ಶೇರ್
 
Comments
Science and technology ecosystem should be impactful as well as inspiring: PM Modi
Scientific Temper wipes out superstition: PM Modi
There are no failures in science; there are only efforts, experiments and success: PM

ಕೊಲ್ಕತಾದಲ್ಲಿ ನಡೆಯುತ್ತಿರುವ ಭಾರತದ 5ನೇ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವವನ್ನು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಇಂದು ಉದ್ಘಾಟಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು ಉತ್ಸವದ ಶಿರ್ಷಿಕೆ “RISEN: Research, Innovation and Science Empowering the Nation” (ರಾಷ್ಟ್ರ ಸಶಕ್ತೀಕರಣಕ್ಕಾಗಿ ಸಂಶೋಧನೆ, ಆವಿಷ್ಕಾರ ಮತ್ತು ವಿಜ್ಞಾನ) 21ನೇ ಶತಮಾನದ ಭಾರತದ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದರು.

ಸಮಾಜದ ಮೇಲೆ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಬಲವಾದ ಪರಿಣಾಮ ಬೀರುತ್ತದೆ. ಆದ್ದರಿಂದಲೇ, ಸರ್ಕಾರ ಸಂಶೋಧನೆ ಮತ್ತು ಆವಿಷ್ಕಾರಗಳಿಗಾಗಿ ಸಾಂಸ್ಥಿಕ ಬೆಂಬಲವನ್ನು ನೀಡುತ್ತಿದೆ ದು ಅವರು ಹೇಳಿದರು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬೆಂಬಲಿಸಲು ಅನುಕೂಲವಾದಂತಹ ವಾತಾವರಣ ನಿರ್ಮಾಣಕ್ಕೆ ಸಲಹೆ ನೀಡಿದ ಪ್ರಧಾನ ಮಂತ್ರಿಗಳು, ದೇಶದಲ್ಲಿ ಆವಿಷ್ಕಾರಕ್ಕಾಗಿ ಎಲ್ಲ ಬಗೆಯ ಬೆಂಬಲ ನೀಡು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ದೇಶಾದ್ಯಂತ 5 ಸಾವಿರ ಅಟಲ್ ಟಿಂಕರಿಂಗ್ ಲ್ಯಾಬ್ ಗಳು, 200 ಕ್ಕೂ ಹೆಚ್ಚು ಅಟಲ್ ಇನ್ಕ್ಯುಬೇಶನ್ ಸೆಂಟರ್ ಗಳನ್ನು ಸ್ಥಾಪಿಸಲಾಗಿದೆ ಎಂದು ಉಲ್ಲೇಖಿಸಿದರು.

“ನಮ್ಮ ಜೀವನವನ್ನು ಸುಗಮಗೊಳಿಸಲು ವಿಜ್ಞಾನ ಹೇಗೆ ಸಹಾಯಕರವಾಗಬಲ್ಲದು ಎಂದು ನಾವೆಲ್ಲರೂ ಯೋಚಿಸಬೇಕು” ಎಂದು ಪ್ರಧಾಣ ಮಂತ್ರಿಗಳು ಹೇಳಿದರು ಮತ್ತು ಅದಕ್ಕಾಗಿಯೇ ಸಮಾಜಕ್ಕಾಗಿ ವಿಜ್ಞಾನ ಎಂಬುದು ಪ್ರಸ್ತುತತೆಯನ್ನು ಹೊಂದಿದೆ. ಪ್ರತಿಯೊಬ್ಬ ನಾಗರಿಕ ಮತ್ತು ವಿಜ್ಞಾನಿ ಈ ನಿಟ್ಟಿನಲ್ಲಿ ಕೆಲಸ ಮಾಡಿದರೆ ದೇಶ ಖಂಡಿತ ಅಭಿವೃದ್ಧಿಗೊಳ್ಳುತ್ತದೆ” ಎಂದು ಪ್ರಧಾನ ಮಂತ್ರಿಗಳು ಹೇಳಿದರು.

ವಿಜ್ಙಾನ ನಮಗೆ ನೀಡಬಹುದಾದ ದೀರ್ಘಕಾಲಿಕ ಪರಿಹಾರಗಳು ಮತ್ತು ದೀರ್ಘಕಾಲಿಕ ಲಾಭಗಳ ಕುರಿತು ಪ್ರತಿಯೊಬ್ಬರೂ ಗಮನ ಕೇಂದ್ರೀಕರಿಸಬೇಕೆಂದು ಪ್ರಧಾನ ಮಂತ್ರಿಗಳು ಆಗ್ರಹಿಸಿದರು. ಜೊತೆಗೆ, “ನೀವು ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಗುಣಮಟ್ಟಗಳ ಕುರಿತು ಸದಾ ಜಾಗೃತರಾಗಿರಬೇಕು” ಎಂದು ಅವರು ಹೇಳಿದರು.

ತಂತ್ರಜ್ಙಾನ ಎಂಬುದು ಎರಡು ವಿಷಯಗಳ ಪರಿಣಾಮವಾಗಿರುತ್ತದೆ. ಅಂದರೆ “ಸಮಸ್ಯೆಯ ಇರುವಿಕೆ ಮತ್ತು ಅದನ್ನು ಪರಿಹರಿಸುವಲ್ಲಿಯ ನಮ್ಮ ಅನುಭವಗಳ ಮಿಲನವಾಗಿರುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ”. ಎಂದು ಅವರು ಹೇಳಿದರು.

“ವಿಜ್ಞಾನದಲ್ಲಿ ವಿಫಲತೆ ಎಂಬುದಿಲ್ಲ. ಇಲ್ಲಿ ಪ್ರಯತ್ನ, ಪ್ರಯೋಗ ಮತ್ತು ಯಶಸ್ಸು ಮಾತ್ರ ಇರುತ್ತವೆ. ನೀವು ಕೆಲಸ ಮಾಡುವಾಗ ಇವುಗಳನ್ನು ಮನದಲ್ಲಿಟ್ಟುಕೊಂಡರೆ, ನಿಮ್ಮ ವೈಜ್ಙಾನಿಕ ವಿಷ್ಕಾರಗಳಲ್ಲಾಗಲಿ ಅಥವಾ ಜೀವನದಲ್ಲೇ ಆಗಲಿ ಯಾವುದೇ ತೊಂದರೆಗಳು ನಿಮಗೆ ಎದುರಾಗುವುದಿಲ್ಲ” ಎಂದು ಅವರು ನುಡಿದರು.

Click here to read PM's speech

ದೇಣಿಗೆ
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
‘Salute and contribute’: PM Modi urges citizens on Armed Forces Flag Day

Media Coverage

‘Salute and contribute’: PM Modi urges citizens on Armed Forces Flag Day
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 8 ಡಿಸೆಂಬರ್ 2019
December 08, 2019
ಶೇರ್
 
Comments

PM Narendra Modi had an extensive interaction with Faculty and Researchers at the Indian Institute of Science Education and Research, Pune over various topics

Central Government approved the connectivity of three airports of Odisha under UDAN Scheme

Netizens praise Modi Govt. efforts in transforming India into New India