ಶೇರ್
 
Comments
ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಇವೆರಡೂ ನನ್ನ 20 ವರ್ಷಗಳಲ್ಲಿ ಅಗ್ರಗಣ್ಯ ಆದ್ಯತೆ ಪಡೆದ ವಿಷಯಗಳಾಗಿವೆ. ಮೊದಲಿಗೆ ಗುಜರಾತ್‌ ಆಡಳಿತದಲ್ಲಿ, ಈಗ ರಾಷ್ಟ್ರದಾದ್ಯಂತ ಈ ಕಾಳಜಿ ವ್ಯಕ್ತವಾಗಿದೆ.
ಬಡವರಿಗೂ ಇಂಧನಕ್ಕೆ ಸಂಬಂಧಿಸಿದಂತೆ ಸರ್ವಸೌಲಭ್ಯ ಒದಗಿಸುವುದು ಪರಿಸರ ನೀತಿಯ ಆದ್ಯತೆಯಾಗಿದೆ.
ಭಾರತವು ಬಹುತ್ವ ಇರುವ ರಾಷ್ಟ್ರವಾಗಿದೆ. ಈ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ
ಜಾಗತಿಕ ತಾಪಮಾನಕ್ಕೆ ಸಂಬಂಧಿಸಿದಂತೆ ರಾಜಕೀಯ ಮತ್ತು ನೈತಿಕ ಹೊಣೆಗಾರಿಕೆಯನ್ನು ಹೊರಲು ಸುಸ್ಥಿರ ಪರಿಸರ ಅಭಿವೃದ್ಧಿ ಅತ್ಯಗತ್ಯವಾಗಿದೆ
ಮುಂಬರಲಿರುವ 20 ವರ್ಷಗಳಲ್ಲಿ ಭಾರತೀಯರು ಬಳಸಲಿರುವ ಇಂಧನ ಶಕ್ತಿಯ ಪ್ರಮಾಣ ಇಮ್ಮಡಿಯಾಗಲಿದೆ. ಈ ಇಂಧನವನ್ನು ಅಲ್ಲಗಳೆಯುವುದರಿಂದ, ಲಕ್ಷಾಂತರ ಜನರಿಗೆ ಜೀವನವನ್ನೇ ಅಲ್ಲಗಳೆದಂತಾಗುತ್ತದೆ
ಮುಂದುವರಿದ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹಣಕಾಸು ಮತ್ತು ತಂತ್ರಜ್ಞಾನ ವರ್ಗಾವಣೆ ಮತ್ತು ವಿನಿಮಯದಲ್ಲಿ ಬದ್ಧತೆ ತೋರುವುದು ಅತ್ಯಗತ್ಯವಾಗಿದೆ
ಜಾಗತಿಕವಾಗಿ ಸಂಯೋಜಿತವಾದ ಪ್ರಯತ್ನಗಳಿಂದ ಸುಸ್ಥಿರತೆ ಸಾಧಿಸಬಹುದಾಗಿದೆ
ಪರಿಶುದ್ಧ ಇಂಧನಕ್ಕಾಗಿ ಎಲ್ಲೆಡಿಯಿಂದಲೂ ಸಾರ್ವತ್ರಿಕವಾಗಿ ಸರ್ವಕಾಲದಲ್ಲೂ ಸರ್ವರೂ ಒಟ್ಟೊಟ್ಟಿಗೆ ಪ್ರಯತ್ನ ಪಡುವುದು ಅತ್ಯಗತ್ಯವಾಗಿದೆ. ಸಮಗ್ರ ಸಮಷ್ಟಿಗಾಗಿ ಭಾರತೀಯರು ಶ್ರಮಿಸಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂಧನ ಮತ್ತು ಸಂಪನ್ಮೂಲಗಳ ಸಂಸ್ಥೆ The Energy and Resources Institute’s (TERI)ಯ ಸಮ್ಮೇಳನದಲ್ಲಿ ಉದ್ಘಾಟನಾ ಭಾಷಣ ನೀಡಿದರು. ವಿಡಿಯೊ ಮೆಸೇಜಿನ ಮುಖಾಂತರ ಡಾಮಿನಿಕನ್‌ ರಿಪಬ್ಲಿಕ್‌ನ ರಾಷ್ಟ್ರಪತಿ ಶ್ರೀ ಲುಯಿಸ್‌ ಅಬಿನಾದೆರ್‌, ಗುಯಾನಾ ಗಣರಾಜ್ಯದ ಅಧ್ಯಕ್ಷ ಮೊಹ್ಮದ್‌ ಇರ್ಫಾನ್‌ ಅಲಿ, ವಿಶ್ವಸಂಸ್ಥೆಯ ಪ್ರಧಾನ ಉಪ ಕಾರ್ಯದರ್ಶಿ ಅಮಿನಾ ಜೆ ಮೊಹಮ್ಮದ್‌, ಕೇಂದ್ರ ಸಚಿವ ಭುಪಿಂದರ್‌ ಯಾದವ್‌ ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಧಾನ ಮಂತ್ರಿಗಳು ತಮ್ಮ  20 ವರ್ಷಗಳ ಕಾರ್ಯವೈಖರಿಯಲ್ಲಿ ಸುಸ್ಥಿರ ಅಭಿವೃದ್ಧಿ ಹಾಗೂ ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದನ್ನು ಸ್ಮರಿಸಿದರು. ಮೊದಲಿಗೆ ಗುಜರಾತ್‌ ಮತ್ತು ಈಗ ರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ಆದ್ಯತೆ ಕೊಡುತ್ತಿರುವುದಾಗಿ ತಿಳಿಸಿದರು. ನಮ್ಮ ಭೂಗ್ರಹದ ಸ್ಥಿತಿ ನಾಜೂಕಾಗಿಲ್ಲ. ಆದರೆ ಅದನ್ನು ಉಳಿಸಲು ತೆಗೆದುಕೊಂಡಿರುವ ನಿರ್ಣಯಗಳು ನಾಜೂಕಾಗಿವೆ. ಪ್ರಕೃತಿ ನಾಜೂಕಾಗುತ್ತಿದೆ. ನಾವು ಪ್ರಕೃತಿಯ ರಕ್ಷಣೆಗೆ 50 ವರ್ಷಗಳಿಂದ ಚರ್ಚೆಗಳು, ಮಾತುಗಳು ನಡೆಯುತ್ತಿದ್ದರೂ ಸ್ವಲ್ಪಸ್ವಲ್ಪವೇ ಕೆಲಸ ಆಗ್ತಿದೆ. 1972ರ ಸ್ಟಾಕ್‌ಹೋಮ್‌ ಸಭೆಯಲ್ಲಿ ಚರ್ಚೆ ನಡೆದ ನಂತರದ ಕೆಲಸಗಳನ್ನು ನೋಡಿದರೆ ಇದು ಮನನವಾಗುತ್ತದೆ. ಆದರೆ ಭಾರತದಲ್ಲಿ ಹಾಗಾಗಿಲ್ಲ, ನುಡಿದಂತೆ ನಡೆದಿದ್ದೇವೆ. ಬಡವರಿಗೂ ಪರಿಶುದ್ಧ ಇಂಧನವನ್ನು ನೀಡುವುದರಲ್ಲಿ ನಮ್ಮ ಪರಿಸರ ನೀತಿಯು ಸಬಲವಾಗಿದೆ ಎಂದು ಹೇಳಿದರು. 90 ದಶಲಕ್ಷ ಗೃಹಿಣಿಯರಿಗೆ ಅಡುಗೆ ಮಾಡಲು ಉಜ್ವಲಾ ಯೋಜನೆ ಅಡಿಯಲ್ಲಿ, ನವೀಕರಿಸಬಹುದಾದ ಇಂಧನವನ್ನು ಪಿಎಂಕುಸುಮ್‌ ಯೋಜನೆಯ ಅಡಿಯಲ್ಲಿ ಕೃಷಿಕರಿಗೂ ನೀಡಲಾಗುತ್ತಿದೆ.

ಕಳೆದ ಏಳು ವರ್ಷಗಳಿಂದ ವಿದ್ಯುತ್‌ ಬಳಕೆಯಲ್ಲಿ ಮಿತವ್ಯಯ ತರಲು ಎಲ್‌ಇಡಿ ಬಲ್ಬುಗಳನ್ನು ಹಂಚಲು ಕಳೆದ ಏಳುವರ್ಷಗಳಿಂದ ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಜಗತ್ತಿನ ಗಮನ ಸೆಳೆದರು. ಇದರಿಂದ 220 ಬಿಲಿಯನ್‌ ವಿದ್ಯುತ್‌ಶಕ್ತಿ ಉಳಿಸಿದಂತಾಯಿತು. 180 ಬಿಲಿಯನ್‌ ಕಾರ್ಬನ್‌ ಡೈ ಆಕ್ಸೈಡ್‌ ಉಗುಳುವುದನ್ನು ನಿಯಂತ್ರಿಸಿದಂತಾಯಿತು. ರಾಷ್ಟ್ರೀಯ ಜಲಶಕ್ತಿ ಅಭಿಯಾನವು ಹಸಿರು ಜಲಶಕ್ತಿ ಯೋಜನೆಯಾಗಿ ಪರಿವರ್ತಿಸಲಾಗಿದೆ. ಟೇರಿಯಂಥ ಸಂಸ್ಥೆಗಳ ಜೊತೆಗೆ ಇಂಥ ಪರಿಹಾರಗಳು ಸಶಕ್ತ ಪರಿಹಾರವಾಗಲಿವೆ.

2.4%ರಷ್ಟು ಭೂ ಪ್ರದೇಶ ಇರುವ ದೇಶದಲ್ಲಿ ಜಾಗತಿಕವಾಗಿ ಶೇ 8ರಷ್ಟು ಪ್ರಭೇದಗಳು ಭಾರತದಲ್ಲಿವೆ.  ಪ್ರಧಾನ ಮಂತ್ರಿಗಳು ನಮ್ಮ ಪರಿಸರದಲ್ಲಿರುವ ಬಹುತ್ವದ ಕುರಿತು ಅಪಾರವಾದ ಕಾಳಜಿಯನ್ನು ವ್ಯಕ್ತಪಡಿಸಿದರು.

ಸಂರಕ್ಷಿತ ಪ್ರದೇಶಧ ಜಾಲವನ್ನು ಬಲಪಡಿಸುವ ಪ್ರಯತ್ನಗಳ ಕುರಿತು ಗಮನಸೆಳೆದ ಪ್ರಧಾನಿಗಳು, ಜಾಗತಿಕ ಮಟ್ಟದಲ್ಲಿ ಭಾರತೀಯ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುತ್ತಿದೆ. ಪ್ರಕೃತಿ ರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟ (The International Union for Conservation of Nature (IUCN)ದಲ್ಲಿ ಪಡೆದಿರುವ ಮಾನ್ಯತೆಯತ್ತಲೂ ಗಮನ ಸೆಳೆದರು. ಹರಿಯಾಣದಲ್ಲಿರುವ ಅರವಲ್ಲಿ ಜೀವವೈವಿಧ್ಯ ಪಾರ್ಕ್‌ನಲ್ಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಿರುವುದು O.E.C.M. ಪ್ರದೇಶವಾಘಿ ಪರಿಗಣಿಸಿರುವುದನ್ನು ತಿಳಿಸಿದರು. ಇದಲ್ಲದೆ ರಾಮಸರ್‌ ಕ್ಷೇತಗಳಲ್ಲಿ 49 ಕ್ಷೇತ್ರಗಳಿದ್ದು, ಒಂದು ದಶಲಕ್ಷ ಹೆಕ್ಟೇರ್‌ಗೆ ಇದು ವಿಸ್ತರಿಸಲಾಗಿದೆ ಎಂದು ವಿವರಿಸಿದರು.

ಫಲವತ್ತಲ್ಲದ ಜಮೀನನ್ನು ಉನ್ನತೀಕರಿಸಿದ ಬಗ್ಗೆ ಮುಖ್ಯ ಭೂಪ್ರದೇಶದ ಕಾಳಜಿ ಮಾಡಲು 2015ರಿಂದ ಕ್ರಮಕೈಗೊಳ್ಳಲಾಗಿದೆ. 11.5 ದಶಲಕ್ಷ ಹೆಕ್ಟೇರ್‌ ಭೂಮಿಯನ್ನು ಮರುಸ್ಥಾ‍ಪಿಸಲಾಗಿದೆ. ಭೂ ನಿರುಪಯುಕ್ತವಾಗುವುದರ ವಿರುದ್ಧ ತಟಸ್ಥ ಸ್ಥಿತಿಯನ್ನು ಸ್ಥಾಪಿಸುವ ಕ್ರಮವನ್ನು ಸವಾಲಾಗಿ ಸ್ವೀಕರಿಸಲಾಗಿದೆ. ಅದಕ್ಕೆ ದೇಶ ತನ್ನ ಬದ್ಧತೆಯನ್ನು ತೋರಿಸುತ್ತದೆ. ಗ್ಲಾಸ್ಗೊ26ರಲ್ಲಿ ನಿರ್ಧರಿಸಿದ ತೀರ್ಪುಗಳಲ್ಲಿ ಟ್ರಿಪಲ್‌ ಸಿ ಮತ್ತು ಯುಎನ್‌ಎಫ್‌ ಅಡಿಯಲ್ಲಿ ತೆಗೆದುಕೊಂಡಿರುವ ನಿರ್ಣಯಗಳಿಗೆ ನಾವು ಬದ್ಧರಾಗಿರುತ್ತೇವೆ ಎಂದು ಮೋದಿ ತಿಳಿಸಿದರು.

ಜಾಗತಿಕ ತಾಪಮಾನದ ನಿಯಂತ್ರಣಕ್ಕೆ ಸುಸ್ಥಿರ ಪರಿಸರ ಅಭಿವೃದ್ಧಿ ಮೂಲ ಪರಿಹಾರವಾಗಲಿದೆ. ಇದಕ್ಕಾಗಿ ರಾಜಕೀಯ ಇಚ್ಛಾಶಕ್ತಿ ಹಾಗೂ ನೈತಿಕ ಹೊಣೆಗಾರಿಕೆ ಒಟ್ಟೊಟ್ಟಿಗೆ ಸಾಗುತ್ತಿದೆ. ಮುಂಬರಲಿರುವ ಎರಡು ದಶಕಗಳಲ್ಲಿ ಜನರಿಗೆ ಅಗತ್ಯವಿರುವ ಇಂಧನದ ಪ್ರಮಾಣ ದ್ವಿಗುಣಗೊಳ್ಳುತ್ತದೆ. ಒಂದು ವೇಳೆ ಇಂಧನಶಕ್ತಿಯನ್ನು ನಿರಾಕರಿಸಿದರೆ ಲಕ್ಷಾನುಗಟ್ಟಲೆ ಜನರಿಂದ ಜನಜೀವನವನ್ನೇ ಕಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ಶೀಲ ರಾಷ್ಟ್ರಗಳು ತಮ್ಮ ಬದ್ಧತೆಯನ್ನು ತೋರಬೇಕಿದೆ. ಹಣಕಾಸಿನ ವಿಷಯದಲ್ಲಿಯೂ, ತಂತ್ರಜ್ಞಾನದ ವಿಷಯದಲ್ಲಿಯೂ ವರ್ಗಾವಣೆ ಮಾಡುವ ವಿಷಯದಲ್ಲಿ ತಮ್ಮ ಬದ್ಧತೆಯನ್ನು ತೋರಬೇಕಿದೆ ಎಂಬ ವಿಷಯದತ್ತ ಹೆಚ್ಚು ಹೆಚ್ಚು ಒತ್ತು ನೀಡಿದರು.

ಜಾಗತಿಕವಾಗಿ ಸಮಾನ ಮನಸ್ಕ ರಾಷ್ಟ್ರಗಳು ಈ ಸುಸ್ಥಿರ ಬೆಳವಣಿಗೆಗಾಗಿ ಶ್ರಮಿಸುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒತ್ತು ನೀಡಿದರು. ಈ ಅಂತರ್‌ ಅವಲಂಬನೆಯನ್ನು ಗುರುತಿಸಿದ ಪ್ರಧಾನಿ, ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಿರಂತರವಾಗಿರುತ್ತವೆ. ಅಂತರರಾಷ್ಟ್ರೀಯ ಸೌರ ಸಂಯೋಜನೆಯಲ್ಲಿ ನಮ್ಮ ಉದ್ದೇಶ ಒಂದು ಸೂರ್ಯ, ಒಂದು ಜಗತ್ತು ಮತ್ತು ಒಂದು ಗ್ರಿಡ್‌ ಸೂತ್ರದ ಅಡಿಯಲ್ಲಿ ಶ್ರಮಿಸುತ್ತಿದ್ದೇವೆ ಎಂದರು. ಪರಿಶುದ್ಧ ಶಕ್ತಿಯನ್ನು ಪಡೆಯುವಲ್ಲಿ ನಮ್ಮ ಪ್ರಯತ್ನಗಳು ಸಾಗಿರುವ ಈ ಸಮಯದಲ್ಲಿ ಸಮಗ್ರ ಸಮಷ್ಟಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಶ್ರಮಿಸಬೇಕಾಗಿದೆ. ಆದರೆ ಒಟ್ಟುಗೂಡಿ ಈ ಸುಸ್ಥಿರತೆಯನ್ನು ಸಾಧಿಸಬೇಕಿದೆ ಎಂದು ಒತ್ತು ನೀಡಿ ಹೇಳಿದರು. 

ಪ್ರಕೃತಿ ವಿಕೋಪದಿಂದ ಪರಿಣಾಮ ಬೀರುವ ಭೂ ಪ್ರದೇಶಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತಿದೆ. ಸಿಡಿಆರ್‌ಐ ಮತ್ತು ದ್ವೀಪಗಳ ನಿರ್ಮಾಣ ಮತ್ತು  ಚೇತರಿಕೆಗೆ ಸಂಬಂಧಿಸಿದಂತೆ ಇವುಗಳಿಗೆ ಹೆಚ್ಚು ಹೆಚ್ಚು ಸಂರಕ್ಷಣೆ ಬೇಕಿದೆ ಎಂದು ಸಹ ಗಮನಸೆಳೆದರು.

ಜೀವನ ಮತ್ತು ಜೀವನಶೈಲಿ ಹಾಗೂ ಗ್ರಹಪರಜನರು (ಪ್ರೊ ಪ್ಲಾನೆಟ್‌ ಪೀಪಲ್ 3–ಪಿ) ಹಾಗೂ ಪರಿಸರ ರಕ್ಷಣೆಗಾಗಿ ಜಾಗತಿಕ ತಾಪಮಾನದ ನಿಯಂತ್ರಣಕ್ಕಾಗಿ ಸಮಾನ ಮನಸ್ಕ ರಾಷ್ಟ್ರಗಳು, ಜನರು ಒಗ್ಗೂಡಿ ಶ್ರಮಿಸಬೇಕಾಗಿದೆ. ಇದಕ್ಕಾಗಿ ಸಮಗ್ರ ಸಮಷ್ಟಿಯ ದೃಷ್ಟಿಕೋನ ಬೆಳೆಸಿಕೊಳ್ಳಬೇಕಾಗಿದೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Share beneficiary interaction videos of India's evolving story..
Explore More
Do things that you enjoy and that is when you will get the maximum outcome: PM Modi at Pariksha Pe Charcha

ಜನಪ್ರಿಯ ಭಾಷಣಗಳು

Do things that you enjoy and that is when you will get the maximum outcome: PM Modi at Pariksha Pe Charcha
Carpenter’s son, tea-stall owner’s daughter, the Khelo India stars who figured in PM Narendra Modi’s Mann ki Baat

Media Coverage

Carpenter’s son, tea-stall owner’s daughter, the Khelo India stars who figured in PM Narendra Modi’s Mann ki Baat
...

Nm on the go

Always be the first to hear from the PM. Get the App Now!
...
ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಅರ್ಜೆಂಟೀನಾ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿಯವರ ಸಭೆ.
June 27, 2022
ಶೇರ್
 
Comments

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಅರ್ಜೆಂಟೀನಾ ಅಧ್ಯಕ್ಷ ಶ್ರೀ ಆಲ್ಬರ್ಟೊ ಫೆರ್ನಾಂಡಿಸ್ ಅವರನ್ನು 26 ಜೂನ್ 2022 ರಂದು ಮ್ಯೂನಿಚ್‌ನಲ್ಲಿ ಭೇಟಿ ಮಾಡಿದರು.

ಉಭಯ ನಾಯಕರ ನಡುವಿನ ಮೊದಲ ದ್ವಿಪಕ್ಷೀಯ ಸಭೆ ಇದಾಗಿದೆ. 2019 ರಲ್ಲಿ ಆರಂಭಿಸಲಾದ ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯ ಅನುಷ್ಠಾನದ ಪ್ರಗತಿಯನ್ನು ನಾಯಕರು ಪರಿಶೀಲಿಸಿದರು. ವ್ಯಾಪಾರ ಮತ್ತು ಹೂಡಿಕೆ, ದಕ್ಷಿಣ-ದಕ್ಷಿಣ ಸಹಕಾರ ವಿಶೇಷವಾಗಿ ಔಷಧೀಯ ವಲಯದಲ್ಲಿ; ಹವಾಮಾನ ಕ್ರಮಗಳು, ನವೀಕರಿಸಬಹುದಾದ ಇಂಧನ, ಪರಮಾಣು ಔಷಧ, ವಿದ್ಯುಚ್ಚಾಲಿತ ಸಂಚಾರ ವ್ಯವಸ್ಥೆ, ರಕ್ಷಣಾ ಸಹಕಾರ, ಕೃಷಿ ಮತ್ತು ಆಹಾರ ಭದ್ರತೆ, ಸಾಂಪ್ರದಾಯಿಕ ಔಷಧ, ಸಾಂಸ್ಕೃತಿಕ ಸಹಕಾರ, ಹಾಗೆಯೇ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಸಮನ್ವಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆದವು. ಈ ಕ್ಷೇತ್ರಗಳಲ್ಲಿ ತಮ್ಮ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು.