ಶೇರ್
 
Comments

ನಮ್ಮ ಕೃಷಿಕರನ್ನು ಸಶಕ್ತರನ್ನಾಗಿಸೋಣ

ಹಿಂದೆಂದೂ ಕಂಡರಿಯದ ಅಭೂತಪೂರ್ವ ಹೊಚ್ಚಹೊಸ ಯೋಜನೆಗಳ ಜೊತೆ ಕೃಷಿ ಬಗ್ಗೆ ವಿಶೇಷ ಕಾಳಜಿಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ. ಸರಕಾರ ಕಾರ್ಯಪ್ರವತ್ತಿಸುತ್ತಿದೆ. ಕೃಷಿಕರ ಉತ್ಪಾದನೆ ಅಧಿಕವಾಗಲು, ರೈತರ ಸುರಕ್ಷತೆಯ ಸಂರಕ್ಷಣೆಗಾಗಿ ಮತ್ತು ಕೃಷಿಕರ ಆದಾಯ ಹೆಚ್ಚಾಗಲು ಹಾಗೂ ಅವರುಗಳ ಸಮಗ್ರ ಯೋಗಕ್ಷೇಮ ಉತ್ತಮವಾಗುವ ನಿಟ್ಟಿನಲ್ಲಿ ಹಲವಾರು ಅಭಿವೃದ್ದಿಗಾಗಿ ಉಪಕ್ರಮಗಳನ್ನು ಕಳೆದ ಎರಡು ವರ್ಷಗಳಲ್ಲಿ ಸರಕಾರ ಅನುಷ್ಠಾನಗೊಳಿಸಿದೆ. ಕೃಷಿಕರಿಗೆ ಅವುಗಳ ಉತ್ಪಾದನೆಗಳಿಗೆ ಉತ್ತಮ ಬೆಲೆದೊರಕಲು ವೈಜ್ಞಾನಿಕ ಸಹಾಯದಿಂದ, ಕೃಷಿಬೆಳೆ ವಿಮೆಯಿಂದ ಹಿಡಿದು ಬೆಳೆಯ ಸಾಲ ಸುಲಭದಲ್ಲಿ ಸಾಧ್ಯವಾಗುವ ತನಕ,  ಅವರುಗಳ ಬೇಸಾಯ ಸುಧಾರಣೆಗೆ ಸುಲಭ ನೀರಾವರಿ ಲಭ್ಯತೆ, ಅವರ ಬೇಸಾಯ ವ್ಯವಸ್ಥೆ ಉತ್ತಮವಾಗಲು ಸಾಕಷ್ಟು ಸುಲಭದಲ್ಲಿ ರಸಗೊಬ್ಬರಗಳು ಕೃಷಿಕರಿಗೆ ಸರಿಯಾದ ಸಮಯದಲ್ಲಿ ಲಭ್ಯವಾಗುವ ಪ್ರಕ್ರಿಯೆ, ಮುಂತಾದ ಹಲವಾರು ಕೃಷಿಪರ ಸುಧಾರಣೆಯ ಹೆಜ್ಜೆಗಳನ್ನು ಸರಕಾರ ಅನುಷ್ಠಾನಗೊಳಿಸಿದೆ. ವೈವಿದ್ಯಮಯ ಹತ್ತು ಹಲವು ಉಪಕ್ರಮಗಳಿಂದ ಬಹುವಿಧ ಪ್ರಕಾರಗಳ ಸೇರ್ಪಡೆ ಮೂಲಕ ಬೇಸಾಯಗಾರರ ಆದಾಯ 2022 ಅವಧಿಗೆ ಇಮ್ಮಡಿಯಾಗುವ ಕರೆಯನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ್ದರು.

ಭಾರತ 2014-15ರಲ್ಲಿ ಮತ್ತು 2015-16 ರಲ್ಲಿ ಅನುಕ್ರಮವಾಗಿ ನಿರಂತರ ಬರಗಾಲ ಅನುಭವಿಸಿತು. ಕೃಷಿಕರ ಪುನರ್ ಸ್ಥಾಪನಾ ಕ್ಷಮತೆ ನಮ್ಮ ಕೃಷಿ ಉತ್ಪನ್ನಗಳ ಸ್ಥಿರತೆ, ಪೂರೈಕೆ ಸರಿಯಾಯಿತು, ಬೆಲೆಯೇರಿಕೆ ನಿಭಾಯಿಸಿತು. 2014-15ರ 252.02 ಎಮ್.ಟಿ. ದವಸಧಾನ್ಯ ಉತ್ಪಾದನೆ ಅಧಿಕಗೊಂಡು, 2015-16ರಲ್ಲಿ 252.23 ಎಮ್.ಟಿ. ಯಷ್ಟಾಯಿತು. ಕೇಂದ್ರ ಕೃಷಿ ಸಚಿವಾಲಯವನ್ನು ಕೃಷಿ ಮತ್ತು ಕೃಷಿಕರ ಯೋಗಕ್ಷೇಮ ಸಚಿವಾಲಯ ಎಂದು ಪುನರ್ ನಾಮಕರಣಗೊಳಿಸಲಾಯಿತು. ಇದು ಯೋಚನೆಯ ದೃಷ್ಟಿಕೋನದ ಬದಲಾವಣೆಯಲ್ಲಿರುವ ಕೃಷಿಕರೇ ಪ್ರಧಾನ, ಕೃಷಿಕರೇ ಮೊದಲು ಎಂಬ ಉದ್ದೇಶವನ್ನು ಸೂಚಿಸುತ್ತದೆ. ಕೃಷಿ ಮತ್ತು ರೈತರಿಗಾಗಿ ಮೊದಲ ಬಾರಿಗೆ ಅತ್ಯಧಿಕ ಹೆಚ್ಚಳಗೊಂಡು ರೂ 35,984 ಕೋಟಿ ಯಷ್ಟು ಬೃಹತ್ ಮೊತ್ತದಲ್ಲಿ ಹಂಚಿಕೆಯಾಯಿತು.
ಕೃಷಿಗೆ ಅಗತ್ಯವಾಗಿ ಬೇಕಾಗಿರುವುದು ಅಧಿಕ ಊಹಿಸಬಹುದಾದ, ಹೆಚ್ಚು ನಿರೀಕ್ಷಿಸಬಹುದಾದ, ಫಲವತ್ತಾದ ಮತ್ತು ಉತ್ತಮ ಲಾಭಕರ ಬೆಳೆ, ಕೃಷಿ ವಿಧಾನ ಮತ್ತು ಉತ್ಪಾದನೆ ಎಂಬ ಮಾಹಿತಿ ಸರಕಾರದ ಅರಿವಿಗೆ ಬಂತು. ಕೃಷಿಕರ ಅನುಬವಿಸುವ ವಿವಿಧ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಲು ಬಹುಆಯಾಮದ ಉಪಕ್ರಮಗಳು, ಹಲವು ರೀತಿಯ ವ್ಯವಸ್ಥೆಗಳು , ಹಾಗೂ ಸಂಪೂರ್ಣವಾಗಿ ಕೃಷಿಕ್ಷೇತ್ರದಲ್ಲಿ ಸಮೂಲಾಗ್ರ ಬದಲಾವಣೆ ಅಗತ್ಯವಿದೆ ಎಂದು ಸರಕಾರದ ಗಮನಕ್ಕೆ ಬಂತು.

ಬಿತ್ತನೆ ಪೂರ್ವ:

  1. ಮಣ್ಣಿನ ಆರೋಗ್ಯ ಚೀಟಿ - ಕೃಷಿಕರ ಸರಿಯಾದ ಆಯ್ಕೆಗಾಗಿ ಮಣ್ಣಿನ ಭೂಸಾರ ಫಲವತ್ತತೆ ತಿಳಿಸುವ ಮಣ್ಣಿನ ಆರೋಗ್ಯ ಚೀಟಿ

ಕೇಂದ್ರ ಸರಕಾರ ಈಗಾಗಲೇ 1.84 ಕೋಟಿ ಮಣ್ಣಿನ ಆರೋಗ್ಯ ಚೀಟಿ ವಿತರಿಸಿದೆ. ಒಟ್ಟು 14 ಕೋಟಿ ಕೃಷಿ ಹಿಡುವಳಿಗಳಿಗೆ ಇದರ ವ್ಯಾಪ್ತಿ ಪರಿಧಿ ವಿಸ್ತಾರಗೊಂಡು ಎಲ್ಲ ಕೃಷಿಕರಿಗೂ ಮಣ್ಣಿನ ಆರೋಗ್ಯ ಚೀಟಿ ವಿತರಿಸುವ ಉದ್ದೇಶ ಸರಕಾರ ಹೊಂದಿದೆ

  1. ರಸಗೊಬ್ಬರಗಳು

ರಸಗೊಬ್ಬರಗಳಿಗಾಗಿ ಈ ಹಿಂದೆ ನಾವು ಕಾಣುತ್ತದ್ದ ಉದ್ದುದ್ದದ ಸಾಲು ಈಗ ಇತಿಹಾಸ. ಕೃಷಿಕರಿಗೆ ಸುಲಭವಾಗಿ ರಸಗೊಬ್ಬರಗಳನ್ನು ವಿತರಿಸಲು , ಸರಳ ರೀತಿಯಲ್ಲಿ ಲಭ್ಯವಾಗಲು ಅಗತ್ಯ ವ್ಯವಸ್ಥೆ ಸರಕಾರ ಮಾಡಿದೆ. ರಸಗೊಬ್ಬರಗಳ ಬೆಲೆ ಅತ್ಯಂತ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಗೊಂಡಿದೆ. ದೇಶದಲ್ಲಿ ಕೃಷಿಕರಿಗಾಗಿ ವಿತರಿಸಲಾಗುವ ಯೂರಿಯಾದಲ್ಲಿ 100%ರಷ್ಟು ಪ್ರಮಾಣದಲ್ಲಿ ಬೇವು ಮಿಶ್ರಣ ಮಾಡಲಾಗಿದೆ. ಇದರಿಂದಾಗಿ ಯೂರಿಯಾ ರಸಗೊಬ್ಬರದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಕಡಿತಗೊಂಡಿದೆ. ಅಲ್ಲದೆ, 10ರಿಂದ 15%ರಷ್ಟು ಉತ್ಪಾದಕತೆ ದೇಶದಾಧ್ಯಂತ ಹೆಚ್ಚಿದೆ.

  1. ಆರ್ಥಿಕತೆ/ ಹಣಕಾಸು

ಕೃಷಿಕರ ಸಾಲದ ಬಡ್ಡಿ ಕಡಿಮೆಗೊಳಿಸುವ ನಿಟ್ಟಿನಲ್ಲಿ ಸರಕಾರ ರೂ 18,276 ಕೋಟಿಯಷ್ಟು ಹಣವನ್ನು ಅನುದಾನಗೊಳಿಸಿದೆ. ಇದರಿಂದಾಗಿ, ಕನಿಷ್ಟ ಅವಧಿಯ ಬೆಳೆಗಳ ಬೇಸಾಯಕ್ಕಾಗಿ ಮಾರುಕಟ್ಟೆಯ ಸಾಲದ ಸಾಮಾನ್ಯ ಬಡ್ಡಿಯಾದ 9% ಬದಲಾಗಿ, ಕೃಷಿಗೆ ರೈತರು 4%ರ ಬಡ್ಡಿಯಲ್ಲಿ ಸಾಲ, ಬೆಳೆಯ ಸುಗ್ಗಿ ಕಟಾವಿನ ನಂತರದ ಆವಶ್ಯಕತೆಗಳಿಗೆ 7%ರ ಬಡ್ಡಿಯಲ್ಲಿ ಸಾಲ, ಒಂದುವೇಳೆ ನೈಸರ್ಗಿಕ ವಿಪತ್ತುಗಳಿಗಾಗಿ 7%ರ ಬಡ್ಡಿಯಲ್ಲಿ ಸಾಲವನ್ನು ಸರಕಾರ ವ್ಯವಸ್ಥೆಗೊಳಿಸಿದೆ

ಬಿತ್ತನೆ ಅವಧಿಯಲ್ಲಿ:

  1. ಬೇಸಾಯದ ಸೌಕರ್ಯಗಳು

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನಾ ವನ್ನು ಅತ್ಯಂತ ಪ್ರಧಾನ ಆವಶ್ಯಕತೆಯಾಗಿ ಅನುಷ್ಠಾನಗೊಳಿಸುವುದು ಮತ್ತು 28.5 ಹೆಕ್ಟೇರ್ ಗಳನ್ನು ಕೃಷಿಯೋಗ್ಯ ಭೂಮಿಯಾಗಿ ಬೇಸಾಯಕ್ಕೆ ಒಳಪಡಿಸಬೇಕಾಗಿದೆ. ಕೇಂದ್ರ ಸರಕಾರ AIBP ಯೋಜನೆಯಡಿಯಲ್ಲಿ ಹಲವು ವರ್ಷಗಳಕಾಲ ನೆನೆಗುಂದಿದ್ದ 89 ನೀರಾವರಿ ಯೋಜನೆಗಳನ್ನು ಕ್ಷಿಪ್ರಪ್ರಗತಿ ಹಾದಿಯಲ್ಲಿ ಅನುಷ್ಠಾನ ಪ್ರಕ್ರಿಯೆ ಪ್ರಾರಂಭವಾಯಿತು. ಸುಮಾರು 20,000 ಕೋಟಿ ರೂಪಾಯಿ ಮೂಲಧನದ ಹೆಚ್ಚುವರಿ ಬೃಹತ್ ಮೊತ್ತದಲ್ಲಿ ದೀರ್ಘಾವಧಿ ನೀರಾವರಿ ಬೇಸಾಯ ನಿಧಿಯನ್ನು NABARD ನಲ್ಲಿ ಸೃಷ್ಟಿಸಲಾಯಿತು. ಮಳೆನೀರು ಇರುವ ಕ್ಷೇತ್ರಗಳಲ್ಲಿ 5 ಲಕ್ಷ ಕೊಳ ಮತ್ತು ಬಾವಿಗಳನ್ನು ತೋಡಲಾಗಿದೆ, ಮತ್ತು ಸಾವಯವ ಗೊಬ್ಬರದ 10 ಲಕ್ಷ ಕಂಪೋಸ್ಟ್ ಗುಂಡಿಗಳನ್ನು ಕೇಂದ್ರ ಸರಕಾರದ MGNREGA ಯೋಜನೆಯಡಿಯಲ್ಲಿ ನಿರ್ಮಿಸಲಾಗಿದೆ

  1. ಬೆಂಬಲ & ಮಾರ್ಗದರ್ಶನ

ಕೋಟಿಗಟ್ಟಲೆ ಕೃಷಿಕರಿಗೆ ಎಸ್.ಎಮ್.ಎಸ್. ಮತ್ತು ಕರೆಗಳ ಮೂಲಕ ವೈಜ್ಞಾನಿಕ ಕೃಷಿ ಪದ್ದತಿಗಳ ಮಾಹಿತಿ ಮತ್ತು ಸಲಹೆಗಳನ್ನು ನೀಡಲಾಗಿದೆ

ಬಿತ್ತನೆ ನಂತರ:

  1. ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ (ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನ )

ಅತ್ಯಂತ ಕನಿಷ್ಠ ವಿಮಾ ಕಂತುಗಳ ದರದಲ್ಲಿ ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ ( ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನ ) ಯನ್ನು ಕೃಷಿಕರಿಗೆ ಕೇಂದ್ರ ಸರಕಾರ ನೀಡುತ್ತಿದ್ದು, ಇದನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ ಯಲ್ಲಿ ಒಂದು ಬೆಳೆ ಒಂದು ದರ ವಿರುತ್ತದೆ. ಉದಾ: ಖಾರಿಫ್ ಬೆಳೆಗೆ 2%, ರಾಬಿ ಬೆಳೆಗೆ:1.5%, ತೋಟಗಾರಿಕಾ ಉದ್ಯಾನ ಕೃಷಿಗೆ 5% ವಿಮಾ ಕಂತುಗಳ ದರಗಳಿವೆ. ವಿಮಾಮೊತ್ತದ ಗರಿಷ್ಠತೆಗೆ ಮಿತಿಇಲ್ಲ, & ವಿಮಾ ಸುರಕ್ಷತೆಗೆ ಕಡಿತವಿಲ್ಲ, ಕೃಷಿಕರ ಸಂಪೂರ್ಣ ಸುರಕ್ಷತೆ ಯೋಜನೆಯಲ್ಲಿದೆ. ಸ್ವಾತಂತ್ರ್ಯಾನಂತರ ಕೇವಲ 20% ರಷ್ಟು ಮಾತ್ರ ಕೃಷಿಕರು ಈ ತನಕ ವಿಮೆ ಹೊಂದಿದ್ದಲ್ಲಿ, ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನ ( ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ ) 50%ರಷ್ಟು ವ್ಯಾಪತ್ಇಯನ್ನು ಮುಂದಿನ 3 ವರ್ಷಗಳಿಗೆ ಹಾಕಿದೆ

  1. ಇ-ನಾಮ್ (e-NAM)

ಕೃಷಿ-ವ್ಯಾಪಾರ ನಿಯಮಾವಳಿಯಂತೆ, ಕೃಷಿ ವ್ಯಾಪಾರ ಮಾರುಕಟ್ಟೆ ನಿರ್ವಹಣೆ ವ್ಯವಸ್ಥೆಗಳು ಸಂಪೂರ್ಣವಾಗಿ ರಾಜ್ಯಗಳ ನಿಯಂತ್ರಣದಲ್ಲಿದ್ದು, ವಿವಿಧ್ ವಿಭಾಗಗಳಾಗಿ ವಿಂಗಡಿಸಲಾಗಿದೆ. ಕೃಷಿ ಉತ್ಪನ್ನ ಒಂದು ಮಾರುಕಟ್ಟೆ ಕ್ಷೇತ್ರದಿಂದ ಇನ್ನೊಂದು ಪ್ರದೇಶದ ಮಾರುಕಟ್ಟೆಗೆ ಸಾಗಿಸ ಬೇಕಾಗುತ್ತದೆ, ಸಾಗುವ ಕೃಷಿ ಉತ್ಪಾದನೆಗಳು ಹಲವಾರು ಅಡಚಣೆಗಳನ್ನು, ಬೆಲೆ ಏರಿಕೆಗಳನ್ನು, ಇವುಗಳಲ್ಲಿ ಕನಿಷ್ಠ ಪಾಲು ಲಾಭ ಮತ್ತು ನಿಯಂತ್ರಣ ಕೃಷಿಕರ ಪಾಲಿಗೆ ಇರುತ್ತದೆ. ಏಕೀಕೃತ ಏಕರೂಪದ ಮೌಲ್ಯಾಧಾರಿತ ಮಾರುಕಟ್ಟೆ ಅಂತರ್ಜಾಲ ಮೂಲಕ ನಿರ್ಮಿಸುವ ಮೂಲಕ e-NAM ಕೃಷಿಕರ ಉತ್ಪನ್ನ ಮತ್ತು ಮಾರುಕಟ್ಟೆ ಸವಾಲುಗಳನ್ನು ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ಸುಲಭವಾಗಿ ಪರಿಹರಿಸುತ್ತದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮಾಹಿತಿ, ಉತ್ಪನ್ನಗಳ ವ್ಯವಹಾರ ವ್ಯಾಪಾರದಲ್ಲಿ ಪಾರದರ್ಶಕತೆ, ಪೂರೈಕೆ, ಸಾಗಾಟ, ಲಭ್ಯತೆ, ಪ್ರಾಮಾಣಿಕ ಬೆಲೆ ಕೃಷಿಕರಿಗೆ ಲಭ್ಯವಾಗುತ್ತದೆ. ಇದರಿಂದ ಮಾರುಕಟ್ಟೆಯ ಮಧ್ಯವರ್ತಿ ದಲ್ಲಾಳಿಗಳ ಹಿಡಿತ ಕಡಿಮೆಗೊಂಡು ಕೃಷಿಕರಿಗೆ ಜೊತೆಯಲ್ಲಿ ಗ್ರಾಹಕರಿಗೂ ಅಪಾರ ಲಾಭವಾಗುತ್ತದೆ.

ಇವುಗಳಲ್ಲದೆ ಆದಾಯ ಹೆಚ್ಚಿಸುವ ಬಹುಆಯಾಮದ ವ್ಯವಸ್ಥೆಯ ಕೊರತೆ ಬಹಳಕಾಲದಿಂದ ಕೃಷಿಕರಲ್ಲಿ ಕಾಡುತ್ತದೆ. ಕೃಷಿಕರಲ್ಲಿ, ಮೂಲ ಕೃಷಿಜೊತೆ ಮೀನುಗಾರಿಕೆ,ಪಶುಸಂಗೋಪನೆ, ಹೈನುಗಾರಿಕೆ, ಹಾಲಿನ ಉತ್ಪನ್ನಗಳು ಆದಾಯ ಹೆಚ್ಚಿಸುವ ಕೃಷಿಕರಿಗೆ ಅಗತ್ಯ ಕೃಷಿಪೂರಕ ವೈವಿಧ್ಯತೆಗಳಾಗಿವೆ. ನಾಲ್ಕು ಹಾಲು ಉತ್ಪನ್ನಗಳ ಸಂಶೋಧನೆ, ಅಭಿವೃದ್ದಿ ಪ್ರಕಾರದಲ್ಲಿ ಯೋಜನೆಗಳನ್ನು – ಪಶುಧನ್ ಸಂಜೀವಿನಿ , ನಕುಲ್ ಸ್ವಸ್ಥ ಪತ್ರ, ಇ-ಪಶು ಧನ್ ಹಾತ್ , ಮತ್ತು ರಾಷ್ಟ್ರೀಯ ಭಾರತೀಯ ತಳಿ ಉತ್ಪಾದನಾ ಕೇಂದ್ರ , ಎಂಬ ಯೋಜನೆಗಳನ್ನು ರೂ 850 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ. ಭಾರತದ ಸ್ಥಳೀಯ ಹಸು ತಳಿಗಳನ್ನು ಸಂರಕ್ಷಸಲು ಮತ್ತು ಅಭಿವೃದ್ದಿಗೊಳಿಸಲು ರಾಷ್ಟ್ರೀಯ ಗೋಕುಲ್ ಮಿಷನ್ ಪ್ರಾರಂಭಿಸಲಾಗಿದೆ. ಮೀನುಗಾರಿಕೆ 2013-14ರಲ್ಲಿದ್ದ 95.72 ಲಕ್ಷ ಟನ್ ಉತ್ಪಾದನೆಯಿಂದ 2014-15ರ ಅವಧಿಯಲ್ಲಿ, 101.64 ಲಕ್ಷ ಟನ್ , ಹಾಗೂ 2015-16 ರ ಅವಧಿಗೆ ಮೀನುಗಾರಿಕೆ ಉತ್ಪಾದನೆ 107.9 ಲಕ್ಷಟನ್ ಗಿಂತಲೂ ಅಧಿಕಗೊಳ್ಳುವ ನಿರೀಕ್ಷೆ ಇದೆ. ಕೇಂದ್ರ ಸರಕಾರದ ಉಳಿತಾಯ-ಹಾಗೂ-ಪರಿಹಾರ ಸೂತ್ರ ಪೂರೈಕೆ ಮೀನುಗಾರರಿಗೆ ಬಹಳ ಸದುಪಯೋಗ ಕಾರ್ಯಯೋಜನೆಯಾಗಿದೆ, ನೀಲಕ್ರಾಂತಿ ಯೋಜನೆಯಡಿ, ಮೀನುಗಾರಿಕೆ ನಿಷೇಧ/ತಡೆ ಇರುವ ಮೂರು ತಿಂಗಳಕಾಲ ಉಳಿತಾಯ-ಹಾಗೂ-ಪರಿಹಾರ ಪ್ರತಿತಿಂಗಳಿಗೆ ರೂ 1500 ರ ತನಕ ಹೆಚ್ಚಿಸಲಾಗಿದೆ.

ಕೇಂದ್ರ ಸರಕಾರದ ನೀಡುವ ಕೃಷಿಕರ ಪರಿಹಾರದಲ್ಲಿ ಗಮನಾರ್ಹ ಮಹತ್ತರ ಹೆಚ್ಚಳವಾಗಿದೆ. ರಾಜ್ಯ ದುರಂತ ಸ್ಪಂದನಾ ನಿಧಿಯಲ್ಲಿ, ವಾರ್ಷಿಕ ಲಕ್ಕಾಚಾರದಲ್ಲಿ 2010-2015 ಅವಧಿಯಲ್ಲಿ ರೂ 33580.93 ಕೋಟಿ ಪೂರೈಸಲಾಗಿದೆ, ಮುಂಬರುವ 2015-2020 ವರ್ಷಗಳಿಗಾಗಿ, ಕೃಷಿಕರಿಗಾಗಿ ಇರುವ ಇದೇ ರಾಜ್ಯ ದುರಂತ ಸ್ಪಂದನಾ ನಿಧಿಗಾಗಿ, ರೂ 61220 ಕೋಟಿ ಮೀಸಲಿಡಲಾಗಿದೆ. 2010-14ರ ನಾಲ್ಕು ವರ್ಷಗಳ ಅವಧಿಯಲ್ಲಿ, ರಾಜ್ಯಗಳಲ್ಲಾದ ಅತಿವೃಷ್ಟಿ ಮತ್ತು ಅನಾವೃಷ್ಟಿಗಳಂತಹ ನೈಸರ್ಗಿಕ ದುರಂತಗಳಿಗಾಗಿ ರೂ 12516.20 ಕೋಟಿ ಅನುಮೋದನೆಗೊಂಡಿದ್ದಲ್ಲಿ, ಎನ್.ಡಿ.ಎ ಸರಕಾರ ಕೇವಲ 2014-15 ಒಂದು ವರ್ಷದ ಅವಧಿಯಲ್ಲಿ ರೂ. 9017.998 ಕೋಟಿ ರಾಜ್ಯಗಳಲ್ಲಾದ ಅತಿವೃಷ್ಟಿ ಮತ್ತು ಅನಾವೃಷ್ಟಿಗಳಂತಹ ನೈಸರ್ಗಿಕ ದುರಂತಗಳಿಗಾಗಿ ಪರಿಹಾರ ಬಿಡುಗಡೆ ಮಾಡಿದೆ. ಅಲ್ಲದೆ, 2015-16 ವರ್ಷದ ಅವಧಿಗಾಗಿ ರಾಜ್ಯಗಳಲ್ಲಾಗುವ ಅತಿವೃಷ್ಟಿ ಮತ್ತು ಅನಾವೃಷ್ಟಿಗಳಂತಹ ನೈಸರ್ಗಿಕ ದುರಂತಗಳಿಗಾಗಿ ರೂ 13496.57 ಕೋಟಿ ಪರಿಹಾರ ನಿಧಿಯನ್ನು ಈಗಾಗಲೇ ಅನುಮೋದನೆ ಮಾಡಿದೆ

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
Nari Shakti finds new momentum in 9 years of PM Modi governance

Media Coverage

Nari Shakti finds new momentum in 9 years of PM Modi governance
...

Nm on the go

Always be the first to hear from the PM. Get the App Now!
...
PM Modi Adorns Colours of North East
March 22, 2019
ಶೇರ್
 
Comments

The scenic North East with its bountiful natural endowments, diverse culture and enterprising people is brimming with possibilities. Realising the region’s potential, the Modi government has been infusing a new vigour in the development of the seven sister states.

Citing ‘tyranny of distance’ as the reason for its isolation, its development was pushed to the background. However, taking a complete departure from the past, the Modi government has not only brought the focus back on the region but has, in fact, made it a priority area.

The rich cultural capital of the north east has been brought in focus by PM Modi. The manner in which he dons different headgears during his visits to the region ensures that the cultural significance of the region is highlighted. Here are some of the different headgears PM Modi has carried during his visits to India’s north east!