Brazil

13ನೇ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿಗಳುಭಾರತ ಆಯ್ಕೆ ಮಾಡಿದ ಶೃಂಗಸಭೆಯ ವಿಷಯವೆಂದರೆ, BRICS@15: ನಿರಂತರತೆ, ಬಲವರ್ಧನೆ ಮತ್ತು ಒಮ್ಮತಕ್ಕಾಗಿ ಬ್ರಿಕ್ಸ್‌ ದೇಶಗಳ ನಡುವೆ ಸಹಕಾರ. ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಮಾಫೋಸಾ ಹಾಗು ಇತರ ಎಲ್ಲ ಬ್ರಿಕ್ಸ್ ನಾಯಕರು ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಈ ವರ್ಷ ಭಾರತದ ಅಧ್ಯಕ್ಷತೆ ಅವಧಿಯಲ್ಲಿ ಬ್ರಿಕ್ಸ್ ಪಾಲುದಾರರಿಂದ ಪಡೆದ ಸಹಕಾರದ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದರಿಂದ ಹಲವಾರು ಹೊಸ ಉಪಕ್ರಮಗಳ ಸಾಧನೆಗೆ ಅವಕಾಶವಾಯಿತು ಎಂದರು. ಇವುಗಳಲ್ಲಿ ಚೊಚ್ಚಲ ಬ್ರಿಕ್ಸ್ ಡಿಜಿಟಲ್ ಆರೋಗ್ಯ ಶೃಂಗಸಭೆ; ಬಹುಪಕ್ಷೀಯ ಸುಧಾರಣೆಗಳ ಬಗ್ಗೆ ಬ್ರಿಕ್ಸ್ ಸಚಿವರ ಮೊದಲ ಜಂಟಿ ಹೇಳಿಕೆ; ಬ್ರಿಕ್ಸ್ ಭಯೋತ್ಪಾದನಾ ನಿಗ್ರಹ ಕ್ರಿಯಾ ಯೋಜನೆ; ದೂರ ಸಂವೇದಿ ಉಪಗ್ರಹಗಳ ಕ್ಷೇತ್ರದಲ್ಲಿ ಸಹಕಾರ ಕುರಿತ ಒಪ್ಪಂದ; ವರ್ಚ್ಯುವಲ್‌ ಬ್ರಿಕ್ಸ್ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ; ಹಸಿರು ಪ್ರವಾಸೋದ್ಯಮ ಕುರಿತ ಬ್ರಿಕ್ಸ್ ಒಕ್ಕೂಟ ಇತ್ಯಾದಿ ಸೇರಿವೆ. ಕೋವಿಡ್ ನಂತರದ ಜಾಗತಿಕ ಚೇತರಿಕೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳು ವಹಿಸಬಹುದಾದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, 'ಸದೃಢತೆಯಿಂದ, ಹೊಸತನದಿಂದ ಮತ್ತು ವಿಶ್ವಾಸಾರ್ಹತೆಯಿಂದ ಸುಸ್ಥಿರತೆಯಿಂದ ಮತ್ತೆ ನಿರ್ಮಿಸಿʼ ಎಂಬ ಧ್ಯೇಯವಾಕ್ಯದಡಿ ಬ್ರಿಕ್ಸ್ ಸಹಕಾರ ಹೆಚ್ಚಳಕ್ಕೆ ಕರೆ ನೀಡಿದರು.
September 09, 2021