ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ವಿಭಜನೆಯ ಸಂದರ್ಭದಲ್ಲಿ ಬಾಧಿತರಾದವರಿಗೆ ಗೌರವ ನಮನ ಸಲ್ಲಿಸಿದರು. ದೇಶ ವಿಭಜನೆಯ ಕರಾಳ ಸ್ಮರಣೆ ದಿನದ ಅಂಗವಾಗಿ ಶ್ರೀ ನರೇಂದ್ರ ಮೋದಿ ಅವರು ಎಕ್ಸ್ ಖಾತೆಯಲ್ಲಿ ಹೀಗೆ ಹಂಚಿಕೊಂಡಿದ್ದು, ವಿಭಜನೆಯು ಹಲವಾರು ಜನರ ಮೇಲೆ ಉಂಟುಮಾಡಿದ ತೀವ್ರ ಪರಿಣಾಮ ಮತ್ತು ಸಂಕಟವನ್ನು ಸ್ಮರಿಸಿದರು.

ಚೇತರಿಸಿಕೊಳ್ಳಬಲ್ಲ ಮಾನವನ ಗುಣವನ್ನು ಶ್ಲಾಘಿಸಿದ ಶ್ರೀ ನರೇಂದ್ರ ಮೋದಿ ಅವರು, ದೇಶದಲ್ಲಿ ಏಕತೆ ಮತ್ತು ಸಹೋದರತ್ವದ ಬಂಧಗಳನ್ನು ರಕ್ಷಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.

ಪ್ರಧಾನ ಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹೀಗೆ ಹೇಳಿದ್ದಾರೆ:

"#PartitionHorrorsRemembranceDay ರಂದು, ವಿಭಜನೆಯ ಭೀಕರತೆಯಿಂದಾಗಿ ಪ್ರಭಾವಿತರಾದ ಮತ್ತು ಹೆಚ್ಚು ತೊಂದರೆ ಅನುಭವಿಸಿದ ಅಸಂಖ್ಯಾತ ಜನರನ್ನು ನಾವು ನೆನಪಿಸಿಕೊಳ್ಳುತ್ತೇವೆ. ಇದು ಅವರ ಧೈರ್ಯಕ್ಕೆ ಗೌರವ ಸಲ್ಲಿಸುವ ದಿನವಾಗಿದೆ, ಇದು ಪುಟಿದೇಳಬಲ್ಲ ಮಾನವನ ಶಕ್ತಿಯನ್ನು ವಿವರಿಸುತ್ತದೆ. ವಿಭಜನೆಯಿಂದ ಪ್ರಭಾವಿತರಾದ ಬಹಳಷ್ಟು ಜನರು ತಮ್ಮ ಜೀವನವನ್ನು ಪುನರ್ನಿರ್ಮಿಸಿದರು ಮತ್ತು ಅಪಾರ ಯಶಸ್ಸನ್ನು ಗಳಿಸಿದರು. ಇಂದು, ನಮ್ಮ ರಾಷ್ಟ್ರದಲ್ಲಿ ಏಕತೆ ಮತ್ತು ಸಹೋದರತ್ವದ ಬಂಧಗಳನ್ನು ಯಾವಾಗಲೂ ರಕ್ಷಿಸುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ.’’

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Water conservation in India: The community as custodian

Media Coverage

Water conservation in India: The community as custodian
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಮಾರ್ಚ್ 2026
March 21, 2026

Empowering Bharat Holistically: Health, Finance, Heritage & Export Growth Under the Leadership of PM Modi