ದಕ್ಷತೆ ಮತ್ತು ವ್ಯಾಪ್ತಿ ಪ್ರಮಾಣದಲ್ಲಿ ಯಾರ್ಡ್ ಅಸಿಸ್ಟೆಡ್ ಗ್ರೋತ್ ಕಾರ್ಯಾಚರಣೆಗಾಗಿ ಹಂಚಿಕೆಯ ದೃಷ್ಟಿಕೋನ (VOYAGES)

ಏಪ್ರಿಲ್ 20, 2026 ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೊರಿಯಾ ಗಣರಾಜ್ಯದ (ROK) ಗೌರವಾನ್ವಿತ ಶ್ರೀ ಲೀ ಜೇ ಮ್ಯುಂಗ್ ಅವರ ನಡುವಿನ ಸಭೆಯಲ್ಲಿ, ಹಡಗು ನಿರ್ಮಾಣ, ಸಾಗಣೆ ಮತ್ತು ಕಡಲ ಲಾಜಿಸ್ಟಿಕ್ಸ್‌ನಲ್ಲಿ ಪಾಲುದಾರಿಕೆಗಾಗಿ ತಮ್ಮ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳ ನಡುವಿನ ಪರಸ್ಪರ ಪ್ರಯೋಜನಕಾರಿ ಸಹಕಾರದ ಕುರಿತು ಎರಡೂ ಕಡೆಯವರು ಫಲಪ್ರದ  ಮತ್ತು ಆಳವಾದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಭಾರತ ಮತ್ತು ಆರ್.ಒ.ಕೆ. (ROK) ಎರಡೂ ಶ್ರೀಮಂತ ಕಡಲ ಸಂಪ್ರದಾಯಗಳನ್ನು ಹೊಂದಿರುವ ರಾಷ್ಟ್ರಗಳಾಗಿವೆ ಮತ್ತು ಕಡಲ ಕೈಗಾರಿಕೆಗಳ ಕ್ಷೇತ್ರದಲ್ಲಿ ವ್ಯಾಪಕವಾದ ಸಾಮಾನ್ಯ ಸಮಾನ ಆಸಕ್ತಿಗಳು ಮತ್ತು ಪೂರಕ ಸಾಮರ್ಥ್ಯಗಳನ್ನು ಹಂಚಿಕೊಂಡಿವೆ. ಭಾರತದ ತ್ವರಿತ ಆರ್ಥಿಕ ಬೆಳವಣಿಗೆ ಮತ್ತು ಅದರ ಆರ್ಥಿಕತೆಯ ಅಂತಾರಾಷ್ಟ್ರೀಕರಣದೊಂದಿಗೆ, ಕಡಲ ವಲಯವು ಭಾರತದ ಭದ್ರತೆ ಮತ್ತು ಸಮೃದ್ಧಿಗೆ ಅತ್ಯಂತ ನಿರ್ಣಾಯಕವಾಗಿದೆ.

2047ರ ಸಾಗರ ಅಮೃತ್ ಕಾಲ ದೃಷ್ಟಿಕೋನದ ಅಡಿಯಲ್ಲಿ ಭಾರತದ ಕಡಲ ಮಹತ್ವಾಕಾಂಕ್ಷೆಗಳು ಪ್ರಮುಖ ಹಡಗು ನಿರ್ಮಾಣ ಮತ್ತು ಕಡಲ ಸಾಮರ್ಥ್ಯಗಳನ್ನು ಹೊಂದಿರುವ ಸ್ನೇಹಪರ ರಾಷ್ಟ್ರವಾದ ಆರ್.ಒ.ಕೆ.ಯೊಂದಿಗೆ ದೀರ್ಘಕಾಲೀನ ಸಹಯೋಗಕ್ಕೆ ಗಣನೀಯ ಅವಕಾಶಗಳನ್ನು ಸೃಷ್ಟಿಸಿವೆ ಎಂದು ಎರಡೂ ಕಡೆಯವರು ಒಪ್ಪಿಕೊಂಡರು. ಹಡಗು ನಿರ್ಮಾಣ, ಬಂದರು ಅಭಿವೃದ್ಧಿ ಮತ್ತು ಕಡಲ ಲಾಜಿಸ್ಟಿಕ್ಸ್‌ನಲ್ಲಿ ಸಹಕಾರವು ಭಾರತ- ಆರ್.ಒ.ಕೆ. ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಎರಡೂ ರಾಷ್ಟ್ರಗಳಿಗೆ ಪ್ರಾಯೋಗಿಕ ಪ್ರಯೋಜನಗಳು ಮತ್ತು ಆರ್ಥಿಕ ಮೌಲ್ಯದ ಕಡೆಗೆ ನಿರ್ದೇಶಿಸಬಹುದು, ಅದೇ ಸಮಯದಲ್ಲಿ ಅವರ ಜನರಲ್ಲಿ ಆಳವಾದ ತಿಳುವಳಿಕೆ ಮತ್ತು ಪಾಲುದಾರಿಕೆಯನ್ನು ರೂಪಿಸಬಹುದು.

ದೇಶದಲ್ಲಿ ದೊಡ್ಡ ಪ್ರಮಾಣದ ಹೊಸ ಗ್ರೀನ್‌ಫೀಲ್ಡ್ ಹಡಗು ನಿರ್ಮಾಣ ಕ್ಲಸ್ಟರ್‌ಗಳನ್ನು ಸ್ಥಾಪಿಸುವ ಅವಕಾಶಗಳು ಮತ್ತು ಭಾರತ ಸರ್ಕಾರದ ಹಡಗು ನಿರ್ಮಾಣ ಅಭಿವೃದ್ಧಿ ಯೋಜನೆಯಡಿಯಲ್ಲಿ ಲಭ್ಯವಿರುವ ಪ್ರೋತ್ಸಾಹಕಗಳು ಹಾಗೂ ಸಂಬಂಧಿತ ರಾಜ್ಯ ಸರ್ಕಾರಗಳು ಮತ್ತು ಭಾರತೀಯ ಹಣಕಾಸು ಸಂಸ್ಥೆಗಳು ಒದಗಿಸುವ ಪ್ರೋತ್ಸಾಹಕಗಳ ಬಗ್ಗೆ ಭಾರತೀಯ ಕಡೆಯವರು ಆರ್.ಒ.ಕೆ. ಕಡೆಯವರಿಗೆ ವಿವರಿಸಿದರು. ವಿನ್ಯಾಸ, ಉತ್ಪಾದನಾ ಎಂಜಿನಿಯರಿಂಗ್, ಆಧುನಿಕ ಉತ್ಪಾದನೆ, ಗುಣಮಟ್ಟ ಮತ್ತು ಸುರಕ್ಷತಾ ಚೌಕಟ್ಟುಗಳು ಹಾಗು  ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಆರ್.ಒ.ಕೆ. ಯ ಪ್ರಮುಖ ಹಡಗು ನಿರ್ಮಾಣಕಾರರನ್ನು ಈ ಕ್ಲಸ್ಟರ್‌ಗಳಿಗೆ ತಾಂತ್ರಿಕ ಮತ್ತು ಕಾರ್ಯತಂತ್ರದ ಪ್ರಮುಖ ಚಾಲಕರಾಗಲು  ಭಾರತದ ಕಡೆಯವರು ಆಹ್ವಾನಿಸಿದರು. ವ್ಯಾಪಾರ ವಲಯದ ಭಾಗವಹಿಸುವಿಕೆಯ ಆಧಾರದ ಮೇಲೆ ಸಹಕಾರದ ಪ್ರಗತಿಯ ನಿರೀಕ್ಷೆಯನ್ನು ಆರ್.ಒ.ಕೆ.  ಕಡೆಯವರು ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ, ಕೊರಿಯನ್ ಕೈಗಾರಿಕೆಗಳು ಮತ್ತು ಭಾರತದ ನಡುವಿನ ಸಹಯೋಗವನ್ನು ಎರಡೂ ಕಡೆಯವರು ಸಕಾರಾತ್ಮಕವಾಗಿ ಗಮನಿಸಿದರು, ಉದಾಹರಣೆಗೆ ಕೊರಿಯನ್ ಹಡಗು ನಿರ್ಮಾಣ ಸಂಸ್ಥೆ ಎಚ್.ಡಿ. ಕೊರಿಯಾ ಹಡಗು ನಿರ್ಮಾಣ ಮತ್ತು ಸಾಗರೋತ್ತರ ಇಂಜಿನಿಯರಿಂಗ್ ಕಂಪೆನಿ ಲಿಮಿಟೆಡ್ ( HD Korea Shipbuilding & Offshore Engineering Co., Ltd. -HD KSOE), ಗುರುತಿಸಲ್ಪಟ್ಟ ಕ್ಲಸ್ಟರ್ ಡೆವಲಪರ್ ಮತ್ತು ಫೆಸಿಲಿಟೇಟರ್ ಆಗಿದ್ದು ಮತ್ತು ದಕ್ಷಿಣ ಭಾರತದಲ್ಲಿ ದೊಡ್ಡ ಗ್ರೀನ್‌ಫೀಲ್ಡ್ ಶಿಪ್‌ಯಾರ್ಡ್‌ನ ಜಂಟಿ ಅಭಿವೃದ್ಧಿ, ಹಣಕಾಸು, ಅನುಷ್ಠಾನ, ಕಾರ್ಯಾಚರಣೆಗಾಗಿ ಬಂಡವಾಳ ಪೂರೈಕೆದಾರ ಸಂಸ್ಥೆಯಾದ ಮೆರಿಟೈಮ್ ಡೆವಲಪ್ಮೆಂಟ್ ಫಂಡ್ (Maritime Development Fund -MDF) ನಡುವಿನ ಬದ್ಧತೆಯಿಲ್ಲದ ತಿಳುವಳಿಕಾ ಒಡಂಬಡಿಕೆಯನ್ನು ಪೂರ್ಣಗೊಳಿಸುವುದಕ್ಕೆ ಉಭಯ ಕಡೆಯವರೂ ಧನಾತ್ಮಕವಾಗಿ ಪ್ರತಿಕ್ರಿಯಿಸಿದರು. ಯೋಜನೆಯು ಬೇಗ  ಅನುಷ್ಠಾನಗೊಳ್ಳುವ ಆಶಯವನ್ನು  ಅವರು ವ್ಯಕ್ತಪಡಿಸಿದರು..

2025 ರ ಇಂಡಿಯಾ ಮ್ಯಾರಿಟೈಮ್ ವೀಕ್ ಸಮಯದಲ್ಲಿ ಒಟ್ಟು ರೂ. 2.2 ಲಕ್ಷ ಕೋಟಿ (~ USD 25 ಬಿಲಿಯನ್) ಮೌಲ್ಯದೊಂದಿಗೆ ಭಾರತದಲ್ಲಿರುವ ಸಾರ್ವಜನಿಕ ಸಂಸ್ಥೆಗಳಿಂದ ಮುಂಗಾಣ್ಕೆಯ ಭವಿಷ್ಯಕ್ಕಾಗಿ 400+ ಹಡಗುಗಳನ್ನು  ಹೊಂದುವ ಯೋಜನೆಯನ್ನು ಭಾರತ ಘೋಷಿಸಿದೆ. ಸ್ಥಳೀಯ ಉತ್ಪಾದನೆಗೆ ಭಾರತ ಸರ್ಕಾರದ ಉತ್ಪಾದನೆ ಆಧಾರಿತ ಆರ್ಥಿಕ ಬೆಂಬಲವನ್ನು ಗಮನಿಸಿದ ಎರಡೂ ಕಡೆಯವರು, ಈ ಬೇಡಿಕೆಯನ್ನು ದ್ವಿಪಕ್ಷೀಯ ಪಾಲುದಾರಿಕೆಗಳಾಗಿ ಪರಿವರ್ತಿಸಲು ಪರಿಣಾಮಕಾರಿ ಸಹಕಾರ ಕಾರ್ಯವಿಧಾನವನ್ನು ಸ್ಥಾಪಿಸಲು ಭಾರತ ಮತ್ತು ಆರ್.ಒ.ಕೆ.ಗಳ  ಸಂಬಂಧಿತ ಕೈಗಾರಿಕೆಗಳ ಸಹಕಾರವನ್ನು ಬೆಂಬಲಿಸಿದರು, ಇದು ಸುಸ್ಥಿರ ಮತ್ತು ಸ್ಥಿತಿಸ್ಥಾಪಕತ್ವದ ಹಡಗು ನಿರ್ಮಾಣ ಉದ್ಯಮವನ್ನು ಬೆಳೆಸುತ್ತದೆ.

ಬ್ರೌನ್‌ಫೀಲ್ಡ್ (ಕೆಲವು ಮೂಲಸೌಕರ್ಯಗಳು ಇದ್ದು ಕೆಲ ಮೂಲಸೌಕರ್ಯಗಳಿಗೆ ಕೊರತೆ ಇರುವ) ಸಾಮರ್ಥ್ಯ ವಿಸ್ತರಣೆಯನ್ನು ಕೈಗೊಳ್ಳುವ ಹಡಗುಕಟ್ಟೆಗಳಿಗೆ ಭಾರತ ಸರ್ಕಾರವು ಒದಗಿಸಿದ ಆರ್ಥಿಕ ಸಹಾಯವನ್ನು ಗುರುತಿಸಿ, ದೊಡ್ಡ ಮತ್ತು ವಿಶೇಷ ಹಡಗುಗಳನ್ನು ನಿರ್ಮಿಸಲು ಹೊಸ ಡ್ರೈ ಡಾಕ್ ಅನ್ನು ಬೆಂಬಲಿಸಲು ದಕ್ಷಿಣ ಭಾರತದಲ್ಲಿ ನಿರ್ಮಿಸಲಾಗುತ್ತಿರುವ ಬ್ಲಾಕ್ ಫ್ಯಾಬ್ರಿಕೇಶನ್ ಸೌಲಭ್ಯ ಸೇರಿದಂತೆ ಅಸ್ತಿತ್ವದಲ್ಲಿರುವ ಭಾರತೀಯ ಹಡಗುಕಟ್ಟೆಗಳನ್ನು ನವೀಕರಿಸಲು ಭಾರತೀಯ ಮತ್ತು ಆರ್.ಒ.ಕೆ. ವ್ಯಾಪಾರೋದ್ಯಮಗಳ  ನಡುವಿನ ಸಹಯೋಗವನ್ನು ಎರಡೂ ಕಡೆಯವರು ಬೆಂಬಲಿಸಿದರು.

ಭಾರತೀಯ ಹಡಗು ನಿರ್ಮಾಣಕ್ಕಾಗಿ ಭಾರತ ಸರ್ಕಾರದಿಂದ ನೀತಿ ಮತ್ತು ಹಣಕಾಸಿನ ಬೆಂಬಲವು ಹಡಗು ನಿರ್ಮಾಣ ಮತ್ತು ಪೂರಕ ಕೈಗಾರಿಕೆಗಳಲ್ಲಿ ಬಳಸುವ ಘಟಕಗಳಿಗೆ ಹೆಚ್ಚುವರಿ ಬೇಡಿಕೆಯನ್ನು ಉಂಟುಮಾಡುತ್ತದೆ, ವಿಶೇಷವಾಗಿ  ಕೊರಿಯನ್ ಹಡಗು ನಿರ್ಮಾಣ ಘಟಕಗಳ  ತಯಾರಕರಿಗೆ ಸ್ಥಳೀಯ ಉತ್ಪಾದನೆಯ ಮೂಲಕ ತಮ್ಮ ವ್ಯವಹಾರವನ್ನು ವಿಸ್ತರಿಸಲು ಆಕರ್ಷಕ ಮಾರುಕಟ್ಟೆಯನ್ನು ಒದಗಿಸುತ್ತದೆ ಎಂದು ಎರಡೂ ಕಡೆಯವರು ನಂಬುತ್ತಾರೆ. ಈ ನಿಟ್ಟಿನಲ್ಲಿ, ಮುಂಬೈನಲ್ಲಿ ಕೊರಿಯಾ ಸಾಗರ ಸಲಕರಣೆ ಸಂಘದ (ಕೊಮಿಯಾ-KOMEA) ಶಾಖೆಯನ್ನು ತೆರೆಯುವುದನ್ನು ಮತ್ತು ಸಂಬಂಧಿತ ಸಹಕಾರಕ್ಕಾಗಿ ಕೊರಿಯಾ ಸಾಗರ ಸಲಕರಣೆ ಸಂಶೋಧನಾ ಸಂಸ್ಥೆಯ (ಕೊಮೇರಿ-KOMERI) ಆಸಕ್ತಿಯನ್ನು ಅವರು ಸ್ವಾಗತಿಸಿದರು. ಭಾರತೀಯ ಹಡಗು ನಿರ್ಮಾಣದ ಬೆಳವಣಿಗೆಯನ್ನು ಬೆಂಬಲಿಸಲು ಎರಡೂ ದೇಶಗಳ ಸಂಬಂಧಿತ ಸಂಸ್ಥೆಗಳು ಮತ್ತು ಉದ್ಯಮಗಳ ನಡುವೆ ಸಹಕಾರವನ್ನು ಹೆಚ್ಚಿಸಲು ಅವರು ಒಪ್ಪಿಕೊಂಡರು.

ಭಾರತದ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯ (ಎಂ.ಒ.ಪಿ.ಎಸ್.ಡಬ್ಲ್ಯು.-MoPSW) ಸಹಭಾಗಿತ್ವದಲ್ಲಿ ಕೊರಿಯಾ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (KOICA) ಜಾರಿಗೆ ತರಲಿರುವ ಯೋಜನೆಯ ಮೂಲಕ ಭಾರತದಲ್ಲಿ ಹಡಗು ನಿರ್ಮಾಣ ವಲಯದಲ್ಲಿ ಕೌಶಲ್ಯ ತರಬೇತಿಗೆ ಸಹಕರಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಈ ಯೋಜನೆಯು ಎರಡೂ ದೇಶಗಳ ನಡುವಿನ ಅಭಿವೃದ್ಧಿ ಸಹಕಾರ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಭಾರತದ ಹಡಗು ನಿರ್ಮಾಣ ಗುರಿಗಳಿಗೆ ಅಗತ್ಯವಾದ ಸಾಮರ್ಥ್ಯ ವೃದ್ಧಿಗೆ ಕೊಡುಗೆ ನೀಡುತ್ತದೆ ಎಂಬುದನ್ನು  ಅವರು ಗಮನಿಸಿದರು.

ಮಾಲೀಕತ್ವಕ್ಕೆ  ಸಂಬಂಧಿಸಿದ ಉದಾರವಾದಿ ವ್ಯವಸ್ಥೆಗಳು ಮತ್ತು ಲಭ್ಯವಿರುವ ಆರ್ಥಿಕ ಪ್ರೋತ್ಸಾಹಕಗಳಿಂದ ಪ್ರಯೋಜನ ಪಡೆಯುವ ಸಲುವಾಗಿ, ಭಾರತದಲ್ಲಿ ಹಡಗುಗಳನ್ನು ಗುರುತಿಸಲು (ಫ್ಲ್ಯಾಗ್ ಮಾಡಲು)  ಭಾರತದ ಗಿಫ್ಟ್ ಐ.ಎಫ್.ಎಸ್.ಸಿ.ಎ. (GIFT IFSCA)  ಮತ್ತು ಇ (E) -ಸಮುದ್ರವನ್ನು ಬಳಸುವಂತೆ ಭಾರತದ ಕಡೆಯವರು ಕೊರಿಯಾದ ಹಡಗು ಮಾಲೀಕರನ್ನು ಪ್ರೋತ್ಸಾಹಿಸಿದರು.

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ನಾವಿಕರ ಗುಂಪು (ಸುಮಾರು 320,000 + ಮಹಿಳಾ ನಾವಿಕರ ಬಲವಾದ ಬೆಳವಣಿಗೆ) ಕೊರಿಯನ್ ಹಡಗು ಮಾಲೀಕರು ಕೊರಿಯನ್ ಹಡಗುಗಳಲ್ಲಿ ಕಾರ್ಯಾಚರಣೆಗಳನ್ನು ಬೆಂಬಲಿಸಲು ಮಾನವಶಕ್ತಿಯನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಗಮನಿಸಲಾಯಿತು.

ಮೂಲಸೌಕರ್ಯ ಅಭಿವೃದ್ಧಿ, ಜ್ಞಾನ ಹಂಚಿಕೆ ಇತ್ಯಾದಿಗಳಲ್ಲಿ ಸಹಯೋಗವನ್ನು ಒಳಗೊಂಡಿರುವ ಬಂದರು ಅಭಿವೃದ್ಧಿಗಾಗಿ ಸಹಕಾರಕ್ಕಾಗಿ ಭಾರತದ ಎಂ.ಒ.ಪಿ.ಎಸ್.ಡಬ್ಯು. (MoPSW)  ಮತ್ತು ಆರ್.ಒ.ಕೆ.(ROK ) ಯ ಸಾಗರ ಮತ್ತು ಮೀನುಗಾರಿಕೆ ಸಚಿವಾಲಯದ ನಡುವೆ ಒಂದು ತಿಳುವಳಿಕಾ ಒಡಂಬಡಿಕೆಗೆ  ಸಹಿ ಹಾಕುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು. ಇದು ಮುಂದಿನ 5 ವರ್ಷಗಳಲ್ಲಿ ಅಂದಾಜು 13.3 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಭಾರತದ ಬಲವಾದ ಪಿ.ಪಿ.ಪಿ. ಯಾಂತ್ರೀಕರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೊರಿಯನ್ ಬಂದರು ಅಭಿವರ್ಧಕರು ಮತ್ತು ಟರ್ಮಿನಲ್ ನಿರ್ವಾಹಕರಿಗೆ ಅವಕಾಶಗಳನ್ನು ತೆರೆಯುತ್ತದೆ, ಇದರಲ್ಲಿ 23 ಮಿಲಿಯನ್ ಟಿ.ಇ.ಯು. ವಾಧ್ವಾನ್ ಕಂಟೇನರ್ ಬಂದರು (ಮಹಾರಾಷ್ಟ್ರ), ಬಹುದಾ (ಒಡಿಶಾ) ದಲ್ಲಿ 150 ಎಂ.ಟಿ.ಪಿ.ಎ. ಬಹುಉದ್ದೇಶಿತ  ಟರ್ಮಿನಲ್, 135 ಎಂ.ಟಿ.ಪಿ.ಎ ದೀನ್‌ದಯಾಳ್ ಬಂದರಿನ (ಗುಜರಾತ್) ಆಧುನಿಕ ಟರ್ಮಿನಲ್ ಸೇರಿವೆ.

ಭಾರತದಲ್ಲಿ ಮುಂದಿನ ಪೀಳಿಗೆಯ ಸಾಂಪ್ರದಾಯಿಕ ಮತ್ತು ಸ್ವಾಯತ್ತ ಕಡಲ ಮತ್ತು ಬಂದರು ಕ್ರೇನ್‌ಗಳನ್ನು ಜಂಟಿಯಾಗಿ ವಿನ್ಯಾಸಗೊಳಿಸಲು, ತಯಾರಿಸಲು ಮತ್ತು ಬೆಂಬಲಿಸಲು ಭಾರತದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್, ಎಚ್.ಡಿ. ಕೊರಿಯಾ ಶಿಪ್‌ಬಿಲ್ಡಿಂಗ್ ಮತ್ತು ಆಫ್‌ಶೋರ್ ಎಂಜಿನಿಯರಿಂಗ್ ಕಂಪನಿ, ಲಿಮಿಟೆಡ್ (ಎಚ್.ಡಿ-ಕೆ.ಎಸ್.ಒ.ಇ.-HD KSOE) ಮತ್ತು ಆರ್.ಒ.ಕೆ. (ROK) ಯ ಎಚ್.ಡಿ.ಹುಂಡೈ ಸಂಹೋ ಕಂಪನಿ, ಲಿಮಿಟೆಡ್ ನಡುವೆ ಸಹಿ ಹಾಕಲಾದ ತಿಳುವಳಿಕಾ ಒಡಂಬಡಿಕೆ (MOU) ಯನ್ನು ಎರಡೂ ಕಡೆಯವರು ಸ್ವಾಗತಿಸಿದರು.

ಇಂಡಿಯನ್ ಮ್ಯಾರಿಟೈಮ್ ಯೂನಿವರ್ಸಿಟಿ (IMU) ಮತ್ತು ಕೊರಿಯಾ ಮ್ಯಾರಿಟೈಮ್ ಮತ್ತು ಓಷನ್ ಯೂನಿವರ್ಸಿಟಿ (KMOU) ನಡುವೆ ನಡೆಯುತ್ತಿರುವ ಚರ್ಚೆಗಳನ್ನು ಎರಡೂ ಕಡೆಯವರು ಸಕಾರಾತ್ಮಕವಾಗಿ ಗಮನಿಸಿದರು ಮತ್ತು ನೌಕಾ ವಾಸ್ತುಶಿಲ್ಪ, ಸಾಗರ ಎಂಜಿನಿಯರಿಂಗ್ ಮತ್ತು ಬಂದರು ನಿರ್ವಹಣೆಯಲ್ಲಿ ಜಂಟಿ ಕಾರ್ಯಕ್ರಮಗಳೊಂದಿಗೆ ಕಡಲ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಅಂತಿಮಗೊಳಿಸಲು ಪ್ರೋತ್ಸಾಹಿಸಿದರು; ಹಸಿರು ಹಡಗು ತಂತ್ರಜ್ಞಾನಗಳು, ಸ್ವಾಯತ್ತ ಹಡಗುಗಳು ಮತ್ತು ಕ್ರೇನ್ ಆಟೊಮೇಷನ್‌ನಲ್ಲಿ ಸಹಯೋಗದ ಸಂಶೋಧನೆ ಮತ್ತು ಅಭಿವೃದ್ಧಿ; ಭಾರತೀಯ ಮತ್ತು ಆರ್.ಒ.ಕೆ. ವ್ಯಾಪಾರೋದ್ಯಮಗಳ ಒಳಗೊಳ್ಳುವಿಕೆಯೊಂದಿಗೆ ವಿದ್ಯಾರ್ಥಿ ವಿನಿಮಯ, ಅಧ್ಯಾಪಕರ ಸಹಯೋಗಗಳು ಮತ್ತು ಉದ್ಯಮ-ಸಂಬಂಧಿತ ಯೋಜನೆಗಳಿಗೆ ನಾವೀನ್ಯತೆ ಕೇಂದ್ರಗಳ ಸಹಯೋಗವನ್ನು ಅವರು ಬೆಂಬಲಿಸಿದರು.

ಎರಡೂ ದೇಶಗಳ ಕಡಲ ಪರಂಪರೆಗಳ ಪ್ರಾಚೀನ ಮೂಲವನ್ನು ಎರಡೂ ಕಡೆಯವರು ಹೆಮ್ಮೆಯಿಂದ ನೆನಪಿಸಿಕೊಂಡರು. ಭಾರತದ ಗುಜರಾತ್ ರಾಜ್ಯದ ಲೋಥಾಲ್‌ನಲ್ಲಿ ವಿಶ್ವದ ಅತಿದೊಡ್ಡ ಕಡಲ ಸಂಕೀರ್ಣವಾಗಿ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣವನ್ನು (ಎನ್.ಎಂ.ಎಚ್.ಸಿ.-NMHC) ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಭಾರತೀಯ ಕಡೆಯವರು ಮಾಹಿತಿ ಹಂಚಿಕೊಂಡರು. ಪರಸ್ಪರ ಹಂಚಿಕೆ, ಕಲಾಕೃತಿಗಳು ಮತ್ತು ಮಾಹಿತಿ ವಿನಿಮಯ, ತಾಂತ್ರಿಕ ಬೆಂಬಲ, ಜಂಟಿ ಚಟುವಟಿಕೆಗಳು, ವಿಶ್ವವಿದ್ಯಾಲಯಗಳು, ವಸ್ತು ಸಂಗ್ರಹಾಲಯಗಳು ಮತ್ತು ಸಂಸ್ಥೆಗಳೊಂದಿಗೆ ಸಹಯೋಗವನ್ನು ಸುಗಮಗೊಳಿಸಲು ಕಡಲ ಪರಂಪರೆಯ ಕ್ಷೇತ್ರದಲ್ಲಿ ಸಹಕಾರದ ಕುರಿತು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು.

ಹಡಗು ನಿರ್ಮಾಣ, ಸಾಗಣೆ ಮತ್ತು ಬಂದರು ಕ್ಷೇತ್ರಗಳಲ್ಲಿ ಭಾರತ ಮತ್ತು ಆರ್.ಒ.ಕೆ. ನಡುವಿನ ಸಹಕಾರದಲ್ಲಿ ಆಗಿರುವ ಪ್ರಗತಿಯ ದಿಕ್ಕು ದಿಶೆ ಮತ್ತು ವಿಷಯದ ಬಗ್ಗೆ ಪ್ರಧಾನಮಂತ್ರಿ ಮೋದಿ ಮತ್ತು ಅಧ್ಯಕ್ಷರಾದ ಲೀ ತೃಪ್ತಿ ವ್ಯಕ್ತಪಡಿಸಿದರು. ಮುಂಬರುವ ವರ್ಷಗಳಲ್ಲಿ, ಭಾರತ- ಆರ್.ಒ.ಕೆ. ಪಾಲುದಾರಿಕೆಯು ಎರಡೂ ದೇಶಗಳಿಗೆ ಮತ್ತು ಒಟ್ಟಾರೆಯಾಗಿ ಪ್ರಪಂಚಕ್ಕೆ ಪ್ರಯೋಜನಗಳನ್ನು ನೀಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Rooftop solar cuts household electricity bills by average of 71%: CEEW

Media Coverage

Rooftop solar cuts household electricity bills by average of 71%: CEEW
NM on the go

Nm on the go

Always be the first to hear from the PM. Get the App Now!
...
Prime Minister highlights remarkable momentum in India's digital infrastructure journey
June 05, 2026
PM Lauds AirTrunk’s proposed investment of around Rs. 3 lakh crore to develop 5 GW data centre capacity

Prime Minister Shri Narendra Modi today highlighted that India’s digital infrastructure journey is gathering remarkable momentum. The Prime Minister noted that AirTrunk has announced plans to invest around Rs. 3 lakh crore ($30 billion) in India and develop 5 GW of data centre capacity, observing that this is among the largest proposed investments in the country’s digital infrastructure ecosystem.

Shri Modi stated that such investments will significantly strengthen India’s position as a global hub for cloud computing and AI. The Prime Minister pointed out that these developments will simultaneously generate employment opportunities, support local supply chains, and accelerate innovation-led growth, affirming that the future of the world’s digital economy is increasingly being shaped in India.

The Prime Minister posted on X:

"India’s digital infrastructure journey is gathering remarkable momentum.
AirTrunk has announced plans to invest around Rs. 3 lakh crore ($30 billion) in India, and develop 5 GW of data centre capacity. This is among the largest proposed investments in the country’s digital infrastructure ecosystem.

Such investments will strengthen India’s position as a global hub for cloud computing and AI, while generating employment opportunities, supporting local supply chains and accelerating innovation-led growth.

It is clear that the future of the world’s digital economy is increasingly being shaped in India!"