ನಮ್ಮ ಸರ್ಕಾರ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದೆ: ಪ್ರಧಾನಮಂತ್ರಿ
ಇಂದು, ಅಜ್ಮೀರ್‌ನಿಂದ ರಾಷ್ಟ್ರವ್ಯಾಪಿ ಎಚ್‌ಪಿವಿ ಲಸಿಕೆ ಅಭಿಯಾನವನ್ನು ಪ್ರಾರಂಭಿಸುವ ಸೌಭಾಗ್ಯ ನನಗೆ ಸಿಕ್ಕಿತು, ಜೊತೆಗೆ ಹಲವಾರು ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಮತ್ತು ಯುವಕರಿಗೆ ನೇಮಕಾತಿ ಪತ್ರ ವಿತರಣೆ ಮಾಡಿದ್ದು ಖುಷಿ ತಂದಿದೆ: ಪ್ರಧಾನಮಂತ್ರಿ
ಎಚ್‌ಪಿವಿ ಲಸಿಕೆ ಅಭಿಯಾನವು ಅಜ್ಮೀರ್‌ನಿಂದ ಪ್ರಾರಂಭವಾಗಿದೆ, ಈ ಅಭಿಯಾನವು ದೇಶದ ನಾರಿ ಶಕ್ತಿಯನ್ನು ಸಬಲೀಕರಣಗೊಳಿಸುವ ಮಹತ್ವದ ಹೆಜ್ಜೆಯಾಗಿದೆ: ಪ್ರಧಾನಮಂತ್ರಿ
ರಾಜಸ್ಥಾನದ ಪರಂಪರೆ ಮತ್ತು ಅಭಿವೃದ್ಧಿ ಎರಡನ್ನೂ ಒಟ್ಟಿಗೆ ತೆಗೆದುಕೊಳ್ಳುವ ಮೂಲಕ ಡಬಲ್-ಎಂಜಿನ್ ಸರ್ಕಾರವು ಮುಂದುವರಿಯುತ್ತಿದೆ: ಪ್ರಧಾನಮಂತ್ರಿ
ನಮ್ಮ ಸರ್ಕಾರ ಪ್ರಾರಂಭಿಸಿದ ನದಿಗಳನ್ನು ಜೋಡಿಸುವ ಅಭಿಯಾನವು ರಾಜಸ್ಥಾನಕ್ಕೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡುತ್ತದೆ: ಪ್ರಧಾನಮಂತ್ರಿ
ರಾಜಸ್ಥಾನದಲ್ಲಿ ಸೂರ್ಯನ ಬೆಳಕಿನ ಕೊರತೆಯಿಲ್ಲ, ಈ ಸೂರ್ಯನ ಬೆಳಕು ಸಾಮಾನ್ಯ ಜನರಿಗೆ ಉಳಿತಾಯ ಮತ್ತು ಆದಾಯದ ಮೂಲವಾಗುತ್ತಿದೆ: ಪ್ರಧಾನಮಂತ್ರಿ
ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯು ಬಹಳ ಮಹತ್ವದ ಪಾತ್ರವನ್ನು ವಹಿಸುತ್ತಿದೆ, ಈ ಯೋಜನೆಯು ರಾಜಸ್ಥಾನದ ಭವಿಷ್ಯವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ: ಪ್ರಧಾನಮಂತ್ರಿ

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಇಂದು, ತೀರ್ಥರಾಜ ಪುಷ್ಕರ್ ಮತ್ತು ಮಾತಾ ಸಾವಿತ್ರಿಯ ಈ ಪವಿತ್ರ ಭೂಮಿಯಲ್ಲಿ, ನಿಮ್ಮೆಲ್ಲರ ನಡುವೆ ಇದ್ದು ನಿಮ್ಮ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದೆ. ಈ ವೇದಿಕೆಯಿಂದ, ನಾನು ಸುರಾಸುರನ ತೇಜಜಿ ಧಾಮ ಮತ್ತು ಪೃಥ್ವಿರಾಜ್ ಅವರ ನೆಲ ಅಜ್ಮೀರ್ ಗೆ ನಮಸ್ಕರಿಸುತ್ತೇನೆ.

 ನನ್ನ ಜೊತೆಗೆ ಹೇಳಿರಿ -

ತೀರ್ಥರಾಜ್ ಪುಷ್ಕರ್ ಕೀ ಜೈ

ತೀರ್ಥರಾಜ್ ಪುಷ್ಕರ್ ಕೀ ಜೈ

ವೀರ್ ತೇಜಾಜಿ ಮಹಾರಾಜ್ ಕೀ ಜೈ

ವೀರ್ ತೇಜಾಜಿ ಮಹಾರಾಜ್ ಕೀ ಜೈ

ಭಗವಾನ್ ದೇವ್ ನಾರಾಯಣ್ ಕೀ ಜೈ

ಭಗವಾನ್ ದೇವ್ ನಾರಾಯಣ್ ಕೀ ಜೈ

ವರುಣ ಅವತಾರ ಭಗವಾನ್ ಜುಲೇಲಾಲ್ ಜೀ ಕಿ ಜೈ

ಭಗವಾನ್ ಜುಲೇಲಾಲ್ ಜೀ ಕಿ ಜೈ

ವೇದಿಕೆಯಲ್ಲಿರುವ ರಾಜಸ್ಥಾನ ರಾಜ್ಯಪಾಲ ಹರಿಭಾವು ಬಾಗ್ಡೆ ಜಿ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭಜನ್ಲಾಲ್ ಶರ್ಮಾಜಿ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಜಿ, ಕೇಂದ್ರ ಸಚಿವ ಸಂಪುಟದಲ್ಲಿನ ನನ್ನ ಸಹೋದ್ಯೋಗಿ, ಭಾಗೀರಥ ಚೌಧರಿ ಜಿ, ಉಪಮುಖ್ಯಮಂತ್ರಿ ಪ್ರೇಮ್ಚಂದ್ ಭೈರವ ಜಿ, ದಿಯಾ ಕುಮಾರಿ ಜಿ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ, ಬಿಜೆಪಿ ರಾಜ್ಯ ಅಧ್ಯಕ್ಷ ಮದನ್ ರಾಥೋಡ್ ಜಿ, ಹಾಜರಿರುವ ಇತರ ಗೌರವಾನ್ವಿತ ಸಚಿವರುಗಳೇ, ಇತರ ಗಣ್ಯರೇ ಮತ್ತು ರಾಜಸ್ಥಾನದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ. ತಮ್ಮ ಉಪಸ್ಥಿತಿಯೊಂದಿಗೆ ನಮ್ಮನ್ನು ಆಶೀರ್ವದಿಸಲು ಈ ಸಂದರ್ಭವನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಲಂಕರಿಸಿದ ಪೂಜ್ಯ ಸಂತರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ.

 

ಸ್ನೇಹಿತರೇ,

ಅಜ್ಮೀರ್ ನಂಬಿಕೆ ಮತ್ತು ಶೌರ್ಯದ ಭೂಮಿಯಾಗಿದೆ. ಇಲ್ಲಿ ತೀರ್ಥಯಾತ್ರೆಗಳು ಮತ್ತು ಕ್ರಾಂತಿಕಾರಿಗಳ ಹೆಜ್ಜೆಗುರುತುಗಳು ಇವೆ. ನಿನ್ನೆಯಷ್ಟೇ ನಾನು ಇಸ್ರೇಲ್ ಭೇಟಿಯನ್ನು ಮುಗಿಸಿ ಭಾರತಕ್ಕೆ ಮರಳಿದೆ. ಇಸ್ರೇಲ್ ಜನರು ಇನ್ನೂ ರಾಜಸ್ಥಾನದ ಪುತ್ರ ಮೇಜರ್ ದಲ್ಪತ್ ಸಿಂಗ್ ಅವರ ಶೌರ್ಯವನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ. ಮೇಜರ್ ದಲ್ಪತ್ ಸಿಂಗ್ ಜಿ ಅವರ ಶೌರ್ಯಕ್ಕೆ ಗೌರವ ಸಲ್ಲಿಸುವ ಸೌಭಾಗ್ಯ ನನಗೂ ಇಸ್ರೇಲ್ ಸಂಸತ್ತಿನಲ್ಲಿ ಸಿಕ್ಕಿತು. ಇಸ್ರೇಲ್ ನ ಹೈಫಾ ನಗರವನ್ನು ವಿಮೋಚನೆಗೊಳಿಸುವಲ್ಲಿ ಪಾತ್ರವಹಿಸಿದ ರಾಜಸ್ಥಾನದ ವೀರ ಯೋಧರ ವೈಭವವನ್ನು ನೆನಪಿಸಿಕೊಳ್ಳುವ ಅವಕಾಶವೂ ನನಗೆ ಸಿಕ್ಕಿತು.

ಸ್ನೇಹಿತರೇ,

ಇತ್ತೀಚೆಗಷ್ಟೇ, ರಾಜಸ್ಥಾನದಲ್ಲಿ ಬಿಜೆಪಿಯ ಡಬಲ್-ಎಂಜಿನ್ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದೆ. ರಾಜಸ್ಥಾನವು ಅಭಿವೃದ್ಧಿಯ ಹೊಸ ಹಾದಿಯಲ್ಲಿ ಸಾಗುತ್ತಿದೆ ಎಂದು ನನಗೆ ತೃಪ್ತಿ ಇದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ನೀಡಿದ ಅಭಿವೃದ್ಧಿಯ ಭರವಸೆಗಳನ್ನು ವೇಗವಾಗಿ ಈಡೇರಿಸುತ್ತಿದೆ. ಮತ್ತು ಇಂದು ಈ ಅಭಿವೃದ್ಧಿ ಅಭಿಯಾನವನ್ನು ವೇಗಗೊಳಿಸುವ ದಿನ. ಸ್ವಲ್ಪ ಸಮಯದ ಹಿಂದೆ, ರಾಜಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿದ ಸುಮಾರು 17,000 ಕೋಟಿ ರೂಪಾಯಿಗಳ ಯೋಜನೆಗಳಿಗೆ ಅಡಿಪಾಯ ಹಾಕಲಾಯಿತು ಮತ್ತು ಸಮರ್ಪಿಸಲಾಯಿತು. ರಸ್ತೆಗಳು, ವಿದ್ಯುತ್, ನೀರು, ಆರೋಗ್ಯ ಮತ್ತು ಶಿಕ್ಷಣ ಎಂಬ ಪ್ರತಿಯೊಂದು ವಲಯಕ್ಕೂ ಹೊಸ ಶಕ್ತಿಯನ್ನು ಸೇರಿಸಲಾಗುತ್ತಿದೆ. ಈ ಎಲ್ಲಾ ಯೋಜನೆಗಳು ರಾಜಸ್ಥಾನದ ಜನರ ಅನುಕೂಲತೆಯನ್ನು ಹೆಚ್ಚಿಸುತ್ತವೆ ಮತ್ತು ರಾಜಸ್ಥಾನದ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ.

ಸ್ನೇಹಿತರೇ,

ಬಿಜೆಪಿಯ ಡಬಲ್-ಎಂಜಿನ್  ಸರ್ಕಾರವು ನಿರಂತರವಾಗಿ ಯುವಕರನ್ನು ಸಬಲೀಕರಣಗೊಳಿಸುತ್ತಿದೆ. ಎರಡು ವರ್ಷಗಳ ಹಿಂದಿನವರೆಗೂ, ರಾಜಸ್ಥಾನವು ಭ್ರಷ್ಟಾಚಾರ ಮತ್ತು ನೇಮಕಾತಿಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಮಾತ್ರ ಸುದ್ದಿಯಲ್ಲಿರುತ್ತಿತ್ತು. ಈಗ, ರಾಜಸ್ಥಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲಾಗಿದೆ ಮತ್ತು ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಇಂದು, ಈ ವೇದಿಕೆಯಿಂದಲೇ, ರಾಜಸ್ಥಾನದ 21,000 ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಇದು ಒಂದು ದೊಡ್ಡ ಬದಲಾವಣೆಯನ್ನು ತೋರಿಸುತ್ತದೆ. ಈ ಬದಲಾವಣೆಗಾಗಿ, ಹೊಸ ಉದ್ಯೋಗಗಳಿಗಾಗಿ ಮತ್ತು ಎಲ್ಲಾ ಅಭಿವೃದ್ಧಿ ಕಾರ್ಯಗಳಿಗಾಗಿ ರಾಜಸ್ಥಾನದ ನಿಮ್ಮೆಲ್ಲರಿಗೂ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

ಸ್ನೇಹಿತರೇ,

ಇಂದು, ವೀರಾಂಗನೆಯರ  ಈ ಭೂಮಿಯಿಂದ, ದೇಶದ ಹೆಣ್ಣುಮಕ್ಕಳಿಗಾಗಿ ಒಂದು ಪ್ರಮುಖ ಅಭಿಯಾನವನ್ನು ಪ್ರಾರಂಭಿಸಲು ನನಗೆ ಅವಕಾಶ ಸಿಕ್ಕಿದೆ. ಇಲ್ಲಿಂದ ಅಜ್ಮೀರ್ನಲ್ಲಿ, ಎಚ್ ಪಿ ವಿ   ಲಸಿಕೆ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಅಭಿಯಾನವು ದೇಶದ ಮಹಿಳಾ ಶಕ್ತಿಯನ್ನು ಸಬಲೀಕರಣಗೊಳಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಸ್ನೇಹಿತರೇ,

ತಾಯಿ ಅನಾರೋಗ್ಯಕ್ಕೆ ತುತ್ತಾದಾಗ  ಕುಟುಂಬವು ಒಡೆದು ಹೋಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ತಾಯಿ ಆರೋಗ್ಯವಾಗಿದ್ದರೆ, ಕುಟುಂಬವು ಯಾವುದೇ ಬಿಕ್ಕಟ್ಟನ್ನು ಎದುರಿಸಲು ಸಾಧ್ಯವಾಗುತ್ತದೆ. ಈ ಮನೋಭಾವದಿಂದ, ಬಿಜೆಪಿ ಸರ್ಕಾರವು ಮಹಿಳೆಯರನ್ನು ಸಬಲೀಕರಣಗೊಳಿಸಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ.

ಸ್ನೇಹಿತರೇ,

2014 ಕ್ಕಿಂತ ಮೊದಲು ಶೌಚಾಲಯಗಳು ಇಲ್ಲದಿರುವಿಕೆಯು  ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಅಪಾರ ನೋವು ಮತ್ತು ಅವಮಾನ ಎದುರಿಸಬೇಕಾದ  ಕಾಲವನ್ನು ನಾವು ನೋಡಿದ್ದೇವೆ. ಪ್ರತ್ಯೇಕ ಶೌಚಾಲಯ ಸೌಲಭ್ಯಗಳಿಲ್ಲದ ಕಾರಣ ಹುಡುಗಿಯರು ಶಾಲೆಯಿಂದ ಹೊರಗುಳಿಯುತ್ತಿದ್ದರು. ಬಡ ಹೆಣ್ಣುಮಕ್ಕಳು ಸ್ಯಾನಿಟರಿ ಪ್ಯಾಡ್ ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಹಿಂದೆ ಅಧಿಕಾರದಲ್ಲಿದ್ದವರಿಗೆ, ಇವು ಕ್ಷುಲ್ಲಕ ವಿಷಯಗಳಾಗಿದ್ದವು, ಚರ್ಚಿಸಲು ಸಹ ಯೋಗ್ಯವಲ್ಲದವಾಗಿದ್ದವು. ಆದರೆ ನಮಗೆ, ಇವು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಆರೋಗ್ಯ ಮತ್ತು ಘನತೆಗೆ ಹಾನಿ ಮಾಡುವ ಸೂಕ್ಷ್ಮ ಸಮಸ್ಯೆಗಳಾಗಿದ್ದವು. ಅದಕ್ಕಾಗಿಯೇ ನಾವು ಅವುಗಳನ್ನು ಮಿಷನ್ ಮೋಡ್ ನಲ್ಲಿ ಪರಿಹರಿಸಿದ್ದೇವೆ.

ಸ್ನೇಹಿತರೇ,

ಗರ್ಭಾವಸ್ಥೆಯಲ್ಲಿ, ಅಪೌಷ್ಟಿಕತೆಯು ತಾಯಂದಿರ ಜೀವಕ್ಕೆ ಗಂಭೀರ ಅಪಾಯವನ್ನುಂಟುಮಾಡಿತು. ಸುರಕ್ಷಿತ ತಾಯ್ತನಕ್ಕಾಗಿ ನಾವು ಯೋಜನೆಗಳನ್ನು ಪ್ರಾರಂಭಿಸಿದ್ದೇವೆ, ತಾಯಂದಿರು ಪೌಷ್ಟಿಕ ಆಹಾರವನ್ನು ಪಡೆಯುವುದನ್ನು ಮತ್ತು  ₹5,000 ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ತಾಯಂದಿರು ಹೊಗೆಯಲ್ಲಿ ಕೆಮ್ಮುತ್ತಿದ್ದರು ಆದರೆ ಎಂದಿಗೂ ದೂರಲಿಲ್ಲ. ಇದು ಮುಂದುವರಿಯಲು ಸಾಧ್ಯವಿಲ್ಲ ಎಂದು ನಾವು ಹೇಳಿದ್ದೇವೆ. ಅದಕ್ಕಾಗಿಯೇ ನಾವು ಉಜ್ವಲ ಅನಿಲ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಬಿಜೆಪಿ ಸರ್ಕಾರವು ಶಕ್ತಿಯಿಂದಲ್ಲ, ಆದರೆ ಸೂಕ್ಷ್ಮತೆಯಿಂದ ಕಾರ್ಯನಿರ್ವಹಿಸುವುದರಿಂದ ಇದೆಲ್ಲವೂ ಸಾಧ್ಯವಾಯಿತು.

 

ಸ್ನೇಹಿತರೇ,

ಈಗಾಗಲೇ 21 ನೇ ಶತಮಾನದ ಕಾಲು ಭಾಗ ಕಳೆದಿದೆ. ಇಂದು ರಾಜಸ್ಥಾನದ ಅಭಿವೃದ್ಧಿಗೆ ನಿರ್ಣಾಯಕ ಸಮಯ. ಬಿಜೆಪಿಯ ಡಬಲ್-ಎಂಜಿನ್ ಸರ್ಕಾರವು ರಾಜಸ್ಥಾನದ ಪರಂಪರೆ ಮತ್ತು ಅಭಿವೃದ್ಧಿ ಎರಡನ್ನೂ ಮುಂದಕ್ಕೆ ಕೊಂಡೊಯ್ಯುತ್ತಿದೆ. ಉತ್ತಮ ರಸ್ತೆಗಳು, ರೈಲು ಮತ್ತು ವಾಯು ಸಂಪರ್ಕವು ಪ್ರಯಾಣವನ್ನು ಸುಲಭಗೊಳಿಸುವುದಲ್ಲದೆ, ಇಡೀ ಪ್ರದೇಶಗಳ ಭವಿಷ್ಯವನ್ನೇ ಪರಿವರ್ತಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಉತ್ತಮ ರಸ್ತೆಗಳು ಪ್ರತಿ ಹಳ್ಳಿಯನ್ನು ತಲುಪಿದಾಗ, ರೈತರು ತಮ್ಮ ಬೆಳೆಗಳನ್ನು ನ್ಯಾಯಯುತ ಬೆಲೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ವ್ಯಾಪಾರಿಗಳು ತಮ್ಮ ಸರಕುಗಳನ್ನು ಸುಲಭವಾಗಿ ರಫ್ತು ಮಾಡಬಹುದು. ಮತ್ತು ಅಜ್ಮೀರ್-ಪುಷ್ಕರ್ನ ಪ್ರವಾಸೋದ್ಯಮ ಸಾಮರ್ಥ್ಯದ ಬಗ್ಗೆ ಯಾರಿಗೆ ತಾನೆ ತಿಳಿದಿಲ್ಲ? ಉತ್ತಮ ಸಂಪರ್ಕವು ಪ್ರವಾಸೋದ್ಯಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಪ್ರಯಾಣ ಸುಲಭವಾದಾಗ, ಹೆಚ್ಚಿನ ಜನರು ಭೇಟಿ ನೀಡಲು ಬರುತ್ತಾರೆ.

ಮತ್ತು ಸ್ನೇಹಿತರೇ,

ಪ್ರವಾಸಿಗರು ಬಂದಾಗ, ಸ್ವಾಭಾವಿಕವಾಗಿ ಹೋಟೆಲ್ಗಳು ಅಭಿವೃದ್ಧಿ ಹೊಂದುತ್ತವೆ, ರಸ್ತೆಬದಿಯ ಹೋಟೆಲುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ, ಕಚೋರಿಗಳು ಮತ್ತು ದಾಲ್ ಬಾಟಿಗಳು ಹೆಚ್ಚು ಮಾರಾಟವಾಗುತ್ತವೆ, ರಾಜಸ್ಥಾನದ ಕುಶಲಕರ್ಮಿಗಳು ತಮ್ಮ ಕರಕುಶಲ ವಸ್ತುಗಳಿಗೆ ಕೊಳ್ಳುವವರು ಸಿಗುತ್ತಾರೆ, ಟ್ಯಾಕ್ಸಿಗಳು ಓಡಾಡುತ್ತವೆ  ಮತ್ತು ಮಾರ್ಗದರ್ಶಿಗಳಿಗೆ ಕೆಲಸ ಸಿಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಬ್ಬ ಪ್ರವಾಸಿ ಅನೇಕ ಕುಟುಂಬಗಳಿಗೆ ಜೀವನೋಪಾಯಕ್ಕೆ ಕಾರಣವಾಗುತ್ತಾನೆ. ಈ ದೃಷ್ಟಿಕೋನದಿಂದ, ನಮ್ಮ ಸರ್ಕಾರವು ರಾಜಸ್ಥಾನದಲ್ಲಿ ಆಧುನಿಕ ಸಂಪರ್ಕದ ಮೇಲೆ ಬಲವಾಗಿ ಗಮನಹರಿಸುತ್ತಿದೆ.

ಸ್ನೇಹಿತರೇ,

ರಾಜಸ್ಥಾನದಲ್ಲಿ ಸಂಪರ್ಕ ವಿಸ್ತರಿಸುತ್ತಿದ್ದಂತೆ, ಹೂಡಿಕೆ ಅವಕಾಶಗಳು ಸಹ ಸ್ಥಿರವಾಗಿ ಹೆಚ್ಚುತ್ತಿವೆ. ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ ಸುತ್ತಲೂ ಕೈಗಾರಿಕೆಗಳಿಗೆ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರರ್ಥ ಡಬಲ್-ಎಂಜಿನ್ ಸರ್ಕಾರವು ರಾಜಸ್ಥಾನವನ್ನು ಅವಕಾಶಗಳ ಭೂಮಿಯನ್ನಾಗಿ ಮಾಡಲು ಹಲವಾರು  ರೀತಿಯಲ್ಲಿ ಅವಿಶ್ರಾಂತವಾಗಿ ಕೆಲಸ ಮಾಡುತ್ತಿದೆ. 

ಸ್ನೇಹಿತರೇ,

ರಾಜಸ್ಥಾನದ ತಾಯಂದಿರು ತಮ್ಮ ಮಕ್ಕಳನ್ನು ಬೆಳೆಸುವಾಗ ಅವರಲ್ಲಿ ದೇಶಭಕ್ತಿಯ ಮೌಲ್ಯಗಳನ್ನು ತುಂಬುತ್ತಾರೆ. ಈ ರಾಜಸ್ಥಾನದ ಭೂಮಿಗೆ ರಾಷ್ಟ್ರದ ಗೌರವ ಎಂದರೆ ಏನೆಂದು ತಿಳಿದಿದೆ ಮತ್ತು ಅದಕ್ಕಾಗಿಯೇ ಇಂದು, ರಾಜಸ್ಥಾನದ ಈ ನೆಲದಲ್ಲಿ, ನಾನು ನಿಮ್ಮೊಂದಿಗೆ ಇನ್ನೊಂದು ವಿಚಾರವನ್ನು ಹಂಚಿಕೊಳ್ಳಲು ಬಂದಿದ್ದೇನೆ.

 

ಸ್ನೇಹಿತರೇ,

ಇತ್ತೀಚೆಗೆ, ದೆಹಲಿಯಲ್ಲಿ, ವಿಶ್ವದ ಅತಿದೊಡ್ಡ ಎಐ ಸಮ್ಮೇಳನ ನಡೆಯಿತು. ಅನೇಕ ದೇಶಗಳ ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳು ಮತ್ತು ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶ್ವದ ಅತಿದೊಡ್ಡ ಕಂಪನಿಗಳ ನಾಯಕರು ಸಹ ಒಂದೇ ಸೂರಿನಡಿ ಜಮಾಯಿಸಿದರು. ಎಲ್ಲರೂ ಭಾರತವನ್ನು ತೆರೆದ ಹೃದಯದಿಂದ ಹೊಗಳಿದರು. ನಾನು ರಾಜಸ್ಥಾನದ ನನ್ನ ಸಹೋದರ ಸಹೋದರಿಯರನ್ನು ಕೇಳಲು ಬಯಸುತ್ತೇನೆ - ಪ್ರಪಂಚದಾದ್ಯಂತದ ಅನೇಕ ಜನರು ಭಾರತವನ್ನು ಹೊಗಳಿದಾಗ, ನಿಮಗೆ ಹೆಮ್ಮೆ ಅನಿಸುವುದಿಲ್ಲವೇ? ನಿಮಗೆ ಗೌರವ ಅನಿಸುವುದಿಲ್ಲವೇ? ನಿಮ್ಮ ತಲೆ ಎತ್ತುವುದಿಲ್ಲವೇ? ನಿಮ್ಮ ಎದೆ ಹೆಮ್ಮೆಯಿಂದ ಉಬ್ಬುವುದಿಲ್ಲವೇ?

ಸ್ನೇಹಿತರೇ,

ನೀವು ಹೆಮ್ಮೆಪಟ್ಟಿದ್ದೀರಿ, ಆದರೆ ನಿರಂತರ ಸೋಲುಗಳಿಂದ ಹತಾಶೆ ಮತ್ತು ಬಳಲಿಕೆಯಲ್ಲಿ ಮುಳುಗಿದ್ದ ಕಾಂಗ್ರೆಸ್ ಮಾಡಿದ್ದನ್ನು ಸಹ  ನೀವು ನೋಡಿದ್ದೀರಿ. ಪ್ರಪಂಚದಾದ್ಯಂತದ ಅತಿಥಿಗಳ ಮುಂದೆ, ಕಾಂಗ್ರೆಸ್ ದೇಶವನ್ನು ದೂಷಿಸಲು ಪ್ರಯತ್ನಿಸಿತು. ವಿದೇಶಿ ಅತಿಥಿಗಳ ಮುಂದೆ ದೇಶವನ್ನು ಅವಮಾನಿಸಲು ಅವರು ಸಂಪೂರ್ಣ ನಾಟಕವನ್ನು ಪ್ರದರ್ಶಿಸಿದರು. 

ಸ್ನೇಹಿತರೇ,

ಕಾಂಗ್ರೆಸ್ ದೇಶಾದ್ಯಂತ ಸೋಲುತ್ತಿದೆ, ಮತ್ತು ಕೋಪದಲ್ಲಿ, ಅವರು ಭಾರತದ ಪ್ರತಿಷ್ಠೆಯನ್ನು ಹಾಳು ಮಾಡುವ ಮೂಲಕ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ ಐಎನ್ ಸಿ ಆಗಿತ್ತು - ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಆದರೆ ಇಂದು, ಅದು ಇನ್ನು ಮುಂದೆ ಐಎನ್ ಸಿ ಅಲ್ಲ. ಐಎನ್ಸಿ ಬದಲಿಗೆ, ಅದು ಎಂಎಂಸಿ ಆಗಿದೆ. ಎಂಎಂಸಿ ಎಂದರೆ ಮುಸ್ಲಿಂ ಲೀಗ್ ಮಾವೋವಾದಿ ಕಾಂಗ್ರೆಸ್.

ರಾಜಸ್ಥಾನದ ನನ್ನ ವೀರ ಜನರೇ,

ಮುಸ್ಲಿಂ ಲೀಗ್ ಭಾರತವನ್ನು ದ್ವೇಷಿಸುತ್ತಿತ್ತು ಮತ್ತು ಅದಕ್ಕಾಗಿಯೇ ಅದು ದೇಶವನ್ನು ವಿಭಜಿಸಿತು ಎಂದು ಇತಿಹಾಸ ಸಾಕ್ಷಿಯಾಗಿದೆ. ಇಂದು ಕಾಂಗ್ರೆಸ್ ಅದನ್ನೇ ಮಾಡುತ್ತಿದೆ. ಮಾವೋವಾದಿಗಳು ಸಹ ಭಾರತದ ಸಮೃದ್ಧಿ, ನಮ್ಮ ಸಂವಿಧಾನ ಮತ್ತು ನಮ್ಮ ಯಶಸ್ವಿಯಾದ ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತಾರೆ. ಅವರು ಹೊಂಚು ಹೂಡಿ ದಾಳಿ ಮಾಡುತ್ತಾರೆ. ದೇಶದ ಹೆಸರು ಕೆಡಿಸಲು ಕಾಂಗ್ರೆಸ್ ಎಲ್ಲಿ ಬೇಕಾದರೂ ನುಸುಳುತ್ತದೆ. ಕಾಂಗ್ರೆಸ್ ನ ಇಂತಹ ದುಷ್ಕೃತ್ಯಗಳನ್ನು ದೇಶ ಎಂದಿಗೂ ಕ್ಷಮಿಸುವುದಿಲ್ಲ.

 

ಸ್ನೇಹಿತರೇ,

ದೇಶವನ್ನು ಅವಮಾನಿಸುವುದು ಮತ್ತು ಸಶಸ್ತ್ರ ಪಡೆಗಳನ್ನು ದುರ್ಬಲಗೊಳಿಸುವುದು ಕಾಂಗ್ರೆಸ್ ಪಕ್ಷದ ಹಳೆಯ ಅಭ್ಯಾಸವಾಗಿದೆ. ನೆನಪಿಡಿ, ನಮ್ಮ ಸೇನಾ ಸಿಬ್ಬಂದಿಗೆ ಶಸ್ತ್ರಾಸ್ತ್ರ ಮತ್ತು ಸಮವಸ್ತ್ರಗಳಿಗೂ ಕಾಯುವಂತೆ ಮಾಡಿದ್ದು  ಇದೇ ಕಾಂಗ್ರೆಸ್ ಪಕ್ಷ. ನಮ್ಮ ಸೇನಾ ಕುಟುಂಬಗಳಿಗೆ ವರ್ಷಗಳ ಕಾಲ ಒಂದು ಶ್ರೇಣಿ ಒಂದು ಪಿಂಚಣಿಯನ್ನು ಕಸಿದುಕೊಂಡಿದ್ದು ಇದೇ ಕಾಂಗ್ರೆಸ್ ಪಕ್ಷ. ವಿದೇಶಿ ರಕ್ಷಣಾ ಒಪ್ಪಂದಗಳಲ್ಲಿ ಪ್ರಮುಖ ಹಗರಣಗಳನ್ನು ನಡೆಸಿದ್ದು ಇದೇ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ.

ಸ್ನೇಹಿತರೇ,

ಕಳೆದ 11 ವರ್ಷಗಳಲ್ಲಿ, ಭಾರತದ ಸೇನೆಯು ಭಯೋತ್ಪಾದಕರು ಮತ್ತು ಶತ್ರುಗಳ ವಿರುದ್ಧ ಪ್ರತಿಯೊಂದು ರಂಗದಲ್ಲೂ ಕಠಿಣವಾಗಿ ದಾಳಿ ನಡೆಸಿದೆ. ನಮ್ಮ ಸೇನೆಯು ಪ್ರತಿಯೊಂದು ಕಾರ್ಯಾಚರಣೆಯಲ್ಲಿ, ಪ್ರತಿಯೊಂದು ಯುದ್ಧದಲ್ಲಿ ವಿಜಯಶಾಲಿಯಾಗಿದೆ. ಸರ್ಜಿಕಲ್ ಸ್ಟ್ರೈಕ್ನಿಂದ ಹಿಡಿದು ಆಪರೇಷನ್ ಸಿಂದೂರ್ ವರೆಗೆ, ಅವರು ತಮ್ಮ ಶೌರ್ಯವನ್ನು ಸಾಬೀತುಪಡಿಸಿದರು. ಆದರೂ ಕಾಂಗ್ರೆಸ್ ನಾಯಕರು ನಮ್ಮ ಶತ್ರುಗಳ ಸುಳ್ಳುಗಳನ್ನು ಹರಡಲು ಆಯ್ಕೆ ಮಾಡಿಕೊಂಡರು. ರಾಷ್ಟ್ರಕ್ಕೆ ಯಾವುದು ಒಳ್ಳೆಯದು, ಜನರಿಗೆ ಏನೇ ಪ್ರಯೋಜನಕಾರಿಯಾದರೂ, ಕಾಂಗ್ರೆಸ್ ಅದನ್ನೆಲ್ಲ ವಿರೋಧಿಸುತ್ತದೆ. ಅದಕ್ಕಾಗಿಯೇ ಇಂದು ದೇಶವು ಕಾಂಗ್ರೆಸ್ ಗೆ ಪಾಠ ಕಲಿಸುತ್ತಿದೆ.

ಸ್ನೇಹಿತರೇ,

ರಾಜಸ್ಥಾನದಲ್ಲಿ, ನೀವು ಕಾಂಗ್ರೆಸ್ನ ದುರಾಡಳಿತವನ್ನು ಹತ್ತಿರದಿಂದ ಅನುಭವಿಸಿದ್ದೀರಿ. ಇಲ್ಲಿ ತನ್ನ ಅಧಿಕಾರಾವಧಿಯಲ್ಲಿ, ಕಾಂಗ್ರೆಸ್ ಭ್ರಷ್ಟಾಚಾರ ಮತ್ತು ಆಂತರಿಕ ಸಂಘರ್ಷಗಳಲ್ಲಿಯೇ  ಸಿಲುಕಿಕೊಂಡಿತ್ತು. ಕಾಂಗ್ರೆಸ್ ಯಾವಾಗಲೂ ನಮ್ಮ ರೈತರಿಗೆ ದ್ರೋಹ ಮಾಡಿದೆ. ಕಾಂಗ್ರೆಸ್ ನೀರಾವರಿ ಯೋಜನೆಗಳನ್ನು ದಶಕಗಳಿಂದ ತಡೆಹಿಡಿದುಕೊಳ್ಳುವಂತೆ ಮಾಡಿತು, ರಾಜಸ್ಥಾನದ ರೈತರಿಗೆ ಅಪಾರ ನಷ್ಟವನ್ನುಂಟುಮಾಡಿತು ಎಂಬುದನ್ನು ನೆನಪಿಡಿ. ಇ ಆರ್ ಸಿ ಪಿ ಯೋಜನೆಯು ಕಾಂಗ್ರೆಸ್ ಸರ್ಕಾರಗಳ ಕಡತಗಳಲ್ಲಿ  ಮತ್ತು ಘೋಷಣೆಗಳಲ್ಲಿ ಮಾತ್ರ ಸಿಲುಕಿಕೊಂಡಿತ್ತು. ನಮ್ಮ ಸರ್ಕಾರ ಬಂದ ತಕ್ಷಣ, ನಾವು ಈ ಯೋಜನೆಯನ್ನು ಕಡತಗಳಿಂದ   ಹೊರತರಲು ಕೆಲಸ ಮಾಡಿದ್ದೇವೆ.

 

ಸ್ನೇಹಿತರೇ,

ನಮ್ಮ ಸರ್ಕಾರ ಆರಂಭಿಸಿರುವ ನದಿ ಜೋಡಣೆ ಅಭಿಯಾನವು ರಾಜಸ್ಥಾನಕ್ಕೆ ಅಪಾರ ಪ್ರಯೋಜನಗಳನ್ನು ತರುವುದು ಖಚಿತ. ಪರಿಷ್ಕೃತ ಪಾರ್ವತಿ-ಕಾಳಿಸಿಂಧ್-ಚಂಬಲ್ ಲಿಂಕ್ ಯೋಜನೆಯಾಗಿರಲಿ ಅಥವಾ ಯಮುನಾ-ರಾಜಸ್ಥಾನ ಸಂಪರ್ಕ ಯೋಜನೆಯಾಗಿರಲಿ, ಡಬಲ್-ಎಂಜಿನ್ ಸರ್ಕಾರವು ರೈತರು ಹಲವಾರು ನೀರಾವರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. ಇಂದಿಗೂ, ಝಲಾವರ್, ಬರನ್, ಕೋಟಾ ಮತ್ತು ಬುಂಡಿ ಜಿಲ್ಲೆಗಳಿಗೆ ಹಲವಾರು ನೀರಿನ ಯೋಜನೆಗಳ ಕೆಲಸ ಪ್ರಾರಂಭವಾಗಿದೆ. ರಾಜಸ್ಥಾನದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ನಮ್ಮ ಪ್ರಯತ್ನವಾಗಿದೆ.

ಸ್ನೇಹಿತರೇ,

ರಾಜಸ್ಥಾನದ ಸಾಮರ್ಥ್ಯವನ್ನು ಅರ್ಥಮಾಡಿಕೊಂಡ ಬಿಜೆಪಿ ಸರ್ಕಾರವು ಯೋಜನೆಗಳನ್ನು ವಿನ್ಯಾಸಗೊಳಿಸುತ್ತಿದೆ ಮತ್ತು ಕಾರ್ಯಗತಗೊಳಿಸುತ್ತಿದೆ. ರಾಜಸ್ಥಾನವು ಈಗ ಸೂರ್ಯನ ಶಕ್ತಿಯಿಂದ ಸಮೃದ್ಧಿಯನ್ನು ಗಳಿಸುವ ಭೂಮಿಯಾಗಿ ಮಾರ್ಪಟ್ಟಿದೆ ಎಂದು ನನಗೆ ಸಂತೋಷವಾಗಿದೆ. ರಾಜಸ್ಥಾನಕ್ಕೆ ಸೂರ್ಯನ ಬೆಳಕಿನ ಕೊರತೆಯಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಈಗ ಈ ಸೂರ್ಯನ ಬೆಳಕು ಸಾಮಾನ್ಯ ಮನೆಗಳಿಗೆ ಉಳಿತಾಯ ಮತ್ತು ಆದಾಯದ ಮೂಲವಾಗುತ್ತಿದೆ. ಮತ್ತು ಇದರಲ್ಲಿ, ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಮಹತ್ತರ ಪಾತ್ರ ವಹಿಸುತ್ತದೆ. ಈ ಯೋಜನೆಯು ರಾಜಸ್ಥಾನದ ಭವಿಷ್ಯವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ಈ ಯೋಜನೆಯಡಿಯಲ್ಲಿ, ಬಿಜೆಪಿ ಸರ್ಕಾರವು ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲು ₹78,000 ಸಹಾಯವನ್ನು ನೀಡುತ್ತದೆ. ಸರ್ಕಾರವು ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ. ಸ್ವಾತಂತ್ರ್ಯದ ನಂತರದ ಎಲ್ಲಾ ಬಜೆಟ್ ಮತ್ತು ಯೋಜನೆಗಳನ್ನು ನೋಡಿ - ಮಧ್ಯಮ ವರ್ಗಕ್ಕೆ ಇಷ್ಟೊಂದು ಪ್ರಯೋಜನಕಾರಿಯಾದ ಯಾವುದೇ ಯೋಜನೆಯನ್ನು ನೀವು ಕಾಣುವುದಿಲ್ಲ. ಇಂದು, ಕುಟುಂಬಗಳು ಸೌರ ಫಲಕಗಳನ್ನು ಸ್ಥಾಪಿಸಲು ಸರ್ಕಾರದಿಂದ ₹78,000 ಅನ್ನು ನೇರವಾಗಿ ಪಡೆಯುತ್ತಿವೆ. ಮಧ್ಯಮ ವರ್ಗವು ಹೆಚ್ಚು ಪ್ರಯೋಜನ ಪಡೆಯುತ್ತಿದೆ. ಇದು ಮನೆಯಲ್ಲಿ ಒಂದು ಸಣ್ಣ ವಿದ್ಯುತ್ ಸ್ಥಾವರವನ್ನು ಸೃಷ್ಟಿಸುತ್ತದೆ. ಹಗಲಿನಲ್ಲಿ, ಮನೆಯಲ್ಲಿ ಬಳಸಲಾಗುವ ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ ಮತ್ತು ಹೆಚ್ಚುವರಿ ವಿದ್ಯುತ್ ಗ್ರಿಡ್ಗೆ ಹೋಗುತ್ತದೆ. ವಿದ್ಯುತ್ ಉತ್ಪಾದಿಸುವ ಮನೆಯೂ ಇದರಿಂದ ಲಾಭ ಪಡೆಯುತ್ತದೆ.

ಸ್ನೇಹಿತರೇ,

ಇಂದು, ರಾಜಸ್ಥಾನದಲ್ಲಿ 125,000ಕ್ಕೂ ಹೆಚ್ಚು ಕುಟುಂಬಗಳು ಈ ಯೋಜನೆಗೆ ಸೇರಿಕೊಂಡಿವೆ. ಮತ್ತು ಈ ಯೋಜನೆಯಿಂದಾಗಿ, ಅನೇಕ ಮನೆಗಳ  ವಿದ್ಯುತ್ ಬಿಲ್ಗಳು ಬಹುತೇಕ ಶೂನ್ಯಕ್ಕೆ ಇಳಿದಿವೆ. ಅಂದರೆ ವೆಚ್ಚಗಳು ಕಡಿಮೆಯಾಗಿದೆ ಮತ್ತು ಉಳಿತಾಯ ಹೆಚ್ಚಾಗಿದೆ ಎಂದರ್ಥ.

ಸ್ನೇಹಿತರೇ,

"ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಅಭಿವೃದ್ಧಿ ಹೊಂದಿದ ರಾಜಸ್ಥಾನ" ಎಂಬ ಮಂತ್ರದ ಮೇಲೆ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಇಂದು ಆರಂಭವಾದ ಯೋಜನೆಗಳು ಅಭಿವೃದ್ಧಿ ಹೊಂದಿದ ರಾಜಸ್ಥಾನದ ಬುನಾದಿಯನ್ನು ಮತ್ತಷ್ಟು ಬಲಪಡಿಸುತ್ತವೆ. ರಾಜಸ್ಥಾನ ಅಭಿವೃದ್ಧಿ ಹೊಂದಿದಾಗ, ಇಲ್ಲಿನ ಪ್ರತಿಯೊಂದು ಕುಟುಂಬವು ಸಮೃದ್ಧ ಜೀವನವನ್ನು ನಡೆಸುತ್ತದೆ. ಮತ್ತೊಮ್ಮೆ, ಈ ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನನ್ನ ಜೊತೆಗೆ ಹೇಳಿ-

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ರಾಷ್ಟ್ರವು ವಂದೇ ಮಾತರಂನ 150 ವರ್ಷಗಳನ್ನು ಆಚರಿಸುತ್ತಿದೆ. ನನ್ನ ಜೊತೆಗೆ ಹೇಳಿ-

ವಂದೇ ಮಾತರಂ.

ವಂದೇ ಮಾತರಂ.

ವಂದೇ ಮಾತರಂ.

ವಂದೇ ಮಾತರಂ.

ವಂದೇ ಮಾತರಂ.

ವಂದೇ ಮಾತರಂ.

ಬಹಳ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Twelve years on, Jan Dhan Yojana stands as the world’s largest financial inclusion drive

Media Coverage

Twelve years on, Jan Dhan Yojana stands as the world’s largest financial inclusion drive
NM on the go

Nm on the go

Always be the first to hear from the PM. Get the App Now!
...
Prime Minister pays homage to Mahatma Ayyankali on his birth anniversary
August 28, 2026

The Prime Minister, Shri Narendra Modi, has paid homage to Mahatma Ayyankali on his birth anniversary, today. Shri Modi remembered Mahatma Ayyankali as a great pioneer of social justice, who dedicated his life to the empowerment and welfare of the marginalised. The Prime Minister highlighted his efforts to secure educational opportunities for the marginalised, improve the lives of agricultural workers and serve the poor.

The Prime Minister posted on X:

Paying homage to Mahatma Ayyankali on his birth anniversary!

He is remembered as a great pioneer of social justice. His efforts to secure educational opportunities for the marginalised, improve the lives of agricultural workers and serve the poor remain very inspiring. His life gives strength to all those working for social empowerment.