2022 ರ ಆಗಸ್ಟ್ 15 ರಂದು ಕೆಂಪು ಕೋಟೆಯ ಆವರಣದಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿಯವರು ಅಮೃತ ಕಾಲದಲ್ಲಿ ನಮ್ಮ ದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಾಮುಖ್ಯತೆಯನ್ನು ತಿಳಿಸಿದ್ದರು. ಈ ಸಂದರ್ಭದಲ್ಲಿ ಅವರು "ಜೈ ಅನುಸಂಧಾನ" ಎಂಬ ಘೋಷಣೆಯನ್ನು ನೀಡಿದ್ದರು
ಎನ್‌ ಇ ಪಿ 2020 ನಮ್ಮ ದೇಶದಲ್ಲಿ ಅತ್ಯುತ್ತಮ ಶಿಕ್ಷಣ ಮತ್ತು ಅಭಿವೃದ್ಧಿಗೆ ಸಂಶೋಧನೆಯನ್ನು ಅತ್ಯಗತ್ಯವೆಂದು ಗುರುತಿಸಿದೆ
ಭಾರತ ಸರ್ಕಾರವು ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸುವುದು ಈ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ

ಒಂದು ರಾಷ್ಟ್ರ ಒಂದು ಚಂದಾದಾರಿಕೆಯು ಸರ್ಕಾರಿ ಸಂಸ್ಥೆಗಳಲ್ಲಿನ ಎಲ್ಲಾ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಶೋಧಕರಿಗೆ ಸಂಶೋಧನೆಯನ್ನು ಸುಲಭಗೊಳಿಸುವ ಮೂಲಕ ಜಾಗತಿಕ ಸಂಶೋಧನಾ ಪರಿಸರ ವ್ಯವಸ್ಥೆಯಲ್ಲಿ ಭಾರತವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಒಂದು ಸಕಾಲಿಕ ಹೆಜ್ಜೆಯಾಗಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ವಿದ್ವತ್ಪೂರ್ಣ ಸಂಶೋಧನಾ ಲೇಖನಗಳು ಮತ್ತು ಜರ್ನಲ್ ಪ್ರಕಟಣೆಗೆ ದೇಶಾದ್ಯಂತ ಪ್ರವೇಶವನ್ನು ಒದಗಿಸುವ ಹೊಸ ಕೇಂದ್ರ ವಲಯ ಯೋಜನೆಯಾದ ಒಂದು ರಾಷ್ಟ್ರ ಒಂದು ಚಂದಾದಾರಿಕೆಯನ್ನು ಅನುಮೋದಿಸಿದೆ. ಈ ಯೋಜನೆಯನ್ನು ಸರಳ, ಬಳಕೆದಾರ ಸ್ನೇಹಿ ಮತ್ತು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯ ಮೂಲಕ ನಿರ್ವಹಿಸಲಾಗುತ್ತದೆ. ಇದು ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರದ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳಿಗೆ "ಒಂದು ರಾಷ್ಟ್ರ ಒಂದು ಚಂದಾದಾರಿಕೆ" ಸೌಲಭ್ಯವಾಗಿದೆ.

ಹೊಸ ಕೇಂದ್ರ ವಲಯದ ಯೋಜನೆಯಾಗಿ 2025, 2026 ಮತ್ತು 2027ರ ಮೂರು ಕ್ಯಾಲೆಂಡರ್ ವರ್ಷಗಳಿಗೆ ಒಂದು ರಾಷ್ಟ್ರ ಒಂದು ಚಂದಾದಾರಿಕೆಗಾಗಿ ಒಟ್ಟು ಸುಮಾರು 6,000 ಕೋಟಿ ರೂ. ನಿಗದಿಪಡಿಸಲಾಗಿದೆ. ಒಂದು ರಾಷ್ಟ್ರ ಒಂದು ಚಂದಾದಾರಿಕೆಯು ಭಾರತದ ಯುವಜನರಿಗೆ ಗುಣಮಟ್ಟದ ಉನ್ನತ ಶಿಕ್ಷಣದ ಗರಿಷ್ಠ ಪ್ರವೇಶಕ್ಕಾಗಿ ಶಿಕ್ಷಣದ ಡೊಮೇನ್‌ ಗಳಲ್ಲಿ ಕಳೆದ ದಶಕದಲ್ಲಿ ಭಾರತ ಸರ್ಕಾರವು ಕೈಗೊಂಡ ಉಪಕ್ರಮಗಳ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯ ಸಂಸ್ಕೃತಿಯನ್ನು ಉತ್ತೇಜಿಸಲು ಎ ಎನ್‌ ಆರ್‌ ಎಫ್‌ ಉಪಕ್ರಮಕ್ಕೆ ಪೂರಕವಾಗಿದೆ.

ಒಂದು ರಾಷ್ಟ್ರ ಒಂದು ಚಂದಾದಾರಿಕೆ ಯೋಜನೆಯ ಪ್ರಯೋಜನಗಳನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರದ ನಿರ್ವಹಣೆಯಲ್ಲಿರುವ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಕೇಂದ್ರ ಸರ್ಕಾರದ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿಗೆ, ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಸ್ವಾಯತ್ತ ಅಂತರ-ವಿಶ್ವವಿದ್ಯಾಲಯ ಕೇಂದ್ರವಾದ ಮಾಹಿತಿ ಮತ್ತು ಗ್ರಂಥಾಲಯ ನೆಟ್‌ವರ್ಕ್ (INFLIBNET) ನಿಂದ ಸಂಯೋಜಿಸಲ್ಪಟ್ಟ ರಾಷ್ಟ್ರೀಯ ಚಂದಾದಾರಿಕೆಯ ಮೂಲಕ ಒದಗಿಸಲಾಗುತ್ತದೆ. ಈ ಪಟ್ಟಿಯು 6,300 ಕ್ಕೂ ಹೆಚ್ಚು ಸಂಸ್ಥೆಗಳನ್ನು ಒಳಗೊಂಡಿದೆ, ಿದರಿಂದಾಗಿ ಸುಮಾರು 1.8 ಕೋಟಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಶೋಧಕರು ಒಂದು ರಾಷ್ಟ್ರ ಒಂದು ಚಂದಾದಾರಿಕೆಯ ಪ್ರಯೋಜನಗಳನ್ನು ಪಡೆಯಬಹುದು.

ಇದು 2047ರ ವೇಳೆಗೆ ವಿಕಸಿತ ಭಾರತ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ ಇ ಪಿ) 2020 ಮತ್ತು ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (ಎ ಎನ್‌ ಆರ್‌ ಎಫ್) ಗುರಿಗಳಿಗೆ ಅನುಗುಣವಾಗಿದೆ. ಈ ಉಪಕ್ರಮವು 2 ಮತ್ತು 3ನೇ ಶ್ರೇಣಿ ನಗರಗಳು ಸೇರಿದಂತೆ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು ಮತ್ತು ವಿಜ್ಞಾನಿಗಳಿಗೆ ವ್ಯಾಪಕ ವಿದ್ವತ್ಪೂರ್ಣ ನಿಯತಕಾಲಿಕಗಳಿಗೆ ಪ್ರವೇಶವನ್ನು ವಿಸ್ತರಿಸುತ್ತದೆ, ಇದರಿಂದಾಗಿ ದೇಶದಲ್ಲಿ ಪ್ರಮುಖವಾದ ಮತ್ತು ಅಂತರಶಿಸ್ತೀಯ ಸಂಶೋಧನೆಗಳನ್ನು ಉತ್ತೇಜಿಸುತ್ತದೆ. ಎ ಎನ್‌ ಆರ್‌ ಎಫ್ ನಿಯಮಿತವಾಗಿ ಒಂದು ರಾಷ್ಟ್ರ ಒಂದು ಚಂದಾದಾರಿಕೆಯ ಬಳಕೆಯನ್ನು ಮತ್ತು ಈ ಸಂಸ್ಥೆಗಳ ಭಾರತೀಯ ಲೇಖಕರ ಪ್ರಕಟಣೆಗಳನ್ನು ಪರಿಶೀಲಿಸುತ್ತದೆ.

ಉನ್ನತ ಶಿಕ್ಷಣ ಇಲಾಖೆಯು "ಒಂದು ರಾಷ್ಟ್ರ ಒಂದು ಚಂದಾದಾರಿಕೆ" ಎಂಬ ಏಕೀಕೃತ ಪೋರ್ಟಲ್ ಅನ್ನು ಹೊಂದಿರುತ್ತದೆ, ಅದರ ಮೂಲಕ ಸಂಸ್ಥೆಗಳು ಜರ್ನಲ್‌ ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಎ ಎನ್‌ ಆರ್‌ ಎಫ್ ನಿಯಮಿತವಾಗಿ ಒಂದು ರಾಷ್ಟ್ರ ಒಂದು ಚಂದಾದಾರಿಕೆಯ ಬಳಕೆಯನ್ನು ಮತ್ತು ಈ ಸಂಸ್ಥೆಗಳ ಭಾರತೀಯ ಲೇಖಕರ ಪ್ರಕಟಣೆಗಳನ್ನು ಪರಿಶೀಲಿಸುತ್ತದೆ. ತಮ್ಮ ನಿರ್ವಹಣೆಯಡಿಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಆರ್&ಡಿ ಸಂಸ್ಥೆಗಳನ್ನು ಹೊಂದಿರುವ ಇತರ ಸಚಿವಾಲಯಗಳು ಈ ಸಂಸ್ಥೆಗಳ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಶೋಧಕರ ನಡುವೆ ಒಂದು ರಾಷ್ಟ್ರದ ಒಂದು ಚಂದಾದಾರಿಕೆಯ ಲಭ್ಯತೆ ಮತ್ತು ವಿಧಾನದ ಬಗ್ಗೆ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಅಭಿಯಾನಗಳನ್ನು ನಡೆಸುತ್ತವೆ. ಇದರಿಂದಾಗಿ ಇಡೀ ದೇಶದಲ್ಲಿ ಈ ಸೌಲಭ್ಯವನ್ನು ಉತ್ತಮವಾಗಿ ಬಳಸಿಕೊಳ್ಳಬಹುದು. ಎಲ್ಲಾ ಸರ್ಕಾರಿ ಸಂಸ್ಥೆಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಶೋಧಕರು ಈ ವಿಶಿಷ್ಟ ಸೌಲಭ್ಯವನ್ನು ಗರಿಷ್ಠವಾಗಿ ಬಳಸುವಂತಾಗಲು ತಮ್ಮ ಮಟ್ಟದಲ್ಲಿ ಅಭಿಯಾನಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರಗಳಿಗೆ ಕೇಳಲಾಗುವುದು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Year Ender 2025: Major Income Tax And GST Reforms Redefine India's Tax Landscape

Media Coverage

Year Ender 2025: Major Income Tax And GST Reforms Redefine India's Tax Landscape
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಡಿಸೆಂಬರ್ 2025
December 29, 2025

From Culture to Commerce: Appreciation for PM Modi’s Vision for a Globally Competitive India