PM Modi interacts with with NCC Cadets, NSS Volunteers and Tableaux Artists

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಗಣರಾಜ್ಯೋತ್ಸವ ಸಮಾರಂಭದ ಅಂಗವಾಗಿ ದೆಹಲಿಯಲ್ಲಿರುವ ಸ್ತಬ್ಧ ಚಿತ್ರ ಕಲಾವಿದರು, ಬುಡಕಟ್ಟು ಅತಿಥಿಗಳು, ಎನ್.ಸಿ.ಸಿ. ಕಡೆಟ್ ಗಳು ಮತ್ತು ಎನ್.ಎಸ್.ಎಸ್. ಸ್ವಯಂಸೇವಕರೊಂದಿಗೆ ಸಂವಾದ ನಡೆಸಿದರು. ತೀನ್ ಮೂರ್ತಿ ಹುಲ್ಲು ಹಾಸಿನಲ್ಲಿ ಸೇರಿದ್ದ ಎನ್.ಸಿ.ಸಿ. ಗುಂಪಿನೊಳಗೆ ಹೆಜ್ಜೆಹಾಕಿದ ಪ್ರಧಾನಿಯವರು, ಭಾರತದ ವೈವಿಧ್ಯತೆಯ ಬಗ್ಗೆ ಮಾತನಾಡಿದರು. ಪ್ರತಿಯೊಬ್ಬರಿಂದಲೂ ಕಲಿಯುವುದು ಬಹಳ ಇರುತ್ತದೆ ಎಂದು ಹೇಳಿದರು. ನಮ್ಮ ಸುತ್ತಲೂ ಆಗುತ್ತಿರುವ ಬದಲಾವಣೆಗೆ ಒಗ್ಗಿಕೊಳ್ಳುವುದು ಮಹತ್ವವಾದದ್ದು ಎಂದು ಅವರು ಪ್ರತಿಪಾದಿಸಿದರು. 

ಯುವಜನರು ಭಾರತದಲ್ಲಿ ಪರಿವರ್ತನಾತ್ಮಕ ಬದಲಾವಣೆಯನ್ನು ತರಬಲ್ಲರು ಎಂದು ಅವರು ಪ್ರತಿಪಾದಿಸಿದರು.

ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ದೇಶಕ್ಕೆ ಅತೀವ ಹೆಮ್ಮೆಯಿದೆ ಎಂದು ಪ್ರಧಾನಿ ಹೇಳಿದರು. ಈ ಸ್ಫೂರ್ತಿಯಲ್ಲಿ, ನಾವು ದೇಶ ಸೇವೆ ಮಾಡುತ್ತಿರುವ ಧೈರ್ಯಶಾಲಿ ವ್ಯಕ್ತಿಗಳ ಬಗ್ಗೆ ಹೆಚ್ಚು ತಿಳಿಯಬೇಕು ಎಂದು ಹೇಳಿದರು.ಹಲವು ಪೊಲೀಸ್ ಸಿಬ್ಬಂದಿ ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ ಎಂದ ನರೇಂದ್ರ ಮೋದಿಯವರು, ಅವರ ತ್ಯಾಗದ ಬಗ್ಗೆ ತಿಳಿಯುವುದು ಮಹತ್ವವಾದ್ದು ಎಂದರು. 

ಸ್ವಚ್ಛತೆಯ ಮಹತ್ವವನ್ನೂ ಪ್ರಧಾನಿ ಪ್ರಸ್ತಾಪಿಸಿದರು. ಸ್ವಚ್ಛ ಭಾರತದ ಗಾಂಧೀ ಅವರ ಕನಸನ್ನು ನನಸು ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು. 

10 ರಾಷ್ಟ್ರಗಳ ನಾಯಕರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾದ್ದ ಕಾರಣ  ಈ ಬಾರಿಯ ಗಣರಾಜ್ಯ ದಿನ ವಿಶೇಷವಾಗಿತ್ತು ಎಂದು ಪ್ರಧಾನಿ ಹೇಳಿದರು.

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
UPI goes live at Eiffel Tower and French airports as India-France digital ties strengthen

Media Coverage

UPI goes live at Eiffel Tower and French airports as India-France digital ties strengthen
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 15 ಜೂನ್ 2026
June 15, 2026

Citizens Celebrate 12 Years of Modi: Building a Saksham Middle Class at Home While Earning Global Respect Abroad