PM Modi campaigns in Bijnor, Uttar Pradesh, urges people to vote for BJP
Shri Modi questions Samajwadi party for attacking & getting BJP workers arrested without reason
Farmer welfare is most vital for us. Our Government has brought the Pradhan Mantri Fasal Bima Yojana: PM
Chaudhary Charan Singh Kisan Kalyan Kosh would be created for farmers’ welfare, says Shri Modi
People in UP must question the SP government that what development works have been done in the state in last five years: Shri Modi

ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರಪ್ರದೇಶದ ಬಿಜ್ನೋರ್ ನಲ್ಲಿ ಚುನಾವಣಾ ಪ್ರಚಾರ ಮಾಡಿದರು . ಉತ್ತರ ಪ್ರದೇಶದ ಜನರ ಉತ್ಸಾಹ ನೋಡಿ ರಾಜ್ಯಕ್ಕೆ ಬದಲಾವಣೆ ಬೇಕಿದೆ ಇದು ಸ್ಪಷ್ಟವಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು . ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಲು ಜನರಲ್ಲಿ ಕೋರಿದರು .

" ಪ್ರತಿ ಅಸೆಂಬ್ಲಿ ವಿಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಯಾವುದೇ ತಪ್ಪು ಮಾಡದೆ ಅವರನ್ನು ಬಂಧಿಸಲಾಗುತ್ತಿದೆ . ಸರ್ಕಾರ ಹೀಗೆ ನಡೆಯಬೇಕೇ ? ರಾಜಕೀಯ ಎದುರಾಳಿಗಳ ವಿರುದ್ಧ ಕಾನೂನಿನ ದುರ್ಬಳಕೆ ಮಾಡಬೇಕೇ ? " ಎಂದು ಸಮಾಜವಾದಿ ಪಕ್ಷವನ್ನು ಟೀಕಿಸುತ್ತಾ ,ಶ್ರೀ ಮೋದಿ ಹೇಳಿದರು .”

ರಾಜ್ಯದ ಸಮಾಜವಾದಿ ಸರ್ಕಾರ ಬಡವರ ಮತ್ತು ಪ್ರಾಮಾಣಿಕ ನಾಗರಿಕರ ಹಿತಾಸಕ್ತಿಯನ್ನು ರಕ್ಷಿಸಲು ಅಸಮರ್ಥ ಎಂದು ಅವರು ಆರೋಪಿಸಿದರು . ರಾಜ್ಯದಲ್ಲಿ ಅಪರಾಧಗಳು ಹೆಚ್ಚುತ್ತಿವೆ , " ರಾಜ್ಯದಲ್ಲಿ ಅತ್ಯಾಚಾರ ದುರದೃಷ್ಟಕರ ಸಂದರ್ಭಗಳಲ್ಲಿ ನಂತರ ಸಮಾಜವಾದಿ ಪಕ್ಷದ ಮುಖಂಡರು ಏನು ಹೇಳಿದರು ? ಇಂತಹ ಅವಹೇಳನಕಾರಿ ಟೀಕೆಗಳನ್ನು ಸ್ವೀಕಾರಾರ್ಹವಲ್ಲ" ಎಂದು ಶ್ರೀ ಮೋದಿ ಹೇಳಿದರು.

" ಕಾಂಗ್ರೆಸ್ ತನ್ನ ಉಳಿವಿಗಾಗಿ ಏನನ್ನೂ ಮಾಡಬಹುದು , " ನಲವತ್ತು ವರ್ಷ ಸಮಾಜವಾದಿ ಪಕ್ಷದ ವಿರುದ್ಧ ಸ್ಪರ್ದಿಸಿದವರೊಂದಿಗೆ ಮೈತ್ರಿ ಕೂಡ " ಎಂದು ಶ್ರೀ ಮೋದಿ ಹೇಳಿದರು. ”

ಕಬ್ಬು ಬೆಳೆಸುವ ರೈತರ ಕಲ್ಯಾಣ ಬಿಜೆಪಿ ಸರ್ಕಾರಕ್ಕೆ ಅತ್ಯಂತ ಪ್ರಮುಖವಾದುದು ಎಂದು ಪ್ರಧಾನ ಮಂತ್ರಿ ಹೇಳಿದರು . " ಏಕೆ ಉತ್ತರ ಪ್ರದೇಶದ ಕಬ್ಬು ಬೆಳೆಸುವ ರೈತರಿಗೆ ರಾಜ್ಯ ಸರ್ಕಾರದಿಂದ ಅವರ ಬಾಕಿ ದೊರಕುತ್ತಿಲ್ಲ ? ಯಾಕೆ ರೈತರಿಗೆ ನ್ಯಾಯ ದೊರಕುತ್ತಿಲ್ಲ ?ಅವರ ಎಲ್ಲ ಬಾಕಿಯನ್ನು ಇತ್ಯರ್ಥ ಮಾಡುವಂತೆ ನಾವು ಖಾತ್ರಿಪಡಿಸುತ್ತೇವೆ " ಎಂದೂ ಅವರು ಹೇಳಿದರು .”

ಕೇಂದ್ರದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ ಪ್ರಧಾನ ಮಂತ್ರಿ ಮಾತನಾಡಿದರು . " ರೈತರ ಕಲ್ಯಾಣ ಅತ್ಯಂತ ಮುಖ್ಯ . ನಮ್ಮ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಪ್ರಾರಂಭಿಸಿದೆ . ಇದು ಕನಿಷ್ಠ ಪ್ರೀಮಿಯಂ ಮತ್ತು ನಮ್ಮ ರೈತರಿಗೆ ಗರಿಷ್ಠ ವಿಮೆಯನ್ನು ಖಾತ್ರಿಗೊಳಿಸುತ್ತದೆ. "

ಉತ್ತರ ಪ್ರದೇಶದಲ್ಲಿ ಪ್ರತಿ ಜಿಲ್ಲೆಯಲ್ಲಿ ರೈತರ ಕಲ್ಯಾಣಕ್ಕಾಗಿ , ಚೌಧರಿ ಚರಣ್ ಸಿಂಗ್ ಕಲ್ಯಾಣ ಕೋಶವನ್ನು ನಿರ್ಮಿಸಲಾಗುತ್ತದೆ ಎಂದೂ ಶ್ರೀ ಮೋದಿ ಹೇಳಿದರು ..

ಉತ್ತರ ಪ್ರದೇಶದ ಯೋಗಕ್ಷೇಮಕ್ಕೆ ಕೆಲಸ ಮಾಡದ ರಾಜ್ಯ ಸರ್ಕಾರ ಅಲ್ಲಿನ ಅಲ್ಲಿನ ಜನರಿಗೆ ಅರ್ಹವಲ್ಲ . "ಕೇಂದ್ರದಿಂದ ಸಂಪನ್ಮೂಲಗಳನ್ನು ಮಂಜೂರು ಮಾಡಿದ ನಂತರವೂ , ರಾಜ್ಯ ಸರ್ಕಾರವು ಅದನ್ನು ರಾಜ್ಯದ ಜನ ಕಲ್ಯಾಣಕ್ಕಾಗಿ ಬಳಸಿಕೊಂಡಿಲ್ಲ . ಕಳೆದ ಐದು ವರ್ಷಗಳಲ್ಲಿ ಸಮಾಜವಾದಿ ಸರ್ಕಾರ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ ಎಂದು ಉತ್ತರ ಪ್ರದೇಶದ ಜನರು ಪ್ರಶ್ನಿಸಬೇಕು ? . " ಅವರು ರಾಜ್ಯದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡಿದ ಒಬ್ಬ ನಾಯಕ ತಮ್ಮ ಚುನಾವಣಾ ಪ್ರಚಾರದ ವೇದಿಕೆಯನ್ನು ನೀಡಲು ಆರಂಭಿ ಸಿದ್ದಾರೆ " ಎಂದು ಶ್ರೀ ಮೋದಿ ಹೇಳಿದರು .”

ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
First multilingual Indian speech recognition model trained on 65 languages and dialects released

Media Coverage

First multilingual Indian speech recognition model trained on 65 languages and dialects released
NM on the go

Nm on the go

Always be the first to hear from the PM. Get the App Now!
...
ವಿಭಜನೆಯ ಕರಾಳತೆ ಸ್ಮರಣಾ ದಿನದಂದು ವಿಭಜನೆಯಿಂದ ಬಾಧಿತರಾದವರ ಧೈರ್ಯವನ್ನು ಸ್ಮರಿಸಿದ ಪ್ರಧಾನಮಂತ್ರಿ
August 14, 2026
ಕಠಿಣ ಪರಿಶ್ರಮ ಮತ್ತು ಮಾನವ ಪ್ರಯತ್ನದ ಶಕ್ತಿಯನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತ ಹಂಚಿಕೊಂಡ ಪ್ರಧಾನಮಂತ್ರಿ

ವಿಭಜನೆಯ ಕರಾಳತೆಯ ಸ್ಮರಣಾ ದಿನವನ್ನು ನಾವು ಆಚರಿಸುತ್ತಿರುವ ಹೊತ್ತಿನಲ್ಲಿ, ವಿಭಜನೆಯಿಂದ ಬಾಧಿತರಾದ ಎಲ್ಲರ ಧೈರ್ಯವನ್ನು ನಾವು ಸ್ಮರಿಸುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಇದು ಇತಿಹಾಸದಲ್ಲಿ ಅನೇಕರ ಬದುಕುಗಳನ್ನು ಛಿದ್ರಗೊಳಿಸಿದ ಕ್ಷಣವಾಗಿದೆ, ಅಲ್ಲಿ ಕುಟುಂಬಗಳು ನೆಲೆ ಕಳೆದುಕೊಂಡವು, ಪ್ರೀತಿಪಾತ್ರರನ್ನು ಕಳೆದುಕೊಂಡರು ಮತ್ತು ಅಪಾರವಾದ ನೋವನ್ನು ಸಹಿಸಿಕೊಳ್ಳಬೇಕಾಯಿತು ಎಂದು ಅವರು ಉಲ್ಲೇಖಿಸಿದ್ದಾರೆ.

ಅದೇ ಸಮಯದಲ್ಲಿ, ಇದನ್ನು ಮೆಟ್ಟಿ ನಿಂತು, ಜನರು ಶೂನ್ಯದಿಂದ ತಮ್ಮ ಜೀವನವನ್ನು ಮರುನಿರ್ಮಾಣ ಮಾಡಿದರು, ಪ್ರತಿಕೂಲತೆಯನ್ನು ಸಾಧನೆಯಾಗಿ ಪರಿವರ್ತಿಸಿದರು ಮತ್ತು ನಮ್ಮ ರಾಷ್ಟ್ರದ ಪ್ರಗತಿಗೆ ಅಪಾರ ಕೊಡುಗೆ ನೀಡಿದರು ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದ್ದಾರೆ. ಅವರ ಜೀವನ ಪಯಣವು ಮಾನವನ ಅದಮ್ಯ ಚೇತನದ ಶಕ್ತಿಯನ್ನು ನಮಗೆ ನೆನಪಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ದಿನವು ನಮ್ಮ ದೇಶದಲ್ಲಿ ಸೌಹಾರ್ದತೆ ಮತ್ತು ಭ್ರಾತೃತ್ವವನ್ನು ಕಾಪಾಡುವ ನಮ್ಮ ಸಂಕಲ್ಪವನ್ನು ಇನ್ನಷ್ಟು ಗಾಢವಾಗಿಸಲಿ ಮತ್ತು 'ವಿಕಸಿತ ಭಾರತ' ನಿರ್ಮಾಣಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವಂತಾಗಲಿ ಎಂದು ಶ್ರೀ ಮೋದಿಯವರು ಆಶಿಸಿದ್ದಾರೆ.

ಆ ಭೀಕರ ಕಾಲಘಟ್ಟದಿಂದ ಹೊರಬಂದು, ದೇಶದ ಪ್ರಗತಿಗೆ ಅಮೂಲ್ಯವಾದ ಕೊಡುಗೆ ನೀಡಿದ ಎಲ್ಲಾ ದೇಶವಾಸಿಗಳಿಗೆ ಪ್ರಧಾನಮಂತ್ರಿಯವರು ತಮ್ಮ ಹೃತ್ಪೂರ್ವಕ ನಮನಗಳನ್ನು ಸಲ್ಲಿಸಿದ್ದಾರೆ. ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಸಂಕಲ್ಪಗಳನ್ನು ಹೇಗೆ ಈಡೇರಿಸಿಕೊಳ್ಳಬಹುದು ಎಂಬುದನ್ನು ಅವರು ತಮ್ಮ ಧೈರ್ಯ ಮತ್ತು ಸಾಮರ್ಥ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ. ಸದ್ಭಾವನೆ ಮತ್ತು ಒಗ್ಗಟ್ಟಿನ ರಾಷ್ಟ್ರೀಯ ಮನೋಭಾವವನ್ನು ಇನ್ನಷ್ಟು ಬಲಪಡಿಸುವಂತೆ ಶ್ರೀ ಮೋದಿಯವರು ಎಲ್ಲರಿಗೂ ಕರೆ ನೀಡಿದ್ದಾರೆ.

ಸುಭಾಷಿತವೊಂದನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು, ಕಠಿಣ ಪರಿಶ್ರಮ, ಉದ್ಯಮಶೀಲತೆ ಮತ್ತು ಸಮರ್ಪಿತ ಪ್ರಯತ್ನದಿಂದ ಮಾತ್ರ ವೈವಿಧ್ಯಮಯ ಕಲೆಗಳು, ವಿಜ್ಞಾನ, ತಾಂತ್ರಿಕ ಕೌಶಲ್ಯಗಳು, ಕರಕುಶಲತೆ ಮತ್ತು ನಾವೀನ್ಯತೆಗಳು ಪ್ರವರ್ಧಮಾನಕ್ಕೆ ಬರುತ್ತವೆ ಮತ್ತು ಯಶಸ್ಸಿಗೆ ದಾರಿ ಮಾಡಿಕೊಡುತ್ತವೆ ಎಂದು ಒತ್ತಿ ಹೇಳಿದ್ದಾರೆ. ಆದ್ದರಿಂದ, ಯಾರೂ ಕೇವಲ ಅದೃಷ್ಟವನ್ನು ನೆಚ್ಚಿ ಕೂರಬಾರದು; ಬದಲಾಗಿ, ಧೈರ್ಯ, ಶ್ರದ್ಧೆ ಮತ್ತು ನಿರಂತರ ಪ್ರಯತ್ನದೊಂದಿಗೆ ತಮ್ಮ ಗುರಿಗಳತ್ತ ದೃಢವಾಗಿ ಸಾಗಬೇಕು, ಏಕೆಂದರೆ ಮಾನವನ ಪ್ರಯತ್ನವೇ ಹಣೆಬರಹವನ್ನು ರೂಪಿಸುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ʻಎಕ್ಸ್‌ʼ ನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಪ್ರಧಾನಮಂತ್ರಿ ಅವರು ಈ ರೀತಿ ಹೇಳಿದ್ದಾರೆ:

"ಇಂದು ನಾವು #PartitionHorrorsRemembranceDay ಆಚರಿಸುತ್ತಿದ್ದೇವೆ. ವಿಭಜನೆಯಿಂದ ಬಾಧಿತರಾದ ಎಲ್ಲರ ಧೈರ್ಯವನ್ನು ನಾವು ಸ್ಮರಿಸುತ್ತೇವೆ. ಇದು ಇತಿಹಾಸದಲ್ಲಿ ಅನೇಕರ ಬದುಕುಗಳನ್ನು ಛಿದ್ರಗೊಳಿಸಿದ ಕ್ಷಣವಾಗಿತ್ತು... ಕುಟುಂಬಗಳು ನೆಲೆ ಕಳೆದುಕೊಂಡವು, ಪ್ರೀತಿಪಾತ್ರರನ್ನು ಕಳೆದುಕೊಂಡರು ಮತ್ತು ಅಪಾರವಾದ ನೋವನ್ನು ಅನುಭವಿಸಬೇಕಾಯಿತು.

ಅದೇ ಸಮಯದಲ್ಲಿ, ಇದನ್ನು ಮೆಟ್ಟಿ ನಿಂತು, ಜನರು ಶೂನ್ಯದಿಂದ ತಮ್ಮ ಜೀವನವನ್ನು ಮರುನಿರ್ಮಾಣ ಮಾಡಿದರು, ಪ್ರತಿಕೂಲತೆಯನ್ನು ಸಾಧನೆಯಾಗಿ ಪರಿವರ್ತಿಸಿದರು ಮತ್ತು ನಮ್ಮ ರಾಷ್ಟ್ರದ ಪ್ರಗತಿಗೆ ಅಪಾರ ಕೊಡುಗೆ ನೀಡಿದರು. ಅವರ ಜೀವನ ಪಯಣವು ಮಾನವನ ಅದಮ್ಯ ಚೇತನದ ಶಕ್ತಿಯನ್ನು ನಮಗೆ ನೆನಪಿಸುತ್ತದೆ.

ಈ ದಿನವು ನಮ್ಮ ದೇಶದಲ್ಲಿ ಸೌಹಾರ್ದತೆ ಮತ್ತು ಭ್ರಾತೃತ್ವವನ್ನು ಕಾಪಾಡುವ ನಮ್ಮ ಸಂಕಲ್ಪವನ್ನು ಇನ್ನಷ್ಟು ಗಾಢವಾಗಿಸಲಿ ಮತ್ತು 'ವಿಕಸಿತ ಭಾರತ' ನಿರ್ಮಾಣಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ಪ್ರೇರೇಪಿಸಲಿ."

"विभाजन विभीषिका स्मृति दिवस पर उन सभी देशवासियों का हृदय से नमन, जिन्होंने उस वीभत्स दौर से निकलकर देश की प्रगति में अमूल्य योगदान दिया। उन्होंने अपने साहस और सामर्थ्य से दिखाया कि कैसे विपरीत परिस्थितियों में भी संकल्पों को सिद्ध किया जाता है। आइए, सद्भावना और एकजुटता की राष्ट्रीय भावना को और सशक्त करें।

उद्यमस्य प्रसादेन दृश्यन्ते विविधाः कलाः।
कातरा एव जल्पन्ति यद् भाव्यं तद् भविष्यति॥”

ಕಠಿಣ ಪರಿಶ್ರಮ, ಉದ್ಯಮಶೀಲತೆ ಮತ್ತು ಸಮರ್ಪಿತ ಪ್ರಯತ್ನದಿಂದ ಮಾತ್ರ ವೈವಿಧ್ಯಮಯ ಕಲೆಗಳು, ವಿಜ್ಞಾನ, ತಾಂತ್ರಿಕ ಕೌಶಲ್ಯಗಳು, ಕರಕುಶಲತೆ ಮತ್ತು ನಾವೀನ್ಯತೆಗಳು ಪ್ರವರ್ಧಮಾನಕ್ಕೆ ಬರುತ್ತವೆ ಮತ್ತು ಯಶಸ್ಸಿಗೆ ದಾರಿ ಮಾಡಿಕೊಡುತ್ತವೆ ಎಂದು ಒತ್ತಿ ಹೇಳಿದ್ದಾರೆ. ಆದ್ದರಿಂದ, ಯಾರೂ ಕೇವಲ ಅದೃಷ್ಟವನ್ನು ನೆಚ್ಚಿ ಕೂರಬಾರದು; ಬದಲಾಗಿ, ಧೈರ್ಯ, ಶ್ರದ್ಧೆ ಮತ್ತು ನಿರಂತರ ಪ್ರಯತ್ನದೊಂದಿಗೆ ತಮ್ಮ ಗುರಿಗಳತ್ತ ದೃಢವಾಗಿ ಸಾಗಬೇಕು.