
ಸೆಪ್ಟೆಂಬರ್ 4, 2017ರಂದು ಚೈನಾದ ಶಿಯಾಮೆನ್ ನಲ್ಲಿ ನಡೆದ 9ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಬ್ರಿಕ್ಸ್ ನಾಯಕರ ಘೋಷಣೆಯು ಸದಸ್ಯ ರಾಷ್ಟ್ರಗಳ ಪರಸ್ಪರ ಸಹಕಾರವನ್ನು ಉತ್ತೇಜಿಸಲಿದೆ. ನ್ಯಾಯೋಚಿತ ಅಂತಾರಾಷ್ಟ್ರೀಯ ಆರ್ಥಿಕ ಆದೇಶಗಳನ್ನು ಮತ್ತು ಜಾಗತಿಕ ಆರ್ಥಿಕ ಆಡಳಿತವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂವಹನ ಮತ್ತು ಸಹಕಾರಗಳನ್ನು ಹೆಚ್ಚಿಸುವ ವ್ಯವಸ್ಥೆಯನ್ನು ಘೋಷಣೆ ಒಳಗೊಂಡಿದೆ. ಘೋಷಣೆಯು ಆಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಒತ್ತಿಹೇಳುತ್ತದೆ





