ಒಂದು ದೇಶದ ಒಂದು ಮಾರು

Published By : Admin | September 26, 2016 | 12:31 IST
ಶೇರ್
 
Comments

ದೇಶ ಸ್ವಾತಂತ್ಯ್ರ ಹೊಂದಿ ಮತ್ತು ಸರದಾರ್‌ ವಲ್ಲಭಭಾಯಿ ಪಟೇಲ್‌ ಇಡೀ ದೇಶವನ್ನು ಒಗ್ಗೂಡಿಸಿ ಏಳು ದಶಕಗಳು ಆಗಿವೆ. ರಾಜಕೀಯ ಸಂಘಟನೆ ಎಂಬುದು ನಿಜವಾಗಿದ್ದರೂ ಭಾರತದಲ್ಲಿ ಒಂದೇ ಮಾರುಕಟ್ಟೆಯ ವ್ಯವಸ್ಥೆ ಬಂದಿಲ್ಲ. ಎನ್ ಡಿ ಎ ಸರಕಾರ ದೇಶದ ವಿವಿಧ ಮಾರುಕಟ್ಟೆಗಳನ್ನು ಸಂಯೋಜಿಸುವತ್ತ ಕೆಲಸ ಮಾಡುತ್ತಿದೆ. ಇದರಿಂದ ನಮ್ಮ ಉತ್ಪಾದಕರ ಮತ್ತು ಗ್ರಾಹಕರ ಅವಕಾಶಗಳನ್ನು ಹೆಚ್ಚಿಸಬಹುದಾಗಿದೆ. ಈ ದೂರದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್ ಡಿ ಎ ಸರಕಾರ, ‘ಒಂದು ದೇಶ, ಒಂದೇ ಮಾರುಕಟ್ಟೆ’ಯ ಕಲ್ಪನೆಯನ್ನು ಸಾಧ್ಯವಾಗಿಸಲು ಹಲವು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ

ಇ-ನಾಮ್‌
ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ತಮ್ಮ ಕೃಷಿ ಉತ್ಪನ್ನ ನಿಯಮಗಳ ಮೂಲಕ ರಾಜ್ಯ ಸರಕಾರಗಳು ಮುನ್ನಡೆಸುತ್ತಿವೆ. ಆ ಮೂಲಕ ರಾಜ್ಯ ಸರಕಾರಗಳು ಅದನ್ನು ಹಲವು ವಲಯಗಳಾಗಿ ವಿಂಗಡಿಸಿದ್ದು, ಪ್ರತಿಯೊಂದನ್ನೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮೂಲಕ ನಿರ್ವಹಿಸುತ್ತಿವೆ. ಶುಲ್ಕವೂ ಸೇರಿದಂತೆ ತನ್ನದೇ ಆದ ವ್ಯವಸ್ಥೆಯನ್ನು ಹೊಂದಲಾಗಿದೆ. ರಾಜ್ಯದೊಳಗೇ ಈ ಮಾರುಕಟ್ಟೆಗಳ ವಿಂಗಡಣೆ ವಿಧಾನ, ಕೃಷಿ ಉತ್ಪನ್ನಗಳ ಮುಕ್ತ ಹರಿವಿಗೆ ತಡೆಯೊಡ್ಡುತ್ತಿದೆ. ಯಾಕೆಂಧರೆ ಪ್ರತಿ ಸಮಿತಿಗಳೂ ತಮ್ಮ ವ್ಯಾಪ್ತಿಯಲ್ಲಿ ಪ್ರತ್ಯೇಕ ಶುಲ್ಕ ವಿಧಿಸುತ್ತಿರುವುದರಿಂದ ಬಹು ರೀತಿಯ ಶುಲ್ಕವನ್ನು ಭರಿಸಬೇಕಾಗುತ್ತಿದೆ. ಇದರಿಂದ ರೈತರಿಗೂ ಲಾಭವಾಗದೇ, ಗ್ರಾಹಕರ ಮೇಲೂ ಅನಗತ್ಯ ಹೊರೆ ಬೀಳುತ್ತಿದೆ. ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳವಾಗುತ್ತಿದೆ.
ಇ-ನಾಮ್‌ ಈ ಸವಾಲುಗಳನ್ನು ಉತ್ತರಿಸುವತ್ತ ಗಮನಹರಿಸಿ ಸಂಯುಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಆನ್‌ ಲೈನ್‌ ವ್ಯಾಪಾರಿ ಪದ್ಧತಿ ಮೂಲಕ ಸೃಷ್ಟಿಸುತ್ತದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಏಕರೂಪತೆಯನ್ನು ಹೊಂದುವ ಮೂಲಕ, ಎಲ್ಲ ವ್ಯವಸ್ಥೆಗಳನ್ನು ಸ್ಪಷ್ಟ ಚೌಕಟ್ಟಿಗೆ ಒಳಪಡಿಸಿ, ಗ್ರಾಹಕರು ಮತ್ತು ರೈತರ (ಮಾರಾಟಗಾರರ) ನಡುವೆ ಮಾಹಿತಿ ಕೊರತೆಯನ್ನು ನೀಗಿಸಲಾಗುವುದು. ನೈಜ ಬೇಡಿಕೆ ಮತ್ತು ಪೂರೈಕೆ ಆಧರಿಸಿ ನೈಜ ದರ ಪದ್ಧತಿ ಜಾರಿಗೆ ಬರುತ್ತದೆ. ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ರೈತರ ಉತ್ಪನ್ನಕ್ಕೆ ತಕ್ಕಂತ ಬೆಲೆಯೂ ಸಿಗಲಿದೆ. ಆನ್‌ ಲೈನ್‌ ಮೂಲಕ ಪಾವತಿ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳು ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೂ ಲಭ್ಯವಾಗಲಿದೆ.

ಜಿಎಸ್‌ಟಿ

ದೇಶದಲ್ಲಿ ಬಹುವಿಧದ ತೆರಿಗೆ ಪದ್ಧತಿಯನ್ನು ಹೊಂದಿದ್ದೇವೆ. ಒಂದು ದೇಶ ಬಹು ರೀತಿಯ ತೆರಿಗೆ ದರ ಮತ್ತು ನಿಯಮಗಳನ್ನು ಹೊಂದಿದೆ. ಅಂತಿಮವಾಗಿ ಉತ್ಪಾದಕರು ಹೆಚ್ಚು ತೆರಿಗೆ ಪಾವತಿಸಿದಂತಾಗಿದ್ದು, ಗ್ರಾಹಕರಿಗೂ ಈ ಹೊರೆ ವರ್ಗಾವಣೆಯಾಗುತ್ತಿದೆ. ಜಿಎಸ್‌ ಟಿ ಪದ್ಧತಿ ಮೂಲಕ ಇವೆಲ್ಲವೂ ನಿವಾರಣೆಯಾಗಲಿದೆ. ಈ ಮೂಲಕ ದೇಶಾದ್ಯಂತ ಒಂದೇ ತೆರಿಗೆ ಪದ್ಧತಿ ಹೊಂದಲಾಗುತ್ತದೆ.

ಜಿಎಸ್‌ಟಿ- ಸರಕು ಮತ್ತು ಸೇವೆಗೆ ಸಂಬಂಧಿಸಿದಂತೆ ಉತ್ಪಾದಕರಿಂದ ಗ್ರಾಹಕರವರೆಗೆ ಸೇರುವವರೆಗೂ ಒಂದೇ ತೆರಿಗೆಯನ್ನು ವಿಧಿಸಲಾಗುವುದು. ಒಳಗೊಳ್ಳುವ ತೆರಿಗೆ (ಇನ್ಪುಟ್‌) ಯ ಪಾಲನ್ನು ಪ್ರತಿ ಹಂತದ ಮೌಲ್ಯೀಕರಣದ ನಂತರದ ಹಂತದಲ್ಲಿ ನೀಡಲಾಗುವುದು. ಹಾಗಾಗಿ ಜಿಎಸ್‌ಟಿ ಮೌಲ್ಯಾವರ್ಧಿತ ಹಂತಕ್ಕೆ ವಿಧಿಸುವ ತೆರಿಗೆ. ಶಾದ್ಯಂತ ಪರೋಕ್ಷ ತರೆಗೆ ಮತ್ತು ಪದ್ಧತಿ ಸಂರಚನೆಯಲ್ಲಿ ಒಂದೇ ತೆರನಾಗಿರಲಿದ ಎಂದು ಜಿಎಸ್‌ ಟಿ ಯು ಖಚಿತವಾಗಿ ಹೇಳುತ್ತದೆ. ಇದರಿಂದ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಸರಳವಾಗುತ್ತದೆ. ಯಾವುದೇ ರಾಜ್ಯಗಳ ಗಡಿಯ ಗೊಂದಲವಿಲ್ಲದೇ ಎಲ್ಲೆಡೆ ಒಂದೇ ತೆರಿಗೆ ಇರುವುದರಿಂದ ಬೇರೆ ಪಾರ್ಶ್ವ ಪರಿಣಾಮಗಳು ಇರುವುದಿಲ್ಲ.

ದೇಶದ ಉದ್ದಕ್ಕೂ ಸಾಮಾನ್ಯವಾಗಿರುವ ಖಚಿತಪಡಿಸಿಕೊಳ್ಳಬಹುದು. ಮೌಲ್ಯ ಸರಣಿ ಪೂರ್ತಿ ತಡೆರಹಿತ ತೆರಿಗೆ ಕ್ರೆಡಿಟ್ ವ್ಯವಸ್ಥೆ, ಹಾಗೂ ರಾಜ್ಯಗಳು ಸೀಮೆಯೆಲ್ಲೆಡೆ ತೆರಿಗೆ ಕನಿಷ್ಠ ಕ್ಯಾಸ್ಕೇಡಿಂಗ್ ಎಂದು ನೋಡಿಕೊಳ್ಳುತ್ತದೆ. ಜಿಎಸ್ಟಿ ಪ್ರಮುಖ ಕೇಂದ್ರ ಮತ್ತು ರಾಜ್ಯ ತೆರಿಗೆಗಳು, ಇನ್ಪುಟ್ ಸರಕು ಮತ್ತು ಸೇವೆಗಳ ಸಂಪೂರ್ಣ ಮತ್ತು ಸಮಗ್ರ ಸೆಟ್ ಆಫ್ ಮತ್ತು ಮಧ್ಯ ಮಾರಾಟ ತೆರಿಗೆ (ಸಿಎಸ್ಟಿ) ಹೊರಗೆ ಸಮಾಪ್ತಗೊಳಿಸಲ್ಲಿದ್ದೇವೆ ಅಂತರ್ಗತಗೊಳಿಸಿಕೊಳ್ಳುತ್ತಾನೆ ಸ್ಥಳೀಯವಾಗಿ ಉತ್ಪಾದಿತ ಸರಕುಗಳು ಮತ್ತು ಸೇವೆಗಳ ವೆಚ್ಚ ತಗ್ಗಿಸುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಸರಕು ಮತ್ತು ಸೇವೆಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ಭಾರತೀಯ ರಫ್ತು ಪ್ರೋತ್ಸಾಹ ನೀಡುವುದು. ಏಕೆಂದರೆ ದಕ್ಷತೆ ಗಳಿಸುವುದರ ಮತ್ತು ಸೋರಿಕೆ ತಡೆಗಟ್ಟಲು, ಅತ್ಯಂತ ಸರಕುಗಳ ಮೇಲೆ ಒಟ್ಟಾರೆ ತೆರಿಗೆಯನ್ನು ಗ್ರಾಹಕರು ಪ್ರಯೋಜನವನ್ನು ಇದು ಕೆಳಗೆ ಬರುತ್ತದೆ.

ಕೇಂದ್ರ ಮತ್ತು ರಾಜ್ಯ ತೆರಿಗೆಯನ್ನು ಒಗ್ಗೂಡಿಸಿ, ಸಂಪೂರ್ಣ ಮತ್ತು ಸಮಗ್ರ ತೆರಿಗೆ ಪದ್ಧತಿಯನ್ನು ತರುವ ಮೂಲಕ ಕೇಂದ್ರ ಮಾರಾಟ ತೆರಿಗೆಯನ್ನು ತೆರೆಗೆ ಸರಿಸಲಾಗುತ್ತದೆ. ಇದರಿಂದ ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ವೆಚ್ಚವನ್ನು ಕಡಿಮೆ ಮಾಡಲಿದೆ. ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಕಂಪನಿಗಳಿಗೆ ಇನ್ನಷ್ಟು ಸ್ಪರ್ಧೆ ನೀಡಲು ಆನುಕೂಲವಾಗಲಿದ್ದು, ರಫ್ತು ವ್ಯವಹಾರ ಹೆಚ್ಚಲಿದೆ. ವ್ಯವಸ್ಥೆಯಲ್ಲಿ ದಕ್ಷತೆ ತರುವುದು ಹಾಗೂ ಸೋರಿಕೆಯನ್ನು ತಡೆಗಟ್ಟುವುದರಿಂದ ಬಹುತೇಕ ಸಾಮಗ್ರಿ-ಸರಕಿನ ದರ ಇಳಿಯಲು ಕಾರಣವಾಗಬಲ್ಲದು. ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ.

ಒಂದು ದೇಶ, ಒಂದು ಜಾಲ, ಒಂದೇ ದರ

ದೇಶದಲ್ಲಿ ವಿದ್ಯುತ್‌ ಪ್ರಸರಣ ಸಾಮರ್ಥ್ಯ ಅಸಮತೋಲನದಿಂದ ಕೂಡಿದ್ದು, ಸರಿಯಾಗಿ ವಿತರಣೆಯಾಗಿಲ್ಲ. ಇದು ಹೆಚ್ಚು ವಿದ್ಯುತ್‌ ಹೊಂದಿರುವ ರಾಜ್ಯಗಳಿಂದ ಕಡಿಮೆ ವಿದ್ಯುತ್‌ ಇರುವ ರಾಜ್ಯಗಳಿಗೆ ಪೂರೈಸುವಲ್ಲಿ ಬಹಳ ಸಮಸ್ಯೆಯಾಗಿ ಪರಿಣಮಿಸಿದೆ. ದಕ್ಷಿಣ ಭಾರತದ ರಾಜ್ಯಗಳು ಬೇಸಗೆ ಸಮಯದಲ್ಲಿ ಪ್ರಸ್ರರಣ ಮಾರ್ಗಗಳಲ್ಲಿನ ದಟ್ಟಣೆಯಿಂದಾಗಿ ತೀವ್ರ ವಿದ್ಯುತ್‌ ಕ್ಷಾಮವನ್ನು ಎದುರಿಸುತ್ತಿವೆ. ಇದರಿಂದ ಈ ರಾಜ್ಯಗಳು ವಿದ್ಯುತ್‌ ಗೆ ಎರಡಂಕಿ ದರವನ್ನು ಪಾವತಿಸುವಂತಾಗಿದೆ. ಎನ್ ಡಿ ಎ ಸರಕಾರವು, ಲಭ್ಯ ವರ್ಗಾವಣೆ ಸಾಮರ್ಥ್ಯ (ಎಟಿಸಿ)ವನ್ನು ೨೦೧೩-೧೪ ರಲ್ಲಿ ಶೇ. ೭೧ ರಷ್ಟು ಹೆಚ್ಚಿಸಿದ್ದು, ೩, ೪೫೦ ಮೆ.ವ್ಯಾ ನಿಂದ ೫, ೯೦೦ ಮೆ.ವ್ಯಾಟ್‌ ಗೆ ಏರಿಸಿದೆ. ಇದರಿಂದ ದರದಲ್ಲಿ ಸಾಕಷ್ಟು ಇಳಿತವಾಗಿದೆ.
ವಿದ್ಯುತ್ ಪ್ರವಾಹ ಮೊಬೈಲ್‌ ಆಪ್‌ ಮೂಲಕ ಜಾಲಗಳಲ್ಲಿ ಲಭ್ಯವಿರುವ ಹೆಚ್ಚುವರಿ ವಿದ್ಯುತ್‌ ಮತ್ತು ದರವನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ. ಈ ಸಾಧನವು ರಾಜ್ಯಗಳು ಖರೀದಿಸಿದ ವಿದ್ಯುತ್‌ ವಿವರವನ್ನು ಒದಗಿಸುವುದಲ್ಲದೇ, ರಾಜ್ಯಗಳು ಒಂದುವೇಳೆ ಕೊರತೆಯನ್ನು ಘೋಷಿಸಿದ್ದರೆ ಆ ಮಾಹಿತಿಯೂ ಸಿಗುತ್ತದೆ. ಈ ಸಾಧನದ ಮೂಲಕ ಕಂಡು ಬಂದ ಮಾಹಿತಿಯೆಂದರೆ ಬಹುತೇಕ ಸಂದರ್ಭಗಳಲ್ಲಿ ಎಲ್ಲ ರಾಜ್ಯಗಳಲ್ಲೂ ವಿದ್ಯುತ್‌ ದರ ಒಂದೇ ತೆರನಾಗಿರುತ್ತದೆ. ಸರಕಾರವು ಕೈಗೊಂಡ ಕೆಲವು ಉಪಕ್ರಮಗಳಿಂದ ಹಲವು ಹಂತಗಳನ್ನು ಒಂದೆಡೆ ಒಗ್ಗೂಡಿಸಲು ಸಾಧ್ಯವಾಗಿದೆ.

ಇದರಿಂದ ಪ್ರಸರಣ ಸಾಮರ್ಥ್ಯವೂ ಹೆಚ್ಚಾಗಿದೆಯಲ್ಲದೇ, ರಾಜ್ಯಗಳು ರಾಷ್ಟ್ರೀಯ ವಿದ್ಯುತ್‌ ಜಾಲದಿಂದ ಅಲ್ಪಾವಧಿಯ ಅಗತ್ಯಕ್ಕೆ ತಕ್ಕಂತೆ ವಿದ್ಯುತ್‌ ನ್ನು ಪಡೆಯಲೂ ಅನುಕೂಲವಾಗಿದೆ. ಸರಕಾರವು ಡೀಪ್ (ಡಿಸ್ಕವರಿ ಆಫ್‌ ಎಫಿಶಿಯಂಟ್‌ ಎಲೆಕ್ಟ್ರಿಸಿಟಿ ಪ್ರೈಸ್‌) ಇ ಬಿಡ್ಡಿಂಗ್‌ ಮತ್ತು ಇ-ರಿವರ್ಸ್ ಆಕ್ಷನ್‌ ಪೋರ್ಟಲ್‌ ನ್ನು ಆರಂಭಿಸಿದ್ದು, ಪ್ರಸರಣ ಕಂಪೆನಿಗಳ ಅಲ್ಪಾವಧಿ ವಿದ್ಯುತ್‌ ಖರೀದಿಗೆ ಪೂರಕವಾಗಿದೆ. ಈ ಸ್ಪರ್ಧಾತ್ಮಕ ಖರೀದಿಯ ಅವಕಾಶ ಉತ್ಪಮ ಬೆಲೆಯಲ್ಲಿ ವಿದ್ಯುತ್‌ ಖರೀದಿಸಲು ಸಹಾಯಕವಾಗಿರುವುದರಿಂದ ಗ್ರಾಹಕರಿಗೆ ಲಾಭವಾಗುತ್ತಿದೆ.

ಯುಎಎನ್‌

ಮೊದಲು ಯಾರಾದರೂ ಒಬ್ಬ ಹೊಸ ಉದ್ಯೋಗಕ್ಕೆ ಸೇರಿಕೊಂಡ ಕೂಡಲೇ ಇಪಿಎಫ್‌ ಖಾತೆಯೊಂದು ತೆರೆಯಲಾಗುತ್ತಿತ್ತು. ಉದ್ಯೋಗದಾತ ಆ ಖಾತೆಗೆ ಅವನ ಬಾಬ್ತಿನ ಭವಿಷ್ಯ ನಿಧಿ ಹಣವನ್ನು ಪಾವತಿಸುತ್ತಿದ್ದರು. ನೌಕರ ಆ ಉದ್ಯೋಗ ಬಿಟ್ಟು ಅಥವಾ ಕಂಪನಿ ಬಿಟ್ಟು ಬೇರೆಡೆಗೆ ಹೋದಾಗ ಮತ್ತೆ ಹೊಸ ಖಾತೆ ತೆರೆಯಲಾಗುತ್ತಿತ್ತು. ಇದರಿಂದ ಅನಗತ್ಯ ಶುಲ್ಕ ಮತ್ತು ಹಲವಾರು ಅರ್ಜಿಗಳ ಸಲ್ಲಿಕೆ ಅನಿವಾರ್ಯವಾಗಿತ್ತು. ಜತೆಗೆ ಹಿಂದಿನ ಉದ್ಯೋಗದಾತರೇ ಮೌಲ್ಯೀಕರಣ ಮಾಡಬೇಕಾಗಿತ್ತು. ಆದರೆ ಯುಎಎನ್‌ ಮೂಲಕ ಸಾಕಷ್ಟು ಸರಳಗೊಳಿಸಿದ್ದು, ಉದ್ಯೋಗದಾತರ ಪಾತ್ರವನ್ನು ಸಂಪೂರ್ಣವಾಗಿ ತೆರೆಗೆ ಸರಿಸಲಾಗಿದೆ. ಈಗ ಏನಿದ್ದರೂ ಭವಿಷ್ಯ ನಿಧಿ ಖಾತೆ ಕಚೇರಿ ಅಧಿಕಾರಿಗಳು ಮತ್ತು ನೌಕರನ ಮಧ್ಯೆ ನೇರ ಮಾತುಕತೆ ಸಾಧ್ಯವಾಗಿದೆ. ಯುಎಎನ್‌ ಸಂಬಂಧಪಟ್ಟ ನೌಕರನ ಜೀವಿತಾವಧಿಗೆ ಒಂದೇ ಆಗಿರಲಿದೆ. ಭವಿಷ್ಯನಿಧಿ ಖಾತೆಯಲ್ಲಿ ಜಮೆ ಮಾಡಿದ ಹಣವನ್ನು ಈ ಯುಎಎನ್‌ ಸಂಖ್ಯೆಯೊಂದಿಗೆ ಸಂಯೋಜಿಸಲಾಗಿದ್ದು, ಹಣ ಹಿಂತೆಗೆತಕ್ಕೂ ಅನುಕೂಲವಾಗಲಿದೆ.
ಇಂಥ ಹಲವು ಉಪಕ್ರಮಗಳು ದೇಶದ ಮಾರುಕಟ್ಟೆಯನ್ನು ಸಮಗ್ರವಾಗಿ ಸಂಯೋಜಿಸುವತ್ತ ಮಹತ್ವದ ಪಾತ್ರ ವಹಿಸಲಿವೆ

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
Explained: The role of India’s free trade agreements in boosting MSME exports

Media Coverage

Explained: The role of India’s free trade agreements in boosting MSME exports
NM on the go

Nm on the go

Always be the first to hear from the PM. Get the App Now!
...
PM Modi Adorns Colours of North East
March 22, 2019
ಶೇರ್
 
Comments

The scenic North East with its bountiful natural endowments, diverse culture and enterprising people is brimming with possibilities. Realising the region’s potential, the Modi government has been infusing a new vigour in the development of the seven sister states.

Citing ‘tyranny of distance’ as the reason for its isolation, its development was pushed to the background. However, taking a complete departure from the past, the Modi government has not only brought the focus back on the region but has, in fact, made it a priority area.

The rich cultural capital of the north east has been brought in focus by PM Modi. The manner in which he dons different headgears during his visits to the region ensures that the cultural significance of the region is highlighted. Here are some of the different headgears PM Modi has carried during his visits to India’s north east!