ಸಮಾನ ದೃಷ್ಟಿಕೋನ

 

ಫ್ರಾನ್ಸ್ ಮತ್ತು ಭಾರತ ಎರಡೂ ತ್ವರಿತ ಆರ್ಥಿಕ ವೃದ್ಧಿ, ಸುಸ್ಥಿರ ಅಭಿವೃದ್ಧಿ ಮತ್ತು ಡಿಜಿಟಲ್ ಕಂದಕವನ್ನು ಬೆಸೆಯಲು ಅಗತ್ಯವಾದ ಸುರಕ್ಷಿತ ವರ್ಧಿತ ಅಂತರ್ಜಾಲ ಲಭ್ಯತೆಗಾಗಿ ಡಿಜಿಟಲ್ ತಂತ್ರಜ್ಞಾನವನ್ನು ತಮ್ಮ ಸಮಾಜದ ಪರಿವರ್ತನಾತ್ಮಕ ಅಂಶವಾಗಿ ಮಾಡುವ ಚಿಂತನೆ ಹೊಂದಿವೆ, 

 

ಹೀಗಾಗಿ ನಾಗರಿಕರನ್ನು ಸಬಲೀಕರಿಸುವ, ಅಸಮಾನತೆಗಳನ್ನು ತಗ್ಗಿಸುವ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಂಥ ಡಿಜಿಟಲ್ ತಂತ್ರಜ್ಞಾನಗಳ ದೃಷ್ಟಿಕೋನವನ್ನು ಫ್ರಾನ್ಸ್ ಮತ್ತು ಭಾರತ ಪ್ರತಿಪಾದಿಸುತ್ತವೆ.

 

ಅಂತಾರಾಷ್ಟ್ರೀಯ ಭದ್ರತೆ ಮತ್ತು ರಾಜತಾಂತ್ರಿಕ ಪ್ರಯತ್ನ

 

ಫ್ರಾನ್ಸ್ ಮತ್ತು ಭಾರತ ರಾಷ್ಟ್ರಗಳು ಮುಕ್ತ, ವಿಶ್ವಾಸಾರ್ಹ, ಸುಭದ್ರ, ಸ್ಥಿರ ಮತ್ತು ಶಾಂತಿಯುತ ಸೈಬರ್ ಪ್ರದೇಶದ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿವೆ. ಅಂತಾರಾಷ್ಟ್ರೀಯ ಕಾನೂನು ಅದರಲ್ಲೂ ವಿಶ್ವಸಂಸ್ಥೆಯ ಸನ್ನದುಗಳು ಅನ್ವಯವಾಗುತ್ತವೆ ಮತ್ತು ಅವು ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಹಾಗೂ ಮುಕ್ತ, ಸುಭದ್ರ ಶಾಂತಿಯುತ ಮತ್ತು  ಡಿಜಿಟಲ್ ವಾತಾವರಣ ಲಭ್ಯತೆ ಉತ್ತೇಜಿಸಲು  ಅಗತ್ಯವಾಗಿವೆ. ವಿಶ್ವಸಂಸ್ಥೆಯ ಚೌಕಟ್ಟಿನೊಳಗೆ ಅಭಿವೃದ್ಧಿಪಡಿಸಿದ ವಿಶ್ವಾಸ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಕ್ರಮಗಳೊಂದಿಗೆ ಸೈಬರ್‌ಪ್ರದೇಶದಲ್ಲಿ ಜವಾಬ್ದಾರಿಯುತ ರಾಷ್ಟ್ರ ನಡವಳಿಕೆಯನ್ನು ಸ್ವಯಂಪ್ರೇರಿತವಾಗಿ ಉತ್ತೇಜಿಸುವ ಮತ್ತು ಅನುಷ್ಠಾನಗೊಳಿಸುವ ಮಹತ್ವವನ್ನು ಅವರು ಪುನರುಚ್ಚರಿಸಿದ್ದಾರೆ. ಇದು ಸೈಬರ್‌ ಪ್ರದೇಶದಲ್ಲಿ ಶಾಂತಿ ಮತ್ತು ಸುರಕ್ಷತೆಯ ಬುನಾದಿಯಾಗಿದೆ.

ಫ್ರಾನ್ಸ್ ಮತ್ತು ಭಾರತ, ಸೈಬರ್ ಪ್ರದೇಶದಲ್ಲಿ ವಿಶ್ವಾಸ, ಸುರಕ್ಷತೆ ಮತ್ತು ಸ್ಥಿರತೆಯನ್ನು ಉತ್ತಮಪಡಿಸಲು ವಿವಿಧ ಪಾತ್ರಗಳ ಹಂಚಿಕೆಯ ಜವಾಬ್ದಾರಿಯನ್ನು ಆಯಾ ಪಾತ್ರಗಳಲ್ಲಿ ಗುರುತಿಸುತ್ತವೆ. ಮುಕ್ತ , ಸ್ಥಿರ, ಶಾಂತಿಯುತ ಡಿಜಿಟಲ್ ವಾತಾವರಣ ಮತ್ತು ಲಭ್ಯತೆಯ ಖಾತ್ರಿಗಾಗಿಗ ಬಹು ಬಾಧ್ಯಸ್ಥ ದೃಷ್ಟಿಕೋನವನ್ನು ಬಲಪಡಿಸಲು ಅವರು ಕರೆ ನೀಡಿದ್ದಾರೆ ಮತ್ತು ಇದಕ್ಕೆಸರ್ಕಾರಗಳ, ಕೈಗಾರಿಕೆಗಳ, ಶೈಕ್ಷಣಿಕ ರಂಗದ ಮತ್ತು ನಾಗರಿಕ ಸಮಾಜದ ಜಂಟಿ ಪ್ರಯತ್ನಗಳ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. 

 

ಆಡಳಿತ, ಸಾರ್ವಭೌಮತ್ವ ಮತ್ತು ತಾಂತ್ರಿಕ ನಿಯಂತ್ರಣ

 

ದೇಶಗಳೂ ಸೇರಿದಂತೆ ಎಲ್ಲಾ ಬಾಧ್ಯಸ್ಥರ ಹಿತಾಸಕ್ತಿಯನ್ನು ಗೌರವಿಸುವ ಅಂತರ್ಜಾಲಕ್ಕೆ ಬಹು-ಪಾಲುದಾರ ಮತ್ತು ಬಹುಪಕ್ಷೀಯ ವಿಧಾನವನ್ನು ಸಂರಕ್ಷಿಸುವ ಮೂಲಕ ಸಮಗ್ರ ಮತ್ತು ಪಾರದರ್ಶಕ, ಮುಕ್ತ ಡಿಜಿಟಲ್ ಪರಿಸರದ ಪ್ರೋತ್ಸಾಹಕ್ಕಾಗಿ ಶ್ರಮಿಸಲು ಫ್ರಾನ್ಸ್ ಮತ್ತು ಭಾರತ ಉದ್ದೇಶಿಸಿವೆ.

ಡಿಜಿಟಲ್ ತಂತ್ರಜ್ಞಾನದ ತ್ವರಿತ ಅಭಿವೃದ್ಧಿ ಮತ್ತು ಅದರ ಬಳಕೆಯು ದೇಶದ ಒಳಗೆ ಇರುವ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ದೇಶಗಳ ಸಾರ್ವಭೌಮತ್ವಯ ಖಾತ್ರಿಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆನ್ ಲೈನ್ ಮಾನವ ಹಕ್ಕುಗಳ ಸಂರಕ್ಷಣೆಯ ಗುರಿಯೊಂದಿಗೆ ಅಂತಾರಾಷ್ಟ್ರೀಯ ಸಮುದಾಯದ ಸಹಕಾರಿ, ಸುಸಂಬದ್ಧ, ದೃಢ ಮತ್ತು ನಿಶ್ಚಿತ ಕ್ರಮಗಳೊಂದಿಗೆ ಜೊತೆಗೂಡಿರಬೇಕು ಎಂಬುದನ್ನು ಫ್ರಾನ್ಸ್ ಮತ್ತು ಭಾರತ ಗುರುತಿಸಿದೆ.

 

ಸೌಬರ್ ಸುರಕ್ಷತೆಯ ರಂಗದಲ್ಲಿನ ಸಹಕಾರ

 

ಫ್ರಾನ್ಸ್ ಮತ್ತು ಭಾರತ  ಪ್ಯಾರಿಸ್ ನಲ್ಲಿ 2019ರ ಜೂನ್ 20ರಂದು ನಡೆದ ತಮ್ಮ ಸೈಬರ್ ಮಾತುಕತೆಯ ಮೂರನೇ ಆವೃತ್ತಿಯ ಅಂಶಗಳ ಮಹತ್ವವನ್ನು ಗುರುತಿಸುತ್ತವೆ ಮತ್ತು ಅದರ ಅಂತ್ಯದಲ್ಲಿ ಅಳವಡಿಸಿಕೊಳ್ಳಲಾದ ಜಂಟಿ ಹೇಳಿಕೆಯನ್ನು ಸ್ವಾಗತಿಸುತ್ತವೆ.

 

ಈ ನಿಟ್ಟಿನಲ್ಲಿ, ಅವರು ಹಿಂದಿನ ಯುಎನ್ ಜಿಜಿಇ ವರದಿಯಲ್ಲಿ ಅಳವಡಿಸಿಕೊಳ್ಳಲಾಗಿರುವ ಸೈಬರ್ ಪ್ರದೇಶಕ್ಕೆ ಸಂಬಂಧಿಸಿದಂತೆ ಜವಾಬ್ದಾರಿಯುತ ರಾಷ್ಟ್ರದ ನಡೆವಳಿಕೆಯ ನಿಯಮಾವಳಿಗಳನ್ನು ಮತ್ತು ಅಂತಾರಾಷ್ಟ್ರೀಯ ಕಾನೂನಿನ ಆನ್ವಯಿಕಗಳ ಅನುಷ್ಠಾನಗೊಳಿಸುವ ಕುರಿತಂತೆ ಪ್ರಸ್ತುತ ವಿವಿಧ ವೇದಿಕೆಗಳಲ್ಲಿ ನಡೆಯುತ್ತಿರುವ ನಿರ್ದಿಷ್ಟ ಮಾತುಕತೆಗಳಿಗೆ ಬೆಂಬಲವಾಗಿ ತಮ್ಮ ಸಹಯೋಗವನ್ನು ಬಲಪಡಿಸಲು ಇಚ್ಛಿಸಿದ್ದಾರೆ.

 

ಭಾರತ ಮತ್ತು ಫ್ರಾನ್ಸ್ ಎರಡೂ ದುರುದ್ದೇಶಪೂರಿತವಾದ ಚಟುವಟಿಕೆಗಳನ್ನು ತಡೆಯಲು, ತತ್ ಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲು, ಅವುಗಳ ಪರಿಣಾಮವನ್ನು ತಗ್ಗಿಸಲು ಮತ್ತು ಅದರ ಕಾರಣಗಳನ್ನು ಗುರುತಿಸಲು  ತಮ್ಮ ಸೈಬರ್ ಸುರಕ್ಷತಾ ಸಂಸ್ಥೆಗಳ ನಡುವೆ ಮಾಹಿತಿ ಹಂಚಿಕೊಳ್ಳುವ ಮೂಲಕ ತಮ್ಮ ಸಹಕಾರವನ್ನು ಪುನರ್ ಜಾರಿ ಮಾಡುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿವೆ.

ಡಿಜಿಟಲ್ ಪ್ರಕ್ರಿಯೆಗಳು, ಉತ್ಪನ್ನಗಳು ಮತ್ತು ಸೇವೆಗಳ ಸುರಕ್ಷತೆಯನ್ನು ಬಲಪಡಿಸುವ ಅಗತ್ಯವನ್ನು ಗುರುತಿಸಿರುವ ಫ್ರಾನ್ಸ್ ಮತ್ತು ಭಾರತ, ಡಿಜಿಟಲ್ ಉತ್ಪನ್ನಗಳ ಪ್ರಮಾಣೀಕರಣ ಮತ್ತು ಪರೀಕ್ಷೆ ಕುರಿತಂತೆ ಮತ್ತು  ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ಆರ್ಥಿಕ ಮಾಹಿತಿ ಮೂಲಸೌಕರ್ಯಗಳ ರಕ್ಷಣೆ ಮತ್ತು ಪರೀಕ್ಷೆ ಮತ್ತು ಪ್ರಮಾಣೀಕರಣದ ಬಗ್ಗೆ ಉತ್ತಮ ಅಭ್ಯಾಸಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಕಾನೂನು ಮತ್ತು ನಿಯಂತ್ರಣ ಚೌಕಟ್ಟು ಬಲಪಡಿಸಲು ಉದ್ದೇಶಿಸಿವೆ. ಈ ನಿಟ್ಟಿನಲ್ಲಿ, ಫ್ರಾನ್ಸ್ ಮತ್ತು ಭಾರತ 5ಜಿ ತಂತ್ರಜ್ಞಾನ ನಿಯೋಜನೆಗೆ ಸಂಬಂಧಿಸಿದ ಅಪಾಯಗಳ ವಿಚಾರದಲ್ಲಿ ಮತ್ತು ಅವುಗಳನ್ನು ನಿಭಾಯಿಸಲು ತಾಂತ್ರಿಕ ಪರಿಹಾರ ಅಳವಡಿಸಿಕೊಳ್ಳುವಲ್ಲಿ ಒಗ್ಗೂಡಿ ಶ್ರಮಿಸಲು ಇಚ್ಛಿಸಿವೆ.

 

ತಾವಿಬ್ಬರೂ ಪಕ್ಷಕಾರರಾಗಿರುವ ವಾಸ್ಸೆನಾರ್ ವ್ಯವಸ್ಥೆ ಅಡಿಯಲ್ಲಿ ಸಂಬಂಧಿತ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸೈಬರ್ ಪ್ರದೇಶದ ದುರ್ಬಳಕೆಯ ಸಾಧನಗಳು ಮತ್ತು ರೂಢಿಗಳ ಪ್ರಸರಣದಿಂದ ಎದುರಾಗುತ್ತಿರುವ ಸಮಸ್ಯೆಗಳನ್ನೂ ಫ್ರಾನ್ಸ್ ಮತ್ತು ಭಾರತ ಮನಗಂಡಿವೆ.  ಈ ನಿಟ್ಟಿನಲ್ಲಿ, ಫ್ರಾನ್ಸ್ ಮತ್ತು ಭಾರತ ತಮ್ಮ ತಮ್ಮ ಕಾನೂನಾತ್ಮಕ ಮತ್ತು ನಿಯಂತ್ರಣ ಚೌಕಟ್ಟುಗಳನ್ನು ಅದರಲ್ಲೂ ಆರ್ಥಿಕ ಮಾಹಿತಿ ಮೂಲಸೌಕರ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹಂಚಿಕೊಳ್ಳಲು ಇಚ್ಛಿಸಿವೆ. 

ಸೈಬರ್ ಭದ್ರತೆಗೆ ಅದರಲ್ಲೂ ರಾಷ್ಟ್ರೀಯ ಭದ್ರತೆಯ ಮೇಲೆ ಪ್ರಭಾವ ಬೀರುವ ಆರ್ಥಿಕ ಮಾಹಿತಿ ಮೂಲಸೌಕರ್ಯಕ್ಕೆ ಎದುರಾಗುವ ಅಪಾಯಗಳನ್ನು ಎದುರಿಸಲು ಎಲ್ಲ ರಾಷ್ಟ್ರಗಳೊಂದಿಗೆ ಆಪ್ತ ಸಹಕಾರದ ಮಹತ್ವವನ್ನು ಭಾರತ ಮತ್ತು ಫ್ರಾನ್ಸ್ ಒತ್ತಿ ಹೇಳಿವೆ.

 

ಸೈಬರ್ ಅಪರಾಧದ ವಿರುದ್ಧದ ಹೋರಾಟಕ್ಕೆ ಸಹಕಾರ

ಸೈಬರ್ ಅಪರಾಧ ಅಂತಾರಾಷ್ಟ್ರೀಯ ಅಪರಾಧವಾಗಿದ್ದು, ಸಮರ್ಥವಾಗಿ ಅಪರಾಧಿಗಳನ್ನು ನ್ಯಾಯದ ಕಟಕಟೆಗೆ ತರಲು ಹೆಚ್ಚಿನ  ಅಂತಾರಾಷ್ಟ್ರೀಯ ಸಹಕಾರ ಅಗತ್ಯ ಎಂಬುದನ್ನು ಫ್ರಾನ್ಸ್ ಮತ್ತು ಭಾರತ ಮನಗಂಡಿವೆ. ಹೀಗಾಗಿ ಈ ಕ್ಷೇತ್ರದಲ್ಲಿ ಸಹಕಾರ ಬಲಪಡಿಸಲು ಅವು ಯೋಜಿಸಿವೆ. ಇದಕ್ಕಾಗಿ ಅಪರಾಧಿಗಳ ಪತ್ತೆ ಅದರಲ್ಲೂ ಮಾಲ್ ವೇರ್ ಅಭಿವೃದ್ಧಿಪಡಿಸುವವರು, ಹೋಸ್ಟರ್ ಗಳು/ಹೋಸ್ಟಿಂಗ್ ವೇದಿಕೆಗಳ ಪೂರೈಕೆದಾರರು ಅಥವಾ ಪ್ರಸಾರ ಮಾಡುವವರೂ ಸೇರಿದಂತೆ ಅಪರಾಧಿಗಳ ಮಾಹಿತಿಯ ವಿನಿಮಯ, ಸಾಕ್ಷಿ ಸಂಗ್ರಹಣೆಗೆ ಯೋಜಿಸಿವೆ. ಎಲೆಕ್ಟ್ರಾನಿಕ್ ಪಾವತಿ ವಿಧಾನಗಳ ಸುರಕ್ಷತೆಯ ಬಗ್ಗೆ ಎರಡೂ ದೇಶಗಳು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದು, ಎಟಿಎಂ ನಗದು ಕಳವು ಸೇರಿದಂತೆ ಆನ್‌ಲೈನ್ ಹಣಕಾಸು ವಂಚನೆಗಳ ವಿರುದ್ಧ ಗ್ರಾಹಕರ ರಕ್ಷಣೆಗೆ ತಮ್ಮ ಬದ್ಧತೆಯನ್ನು ದೃಢ ಪಡಿಸಿವೆ. ಅಂತಿಮವಾಗಿ, ಸೈಬರ್ ಅಪರಾಧ ತಡೆಗಟ್ಟಲು ಮಾಹಿತಿ ಹಂಚಿಕೆ ವ್ಯವಸ್ಥೆಯನ್ನು ಪಡೆಯಲು ಸೇವಾ ಪೂರೈಕೆದಾರರು, ಸಾಮಾಜಿಕ ಮಾಧ್ಯಮ ಕಂಪನಿಗಳೊಂದಿಗೆ ಚರ್ಚಿಸಲು ಅವರು ಯೋಜಿಸಿದ್ದಾರೆ. 

 

ಡಿಜಿಟಲ್ ಆಡಳಿತ ಕುರಿತ ಸಹಕಾರ

 

ನಿಯಂತ್ರಣದ ಸವಾಲುಗಳು

 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾನೂನಾತ್ಮಕ, ನ್ಯಾಯಯುತ ಮತ್ತು ಸಮತೋಲಿತ ನಿಲುವುಗಳೊಂದಿಗೆ ಡಿಜಿಟಲ್ ವಲಯದ ಭದ್ರತೆ ಅಭಿವೃದ್ಧಿಗೆ ಬೆಂಬಲವಾಗಿ ತಮ್ಮ ಸಹಯೋಗವನ್ನು ಹೆಚ್ಚಿಸಲು  ಫ್ರಾನ್ಸ್ ಮತ್ತು ಭಾರತ ಇಚ್ಛಿಸಿವೆ. ತಂತ್ರಜ್ಞಾನ ಸಾರ್ವಜನಿಕ ಸರಕುಗಳು, ದತ್ತಾಂಶ ಸಾರ್ವಭೌಮತ್ವ ಮತ್ತು ಮೂಲಭೂತ ಸ್ವಾತಂತ್ರ್ಯಗಳು ಸುರಕ್ಷಿತವಾಗಿ ಉಳಿದಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಚೌಕಟ್ಟನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಫ್ರಾನ್ಸ್ ಮತ್ತು ಭಾರತವು ಮನಗಂಡಿವೆ.

 

ಕೃತಕ ಬುದ್ಧಿಮತ್ತೆಯ ನಿಯಂತ್ರಣ

ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯಿಂದ, ಅದರಲ್ಲೂ ಸುಸ್ಥಿರ ಅಭಿವೃದ್ಧಿ, ಇ-ಆಡಳಿತ, ಸ್ವಾಯತ್ತ ಸಾರಿಗೆ, ಸ್ಮಾರ್ಟ್ ನಗರಗಳು, ಸೈಬರ್ ಭದ್ರತೆ, ಆರೋಗ್ಯ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ನೀಡುವ ಸಾಮರ್ಥ್ಯವನ್ನು ಫ್ರಾನ್ಸ್ ಮತ್ತು ಭಾರತ ಸ್ವಾಗತಿಸುತ್ತದೆ. ನಾಗರಿಕ ಕೇಂದ್ರಿತ ಸೇವೆಗಳ ನಿಟ್ಟಿನಲ್ಲಿ ಕಾನೂನು, ನಿಂಯತ್ರಣ ಮತ್ತು ಸೈಬರ್ ಭದ್ರತೆ ದೃಷ್ಟಿಕೋನದಿಂದ ದತ್ತಾಂಶ ಸಾರ್ವಭೌಮತ್ವಕ್ಕಾಗಿ ಎಐ ನೀತಿಗಳು/ಕಾರ್ಯಕ್ರಮಗಳನ್ನು ಅಭಿವೃದ್ಧಿ ಪಡಿಸಿ ಅನುಷ್ಠಾನಗೊಳಿಸಬೇಕೆಂಬುದನ್ನು ಫ್ರಾನ್ಸ್ ಮತ್ತು ಭಾರತ ಮನಗಂಡಿವೆ. ಪರಿಣತಿ ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಎಐಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ವೃದ್ಧಿಸಲು ಫ್ರಾನ್ಸ್ ಮತ್ತು ಭಾರತ ಬದ್ಧವಾಗಿವೆ.

 

 

ಅಂತಾರಾಷ್ಟ್ರೀಯ ಕಾನೂನಿನ ಅನ್ವಯ ಮನುಕುಲದ ಸೇವೆಯಲ್ಲಿ ಕೃತಕ ಬುದ್ಧಿ ಮತ್ತೆಯ ತ್ವರಿತ ಅಭಿವೃದ್ಧಿಯ ಖಾತ್ರಿಗಾಗಿ ಅಂತಾರಾಷ್ಟ್ರೀಯ, ಕಾನೂನಾತ್ಮಕ ಮತ್ತು ಸೈದ್ಧಾಂತಿಕ ಕಾಪುನಿಧಿ ನಿರ್ಮಿಸುವ ಮಹತ್ವವನ್ನು ಫ್ರಾನ್ಸ್ ಮತ್ತು ಭಾರತ ದೃಢೀಕರಿಸಿವೆ. ಈ ನಿಟ್ಟಿನಲ್ಲಿ ವಿವಿಧ ಬಹುಪಕ್ಷೀಯ ವೇದಿಕೆಗಳಲ್ಲಿ (ಜಿ 7, ಜಿ 20, ಯುಎನ್) ಕಾರ್ಯ ನಿರ್ವಹಿಸಲು ಮತ್ತು ಕೃತಕ ಬುದ್ಧಿ ಮತ್ತೆ ಕುರಿತ ಅಂತಾರಾಷ್ಟ್ರೀಯ ಪ್ಯಾನಲ್ (ಐಪಿಎಐ) ಗಳಲ್ಲಿ  ಭಾಗವಹಿಸುವ ತಮ್ಮ ಬದ್ಧತೆಯನ್ನು ಅವರು ದೃಢಪಡಿಸಿದ್ದಾರೆ.

 

ಆನ್ ಲೈನ್ ನಲ್ಲಿ ದ್ವೇಷಪೂರಿತ ವಿಚಾರಗಳು, ಭಯೋತ್ಪಾದಕ ಮತ್ತು ಹಿಂಸೆ ಮಾಡುವ ವಿಧ್ವಂಸಕ ವಿಚಾರಗಳ ವಿರುದ್ಧ ಹೋರಾಟ, 

 

ಭಯೋತ್ಪಾದಕ ಮತ್ತು ಹಿಂಸಾತ್ಮಕ ಉಗ್ರಗಾಮಿ ವಿಷಯಗಳ ಮತ್ತು ಆನ್‌ಲೈನ್‌ನಲ್ಲಿ ದ್ವೇಷದ ಭಾಷಣಗಳ ಮಿತಗೊಳಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ಫ್ರಾನ್ಸ್ ಮತ್ತು ಭಾರತ ಪುನರುಚ್ಚರಿಸಿದ್ದು, ಕ್ರೈಸ್ಟ್ ಚರ್ಚ್ ಕರೆಯ ಶೃಂಗದಲ್ಲಿ ರೂಪಿಸಲಾದ ತತ್ವಗಳಿಗೆ ತಮ್ಮ ಬೆಂಬಲವನ್ನು ಸ್ಮರಿಸಿದ್ದಾರೆ.

 

ತಿರುಚಿದ ಮಾಹಿತಿ ತಡೆಗಟ್ಟುವಿಕೆ

ತಿರುಚಿದ ಮಾಹಿತಿಯ ತಡೆಗಟ್ಟುವಿಕೆ, ಸುಳ್ಳು ಸುದ್ದಿಗಳ ಹರಡುವಿಕೆ ಮತ್ತು ಆನ್ ಲೈನ್ ಸ್ವಾತಂತ್ರ್ಯದ ಅಭಿವ್ಯಕ್ತಿಯ ಮಹತ್ವದ ಬಗ್ಗೆ ಫ್ರಾನ್ಸ್ ಮತ್ತು ಭಾರತ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿವೆ. ತಿರುಚಿದ ಮಾಹಿತಿ ಮತ್ತು ಸುಳ್ಳು ಸುದ್ದಿಗಳ ಪ್ರಸರಣ ಮತ್ತು ವೈಯಕ್ತಿಕ ದತ್ತಾಂಶದ ಪ್ರೊಫೈಲಿಂಗ್‌ನಿಂದ ಉಂಟಾಗಬಹುದಾದ ಅಪಾಯಗಳನ್ನು ಅವು ಒತ್ತಿ ಹೇಳಿವೆ. ಈ ಭೀತಿ ಅದರಲ್ಲೂ ಸಾಮಾಜಿಕ ಮಾಧ್ಯಮ ತಾಣಗಳ ನಿಯಂತ್ರಣದ ಬಗ್ಗೆ ಅಂತಾರಾಷ್ಟ್ರೀಯ ವಿನಿಮಯಕ್ಕೆ ಫ್ರಾನ್ಸ್  ಮತ್ತು ಭಾರತ ಕರೆ ನೀಡಿವೆ.

 

ವೈಯಕ್ತಿಕ ಮಾಹಿತಿಯ ಸಂರಕ್ಷಣೆ

 

ಫ್ರಾನ್ಸ್ ಮತ್ತು ಭಾರತ ಸುರಕ್ಷಿತವಾದ ಮತ್ತು ಬಳಕೆದಾರರ ದತ್ತಾಂಶ ಸಂರಕ್ಷಣೆಗೆ ಗೌರವ ನೀಡುವಂಥ ನಾವಿನ್ಯಪೂರ್ಣ ಡಿಜಿಟಲ್ ಪರಿಸರವನ್ನು ಅಭಿವೃದ್ಧಿಪಡಿಸಲು ಇಚ್ಛಿಸಿವೆ.  ಇಯು ಸಾಮಾನ್ಯ ದತ್ತಾಂಶ ಸಂರಕ್ಷಣೆ ನಿಯಂತ್ರಣ (ಜಿಡಿಪಿಆರ್) ಮತ್ತು ಈ ಪ್ರದೇಶದಲ್ಲಿ ಸೂಕ್ತ ನಿಯಂತ್ರಣಗಳನ್ನು ಅಳವಡಿಸುವ ಭಾರತದ ಉದ್ದೇಶದ ಅನುಷ್ಠಾನದ ನಿಟ್ಟಿನಲ್ಲಿ ಎರಡೂ ದೇಶಗಳು ಯುರೋಪ್ ಮತ್ತು ಭಾರತದ ದತ್ತಾಂಶ ಸಂರಕ್ಷಣಾ ಚೌಕಟ್ಟುಗಳ ಒಮ್ಮುಖ ಮಾಹಿತಿ ಮತ್ತು ದತ್ತಾಂಶದ ಹರಿವನ್ನು ಸುಗಮಗೊಳಿಸುತ್ತದೆ ಎಂಬುದನ್ನು ಪರಿಗಣಿಸಿವೆ.

 

ಡಿಜಿಟಲ್ ವಿಭಜನೆಯ ತಗ್ಗಿಸುವಿಕೆ 

ನಾಗರಿಕರ ಬದುಕಿನಲ್ಲಿ ತಂತ್ರಜ್ಞಾನದ ಮಹತ್ವ ಮತ್ತು ಪಾತ್ರವನ್ನು ಪರಿಗಣಿಸಿರುವ ಫ್ರಾನ್ಸ್ ಮತ್ತು ಭಾರತ, ಡಿಜಿಟಲ್ ಕಂದಕ ಬೆಸೆಯಲು ಮತ್ತು ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸಲು ತಮ್ಮ ರಾಷ್ಟ್ರೀಯ ನೀತಿಗಳು ಮತ್ತು ಉತ್ತಮ ರೂಢಿಗಳನ್ನು ಈ ಸಂಬಂಧ ವಿನಿಮಯ ಮಾಡಿಕೊಳ್ಳುವ ಮೂಲಕ ಡಿಜಿಟಲ್ ಅಳವಡಿಕೆಯನ್ನು ಉತ್ತೇಜಿಸಲು ಇಚ್ಚಿಸಿವೆ. 

 

ಭಾರತ – ಫ್ರೆಂಚ್ ಡಿಜಿಟಲ್ ಸಹಭಾಗಿತ್ವ 

 

ಫ್ರಾನ್ಸ್ ನ ಆರ್ಥಿಕ ಮತ್ತು ಆರ್ಥಿಕತೆಯ ಸಚಿವಾಲಯ ಮತ್ತು ಭಾರತದ ವಿಧ್ಯುನ್ಮಾನ ಮತ್ತು ಐಟಿ ಸಚಿವಾಲಯ (ಎಂ.ಇ.ಐ.ಟಿ.ವೈ)ಗಳು ಭಾರತ ಫ್ರೆಂಚ್ ಡಿಜಿಟಲ್ ಸಹಭಾಗಿತ್ವವನ್ನು ಸೂಕ್ತ ವ್ಯವಸ್ಥೆಯ ಮೂಲಕ ಅನುಷ್ಠಾನಗೊಳಿಸುವ ಸಹಯೋಗಕ್ಕಾಗಿ ನೋಡಲ್ ಬಿಂದುಗಳಾಗಿವೆ.

 

ವಿನಿಮಯವನ್ನು ವ್ಯಾಪಕಗೊಳಿಸಲು ಎರಡೂ ಕಡೆಯವರು ಭೌತಿಕ ಸಭೆ ಮತ್ತು ವಿಡಿಯೋ ಸಂವಾದದ ಮೂಲಕ ಭಾರತ – ಫ್ರಾನ್ಸ ಡಿಜಿಟಲ್ ಪಾಲುದಾರಿಕೆ ಕುರಿತಂತೆ ನಿಯಮಿತವಾಗಿ ಸಮಾಲೋಚನೆ ನಡೆಸಲು ಇಚ್ಛಿಸಿದ್ದಾರೆ.

ಈ ಮಾರ್ಗಸೂಚಿಯಡಿಯಲ್ಲಿ ಸಂಘಟನೆಗಳು ಫ್ರಾನ್ಸ್ ಮತ್ತು ಭಾರತದ ಘಟಕಗಳ ನಡುವಿನ ಇತರ ಬದ್ಧತೆಗಳೊಂದಿಗೆ ಸೂಕ್ತವಾಗಿ ಸಂವಹನ ಮತ್ತು ಸಮನ್ವಯ ಸಾಧಿಸುತ್ತವೆ.

 

1.1. ಆರ್ಥಿಕತೆಯ ವಿನಿಮಯಗಳು

 

ವಾಣಿಜ್ಯ ಮತ್ತು ನಾವಿನ್ಯತೆ

 

ಫ್ರಾನ್ಸ್ ಮತ್ತು ಭಾರತ ತಮ್ಮ ತಮ್ಮ ಮಾರುಕಟ್ಟೆಗಳಲ್ಲಿ ವಿಸ್ತೃತ ಸ್ವರೂಪದಲ್ಲಿ ಕಾರ್ಯ ನಿರ್ವಹಿಸುವುದನ್ನು ಒದಗಿಸುವ ಮೂಲಕ ಡಿಜಿಟಲ್ ವಲಯದಲ್ಲಿ ವಾಣಿಜ್ಯ ಸಹಕಾರ ಹೆಚ್ಚಿಸಲು ಬಯಸುತ್ತವೆ. ಅಲ್ಲದೆ, ಫ್ರೆಂಚ್ ಮತ್ತು ಭಾರತೀಯ ಡಿಜಿಟಲ್ ಕಂಪನಿಗಳು ಜಂಟಿಯಾಗಿ ಮಾರುಕಟ್ಟೆಯ ಅವಕಾಶದ ವ್ಯಾಪ್ತಿಯನ್ನು ಹೊಸ ಮಟ್ಟಕ್ಕೆ ಹೆಚ್ಚಿಸಲು ಮತ್ತು ಅವುಗಳ ಅಭಿವೃದ್ಧಿ ಹೊಂದುತ್ತಿರುವ ಟೆಕ್ ಪರಿಸರ ವ್ಯವಸ್ಥೆಗಳ ನಡುವೆ ಹೆಚ್ಚಿನ ಬಂಧಗಳನ್ನು ಸೃಷ್ಟಿಸಲು ಶ್ರಮಿಸುತ್ತವೆ.

 

ಫ್ರಾನ್ಸ್ ಮತ್ತು ಭಾರತ ಈಗಾಗಲೇ ಬಲವಾದ ಆರ್ಥಿಕ ವಿನಿಮಯಗಳನ್ನು ಅಂದರೆ ಹಲವು ಫ್ರೆಂಚ್ ಕಂಪನಿಗಳು ಭಾರತದ ಡಿಜಿಟಲ್ ಜನಸಂಪರ್ಕದಲ್ಲಿ  ಭಾಗಿಯಾಗಿ ಮಾಡಿರುವ ಅದೇ ರೀತಿ ಮತ್ತು ಭಾರತೀಯ ಕಂಪನಿಗಳು ಫ್ರಾನ್ಸ್ ನಲ್ಲಿ ಕಚೇರಿ ಸ್ಥಾಪಿಸುವ ಮೂಲಕ ಮಾಡಿರುವ ದ್ವಿಪಕ್ಷೀಯ ಹೂಡಿಕೆ ಡಿಜಿಟಲ್ ವಲಯದಲ್ಲಿ ಹಂಚಿಕೊಳ್ಳುತ್ತಿವೆ. 

 

ಫ್ರಾನ್ಸ್ ಮತ್ತು ಭಾರತ ಎರಡೂ ದೇಶಗಳಲ್ಲಿ ಪ್ರಾರಂಭಿಕ ಪರಿಸರ ವ್ಯವಸ್ಥೆಗಳ ತ್ವರಿತ ಒಮ್ಮುಖದ ಮಹತ್ವವನ್ನು ಒತ್ತಿ ಹೇಳುತ್ತವೆ, ಉದ್ಯಮಿಗಳಿಗೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಯೋಜನೆಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವ ಉಪಕ್ರಮಗಳನ್ನು ಸ್ವಾಗತಿಸುತ್ತದೆ, ಅವುಗಳೆಂದರೆ: ಭಾರತ ಫ್ರೆಂಚ್ ಡಿಜಿಟಲ್ ಕಂಪನಿಗಳು ಮತ್ತು ಫ್ರಾನ್ಸ್ ನ ಭಾರತೀಯ ಡಿಜಿಟಲ್ ಕಂಪನಿಗಳು, ಗಮನಾರ್ಹ ಉದ್ಯೋಗವನ್ನು ಸೃಷ್ಟಿಸಿವೆ . ವಿವರಣಾತ್ಮಕ ಉದಾಹರಣೆಗಳೆಂದರೆ:

 

– ಹಿಂದಿನ ಫ್ರೆಂಚ್ ಟೆಕ್ ಟಿಕೆಟ್ ಉಪಕ್ರಮಗಳು 13 ಭಾರತೀಯ ನವೋದ್ಯಮಗಳಿಗೆ ಫ್ರಾನ್ಸ್ ನಲ್ಲಿ ಸ್ಥಾಪನೆಯ ಹಂತದ-ವೇಗವರ್ಧನೆ ಕಾರ್ಯಕ್ರಮವನ್ನು ಅನುಸರಿಸಲು ಅನುವು ಮಾಡಿಕೊಡಲು;

 

– ಇತ್ತೀಚೆಗೆ ಪ್ರಾರಂಭಿಸಲಾದ ಫ್ರೆಂಚ್ ಟೆಕ್ ಬೆಂಗಳೂರು ಭಾರತ ಸಮುದಾಯ ನಮ್ಮ ಎರಡು ತಂತ್ರಜ್ಞಾನ ಪರಿಸರ ವ್ಯವಸ್ಥೆಗಳ ನಡುವೆ ಹೆಚ್ಚಿನ ವಿನಿಮಯವನ್ನು ಸೃಷ್ಟಿಸಲು;

 

– ಭಾರತೀಯ ಉದ್ಯೋಗಿಗಳು, ಸ್ಥಾಪಕರು ಮತ್ತು ಹೂಡಿಕೆದಾರರು ಫ್ರೆಂಚ್ ಟೆಕ್ ಪರಿಸರ ವ್ಯವಸ್ಥೆಯಲ್ಲಿ ಸೇರಲು ಮತ್ತು ಫ್ರಾನ್ಸ್ ಮತ್ತು ಭಾರತದ ನಡುವೆ ಹೊಸ ಬಾಂಧವ್ಯಗಳನ್ನು ಬೆಸೆಯುವ ಪ್ರಕ್ರಿಯೆಯನ್ನು ವೇಗವಾಗಿ ಅನ್ವೇಷಣೆ ಮಾಡುವ ಹೊಚ್ಚ ಹೊಸ ಫ್ರೆಂಚ್ ಟೆಕ್ ವೀಸಾಕ್ಕಾಗಿ;

-ಭಾರತದ ಫ್ರೆಂಚ್ ಟೆಕ್ ಸಮುದಾಯ ಬೆಂಗಳೂರು ಮತ್ತು ಎಂ.ಇಐಟಿವೈ ನವೋದ್ಯಮ ತಾಣಗಳನ್ನು ಭಾರತ ಮತ್ತು ಫ್ರಾನ್ಸ್ ನ ನಡುವಿನ ಹಸಕಾರದ ತಂತ್ರಜ್ಞಾನ ವಾತಾವರಣದ ಸಹಕಾರದ ಸೇತುವೆ ಮಾಡಲು.

 

1.2.ಸಂಶೋಧನೆ, ತರಬೇತಿ ಮತ್ತು ಶಿಕ್ಷಣ

ಸೂಪರ್ ಕಂಪ್ಯೂಟಿಂಗ್, ಕ್ವಾಂಟಮ್ ಕಂಪ್ಯೂಟಿಂಗ್

ಹೆಚ್ಚಿನ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಡಿಜಿಟಲ್ ಕ್ಷೇತ್ರದಲ್ಲಿ ತಮ್ಮ ದ್ವಿಪಕ್ಷೀಯ ಸಹಕಾರದ ನಿರ್ಣಾಯಕ ಭಾಗವಾಗಿದೆ ಎಂಬ ಅಂಶವನ್ನು ಫ್ರಾನ್ಸ್ ಮತ್ತು ಭಾರತ ಒತ್ತಿಹೇಳುತ್ತವೆ. ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಅಭಿಯಾನದ ಚೌಕಟ್ಟಿನೊಳಗೆ ತಮ್ಮ ಸಹಕಾರದ ಪ್ರಗತಿಯನ್ನು ಅವರು ಶ್ಲಾಘಿಸಿದ್ದಾರೆ, ಇದು ಉನ್ನತ ಸಾಮರ್ಥ್ಯದ ಗಣಕ ಸಾಧನಗಳ ಜಂಟಿ ಅಭಿವೃದ್ಧಿಗೆ ಅವಕಾಶ ನೀಡುತ್ತದೆ.

 

ಎರಡೂ ಕಡೆಯವರು, ಮಹಾನದಿ ಕಣಿವೆಯಲ್ಲಿ ನೀರಿನ ಹರಿವಿನ ಅನುಕರಿಸುವಿಕೆಗೆ ಸಮರ್ಪಿತವಾದ  ಉನ್ನತ ಸಾಮರ್ಥ್ಯದ ಕಂಪ್ಯೂಟಿಂಗ್  ಭಾರತ – ಫ್ರೆಂಚ್ ಪ್ರಾಯೋಗಿಕ ಯೋಜನೆಯ ಆರಂಭಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಫ್ರಾನ್ಸ್ ಮತ್ತು ಭಾರತ ಈ ಸಹಕಾರವನ್ನು ಮೂರು ಪ್ರಮುಖ ಕ್ಷೇತ್ರಗಳಲ್ಲಿ ಮತ್ತಷ್ಟು ವಿಸ್ತರಿಸಲು ಮತ್ತು ಆಳಗೊಳಿಸಲು ಇಚ್ಛಿಸಿವೆ:

 

– ಕೃತಕ ಬುದ್ಧಿಮತ್ತೆಗೆ ಹೆಚ್ಚಿನ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಅನ್ವಯಿಸಲಾಗಿದೆ;

 

– ನಿರ್ದಿಷ್ಟ ಪರಿಮಾಣದ ಲೆಕ್ಕಾಚಾರ, ಈ ವಿಷಯದಲ್ಲಿ ಪುಣೆಯಲ್ಲಿ ಕ್ವಾಂಟಮ್ ಲೆಕ್ಕಾಚಾರದಲ್ಲಿ ಇಂಡೋ-ಫ್ರೆಂಚ್ ಔನ್ನತ್ಯ ಕೇಂದ್ರ ರಚನೆಯನ್ನು ಅವರು ಶ್ಲಾಘಿಸುತ್ತಾರೆ;

 

– ಎಕ್ಸಾಸ್ಕೇಲ್ ಲೆಕ್ಕಾಚಾರ.

 

ಎರಡೂ ಪಕ್ಷಕಾರರು ಕೃತಕ ಬುದ್ಧಿ ಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಸ್ಮಾರ್ಟ್ ಉತ್ಪಾದನೆ ಮತ್ತು ವಾಹನಗಳ ಎಲೆಕ್ಟ್ರಾನಿಕ್ ಭಾಗಗಳು ಸೇರಿದಂತೆ ಹೊರ ಹೊಮ್ಮುತ್ತಿರುವ ತಂತ್ರಜ್ಞಾನಳಲ್ಲಿ ಭಾಗಿಯಾಗುವ ವಿಧಾನಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಒಪ್ಪಿದ್ದಾರೆ.

 

 

ಕೃತಕಬುದ್ಧಿಮತ್ತೆ ಉಪಕ್ರಮ 

ಕಂಪ್ಯೂಟರ್ ವಿಜ್ಞಾನದಲ್ಲಿನ ಆಯಾ ಕೋರ್ಸ್‌ಗಳ ಶ್ರೇಷ್ಠತೆ ಮತ್ತು ಅವರ ಗಣಿತಶಾಸ್ತ್ರದ ಶಾಲೆಗಳ ಪ್ರಯೋಜನ ಪಡೆದುಕೊಳ್ಳುವ ಆಶಯದೊಂದಿಗೆ, ಫ್ರಾನ್ಸ್ ಮತ್ತು ಭಾರತವು ಕೃತಕ ಬುದ್ಧಿಮತ್ತೆಗೆ ಮೀಸಲಾಗಿರುವ ಭಾರತ-ಫ್ರೆಂಚ್ ಸಂಶೋಧನೆ ಮತ್ತು ನಾವೀನ್ಯತೆ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಲು ಇಚ್ಛಿಸುತ್ತದೆ.

ಶೈಕ್ಷಣಿಕ ಸಂಸ್ಥೆಗಳು, ಸಚಿವಾಲಯಗಳು ಮತ್ತು ಉಲ್ಲೇಖಿತ ಕಂಪನಿಗಳನ್ನು ಒಟ್ಟುಗೂಡಿಸುವ ಒಕ್ಕೂಟವು ಆರೋಗ್ಯ, ಹವಾಮಾನ ಮತ್ತು ಸಾರಿಗೆ, ಕೃಷಿ, ವಿಪತ್ತು ಸ್ಪಂದನೆ, ಸ್ಮಾರ್ಟ್ ನಗರಗಳು ಮುಂತಾದ ಕ್ಷೇತ್ರಗಳಲ್ಲಿನ ಯೋಜನೆಗಳ ಸುತ್ತ ಫ್ರಾನ್ಸ್ ಮತ್ತು ಭಾರತದ ಕೃತಕ ಬುದ್ಧಿಮತ್ತೆಯಲ್ಲಿನ ಎಲ್ಲಾ ಸಾಮರ್ಥ್ಯಗಳನ್ನು ಅಣಿಗೊಳಿಸುತ್ತದೆ. 

ಈ ಒಕ್ಕೂಟದ ಭಾಗವಾಗಿ ಎರಡೂ ಪಕ್ಷಕಾರರು, ಮೂಲ ಮತ್ತು ಆನ್ವಯಿಕ ಸಂಶೋಧನಾ ಯೋಜನೆಗಳಿಗೆ, ತರಬೇತಿ ಮತ್ತು ಸಂಶೋದನೆಯ ವಿದ್ಯಾರ್ಥಿ ವೇತನಕ್ಕೆ, ತಜ್ಞರ ವಿನಿಮಯ ಮತ್ತು ಸಂಶೋಧನಾ ಯೋಜನೆಗಳು ಹಾಗೂ ಅರಿವುಹೆಚ್ಚಿಸುವ ಕ್ರಮಗಳಿಗಾಗಿ ವಾರ್ಷಿಕ 2 ದಶಲಕ್ಷ € ಒಗ್ಗೂಡಿಸುವೆತ್ತ ಶ್ರಮಿಸಲಿವೆ.

ಈ ಒಕ್ಕೂಟ ಜ್ಞಾನ ಶೃಂಗದ ಭಾಗವಾಗಿ ವಾರ್ಷಿಕವಾಗಿ ಭೇಟಿಯಾಗಲಿದ್ದು, ಅದರ ಪ್ರಥಮ ಸಭೆ 2019ರ ಅಕ್ಟೋಬರ್ ಲಯಾನ್ ನಲ್ಲಿ ನಡೆಯಲಿದೆ. 

 

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
iPhone exports from India nearly double to $12.1 billion in FY24: Report

Media Coverage

iPhone exports from India nearly double to $12.1 billion in FY24: Report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಎಪ್ರಿಲ್ 2024
April 17, 2024

Holistic Development under the Leadership of PM Modi