ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಇತರ ನಾಯಕರು ಸಂಸತ್ತಿನಲ್ಲಿ ಭೋಜನಕೂಟದಲ್ಲಿ ಭಾಗವಹಿಸಿದರು. ಭಾರತ 2023 ಅನ್ನು ಅಂತರರಾಷ್ಟ್ರೀಯ (ಮಿಲೆಟ್ಸ್) ಸಿರಿಧಾನ್ಯ ವರ್ಷವೆಂದು ಗುರುತಿಸಲಾಗಿದ್ದು ,ಆಚರಣೆಗೆ ಸಿದ್ಧತೆ ನಡೆಸುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಭೋಜನದಲ್ಲಿ ರಾಗಿಧಾನ್ಯದಿಂದ ತಯಾರಿಸಿದ ಭಕ್ಷ್ಯಗಳನ್ನು ಬಡಿಸಲಾಯಿತು.

ಟ್ವೀಟ್‌ನಲ್ಲಿ ಪ್ರಧಾನಿ ಹೇಳಿದ್ದು ಹೀಗೆ :
"ನಾವು 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಗುರುತಿಸಲು ತಯಾರಿ ನಡೆಸುತ್ತಿದ್ದೇವೆ.ಇಂತಹ ಸಂದರ್ಭದಲ್ಲಿ ಸಂಸತ್ತಿನಲ್ಲಿ ಆಯೋಜಿಸಲಾಗಿದ್ದ ಭೋಜನ ಕೂಟದಲ್ಲಿ ರಾಗಿಯಿಂದ ತಯಾರಿಸಿದ ಖಾದ್ಯಗಳನ್ನು ಸೇವಿಸಲಾಯಿತು. ರಾಗಿಯಿಂದ ತಯಾರಿಸಿದ ಭಕ್ಷ್ಯಗಳ ಅದ್ಭುತ ಭೋಜನಕೂಟದಲ್ಲಿ ನಾವೆಲ್ಲ ಪಾಲ್ಗೊಂಡೆವು. ಪಕ್ಷಾತೀತವಾಗಿ ನಾವೆಲ್ಲರೂ ಭೋಜನಕೂಟದಲ್ಲಿ ಭಾಗವಹಿಸಿದ್ದನ್ನು ನೋಡುವುದಕ್ಕೆ ಸಂತೋಷವಾಯಿತು.
As we prepare to mark 2023 as the International Year of Millets, attended a sumptuous lunch in Parliament where millet dishes were served. Good to see participation from across party lines. pic.twitter.com/PjU1mQh0F3
— Narendra Modi (@narendramodi) December 20, 2022






