Quoteಭಾರತದಲ್ಲಿ ಈಗ ನಮ್ಮ ಪೂರ್ವ ರಾಜ್ಯಗಳ ಯುಗ ನಡೆಯುತ್ತಿದೆ: ಪ್ರಧಾನಮಂತ್ರಿ
Quoteದೇಶವನ್ನು ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತಗೊಳಿಸುವುದು ನಮ್ಮ ಸಂಕಲ್ಪ: ಪ್ರಧಾನಮಂತ್ರಿ
Quoteಹಿಂದುಳಿದವರು ನಮ್ಮ ಆದ್ಯತೆಯಾಗಿದ್ದಾರೆ; ʻಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆʼಗೆ ಸಚಿವ ಸಂಪುಟ ಅನುಮೋದನೆ ನೀಡಿದೆ, ಇದರ ಅಡಿಯಲ್ಲಿ ಕೃಷಿಗೆ ಸಂಬಂಧಿಸಿದಂತೆ 100 ಅತ್ಯಂತ ಹಿಂದುಳಿದ ಜಿಲ್ಲೆಗಳನ್ನು ಗುರುತಿಸಲಾಗುವುದು: ಪ್ರಧಾನಮಂತ್ರಿ

ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!

ಈ ಪವಿತ್ರ ಶ್ರಾವಣ ಮಾಸದಲ್ಲಿ, ನಾನು ಬಾಬಾ ಸೋಮೇಶ್ವರನಾಥರ ಪಾದಗಳಿಗೆ ತಲೆ ಬಾಗಿ, ಅವರ ಆಶೀರ್ವಾದ ಬೇಡುತ್ತೇನೆ. ಬಿಹಾರದ ಎಲ್ಲಾ ಜನರು ಸಂತೋಷ ಮತ್ತು ಸಮೃದ್ಧಿಯಿಂದ ಇರುವಂತೆ ಆಶೀರ್ವದಿಸಲಿ ಎಂದು ಕೋರುತ್ತೇನೆ.

ಬಿಹಾರದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಆರಿಫ್ ಮೊಹಮ್ಮದ್ ಖಾನ್ ಜಿ; ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಜಿತನ್ ರಾಮ್ ಮಾಂಝಿ ಜಿ, ಶ್ರೀ ಗಿರಿರಾಜ್ ಸಿಂಗ್ ಜಿ, ಶ್ರೀ ಲಾಲನ್ ಸಿಂಗ್ ಜಿ, ಶ್ರೀ ಚಿರಾಗ್ ಪಾಸ್ವಾನ್ ಜಿ, ಶ್ರೀ ರಾಮನಾಥ್ ಠಾಕೂರ್ ಜಿ, ಶ್ರೀ ನಿತ್ಯಾನಂದ ರಾಯ್ ಜಿ, ಶ್ರೀ ಸತೀಶ್ ಚಂದ್ರ ದುಬೆ ಜಿ, ಶ್ರೀ ರಾಜ್ ಭೂಷಣ್ ಚೌಧರಿ ಜಿ, ಬಿಹಾರದ ಉಪ ಮುಖ್ಯಮಂತ್ರಿಗಳಾದ ಶ್ರೀ ಸಾಮ್ರಾಟ್ ಚೌಧರಿ ಜಿ ಮತ್ತು ಶ್ರೀ ವಿಜಯ್ ಸಿನ್ಹಾ ಜಿ, ಸಂಸದರಾದ ಬಿಹಾರದ ಹಿರಿಯ ನಾಯಕ, ಶ್ರೀ ಉಪೇಂದ್ರ ಕುಶ್ವಾಹಾ ಜಿ, ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ದಿಲೀಪ್ ಜೈಸ್ವಾಲ್ ಜಿ, ಇಲ್ಲಿ ಉಪಸ್ಥಿತರಿರುವ ಸಚಿವರು, ಚುನಾಯಿತ ಪ್ರತಿನಿಧಿಗಳು ಮತ್ತು ಬಿಹಾರದ ನನ್ನ ಸಹೋದರ ಸಹೋದರಿಯರೆ!

ರಾಧಾ ಮೋಹನ್ ಸಿಂಗ್ ಜಿ ಅವರಿಗೆ ಧನ್ಯವಾದಗಳು, ನಾನು ಚಂಪಾರಣ್‌ಗೆ ಭೇಟಿ ನೀಡುವ ಅವಕಾಶವನ್ನು ಆಗಾಗ್ಗೆ ಪಡೆಯುತ್ತಿದ್ದೇನೆ. ಇದು ಚಂಪಾರಣ್‌ನ ಭೂಮಿ-ಇದು ಇತಿಹಾಸವನ್ನು ನಿರ್ಮಿಸಿದ ಪುಣ್ಯಭೂಮಿ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ, ಈ ನೆಲವು ಮಹಾತ್ಮ ಗಾಂಧೀಜಿಗೆ ಹೊಸ ದಿಕ್ಕು ನೀಡಿತು. ಈಗ ಅದೇ ಭೂಮಿ ಬಿಹಾರಕ್ಕೆ ಹೊಸ ಭವಿಷ್ಯವನ್ನು ಪ್ರೇರೇಪಿಸುತ್ತಿದೆ.

ಇಂದು 7,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಅಭಿವೃದ್ಧಿ ಉಪಕ್ರಮಗಳಿಗಾಗಿ ನಿಮ್ಮೆಲ್ಲರಿಗೂ ಮತ್ತು ಬಿಹಾರದ ಎಲ್ಲಾ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇಲ್ಲಿ ಒಬ್ಬ ಯುವಕ ರಾಮಮಂದಿರದ ಸಂಪೂರ್ಣ ಮಾದರಿಯೊಂದಿಗೆ ಬಂದಿದ್ದಾನೆ - ಎಂತಹ ಅದ್ಭುತ ಸೃಷ್ಟಿ! ಅವನು ಅದನ್ನು ನನಗೆ ಹಸ್ತಾಂತರಿಸಲು ಇಲ್ಲಿಗೆ ಬಂದಿದ್ದಾನೆ. ನನ್ನ ಎಸ್‌ಪಿಜಿ ಸಿಬ್ಬಂದಿ ಅದರ ಕೆಳಗೆ ತನ್ನ ಹೆಸರು ಮತ್ತು ವಿಳಾಸ ಬರೆಯುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ. ನಾನು ನಿಮಗೆ ಪತ್ರ ಬರೆಯುತ್ತೇನೆ. ನೀವು ಇದನ್ನು ಮಾಡಿದ್ದೀರಾ? ಹೌದು? ನಂತರ ದಯವಿಟ್ಟು ಅದನ್ನು ನನ್ನ ಎಸ್‌ಪಿಜಿ ಸಿಬ್ಬಂದಿ ಬಂದಾಗ ಅವರಿಗೆ ಹಸ್ತಾಂತರಿಸಿ - ನೀವು ಖಂಡಿತವಾಗಿಯೂ ನನ್ನಿಂದ ಪತ್ರವನ್ನು ಸ್ವೀಕರಿಸುತ್ತೀರಿ. ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ. ಸೀತಾ ಮಾತೆಯ ದೈನಂದಿನ ಸ್ಮರಣೆ ಸಾಂಸ್ಕೃತಿಕ ರಚನೆಯ ಭಾಗವಾಗಿರುವ ಸ್ಥಳದಲ್ಲಿ, ನೀವು ಅಯೋಧ್ಯೆಯ ಭವ್ಯ ದೇವಾಲಯದ ಸುಂದರವಾದ ಮಾದರಿಯನ್ನು ನನಗೆ ನೀಡುತ್ತಿದ್ದೀರಿ. ನಾನು ನಿಮಗೆ ನಿಜವಾಗಿಯೂ ಕೃತಜ್ಞನಾಗಿದ್ದೇನೆ.

 

|

ಸ್ನೇಹಿತರೆ,

21ನೇ ಶತಮಾನದಲ್ಲಿ, ಜಗತ್ತು ವೇಗವಾಗಿ ಮುಂದುವರಿಯುತ್ತಿದೆ. ಒಂದು ಕಾಲದಲ್ಲಿ, ಅಧಿಕಾರವು ಪಾಶ್ಚಿಮಾತ್ಯ ರಾಷ್ಟ್ರಗಳ ಕೈಯಲ್ಲಿ ಕೇಂದ್ರೀಕೃತವಾಗಿತ್ತು. ಆದರೆ ಈಗ, ಪೂರ್ವ ರಾಷ್ಟ್ರಗಳ ಪ್ರಭಾವ ಮತ್ತು ಭಾಗವಹಿಸುವಿಕೆ ಬೆಳೆಯುತ್ತಿದೆ. ಪೂರ್ವ ರಾಷ್ಟ್ರಗಳು ಅಭಿವೃದ್ಧಿಯ ಹೊಸ ಆವೇಗವನ್ನು ಸ್ವೀಕರಿಸುತ್ತಿವೆ. ಪೂರ್ವ ದೇಶಗಳು ಜಾಗತಿಕವಾಗಿ ಪ್ರಗತಿ ಹೊಂದುತ್ತಿರುವಂತೆ, ಭಾರತದ ಈ ಯುಗವು ನಮ್ಮ ಪೂರ್ವ ರಾಜ್ಯಗಳಿಗೆ ಸೇರಿದೆ. ಮುಂಬರುವ ದಿನಗಳಲ್ಲಿ, ಮುಂಬೈ ಪಶ್ಚಿಮ ಭಾರತವನ್ನು ಪ್ರತಿನಿಧಿಸುವಂತೆಯೇ, ಮೋತಿಹಾರಿ ಪೂರ್ವವನ್ನು ಪ್ರತಿನಿಧಿಸುತ್ತದೆ ಎಂಬುದು ನಮ್ಮ ದೃಢ ಸಂಕಲ್ಪ. ಗುರುಗ್ರಾಮ್ ಅವಕಾಶಗಳನ್ನು ನೀಡುವಂತೆಯೇ, ಗಯಾ ಕೂಡ ಅವಕಾಶಗಳನ್ನು ನೀಡುತ್ತದೆ. ಪುಣೆಯಂತೆ, ಪಾಟ್ನಾ ಕೂಡ ಕೈಗಾರಿಕಾ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ. ಸೂರತ್ ಬೆಳವಣಿಗೆಯನ್ನು ಕಂಡಂತೆ, ಸಂತಲ್ ಪರಾಗಣವೂ ಸಹ. ಜಲ್ಪೈಗುರಿ ಮತ್ತು ಜಾಜ್‌ಪುರದಲ್ಲಿ ಪ್ರವಾಸೋದ್ಯಮವು ಜೈಪುರದಂತೆ ಹೊಸ ಎತ್ತರವನ್ನು ತಲುಪಲಿ. ಬಿರ್ಭುಮ್‌ನ ಜನರು ಬೆಂಗಳೂರಿನಂತೆ ಮುನ್ನಡೆಯಲಿ.

ಸಹೋದರ ಸಹೋದರಿಯರೆ,

ಪೂರ್ವ ಭಾರತದ ಉದಯವನ್ನು ಖಚಿತಪಡಿಸಿಕೊಳ್ಳಲು, ನಾವು ಬಿಹಾರವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಬೇಕು. ಇಂದು ಬಿಹಾರದಲ್ಲಿ ಅಭಿವೃದ್ಧಿಯು ವೇಗ ಪಡೆದುಕೊಂಡಿದೆ. ಏಕೆಂದರೆ ಕೇಂದ್ರ ಮತ್ತು ರಾಜ್ಯ ಎರಡೂ ಬಿಹಾರದ ಪ್ರಗತಿಗೆ ಮೀಸಲಾದ ಸರ್ಕಾರಗಳನ್ನು ಹೊಂದಿವೆ. ನಾನು ನಿಮ್ಮೊಂದಿಗೆ ಒಂದು ಅಂಕಿಅಂಶವನ್ನು ಹಂಚಿಕೊಳ್ಳುತ್ತೇನೆ. ಯುಪಿಎ ಆಡಳಿತದ 10 ವರ್ಷಗಳಲ್ಲಿ, ಕಾಂಗ್ರೆಸ್ ಮತ್ತು ಆರ್‌ಜೆಡಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ, ಬಿಹಾರವು ಕೇವಲ 2 ಲಕ್ಷ ಕೋಟಿ ರೂ. ಅನುದಾನ ಪಡೆಯಿತು. ಆದರೀಗ ಕೇವಲ 10 ವರ್ಷಗಳಲ್ಲಿ, ಸರಿಸುಮಾರು 2 ಲಕ್ಷ ಕೋಟಿ ರೂ. ಅನುದಾನ ಪಡೆದಿದೆ. ಸ್ಪಷ್ಟವಾಗಿ, ಅವರು ನಿತೀಶ್ ಜಿ ಅವರ ಸರ್ಕಾರವನ್ನು ಶಿಕ್ಷಿಸುತ್ತಿದ್ದರು, ಬಿಹಾರವನ್ನು ಶಿಕ್ಷಿಸುತ್ತಿದ್ದರು. 2014ರಲ್ಲಿ, ನೀವು ನನಗೆ ಕೇಂದ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ನಾನು ಬಿಹಾರ ವಿರುದ್ಧದ ಈ ಹಳೆಯ ಸೇಡಿನ ರಾಜಕೀಯವನ್ನು ಕೊನೆಗೊಳಿಸಿದೆ. ಕಳೆದ 10 ವರ್ಷಗಳಲ್ಲಿ, ಎನ್‌ಡಿಎ ಸರ್ಕಾರದ ಅಡಿ, ಬಿಹಾರದ ಅಭಿವೃದ್ಧಿಗೆ ಮೀಸಲಾದ ಅನುದಾನ ಹಲವು ಪಟ್ಟು ಹೆಚ್ಚಾಗಿದೆ. ಇದೀಗ, ಸಾಮ್ರಾಟ್ ಚೌಧರಿ ಜಿ ಆ ಅಂಕಿಅಂಶಗಳನ್ನು ಹಂಚಿಕೊಂಡರು - ಹಲವಾರು ಲಕ್ಷ ಕೋಟಿ ರೂಪಾಯಿ ಮೊತ್ತದ ಹಣ ಒದಗಿಸಲಾಗಿದೆ.

ಸ್ನೇಹಿತರೆ,

ಇದರರ್ಥ ಕಾಂಗ್ರೆಸ್-ಆರ್‌ಜೆಡಿ ಯುಗಕ್ಕೆ ಹೋಲಿಸಿದರೆ, ನಮ್ಮ ಸರ್ಕಾರ ಬಿಹಾರಕ್ಕೆ ಹಲವಾರು ಪಟ್ಟು ಹೆಚ್ಚಿನ ಆರ್ಥಿಕ ಬೆಂಬಲ ನೀಡಿದೆ. ಈ ಹಣವನ್ನು ರಾಜ್ಯಾದ್ಯಂತ ಸಾರ್ವಜನಿಕ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗುತ್ತಿದೆ.

ಸ್ನೇಹಿತರೆ,

ಹೊಸ ಪೀಳಿಗೆ 2 ದಶಕಗಳ ಹಿಂದೆ ಬಿಹಾರದಲ್ಲಿದ್ದ ಹತಾಶೆಯ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ. ಆರ್‌ಜೆಡಿ ಮತ್ತು ಕಾಂಗ್ರೆಸ್ ಆಳ್ವಿಕೆಯಲ್ಲಿ, ಅಭಿವೃದ್ಧಿ ಸ್ಥಗಿತಗೊಂಡಿತ್ತು. ಬಡವರಿಗೆ ಮೀಸಲಾದ ಅನುದಾನ ಅವರನ್ನು ಎಂದಿಗೂ ತಲುಪಲಿಲ್ಲ. ಅಧಿಕಾರದಲ್ಲಿರುವವರು ಮುಖ್ಯವಾಗಿ ಬಡವರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಹೇಗೆ ಲೂಟಿ ಮಾಡುವುದು ಎಂಬುದರ ಬಗ್ಗೆಯೇ ಕಾಳಜಿ ವಹಿಸುತ್ತಿದ್ದರು. ಆದರೆ ಬಿಹಾರ ಧೈರ್ಯಶಾಲಿಗಳ ಭೂಮಿ, ಅಸಾಧ್ಯವನ್ನು ಸಾಧ್ಯವಾಗಿಸುವವರು, ದಣಿವರಿಯದ ಕಾರ್ಮಿಕರ ಭೂಮಿ. ನೀವು ಈ ಭೂಮಿಯನ್ನು ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಸಂಕೋಲೆಯಿಂದ ಮುಕ್ತಗೊಳಿಸಿದ್ದೀರಿ. ನೀವು ಅಸಾಧ್ಯವನ್ನು ಸಾಧ್ಯವಾಗಿಸಿದ್ದೀರಿ. ಪರಿಣಾಮವಾಗಿ, ಕಲ್ಯಾಣ ಯೋಜನೆಗಳು ಈಗ ಬಿಹಾರದ ಬಡವರನ್ನು ನೇರವಾಗಿ ತಲುಪುತ್ತಿವೆ. ಕಳೆದ 11 ವರ್ಷಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ, ದೇಶಾದ್ಯಂತ ಬಡವರಿಗಾಗಿ 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಇವುಗಳ ಪೈಕಿ, ಬಿಹಾರದಲ್ಲೇ ಬಡವರಿಗಾಗಿ ಸುಮಾರು 60 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಅಂದರೆ ನಾವು ನಾರ್ವೆ, ನ್ಯೂಜಿಲೆಂಡ್ ಮತ್ತು ಸಿಂಗಾಪುರದಂತಹ ದೇಶಗಳ ಸಂಪೂರ್ಣ ಜನಸಂಖ್ಯೆಗಿಂತ ಹೆಚ್ಚಿನ ಜನರಿಗೆ ಬಿಹಾರದಲ್ಲಿ ಪಕ್ಕಾ ಮನೆಗಳನ್ನು ಒದಗಿಸಿದ್ದೇವೆ.

 

|

ಇನ್ನೊಂದು ಉದಾಹರಣೆ ನೀಡುತ್ತೇನೆ - ನಮ್ಮದೇ ಮೋತಿಹಾರಿ ಜಿಲ್ಲೆಯಲ್ಲಿ ಸುಮಾರು 3 ಲಕ್ಷ ಬಡ ಕುಟುಂಬಗಳು ಪಕ್ಕಾ ಮನೆಗಳನ್ನು ಪಡೆದಿವೆ. ಈ ಸಂಖ್ಯೆ ವೇಗವಾಗಿ ಏರುತ್ತಲೇ ಇದೆ. ಇಂದಿಗೂ, ಇಲ್ಲಿ 12,000ಕ್ಕೂ ಹೆಚ್ಚು ಕುಟುಂಬಗಳು ತಮ್ಮದೇ ಆದ ಪಕ್ಕಾ ಮನೆಗಳಿಗೆ ಹೋಗುವ ಅದೃಷ್ಟವನ್ನು ಪಡೆದಿವೆ. 40,000ಕ್ಕೂ ಹೆಚ್ಚಿನ ಬಡ ಕುಟುಂಬಗಳು ತಮ್ಮ ಮನೆಗಳನ್ನು ನಿರ್ಮಿಸಿಕೊಳ್ಳಲು ತಮ್ಮ ಬ್ಯಾಂಕ್ ಖಾತೆಗಳಲ್ಲಿ ನೇರ ಆರ್ಥಿಕ ಸಹಾಯ ಪಡೆದಿವೆ. ಈ ಫಲಾನುಭವಿಗಳಲ್ಲಿ ಹೆಚ್ಚಿನವರು ದಲಿತ, ಮಹಾದಲಿತ ಮತ್ತು ಹಿಂದುಳಿದ ಕುಟುಂಬಗಳ ನನ್ನ ಸಹೋದರ ಸಹೋದರಿಯರಾಗಿದ್ದಾರೆ. ಆರ್‌ಜೆಡಿ ಮತ್ತು ಕಾಂಗ್ರೆಸ್ ಆಳ್ವಿಕೆಯಲ್ಲಿ, ಬಡವರು ಪಕ್ಕಾ ಮನೆಗಳನ್ನು ಪಡೆಯುವುದು ಊಹಿಸಲೂ ಸಾಧ್ಯವಿಲ್ಲ ಎಂಬುದು ನಿಮಗೇ ಚೆನ್ನಾಗಿ ತಿಳಿದಿದೆ. ಅವರ ಆಡಳಿತದಲ್ಲಿ, ಜನರು ತಮ್ಮ ಮನೆಗಳಿಗೆ ಬಣ್ಣ ಬಳಿಯಲು ಅಥವಾ ನವೀಕರಿಸಲು ಸಹ ಹೆದರುತ್ತಿದ್ದರು, ಅವರು ಕಿರುಕುಳಕ್ಕೊಳಗಾಗಬಹುದು ಅಥವಾ ಹೊರಹಾಕಲ್ಪಡಬಹುದು ಎಂದು ಭಯಪಡುತ್ತಿರು. ಆರ್‌ಜೆಡಿ ಅಡಿಯಲ್ಲಿ ಇರುವವರು ನಿಮಗೆ ಎಂದಿಗೂ ಪಕ್ಕಾ ಮನೆ ನೀಡಲು ಸಾಧ್ಯವಿಲ್ಲ.

ಸ್ನೇಹಿತರೆ,

ಇಂದು ಬಿಹಾರ ಮುಂದುವರೆಯುತ್ತಿರುವಂತೆ, ರಾಜ್ಯದ ತಾಯಂದಿರು ಮತ್ತು ಸಹೋದರಿಯರು ಈ ಪ್ರಗತಿಯ ಹಿಂದಿನ ದೊಡ್ಡ ಶಕ್ತಿಯಾಗಿದ್ದಾರೆ. ನಾನಿಂದು ಮೊದಲೇ ಗಮನಿಸಿದಂತೆ, ಲಕ್ಷಾಂತರ ಮಹಿಳೆಯರು ನಮ್ಮನ್ನು ಆಶೀರ್ವದಿಸುತ್ತಿದ್ದರು - ಇದು ಹೃದಯಸ್ಪರ್ಶಿ ದೃಶ್ಯವಾಗಿತ್ತು. ಬಿಹಾರದ ತಾಯಂದಿರು ಮತ್ತು ಸಹೋದರಿಯರು, ಈ ನೆಲದ ಮಹಿಳೆಯರು, ಎನ್‌ಡಿಎ ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯ ಮಹತ್ವವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದಾರೆ. ನೆನಪಿಸಿಕೊಳ್ಳಿ - 10 ರೂಪಾಯಿ ಇದ್ದರೂ ಅದನ್ನು ಮರೆ ಮಾಡಬೇಕಾಗಿದ್ದ ಒಂದು ಕಾಲವಿತ್ತು. ನಿಮ್ಮ ಬಳಿ ಬ್ಯಾಂಕ್ ಖಾತೆಗಳಿಲ್ಲ, ಯಾರಿಗೂ ಬ್ಯಾಂಕ್‌ಗಳಿಗೆ ಪ್ರವೇಶಿಸಲು ಅವಕಾಶವಿರಲಿಲ್ಲ. ಬಡವರಿಗೆ ಸ್ವಾಭಿಮಾನ ಎಂದರೆ ಏನು ಎಂದು ಮೋದಿಗೆ ಮಾತ್ರ ಅರ್ಥವಾಗುತ್ತದೆ. ಮೋದಿ ಬ್ಯಾಂಕುಗಳನ್ನು ಕೇಳಿದರು - ನೀವು ಬಡವರಿಗೆ ನಿಮ್ಮ ಬಾಗಿಲುಗಳನ್ನು ಏಕೆ ತೆರೆಯಬಾರದು? ನಾವು ಬೃಹತ್ ಅಭಿಯಾನ ಪ್ರಾರಂಭಿಸಿದ್ದೇವೆ, ಜನ ಧನ್ ಖಾತೆಗಳನ್ನು ತೆರೆದಿದ್ದೇವೆ. ಈ ಉಪಕ್ರಮವು ಬಡ ಕುಟುಂಬಗಳ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನ ನೀಡಿತು. ಬಿಹಾರದಲ್ಲೇ ಸುಮಾರು 3.5 ಕೋಟಿ ಜನ ಧನ್ ಖಾತೆಗಳನ್ನು ಮಹಿಳೆಯರಿಗಾಗಿ ತೆರೆಯಲಾಯಿತು. ಅದರ ನಂತರ, ಸರ್ಕಾರಿ ಯೋಜನೆಗಳಿಂದ ಹಣವನ್ನು ನೇರವಾಗಿ ಈ ಖಾತೆಗಳಿಗೆ ವರ್ಗಾಯಿಸಲು ಪ್ರಾರಂಭಿಸಲಾಯಿತು. ಕೆಲವೇ ದಿನಗಳ ಹಿಂದೆ, ನನ್ನ ಸ್ನೇಹಿತ ನಿತೀಶ್ ಜಿ ಅವರ ಸರ್ಕಾರವು ಅವರು ಇತ್ತೀಚೆಗೆ ಘೋಷಿಸಿದಂತೆ, ವೃದ್ಧರು, ಅಂಗವಿಕಲರು ಮತ್ತು ವಿಧವೆ ತಾಯಂದಿರಿಗೆ ಪಿಂಚಣಿ ಮೊತ್ತವನ್ನು ತಿಂಗಳಿಗೆ 400ರೂ.ನಿಂದ 1,100 ರೂ.ಗೆ ಹೆಚ್ಚಿಸಿತು. ಈ ಹಣವನ್ನು ಸಹ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಕಳೆದ ಒಂದೂವರೆ ತಿಂಗಳಲ್ಲಿ ಬಿಹಾರದ 24,000ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಿಗೆ 1,000 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಸಹಾಯ ಕಳುಹಿಸಲಾಗಿದೆ. ನಮ್ಮ ತಾಯಂದಿರು ಮತ್ತು ಸಹೋದರಿಯರು ಈಗ ಜನ ಧನ್ ಖಾತೆಗಳ ಶಕ್ತಿ ಹೊಂದಿರುವುದರಿಂದ ಮಾತ್ರ ಇದು ಸಾಧ್ಯವಾಗಿದೆ.

ಸ್ನೇಹಿತರೆ,

ಮಹಿಳಾ ಸಬಲೀಕರಣದತ್ತ ಈ ಪ್ರಯತ್ನಗಳ ಫಲಿತಾಂಶಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ದೇಶಾದ್ಯಂತ ಮತ್ತು ಬಿಹಾರದಲ್ಲೂ ಸಹ, "ಲಖಪತಿ ದೀದಿಗಳ" ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದೆ. ಭಾರತದಲ್ಲಿ 3 ಕೋಟಿ ಮಹಿಳೆಯರನ್ನು 'ಲಖಪತಿ ದೀದಿ'ಗಳನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಇಲ್ಲಿಯವರೆಗೆ, 1.5 ಕೋಟಿ ಮಹಿಳೆಯರು ಈ ಮೈಲಿಗಲ್ಲು ಸಾಧಿಸಿದ್ದಾರೆ. ಬಿಹಾರದಲ್ಲೂ ಸಹ 20 ಲಕ್ಷಕ್ಕೂ ಹೆಚ್ಚು ಮಹಿಳೆಯರು "ಲಖಪತಿ ದೀದಿಗಳು" ಆಗಿದ್ದಾರೆ. ಚಂಪಾರಣ್‌ನಲ್ಲೇ, 80,000ಕ್ಕೂ ಹೆಚ್ಚು ಮಹಿಳೆಯರು ಸ್ವ-ಸಹಾಯ ಗುಂಪುಗಳನ್ನು ಸೇರಿ "ಲಖಪತಿ ದೀದಿಗಳು" ಆಗಿದ್ದಾರೆ.

 

|

ಸ್ನೇಹಿತರೆ,

ಇಂದು ಇಲ್ಲಿ 400 ಕೋಟಿ ರೂ.ಗಳ ಸಮುದಾಯ ಹೂಡಿಕೆ ನಿಧಿ ವಿತರಿಸಲಾಗಿದೆ. ಈ ನಿಧಿಯು ಮಹಿಳೆಯರ ದುಡಿಮೆ ಶಕ್ತಿ ಬಲಪಡಿಸಲು ಸಹಾಯ ಮಾಡುತ್ತದೆ. ನಿತೀಶ್ ಜಿ ಪರಿಚಯಿಸಿದ 'ಜೀವಿಕಾ ದೀದಿ' ಯೋಜನೆಯು ಬಿಹಾರದ ಲಕ್ಷಾಂತರ ಮಹಿಳೆಯರು ಸ್ವಾವಲಂಬಿಗಳಾಗಲು ದಾರಿ ಮಾಡಿಕೊಟ್ಟಿದೆ.

ಸ್ನೇಹಿತರೆ,

ಬಿಜೆಪಿ ಮತ್ತು ಎನ್‌ಡಿಎಯ ದೃಷ್ಟಿಕೋನ ಸ್ಪಷ್ಟವಾಗಿದೆ - ಬಿಹಾರ ಮುಂದುವರೆದಾಗ ಮಾತ್ರ ಭಾರತ ಮುಂದುವರಿಯುತ್ತದೆ. ಬಿಹಾರದ ಯುವಕರು ಪ್ರಗತಿ ಹೊಂದಿದಾಗ ಮಾತ್ರ ಬಿಹಾರ ಮುಂದುವರಿಯುತ್ತದೆ. ನಮ್ಮ ಸಂಕಲ್ಪ ಸ್ಪಷ್ಟವಾಗಿದೆ - ಪ್ರತಿಯೊಬ್ಬ ಯುವಕರಿಗೂ ಉದ್ಯೋಗದೊಂದಿಗೆ ಸಮೃದ್ಧ ಬಿಹಾರ ಮಾಡುವುದಾಗಿದೆ! ಬಿಹಾರದ ಯುವಕರು ರಾಜ್ಯದೊಳಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಕಂಡುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು, ಕಳೆದ ವರ್ಷಗಳಲ್ಲಿ ಗಮನಾರ್ಹ ಕೆಲಸಗಳನ್ನು ಮಾಡಲಾಗಿದೆ. ನಿತೀಶ್ ಜಿ ಅವರ ಸರ್ಕಾರವು ಸಂಪೂರ್ಣ ಪಾರದರ್ಶಕತೆಯೊಂದಿಗೆ ಸರ್ಕಾರಿ ಉದ್ಯೋಗಗಳಲ್ಲಿ ಲಕ್ಷಾಂತರ ಯುವಕರಿಗೆ ಉದ್ಯೋಗ ಒದಗಿಸಿದೆ. ಬಿಹಾರದ ಯುವಕರಿಗೆ ಉದ್ಯೋಗಾವಕಾಶಗಳಿಗಾಗಿ ನಿತೀಶ್ ಜಿ ಇತ್ತೀಚೆಗೆ ಹೊಸ ನಿರ್ಣಯಗಳನ್ನು ಮಾಡಿದ್ದಾರೆ, ಕೇಂದ್ರ ಸರ್ಕಾರವು ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದೆ.

ಸ್ನೇಹಿತರೆ,

ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರವು ಒಂದು ಪ್ರಮುಖ ಯೋಜನೆಯನ್ನು ಅನುಮೋದಿಸಿದೆ. ಈ ಉಪಕ್ರಮದಡಿ, ಖಾಸಗಿ ಕಂಪನಿಯಲ್ಲಿ ತಮ್ಮ ಮೊದಲ ಉದ್ಯೋಗಾವಕಾಶ ಪಡೆಯುವ ಯಾವುದೇ ಯುವಕನಿಗೆ ಕೇಂದ್ರ ಸರ್ಕಾರದಿಂದ 15,000 ರೂ. ನೀಡಲಾಗುತ್ತದೆ. ಈ ಯೋಜನೆಯನ್ನು ಆಗಸ್ಟ್ 1ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ. ಹೊಸ ಯುವಕರಿಗೆ ಹೊಸ ಉದ್ಯೋಗಗಳನ್ನು ಒದಗಿಸಲು ಕೇಂದ್ರ ಸರ್ಕಾರವು ಈ ಕಾರ್ಯಕ್ರಮದಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಯೋಜಿಸಿದೆ. ಬಿಹಾರದ ಯುವಕರು ಸಹ ಈ ಉಪಕ್ರಮದಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ.

 

|

ಸ್ನೇಹಿತರೆ,

ಬಿಹಾರದಲ್ಲಿ ಸ್ವಯಂ-ಉದ್ಯೋಗಗಳನ್ನು ಉತ್ತೇಜಿಸಲು, ಮುದ್ರಾದಂತಹ ಯೋಜನೆಗಳನ್ನು ವೇಗಗೊಳಿಸಲಾಗುತ್ತಿದೆ. ಕಳೆದ 2 ತಿಂಗಳಲ್ಲಿ, ಈ ಯೋಜನೆಯಡಿ ಬಿಹಾರದಲ್ಲಿ ಲಕ್ಷಾಂತರ ರೂ. ಸಾಲಗಳನ್ನು ವಿತರಿಸಲಾಗಿದೆ. ಚಂಪಾರಣ್‌ನಲ್ಲೇ 60,000 ಯುವಕರು ಸ್ವ-ಉದ್ಯೋಗಕ್ಕಾಗಿ ಮುದ್ರಾ ಸಾಲಗಳನ್ನು ಪಡೆದಿದ್ದಾರೆ.

ಸ್ನೇಹಿತರೆ,

ಆರ್‌ಜೆಡಿಯಲ್ಲಿರುವವರು ನಿಮಗೆ ಎಂದಿಗೂ ಉದ್ಯೋಗ ಒದಗಿಸಲು ಸಾಧ್ಯವಿಲ್ಲ - ನಿಮಗೆ ಉದ್ಯೋಗ ನೀಡುವ ಹೆಸರಿನಲ್ಲಿ, ನಿಮ್ಮ ಭೂಮಿ ಲಪಟಾಯಿಸಿ ಅದನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳುವ ಜನರನ್ನು ಎಂದಿಗೂ ಮರೆಯಬೇಡಿ. ಒಂದೆಡೆ, ಲಾಟೀನು ಯುಗದ ಬಿಹಾರ ಇತ್ತು, ಇದೀಗ ಈ ಬಿಹಾರವು ಹೊಸ ಭರವಸೆಯ ಪ್ರಕಾಶಮಾನದಿಂದ ಬೆಳಗುತ್ತಿದೆ. ಎನ್‌ಡಿಎ ಜೊತೆ ಕೈಜೋಡಿಸುವ ಮೂಲಕ ಈ ಬೆಳಕಿನ ಪ್ರಯಾಣ ಸಾಧ್ಯವಾಗಿದೆ. ಅದಕ್ಕಾಗಿಯೇ ಬಿಹಾರದ ಸಂಕಲ್ಪವು ಅಚಲವಾಗಿದೆ - ಎನ್‌ಡಿಎ ಜೊತೆ, ಪ್ರತಿ ಕ್ಷಣವೂ!

ಸ್ನೇಹಿತರೆ,

ಇತ್ತೀಚಿನ ವರ್ಷಗಳಲ್ಲಿ ಬಿಹಾರದಲ್ಲಿ ನಕ್ಸಲ್‌ವಾದದ ನಿಗ್ರಹವು ರಾಜ್ಯದ ಯುವಕರಿಗೆ ಉತ್ತಮ ಮತ್ತು ಹೆಚ್ಚು ಸುರಕ್ಷಿತ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟಿದೆ. ಚಂಪಾರಣ್, ಔರಂಗಾಬಾದ್, ಗಯಾ ಜಿ ಮತ್ತು ಜಮುಯಿ ಮುಂತಾದ ಜಿಲ್ಲೆಗಳನ್ನು ಹಲವು ವರ್ಷಗಳಿಂದ ಹಿಡಿದಿಟ್ಟುಕೊಂಡಿದ್ದ ನಕ್ಸಲ್‌ವಾದವು ಈಗ ತನ್ನ ಕೊನೆಯ ಉಸಿರನ್ನು ಉಸಿರಾಡುತ್ತಿದೆ. ಈ ಪ್ರದೇಶಗಳ ಮೇಲೆ ಒಂದು ಕಾಲದಲ್ಲಿ ಆವರಿಸಿದ್ದ ನಕ್ಸಲ್‌ವಾದದ ಕರಿನೆರಳು ದೂರವಾಗಿದೆ. ಇಂದು, ಈ ಪ್ರದೇಶಗಳ ಯುವಕರು ದೊಡ್ಡ ಕನಸು ಕಾಣುತ್ತಿದ್ದಾರೆ. ಭಾರತವನ್ನು ನಕ್ಸಲ್‌ವಾದದಿಂದ ಸಂಪೂರ್ಣವಾಗಿ ಮುಕ್ತಗೊಳಿಸುವುದು ನಮ್ಮ ದೃಢ ಸಂಕಲ್ಪವಾಗಿದೆ.

ಸ್ನೇಹಿತರೆ,

ಇದು ಹೊಸ ಭಾರತ - ಭಾರತ ಮಾತೆಯ ಶತ್ರುಗಳಿಗೆ ಶಿಕ್ಷೆ ನೀಡಲು ಯಾವುದೇ ಪ್ರಯತ್ನ ಮಾಡಲಿಲ್ಲ. ಬಿಹಾರದ ಈ ಮಣ್ಣಿನಿಂದಲೇ, ನಾನು 'ಆಪರೇಷನ್ ಸಿಂಧೂರ್' ಪ್ರಾರಂಭಿಸಲು ನಿರ್ಧರಿಸಿದ್ದೆ, ಇಂದು ಇಡೀ ಜಗತ್ತು ಅದರ ಯಶಸ್ಸಿಗೆ ಸಾಕ್ಷಿಯಾಗುತ್ತಿದೆ.

ಸ್ನೇಹಿತರೆ,

ಬಿಹಾರಕ್ಕೆ ಯಾವುದೇ ಸಾಮರ್ಥ್ಯ ಅಥವಾ ಸಂಪನ್ಮೂಲಗಳ ಕೊರತೆಯಿದೆ. ಇಂದು ಈ ಸಂಪನ್ಮೂಲಗಳು ಬಿಹಾರದ ಪ್ರಗತಿಯ ಪ್ರೇರಕ ಶಕ್ತಿಯಾಗುತ್ತಿವೆ. ಎನ್‌ಡಿಎ ಸರ್ಕಾರದ ಪ್ರಯತ್ನಗಳಿಂದಾಗಿ, ಮಖಾನಾದ ಬೆಲೆ ಗಮನಾರ್ಹವಾಗಿ ಹೇಗೆ ಹೆಚ್ಚಾಗಿದೆ ಎಂಬುದನ್ನು ನೋಡಿ. ಏಕೆಂದರೆ ನಾವು ಇಲ್ಲಿನ ಮಖಾನಾ ರೈತರನ್ನು ದೊಡ್ಡ ಮಾರುಕಟ್ಟೆಗಳಿಗೆ ಸಂಪರ್ಕಿಸಿದ್ದೇವೆ. ನಾವು ಮಖಾನಾ ಮಂಡಳಿ ಸ್ಥಾಪಿಸುತ್ತಿದ್ದೇವೆ. ಬಾಳೆಹಣ್ಣು, ಲಿಚಿ, ಮಾರ್ಚಾ ಅಕ್ಕಿ, ಕತರ್ನಿ ಅಕ್ಕಿ, ಜರ್ದಾಲು ಮಾವಿನಹಣ್ಣು, ಮಗಾಹಿ ಪಾನ್ ಸೇರಿದಂತೆ ಇತರೆ ಹಲವು ಉತ್ಪನ್ನಗಳಿಂದ ಈಗ ಬಿಹಾರದ ರೈತರು ಮತ್ತು ಯುವಕರನ್ನು ಜಾಗತಿಕ ಮಾರುಕಟ್ಟೆಗಳಿಗೆ ಸಂಪರ್ಕಿಸುತ್ತವೆ.

 

|

ಸಹೋದರ ಸಹೋದರಿಯರೆ,

ಕೃಷಿ ಉತ್ಪನ್ನಗಳನ್ನು ಹೆಚ್ಚಿಸುವುದು ಮತ್ತು ರೈತರ ಆದಾಯ ಹೆಚ್ಚಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಸುಮಾರು 3.5 ಲಕ್ಷ ಕೋಟಿ ರೂಪಾಯಿಗಳನ್ನು ಈಗಾಗಲೇ ರೈತರಿಗೆ ಒದಗಿಸಲಾಗಿದೆ. ಇಲ್ಲಿ ಮೋತಿಹಾರಿಯಲ್ಲೇ 5 ಲಕ್ಷಕ್ಕೂ ಹೆಚ್ಚು ರೈತರು 1,500 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ಪಡೆದಿದ್ದಾರೆ.

ಸ್ನೇಹಿತರೆ,

ನಾವು ಘೋಷಣೆಗಳಿಗೆ ಮಾತ್ರ ಸೀಮಿತವಾಗಿರದೆ ಅಥವಾ ನಾವು ಭರವಸೆಗಳಿಗೆ ಸೀಮಿತವಾಗಿರದೆ, ಕ್ರಿಯೆಯ ಮೂಲಕ ಘೋಷಣೆ, ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ನಾವು ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ, ಇದು ನಮ್ಮ ನೀತಿಗಳು ಮತ್ತು ನಮ್ಮ ನಿರ್ಧಾರಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ. ಎನ್‌ಡಿಎ ಸರ್ಕಾರದ ಧ್ಯೇಯವೆಂದರೆ - ಪ್ರತಿ ಹಿಂದುಳಿದ ವರ್ಗಕ್ಕೂ ಆದ್ಯತೆ! ಅದು ಹಿಂದುಳಿದ ಪ್ರದೇಶಗಳಾಗಿರಲಿ ಅಥವಾ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಾಗಿರಲಿ, ಅವು ನಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ. ದಶಕಗಳಿಂದ, ನಮ್ಮ ದೇಶದ 110ಕ್ಕೂ ಹೆಚ್ಚು ಜಿಲ್ಲೆಗಳನ್ನು 'ಹಿಂದುಳಿದ' ಎಂದು ಹಣೆಪಟ್ಟಿ ಕಟ್ಟಿ ಅವುಗಳ ಹಣೆಬರಹಕ್ಕೆ ಬಿಡಲಾಗಿತ್ತು. ಆದಾಗ್ಯೂ, ನಾವು ಈ ಜಿಲ್ಲೆಗಳಿಗೆ ಆದ್ಯತೆ ನೀಡಿದ್ದೇವೆ. ಅವುಗಳನ್ನು ಹಿಂದುಳಿದವು ಎಂದು ಕರೆಯದೆ, ಅವುಗಳನ್ನು ಮಹತ್ವಾಕಾಂಕ್ಷೆಯ ಜಿಲ್ಲೆಗಳೆಂದು ಮರುನಾಮಕರಣ ಮಾಡಿ ಅವುಗಳ ಅಭಿವೃದ್ಧಿಯನ್ನು ಮುನ್ನಡೆಸುತ್ತಿದ್ದೇವೆ. ಅಂದರೆ, 'ಹಿಂದುಳಿದವರಿಗೆ ಆದ್ಯತೆ'. ನಮ್ಮ ಗಡಿ ಗ್ರಾಮಗಳನ್ನು ಸಹ ಬಹಳ ಹಿಂದಿನಿಂದಲೂ ಕಟ್ಟಕಡೆಯ ಗ್ರಾಮಗಳೆಂದು ಪರಿಗಣಿಸಲಾಗುತ್ತಿತ್ತು, ನಿರ್ಲಕ್ಷಿಸಲಾಗಿತ್ತು. ನಾವು ಈ ಮನಸ್ಥಿತಿ ಬದಲಾಯಿಸಿದ್ದೇವೆ - ಈ 'ಕೊನೆಯ ಗ್ರಾಮಗಳು' ಎಂದು ಕರೆಯಲ್ಪಡುವವುಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ, ಅವುಗಳನ್ನು ದೇಶದ 'ಮೊದಲ ಗ್ರಾಮಗಳು' ಎಂದು ಮರು ವ್ಯಾಖ್ಯಾನಿಸಿದ್ದೇವೆ. ಮತ್ತೊಮ್ಮೆ, 'ಹಿಂದುಳಿದವರಿಗೆ ಆದ್ಯತೆ' ನೀಡಿದ್ದೇವೆ. ನಮ್ಮ ಒಬಿಸಿ ಸಮುದಾಯವು ದಶಕಗಳಿಂದ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವಂತೆ ಕೋರುತ್ತಿತ್ತು. ಈ ಬೇಡಿಕೆಯನ್ನು ಪೂರೈಸಿದ್ದು ನಮ್ಮ ಸರ್ಕಾರ. ನಮ್ಮ ಬುಡಕಟ್ಟು ಸಮುದಾಯಗಳು ಸೇರಿದಂತೆ ಜನ್ಮನ್ ಯೋಜನೆಯ ಮೂಲಕ ಹೆಚ್ಚು ನಿರ್ಲಕ್ಷಿತರನ್ನು ನಾವು ಗುರುತಿಸಿ ಆದ್ಯತೆ ನೀಡಿದ್ದೇವೆ. ಈಗ ಅವರ ಅಭಿವೃದ್ಧಿಗಾಗಿ 25,000 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಅದಕ್ಕಾಗಿಯೇ ನಾನು ಹೇಳುತ್ತೇನೆ - ಹಿಂದುಳಿದವರೇ ನಮ್ಮ ಆದ್ಯತೆ ಎಂದು.

ಈ ದೃಷ್ಟಿಕೋನಕ್ಕೆ ಅನುಗುಣವಾಗಿ, ಮತ್ತೊಂದು ಪ್ರಮುಖ ಯೋಜನೆಯನ್ನು ಇದೀಗ ಪ್ರಾರಂಭಿಸಲಾಗಿದೆ. 2 ದಿನಗಳ ಹಿಂದೆ, ಕೇಂದ್ರ ಸಚಿವ ಸಂಪುಟವು 'ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ'ಗೆ ಅನುಮೋದನೆ ನೀಡಿತು. ಈ ಯೋಜನೆಯಡಿ, ಕೃಷಿಯಲ್ಲಿ ಅತ್ಯಂತ ಹಿಂದುಳಿದ 100 ಜಿಲ್ಲೆಗಳನ್ನು ಗುರುತಿಸಲಾಗುವುದು. ಇವು ಅಪಾರ ಕೃಷಿ ಸಾಮರ್ಥ್ಯ ಹೊಂದಿರುವ, ಆದರೆ ಉತ್ಪಾದಕತೆ ಮತ್ತು ರೈತರ ಆದಾಯದಲ್ಲಿ ಇನ್ನೂ ಹಿಂದುಳಿದಿರುವ ಜಿಲ್ಲೆಗಳಾಗಿವೆ. ಈ ಯೋಜನೆಯಡಿ, ಈ ಜಿಲ್ಲೆಗಳಿಗೆ ಆದ್ಯತೆ ನೀಡಲಾಗುವುದು ಮತ್ತು ಬೆಂಬಲ ನೀಡಲಾಗುವುದು. ಅಂದರೆ, 'ಹಿಂದುಳಿದವರಿಗೆ ಆದ್ಯತೆ' ಇದಾಗಿದೆ. ದೇಶಾದ್ಯಂತ ಸುಮಾರು 1.75 ಕೋಟಿ ರೈತರು ಇದರಿಂದ ನೇರವಾಗಿ ಪ್ರಯೋಜನ ಪಡೆಯುತ್ತಾರೆ. ಈ ಫಲಾನುಭವಿಗಳಲ್ಲಿ ಹೆಚ್ಚಿನವರು ಬಿಹಾರದ ನನ್ನ ರೈತ ಸಹೋದರ, ಸಹೋದರಿಯರಾಗಿರುತ್ತಾರೆ.

 

 

|

ಸ್ನೇಹಿತರೆ,

ಇಂದು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಮತ್ತು ರಸ್ತೆ ಯೋಜನೆಗಳನ್ನು ಉದ್ಘಾಟಿಸಲಾಗಿದೆ, ಅವುಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಯೋಜನೆಗಳು ಬಿಹಾರದ ಜನರಿಗೆ ಹೆಚ್ಚಿನ ಪ್ರಯೋಜನ ನೀಡುತ್ತವೆ. ದೇಶದ ವಿವಿಧ ಮಾರ್ಗಗಳಲ್ಲಿ, ಅಮೃತ್ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಾಗಿದೆ. ಅಮೃತ್ ಭಾರತ್ ಎಕ್ಸ್‌ಪ್ರೆಸ್ ಈಗ ನೇರವಾಗಿ ಮೋತಿಹಾರಿ-ಬಾಪುಧಾಮ್‌ನಿಂದ ದೆಹಲಿಯ ಆನಂದ್ ವಿಹಾರ್‌ಗೆ ಚಲಿಸುತ್ತದೆ. ಮೋತಿಹಾರಿ ರೈಲು ನಿಲ್ದಾಣವನ್ನು ಸಹ ಹೊಸ ನೋಟ ಮತ್ತು ಹೆಚ್ಚಿನ ಸೌಲಭ್ಯಗಳೊಂದಿಗೆ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ದರ್ಭಂಗಾ-ನರ್ಕಾಟಿಯಾಗಂಜ್ ನಡುವೆ ಜೋಡಿ ಮಾರ್ಗ ನಿರ್ಮಿಸಲಾಗುತ್ತಿದ್ದು, ಈ ಮಾರ್ಗದಲ್ಲಿ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವನ್ನು ಒದಗಿಸುತ್ತದೆ.

ಸ್ನೇಹಿತರೆ,

ಚಂಪಾರಣ್ ಭೂಮಿ ನಮ್ಮ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯೊಂದಿಗೆ ಆಳವಾದ ಸಂಪರ್ಕ ಹೊಂದಿದೆ. ರಾಮ-ಜಾನಕಿ ಮಾರ್ಗವು ಮೋತಿಹಾರಿಯಲ್ಲಿರುವ ಸತ್ತರ್‌ಘಾಟ್, ಕೇಸರಿಯಾ, ಚಾಕಿಯಾ ಮತ್ತು ಮಧುಬನ್ ಮೂಲಕ ಹಾದುಹೋಗುತ್ತದೆ. ಸೀತಾಮರ್ಹಿಯಿಂದ ಅಯೋಧ್ಯೆಗೆ ನಿರ್ಮಿಸಲಾಗುತ್ತಿರುವ ಹೊಸ ರೈಲು ಮಾರ್ಗವು ಚಂಪಾರಣ್‌ನ ಭಕ್ತರು ದರ್ಶನಕ್ಕಾಗಿ ಅಯೋಧ್ಯೆಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಈ ಎಲ್ಲಾ ಪ್ರಯತ್ನಗಳ ದೊಡ್ಡ ಪ್ರಯೋಜನವೆಂದರೆ ಬಿಹಾರದಲ್ಲಿ ಸುಧಾರಿತ ಸಂಪರ್ಕ, ಇದು ಹೊಸ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತದೆ.

 

|

ಸ್ನೇಹಿತರೆ,

ಕಾಂಗ್ರೆಸ್ ಮತ್ತು ಆರ್‌ಜೆಡಿ ಬಹಳ ಹಿಂದಿನಿಂದಲೂ ಬಡವರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳ ಹೆಸರಿನಲ್ಲಿ ರಾಜಕೀಯ ನಡೆಸುತ್ತಿವೆ. ಆದರೆ ಸಮಾನ ಹಕ್ಕುಗಳನ್ನು ನೀಡುವ ಬದಲು, ಅವರು ತಮ್ಮ ಸ್ವಂತ ಕುಟುಂಬದ ಹೊರಗಿನವರಿಗೆ ಗೌರವ ನೀಡುತ್ತಿರಲಿಲ್ಲ. ಅವರ ದುರಹಂಕಾರವು ಈಗ ಬಿಹಾರದ ಎಲ್ಲರಿಗೂ ಸ್ಪಷ್ಟವಾಗಿದೆ. ನಾವು ಬಿಹಾರವನ್ನು ಅವರ ದುರುದ್ದೇಶಗಳಿಂದ ರಕ್ಷಿಸಬೇಕು. ನಿತೀಶ್ ಜಿ ತಂಡ, ಬಿಜೆಪಿ ತಂಡ ಮತ್ತು ಇಡೀ ಎನ್‌ಡಿಎ ಹಲವು ವರ್ಷಗಳಿಂದ ಇಲ್ಲಿ ಅವಿಶ್ರಾಂತವಾಗಿ ಕೆಲಸ ಮಾಡಿದೆ. ಶ್ರೀ ಚಂದ್ರ ಮೋಹನ್ ರೈ ಜಿ ಅವರಂತಹ ಗಣ್ಯ ವ್ಯಕ್ತಿಗಳು ನಮಗೆ ದಾರಿಯಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಬಿಹಾರದ ಅಭಿವೃದ್ಧಿಗಾಗಿ ನಾವು ಒಟ್ಟಾಗಿ ಈ ಪ್ರಯತ್ನಗಳನ್ನು ವೇಗಗೊಳಿಸಬೇಕು. ಬಿಹಾರದ ಉಜ್ವಲ ಭವಿಷ್ಯದತ್ತ ನಾವು ಒಟ್ಟಾಗಿ ಸಾಗಬೇಕು. ನಾವು ಈಗಲೇ ಸಂಕಲ್ಪ ತೊಡೋಣ - ಬನಾಯೇಂಗೆ ನಯಾ ಬಿಹಾರ್, ಫಿರ್ ಏಕಬರ್ ಎನ್‌ಡಿಎ ಸರ್ಕಾರ್(ನಾವು ಮತ್ತೊಮ್ಮೆ ಎನ್‌ಡಿಎ ಸರ್ಕಾರದೊಂದಿಗೆ ಹೊಸ ಬಿಹಾರ ನಿರ್ಮಿಸುತ್ತೇವೆ!)

 

|

ಇದರೊಂದಿಗೆ, ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈಗ, ಎರಡೂ ಕೈಗಳನ್ನು ಮೇಲಕ್ಕೆತ್ತಿ, ಪೂರ್ಣ ಶಕ್ತಿಯಿಂದ ಹೇಳಿ –

ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!

ಹೃತ್ಪೂರ್ವಕ ಧನ್ಯವಾದಗಳು.

 

  • Vishal Tiwari August 15, 2025

    Ram Ram Ram Ram Ram Ram Ram Ram Ram Ram Ram Ram Ram
  • Vivek Kumar Gupta August 13, 2025

    नमो .. 🙏🙏🙏🙏🙏
  • Mayur Deep Phukan August 13, 2025

    🙏
  • Jitendra Kumar August 12, 2025

    3567
  • Snehashish Das August 11, 2025

    Bharat Mata ki Jai, Jai Hanuman, BJP jindabad 🙏🙏🙏
  • Virudthan August 11, 2025

    🌹🌹🌹🌹From Metro to Defense PM Modi’s Decade of National Advancement💢🌺💢🌺💢🌺💢💐💢🍁💢♦💢🌹🌺💢🌺
  • Virudthan August 11, 2025

    🌹🌹🌹🌹மோடி அரசு ஆட்சி🌹🌹🌹💢🌹 🌺💢🌺💢இந்தியா வளர்ச்சி🌺💢🌺💢🌺💢🌺💢மக்கள் மகிழ்ச்சி😊 🌺💢🌺💢🌺💢
  • Kushal shiyal August 08, 2025

    Jay shree Krishna .
  • Vishal Tiwari August 08, 2025

    🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
  • Rajan Garg August 07, 2025

    जय श्री राम 🙏🙏🙏
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
How 'India’s secrets' helped Shubhanshu Shukla in space: Astronaut shares experience with PM Modi

Media Coverage

How 'India’s secrets' helped Shubhanshu Shukla in space: Astronaut shares experience with PM Modi
NM on the go

Nm on the go

Always be the first to hear from the PM. Get the App Now!
...
Prime Minister pays tributes to former PM Rajiv Gandhi on his birth anniversary
August 20, 2025

The Prime Minister, Shri Narendra Modi paid tributes to former Prime Minister, Rajiv Gandhi on his birth anniversary.

The Prime Minister posted on X;

“On his birth anniversary today, my tributes to former Prime Minister Shri Rajiv Gandhi Ji.”