ಇಂದು ಐಐಟಿ ಚೆನ್ನೈನಲ್ಲಿ ಮುಕ್ತಾಯಗೊಂಡ 36 ಗಂಟೆಗಳ ಸಿಂಗಾಪುರ್ ಇಂಡಿಯಾ ಹ್ಯಾಕಥಾನ್ ವಿಜೇತರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಬಹುಮಾನಗಳನ್ನು ವಿತರಿಸಿದರು.

ಸಿಂಗಾಪುರ ಸರ್ಕಾರ, ಭಾರತ ಸರ್ಕಾರ, ಐಐಟಿ ಚೆನ್ನೈ ಮತ್ತು ಸಿಂಗಾಪುರದ ನ್ಯಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯ (ಎನ್‌ಟಿಯು) ದ ಸಹಯೋಗದೊಂದಿಗೆ ಇಂತಹ ಎರಡನೆಯ ಹ್ಯಾಕಥಾನ್ ಅನ್ನು ಆಯೋಜಿಸಲಾಗಿದೆ.

2018 ರಲ್ಲಿ ಸಿಂಗಾಪುರದ ಎನ್‌ಟಿಯುನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿದ ಪರಿಕಲ್ಪನೆಯ ಆಧಾರದ ಮೇಲೆ ಮೊದಲ ಹ್ಯಾಕಥಾನ್ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳನ್ನು ಮತ್ತು ಶೈಕ್ಷಣಿಕ ವಿಭಾಗದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು, ಹ್ಯಾಕಥಾನ್ ವಿಜೇತರನ್ನು ಅಭಿನಂದಿಸಿದರು.

“ಸ್ನೇಹಿತರೇ, ಹ್ಯಾಕಥಾನ್ ವಿಜೇತರನ್ನು ನಾನು ಅಭಿನಂದಿಸುತ್ತೇನೆ. ಮತ್ತು, ಇಲ್ಲಿ ಒಟ್ಟುಗೂಡಿದ ಪ್ರತಿಯೊಬ್ಬ ಯುವ ಸ್ನೇಹಿತನನ್ನು, ವಿಶೇಷವಾಗಿ ನನ್ನ ವಿದ್ಯಾರ್ಥಿ ಸ್ನೇಹಿತರನ್ನು ನಾನು ಅಭಿನಂದಿಸುತ್ತೇನೆ. ಸವಾಲುಗಳನ್ನು ಎದುರಿಸಲು ಮತ್ತು ಕಾರ್ಯಸಾಧ್ಯವಾದ ಪರಿಹಾರಗಳನ್ನು ಕಂಡುಕೊಳ್ಳುವ ನಿಮ್ಮ ಇಚ್ಛಾಶಕ್ತಿ, ನಿಮ್ಮ ಶಕ್ತಿ, ನಿಮ್ಮ ಉತ್ಸಾಹವು ಕೇವಲ ಸ್ಪರ್ಧೆಯನ್ನು ಗೆಲ್ಲುವುದಕ್ಕಲ್ಲದೆ ಅದಕ್ಕಿಂತಲೂ ಹೆಚ್ಚಿನ ಮೌಲ್ಯವನ್ನು ಹೊಂದಿದೆ “.

ನವೋದ್ಯಮ ಸ್ನೇಹಿ ಪರಿಸರ ವ್ಯವಸ್ಥೆಗಳಲ್ಲಿ ಭಾರತವು ವಿಶ್ವದಲ್ಲಿ ಅಗ್ರ ಮೂರು ಸ್ಥಾನದಲ್ಲಿದೆ ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು. ಕಳೆದ ಐದು ವರ್ಷಗಳಲ್ಲಿ ಭಾರತ ಹೊಸತನ ಮತ್ತು ಆಲೋಚನೆಗಳ ಮೊಳೆಯುವಿಕೆಗೆ ಹೆಚ್ಚಿನ ಒತ್ತು ನೀಡಿದೆ ಎಂದು ಅವರು ಹೇಳಿದರು.

“ಅಟಲ್ ಇನ್ನೋವೇಶನ್ ಮಿಷನ್, ಪಿಎಂ ರಿಸರ್ಚ್ ಫೆಲೋಶಿಪ್, ಸ್ಟಾರ್ಟ್-ಅಪ್ ಇಂಡಿಯಾ ಅಭಿಯಾನಗಳು 21 ನೇ ಶತಮಾನದ ಭಾರತದ ಅಡಿಪಾಯವಾಗಿದ್ದು, ಇದು ಹೊಸಶೋಧಗಳ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ನಾವು ಈಗ 6 ನೇ ತರಗತಿಯಲ್ಲಿಯೇ ಯಂತ್ರ ಕಲಿಕೆ, ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್‌ನಂತಹ ಆಧುನಿಕ ತಂತ್ರಜ್ಞಾನಕ್ಕೆ ನಮ್ಮ ವಿದ್ಯಾರ್ಥಿಗಳು ಒಡ್ಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಶಾಲೆಯಿಂದ ಉನ್ನತ ಶಿಕ್ಷಣದಲ್ಲಿ ಸಂಶೋಧನೆಯವರೆಗೆ, ಪರಿಸರ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ ಅದು ಹೊಸಶೋಧಕ್ಕೆ ಮಾಧ್ಯಮವಾಗುತ್ತದೆ. ”

ಭಾರತ ಎದುರಿಸುತ್ತಿರುವ ಸಮಸ್ಯೆಗಳಿಗೆ ಸುಲಭ ಪರಿಹಾರಗಳನ್ನು ಕಂಡುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದ ಪ್ರಧಾನ ಮಂತ್ರಿಯವರು, ಭಾರತವು ತನ್ನ ಪರಿಹಾರಗಳನ್ನು ಇಡೀ ಜಗತ್ತಿಗೆ ಮತ್ತು ವಿಶೇಷವಾಗಿ ಬಡ ರಾಷ್ಟ್ರಗಳಿಗೆ ನೀಡಲು ಬಯಸಿದೆ ಎಂದು ಹೇಳಿದರು.

“ನಾವು ಎರಡು ದೊಡ್ಡ ಕಾರಣಗಳಿಗಾಗಿ ಇನ್ನೋವೇಶನ್ ಮತ್ತು ಇನ್ಕ್ಯುಬೇಷನ್ (ಹೊಸತನ ಮತ್ತು ಆಲೋಚನೆಗಳ ಮೊಳೆಯುವಿಕೆಗೆ ) ಅನ್ನು ಪ್ರೋತ್ಸಾಹಿಸುತ್ತಿದ್ದೇವೆ, ಒಂದು – ಭಾರತದ ಸಮಸ್ಯೆಗಳನ್ನು ಪರಿಹರಿಸಲು, ಜೀವನವನ್ನು ಸುಲಭಗೊಳಿಸಲು ನಾವು ಸುಲಭ ಪರಿಹಾರಗಳನ್ನು ಬಯಸುತ್ತೇವೆ. ಇನ್ನೊಂದು, ಭಾರತದಲ್ಲಿ ನಾವು ಇಡೀ ಜಗತ್ತಿಗೆ ಪರಿಹಾರಗಳನ್ನು ಹುಡುಕಲು ಬಯಸುತ್ತೇವೆ. ಜಾಗತಿಕ ಉಪಯೋಗಕ್ಕಾಗಿ ಭಾರತೀಯ ಪರಿಹಾರಗಳು – ಇದು ನಮ್ಮ ಗುರಿ ಮತ್ತು ನಮ್ಮ ಬದ್ಧತೆ. ಬಡ ದೇಶಗಳ ಅಗತ್ಯತೆಗಳನ್ನು ಪೂರೈಸಲು ನಮ್ಮ ಕಡಿಮೆ ವೆಚ್ಚದಾಯಕ ಪರಿಹಾರಗಳು ಲಭ್ಯವಾಗಬೇಕೆಂದು ನಾವು ಬಯಸುತ್ತೇವೆ – ಬಡವರು ಮತ್ತು ಅನುಕೂಲವಂಚಿತರನ್ನು ಎಲ್ಲಿಯೇ ವಾಸಿಸುತ್ತಿರಲಿ, ಅವರನ್ನು ಮೇಲೆತ್ತುವಲ್ಲಿ ಭಾರತೀಯ ಆವಿಷ್ಕಾರಗಳು ಸಹಾಯ ಮಾಡುವವು. ”

ಐಐಟಿ-ಎಂ ವಜ್ರ ಮಹೋತ್ಸವ ಆಚರಣೆ ಮತ್ತು ಸಮಾವೇಶ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರು ಭಾಗವಹಿಸಲಿದ್ದಾರೆ.

 

 

 

 

 

 

 

 

 

 

 

 

 

 

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Year Ender 2025: Major Income Tax And GST Reforms Redefine India's Tax Landscape

Media Coverage

Year Ender 2025: Major Income Tax And GST Reforms Redefine India's Tax Landscape
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಡಿಸೆಂಬರ್ 2025
December 29, 2025

From Culture to Commerce: Appreciation for PM Modi’s Vision for a Globally Competitive India