Quote"ಇಂಧನವು ವ್ಯಕ್ತಿಯಿಂದ ಹಿಡಿದು ರಾಷ್ಟ್ರದ ತನಕ ಎಲ್ಲಾ ಹಂತದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ"
Quote"ಭಾರತವು ತನ್ನ ಉರವಲು ರಹಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಗುರಿಯನ್ನು 9 ವರ್ಷ ಮುಂಚಿತವಾಗಿ ಸಾಧಿಸಿದೆ"
Quote"ಎಲ್ಲರನ್ನೂ ಒಳಗೊಂಡ, ಹೊಂದಾಣಿಕೆಯ, ಸಮಾನ ಮತ್ತು ಸುಸ್ಥಿರ ಇಂಧನ ಉತ್ಪಾನೆಗಾಗಿ ಕೆಲಸ ಮಾಡುವುದು ನಮ್ಮ ಪ್ರಯತ್ನವಾಗಿದೆ"
Quote"ಅಂತರ-ಸಂಪರ್ಕಿತ ಹಸಿರು ಗ್ರಿಡ್‌ಗಳ ದೃಷ್ಟಿಯನ್ನು ಅರಿತುಕೊಳ್ಳುವುದರಿಂದ ನಾವೆಲ್ಲರೂ ನಮ್ಮ ಹವಾಮಾನ ಗುರಿಗಳನ್ನು ಸಾಧಿಸಲು, ಹಸಿರು ಹೂಡಿಕೆ ಉತ್ತೇಜಿಸಲು ಮತ್ತು ಲಕ್ಷಾಂತರ ಹಸಿರು ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ"
Quote"ನಮ್ಮ ಆಲೋಚನೆಗಳು ಮತ್ತು ಕಾರ್ಯಗಳು ಯಾವಾಗಲೂ ನಮ್ಮ 'ಒಂದು ಪೃಥ್ವಿ'ಯನ್ನು ಸಂರಕ್ಷಿಸಲು ಸಹಾಯ ಮಾಡಬೇಕು, ನಮ್ಮ 'ಒಂದು ಕುಟುಂಬ'ದ ಹಿತಾಸಕ್ತಿಗಳನ್ನು ರಕ್ಷಿಸಬೇಕು ಮತ್ತು ಹಸಿರು 'ಒಂದು ಭವಿಷ್ಯದ' ಕಡೆಗೆ ಸಾಗಬೇಕು"

ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನೀಯರೇ, ನಿಮಗೆಲ್ಲರಿಗೂ ನಮಸ್ಕಾರ!  ನಾನು ನಿಮ್ಮೆಲ್ಲರನ್ನು ಭಾರತಕ್ಕೆ ಸ್ವಾಗತಿಸುತ್ತೇನೆ.

ಭವಿಷ್ಯದ ಬಗ್ಗೆ ಯಾವುದೇ ಚರ್ಚೆ, ಸುಸ್ಥಿರತೆ ಅಥವಾ ಬೆಳವಣಿಗೆ ಮತ್ತು ಅಭಿವೃದ್ಧಿ ಶಕ್ತಿಯಿಲ್ಲದೆ ಪೂರ್ಣಗೊಳ್ಳುವುದಿಲ್ಲ.  ಇದು ವ್ಯಕ್ತಿಗಳಿಂದ ರಾಷ್ಟ್ರಗಳವರೆಗೆ ಎಲ್ಲಾ ಹಂತಗಳಲ್ಲಿ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ.

 ಸ್ನೇಹಿತರೇ,


ನಮ್ಮಲ್ಲಿನ ವಿಭಿನ್ನ ನೈಜತೆಗಳನ್ನು ಗಮನಿಸಿದರೆ, ಶಕ್ತಿಯ ಪರಿವರ್ತನೆಗೆ ನಮ್ಮ ಮಾರ್ಗಗಳು ವಿಭಿನ್ನವಾಗಿವೆ. ಆದರೆ, ನಮ್ಮೆಲ್ಲರ ಗುರಿಗಳು ಒಂದೇ ಎಂದು ನಾನು ದೃಢವಾಗಿ ನಂಬುತ್ತೇನೆ.  ಹಸಿರು ಇಂಧನದ ಬೆಳವಣಿಗೆ ಮತ್ತು ಶಕ್ತಿ ಪರಿವರ್ತನೆಯಲ್ಲಿ ಭಾರತವು ಮಹತ್ತರವಾದ ಪ್ರಯತ್ನಗಳನ್ನು ಮಾಡುತ್ತಿದೆ.  ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಮತ್ತು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ.  ನಾವು ನಮ್ಮ ಹವಾಮಾನ ಬದ್ಧತೆಗಳ ಮೇಲೆ ಅಚಲವಾಗಿ ಚಲಿಸುತ್ತಿದ್ದೇವೆ.  ಹವಾಮಾನ ಕ್ರಮದಲ್ಲಿ ಭಾರತ ನಾಯಕತ್ವವನ್ನು ತೋರಿಸಿದೆ.  ನಾವು ನಮ್ಮ ಪಳೆಯುಳಿಕೆ ರಹಿತ ವಿದ್ಯುತ್ ಸಾಮರ್ಥ್ಯದ ಗುರಿಯನ್ನು ಒಂಬತ್ತು ವರ್ಷಗಳ ಮುಂಚಿತವಾಗಿಯೇ ಸಾಧಿಸಿದ್ದೇವೆ.  ನಾವು ಈಗ ಹೆಚ್ಚಿನ ಗುರಿಯನ್ನು ಹೊಂದಿದ್ದೇವೆ.  ನಾವು 2030 ರ ವೇಳೆಗೆ ಶೇಕಡಾ 50 ರಷ್ಟು ಪಳೆಯುಳಿಕೆ ರಹಿತ ಸ್ಥಾಪಿತ ಸಾಮರ್ಥ್ಯವನ್ನು ಸಾಧಿಸಲು ಯೋಜಿಸಿದ್ದೇವೆ. ಸೌರ ಮತ್ತು ಪವನ ಶಕ್ತಿಯ ಜಾಗತಿಕ ನಾಯಕರಲ್ಲಿ ಭಾರತವೂ ಸಹ ಇದೆ.  ಜಿ20 ಕಾರ್ಯತಂಡದ ಪ್ರತಿನಿಧಿಗಳು ಪಾವಗಡ ಸೋಲಾರ್ ಪಾರ್ಕ್ ಮತ್ತು ಮೊಧೇರಾ ಸೋಲಾರ್ ಗ್ರಾಮಕ್ಕೆ ಭೇಟಿ ನೀಡಿರುವುದು ಸಂತಸ ತಂದಿದೆ.  ಶುದ್ಧ ಇಂಧನಕ್ಕೆ ಭಾರತದ ಬದ್ಧತೆಯ ಮಟ್ಟ ಮತ್ತು ಪ್ರಮಾಣವನ್ನು ಅವರು ಸನಿಹದಿಂದ ವೀಕ್ಷಿಸಿದ್ದಾರೆ.

 ಸ್ನೇಹಿತರೇ,

ಭಾರತದಲ್ಲಿ, ಕಳೆದ ಒಂಬತ್ತು ವರ್ಷಗಳಲ್ಲಿ ನಾವು 190 ದಶಲಕ್ಷಕ್ಕಿಂತಲೂ ಹೆಚ್ಚು ಕುಟುಂಬಗಳನ್ನು ಎಲ್‌.ಪಿ.ಜಿ.ಯೊಂದಿಗೆ ಸಂಪರ್ಕಿಸಿದ್ದೇವೆ.  ಪ್ರತಿಯೊಂದು ಹಳ್ಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಐತಿಹಾಸಿಕ ಮೈಲಿಗಲ್ಲನ್ನೂ ಸಾಧಿಸಿದ್ದೇವೆ.  ಜನರಿಗೆ ಕೊಳವೆ ಮೂಲಕ ಅಡುಗೆ ಅನಿಲ ನೀಡುವ ಕೆಲಸವನ್ನೂ ಮಾಡುತ್ತಿದ್ದೇವೆ.  ಇದು, ಮುಂದಿನ ಕೆಲವೇ ವರ್ಷಗಳಲ್ಲಿ ಜನಸಂಖ್ಯೆಯ 90 ಪ್ರತಿಶತಕ್ಕಿಂತ ಹೆಚ್ಚು ಜನರನ್ನು ಆವರಿಸುವ ಸಾಮರ್ಥ್ಯವನ್ನು ಹೊಂದಿದೆ.  ಎಲ್ಲರನ್ನೂ ಒಳಗೊಳ್ಳುವ, ಆಧರಿಸಿ ಚೇತರಿಸಿಕೊಳ್ಳುವ, ಸಮಾನವಾದ ಮತ್ತು ಸಮರ್ಥನೀಯ ಶಕ್ತಿಗಾಗಿ ಕೆಲಸ ಮಾಡುವುದು ನಮ್ಮ ಪ್ರಯತ್ನವಾಗಿದೆ.

 ಸ್ನೇಹಿತರೇ,

 ಸಣ್ಣ ಹೆಜ್ಜೆಗಳು ದೊಡ್ಡ ಫಲಿತಾಂಶಗಳಿಗೆ ಕಾರಣವಾಗುತ್ತವೆ.  2015 ರಲ್ಲಿ, ಎಲ್.ಇ.ಡಿ. ದೀಪಗಳ ಬಳಕೆಗಾಗಿ ಯೋಜನೆಯನ್ನು ಪ್ರಾರಂಭಿಸುವ ಮೂಲಕ ನಾವು ಸಣ್ಣ ಚಳುವಳಿಯನ್ನು ಪ್ರಾರಂಭಿಸಿದ್ದೇವೆ.  ಇದು ವಿಶ್ವದ ಅತಿದೊಡ್ಡ ಎಲ್‌.ಇ.ಡಿ ವಿತರಣಾ ಕಾರ್ಯಕ್ರಮವಾಯಿತು, ಇದು ನಮಗೆ ವರ್ಷಕ್ಕೆ 45 ಶತಕೋಟಿ ಯೂನಿಟ್‌ ಗಳಿಗಿಂತ ಹೆಚ್ಚು ವಿದ್ಯುತ್ ಶಕ್ತಿಯನ್ನು ಉಳಿಸುತ್ತದೆ.  ನಾವು ವಿಶ್ವದ ಅತಿದೊಡ್ಡ ಕೃಷಿ ಪಂಪ್ ಸೌರ ಶಕ್ತೀಕರಣ ಉಪಕ್ರಮವನ್ನು ಪ್ರಾರಂಭಿಸಿದ್ದೇವೆ.  ಭಾರತದ ದೇಶೀಯ ವಿದ್ಯುತ್ ಚಾಲಿತ ವಾಹನ ಮಾರುಕಟ್ಟೆಯು 2030 ರ ವೇಳೆಗೆ 10 ದಶಲಕ್ಷ ವಾರ್ಷಿಕ ಮಾರಾಟವನ್ನು ತಲುಪುವ ನಿರೀಕ್ಷೆಯಿದೆ. ನಾವು ಈ ವರ್ಷ 20 ಪ್ರತಿಶತ ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಪ್ರಾರಂಭಿಸಿದ್ದೇವೆ.  2025 ರ ವೇಳೆಗೆ ಇಡೀ ದೇಶವನ್ನು ಆವರಿಸುವುದು ನಮ್ಮ ಗುರಿಯಾಗಿದೆ. ಭಾರತವನ್ನು ಅಗಾಲ ರಹಿತ(ಡಿಕಾರ್ಬನೈಸ್) ಮಾಡಲು, ನಾವು ಪರ್ಯಾಯವಾಗಿ ಹಸಿರು ಹೈಡ್ರೋಜನ್‌ ಕುರಿತು ಉಪಕ್ರಮಗಳಲ್ಲಿ ಮಿಷನ್ ಮೋಡ್‌ ನಲ್ಲಿ ಕೆಲಸ ಮಾಡುತ್ತಿದ್ದೇವೆ.  ಹಸಿರು ಹೈಡ್ರೋಜನ್ ಮತ್ತು ಅದರ ಉತ್ಪನ್ನಗಳ ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವುದು ಗುರಿಯಾಗಿದೆ.  ನಮ್ಮ ಕಲಿಕೆಯನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ.

ಸ್ನೇಹಿತರೇ,

ಸುಸ್ಥಿರ, ನ್ಯಾಯಯುತ, ಕೈಗೆಟುಕುವ, ಅಂತರ್ಗತ ಮತ್ತು ಶುದ್ಧ ಶಕ್ತಿಯ ಪರಿವರ್ತನೆಯನ್ನು ಮುನ್ನಡೆಸಲು ಜಗತ್ತು ಈ ಜಿ20 ಗುಂಪನ್ನು ಎದುರು ನೋಡುತ್ತಿದೆ. ಇಲ್ಲಿ ಕಾರ್ಯತಂತ್ರ  ಮಾಡುವಾಗ, ಗ್ಲೋಬಲ್ ಸೌತ್‌ ನಲ್ಲಿರುವ ನಮ್ಮ ಸಹೋದರರು ಮತ್ತು ಸಹೋದರಿಯರು ಹಿಂದುಳಿದಿಲ್ಲ ಎಂಬುದು ಮುಖ್ಯವಾಗಿ ಪರಿಗಣಿಸಬೇಕು.  ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕಡಿಮೆ-ವೆಚ್ಚದ ಹಣಕಾಸು ಒದಗಿಸುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು.  ತಂತ್ರಜ್ಞಾನದ ಅಂತರವನ್ನು ನಿವಾರಿಸಲು, ಶಕ್ತಿಯ ಸುರಕ್ಷತೆಯನ್ನು ಉತ್ತೇಜಿಸಲು ಮತ್ತು ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸಲು ನಾವು ಮಾರ್ಗಗಳನ್ನು ಕಂಡುಕೊಳ್ಳಬೇಕು.  ಮತ್ತು, ನಾವು 'ಭವಿಷ್ಯಕ್ಕಾಗಿ ಇಂಧನಗಳ' ಸಹಯೋಗವನ್ನು ಬಲಪಡಿಸಬೇಕು.  'ಹೈಡ್ರೋಜನ್ ಮೇಲಿನ ಉನ್ನತ ಮಟ್ಟದ ನೀತಿ ತತ್ವಗಳು' ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ.  ಟ್ರಾನ್ಸ್-ನ್ಯಾಷನಲ್ ಗ್ರಿಡ್ ಇಂಟರ್‌ ಕನೆಕ್ಷನ್‌ಗಳು ಇಂಧನ ಭದ್ರತೆಯನ್ನು ಹೆಚ್ಚಿಸಬಹುದು.  ನಾವು ಈ ಪ್ರದೇಶದಲ್ಲಿ ನಮ್ಮ ನೆರೆಹೊರೆಯವರೊಂದಿಗೆ ಈ ಪರಸ್ಪರ ಪ್ರಯೋಜನಕಾರಿ ಸಹಕಾರವನ್ನು ಉತ್ತೇಜಿಸುತ್ತಿದ್ದೇವೆ.  ನಾವು ಉತ್ತೇಜಕ ಫಲಿತಾಂಶಗಳನ್ನು ನೋಡುತ್ತಿದ್ದೇವೆ.  ಅಂತರ್-ಸಂಪರ್ಕಿತ ಹಸಿರು ಗ್ರಿಡ್‌ಗಳ ದೃಷ್ಟಿಯನ್ನು ಅರಿತುಕೊಳ್ಳುವುದು ರೂಪಾಂತರಗೊಳ್ಳಬಹುದು.  ಇದು ನಮಗೆಲ್ಲರಿಗೂ ನಮ್ಮ ಹವಾಮಾನ ಗುರಿಗಳನ್ನು ಪೂರೈಸಲು, ಹಸಿರು ಹೂಡಿಕೆಯನ್ನು ಉತ್ತೇಜಿಸಲು ಮತ್ತು ಲಕ್ಷಾಂತರ ಹಸಿರು ಉದ್ಯೋಗಗಳನ್ನು ಸೃಷ್ಟಿಸಲು ಅನುವು ಮಾಡಿಕೊಡುತ್ತದೆ.  ನಾನು ನಿಮ್ಮೆಲ್ಲರನ್ನೂ  ''ಒಂದು ಸೂರ್ಯ, ಒಂದು ಜಗತ್ತು, ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಒಂದು ಗ್ರಿಡ್" ಎನ್ನುವ ಗ್ರೀನ್ ಗ್ರಿಡ್ಸ್ ಉಪಕ್ರಮಕ್ಕೆ ಸೇರಲು ಆಹ್ವಾನಿಸುತ್ತೇನೆ 

 ಸ್ನೇಹಿತರೇ,

 ನಿಮ್ಮ ಸುತ್ತಮುತ್ತಲಿನ ಕಾಳಜಿ ನೈಸರ್ಗಿಕವಾಗಿರಬಹುದು.  ಅದು ಸಾಂಸ್ಕೃತಿಕವೂ ಆಗಿರಬಹುದು.  ಭಾರತದಲ್ಲಿ, ಇದು ನಮ್ಮ ಸಾಂಪ್ರದಾಯಿಕ ಬುದ್ಧಿವಂತಿಕೆಯ ಒಂದು ಭಾಗವಾಗಿದೆ.  ಮತ್ತು ಅಲ್ಲಿಯೇ ಮಿಷನ್ ಲೈಫ್ ತನ್ನ ಶಕ್ತಿಯನ್ನು ಪಡೆಯುತ್ತದೆ.  ಪರಿಸರಕ್ಕಾಗಿ ಜೀವನಶೈಲಿಯು ನಮ್ಮಲ್ಲಿ ಪ್ರತಿಯೊಬ್ಬರನ್ನು ಹವಾಮಾನ ಚಾಂಪಿಯನ್ ಗಳಾಗಿ ಮಾಡುತ್ತದೆ.

 ಸ್ನೇಹಿತರೇ,

 ನಾವು ಹೇಗೆ ಪರಿವರ್ತನೆಯಾಗಿದ್ದರೂ, ನಮ್ಮ ಆಲೋಚನೆಗಳು ಮತ್ತು ಕಾರ್ಯಗಳು ಯಾವಾಗಲೂ ನಮ್ಮ ''ಒಂದು ಭೂಮಿ''ಯನ್ನು ಸಂರಕ್ಷಿಸಲು ಸಹಾಯ ಮಾಡಬೇಕು, ನಮ್ಮ ''ಒಂದು ಕುಟುಂಬದ'' ಹಿತಾಸಕ್ತಿಗಳನ್ನು ರಕ್ಷಿಸಬೇಕು ಮತ್ತು ಹಸಿರು ಉಪಕ್ರಮಗಳು ''ಒಂದು ಉಜ್ವಲ ಭವಿಷ್ಯದ'' ಕಡೆಗೆ ಸಾಗಬೇಕು.  ನಿಮ್ಮ ಚರ್ಚೆಗಳಲ್ಲಿ ನೀವು ಯಶಸ್ವಿಯಾಗಬೇಕೆಂದು ನಾನು ಬಯಸುತ್ತೇನೆ. 

 
ನಿಮ್ಮೆಲ್ಲರಿಗೂ ಧನ್ಯವಾದಗಳು!


 ನಮಸ್ಕಾರ!

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Khelo Bharat Niti 2025: Transformative Blueprint To Redefine India’s Sporting Landscape

Media Coverage

Khelo Bharat Niti 2025: Transformative Blueprint To Redefine India’s Sporting Landscape
NM on the go

Nm on the go

Always be the first to hear from the PM. Get the App Now!
...
Prime Minister condoles the loss of lives due to a road accident in Pithoragarh, Uttarakhand
July 15, 2025
QuotePM announces ex-gratia from PMNRF

Prime Minister Shri Narendra Modi today condoled the loss of lives due to a road accident in Pithoragarh, Uttarakhand. He announced an ex-gratia of Rs. 2 lakh from PMNRF for the next of kin of each deceased and Rs. 50,000 to the injured.

The PMO India handle in post on X said:

“Saddened by the loss of lives due to a road accident in Pithoragarh, Uttarakhand. Condolences to those who have lost their loved ones in the mishap. May the injured recover soon.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi”