ನಮಸ್ಕಾರ ಸ್ನೇಹಿತರೇ,

ಚಳಿ, ಬಹುಶಃ ತಡವಾಗಿದೆ ಮತ್ತು ಇದು ಬಹಳ ನಿಧಾನವಾಗಿ ಸಮೀಪಿಸುತ್ತಿದೆ. ಆದರೆ ರಾಜಕೀಯ ಶಾಖ ಏರುತ್ತಿದೆ. ನಿನ್ನೆಯಷ್ಟೇ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದೆ ಮತ್ತು ಫಲಿತಾಂಶ ಅತ್ಯಂತ ಪ್ರೋತ್ಸಾಹದಾಯಕವಾಗಿದೆ. 
ಜನ ಸಾಮಾನ್ಯರ ಯೋಗಕ್ಷೇಮಕ್ಕೆ ಬದ್ಧರಾದವರಿಗೆ ಈ ಫಲಿತಾಂಶ ಉತ್ತೇಜನಕಾರಿಯಾಗಿದೆ ಮತ್ತು ದೇಶದ ಉಜ್ವಲ ಭವಿಷ್ಯಕ್ಕಾಗಿ ನಮ್ಮನ್ನು ನಾವು ಸರ್ಮಪಿಸಿಕೊಂಡಿದ್ದೇವೆ. ವಿಶೇಷವಾಗಿ ಸಮಾಜದ ಎಲ್ಲಾ ವರ್ಗಗಗಳು, ಪ್ರತಿಯೊಂದು ಹಳ್ಳಿ ಮತ್ತು ನಗರಗಳ ಮಹಿಳೆಯರು, ಪ್ರತಿಯೊಂದು ಹಳ್ಳಿ ಮತ್ತು ನಗರಗಳ ಎಲ್ಲಾ ಗುಂಪುಗಳು, ಪ್ರತಿಯೊಂದು ಸಮುದಾಯದ ರೈತರು ಮತ್ತು ನಮ್ಮ ದೇಶದ ಬಡವರ ಶ್ರೇಯೋಭಿವೃದ್ಧಿಗೆ ನಾವು ಬದ್ಧತೆ ಹೊಂದಿದ್ದೇವೆ. ಈ ಪ್ರಮುಖ ನಾಲ್ಕು ಜಾತಿಗಳನ್ನು ಸಬಲೀಕರಣಗೊಳಿಸುವ ತತ್ವಗಳನ್ನು ಅನುಸರಿಸರುವವರು ಮತ್ತು ಅವರ ಉಜ್ವಲ ಭವಿಷ್ಯವನ್ನು ಖಾತ್ರಿಪಡಿಸುವವರು ಹಾಗೂ ಯೋಜನೆಗಳನ್ನು ದೃಢವಾಗಿ ಕೊನೆಯ ಮೈಲಿನವರೆಗೆ ತಲುಪಿಸುವವರ ಬಲವಾದ ಬೆಂಬಲ ಪಡೆದುಕೊಂಡಿದ್ದೇವೆ. ಉತ್ತಮ ಆಡಳಿತವಿದ್ದರೆ ಮತ್ತು ಸಾರ್ವಜನಿಕರ ಕಲ್ಯಾಣಕ್ಕಾಗಿ ನಿರಂತರ ಬೆಂಬಲ ಇದ್ದಲ್ಲಿ “ಆಡಳಿತ ವಿರೋಧಿ” ಎಂಬುದು ಅಪ್ರಸ್ತುವಾಗುತ್ತದೆ. ಕೆಲವರು ಇದನ್ನು ಉತ್ತಮ ಆಡಳಿತ, ಪಾರದರ್ಶಕತೆ, ರಾಷ್ಟ್ರೀಯ ಹಿತಾಸಕ್ತಿ, ಅಥವಾ ಸಾರ್ವಜನಿಕ ಕಲ್ಯಾಣಕ್ಕಾಗಿ ಘನವಾದ ಯೋಜನೆಗಳು ಎಂದು ಕರೆಯಬಹುದು. ಆದರೆ ಇದು ನಮ್ಮ ನಿರಂತರ ಅನುಭವವಾಗಿದೆ. ಮತ್ತು ಇಂದು ಇಂತಹ ಉತ್ತಮ ಜನಾದೇಶದ ನಂತರ ಸಂಸತ್ತಿನ ಈ ಹೊಸ ದೇವಾಲಯದಲ್ಲಿ ಭೇಟಿಯಾಗುತ್ತಿದ್ದೇವೆ. 

 

ಈ ಸಂಸತ್ತಿನ ಭವನ ಉದ್ಘಾಟನೆಯಾದಾಗ ಕಿರು ಅಧಿವೇಶನ ನಡೆದಿತ್ತು, ಅದು ಐತಿಹಾಸಿಕ ಕ್ಷಣವಾಗಿತ್ತು. ಆದಾಗ್ಯೂ ಈ ಬಾರಿ ಸದನದಲ್ಲಿ ದೀರ್ಘಕಾಲ ಕೆಲಸ ಮಾಡಲು ಅವಕಾಶವಿದೆ. ಇದು ಹೊಸ ಸದನ, ಸಿದ್ಧತೆಗಳು ನಡೆಯುತ್ತಿರುವುದರಿಂದ  ಸಣ್ಣ ವಿವರಗಳಿಗೆ ಕೊರತೆ ಇರಬಹುದು. ಈ ಸದನ ಸಹಜವಾಗಿ ಕಾರ್ಯಾರಂಭ ಮಾಡಿದಾಗ ಸಂಸತ್ ಸದಸ್ಯರು, ಸಂದರ್ಶಕರು ಮತ್ತು ಮಾಧ್ಯಮ ಸಿಬ್ಬಂದಿ ಸಹ ಈ ನ್ಯೂನತೆಗಳನ್ನು ಗಮನಿಸುತ್ತಾರೆ ಮತ್ತು ನಂತರ ಅದನ್ನು ಸರಿಪಡಿಸಿಕೊಳ್ಳಲಾಗುವುದು. ಈ ಎಲ್ಲಾ ವಿಚಾರಗಳ ಬಗ್ಗೆ ಗೌರವಾನ್ವಿತ ಉಪರಾಷ್ಟ್ರಪತಿಯವರು ಮತ್ತು ಗೌರವಾನ್ವಿತ ಸ್ಪೀಕರ್ ಅವರು ಪೂರ್ಣ ಪ್ರಮಾಣದಲ್ಲಿ ನಿಗಾ ಇರಿಸಲಿದ್ದಾರೆ ಎಂಬ ವಿಶ್ವಾಸವಿದೆ. ಕೆಲವು ಸಣ್ಣ ವಿಚಾರಗಳು ನಿಮ್ಮ ಗಮನಕ್ಕೆ ಬಂದಲ್ಲಿ ಅದನ್ನು ನಮ್ಮ ಅವಗಾಹನೆಗೆ ತನ್ನಿ. ಕೆಲವು ಹೊಸ ವಿಷಯಗಳು [ಹೊಸ ಸಂಸತ್ ಭವನ] ಬಂದಾಗ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳನ್ನು ತರಬೇಕಾಗುತ್ತದೆ. 

ಈ ದೇಶ ನಕಾರಾತ್ಮಕತೆಯನ್ನು ತಿರಸ್ಕರಿಸಿದೆ. ಪ್ರತಿಯೊಂದು ಅಧಿವೇಶನಕ್ಕೂ ಮುನ್ನ ನಾವು ಪ್ರತಿಪಕ್ಷ ಸಹೋದ್ಯೋಗಿಗಳ ಜೊತೆ ಚರ್ಚಿಸುತ್ತೇವೆ. ನಮ್ಮ ಮುಖ್ಯ ತಂಡ ಅವರೊಂದಿಗೆ ಈಗಾಗಲೇ ಚರ್ಚಿಸಿದೆ ಮತ್ತು ಪ್ರತಿಯೊಬ್ಬರ ಸಹಕಾರಕ್ಕಾಗಿ ಮನವಿ ಮಾಡುತ್ತಿದ್ದೇವೆ.  ಈ ಸಮಯದಲ್ಲೂ ಸಹ ನಾವು ಈ ಎಲ್ಲಾ ಪ್ರಕ್ರಿಯೆಯನ್ನು ಅನುಸರಣೆ ಮಾಡಿದ್ದೇವೆ. ನಿಮ್ಮ ಮೂಲಕ ಸಾರ್ವಜನಿಕವಾಗಿ ನಮ್ಮ ಎಲ್ಲಾ ಸಂಸದರಿಗೆ ಮನವಿ ಮಾಡುತ್ತಿದ್ದು, “ವಿಕಸಿತ ಭಾರತ”ವನ್ನು ಬಲಪಡಿಸಲು, ನಿರೀಕ್ಷೆಗಳನ್ನು ಸಕಾರಗೊಳಿಸಲು ಪ್ರಜಾತಂತ್ರದ ದೇವಾಲಯ ಅತ್ಯಂತ ನಿರ್ಣಾಯಕ ವೇದಿಕೆಯಾಗಿದೆ. 

 

ಸದನದಲ್ಲಿ ಮಂಡನೆಯಾಗುವ ಯಾವುದೇ ಮಸೂದೆಗಳ ಕುರಿತು ಪೂರ್ಣ ಪ್ರಮಾಣದಲ್ಲಿ ಚರ್ಚೆ ನಡಸುವಂತೆ ನಮ್ಮ ಗೌರವಾನ್ವಿತ ಸಂಸದರಿಗೆ ಒತ್ತಾಯಿಸುತ್ತಿದ್ದೇನೆ ಮತ್ತು ಉತ್ತಮ ಸಲಹೆ ನೀಡುವಂತೆ ಕೋರುತ್ತಿದ್ದೇನೆ. ಸಂಸತ್ ಸದಸ್ಯರು ಸಲಹೆ ನೀಡಿದರೆ ಅದು ವಾಸ್ತವಿಕ ಅನುಭವವನ್ನು ಆಧರಿಸಿರುತ್ತದೆ. ಆದರೆ ಯಾವುದೇ ಚರ್ಚೆಯಾಗದಿದ್ದರೆ ದೇಶದ ಈ ಎಲ್ಲವನ್ನೂ ಕಳೆದುಕೊಳ್ಳಲಿದ್ದೇವೆ. ಆದ್ದರಿಂದ ನಾನು ಮತ್ತೊಮ್ಮೆ [ಎಲ್ಲಾ ಸದಸ್ಯರು ಗಂಭೀರ ಚರ್ಚೆಯಲ್ಲಿ ಭಾಗವಹಿಸಬೇಕು] ಎಂದು ಆಗ್ರಹಿಸುತ್ತೇನೆ. 

ಪ್ರಸ್ತುತ ನಡೆದ ಚುನಾವಣೆಯ ಫಲಿತಾಂಶವನ್ನಾಧರಿಸಿ ನಮ್ಮ ಪ್ರತಿಪಕ್ಷ ಸಹೋದ್ಯೋಗಿಗಳಿಗೆ ಹೇಳುತ್ತಿದ್ದೇನೆ, ಅವರಿಗೆ ಸುವರ್ಣಾವಕಾಶವಿದೆ. ಈ ಅಧಿವೇಶನದಲ್ಲಿ [ವಿಧಾನಸಭೆ ಚುನಾವಣೆಯಲ್ಲಿ] ಸೋಲಿನ ಬಗ್ಗೆ ಹತಾಶೆಯನ್ನು ಹೊರ ಹಾಕುವುದನ್ನು ಬಿಟ್ಟು ಈ ಸೋಲಿನಿಂದ ಪಾಠ ಕಲಿತರೆ ಕಳೆದ 9 ವರ್ಷಗಳಿಂದ ಇರುವ ನಕಾರಾತ್ಮಕತೆಯ ಕಲ್ಪನೆಯನ್ನು ತ್ಯಜಿಸಿ ಈ ಅಧಿವೇಶನದಲ್ಲಿ ಸಕಾರಾತ್ಮಕತೆಯಿಂದ ಮುನ್ನಡೆದರೆ ದೇಶದ ದೃಷ್ಟಿಕೋನ ಬದಲಾಗುತ್ತದೆ. ಒಂದು ಹೊಸ ಬಾಗಿಲು ತೆರೆದಿದೆ ಮತ್ತು ನೀವು ಪ್ರತಿಪಕ್ಷದಲ್ಲಿದ್ದರೂ ಸಹ ನಾನು ಸಕಾರಾತ್ಮಕ ಚಿಂತನೆಗಳೊಂದಿಗೆ ಬರುವಂತೆ ಉತ್ತಮ ಸಲಹೆ ನೀಡುತ್ತಿದ್ದೇನೆ. ನಾವು ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಹತ್ತು ಹೆಜ್ಜೆಗಳನ್ನು ಇಟ್ಟರೆ ನೀವು ಹನ್ನೆರಡು ಹೆಜ್ಜೆಗಳನ್ನು ಇಡಬೇಕು. 

ಪ್ರತಿಯೊಬ್ಬರ ಭವಿಷ್ಯವೂ ಉಜ್ವಲವಾಗಿದೆ. ಆದ್ದರಿಂದ ಯಾರೂ ಹತಾಶೆಗೊಳಗಾಗುವ ಅಗತ್ಯವಿಲ್ಲ. ಸದನವನ್ನು ಸೋಲಿಸಲು ಹತಾಶೆಗೆ ಒಳಗಾಗಬೇಡಿ. ನಿರಾಶೆ ಇರಬಹುದು. ನಿಮ್ಮ ಸಹೋದ್ಯೋಗಿಗಳು ನಿಮ್ಮ ಶಕ್ತಿ ಪ್ರದರ್ಶಿಸಲು ಏನಾದರೂ ಮಾಡಲಿದ್ದಾರೆ. ಆದರೆ ಕೊನೆಯದಾಗಿ ಪ್ರಜಾಪ್ರಭುತ್ವದ ದೇವಾಲಯವಾಗಿರುವ ಈ ವೇದಿಕೆಯನ್ನು  ಹತಾಶೆ ವ್ಯಕ್ತಪಡಿಸಲು ಬಳಸಿಕೊಳ್ಳಬೇಡಿ. ಮತ್ತು ನಾನು ನನ್ನ ಅನುಭವದ ಪ್ರಕಾರ ಮತ್ತೊಮ್ಮೆ ಹೇಳುತ್ತಿದ್ದು, ಸ್ವಲ್ಪವಾದರೂ ನಿಮ್ಮ ಧೋರಣೆಯನ್ನು ಬದಲಿಸಿಕೊಳ್ಳಿ, ಪ್ರತಿಪಕ್ಷ ಎಂಬ ಕಾರಣದಿಂದ ಸಂಘರ್ಷ ಸಲ್ಲದು, ಈ ಧೋರಣೆಯನ್ನು ಬದಿಗಿರಿಸಿ, ಮತ್ತು ದೇಶದ ಭವಿಷ್ಯಕ್ಕಾಗಿ ಸಕಾರಾತ್ಮಕ ಕೊಡುಗೆ ನೀಡಿ. ನ್ಯೂನತೆಗಳ ಬಗ್ಗೆ ಚರ್ಚೆಸಿ. ನೋಡಿ, ಕೆಲವು ವಿಷಯಗಳ ಕುರಿತು ದೇಶದಲ್ಲಿ ಬೆಳೆಯುತ್ತಿರುವ ದ್ವೇಷ ಉತ್ತಮ ಕ್ರಿಯೆಗಳ ಮೂಲಕ ಪ್ರೀತಿಯಾಗಿ ಬದಲಾಗಬಹುದು. ಆದ್ದರಿಂದ ಇಲ್ಲಿ ಒಂದು ಉತ್ತಮ ಅವಕಾಶವಿದ್ದು, ಇದು ಜಾರಿಹೋಗಲು ಬಿಡಬೇಡಿ. 

 

ಸದನದಲ್ಲಿ ನಿಮ್ಮ ಸಹಕಾರವನ್ನು ಬಯಸುತ್ತಿದ್ದೇನೆ. ರಾಜಕೀಯದ ದೃಷ್ಟಿಕೋನದಲ್ಲಿಯೇ ಹೇಳುತ್ತಿದ್ದೇನೆ, ದೇಶಕ್ಕೆ ನಿಮ್ಮ ಸಂದೇಶ ಸಕಾರಾತ್ಮಕವಾಗಿರಲಿ. ನೀವು ದ್ವೇಷ ಮತ್ತು ನಾಕಾರಾತ್ಮಕ ಚಿತ್ರಣ ಹೊಂದಿದ್ದರೆ ಅದು ಪ್ರಜಾಪ್ರಭುತ್ವಕ್ಕೆ ನಕಾರಾತ್ಮಕವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳು ನಿರ್ಣಾಯಕ, ಮೌಲ್ಯಯುತ ಮತ್ತು ಶಕ್ತಿಯುತವಾದ್ದದ್ದು. ಪ್ರಜಾಪ್ರಭುತ್ವದ ಯೋಗಕ್ಷೇಮಕ್ಕಾಗಿ ಈ ಹೇಳಿಕೆಯನ್ನು ಮತ್ತೊಮ್ಮೆ ಪುನರುಚ್ಚರಿಸುತ್ತಿದ್ದೇನೆ. 

ಈಗ ದೇಶ ಅಭಿವೃದ್ಧಿಯ ಗುರಿಗಾಗಿ ಹೆಚ್ಚು ಸಮಯ ಕಾಯಲು ಬಯಸುವುದಿಲ್ಲ. ಸಮಾಜದ ಪ್ರತಿಯೊಂದು ವರ್ಗ, ನಾವು ಮುಂದೆ ಸಾಗಬೇಕು ಎಂಬ ಭಾವನೆ ಇಟ್ಟುಕೊಂಡಿದೆ. ಹಾಗಾಗಿ ನಾನು ಈ ಭಾವನೆಯನ್ನು ಗೌರವಿಸಿ ಸದನನ್ನು ಮುನ್ನಡೆಸುವಂತೆ ಎಲ್ಲಾ ಸಂಸದರನ್ನು ಒತ್ತಾಯಿಸುತ್ತಿದ್ದೇನೆ. ಇದು ನನ್ನ ಮನವಿ. ನಿಮಗೆಲ್ಲರಿಗೂ ಶುಭವಾಗಲಿ!

ತುಂಬಾ ಧನ್ಯವಾದಗಳು. 

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
'My fellow karyakarta ... ': PM Modi's Ram Navami surprise for Phase 1 NDA candidates

Media Coverage

'My fellow karyakarta ... ': PM Modi's Ram Navami surprise for Phase 1 NDA candidates
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 18 ಎಪ್ರಿಲ್ 2024
April 18, 2024

From Red Tape to Red Carpet – PM Modi making India an attractive place to Invest