Ujjwala Yojana has positively impacted the lives of several people across India: PM
Ujjwala Yojana has strengthened the lives of the poor, marginalised, Dalits, Tribal communities.
This initiative is playing a central role in social empowerment: PM Ujjwala Yojana is leading to better health for India's Nari Shakti: PM Modi

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶವ್ಯಾಪೀ ಉಜ್ವಲ ಫಲಾನುಭವಿಗಳ ಜೊತೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಈ ಸಂವಾದಕ್ಕಾಗಿ ದೇಶವ್ಯಾಪೀ 600 ಕ್ಕೂ ಅಧಿಕ ಕೇಂದ್ರಗಳಲ್ಲಿ ತಲಾ ಮೂರು ಮಂದಿ ಉಜ್ವಲ ಫಲಾನುಭವಿಗಳು ಹಾಜರಿದ್ದರು.
ನರೇಂದ್ರ ಮೋದಿ ಆಪ್ , ಮತ್ತು ವಿವಿಧ ಟಿ.ವಿ. ಸುದ್ದಿ ವಾಹಿನಿಗಳು ಹಾಗು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ವಿವಿಧ ವೇದಿಕೆಗಳ ಮೂಲಕ ಸುಮಾರು 10 ಲಕ್ಷ ಮಂದಿ ಈ ಸಂವಾದ ಕಾರ್ಯಕ್ರಮವನ್ನು ವೀಕ್ಷಿದರೆಂದು ಅಂದಾಜು.

ತಂತ್ರಜ್ಞಾನದ ಮೂಲಕ ಫಲಾನುಭವಿಗಳ ಜೊತೆಯಲ್ಲಿ ಸಂವಾದ ನಡೆಸಲು ಮತ್ತು ಅವರ ಅನುಭವ ಹಂಚಿಕೊಳ್ಳಲು ಸಮರ್ಥವಾದುದಕ್ಕೆ ಸಂತಸ ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿಗಳು ಉಜ್ವಲ ಯೋಜನೆ ಪ್ರಗತಿಗೆ ಸಂಕೇತವಾಗಿದೆ ಎಂದರು. ಇದು ಸಾಮಾಜಿಕ ಪರಿವರ್ತನೆಗೆ ಚಾಲಕ ಶಕ್ತಿಯಾಗಿದೆ, ಆ ಮೂಲಕ ಅದು ದೇಶದ ಸಮಗ್ರ ಅಭಿವೃದ್ಧಿಯನ್ನು ಪ್ರಭಾವಿಸುತ್ತಿದೆ ಎಂದೂ ಹೇಳಿದರು.

ಇದುವರೆಗೆ ಗ್ರಾಮೀಣ ಪ್ರದೇಶದ ಸುಮಾರು 4 ಕೋಟಿ ಮಹಿಳೆಯರು ಉಜ್ವಲ ಯೋಜನೆಯ ಮೂಲಕ ಅಡುಗೆ ಅನಿಲ ಸಂಪರ್ಕ ಪಡೆದಿದ್ದಾರೆ. 1955 ರಿಂದ 2014 ರವರೆಗೆ ಸುಮಾರು 6 ದಶಕಗಳಲ್ಲಿ ವಿತರಿಸಲಾದ ಅಡುಗೆ ಅನಿಲ ಸಂಪರ್ಕಗಳ ಸಂಖ್ಯೆ 13 ಕೋಟಿ ಮಾತ್ರ. ಇದಕ್ಕೆ ಹೋಲಿಸಿದರೆ 2014 ರ ಬಳಿಕ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟಾರೆ 10 ಕೋಟಿ ಹೊಸ ಅಡುಗೆ ಅನಿಲ ಸಂಪರ್ಕಗಳನ್ನು ವಿತರಿಸಲಾಗಿದೆ

ತಮ್ಮ ಮಾತಿನ ಆರಂಭದಲ್ಲಿ ಪ್ರಧಾನ ಮಂತ್ರಿಗಳು ಮುನ್ಶೀ ಪ್ರೇಮಚಂದ ಅವರು 1933ರಲ್ಲಿ ಬರೆದ ಕಥೆಯನ್ನು ಉಲ್ಲೇಖಿಸಿ, ಗೃಹಿಣಿಯರ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಅನುಕೂಲಕರ ವಾತಾವರಣ ನಿರ್ಮಾಣ ಮಾಡಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ಉಜ್ವಲ ಯೋಜನೆಯು ಉತ್ತಮ ಆರೋಗ್ಯವನ್ನು ತಂದಿದೆ, ವಿಷಕಾರಕ ಹೊಗೆಯಿಂದ ಮುಕ್ತ ಮಾಡಿದೆ ಮತ್ತು ಸ್ವಚ್ಚ ಇಂಧನವನ್ನು ಒದಗಿಸಿದೆ ಎಂದವರು ಹೇಳಿದರು. ಅಡುಗೆಗಾಗಿ ವ್ಯಯಿಸುವ ಸಮಯದಲ್ಲಿ ಕಡಿತವಾಗಿರುವುದರಿಂದ ಮಹಿಳೆಯರಿಗೆ ಹೆಚ್ಚುವರಿ ಆದಾಯ ಸಂಪಾದಿಸಲು ಅವಕಾಶ ದೊರೆತಿದೆ ಎಂದೂ ಪ್ರಧಾನ ಮಂತ್ರಿ ಹೇಳಿದರು.

ಈ ಯೋಜನೆಯಲ್ಲಿ ಯಾವುದೇ ಮಧ್ಯವರ್ತಿಗಳು ಇಲ್ಲದಂತೆ ಖಾತ್ರಿ ಮಾಡಲು ಆದ್ಯ ಗಮನವನ್ನು ಕೊಡಲಾಗುತ್ತಿದೆ, ಮತ್ತು ಫಲಾನುಭವಿಗಳನ್ನು ಪಾರದರ್ಶಕ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತಿದೆ ಎಂದೂ ಪ್ರಧಾನ ಮಂತ್ರಿಯವರು ಹೇಳಿದರು.
ಭಾರತದ 69 ಶೇಖಡಾ ಗ್ರಾಮಗಳು ಈಗ ಶೇಖಡಾ 100 ರಷ್ಟು ಅಡುಗೆ ಅನಿಲ ಸೌಲಭ್ಯವನ್ನು ಹೊಂದಿವೆ, 81 ಶೇಖಡಾದಷ್ಟು ಗ್ರಾಮಗಳಲ್ಲಿ 75 ಶೇಖಡಾಕ್ಕಿಂತ ಅಧಿಕ ಮಂದಿ ಅಡುಗೆ ಅನಿಲ ಸಂಪರ್ಕವನ್ನು ಪಡೆದಿದ್ದಾರೆ ಎಂದವರು ನುಡಿದರು.

ಪ್ರಧಾನ ಮಂತ್ರಿಗಳ ಜೊತೆ ಸಂವಾದ ನಡೆಸಿದ ಫಲಾನುಭವಿಗಳು ಅಡುಗೆ ಅನಿಲ ಸಂಪರ್ಕವು ಹೇಗೆ ಅಡುಗೆ ಮಾಡುವ ಸಮಯವನ್ನು ಕಡಿಮೆ ಮಾಡಿದೆ ಮತ್ತು ಇಡೀಯ ಕುಟುಂಬದ ಜೀವನದ ಗುಣಮಟ್ಟವನ್ನು ಹೇಗೆ ಎತ್ತರಿಸಿದೆ ಎಂಬ ಬಗ್ಗೆ ವಿವರಿಸಿದರು. 

 

 

 

 

 

 

 

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
The Bill to replace MGNREGS simultaneously furthers the cause of asset creation and providing a strong safety net

Media Coverage

The Bill to replace MGNREGS simultaneously furthers the cause of asset creation and providing a strong safety net
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 22 ಡಿಸೆಂಬರ್ 2025
December 22, 2025

Aatmanirbhar Triumphs: PM Modi's Initiatives Driving India's Global Ascent