ಕೇಂದ್ರ ಸರಕಾರವು ಪೂರ್ವ ಭಾರತವನ್ನು ಆಗ್ನೇಯ ಏಶ್ಯಾದ ಮಹಾದ್ವಾರವನ್ನಾಗಿ ಅಭಿವೃದ್ಧಿಪಡಿಸುವ ಇರಾದೆ ಹೊಂದಿದೆ : ಪ್ರಧಾನಿ ಮೋದಿ
ಭುವನೇಶ್ವರ ಐ.ಐ.ಟಿ.ಯು ಒಡಿಶಾದ ಕೈಗಾರಿಕಾ ಬೆಳವಣಿಗೆಗೆ ಪ್ರೇರಣಾದಾಯಕವಾಗಲಿದೆ ಮತ್ತು ಜನತೆಯ ಜೀವನ ಸುಧಾರಿಸುವ ತಂತ್ರಜ್ಞಾನದ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದೆ : ಪ್ರಧಾನಿ ಮೋದಿ
ಒಡಿಶಾದ ಸರ್ವತೋಮುಖ ಅಭಿವೃದ್ಧಿಯನು ಖಾತ್ರಿಪಡಿಸಲು ಕೇಂದ್ರ ಸರಕಾರ ಬದ್ದವಾಗಿದೆ: ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2018 ರ ಡಿಸೆಂಬರ್ 24 ರಂದು ಒಡಿಶಾಕ್ಕೆ ಭೇಟಿ ನೀಡಿದರು,

ಭುವನೇಶ್ವರದ ಐ.ಐ.ಟಿ. ಕ್ಯಾಂಪಸಿನಲ್ಲಿ ಪ್ರಧಾನಮಂತ್ರಿ ಅವರು ಪೈಕಾ ಬಂಡಾಯದ ಸ್ಮರಣಾರ್ಥ ಆಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು. ಒಡಿಶಾದಲ್ಲಿ 1817ರಲ್ಲಿ ಬ್ರಿಟಿಷರ ಆಡಳಿತದ ವಿರುದ್ಧ ಪೈಕಾ ಬಂಡಾಯ (ಪೈಕಾ ಬಿದ್ರೋಹ) ನಡೆದಿತ್ತು.

ಭುವನೇಶ್ವರದ ಉತ್ಕಲ್ ವಿಶ್ವವಿದ್ಯಾಲಯದಲ್ಲಿ ಪೈಕಾ ಬಂಡಾಯದ ಅಧ್ಯಯನ ಪೀಠ ಸ್ಥಾಪನೆಯನ್ನು ಘೋಷಿಸಲಾಯಿತು.

ಪ್ರಧಾನಮಂತ್ರಿ ಅವರು ಲಲಿತಗಿರಿ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದರು. ಒಡಿಶಾದಲ್ಲಿಯ ಲಲಿತಗಿರಿ ಬುದ್ದ ದೇವನ ವಿಗ್ರಹ, ವಿಹಾರ, ಮತ್ತು ಸ್ಥೂಪಗಳನ್ನು ಹೊಂದಿರುವ ಪ್ರಾಚ್ಯ ವಸ್ತು ಮಹತ್ವದ ಪ್ರಖ್ಯಾತ ಭೌದ್ದ ಕೇಂದ್ರವಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭುವನೇಶ್ವರದ ಐ.ಐ.ಟಿ.ಕ್ಯಾಂಪಸ್ಸನ್ನು ದೇಶಕ್ಕೆ ಸಮರ್ಪಿಸಿದರು. ಅವರು ಭುವನೇಶ್ವರದಲ್ಲಿ ಹೊಸ ಇ.ಎಸ್.ಐ.ಸಿ. ಆಸ್ಪತ್ರೆಯನ್ನೂ ಉದ್ಘಾಟಿಸಿದರು. ಅವರು ಕೊಳವೆ ಮಾರ್ಗ ಮತ್ತು ರಸ್ತೆ ಯೋಜನೆಗಳಿಗೆ ಶಿಲಾನ್ಯಾಸ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು ಇಂದು ಉದ್ಘಾಟಿಸಿದ ಅಥವಾ ಶಿಲಾನ್ಯಾಸ ನೆರವೇರಿಸಿದ ಯೋಜನೆಗಳ ಒಟ್ಟು ಮೌಲ್ಯ 14,000 ಕೋ.ರೂ.ಗಳು. ಎಂದರು.ಕೇಂದ್ರ ಸರಕಾರವು ಪೂರ್ವ ಭಾರತವನ್ನು ಆಗ್ನೇಯ ಏಶ್ಯಾದ ಮಹಾದ್ವಾರವನ್ನಾಗಿ ಅಭಿವೃದ್ಧಿಪಡಿಸುವ ಇರಾದೆ ಹೊಂದಿದೆ ಎಂದರು.

ಭುವನೇಶ್ವರ ಐ.ಐ.ಟಿ.ಯು ಒಡಿಶಾದ ಕೈಗಾರಿಕಾ ಬೆಳವಣಿಗೆಗೆ ಪ್ರೇರಣಾದಾಯಕವಾಗಲಿದೆ ಮತ್ತು ಜನತೆಯ ಜೀವನ ಸುಧಾರಿಸುವ ತಂತ್ರಜ್ಞಾನದ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದೆ ಎಂದೂ ಪ್ರಧಾನಮಂತ್ರಿ ಅವರು ಹೇಳಿದರು.

ಪ್ರಧಾನಮಂತ್ರಿ ಅವರು ರಾಜ್ಯದಲ್ಲಿ ಆರೋಗ್ಯ ರಕ್ಷಣೆ, ಮೂಲ ಸೌಕರ್ಯ , ರಸ್ತೆ ಜಾಲ, ತೈಲ ಮತ್ತು ಅನಿಲ ಕೊಳವೆ ಮಾರ್ಗ ಮೂಲಸೌಕರ್ಯವನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದ ಯೋಜನೆಗಳನ್ನು ಪ್ರಸ್ತಾಪಿಸಿದರು.

ಒಡಿಶಾದ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಸರಕಾರದ ಬದ್ದತೆಯನ್ನು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು.

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Since 2019, a total of 1,106 left wing extremists have been 'neutralised': MHA

Media Coverage

Since 2019, a total of 1,106 left wing extremists have been 'neutralised': MHA
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 14 ಡಿಸೆಂಬರ್ 2025
December 14, 2025

Empowering Every Indian: PM Modi's Inclusive Path to Prosperity