ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು, ಒಡಿಶಾದಲ್ಲಿ ಹೈಬ್ರಿಡ್ ಅನ್ಯೂಯಿಟಿ ಮಾದರಿಯ ಅಡಿಯಲ್ಲಿ ರಾಮೇಶ್ವರ್ ನಿಂದ ಪಾರದೀಪ್ ವರೆಗೆ ಹೊಸ ಕರಾವಳಿ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಎರಡು ಪ್ಯಾಕೇಜ್ ಗಳ ಅಡಿಯಲ್ಲಿ ನಿರ್ಮಾಣವಾಗಲಿರುವ ಈ ಹೆದ್ದಾರಿಯು ಒಟ್ಟು 160.18 ಕಿ.ಮೀ ಉದ್ದವನ್ನು ಹೊಂದಿದ್ದು, ಇದರ ಒಟ್ಟು ಜಂಟಿ ಬಂಡವಾಳ ವೆಚ್ಚ ₹8300.79 ಕೋಟಿ ಆಗಿದೆ.
ರಾಮೇಶ್ವರ್ ನಿಂದ ಪಾರದೀಪ್ ವರೆಗಿನ ಈ ಹೊಸ ಕರಾವಳಿ ಹೆದ್ದಾರಿ ಯೋಜನೆಯು ಒಡಿಶಾದ ಖುರ್ದಾ, ಪುರಿ, ಕೇಂದ್ರಪಾಡ ಮತ್ತು ಜಗತಸಿಂಗಪುರ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಪ್ರಸ್ತುತ ಇರುವ ರಾಷ್ಟ್ರೀಯ ಹೆದ್ದಾರಿ-16 (ಎನ್ ಎಚ್-16) ರಸ್ತೆಯು 'ಸುವರ್ಣ ಚತುಷ್ಕೋನ'ದ ಭಾಗವಾಗಿದ್ದು, ಈಗಾಗಲೇ ಪ್ರಮುಖ ನಗರಗಳಾದ ಖೋರ್ಧಾ, ಭುವನೇಶ್ವರ ಮತ್ತು ಕಟಕ್ ಮೂಲಕ ಹಾದುಹೋಗುವ ಷಟ್ಪಥ ಹೆದ್ದಾರಿಯಾಗಿದೆ. ಸದ್ಯ ಇರುವ ಎನ್ ಎಚ್-316 ರಸ್ತೆಯು ಭುವನೇಶ್ವರ-ಪುರಿಯನ್ನು ಸಂಪರ್ಕಿಸುತ್ತದೆ ಮತ್ತು ಮುಂದೆ ಸತಾಪಡಾ ಹಾಗೂ ಕೋನಾರ್ಕ್ ವರೆಗೆ ವಿಸ್ತರಿಸುತ್ತದೆ. ಪುರಿ-ಸತಾಪಡಾ ಮತ್ತು ಪುರಿ-ಕೋನಾರ್ಕ್ ಮಾರ್ಗಗಳ ಪ್ರಸ್ತುತ ರಸ್ತೆ ವಿನ್ಯಾಸವು ಕಳಪೆಯಾಗಿದೆ. ಈ ಕಾರಿಡಾರ್ ನ ಉದ್ದಕ್ಕೂ ಸುಮಾರು ಶೇ.40 ರಷ್ಟು ರಸ್ತೆಯ ಪಕ್ಕದಲ್ಲೇ ಮನೆ/ಕಟ್ಟಡಗಳು ನಿರ್ಮಾಣವಾಗಿವೆ ಮತ್ತು ಸ್ಥಳೀಯ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಈ ಮಾರ್ಗವು ಯಾವುದೇ ಅಡೆತಡೆಯಿಲ್ಲದ ಮತ್ತು ಸುಗಮ ದೂರದ ವಾಹನ ಸಂಚಾರಕ್ಕೆ ಸೂಕ್ತವಾಗಿಲ್ಲ.
ಪ್ರಸ್ತಾವಿತ ಈ ಹೊಸ ಯೋಜನೆಯಡಿ ರಾಮೇಶ್ವರ್ ನಿಂದ ಕೋನಾರ್ಕ್ ವರೆಗೆ (ಪ್ಯಾಕೇಜ್-1) ಚತುಷ್ಪಥ ರಸ್ತೆ ಹಾಗೂ ಕೋನಾರ್ಕ್ ನಿಂದ ಪಾರದೀಪ್ ವರೆಗೆ (ಪ್ಯಾಕೇಜ್-2) ಪೇವ್ಡ್ ಶೋಲ್ಡರ್ (ರಸ್ತೆಯ ಪಕ್ಕದ ಡಾಂಬರು ಪಟ್ಟಿ) ಹೊಂದಿರುವ ದ್ವಿಪಥ ರಸ್ತೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದು ಗಂಟೆಗೆ 100 ಕಿ.ಮೀ ವೇಗದ ಸಂಚಾರ ವಿನ್ಯಾಸವನ್ನು ಖಚಿತಪಡಿಸಲಿದ್ದು, ಒಡಿಶಾ ರಾಜ್ಯದ ಖುರ್ದಾ, ಪುರಿ, ಕೇಂದ್ರಪಾಡ ಮತ್ತು ಜಗತಸಿಂಗಪುರ ಜಿಲ್ಲೆಗಳಾದ್ಯಂತ ಪ್ರಯಾಣದ ದಕ್ಷತೆಯನ್ನು ಸುಧಾರಿಸಲಿದೆ. ಈ ಯೋಜನೆಯು ಪ್ರಾದೇಶಿಕ ಸುಲಭ ಸಂಚಾರವನ್ನು ಹೆಚ್ಚಿಸುವುದರ ಜೊತೆಗೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೂ ಉತ್ತೇಜನ ನೀಡಲಿದೆ.
ಈ ಯೋಜನೆಗಳು 'ಪಿಎಂ ಗತಿಶಕ್ತಿ' ತತ್ವಗಳಿಗೆ ಅನುಗುಣವಾಗಿದ್ದು, 9 ಆರ್ಥಿಕ ಕೇಂದ್ರಗಳನ್ನು ಮತ್ತು 5 ಲಾಜಿಸ್ಟಿಕ್ ಕೇಂದ್ರಗಳನ್ನು (ಸಾರಿಗೆ/ಸರಕು ನಿರ್ವಹಣಾ ಕೇಂದ್ರಗಳು) ಸಂಪರ್ಕಿಸಲಿವೆ. ಇದು ದೇಶದ ಸಾರಿಗೆ ದಕ್ಷತೆ ಸೂಚ್ಯಂಕದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.
ಯೋಜನೆ ಪೂರ್ಣಗೊಂಡ ನಂತರ, ರಾಮೇಶ್ವರ್ ಮತ್ತು ಪಾರದೀಪ್ ನಡುವಿನ ಪ್ರಯಾಣದ ಸಮಯ ಸುಮಾರು 2 ಗಂಟೆ 30 ನಿಮಿಷಗಳಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ಪ್ರಯಾಣಿಕರು ಮತ್ತು ಸರಕು ಸಾಗಣೆ ವಾಹನಗಳಿಗೆ ಸುರಕ್ಷಿತ, ವೇಗದ ಮತ್ತು ತಡೆರಹಿತ ಸಂಪರ್ಕ ದೊರೆಯಲಿದೆ. ಹೆಚ್ಚುವರಿಯಾಗಿ, ಈ ಯೋಜನೆಯಿಂದಾಗಿ ಇಂಧನ ಬಳಕೆ, ಇಂಗಾಲದ ಹೊರಸೂಸುವಿಕೆ ಮತ್ತು ವಾಹನ ಚಾಲನಾ ವೆಚ್ಚದಲ್ಲಿ ಗಣನೀಯ ಕಡಿತವಾಗಲಿದೆ.
(ಕಾರಿಡಾರ್‌ನ ನಕ್ಷೆ)



ಅನುಬಂಧ - I: ಯೋಜನೆಯ ವಿವರಗಳು
ವಿವರಣೆ
ರಾಮೇಶ್ವರ್ - ಕೋನಾರ್ಕ್ ಚತುಷ್ಪಥ ನಿಯಂತ್ರಿತ ಪ್ರವೇಶದ ಹೆದ್ದಾರಿ
ಕೋನಾರ್ಕ್ - ಪಾರದೀಪ್ (ಪೇವ್ಡ್ ಶೋಲ್ಡರ್ ಹೊಂದಿರುವ ದ್ವಿಪಥ)
ಉದ್ದ (ಕಿ.ಮೀ)
79.40
80.78
ಬ್ರೌನ್ಫೀಲ್ಡ್ ಉದ್ದ (ಕಿ.ಮೀ) (ಅಸ್ತಿತ್ವದಲ್ಲಿರುವ ರಸ್ತೆ ವಿಸ್ತರಣೆ)
2.560
-
ಗ್ರೀನ್ಫೀಲ್ಡ್ ಉದ್ದ (ಕಿ.ಮೀ) (ಹೊಸ ರಸ್ತೆ ನಿರ್ಮಾಣ)
76.840
80.78
ಒಟ್ಟು ಸಿವಿಲ್ ವೆಚ್ಚ (ಕೋಟಿ ರೂ.ಗಳಲ್ಲಿ)
3129.06
1566.02
ಭೂಸ್ವಾಧೀನ ಮತ್ತು ಇತರ ನಿರ್ಮಾಣ-ಪೂರ್ವ ವೆಚ್ಚ (ಕೋಟಿ ರೂ.ಗಳಲ್ಲಿ)
751.62
668.13
ಒಟ್ಟು ಬಂಡವಾಳ ವೆಚ್ಚ (ಕೋಟಿ ರೂ.ಗಳಲ್ಲಿ)
5304.80
2995.99
ಮಾದರಿ
ಹೈಬ್ರಿಡ್ ಅನ್ಯೂಯಿಟಿ ಮಾದರಿ
ಹೈಬ್ರಿಡ್ ಅನ್ಯೂಯಿಟಿ ಮಾದರಿ
ಒಟ್ಟು ಗುತ್ತಿಗೆ ಅವಧಿ
17.5 ವರ್ಷಗಳು (2.5 ವರ್ಷಗಳ ನಿರ್ಮಾಣ + 15 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ)
17.5 ವರ್ಷಗಳು (2.5 ವರ್ಷಗಳ ನಿರ್ಮಾಣ + 15 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ)
ಆರ್ಥಿಕ ಕೇಂದ್ರಗಳು
2 ವಿಶೇಷ ಆರ್ಥಿಕ ವಲಯಗಳು - ಭುವನೇಶ್ವರ, ಖೋರ್ಧಾ (ಖಂಡಗಿರಿ); ಮೆಗಾ ಫುಡ್ ಪಾರ್ಕ್ ಗಳು - ಭುವನೇಶ್ವರ; ಮೀನುಗಾರಿಕೆ ಕ್ಲಸ್ಟರ್ - ಪಾರದೀಪ್, ಕೋನಾರ್ಕ್, ಜಗತಸಿಂಗಪುರ, ಪುರಿ, ಕೇಂದ್ರಪಾಡ; ಫಾರ್ಮಾ ಕ್ಲಸ್ಟರ್ (ಔಷಧ ವಲಯ) - ಕಟಕ್.
ಲಾಜಿಸ್ಟಿಕ್ ಕೇಂದ್ರಗಳು
ಪುರಿ ರೈಲ್ವೆ ನಿಲ್ದಾಣ, ಪುರಿ ವಿಮಾನ ನಿಲ್ದಾಣ, ಅಸ್ತಾರಂಗ್ ಬಂದರು, ಪಾರದೀಪ್ ಬಂದರು ಮತ್ತು ಎಂ ಎಂ ಎಲ್ ಪಿ - ಜಗತಸಿಂಗಪುರ.
ಉದ್ಯೋಗ ಸೃಷ್ಟಿ ಸಾಮರ್ಥ್ಯ
53.61 ಲಕ್ಷ ಮಾನವ-ದಿನಗಳು (ನೇರ) ಮತ್ತು 67.01 ಲಕ್ಷ ಮಾನವ-ದಿನಗಳು (ಪರೋಕ್ಷ)
ಹಣಕಾಸು ವರ್ಷ 2027-28 ರ ಅವಧಿಯಲ್ಲಿ ನಿರೀಕ್ಷಿತ ವಾರ್ಷಿಕ ಸರಾಸರಿ ದೈನಂದಿನ ಸಂಚಾರ (ಎಎಡಿಟಿ)
ಪ್ಯಾಕೇಜ್ I: 10,437 ಪಿಸಿಯು (9,236 ಪಿಸಿಯು ಟೋಲ್ ಪಾವತಿಸಬಹುದಾದ್ದು)
ಪ್ಯಾಕೇಜ್ II: 7,249 ಪಿಸಿಯು (6,369 ಪಿಸಿಯು ಟೋಲ್ ಪಾವತಿಸಬಹುದಾದ್ದು)
The approval for the construction of a new coastal highway from Rameshwar to Paradeep in Odisha will improve connectivity across Khordha, Puri, Kendrapada and Jagatsinghpur districts while significantly reducing travel time. This modern project will strengthen logistics, support…
— Narendra Modi (@narendramodi) June 3, 2026
ଓଡ଼ିଶାର ରାମେଶ୍ୱରରୁ ପାରାଦୀପ ପର୍ଯ୍ୟନ୍ତ ଏକ ନୂତନ ଉପକୂଳ ରାଜପଥ ନିର୍ମାଣ ପାଇଁ ଅନୁମୋଦନ ଦ୍ୱାରା ଖୋର୍ଦ୍ଧା, ପୁରୀ, କେନ୍ଦ୍ରାପଡା ଏବଂ ଜଗତସିଂପୁର ଜିଲ୍ଲାର ଯୋଗାଯୋଗରେ ଉନ୍ନତି ଆସିବ ଏବଂ ଯାତ୍ରା ସମୟ ଯଥେଷ୍ଟ ହ୍ରାସ ପାଇବ । ଏହି ଆଧୁନିକ ପ୍ରକଳ୍ପ ଲଜିଷ୍ଟିକ୍ସକୁ ସୁଦୃଢ଼ କରିବ, ପର୍ଯ୍ୟଟନ ଓ ଆର୍ଥିକ କାର୍ଯ୍ୟକଳାପକୁ ସମର୍ଥନ…
— Narendra Modi (@narendramodi) June 3, 2026


