ಭಾರತ ಜಿ-20 ಅಧ್ಯಕ್ಷತೆ ವಹಿಸಿಕೊಂಡು ಇಂದಿಗೆ 365 ದಿನಗಳಾಗಿವೆ. ಇದು “ವಸುದೈವ ಕುಟುಂಬಕಂ’’ , ಅಂದರೆ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಚೈತನ್ಯವನ್ನು ಪ್ರತಿಬಿಂಬಿಸುವ, ಪುನಃ ಬದ್ಧತೆ ತೋರುವ ಮತ್ತು ಪುನರುಜ್ಜೀವನಗೊಳಿಸುವ ಕ್ಷಣವಾಗಿದೆ. 

ಕಳೆದ ವರ್ಷ ನಾವು ಜವಾಬ್ದಾರಿಯನ್ನು ವಹಿಸಿಕೊಂಡಾಗ, ಇಡೀ ಜಗತ್ತು ಬಹುಮುಖಿ ಸವಾಲುಗಳನ್ನು ಎದುರಿಸುತ್ತಿದ್ದವು. ಅವುಗಳೆಂದರೆ, ಕೋವಿಡ್ -19 ಸಾಂಕ್ರಾಮಿಕದಿಂದ ಚೇತರಿಕೆ, ಹೆಚ್ಚುತ್ತಿರುವ ಹವಾಮಾನ ಅಪಾಯಗಳು, ಹಣಕಾಸು ಅಸ್ಥಿರತೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಸಾಲ ಬಿಕ್ಕಟ್ಟು, ಬಹುಪಕ್ಷೀಯತೆ ಕುಸಿತ ಸೇರಿ ಹಲವು ಸವಾಲುಗಳಿದ್ದವು. ಸಂಘರ್ಷಗಳು ಮತ್ತು ಸ್ಪರ್ಧೆಗಳ ನಡುವೆಯೇ, ಅಭಿವೃದ್ಧಿ ಸಹಕಾರಕ್ಕೆ ತೊಂದರೆಯಾಯಿತು, ಪ್ರಗತಿಗೆ ಹಿನ್ನಡೆಯಾಯಿತು. 

ಜಿ-20 ಅಧ್ಯಕ್ಷತೆ ವಹಿಸಿಕೊಂಡ ನಂತರ ಭಾರತವು ಯಥಾಸ್ಥಿತಿಗೆ ಪರ್ಯಾಯವಾಗಿ ಹೊಸ ಜಗತ್ತನ್ನು ನೀಡಲು ಪ್ರಯತ್ನಿಸಿತು, ಅದು ಜಿಡಿಪಿ ಕೇಂದ್ರಿತ ಪ್ರಗತಿಯಿಂದ ಮಾನವ ಕೇಂದ್ರಿತ  ಪ್ರಗತಿಯತ್ತ ಬದಲಾಗುವುದು. ಭಾರತವು ನಮ್ಮನ್ನು ವಿಭಜಿಸುವ ಬದಲು ನಮ್ಮನ್ನು ಒಗ್ಗೂಡಿಸುವುದನ್ನು ಜಗತ್ತಿಗೆ ನೆನಪುಮಾಡಿಕೊಡುವ ಗುರಿಯನ್ನು ಹೊಂದಿದೆ. ಅಂತಿಮವಾಗಿ ಸಮಾಲೋಚನೆಗಳು ವಿಕಸನಗೊಳ್ಳಬೇಕಾಗಿತ್ತು–ಕೆಲವರ ಹಿತಾಸಕ್ತಿಗಳು ಹಲವರ ಆಕಾಂಕ್ಷೆಗಳಿಗೆ ದಾರಿ ಮಾಡಿಕೊಡಬೇಕಾಗಿತ್ತು. ಅದಕ್ಕಾಗಿ ನಮಗೆ ತಿಳಿದಿರುವಂತೆ ಬಹುಪಕ್ಷೀಯತೆಯ ಮೂಲಭೂತ ಸುಧಾರಣೆ ಅತ್ಯಗತ್ಯವಾಗಿತ್ತು. 

ಒಗ್ಗೂಡಿದ (ಎಲ್ಲವನ್ನೂ ಒಳಗೊಂಡ), ಮಹತ್ವಾಕಾಂಕ್ಷೆಯ, ಕ್ರಿಯೆ ಆಧರಿತ ಮತ್ತು ನಿರ್ಣಾಯಕ – ಈ ನಾಲ್ಕು ಪದಗಳು ಜಿ-20 ಅಧ್ಯಕ್ಷರಾಗಿ ನಮ್ಮ ಕಾರ್ಯವಿಧಾನವನ್ನು ವ್ಯಾಖ್ಯಾನಿಸುತ್ತವೆ ಮತ್ತು ಎಲ್ಲಾ ಜಿ-20 ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದ ಹೊಸದೆಹಲಿ ನಾಯಕ ಘೋಷಣೆ (ಎನ್ ಡಿಎಲ್ ಡಿ), ಈ ತತ್ವಗಳನ್ನು ಪಾಲಿಸುವ ಬಮ್ಮ ಬದ್ಧತೆಯ ಸಂಕೇತವಾಗಿದೆ. 

ಒಗ್ಗೂಡಿದ , ಅಂದರೆ ಎಲ್ಲರನ್ನೂ ಒಳಗೊಳ್ಳುವುದು ನಮ್ಮ ಅಧ್ಯಕ್ಷತೆಯ ಹೃದಯಭಾಗವಾಗಿದೆ. ಆಫ್ರಿಕಾ ಒಕ್ಕೂಟ (ಎಯು) ಅನ್ನು ಜಿ-20 ಯ ಖಾಯಂ ಸದಸ್ಯರನ್ನಾಗಿ ಸೇರ್ಪಡೆ ಮಾಡಿದ್ದರಿಂದ ಆಫ್ರಿಕಾದ 55 ರಾಷ್ಟ್ರಗಳನ್ನು ವೇದಿಕೆಗೆ ಸಂಯೋಜಿಸಿತು, ಇದು ಜಾಗತಿಕ ಜನಸಂಖ್ಯೆಯ ಶೇ. 80ರಷ್ಟು ಒಳಗೊಳ್ಳುವಂತೆ ವಿಸ್ತರಣೆ ಮಾಡಿತು. ಈ ಸಕ್ರಿಯ ನಿಲುವು ಜಾಗತಿಕ ಸವಾಲುಗಳು ಮತ್ತು ಅವಕಾಶಗಳ ಕುರಿತು ಹೆಚ್ಚು ಸಮಗ್ರ ಸಂವಾದಕ್ಕೆ ಎಡೆಮಾಡಿಕೊಟ್ಟಿದೆ. 

ಭಾರತವು ಎರಡು ಆವೃತ್ತಿಗಳಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ “ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್‌ ಸಮ್ಮಿಟ್’’ – ಜಾಗತಿಕ ದಕ್ಷಿಣದ ಧ್ವನಿಯಾಗುವ ಬಹುಪಕ್ಷೀಯತೆಯ ಹೊಸ ಉದಯಕ್ಕೆ ಕಾರಣವಾಯಿತು. ಭಾರತವು ಅಂತಾರಾಷ್ಟ್ರೀಯ ಚರ್ಚೆಯಲ್ಲಿ ಜಾಗತಿಕ ದಕ್ಷಿಣದ ಕಾಳಜಿಯನ್ನು ಮುಖ್ಯವಾಹಿನಿಗೆ ತಂದಿತು ಮತ್ತು ಜಾಗತಿಕ ನಿರೂಪಣೆಯನ್ನು ರೂಪಿಸುವಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಸೂಕ್ತ ಸ್ಥಾನವನ್ನು ಪಡೆದುಕೊಳ್ಳುವ ಯುಗಕ್ಕೆ ನಾಂದಿ ಹಾಡಿತು.

ಎಲ್ಲರನ್ನೂ ಒಳಗೊಳ್ಳುವಿಕೆ ಜಿ-20ಕ್ಕೆ ಭಾರತದ ದೇಶೀಯ ವಿಧಾನವನ್ನು ಸಹ ಪರಿಚಯಿಸಿತು, ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಸೂಕ್ತವಾದ ಪೀಪಲ್ಸ್ ಪ್ರೆಸಿಡೆನ್ಸಿ ಎನಿಸಿತು. "ಜನ ಭಾಗಿದಾರಿ" (ಜನರ ಪಾಲ್ಗೊಳ್ಳುವಿಕೆ) ಕಾರ್ಯಕ್ರಮಗಳ ಮೂಲಕ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು (ಯೂನಿಯನ್ ಟೆರಿಟರೀಸ್) ಪಾಲುದಾರರಾಗಿ ಒಳಗೊಂಡಿರುವ ಜಿ-20 1.4 ಶತಕೋಟಿ ನಾಗರಿಕರನ್ನು ತಲುಪಿದೆ ಮತ್ತು ಹಲವು ಅಂಶಗಳ ಮೇಲೆ, ಭಾರತವು ಜಿ-20ರ ಸಾಧಿಸಲೇಬೇಕಾದ ಗುರಿಗಳಿಗೆ ಹೊಂದಿಕೆಯಾಗುವ ವಿಶಾಲವಾದ ಅಭಿವೃದ್ಧಿ ಗುರಿಗಳತ್ತ ಅಂತಾರಾಷ್ಟ್ರೀಯ ಗಮನ ಸೆಳೆದಿರುವುದನ್ನು ಖಾತ್ರಿಪಡಿಸಿತು. 

2030ರ ಕಾರ್ಯಸೂಚಿಯ ನಿರ್ಣಾಯಕ ಮಧ್ಯಭಾಗದಲ್ಲಿ, ಭಾರತವು ಜಿ-20 2023 ಕ್ರಿಯಾ ಯೋಜನೆಯನ್ನು ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್ ಡಿಜಿಗಳ) ಸಾಧಿಸುವ ನಿಟ್ಟಿನಲ್ಲಿ  ಪ್ರಗತಿಯನ್ನು ವೇಗಗೊಳಿಸಲು, ಆರೋಗ್ಯ, ಶಿಕ್ಷಣ, ಲಿಂಗ ಸಮಾನತೆ ಮತ್ತು ಸುಸ್ಥಿರ ಪರಿಸರ ಮತ್ತಿತರ ಅಂತರ ಸಂಪರ್ಕಿತ ಸಮಸ್ಯೆಗಳನ್ನು ದೂರಮಾಡುವ ಕ್ರಮ-ಆಧಾರಿತ ವಿಧಾನವನ್ನು ಕೈಗೊಂಡಿದೆ.

ಈ ಪ್ರಗತಿಯನ್ನು ಮುನ್ನಡೆಸುವ ಪ್ರಮುಖ ವಲಯವೆಂದರೆ ಸದೃಢ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ). ಇಲ್ಲಿ ಮೊದಲಿಗೆ ಆಧಾರ್, ಯುಪಿಐ ಮತ್ತು ಡಿಜಿಲಾಕರ್‌ನಂತಹ ಡಿಜಿಟಲ್ ಆವಿಷ್ಕಾರಗಳ ಕ್ರಾಂತಿಕಾರಿ ಪರಿಣಾಮವನ್ನು ನೇರವಾಗಿ ಕಂಡ ಭಾರತವು ನಿರ್ಣಾಯಕ ಶಿಫಾರಸುಗಳನ್ನು ಮಾಡಿದೆ. ಜಿ-20ರ ಮೂಲಕ ನಾವು ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ರೆಪೊಸಿಟರಿ (ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಭಂಡಾರ)ವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ, ಇದು ಜಾಗತಿಕ ತಾಂತ್ರಿಕ ಸಹಯೋಗದಲ್ಲಿ ಗಮನಾರ್ಹ ದಾಪುಗಾಲಾಗಿದೆ. 16 ದೇಶಗಳಿಂದ 50 ಕ್ಕೂ ಅಧಿಕ ಡಿಪಿಐಗಳನ್ನು ಒಳಗೊಂಡಿರುವ ಈ ಭಂಡಾರವು ಅಂತರ್ಗತ ಬೆಳವಣಿಗೆಯ ಶಕ್ತಿಯನ್ನು ಸಮರ್ಥವಾಗಿ ಬಳಕೆ ಮಾಡಲು,  ಗ್ಲೋಬಲ್ ಸೌತ್ ಅನ್ನು ನಿರ್ಮಿಸಲು ಹಾಗೂ ಪಾಲನೆ ಮಾಡಲು ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿ ಸಾಧಿಸಲು ಡಿಪಿಐ ಯ ಶಕ್ತಿಯನ್ನು ಬಳಸಿಕೊಳ್ಳುವುದಾಗಿದೆ.  

ನಮ್ಮ ಒಂದು ಭೂಮಿ ಪರಿಕಲ್ಪನೆಗೆ, ನಾವು ತುರ್ತು, ಶಾಶ್ವತ ಮತ್ತು ಸಮಾನವಾದ ಬದಲಾವಣೆಗಳನ್ನು ತರಲು ನಾವು ಮಹತ್ವಾಕಾಂಕ್ಷೆಯ ಮತ್ತು ಎಲ್ಲರನ್ನೂ ಒಳಗೊಂಡ (ಅಂತರ್ಗತ) ಗುರಿಗಳನ್ನು ಪರಿಚಯಿಸಿದ್ದೇವೆ. “ಹಸಿರು ಅಭಿವೃದ್ಧಿ ಒಪ್ಪಂದ’’ ಘೋಷಣೆಯಂತೆ ಹಸಿವನ್ನು ಎದುರಿಸುವ ಮತ್ತು ಭೂಮಿಯನ್ನು ಸಂರಕ್ಷಿಸುವ ನಡುವಿನ ಆಯ್ಕೆಯ ಸವಾಲುಗಳನ್ನು ಪರಿಹರಿಸುತ್ತದೆ. ಉದ್ಯೋಗ ಮತ್ತು ಜೈವಿಕ ಪೂರಕ ವ್ಯವಸ್ಥೆಗೆ ಪೂಕರವಾಗಿ, ಹವಾಮಾನ ಬಳಕೆಯ ಪ್ರಜ್ಞೆ ಮತ್ತು ಉತ್ಪಾದನೆಯು ಭೂ ಸ್ನೇಹಿಯಾಗಿರುವ ಸಮಗ್ರ ನೀಲನಕ್ಷೆಯನ್ನು ವಿವರಿಸುತ್ತದೆ. ಜೊತೆಗೆ ಜಿ-20 ಘೋಷಣೆಯು 2030ರ ವೇಳೆಗೆ ಜಾಗತಿಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮಹತ್ವಾಕಾಂಕ್ಷೆಯ ಮೂರು ಪಟ್ಟು ಹೆಚ್ಚಳಕ್ಕೆ ಕರೆ ನೀಡುತ್ತದೆ. ಜಾಗತಿಕ ಜೈವಿಕ ಇಂಧನ ಮೈತ್ರಿ ಸ್ಥಾಪನೆ ಮತ್ತು ಹಸಿರು ಹೈಡ್ರೋಜನ್‌ಗಾಗಿ ಒಂದು ಸಂಘಟಿತ ಉತ್ತೇಜನದೊಂದಿಗೆ, ಸ್ವಚ್ಛವಾದ, ಹಸಿರು ಜಗತ್ತನ್ನು ನಿರ್ಮಿಸುವ ಜಿ-20ಯ ಮಹತ್ವಾಕಾಂಕ್ಷೆಗಳು ನಿರಾಕರಿಸಲಾಗದು. ಇದು ಸದಾ ಭಾರತದ ನೀತಿಯಾಗಿದೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಜೀವನಶೈಲಿ (ಲೈಫ್) ಮೂಲಕ ಜಗತ್ತು ನಮ್ಮ ಅತ್ಯಂತ ಹಳೆಯ ಪ್ರಾಚೀನ ಸುಸ್ಥಿರ ಸಂಪ್ರದಾಯಗಳಿಂದ ಪ್ರಯೋಜನ ಪಡೆಯಬಹುದು.

ಅಲ್ಲದೆ, ಈ ಘೋಷಣೆಯು ನಮ್ಮ ಹವಾಮಾನ ನ್ಯಾಯ ಮತ್ತು ಸಮಾನತೆಗೆ ನಮ್ಮ ಭದ್ಧತೆಯನ್ನು ಪುನರುಚ್ಚರಿಸುತ್ತದೆ. ಜಾಗತಿಕ ಉತ್ತರದಿಂದ ಗಣನೀಯ ಆರ್ಥಿಕ ಮತ್ತು ತಾಂತ್ರಿಕ ನೆರವಿಗೆ ಒತ್ತಾಯಿಸುತ್ತದೆ . ಇದೇ ಮೊದಲ ಬಾರಿಗೆ, ಅಭಿವೃದ್ಧಿಯ ಹಣಕಾಸಿನ ಪ್ರಮಾಣದಲ್ಲಿ ಅಗತ್ಯವಿರುವ ಭಾರಿ ಏರಿಕೆಯನ್ನು ಗುರುತಿಸಲಾಗಿದ್ದು, ಇದು ಬಿಲಿಯನ್‌ಗಳಿಂದ ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳಿಗೇರಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು 2030ರ ವೇಳೆಗೆ ತಮ್ಮ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳನ್ನು (ಎನ್ ಡಿಸಿಎಸ್) ಈಡೇರಿಸಲು 5.9 ಟ್ರಿಲಿಯನ್ ಡಾಲರ್ ಅಗತ್ಯವಿದೆ ಎಂದು ಜಿ-20 ಒಪ್ಪಿಕೊಂಡಿದೆ.

ಅಗತ್ಯವಿರುವ ಮಹತ್ವದ ಸಂಪನ್ಮೂಲ ಒದಗಿಸುವ ಜತಗೆ ಜಿ-20 ಉತ್ತಮ, ಭಾರಿ ಮತ್ತು ಹೆಚ್ಚು ಪರಿಣಾಮಕಾರಿ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿತು. ಏಕಕಾಲದಲ್ಲಿ, ಭಾರತವು ವಿಶ್ವಸಂಸ್ಥೆಯ ಸುಧಾರಣೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ, ವಿಶೇಷವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಂತಹ ಪ್ರಮುಖ ಅಂಗಗಳ ಪುನರ್ ರಚನೆಯಲ್ಲಿ, ಅದು ಹೆಚ್ಚು ಸಮಾನವಾದ ಜಾಗತಿಕ ವ್ಯವಸ್ಥೆಯನ್ನು ಖಾತ್ರಿಪಡಿಸುತ್ತದೆ.

ಲಿಂಗ ಸಮಾನತೆಯು ಘೋಷಣೆಯಲ್ಲಿ ಕೇಂದ್ರ ಸ್ಥಾನವನ್ನು ಪಡೆದುಕೊಂಡಿತ್ತು, ಮುಂದಿನ ವರ್ಷ ಮಹಿಳಾ ಸಬಲೀಕರಣಕ್ಕೆ ಮೀಸಲಾದ  ಕಾರ್ಯಕಾರಿ ಗುಂಪು (ವರ್ಕಿಂಗ್ ಗ್ರೂಪ್) ರಚನೆಯೊಂದಿಗೆ ಸಮಾಪನಗೊಂಡಿತು. ಭಾರತದ ಸಂಸತ್ತಿನಲ್ಲಿ ಮತ್ತು ರಾಜ್ಯ ಶಾಸಕಾಂಗ ಸಭೆಯ ಸ್ಥಾನಗಳಲ್ಲಿ ಮೂರನೇ ಒಂದು ಭಾಗ ಮಹಿಳೆಯರಿಗೆ ಮೀಸಲಿಡುವ ಭಾರತದ ಮಹಿಳಾ ಮೀಸಲಾತಿ ಮಸೂದೆ 2023 ಮಹಿಳಾ ನೇತೃತ್ವದ ಅಭಿವೃದ್ಧಿಗೆ ನಮ್ಮ ಬದ್ಧತೆಯನ್ನು ಸಾರುತ್ತದೆ.

ಹೊಸ ದೆಹಲಿ ಘೋಷಣೆಯು ನೀತಿ ಸುಸಂಬದ್ಧತೆ, ವಿಶ್ವಾಸಾರ್ಹ ವ್ಯಾಪಾರ ಮತ್ತು ಮಹತ್ವಾಕಾಂಕ್ಷೆಯ ಹವಾಮಾನ ಕ್ರಿಯೆಯ ಮೇಲೆ ಕೇಂದ್ರೀಕರಿಸುವ ಪ್ರಮುಖ ಆದ್ಯತೆಗಳಲ್ಲಿ ಸಹಯೋಗದ ನವೀಕೃತ ಮನೋಭಾವವನ್ನು ಒಳಗೊಂಡಿದೆ. ನಮ್ಮ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ 87 ಫಲಿತಾಂಶಗಳನ್ನು ಮತ್ತು 118 ದಾಖಲೆಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಇದು ಹಿಂದಿ ವರ್ಷಗಳಿಗೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ.

ನಮ್ಮ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ, ಭಾರತವು ಭೌಗೋಳಿಕ ರಾಜಕೀಯ ವಿಷಯಗಳು ಮತ್ತು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಅವುಗಳ ಪರಿಣಾಮಗಳ ಕುರಿತು ಚರ್ಚೆಗಳನ್ನು ನಡೆಸಿತು. ಭಯೋತ್ಪಾದನೆ ಮತ್ತು ನಾಗರಿಕರ ಪ್ರಜ್ಞಾಶೂನ್ಯ ಹತ್ಯೆ ಸ್ವೀಕಾರಾರ್ಹವಲ್ಲ ಮತ್ತು ನಾವು ಅದನ್ನು ಶೂನ್ಯ-ಸಹಿಷ್ಣುತೆಯ ನೀತಿಯೊಂದಿಗೆ ಪರಿಹರಿಸಬೇಕು. ನಾವು ಹಗೆತನದ ಮೇಲೆ ಮಾನವೀಯತೆಯನ್ನು ಸಾಕಾರಗೊಳಿಸಬೇಕು ಮತ್ತು ಇದು ಯುದ್ಧದ ಯುಗವಲ್ಲ ಎಂದು ಪುನರುಚ್ಚರಿಸಬೇಕು.

ನಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಭಾರತವು ಅಸಾಧಾರಣವಾದುದನ್ನು ಸಾಧಿಸಿದೆ ಎಂದು ನಾನು ಸಂತೋಷಪಡುತ್ತೇನೆ: ಇದು ಬಹುಪಕ್ಷೀಯತೆಯನ್ನು ಪುನರುಜ್ಜೀವನಗೊಳಿಸಿತು, ಜಾಗತಿಕ ದಕ್ಷಿಣದ ಧ್ವನಿಯನ್ನು ವರ್ಧಿಸಿತು, ಅಭಿವೃದ್ಧಿಯನ್ನು ಉತ್ತೇಜಿಸಿ ವೇಗ ನೀಡಿತು ಮತ್ತು ಎಲ್ಲೆಡೆ ಮಹಿಳೆಯರ ಸಬಲೀಕರಣಕ್ಕಾಗಿ ಹೋರಾಡಿತು.
ಮುಂಬರುವ ವರ್ಷಗಳಲ್ಲಿ ಜನರು, ಭೂಮಿ, ಶಾಂತಿ ಮತ್ತು ಸಮೃದ್ಧಿಗಾಗಿ ನಮ್ಮ ಸಾಮೂಹಿಕ ಹೆಜ್ಜೆಗಳ ಬದ್ಧತೆ ಪ್ರತಿಧ್ವನಿಸುತ್ತವೆ ಎಂಬ ವಿಶ್ವಾಸದಿಂದ ನಾವು ಜಿ-20 ಅಧ್ಯಕ್ಷತೆಯನ್ನು ಬ್ರೆಜಿಲ್‌ಗ ಹಸ್ತಾಂತರ ಮಾಡುತ್ತಿದ್ದೇವೆ. 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Since 2019, a total of 1,106 left wing extremists have been 'neutralised': MHA

Media Coverage

Since 2019, a total of 1,106 left wing extremists have been 'neutralised': MHA
NM on the go

Nm on the go

Always be the first to hear from the PM. Get the App Now!
...
Your Money, Your Right
December 10, 2025

During my speech at the Hindustan Times Leadership Summit a few days ago, I shared some startling facts:

Indian banks are holding Rs. 78,000 crore of unclaimed money belonging to our own citizens.

Insurance companies have nearly Rs. 14,000 crore lying unclaimed.

Mutual fund companies have around Rs. 3,000 crore and dividends worth Rs. 9,000 crore are also unclaimed.

These facts have startled a lot of people.

Afterall, these assets represent the hard-earned savings and investments of countless families.

In order to correct this, the आपकी पूंजी, आपका अधिकार - Your Money, Your Right initiative was launched in October 2025.

The aim is to ensure every citizen can reclaim what is rightfully his or hers.

To make the process of tracing and claiming funds simple and transparent, dedicated portals have also been created. They are:

• Reserve Bank of India (RBI) – UDGAM Portal for unclaimed bank deposits & balances: https://udgam.rbi.org.in/unclaimed-deposits/#/login

• Insurance Regulatory and Development Authority of India (IRDAI) – Bima Bharosa Portal for unclaimed insurance policy proceeds: https://bimabharosa.irdai.gov.in/Home/UnclaimedAmount

• Securities and Exchange Board of India (SEBI) – MITRA Portal for unclaimed amounts in mutual funds: https://app.mfcentral.com/links/inactive-folios

• Ministry of Corporate Affairs, IEPFA Portal for Unpaid dividends & unclaimed shares: https://www.iepf.gov.in/content/iepf/global/master/Home/Home.html

I am happy to share that as of December 2025, facilitation camps have been organised in 477 districts across rural and urban India. The emphasis has been to cover remote areas.

Through the coordinated efforts of all stakeholders notably the Government, regulatory bodies, banks and other financial institutions, nearly Rs. 2,000 crore has already been returned to the rightful owners.

But we want to scale up this movement in the coming days. And, for that to happen, I request you for assistance on the following:

Check whether you or your family have unclaimed deposits, insurance proceeds, dividends or investments.

Visit the portals I have mentioned above.

Make use of facilitation camps in your district.

Act now to claim what is yours and convert a forgotten financial asset into a new opportunity. Your money is yours. Let us make sure that it finds its way back to you.

Together, let us build a transparent, financially empowered and inclusive India!