ಈ ನಿರ್ಧಾರವು 5 ಕೋಟಿ ಕಬ್ಬು ರೈತರು ಹಾಗೂ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ 5 ಲಕ್ಷ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ

ಕಬ್ಬು ಬೆಳೆಯುವ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತಾದ ಸಚಿವ ಸಂಪುಟ ಸಮಿತಿಯು 2026-27ರ ಸಕ್ಕರೆ ಬೆಳೆಯ ಋತುವಿನಲ್ಲಿ  (ಅಕ್ಟೋಬರ್ - ಸೆಪ್ಟೆಂಬರ್) 10.25% ಮೂಲ ಚೇತರಿಕೆ ದರಕ್ಕಾಗಿ ರೂ.365/ಕ್ವಿ.ಟಿ.ಎಲ್. ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (ಎಫ್.ಆರ್.ಪಿ.) ಅನುಮೋದಿಸಿದೆ, ಇದು 10.25% ಕ್ಕಿಂತ ಹೆಚ್ಚಿನ ಚೇತರಿಕೆಯಲ್ಲಿ ಪ್ರತಿ 0.1% ಹೆಚ್ಚಳಕ್ಕೆ ರೂ.3.56/ಕ್ವಿ.ಟಿ.ಎಲ್‌.ಗೆ ಪ್ರೀಮಿಯಂ ಅನ್ನು ಒದಗಿಸುತ್ತದೆ ಮತ್ತು  ಚೇತರಿಕೆಯಲ್ಲಿ ಶೇ. 0.1 ರಷ್ಟು ಇಳಿಕೆ ಕಾಣುವಾಗ ಪ್ರತಿಯೊಂದಕ್ಕೂ ಎಫ್.ಆರ್.ಪಿ. ಯಲ್ಲಿ ರೂ.3.56/ಕ್ವಿ.ಟಿ.ಎಲ್.  ಕಡಿತವನ್ನು ಒದಗಿಸುತ್ತದೆ.

ಕಬ್ಬು ಬೆಳೆಗಾರರ ​​ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು, 9.5% ಕ್ಕಿಂತ ಕಡಿಮೆ ಚೇತರಿಕೆ ಹೊಂದಿರುವ ಸಕ್ಕರೆ ಕಾರ್ಖಾನೆಗಳ ಸಂದರ್ಭದಲ್ಲಿ ಯಾವುದೇ ಕಡಿತವನ್ನು ವಿಧಿಸಬಾರದು ಎಂದು ನಿರ್ಧರಿಸಿದೆ. ಅಂತಹ ರೈತರು 2026-27 ರ ಮುಂದಿನ ಸಕ್ಕರೆ ಋತುವಿನಲ್ಲಿ ಕಬ್ಬಿಗೆ ಪ್ರತಿ ಕ್ವಿಂ.ಗೆ ರೂ.338.3 ಪಡೆಯಲಿದ್ದಾರೆ.

2026-27 ರ ಸಕ್ಕರೆ ಋತುವಿನಲ್ಲಿ ಕಬ್ಬಿನ ಉತ್ಪಾದನಾ ವೆಚ್ಚ (ಎ2 +ಎಫ್.ಎಲ್.) ರೂ.182/ಕ್ಯೂಂ. ಆಗಿರುತ್ತದೆ. ಇದು ಈ ಎಫ್.ಆರ್.ಪಿ. ರೂ.365 ರ 10.25% ರಷ್ಟು ಚೇತರಿಕೆ ದರದಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಶೇ.100.5 ರಷ್ಟು ಹೆಚ್ಚಾಗಿದೆ. 2026-27 ರ ಸಕ್ಕರೆ ಋತುವಿನ ಎಫ್.ಆರ್.ಪಿ. ಪ್ರಸ್ತುತ 2025-26 ರ ಸಕ್ಕರೆ ಋತುವಿಗಿಂತ ಶೇ.2.81 ರಷ್ಟು ಹೆಚ್ಚಾಗಿದೆ.

2026-27ರ ಸಕ್ಕರೆ ಋತುವಿನಲ್ಲಿ (2026 ರ ಅಕ್ಟೋಬರ್ 1 ರಿಂದ ಪ್ರಾರಂಭವಾಗುತ್ತದೆ) ಸಕ್ಕರೆ ಕಾರ್ಖಾನೆಗಳು ರೈತರಿಂದ ಕಬ್ಬು ಖರೀದಿಸಲು ಅನುಮೋದಿಸಲಾದ ಎಫ್.ಆರ್.ಪಿ.ಗೆ ಇದು ಅನ್ವಯಿಸುತ್ತದೆ. ಸಕ್ಕರೆ ವಲಯವು ಒಂದು ಪ್ರಮುಖ ಕೃಷಿ ಆಧಾರಿತ ವಲಯವಾಗಿದ್ದು, ಇದು ಕೃಷಿ ಕಾರ್ಮಿಕ ಮತ್ತು ಸಾರಿಗೆ ಸೇರಿದಂತೆ ವಿವಿಧ ಪೂರಕ ಚಟುವಟಿಕೆಗಳಲ್ಲಿ ಕೆಲಸ ಮಾಡುವವರನ್ನು ಹೊರತುಪಡಿಸಿ, ಸುಮಾರು 5 ಕೋಟಿ ಕಬ್ಬು ರೈತರು ಮತ್ತು ಅವರ ಅವಲಂಬಿತರು ಮತ್ತು ಸಕ್ಕರೆ ಕಾರ್ಖಾನೆಗಳಲ್ಲಿ ನೇರವಾಗಿ ಕೆಲಸ ಮಾಡುವ ಸುಮಾರು 5 ಲಕ್ಷ ಕಾರ್ಮಿಕರ ಜೀವನೋಪಾಯದ ಮೇಲೆ ಇದು ಪರಿಣಾಮ ಬೀರುತ್ತದೆ.


ಹಿನ್ನೆಲೆ:

ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಆಧಾರದ ಮೇಲೆ ಮತ್ತು ರಾಜ್ಯ ಸರ್ಕಾರಗಳು ಮತ್ತು ಇತರ ಪಾಲುದಾರರೊಂದಿಗೆ ಸಮಾಲೋಚನೆಯ ನಂತರ ಎಫ್.ಆರ್.ಪಿ.ಯನ್ನು ನಿರ್ಧರಿಸಲಾಗಿದೆ.

ಹಿಂದಿನ ಸಕ್ಕರೆ ಋತುವಿನಲ್ಲಿ 2024-25 ರ ಸಕ್ಕರೆ ಋತುವಿನಲ್ಲಿ, 20.04.2026 ರ ಹೊತ್ತಿಗೆ, 1,02,687 ಕೋಟಿ ರೂ.ಗಳಷ್ಟು ಕಬ್ಬಿನ ಬಾಕಿಯಲ್ಲಿ ಸುಮಾರು 1,02,209 ಕೋಟಿ ರೂ. ಗಳಷ್ಟು ಕಬ್ಬಿನ ಬಾಕಿಯನ್ನು ಈಗಾಗಲೇ ರೈತರಿಗೆ ಪಾವತಿಸಲಾಗಿದೆ;  ಹೀಗಾಗಿ, ಸುಮಾರು 99.5% ಕಬ್ಬಿನ ಬಾಕಿಗಳನ್ನು ಈಗಾಗಲೇ ಪಾವತಿಸಲಾಗಿದೆ. ಪ್ರಸ್ತುತ ಸಕ್ಕರೆ ಋತು /ಕಾಲಾವಧಿ 2025-26 ರಲ್ಲಿ, ಪಾವತಿಸಬೇಕಾದ ರೂ.1,12,740 ಕೋಟಿ ಕಬ್ಬಿನ ಬಾಕಿಗಳಲ್ಲಿ ಸುಮಾರು ರೂ.99,961 ಕೋಟಿ ಕಬ್ಬಿನ ಬಾಕಿಗಳನ್ನು 20.04.2026 ರ ವೇಳೆಗೆ ರೈತರಿಗೆ ಪಾವತಿಸಲಾಗಿದೆ; ಹೀಗಾಗಿ, ಸುಮಾರು 88.6% ಕಬ್ಬಿನ ಬಾಕಿಗಳನ್ನು ಈಗಾಗಲೇ ಪಾವತಿಸಲಾಗಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Centre releases Rs 1.09 lakh crore tax devolution; Uttar Pradesh gets biggest share to accelerate development spending

Media Coverage

Centre releases Rs 1.09 lakh crore tax devolution; Uttar Pradesh gets biggest share to accelerate development spending
NM on the go

Nm on the go

Always be the first to hear from the PM. Get the App Now!
...
Governor of Jharkhand meets Prime Minister
August 03, 2026