India's energy future has four pillars - Energy access, energy efficiency, energy sustainability and energy security: PM at #IEF16
Our government believes in an integrated approach for energy planning and our energy agenda is inclusive: PM Modi
India's energy consumption will grow 4.5 % every year for the next 25 years, says PM Modi at #IEF16
We are entering to an era of energy abundance, says PM Modi at 16th International Energy Forum

ಸೌದಿ ಅರೇಬಿಯಾದ ಇಂಧನ ಸಚಿವರೇ,

ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರೇ,

ಅಂತಾರಾಷ್ಟ್ರೀಯ ಇಂಧನ ವೇದಿಕೆಯ ಮಹಾ ಪ್ರಧಾನ ಕಾರ್ಯದರ್ಶಿಯವರೇ,

ಗೌರವಾನ್ವಿತ ಪ್ರತಿನಿಧಿಗಳೇ,

ಮಹನೀಯರೇ ಮತ್ತು ಮಹಿಳೆಯರೇ,

ಭಾರತಕ್ಕೆ ಸ್ವಾಗತ.

16ನೇ ಅಂತಾರಾಷ್ಟ್ರೀಯ ಇಂಧನ ವೇದಿಕೆಯ ಸಚಿವರುಗಳ ಮಟ್ಟದ ಸಭೆಗೆ ಸ್ವಾಗತ.

ಉತ್ಪಾದಿಸುವ ಮತ್ತು ಬಳಕೆ ಮಾಡುವ ರಾಷ್ಟ್ರಗಳ ಇಂಧನ ಸಚಿವರು, ಅಂತಾರಾಷ್ಟ್ರೀಯ ಸಂಘಟನೆಗಳ ಮುಖ್ಯಸ್ಥರು ಮತ್ತು ಈ ವೇದಿಕೆಯ ಸಿ.ಇ.ಓಗಳನ್ನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೋಡಿ ನನಗೆ ಸಂತೋಷವೆನಿಸುತ್ತಿದೆ.

ನೀವು ಇಂದು ಜಾಗತಿಕ ಇಂಧನದ ಭವಿಷ್ಯ ಕುರಿತು ಚರ್ಚಿಸಲು ಒಟ್ಟಿಗೆ ಸೇರಿದ್ದೀರಿ, ವಿಶ್ವ ಇಂಧನ ಪೂರೈಕೆ ಮತ್ತು ಬಳಕೆಯ ಶ್ರೇಷ್ಠ ಪರಿವರ್ತನೆ ಕಾಣುತ್ತಿದೆ.

  • ಬಳಕೆಯ ವೃದ್ಧಿ ಓಇಸಿಡಿಯೇತರ ರಾಷ್ಟ್ರಗಳಿಗೆ ವರ್ಗಾವಣೆಯಾಗಿದೆ: ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಅಭಿವೃದ್ಧಿಶೀಲ ಏಷ್ಯಾ;
  • ಸೌರ ದ್ಯುತಿವಿದ್ಯುಜ್ಜನಕ ಇಂಧನ ಇತರ ಎಲ್ಲ ಇಂಧನ ಮೂಲಗಳಿಗೆ ಹೋಲಿಸಿದರೆ ಅತ್ಯಂತ ಅಗ್ಗವಾಗಿದೆ. ಇದು ಸರಬರಾಜು ಮಾದರಿಯನ್ನು ಬದಲಾಯಿಸುತ್ತಿದೆ;
  • ಜಾಗತಿಕ ಮಟ್ಟದಲ್ಲಿ ನೈಸರ್ಗಿಕ ಅನಿಲದ ಲಭ್ಯತೆ ಹೆಚ್ಚಿನ ಶೇಕಡಾವಾರು ಪ್ರಮಾಣದ ಎಲ್ಎನ್ಜಿ ಮತ್ತು ನೈಸರ್ಗಿಕ ಅನಿಲದ ಪ್ರಾಥಮಿಕ ಇಂಧನ ಕೋಶಕ್ಕೆ ಕೊಡುಗೆ ನೀಡಿದೆ;
  • ಅತಿ ಶೀಘ್ರವೇ ಅಮೆರಿಕ ತೈಲದ ಅತಿ ದೊಡ್ಡ ಉತ್ಪಾದಕವಾಗಲಿದೆ. ಮುಂದಿನ ಕೆಲವು ದಶಕಗಳಲ್ಲಿನ ಹೆಚ್ಚುವರಿ ತೈಲ ಬೇಡಿಕೆಯ ಪ್ರಮುಖ ಭಾಗವನ್ನು ಇದು ಪೂರೈಸಲಿದೆ ಎಂದು ಅಂದಾಜು ಮಾಡಲಾಗಿದೆ;
  • ಒ.ಇ.ಸಿ.ಡಿ ವಿಶ್ವದಲ್ಲಿ ಮತ್ತು ನಂತರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪ್ರಾಥಮಿಕ ಇಂಧನ ಪ್ರಮುಖ ಕೊಡುಗೆ ನೀಡುತಿದ್ದ ಕಲ್ಲಿದ್ದಲು ಕ್ರಮೇಣ ದೂರವಾಗಿ ಹೋಗಬಹುದು;
  • ಸಾರಿಗೆ ವಲಯ ಮುಂದಿನ ಕೆಲವು ದಶಕಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಸೇರ್ಪಡೆಯೊಂದಿಗೆ ಭಾರಿ ಬದಲಾವಣೆ ಕಾಣಬಹುದು;
  • ಕಾಪ್ 21 ಒಪ್ಪಂದದ ಆಧಾರದ ಮೇಲೆ ವಿಶ್ವ ಹವಾಮಾನ ಬದಲಾವಣೆ ಕಾರ್ಯಕ್ರಮಕ್ಕೆ ಬದ್ಧವಾಗಿದೆ. ಆರ್ಥಿಕತೆಯ ಮೇಲಿನ ಇಂಧನದ ತೀವ್ರತೆ ಹಸಿರು ಇಂಧನ ಮತ್ತು ಇಂಧನ ದಕ್ಷತೆಯ ಮೇಲಿನ ಗಮನದೊಂದಿಗೆ ಬದಲಾಗುತ್ತಿದೆ;

ಕಳೆದ ತಿಂಗಳು ಸಂಸ್ಥೆಯೊಂದು ತಯಾರಿಸಿದ ಇಂಧನ ಭವಿಷ್ಯ ನನ್ನ ಗಮನಕ್ಕೆ ಬಂತು, ಅದರ ಪ್ರಕಾರ, ಭಾರತ ಮುಂದಿನ 25 ವರ್ಷಗಳಲ್ಲಿ ಜಾಗತಿಕ ಇಂಧನ ಬೇಡಿಕೆಯ ಪ್ರಮುಖ ಚಾಲಕನಾಗಿರುತ್ತದೆ. ಮುಂದಿನ 25 ವರ್ಷಗಳಲ್ಲಿ ಭಾರತದ ಇಂಧನ ಬಳಕೆ ಪ್ರಮಾಣ ವಾರ್ಷಿಕ 4.2 ಪ್ರತಿಶತ ಬೆಳೆಯುತ್ತದೆ. ಇದು ವಿಶ್ವದ ಪ್ರಮುಖ ಆರ್ಥಿಕ ರಾಷ್ಟ್ರಗಳ ಪೈಕಿ ಅತ್ಯಂತ ತ್ವರಿತವಾಗಿದೆ. ಆ ವರದಿಯು 2040ರ ಹೊತ್ತಿಗೆ ಅನಿಲದ ಬೇಡಿಕೆ ಮೂರು ಪಟ್ಟು ಹೆಚ್ಚಲಿದೆ ಎಂದು ಹೇಳಿದೆ. ಇಂದು ಮೂರು ದಶಲಕ್ಷ ಇರುವ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ 2030ರ ಹೊತ್ತಿಗೆ 320 ದಶಲಕ್ಷಕ್ಕೆ ಏರಿಕೆ ಆಗಲಿದೆ.

ನಾವು ಹೇರಳ ಇಂಧನದ ಯುಗಕ್ಕೆ ಪ್ರವೇಶಿಸುತ್ತಿದ್ದೇವೆ. ಆದಾಗ್ಯೂ, 1.2 ಶತಕೋಟಿ ಜನರು ಇನ್ನೂ ವಿದ್ಯುತ್ ಸಂಪರ್ಕವನ್ನೇ ಹೊಂದಿಲ್ಲ. ಇನ್ನೂ ಹಲವರು ಶುದ್ಧ ಅಡುಗೆ ಅನಿಲ ಇಂಧನ ಹೊಂದಿಲ್ಲ.ಈ ಸನ್ನಿವೇಶವನ್ನು ಶೋಷಿತರ ಸವಲತ್ತುಗಳ ಶೋಷಣೆಗೆ ಬಳಸಿಕೊಳ್ಳುವುದಿಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಜನರು ಸಾರ್ವತ್ರಿಕವಾಗಿ ಶುದ್ಧ, ಕೈಗೆಟಕುವ ದರದ, ಸುಸ್ಥಿರ ಮತ್ತು ಸಮಾನವಾದ ಪೂರೈಕೆಯ ಇಂಧನ ಪಡೆಯಲೇಬೇಕು.

ನಾನು ಹೈಡ್ರೋ ಕಾರ್ಬನ್ ವಲಯ ಮತ್ತು ಇಂಧನ ಸುರಕ್ಷತೆಯ ಸಾಧನೆಯ ನಮ್ಮ ಪ್ರಯತ್ನಗಳ ಕುರಿತಂತೆ ನನ್ನ ಚಿಂತನೆಗಳನ್ನು ಹಂಚಿಕೊಳ್ಳುತ್ತೇನೆ.

ತೈಲ ಮತ್ತು ಅನಿಲ ವ್ಯಾಪಾರದ ವಸ್ತುವಾಗಿದೆ ಆದರೂ ಅದು ಅಗತ್ಯವೂ ಹೌದು. ಇದು ಶ್ರೀಸಾಮಾನ್ಯನ ಅಡುಗೆ ಮನೆಗೆ ಆಗಬಹುದು ಅಥವಾ ವಿಮಾನಕ್ಕೆ ಆಗಬಹುದು, ಇಂಧನ ಅತ್ಯಗತ್ಯ. ವಿಶ್ವ ದೀರ್ಘ ಕಾಲದಿಂದ ರೋಲರ್ ಕೋಸ್ಟರ್ ನಲ್ಲಿ ದರವನ್ನು ಕಂಡಿದೆ.

ನಾವು ಜವಾಬ್ದಾರಿಯುತ ದರಕ್ಕೆ ಸಾಗುವ ಅಗತ್ಯವಿದೆ, ಇದು ಉತ್ಪಾದಕರು ಮತ್ತು ಗ್ರಾಹಕರಿಬ್ಬರ ಹಿತವನ್ನೂ ಸಮತೋಲನವಾಗಿಡುತ್ತದೆ. ನಾವು ತೈಲ ಮತ್ತು ಅನಿಲ ಎರಡಕ್ಕೂ ನಮ್ಯತೆಯ ಮತ್ತು ಪಾರದರ್ಶಕ ಮಾರುಕಟ್ಟೆಯತ್ತ ಸಾಗುವ ಅಗತ್ಯವೂ ಇದೆ. ಆಗ ಮಾತ್ರ ನಾವು ಸೂಕ್ತ ರೀತಿಯಲ್ಲಿ ಮಾನವತೆಯ ಇಂಧನ ಅಗತ್ಯಗಳನ್ನು ಪೂರೈಸಬಹುದು.

ವಿಶ್ವ ಒಂದಾಗಿ ಬೆಳೆಯಬೇಕಾದರೆ, ಉತ್ಪಾದಕರು ಮತ್ತು ಗ್ರಾಹಕರ ನಡುವೆ ಪರಸ್ಪರ ಬೆಂಬಲದ ಬಾಂಧವ್ಯ ಇರಬೇಕು. ಉತ್ಪಾದಕರ ಹಿತದ ದೃಷ್ಟಿಯಿಂದ ಇತರ ಆರ್ಥಿಕತೆಗಳು ತ್ವರಿತವಾಗಿ ಮತ್ತು ವೇಗವಾಗಿ ಬೆಳೆಯುತ್ತಿವೆ. ಇದು ಅವುಗಳಿಂದ ಇಂಧನ ಮಾರುಕಟ್ಟೆ ಬೆಳೆಯುತ್ತಿರುವುದನ್ನು ಖಾತ್ರಿಪಡಿಸುತ್ತದೆ. ಕೃತಕ ವಿರೂಪ ಬೆಲೆಗಳ ಪ್ರಯತ್ನಗಳು ಸ್ವಯಂ ಸೋಲುತ್ತವೆಎಂಬುದನ್ನುಇತಿಹಾಸವು ನಮಗೆ ತೋರಿಸಿದೆ. ಅವರು ಅನಗತ್ಯ ತೊಂದರೆಗೆ ಅದರಲ್ಲೂ ಪಿರಮಿಡ್ ನ ತಳದಲ್ಲಿರುವ ಮತ್ತು ಕನಿಷ್ಠ ಅಭಿವೃದ್ಧಿಹೊಂದಿದ ರಾಷ್ಟ್ರಗಳಿಗೆ ಕಾರಣರಾಗುತ್ತಾರೆ.

ನಾವು ಈ ವೇದಿಕೆಯನ್ನು ಜವಾಬ್ದಾರಿಯುತ ದರ ನಿಗದಿಗೆ ಜಾಗತಿಕ ಒಮ್ಮತ ನಿರ್ಮಿಸಲು ಬಳಸಿಕೊಳ್ಳೋಣ. ಇದು ಉತ್ಪಾದಕ ಮತ್ತು ಬಳಕೆದಾರ ರಾಷ್ಟ್ರಗಳ ಪರಸ್ಪರ ಹಿತವನ್ನು ಈಡೇರಿಸುತ್ತದೆ.

ಜಾಗತಿಕ ಅಸ್ಥಿರತೆಗಳ ನಡುವೆ ಭಾರತಕ್ಕೂ ಇಂಧನ ಭದ್ರತೆಯ ಅಗತ್ಯವಿದೆ. ನನ್ನ ದೃಷ್ಟಿಯಲ್ಲಿ ಭಾರತದ ಇಂಧನ ಭವಿಷ್ಯ ನಾಲ್ಕು ಆಧಾರಸ್ತಂಭಗಳನ್ನು ಒಳಗೊಂಡಿದೆ – ಇಂಧನ ಪ್ರವೇಶ, ಇಂಧನ ಸಾಮರ್ಥ್ಯ, ಇಂಧನ ಸುಸ್ಥಿರತೆ ಮತ್ತು ಇಂಧನ ಭದ್ರತೆ.

ನನ್ನ ದೃಷ್ಟಿಯಲ್ಲಿ ಸಾಮಾನ್ಯವಾಗಿ ಇಂಧನ ಮತ್ತು ನಿರ್ದಿಷ್ಟವಾಗಿ ಹೈಡ್ರೋಕಾರ್ಬನ್ಗಳು ಭಾರತದ ಭವಿಷ್ಯದ ಒಂದು ಪ್ರಮುಖ ಭಾಗವಾಗಿವೆ. ಬಡವರಿಗೆ ಕೈಗೆಟಕುವ ಮತ್ತು ಲಭ್ಯವಾಗುವ ಇಂಧನ ಭಾರತದ ಅಗತ್ಯವಾಗಿದೆ. ಇಂಧನ ಬಳಕೆಯಲ್ಲಿ ದಕ್ಷತೆಯ ಅಗತ್ಯವೂ ಇದೆ.

ಜವಾಬ್ದಾರಿಯುತ ಜಾಗತಿಕ ಸದಸ್ಯ ರಾಷ್ಟ್ರಗಳ ಒಕ್ಕೂಟವಾಗಿ, ಹವಾಮಾನ ಬದಲಾವಣೆಯನ್ನು ಎದುರಿಸಲು,ತ್ಯಾಜ್ಯಹೊರಸೂಸುವಿಕೆಯನ್ನು ನಿರ್ಬಂಧಿಸುವುದು ಮತ್ತು ಸುಸ್ಥಿರ ಭವಿಷ್ಯವನ್ನು ಖಾತರಿಪಡಿಸುವುದಕ್ಕೆ ಭಾರತವು ಬದ್ಧವಾಗಿದೆ. ಈ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸೌರ ಸಹಯೋಗದ ಆರಂಭ ಒಂದು ಹೆಜ್ಜೆಯಾಗಿದೆ.

ಸ್ನೇಹಿತರೆ,

ಪ್ರಸ್ತುತ ಭಾರತವು ವಿಶ್ವದಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರವಾಗಿದೆ. ಎಲ್ಲ ಪ್ರಮುಖ ಸಂಸ್ಥೆಗಳು ಅಂದರೆ ಐ.ಎಂ.ಎಫ್, ವಿಶ್ವಬ್ಯಾಂಕ್ ಮತ್ತು ಎಡಿಬಿ ಭಾರತವು ಹತ್ತಿರದ ಭವಿಷ್ಯದಲ್ಲಿ ಶೇ.7ರಿಂದ 8ರ ದರದಲ್ಲಿ ವೃದ್ಧಿ ಸಾಧಿಸಲಿದೆ ಎಂದು ಅಂದಾಜು ಮಾಡಿವೆ. ನಮ್ಮ ಸರ್ಕಾರ, ವಿತ್ತೀಯ ಕೊರತೆಯನ್ನು ಸಮರ್ಥವಾಗಿ ನಿಯಂತ್ರಿಸಿ ಮತ್ತು ಸ್ಥಿರ ವಿನಿಮಯ ದರ, ಕಡಿಮೆ ಹಣದುಬ್ಬರದೊಂದಿಗೆ ಗರಿಷ್ಠ ಜಿಡಿಪಿ ವೃದ್ಧಿ ಸಾಧಿಸಲು ಮುಂದಾಗಿದೆ.  ಈ ಬೃರತ್ ಆರ್ಥಿಕ ಸ್ಥಿರತೆಯು ಆರ್ಥಿಕತೆಯಲ್ಲಿ ಬಳಕೆ ಮತ್ತು ಹೂಡಿಕೆಗೆ ಚೈತನ್ಯ ನೀಡಿದೆ.

ಭಾರತವು ದೊಡ್ಡ ಜನಸಂಖ್ಯೆಯಿಂದಲೂ ಹರಸಲ್ಪಟ್ಟಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇಕಡಾವಾರು ಕಾರ್ಯ ವಯಸ್ಸಿನ ಜನಸಂಖ್ಯೆಯು ವಿಶ್ವದಲ್ಲಿಯೇ ಅತ್ಯಧಿಕವಾಗಿದೆ. ಭಾರತವು ಮೇಕ್ ಇನ್ ಇಂಡಿಯಾ ಮತ್ತು ಯುವಕರಿಗೆ ಕೈಗಾರಿಕೆ ಅಂದರೆ ಜವಳಿ, ಪೆಟ್ರೋ ಕೆಮಿಕಲ್, ರಕ್ಷಣೆ, ಎಂಜಿನಿಯರಿಂಗ್ ಇತ್ಯಾದಿಗಳಲ್ಲಿ ಕೌಶಲ ಒದಗಿಸುವ ಮೂಲಕ ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಇದಕ್ಕೆ ಪ್ರತಿಯಾಗಿ, ನಮ್ಮ ಇಂಧನ ಬಳಕೆಯೂ ಇನ್ನಷ್ಟು ಹೆಚ್ಚುತ್ತಿದೆ.

ನಾವು ಹೈಡ್ರೋಕಾರ್ಬನ್ ಶೋಧನೆ ಮತ್ತು ಪರವಾನಗಿ ನೀತಿ ಆರಂಭಿಸುವ ಮೂಲಕ ನಮ್ಮ ಮುಖ್ಯವಾಹಿನಿ ನೀತಿಗಳು ಮತ್ತು ಕಟ್ಟುಪಾಡುಗಳನ್ನು ಪರಿಷ್ಕರಿಸಿದ್ದೇವೆ ಮತ್ತು ವಲಯದಲ್ಲಿ ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕತೆಯನ್ನು ತಂದಿದ್ದೇವೆ. ಬಿಡ್ ಮಾಡುವ ಮಾನದಂಡವನ್ನು ಆದಾಯ ಹಂಚಿಕೆಗೆ ಬದಲಾಯಿಸಿದ್ದೇವೆ, ಇದು ಸರ್ಕಾರದ ಮಧ್ಯಪ್ರವೇಶವನ್ನು ತಗ್ಗಿಸಲು ನೆರವಾಗಿದೆ. ಪ್ರಸ್ತುತ ಮೇ 2ರವರೆಗೆ ಬಿಡ್ಡಿಂಗ್ ಸುತ್ತು ತೆರೆದಿದೆ. ಉತ್ಪಾದನೆಯನ್ನು ಹೆಚ್ಚಿಸುವ ನಮ್ಮ ಪ್ರಯತ್ನದಲ್ಲಿ ಭಾಗಿಯಾಗುವಂತೆ ನಾನು ನಿಮಗೆ ಮನವಿ ಮಾಡುತ್ತೇನೆ. ಮುಕ್ತ ಎಕರೆಜ್ ಮತ್ತು ರಾಷ್ಟ್ರೀಯ ದತ್ತಾಂಶ ಕೋಶ ಕಂಪೆನಿಗಳು ಆಸಕ್ತರಾಗಿರುವ ಕ್ಷೇತ್ರಗಳಲ್ಲಿ ಪಾಲ್ಗೊಳ್ಳಲು ಸಹಾಯ ಮಾಡುತ್ತದೆ ಮತ್ತು ಭಾರತೀಯ ವಲಯದಲ್ಲಿ ಪರಿಶೋಧನೆ ಆಸಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ವರ್ಧಿತ ತೈಲ ಪರಿಶೋಧನೆ ನೀತಿ ಮುಖ್ಯವಾಹಿನಿ ಕ್ಷೇತ್ರಗಳ ಉತ್ಪಾದಕತೆಯನ್ನು ಸುಧಾರಿಸಲು ಇತ್ತೀಚಿನ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.

ನಮ್ಮ ತಳ ವಾಹಿನಿಯ ವಲಯಗಳು ಕಚ್ಚಾ ತೈಲ ದರದ ಮೇಲೆ ಪರಿಫಲನವಾಗುವ ಮಾರುಕಟ್ಟೆ ಚಾಲಿತ ಪೆಟ್ರೋಲ್ ಮತ್ತು ಡೀಸೆಲ್ ದರಗಳೊಂದಿಗೆ ಸಂಪೂರ್ಣವಾಗಿ ಉದಾರೀಕರಣಗೊಂಡಿವೆ. ನಾವು ಚಿಲ್ಲರೆ ಇಂಧನ ಮತ್ತು ಪಾವತಿಯಲ್ಲಿ ಡಿಜಿಟಲ್ ವೇದಿಕೆಯತ್ತ ಸಾಗಿದ್ದೇವೆ.

ನಮ್ಮ ಸರ್ಕಾರ, ಅಪ್ ಸ್ಟ್ರೀಮ್ ಉತ್ಪಾದನೆ ಮತ್ತು ಡೌನ್ ಸ್ಟ್ರೀಮ್ ಚಿಲ್ಲರೆ ವರೆಗೆ ಸಂಪೂರ್ಣ ತೈಲ ಮತ್ತು ಅನಿಲ ಮೌಲ್ಯ ಸರಣಿಯಲ್ಲಿ ಖಾಸಗಿ ಪಾಲುದಾರಿಕೆಯಲ್ಲಿ ಖಾಸಗಿ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಿದೆ.

ನಮ್ಮ ಸರ್ಕಾರ ಇಂಧನ ಯೋಜನೆಯಲ್ಲಿ ಸಮಗ್ರ ನಿಲುವಿನ ಮೇಲೆ ನಂಬಿಕೆ ಇಟ್ಟಿದೆ. ಮತ್ತು ಭಾರತದಲ್ಲಿ ನಮ್ಮ ಇಂಧನ ಕಾರ್ಯಕ್ರಮ ಸಮಗ್ರ, ಮಾರುಕಟ್ಟೆ ಆಧಾರಿತ ಮತ್ತು ಹವಾಮಾನ ಸ್ಪಂದಿತವಾಗಿದೆ., ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮದ ಮೂರು ಶಕ್ತಿ ಸಂಬಂಧಿತ ಘಟಕಗಳನ್ನು ಸಾಧಿಸುವ ಕಡೆಗೆ ಬಹಳ ದೂರ ಸಾಗಬೇಕು ಎಂಬುದನ್ನು ನಾವು ನಂಬುತ್ತೇವೆ. ಅವುಗಳೆಂದರೆ:

2030ರ ಹೊತ್ತಿಗೆ ಆಧುನಿಕ ಇಂಧನದ ಸಾರ್ವತ್ರಿಕ ಪ್ರವೇಶ;

ಹವಾಮಾನ ಬದಲಾವಣೆ ತಡೆಯಲು ತುರ್ತು ಕ್ರಮ – ಒಪ್ಪಂದಕ್ಕೆಅನುಗುಣವಾಗಿ;

ವಾಯುವಿನ ಗುಣಮಟ್ಟ ಸುಧಾರಣೆಗೆ ಕ್ರಮ;

ಸ್ನೇಹಿತರೆ,

ಶುದ್ಧ ಅಡುಗೆ ಇಂಧನದ ಪ್ರವೇಶವು ಜೀವನಮಟ್ಟವನ್ನು ಸುಧಾರಿಸಲು ಬಹಳ ಮುಖ್ಯ ಎಂದು ನಾವು ನಂಬುತ್ತೇವೆ. ಮಹಿಳೆಯರು ಅದರಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಇದು ಮನೆಯೊಳಗಿನ ಮಾಲಿನ್ಯವನ್ನು ತಗ್ಗಿಸುತ್ತದೆ ಮತ್ತು ಜೈವಿಕ ತ್ಯಾಜ್ಯ ಮತ್ತು ಸೌದೆ ಸಂಗ್ರಹಣೆಯ ತೊಂದರೆಯನ್ನೂ ತಪ್ಪಿಸುತ್ತದೆ. ಇದು ಅವರಿಗೆ ಸ್ವಯಂ ಅಭಿವೃದ್ಧಿಗೆ ಹೆಚ್ಚಿನ ಸಮಯ ಒದಗಿಸುತ್ತದೆ ಮತ್ತು ಹೆಚ್ಚಿನ ಆರ್ಥಿಕ ಚಟುವಟಿಕೆಗೆ ಕೊಂಡೊಯ್ಯುತ್ತದೆ.

ಉಜ್ವಲ ಯೋಜನೆಯ ಮೂಲಕ ನಾವು ಉಚಿತ ಎಲ್.ಪಿ.ಜಿ. ಸಂಪರ್ಕಗಳನ್ನು ಬಡ ಕುಟುಂಬದ ಮಹಿಳೆಯರಿಗೆ ನೀಡುತ್ತಿದ್ದೇವೆ. 80 ದಶಲಕ್ಷ ಬಡ ಕುಟುಂಬಗಳಿಗೆ ಶುದ್ಧ ಅಡುಗೆ ಸಂಪರ್ಕ ಕಲ್ಪಿಸುವುದು ಇದರ ಗುರಿಯಾಗಿದೆ. 35 ದಶಲಕ್ಷ ಸಂಪರ್ಕಗಳನ್ನು ಎರಡು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಒದಗಿಸಲಾಗಿದೆ.

ನಾವು ಏಪ್ರಿಲ್ 2020ರ ಹೊತ್ತಿಗೆ ಬಿ.ಎಸ್. ಆರು ಇಂಧನಕ್ಕೆ ಬದಲಾವಣೆಗೊಳ್ಳುವ ಉದ್ದೇಶ ಹೊಂದಿದ್ದೇವೆ, ಇದು ಯುರೋ ಆರರ ಗುಣಮಟ್ಟಕ್ಕೆ ಅನುಗುಣವಾಗಿದೆ. ನಮ್ಮ ಶುದ್ಧೀಕರಣ ಘಟಕಗಳು ಬೃಹತ್ ಮೇಲ್ದರ್ಜೀಕರಣದಲ್ಲಿ ತೊಡಗಿವೆ. ಗಡುವಿನೊಳಗೆ ಅವು ಶುದ್ಧ ಇಂಧನ ಪೂರೈಸುವ ಆಶಯ ಹೊಂದಿವೆ. ನವದೆಹಲಿಯಲ್ಲಿ ನಾವು ಈ ತಿಂಗಳಿನಿಂದ ಬಿ.ಎಸ್. ಆರು ಗುಣಮಟ್ಟದ ಇಂಧನವನ್ನು ನೀಡಲು ಆರಂಭಿಸಿದ್ದೇವೆ.

ನಾವು ವಾಹನ ನಾಶ ನೀತಿಯನ್ನೂ ತಂದಿದ್ದು, ಇದು ಹಳೆಯ ವಾಹನಗಳ ಬದಲಿಗೆ ಶುದ್ಧ ಮತ್ತು ಇಂಧನ ಧಕ್ಷತೆಯ ವಾಹನಗಳನ್ನು ತರಲು ನೆರವಾಗುತ್ತಿದೆ.

ನಮ್ಮ ತೈಲ ಕಂಪನಿಗಳು ಇಂಧನ ವೈವಿಧ್ಯತೆಯ ವ್ಯೂಹವನ್ನು ಗಮನದಲ್ಲಟ್ಟುಕೊಂಡು ತಮ್ಮ ಎಲ್ಲ ಹೂಡಿಕೆಯನ್ನು ನಿರ್ಧರಿಸುತ್ತಿವೆ.

ಇಂದು, ತೈಲ ಕಂಪನಿಗಳು ಪವಮಾನ ಮತ್ತು ಸೌರ ಸಾಮರ್ಥ್ಯ, ಅನಿಲ ಮೂಲಸೌಕರ್ಯ  ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿವೆ ಮತ್ತು ವಿದ್ಯುತ್ ಚಾಲಿತ ವಾಹನಗಳ ಮತ್ತು ದಾಸ್ತಾನು ಕ್ಷೇತ್ರದಲ್ಲಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಚಿಂತಿಸುತ್ತಿವೆ.

ಸ್ನೇಹಿತರೆ,

ನಾವೆಲ್ಲರೂ ತಿಳಿದಿರುವಂತೆ, ನಾವು, ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್ ಪ್ರಕ್ರಿಯೆಯ ಯಾಂತ್ರೀಕರಣ, ಯಂತ್ರಗಳ ಕಲಿಕೆ, ಮುನ್ಸೂಚನಾ ವಿಶ್ಲೇಷಕಗಳು, 3-ಡಿ ಮುದ್ರಣ, ಇತ್ಯಾದಿಗಳಂತಹ ಹೊಸ ತಂತ್ರಜ್ಞಾನಗಳು ಮತ್ತು ಪ್ರಕ್ರಿಯೆಗಳೊಂದಿಗೆ ಉದ್ಯಮವು ಭವಿಷ್ಯದಲ್ಲಿ ಕೈಗೊಳ್ಳುವ ನಿಟ್ಟಿನಲ್ಲಿ ಬದಲಿಸಲು ಪ್ರಸ್ತಾಪಿಸುವ ಕೈಗಾರಿಕೆ 4.0 ಕಡೆಗೆ ನೋಡುತ್ತಿದ್ದೇವೆ.

ನಮ್ಮ ಕಂಪನಿಗಳು ಕೂಡ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿವೆ. ಇದು ದಕ್ಷತೆ ಸುಧಾರಿಸುತ್ತದೆ ಮತ್ತು ಸುರಕ್ಷತೆ ಹೆಚ್ಚಿಸುತ್ತದೆ ಹಾಗೂ ಕೆಳ ವಾಹಿನಿಯ ಚಿಲ್ಲರೆ ವಲಯದಲ್ಲಿ ವೆಚ್ಚವನ್ನಷ್ಟೇ ಅಲ್ಲ, ಮೇಲು ವಾಹಿನಿಯ ತೈಲ ಉತ್ಪಾದನೆ, ಆಸ್ತಿ ನಿರ್ವಹಣೆ ಮತ್ತು ರಿಮೋಟ್ ನಿಗಾ ವೆಚ್ಚವನ್ನೂ ತಗ್ಗಿಸುತ್ತದೆ.

ಈ ಹಿನ್ನೆಲೆಯಲ್ಲಿ, ಭಾರತವು ಈ ಕಾರ್ಯಕ್ರಮ ಆಯೋಜಿಸಲು,ಇಂಧನ ಕ್ಷೇತ್ರದ ಭವಿಷ್ಯವನ್ನು ವಿಚಾರಮಾಡಲು ಸೂಕ್ತ ವೇದಿಕೆ ಒದಗಿಸಿದೆ. ಜಾಗತಿಕ ವರ್ಗಾವಣೆಗಳು, ಪರಿವರ್ತನ ನೀತಿಗಳು ಮತ್ತು ಹೊಸ ತಂತ್ರಜ್ಞಾನಗಳು ಮಾರುಕಟ್ಟೆಯ ಸ್ಥಿರತೆಯನ್ನು ಮತ್ತು ವಲಯದಲ್ಲಿನ ಭವಿಷ್ಯದ ಬಂಡವಾಳವನ್ನು ಹೇಗೆ ಪ್ರಭಾವಿಸುತ್ತವೆ ಎಂಬುದರ ಬಗ್ಗೆಯೂ ಇದು ಬೆಳಕು ಚೆಲ್ಲುತ್ತದೆ.

ಸ್ನೇಹಿತರೆ,

ಐಇಎಫ್-16ರ ಧ್ಯೇಯ ‘ಜಾಗತಿಕ ಇಂಧನ ಸುರಕ್ಷತೆಯ ಭವಿಷ್ಯ’ ಎಂಬುದಾಗಿದೆ. ಕಾರ್ಯಕ್ರಮ ಪಟ್ಟಿಯು ಭವಿಷ್ಯದ ಬೇಡಿಕೆಯನ್ನು ಈಡೇರಿಸಲು ಉತ್ಪಾದನೆ-ಬಳಕೆದಾರರ ಬಾಂಧವ್ಯ, ಸಾರ್ವತ್ರಿಕ ಇಂಧನ ಪ್ರವೇಶ ಮತ್ತು ಕೈಗೆಟಕುವ ದರ, ಮತ್ತು ತೈಲ ಮತ್ತು ಅನಿಲ ಜಾಗತಿಕ ಬದಲಾವಣೆಯಂಥ ಸಮಸ್ಯೆ ಎದುರಿಸುವ ಗುರಿ ಹೊಂದಿದೆ ಎಂದು ನನಗೆ ತಿಳಿಸಲಾಗಿದೆ. ಇಂಧನ ಸುರಕ್ಷತೆ ನಿರ್ವಹಣೆ ಮತ್ತು ಹೊಸ ಮತ್ತು ಹಾಲಿ ತಂತ್ರಜ್ಞಾನದ ಸಹ ಅಸ್ತಿತ್ವ ಸಹ ಚರ್ಚೆಗೆ ಬರುತ್ತವೆ. ಇವೆಲ್ಲ ವಿಷಯಗಳೂ ನಮ್ಮ ಇಂಧನ ಭವಿಷ್ಯದ ಸಂಯೋಜನೆಯ ಭವಿಷ್ಯಗಳಾಗಿವೆ.

ಈ ವೇದಿಕೆಯಲ್ಲಿ ನಡೆಯುವ ಚರ್ಚೆಗಳು ವಿಶ್ವದ ಜನತೆಗೆ ಶುದ್ಧ, ಕೈಗೆಟಕುವ ದರದ ಮತ್ತು ಸುಸ್ಥಿರ ಇಂಧನ ಪಡೆಯಲು ದೀರ್ಘಕಾಲದವರೆಗೆ ಪ್ರಯೋಜನಕಾರಿಯಾಗುತ್ತದೆ ಎಂದು ನಾನು ನಂಬುತ್ತೇನೆ.

ನಾನು ಯಶಸ್ವಿ ಮತ್ತು ಫಲಪ್ರದವಾದ ಸಚಿವರ ಸಮಾವೇಶಕ್ಕೆ ಶುಭ ಕೋರುತ್ತೇನೆ.

ಧನ್ಯವಾದಗಳು

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
From Donning Turban, Serving Langar to Kartarpur Corridor: How Modi Led by Example in Respecting Sikh Culture

Media Coverage

From Donning Turban, Serving Langar to Kartarpur Corridor: How Modi Led by Example in Respecting Sikh Culture
NM on the go

Nm on the go

Always be the first to hear from the PM. Get the App Now!
...
Prime Minister joins Ganesh Puja at residence of Chief Justice of India
September 11, 2024

The Prime Minister, Shri Narendra Modi participated in the auspicious Ganesh Puja at the residence of Chief Justice of India, Justice DY Chandrachud.

The Prime Minister prayed to Lord Ganesh to bless us all with happiness, prosperity and wonderful health.

The Prime Minister posted on X;

“Joined Ganesh Puja at the residence of CJI, Justice DY Chandrachud Ji.

May Bhagwan Shri Ganesh bless us all with happiness, prosperity and wonderful health.”

“सरन्यायाधीश, न्यायमूर्ती डी वाय चंद्रचूड जी यांच्या निवासस्थानी गणेश पूजेत सामील झालो.

भगवान श्री गणेश आपणा सर्वांना सुख, समृद्धी आणि उत्तम आरोग्य देवो.”