎಂದರು. ದಕ್ಷಿಣ ಕಲ್ಲಿದ್ದಲು ಬರ್ತ್ ಸಾರಿಗೆ ವೆಚ್ಚವನ್ನು ತಗ್ಗಿಸಲಿದ್ದು, ಸರಕು ಸಾಮರ್ಥ್ಯ ಹೆಚ್ಚಿಸಲಿದೆ ಎಂದರು. ಇಂದು, ಮೂಲಸೌಕರ್ಯದ ಸ್ವರೂಪ ಮತ್ತು ವ್ಯಾಖ್ಯಾನ ಬದಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅದು ಕೇವಲ ಉತ್ತಮ ರಸ್ತೆಗಳು; ಅಭಿವೃದ್ಧಿ ಕಾಮಗಾರಿಗಳು ಮತ್ತು ಕೆಲವು ನಗರ ಕೇಂದ್ರಗಳ ನಡುವೆ ಸಂಪರ್ಕವಾಗಷ್ಟೇ ಉಳಿದಿಲ್ಲ. ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ 110 ಲಕ್ಷ ಕೋಟಿ ರೂ.ಗಳನ್ನು ಮೂಲಸೌಕರ್ಯ ಸೃಷ್ಟಿಗೆ ವೆಚ್ಚ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ನೀಲಿ ಆರ್ಥಿಕತೆ ಅಭಿವೃದ್ಧಿಗಾಗಿ ದೇಶ ರೂಪಿಸಿರುವ ಯೋಜನೆಯನ್ನು ಒತ್ತಿಹೇಳಿದ ಶ್ರೀ ಮೋದಿ, “ಈ ವಲಯದಲ್ಲಿ ನಮ್ಮ ದೃಷ್ಟಿ ಮತ್ತು ಕಾರ್ಯವು: ಹೆಚ್ಚಿನ ಬಂದರುಗಳು, ಪ್ರಸ್ತುತ ಬಂದರುಗಳಲ್ಲಿ ಮೂಲಸೌಕರ್ಯಗಳ ಸುಧಾರಣೆ, ಎಫ್.ಎಫ್.-ಶೋರ್ ಇಂಧನ, ಸುಸ್ಥಿರ ಕರಾವಳಿ ಅಭಿವೃದ್ಧಿ ಮತ್ತು ಕರಾವಳಿ ಸಂಪರ್ಕ” ಒಳಗೊಂಡಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಇದು ಮೀನುಗಾರರ ಸಮುದಾಯಗಳ ವೈವಿಧ್ಯಮಯ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ತಿಳಿಸಿದರು. ಹೆಚ್ಚಿನ ಸಾಲವನ್ನು ಖಾತ್ರಿಪಡಿಸುವ ಅವಕಾಶವನ್ನು ಇದು ಹೊಂದಿದೆ. ಮೀನುಗಾರರನ್ನು ಕಿಸಾನ್ ಕ್ರೆಡಿಟ್ ಕಾರ್ಡ್‌ ಗಳೊಂದಿಗೆ ಸಂಪರ್ಕಿಸಲಾಗಿದೆ. ಅದೇ ರೀತಿ, ಭಾರತವನ್ನು ಸಮುದ್ರ-ಆಹಾರ ರಫ್ತು ಕೇಂದ್ರವನ್ನಾಗಿ ಮಾಡುವ ಕಾರ್ಯ ನಡೆಯುತ್ತಿದೆ ಎಂದರು.

ಈ ವರ್ಷದ ಬಜೆಟ್ ನಲ್ಲಿ ಕೇರಳ ರಾಜ್ಯಕ್ಕೆ ಪ್ರಯೋಜನವಾಗುವಂತಹ ಹಲವು ಪ್ರಮುಖ ಯೋಜನೆ ಮತ್ತು ಸಂಪನ್ಮೂಲ ಒಳಗೊಂಡಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಇದು ಕೊಚ್ಚಿಯ ಮುಂದಿನ ಹಂತದ ಮೆಟ್ರೋವನ್ನೂ ಒಳಗೊಂಡಿದೆ ಎಂದರು.

ಕೊರೊನಾ ಸವಾಲಿಗೆ ಭಾರತದ ಸ್ಫೂರ್ತಿದಾಯಕ ಸ್ಪಂದನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸರ್ಕಾರದ ಪ್ರಯತ್ನಗಳು ಗಲ್ಫ್ ನಲ್ಲಿ ಭಾರತೀಯ ಸಮುದಾಯಕ್ಕೆ ನೆರವಾಯಿತು ಎಂದರು. ಗಲ್ಫ್ ನಲ್ಲಿರುವ ಭಾರತೀಯ ಸಮುದಾಯದ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ. ವಂದೆ ಭಾರತ್ ಅಭಿಯಾನದಡಿ 50 ಲಕ್ಷ ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ. ಅವರಲ್ಲಿ ಹಲವರು ಕೇರಳದವರಾಗಿದ್ದಾರೆ ಎಂದರು.

ಪ್ರಧಾನಮಂತ್ರಿಯವರು ಅಲ್ಲಿನ ಕಾರಾಗೃಹಗಳಲ್ಲಿದ್ದ ಅನೇಕ ಭಾರತೀಯರನ್ನು ಬಿಡುಗಡೆ ಮಾಡಲು ಭಾರತ ಸರ್ಕಾರದ ಪ್ರಯತ್ನಕ್ಕೆ ವಿವಿಧ ಗಲ್ಫ್ ರಾಷ್ಟ್ರಗಳು ನೀಡಿದ ಸ್ಪಂದನೆಗೆ ಧನ್ಯವಾದ ಹೇಳಲು ಈ ಅವಕಾಶವನ್ನು ಬಳಸಿಕೊಂಡರು.“ಗಲ್ಫ್ ಸಂಸ್ಥಾನ ನನ್ನ ವೈಯಕ್ತಿಕ ಮನವಿಗೆ ಸ್ಪಂದಿಸಿ, ನಮ್ಮ ಸಮುದಾಯಕ್ಕೆ ವಿಶೇಷ ಕಾಳಜಿ ತೋರಿತು. ಅವರು ವಲಯಕ್ಕೆ ಭಾರತೀಯರು ಮರಳಲು ಆದ್ಯತೆ ನೀಡಿದರು. ಆ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಾವು ಏರ್ ಬಬಲ್ ಹೊಂದಿಸಿದ್ದೇವೆ. ಕೊಲ್ಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯರು, ಅವರ ಕಲ್ಯಾಣದ ಖಾತ್ರಿಗೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲವಿದೆ ಎಂಬುದನ್ನು ತಿಳಿದಿರಬೇಕು ”ಎಂದು ಪ್ರಧಾನಮಂತ್ರಿ ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Operation Sagar Bandhu: India provides assistance to restore road connectivity in cyclone-hit Sri Lanka

Media Coverage

Operation Sagar Bandhu: India provides assistance to restore road connectivity in cyclone-hit Sri Lanka
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಡಿಸೆಂಬರ್ 2025
December 05, 2025

Unbreakable Bonds, Unstoppable Growth: PM Modi's Diplomacy Delivers Jobs, Rails, and Russian Billions