"ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತದ ಯುವಕರನ್ನು ಹೊಸ ಶತಮಾನಕ್ಕೆ ಅಣಿಗೊಳಿಸುತ್ತದೆ"
"ಪ್ರತಿಯೊಬ್ಬ ಯುವಜನರೂ ತಮ್ಮ ಆಸಕ್ತಿಯ ಆಧಾರದ ಮೇಲೆ ಹೊಸ ಅವಕಾಶಗಳನ್ನು ಪಡೆಯಬೇಕೆಂಬುದು ಕೇಂದ್ರ ಮತ್ತು ಉತ್ತರಾಖಂಡ ಸರ್ಕಾರದ ನಿರಂತರ ಪ್ರಯತ್ನವಾಗಿದೆ"
"ದೇಶಾದ್ಯಂತ 38 ಕೋಟಿ ಮುದ್ರಾ ಸಾಲಗಳನ್ನು ನೀಡಲಾಗಿದ್ದು, ಇದುವರೆಗೆ ಸುಮಾರು 8 ಕೋಟಿ ಯುವಕರು ಮೊದಲ ಬಾರಿಗೆ ಉದ್ಯಮಿಗಳಾಗಿದ್ದಾರೆ"
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಸಂದೇಶದ ಮೂಲಕ ಉತ್ತರಾಖಂಡ ರೋಜ್ಗಾರ್ ಮೇಳವನ್ನುದ್ದೇಶಿಸಿ ಭಾಷಣ ಮಾಡಿದರು.

ನಮಸ್ಕಾರ!

ರೋಜ್ಗಾರ್ ಮೇಳದಲ್ಲಿ ಭಾಗವಹಿಸಿರುವ ದೈವಭೂಮಿ ಉತ್ತರಾಖಂಡದ ಯುವ ಸ್ನೇಹಿತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು! ಇಂದು ಉದ್ಯೋಗದ ನೇಮಕಾತಿ ಪತ್ರ ಪಡೆದ ಎಲ್ಲಾ ಯವಕರಿಗೆ ಈ ದಿನ ಹೊಸ ಆರಂಭವಾಗಿದೆ. ಇದು ಖಂಡಿತವಾಗಿಯೂ ನಿಮ್ಮ ಮತ್ತು ನಿಮ್ಮ ಕುಟುಂಬದ ಜೀವನವನ್ನು ಬದಲಾಯಿಸಲಿದೆ. ಇಂದು ನೀವು ಪ್ರವೇಶಿಸುತ್ತಿರುವ ಸೇವೆಯು ನಿಮ್ಮ ಜೀವನ ಪರಿವರ್ತಿಸುವುದು ಮಾತ್ರವಲ್ಲದೆ, ಬೃಹತ್ ಬದಲಾವಣೆಗಳನ್ನು ತರುವ ಮಾಧ್ಯಮವಾಗಿದೆ. ನಿಮ್ಮ ಸೇವೆಯೊಂದಿಗೆ, ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಯ ಪ್ರಯತ್ನಗಳಿಗೆ ನೀವು ಅತ್ಯುತ್ತಮ ಕೊಡುಗೆಗಳನ್ನು ನೀಡಬೇಕು. ನಿಮ್ಮಲ್ಲಿ ಹೆಚ್ಚಿನವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲಿದ್ದೀರಿ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ, ಹೊಸ ಶತಮಾನಕ್ಕೆ ಭಾರತದ ಯುವಕರನ್ನು ಸಿದ್ಧಪಡಿಸಲು ನಾವು ಸಂಕಲ್ಪ ಮಾಡಿದ್ದೇವೆ. ಉತ್ತರಾಖಂಡದ ನೆಲದಲ್ಲಿ ಈ ನಿರ್ಣಯವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ನಿಮ್ಮಂತಹ ಯುವಕರ ಹೆಗಲ ಮೇಲಿದೆ.

ಸ್ನೇಹಿತರೆ,

ಕೇಂದ್ರ ಸರ್ಕಾರವೇ ಆಗಲಿ ಅಥವಾ ಉತ್ತರಾಖಂಡದ ಬಿಜೆಪಿ ಸರ್ಕಾರವೇ ಆಗಲಿ, ಪ್ರತಿಯೊಬ್ಬ ಯುವಕನ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಹೊಸ ಅವಕಾಶಗಳನ್ನು ಪಡೆಯಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಈ ಮಾರ್ಗದಲ್ಲಿ ಮುಂದೆ ಸಾಗಲು ಪ್ರತಿಯೊಬ್ಬರೂ ಸರಿಯಾದ ಮಾಧ್ಯಮವನ್ನು ಪಡೆಯಲಿದ್ದಾರೆ. ಸರ್ಕಾರಿ ಸೇವೆಗಳಲ್ಲಿ ನೇಮಕಾತಿಯ ಈ ಅಭಿಯಾನವು ಈ ದಿಕ್ಕಿನಲ್ಲಿ ತೆಗೆದುಕೊಂಡ ಸದೃಢ ಹೆಜ್ಜೆಯಾಗಿದೆ. ಕಳೆದ ಕೆಲವು ತಿಂಗಳಲ್ಲಿ ಕೇಂದ್ರ ಸರ್ಕಾರ ದೇಶದ ಲಕ್ಷಾಂತರ ಯುವಕರಿಗೆ ನೇಮಕಾತಿ ಪತ್ರ ನೀಡಿದೆ. ದೇಶಾದ್ಯಂತ ಬಿಜೆಪಿ ಸರ್ಕಾರಗಳಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂತಹ ಅಭಿಯಾನಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಇಂದು ಉತ್ತರಾಖಂಡ ಕೂಡ ಈ ಅಭಿಯಾನಕ್ಕೆ ಕೈಜೋಡಿಸುತ್ತಿರುವುದು ನನಗೆ ಖುಷಿ ತಂದಿದೆ.

ಸ್ನೇಹಿತರೆ,

'ಬೆಟ್ಟಗಳು ಮತ್ತು ಗುಡ್ಡಗಾಡು ಪ್ರದೇಶದ ನೀರು ಮತ್ತು ಯುವಶಕ್ತಿ ಮತ್ತು ಸಾಮರ್ಥ್ಯ ಸಾಮಾನ್ಯವಾಗಿ ಬಳಕೆಯಾಗದೆ ಉಳಿಯುತ್ತದೆ' ಎಂಬ ಹಳೆಯ ನಂಬಿಕೆಯನ್ನು ನಾವು ಬದಲಾಯಿಸಬೇಕಾಗಿದೆ. ಅದಕ್ಕಾಗಿಯೇ ಉತ್ತರಾಖಂಡದ ಯುವಕರು ತಮ್ಮ ಹಳ್ಳಿಗಳಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಇದಕ್ಕಾಗಿ ಮಲೆನಾಡಿನಲ್ಲಿ ಹೊಸ ಉದ್ಯೋಗಗಳು ಮತ್ತು ಸ್ವಯಂ-ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಇಂದು ಹಲವಾರು ರಸ್ತೆಗಳು ಮತ್ತು ರೈಲು ಮಾರ್ಗಗಳು ನಿರ್ಮಾಣವಾಗುತ್ತಿರುವುದನ್ನು ನೀವು ನೋಡುತ್ತಿರಬಹುದು. ಅಂದರೆ, ಉತ್ತರಾಖಂಡದಲ್ಲಿ ಮೂಲಸೌಕರ್ಯಗಳ ಮೇಲೆ ಬೃಹತ್ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಇದರಿಂದ ದೂರದ ಗ್ರಾಮಗಳಿಗೆ ತೆರಳಲು ಅನುಕೂಲವಾಗುತ್ತಿದೆ. ಅಲ್ಲದೆ, ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಉದ್ಯೋಗಗಳು ಸಹ ಸೃಷ್ಟಿಯಾಗುತ್ತಿವೆ. ನಿರ್ಮಾಣ ಕೆಲಸ, ಇಂಜಿನಿಯರಿಂಗ್ ಅಥವಾ ಕಚ್ಚಾ ಸಾಮಗ್ರಿಗಳಿಗೆ ಸಂಬಂಧಿಸಿದ ಉದ್ಯಮಗಳು ಅಥವಾ ಅಂಗಡಿಗಳು, ಉದ್ಯೋಗಾವಕಾಶಗಳು ಎಲ್ಲೆಡೆ ಹೆಚ್ಚುತ್ತಿವೆ. ಸಾರಿಗೆ ವಲಯದಲ್ಲಿ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಯುವಕರು ಹೊಸ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಮೊದಲು, ಈ ರೀತಿಯ ಕೆಲಸಗಳಿಗಾಗಿ, ಉತ್ತರಾಖಂಡದ ನನ್ನ ಗ್ರಾಮೀಣ ಯುವಕರು ನಗರ ಭಾಗಗಳಿಗೆ ಹೋಗಬೇಕಾಗಿತ್ತು. ಇಂದು ಪ್ರತಿ ಹಳ್ಳಿಯಲ್ಲಿ ಅಂತರ್ಜಾಲ ಸೇವೆ ಮತ್ತು ಡಿಜಿಟಲ್ ಸೇವೆಗಳನ್ನು ಒದಗಿಸುವ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಸಾವಿರಾರು ಯುವಕರು ಕೆಲಸ ಮಾಡುತ್ತಿದ್ದಾರೆ.

ಸ್ನೇಹಿತರೆ,

ಉತ್ತರಾಖಂಡದ ದೂರದ(ರಿಮೋಟ್) ಪ್ರದೇಶಗಳು ರಸ್ತೆ, ರೈಲು ಮತ್ತು ಅಂತರ್ಜಾಲದ ಮೂಲಕ ಸಂಪರ್ಕ ಪಡೆದುಕೊಳ್ಳುತ್ತಿರುವುದರಿಂದ ಪ್ರವಾಸೋದ್ಯಮ ಕ್ಷೇತ್ರವೂ ವಿಸ್ತಾರವಾಗುತ್ತಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಪ್ರವಾಸಿ ಸ್ಥಳಗಳು ಜನಪ್ರಿಯವಾಗುತ್ತಿವೆ. ಪರಿಣಾಮವಾಗಿ, ಉತ್ತರಾಖಂಡದ ಯುವಕರು ಮನೆಯ ಸಮೀಪದಲ್ಲೇ ಈ ರೀತಿಯ ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದಾರೆ, ಈ ಮೊದಲು ಅವರು ದೊಡ್ಡ ನಗರಗಳು ಮತ್ತು ಪಟ್ಟಣಗಳಿಗೆ ಹೋಗಬೇಕಾಗಿತ್ತು. ಮುದ್ರಾ ಯೋಜನೆಯು ಪ್ರವಾಸೋದ್ಯಮದಲ್ಲಿ ಉದ್ಯೋಗ ಮತ್ತು ಸ್ವಯಂ-ಉದ್ಯೋಗಗಳನ್ನು  ಹೆಚ್ಚಿಸಲು ಸಾಕಷ್ಟು ಸಹಾಯ ಮಾಡುತ್ತಿದೆ. ಈ ಯೋಜನೆಯಡಿ, ಅಂಗಡಿಗಳು, ಡಾಬಾಗಳು, ಅತಿಥಿ ಗೃಹಗಳು, ಹೋಮ್ ಸ್ಟೇಗಳಂತಹ ವ್ಯವಹಾರಗಳಲ್ಲಿ ತೊಡಗಿರುವವರು ಖಾತರಿಯಿಲ್ಲದೆ 10 ಲಕ್ಷ ರೂ.ವರೆಗೆ ಸಾಲ ಪಡೆಯುತ್ತಿದ್ದಾರೆ. ಇದುವರೆಗೆ ದೇಶಾದ್ಯಂತ 38 ಕೋಟಿ ರೂ.ಮುದ್ರಾ ಸಾಲ ನೀಡಲಾಗಿದೆ. ಈ ಸಾಲಗಳ ಸಹಾಯದಿಂದ ಸುಮಾರು 8 ಕೋಟಿ ಯುವಕರು ಮೊದಲ ಬಾರಿಗೆ ಉದ್ಯಮಿಗಳಾಗಿದ್ದಾರೆ. ಇದರಲ್ಲಿ ಎಸ್ಸಿ, ಎಸ್ಟಿ, ಒಬಿಸಿ ವರ್ಗಗಳಿಗೆ ಸೇರಿದ ಮಹಿಳೆಯರು ಮತ್ತು ಯುವ ಸ್ನೇಹಿತರ ಪಾಲು ಗರಿಷ್ಠವಾಗಿದೆ. ಉತ್ತರಾಖಂಡದ ಸಾವಿರಾರು ಗೆಳೆಯರು ಕೂಡ ಇದರ ಲಾಭ ಪಡೆದುಕೊಂಡಿದ್ದಾರೆ.

ಸ್ನೇಹಿತರೆ,

ಇದು ಭಾರತದ ಯುವಜನತೆಗೆ ಅದ್ಭುತ ಸಾಧ್ಯತೆಗಳ 'ಅಮೃತ ಕಾಲ'. ನಿಮ್ಮ ಸೇವೆಗಳ ಮೂಲಕ ನೀವು ನಿರಂತರ ಆವೇಗ ನೀಡಬೇಕು. ಮತ್ತೊಮ್ಮೆ, ನಾನು ನಿಮಗೆ ಶುಭ ಹಾರೈಸುತ್ತೇನೆ ಮತ್ತು ನೀವು ಉತ್ತರಾಖಂಡದ ಜನರಿಗೆ ಉತ್ತಮ ಸೇವೆ ಸಲ್ಲಿಸುತ್ತೀರಿ ಮತ್ತು ಉತ್ತರಾಖಂಡವನ್ನು ಉಜ್ವಲಗೊಳಿಸುವಲ್ಲಿ ಕೊಡುಗೆ ನೀಡುತ್ತೀರಿ ಎಂದು ನಾನು ಭಾವಿಸುತ್ತೇನೆ. ಈ ಪ್ರಯತ್ನಗಳಿಂದ ನಮ್ಮ ದೇಶವೂ ಬಲಿಷ್ಠ, ಸಮರ್ಥ ಮತ್ತು ಸಮೃದ್ಧವಾಗುತ್ತದೆ ಎಂದು ನಂಬಿದ್ದೇನೆ! ತುಂಬು ಧನ್ಯವಾದಗಳು!

ಹಕ್ಕುನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Somnath Swabhiman Parv: “Feeling blessed to be in Somnath, a proud symbol of our civilisational courage,” says PM Modi

Media Coverage

Somnath Swabhiman Parv: “Feeling blessed to be in Somnath, a proud symbol of our civilisational courage,” says PM Modi
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11 ಜನವರಿ 2026
January 11, 2026

Dharma-Driven Development: Celebrating PM Modi's Legacy in Tradition and Transformation