ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೋಜ್‌ಪುರದ ಸಿರಿಧಾನ್ಯ ಉತ್ಸವವು 'ಶ್ರೀ ಅನ್ನ' ಉತ್ಪನ್ನದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ಇದರಿಂದ ಜನರ ಆಹಾರಕ್ರಮದಲ್ಲಿ ಸಿರಿಧಾನ್ಯ ಬಳಕೆಯನ್ನು ಹೆಚ್ಚಿಸಲು ಉತ್ತೇಜನ ನೀಡುತ್ತದೆ ಎಂದು ಕೂಡ ಹೇಳಿದ್ದಾರೆ. ಬಿಹಾರದ ಭೋಜ್‌ಪುರ ಜಿಲ್ಲೆಯಲ್ಲಿ ಮೊನ್ನೆ ಫೆಬ್ರವರಿ 28 ರಿಂದ ನಿನ್ನೆ ಮಾರ್ಚ್ 1ರವರೆಗೆ ಎರಡು ದಿನಗಳ ಸಿರಿಧಾನ್ಯ ಉತ್ಸವ ಆಯೋಜಿಸಲಾಗಿತ್ತು.
ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ಇಲಾಖೆ ಸಚಿವ ಶ್ರೀ ಪಶುಪತಿ ಕುಮಾರ್ ಪಾರಸ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿ;
ಭೋಜ್‌ಪುರದ ಸಿರಿಧಾನ್ಯ ಉತ್ಸವವು 'ಶ್ರೀ ಅನ್ನ'ದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಹೆಚ್ಚಿಸುವುದಲ್ಲದೆ, ಅದನ್ನು ಅವರ ನಿತ್ಯದ ಆಹಾರ ಕ್ರಮದಲ್ಲಿ ಸೇರಿಸಲು ಪ್ರೇರೇಪಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
भोजपुर का मिलेट महोत्सव श्री अन्न के प्रति लोगों की जागरूकता तो बढ़ाएगा ही, साथ ही इसे खानपान में भी शामिल करने के लिए प्रेरित करेगा।https://t.co/7ow0ArjgIY https://t.co/KDJU890cPz
— Narendra Modi (@narendramodi) March 2, 2023


