ಶೇರ್
 
Comments

ಭಾರತದ ಕಿನಾರೆಯನ್ನು ಅವರು ತೊರೆದು ಜೀವಿತ ಹಾದಿ ಕಾಣಬಯಸಿದು, ಆದರೆ ಭಾರತದ ಬಗ್ಗೆ ಅವರ ಪ್ರೀತಿಗೇನೂ ಕಡಿಮೆಯಾಗಿಲ್ಲ. ಭಾರತದಿಂದ ಅವರು ದೂರವಾಗಿರಬಹುದು ಆದರೆ ಹೃದಯದಿಂದ ಎಂದೂ ಭಾರತದೂರವಾಗಿಲ್ಲ. ವಿದೇಶದಲ್ಲಿರುವ ಭಾರತತೀಯ ಸಮುದಾಯ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ಯಶಸ್ಸಾಗಿರುವ ವಿದೇಶಿ ಸಮುದಾಯಗಳಲ್ಲೊಂದಾಗಿದೆ. ಭಾರತದ ವಿದೇಸದಲ್ಲಿರುವ ಜನಸಮುದಾಯದ ಹೃದಯ ಯಾವತ್ತೂ ದೇಶದ ಪ್ರೀತಿ-ಕಾಳಜಿಗಳಿಗಾಗಿ ಸದಾ ತುಡಿಯುತ್ತಿರುತ್ತದೆ.ಪ್ರಧಾನಿ ಶ್ರೀ ನರೇಂದ್ರ ಮೋದಿ ಈ ಜನಸಮುದಾಯದಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಅವರು ತನ್ನ ಪ್ರತಿಯೊಂದೂ ವಿದೇಶ ಪ್ರವಾಸದಲ್ಲೂ ಅಲ್ಲಿನ ಅನಿವಾಸಿ ಜನತೆಯನ್ನು ತಾಯಿನಾಡಿಗೆ ಮತ್ತೊಮ್ಮೆ ಬೆಸೆಯುವ ಕೊಂಡಿಯಾಗಿ ಬೆಸೆಯಲು, ನೆನಪಿಸಲು, ಹಂಚಿಕೊಳ್ಳಲು ಮತ್ತು ಪಾಲ್ಗೊಳ್ಳಲು ಹಾಗೂ ಸಕಾರಾತ್ಮಕವಾಗಿ ಬದಲಾಯಿಸಲು ಸಿಗುವ ಅವಕಾಶವನ್ನಾಗಿ ಸೃಷ್ಠಿಸುತ್ತಿದ್ದರು.“ಮೋದಿ, ಮೋದಿ, ಮೋದಿ..” ಹೋದಲ್ಲಿ ಎಲ್ಲಡೆ ಇದೇ ಕೂಗು.. ಹೋದಲ್ಲಿ ಎಲ್ಲಡೆ ಜನಸಾಗರದ ಹರ್ಷೋದ್ಗಾರ...  ಸಮುದಾಯಗಳ ಸತ್ಕಾರ ಹೊರತಾಗಿ, ವಿಮಾನ ನಿಲ್ದಾಣದಿಂದ ತೊಡಗಿ ಜಯಕಾರದ ಸದ್ದು ಎಲ್ಲಡೆ ಪ್ರತಿಧ್ವನಿಸುತ್ತಿತ್ತು. ವಿದೇಶದ ಹಲವು ಕಾರ್ಯಕ್ರಮಗಳು, ಹಲವು  ಸಮಾರಂಭಗಳು.. ಹಲವು ಸಭೆಗಳು.. ಆದರೆ ಎಲ್ಲಿ ಸೇರಿದರೂ ಅಲ್ಲಿನ ಜನಸಾಮಾನ್ಯ ಕೂಡಾ ಇದನ್ನೇ ಪ್ರತಿಧ್ವನಿಸುತ್ತಿದ್ದರು.ಫ್ರಾನ್ಸ್ ನಲ್ಲಿ ಯುದ್ದ ಸ್ಮಾರಕದಲ್ಲಿ ಪ್ರಧಾನಿ ಹೇಳಿದರು” ಶಾಹಿದೋ ಅಮರ್ ರಹೇ” (ನಮ್ಮ ಧೈರ್ಯಶಾಲಿ ಹುತಾತ್ಮರು ಚಿರಂಜೀವಿಗಳಾಗಲಿ)ಜಾಗತಿಕ ಭಾರತೀಯ ಸಮದಾಯದ ಮಹತ್ವ ಮತ್ತು ಅವರೊಂದಿಗಿನ ನಿರಂತರ ಸಂಪರ್ಕ ಹಾಗೂ ಅವರ ಪಾಲ್ಗೊಳ್ಳುವಿಕೆ ಯನ್ನು ಭಾರತದ  ಅಭಿವೃದ್ಧಿ ನಿಟ್ಟಿನಲ್ಲಿ ಅನಿವಾರ್ಯವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರುತಿಸಿದರು.

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
PM Jan-Dhan Yojana: Number of accounts tripled, government gives direct benefit of 2.30 lakh

Media Coverage

PM Jan-Dhan Yojana: Number of accounts tripled, government gives direct benefit of 2.30 lakh
...

Nm on the go

Always be the first to hear from the PM. Get the App Now!
...
ಶೇರ್
 
Comments

5 ನೇ ಮೇ 2017 ರಂದು, ದಕ್ಷಿಣ ಏಷ್ಯಾದ ಸಹಕಾರವು ಬಲವಾದ ಪ್ರಚೋದನೆಯನ್ನು ಪಡೆದ ದಿನ , ದಕ್ಷಿಣ ಏಷ್ಯಾ ಉಪಗ್ರಹವನ್ನು ಯಶಸ್ವಿಯಾಗಿ ಪ್ರಾರಂಭಿಸಿದ ದಿನ, ಎರಡು ವರ್ಷಗಳ ಹಿಂದೆ ಭಾರತ ಮಾಡಿದ ಬದ್ಧತೆಯನ್ನು ಪೂರೈಸುವ ದಿನ.

ದಕ್ಷಿಣ ಏಷ್ಯಾ ಉಪಗ್ರಹದೊಂದಿಗೆ, ದಕ್ಷಿಣ ಏಷ್ಯಾದ ರಾಷ್ಟ್ರಗಳು ತಮ್ಮ ಸಹಕಾರವನ್ನು ಬ್ಯಾಹ್ಯಾಕಾಶಕ್ಕೆ ವಿಸ್ತರಿಸಿದೆ!

ಇತಿಹಾಸದ ಸೃಷ್ಟಿಗೆ ಸಾಕ್ಷಿಯಾಗಲು, ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾ ನಾಯಕರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದಕ್ಷಿಣ ಏಷ್ಯಾ ಉಪಗ್ರಹವನ್ನು ಸಾಧಿಸುವ ಸಾಮರ್ಥ್ಯದ ಸಂಪೂರ್ಣ ಚಿತ್ರವನ್ನು ನೀಡಿದರು.

ಉಪಗ್ರಹವು ಉತ್ತಮ ಆಡಳಿತ, ಪರಿಣಾಮಕಾರಿ ಸಂವಹನ, ಉತ್ತಮ ಬ್ಯಾಂಕಿಂಗ್ ಮತ್ತು ದೂರದ ಪ್ರದೇಶಗಳಲ್ಲಿ ಶಿಕ್ಷಣ, ನಿಖರವಾದ ಹವಾಮಾನ ಮುನ್ಸೂಚನೆ ಮತ್ತು ಟೆಲಿ-ಮೆಡಿಸಿನ್ ಮೂಲಕ ಜನರನ್ನು ಸಂಪರ್ಕಿಸುವ ಮೂಲಕ ಉತ್ತಮ ಚಿಕಿತ್ಸೆಯನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದರು.

"ನಾವು  ಒಟ್ಟಿಗೆ ಸೇರ್ಪಡೆಗೊಂಡು ಜ್ಞಾನ, ತಂತ್ರಜ್ಞಾನ ಮತ್ತು ಬೆಳವಣಿಗೆಯ ಫಲವನ್ನು ಹಂಚಿಕೊಂಡಾಗ, ನಮ್ಮ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ನಾವು ವೇಗಗೊಳಿಸಬಹುದು" ಎಂದು ಮೋದಿ ಸರಿಯಾಗಿ ಹೇಳಿದರು .