ಸುದರ್ಶನ ಚಕ್ರಧಾರಿ ಮೋಹನ ಮತ್ತು ಚರಕಧಾರಿ ಮೋಹನ ಅವರು ತೋರಿಸಿದ ಮಾರ್ಗವನ್ನು ಅನುಸರಿಸುವ ಮೂಲಕ ಭಾರತ ಇಂದು ಬಲಿಷ್ಠವಾಗುತ್ತಿದೆ: ಪ್ರಧಾನಮಂತ್ರಿ
ಇಂದು, ಭಯೋತ್ಪಾದಕರು ಮತ್ತು ಅವರ ಸೂತ್ರಧಾರಿಗಳು ಎಲ್ಲಿ ಅಡಗಿದ್ದರೂ ಅವರನ್ನು ಬಿಡಲಾಗುವುದಿಲ್ಲ: ಪ್ರಧಾನಮಂತ್ರಿ
ಸಣ್ಣ ಉದ್ಯಮಿಗಳು, ರೈತರು ಅಥವಾ ಹೈನುಗಾರರಿಗೆ ಯಾವುದೇ ಹಾನಿಯಾಗಲು ನಮ್ಮ ಸರ್ಕಾರ ಬಿಡುವುದಿಲ್ಲ: ಪ್ರಧಾನಮಂತ್ರಿ
ಇಂದು, ಗುಜರಾತ್ ನೆಲದಲ್ಲಿ ಪ್ರತಿಯೊಂದು ರೀತಿಯ ಉದ್ಯಮವೂ ವಿಸ್ತರಿಸುತ್ತಿದೆ: ಪ್ರಧಾನಮಂತ್ರಿ
ನವ-ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗ ಎರಡನ್ನೂ ಸಬಲೀಕರಣಗೊಳಿಸಲು ನಮ್ಮ ನಿರಂತರ ಪ್ರಯತ್ನಗಳು ನಡೆಯುತ್ತವೆ: ಪ್ರಧಾನಮಂತ್ರಿ
ಈ ದೀಪಾವಳಿಯಲ್ಲಿ, ಅದು ವ್ಯಾಪಾರ ಸಮುದಾಯವಾಗಿರಲಿ ಅಥವಾ ಇತರ ಕುಟುಂಬಗಳಾಗಿರಲಿ, ಪ್ರತಿಯೊಬ್ಬರೂ ಸಂತೋಷದ ದುಪ್ಪಟ್ಟು ಬೋನಸ್ ಅನ್ನು ಪಡೆಯುತ್ತಾರೆ: ಪ್ರಧಾನಮಂತ್ರಿ
ಹಬ್ಬದ ಋತುವಿನಲ್ಲಿ ಮನೆಗೆ ತರುವ ಎಲ್ಲಾ ಖರೀದಿಗಳು, ಉಡುಗೊರೆಗಳು ಮತ್ತು ವಸ್ತುಗಳು ಮೇಡ್ ಇನ್ ಇಂಡಿಯಾ ಆಗಿರಲಿ: ಪ್ರಧಾನಮಂತ್ರಿ

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ನೀವೆಲ್ಲರೂ ಇಂದು ಎಂತಹ ವಾತಾವರಣ ಸೃಷ್ಟಿಸಿದ್ದೀರಿ!

ಗುಜರಾತ್‌ನ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ ಜಿ, ಜನಪ್ರಿಯ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಸಿ.ಆರ್. ಪಾಟೀಲ್, ಗುಜರಾತ್ ಸರ್ಕಾರದ ಎಲ್ಲಾ ಸಚಿವರೆ, ಅಹಮದಾಬಾದ್ ಮೇಯರ್ ಪ್ರತಿಭಾ ಜಿ, ಇತರೆ ಜನಪ್ರತಿನಿಧಿಗಳೆ ಮತ್ತು ಅಹಮದಾಬಾದ್‌ನ ನನ್ನ ಸಹೋದರ ಸಹೋದರಿಯರೆ!

ಇಂದು, ನೀವೆಲ್ಲರೂ ನಿಜವಾಗಿಯೂ ಉತ್ತಮ ವಾತಾವರಣ ಸೃಷ್ಟಿಸಿದ್ದೀರಿ. ಈ ಲಕ್ಷಾಂತರ ಜನರ ಪ್ರೀತಿ ಮತ್ತು ಆಶೀರ್ವಾದ ಪಡೆಯಲು ನಾನು ಎಷ್ಟು ಅದೃಷ್ಟಶಾಲಿ ಎಂದು ನಾನು ಅನೇಕ ಬಾರಿ ಭಾವಿಸಿದ್ದೇನೆ. ನಾನು ನಿಮಗೆ ಎಷ್ಟೇ ಧನ್ಯವಾದ ಹೇಳಿದರೂ ಅದು ಎಂದಿಗೂ ಮುಗಿಯುವುದಿಲ್ಲ. ನೋಡಿ, ಅಲ್ಲಿ ಸ್ವಲ್ಪ ನರೇಂದ್ರ ನಿಂತಿದ್ದಾನೆ!

 

ಸ್ನೇಹಿತರೆ,

ಪ್ರಸ್ತುತ, ದೇಶಾದ್ಯಂತ ಗಣೇಶೋತ್ಸವದ ಅದ್ಭುತ ಉತ್ಸಾಹವಿದೆ. ಭಗವಾನ್ ಗಣಪತಿ ಬಪ್ಪನ ಆಶೀರ್ವಾದದೊಂದಿಗೆ, ಇಂದು ಗುಜರಾತ್‌ನ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಯೋಜನೆಗಳ ಶುಭಾರಂಭವನ್ನು ಸೂಚಿಸುತ್ತದೆ. ಇಂದು ನನಗೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ನಿಮಗೆ ಅರ್ಪಿಸಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಈ ಅಭಿವೃದ್ಧಿ ಕಾರ್ಯಗಳಿಗಾಗಿ ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೆ,

ಈ ಮಳೆಗಾಲದಲ್ಲಿ ಗುಜರಾತ್‌ನ ಹಲವಾರು ಭಾಗಗಳಲ್ಲಿಯೂ ಸಹ ಭಾರಿ ಮಳೆಯಾಗುತ್ತಿದೆ. ದೇಶಾದ್ಯಂತ, ಮೇಘಸ್ಫೋಟದ ಘಟನೆಗಳು ಒಂದರ ನಂತರ ಒಂದರಂತೆ ಸಂಭವಿಸುತ್ತಿವೆ, ನಾವು ಟಿವಿಯಲ್ಲಿ ಅಂತಹ ವಿಕೋಪದ ದೃಶ್ಯಗಳನ್ನು ನೋಡುವಾಗ, ನಾವು ಸಮಾಧಾನ ತಂದುಕೊಳ್ಳುವುದು ಕಷ್ಟವಾಗುತ್ತದೆ. ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ನಾನು ನನ್ನ ಸಂತಾಪ ಸೂಚಿಸುತ್ತೇನೆ. ಪ್ರಕೃತಿಯ ಈ ವಿಕೋಪವು ಇಡೀ ಮಾನವ ಜನಾಂಗಕ್ಕೆ, ಇಡೀ ಜಗತ್ತಿಗೆ, ನಮ್ಮ ಇಡೀ ದೇಶಕ್ಕೆ ಸವಾಲಾಗಿ ಪರಿಣಮಿಸಿದೆ. ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ.

ಸ್ನೇಹಿತರೆ,

ಗುಜರಾತ್‌ನ ಈ ಭೂಮಿ ಇಬ್ಬರು ಮೋಹನರ ಪುಣ್ಯಭೂಮಿಯಾಗಿದೆ. ಒಬ್ಬರು ಸುದರ್ಶನ ಚಕ್ರ-ಧಾರಿ ಮೋಹನ, ನಮ್ಮ ದ್ವಾರಕಾಧೀಶ ಶ್ರೀ ಕೃಷ್ಣ, ಮತ್ತು ಇನ್ನೊಬ್ಬರು ಚರಖಾ-ಧಾರಿ ಮೋಹನ, ಸಬರಮತಿಯ ಸಂತ, ಪೂಜ್ಯ ಬಾಪೂಜಿ. ಇಂದು, ಅವರಿಬ್ಬರೂ ತೋರಿಸಿದ ಮಾರ್ಗವನ್ನು ಅನುಸರಿಸುವ ಮೂಲಕ ಭಾರತವು ಬಲಿಷ್ಠವಾಗಿ ಬೆಳೆಯುತ್ತಿದೆ. ಸುದರ್ಶನ ಚಕ್ರ-ಧಾರಿ ಮೋಹನರು ನಮಗೆ ರಾಷ್ಟ್ರ ಮತ್ತು ಸಮಾಜವನ್ನು ಹೇಗೆ ರಕ್ಷಿಸಬೇಕೆಂದು ಕಲಿಸಿದರು. ಅವರು ಸುದರ್ಶನ ಚಕ್ರವನ್ನು ನ್ಯಾಯ ಮತ್ತು ಭದ್ರತೆಯ ಗುರಾಣಿಯನ್ನಾಗಿ ಮಾಡಿದರು, ಅದು 'ಪತಾಲ್' (ಪಾತಾಳ) ದಲ್ಲಿಯೂ ಶತ್ರುಗಳನ್ನು ಬೇಟೆಯಾಡಿ, ಶಿಕ್ಷೆ ನೀಡುತ್ತದೆ. ಆ ಮನೋಭಾವವು ಇಂದು ಭಾರತದ ನಿರ್ಧಾರಗಳಲ್ಲಿ ಪ್ರತಿಫಲಿಸುತ್ತದೆ - ನಮ್ಮ ರಾಷ್ಟ್ರ ಮಾತ್ರವಲ್ಲ, ಇಡೀ ಪ್ರಪಂಚವೇ ಅನುಭವಿಸಿದೆ. ನಮ್ಮ ಗುಜರಾತ್ ಮತ್ತು ಅಹಮದಾಬಾದ್ ಹಿಂದಿನ ಕಠಿಣ ದಿನಗಳಿಗೆ ಸಾಕ್ಷಿಯಾಗಿವೆ. ಗಾಳಿಪಟ ಕಾಳಗದ ಸಮಯದಲ್ಲಿ ಗಲಭೆಕೋರರು ಜೀವಗಳನ್ನು ತೆಗೆದುಕೊಂಡಾಗ; ಜನರು ಕರ್ಫ್ಯೂ ಅಡಿ ಬದುಕಬೇಕಾದಾಗ; ಹಬ್ಬಗಳ ಸಮಯದಲ್ಲಿ ಅಹಮದಾಬಾದ್‌ನ ಮಣ್ಣು ರಕ್ತದಿಂದ ಕಲೆಯಿಂದ ಆವರಿಸಿದಾಗ, ದೆಹಲಿಯಲ್ಲಿ ಕುಳಿತಿದ್ದ ಕಾಂಗ್ರೆಸ್ ಸರ್ಕಾರ ಏನನ್ನೂ ಮಾಡದಿದ್ದರೂ ಈ ಆಕ್ರಮಣಕಾರರು ನಮ್ಮ ರಕ್ತ ಚೆಲ್ಲಿದರು. ಆದರೆ ಇಂದು, ಭಯೋತ್ಪಾದಕರು ಮತ್ತು ಅದರ ಸೂತ್ರಧಾರರು ಎಲ್ಲಿ ಅಡಗಿಕೊಂಡರೂ ನಾವು ಬಿಡುವುದಿಲ್ಲ. ಪಹಲ್ಗಾಮ್‌ಗೆ ಭಾರತ ಹೇಗೆ ಸೇಡು ತೀರಿಸಿಕೊಂಡಿತು ಎಂಬುದನ್ನು ಜಗತ್ತು ನೋಡಿದೆ. ಕೇವಲ 22 ನಿಮಿಷಗಳಲ್ಲಿ, ಎಲ್ಲವನ್ನೂ ನಾಶ ಮಾಡಲಾಯಿತು. ಸಂಪೂರ್ಣ ಒಳಹೊಕ್ಕಿ, ನೂರಾರು ಕಿಲೋಮೀಟರ್ ದೂರದಲ್ಲಿರುವ ಪೂರ್ವನಿರ್ಧರಿತ ಗುರಿಗಳನ್ನು ಭೇದಿಸಿ, ನಾವು ಭಯೋತ್ಪಾದನೆಯ ಕೇಂದ್ರದ ಮೇಲೆ ದಾಳಿ ಮಾಡಿದೆವು. ಆಪರೇಷನ್ ಸಿಂದೂರ್ ನಮ್ಮ ಸಶಸ್ತ್ರ ಪಡೆಗಳ 'ಶೌರ್ಯ' ಮತ್ತು ಸುದರ್ಶನ ಚಕ್ರಧಾರಿ ಮೋಹನರ ಭಾರತದ 'ಇಚ್ಛಾಶಕ್ತಿ'ಯ ಸಂಕೇತವಾಯಿತು.

 

ಸ್ನೇಹಿತರೆ,

ಚರಕಧಾರಿ ಮೋಹನ್, ನಮ್ಮ ಪೂಜ್ಯ ಬಾಪು, 'ಸ್ವದೇಶಿ'(ಸ್ವಾವಲಂಬನೆ) ಮೂಲಕ ಭಾರತದ ಸಮೃದ್ಧಿಯ ಹಾದಿ ತೋರಿಸಿದರು. ಇಲ್ಲಿ ಸಬರಮತಿ ಆಶ್ರಮವಿದೆ. ಬಾಪು ಅವರ ಹೆಸರಿನಲ್ಲಿ ದಶಕಗಳ ಕಾಲ ಅಧಿಕಾರ ಅನುಭವಿಸಿದ ಪಕ್ಷವು ಅವರ ಆತ್ಮವನ್ನೇ ತುಳಿದು ಹಾಕಿತು ಎಂಬುದಕ್ಕೆ ಈ ಆಶ್ರಮ ಸಾಕ್ಷಿಯಾಗಿದೆ. ಬಾಪು ಅವರ 'ಸ್ವದೇಶಿ' ಮಂತ್ರವನ್ನು ಅವರು ಏನು ಮಾಡಿದರು? ವರ್ಷಗಳಿಂದ, ಗಾಂಧಿಯವರ ಹೆಸರಿನಲ್ಲಿ ತಮ್ಮ ರಾಜಕೀಯ ನಡೆಸುತ್ತಿರುವವರು - ನೀವು ಅವರ ಬಾಯಿಯಿಂದ 'ಸ್ವಚ್ಛತೆ' (ಸ್ವಚ್ಛತೆ) ಬಗ್ಗೆ ಅಥವಾ 'ಸ್ವದೇಶಿ' ಬಗ್ಗೆ ಒಂದೇ ಒಂದು ಪದ ಕೇಳಿರಲಿಲ್ಲ. ಅವರ ದೃಷ್ಟಿಕೋನ ಏನಾಯಿತು ಎಂದು ದೇಶಕ್ಕೆ ಅರ್ಥವಾಗುತ್ತಿಲ್ಲ. 60ರಿಂದ 65 ವರ್ಷಗಳ ಕಾಲ, ಕಾಂಗ್ರೆಸ್ ಪಕ್ಷವು ಭಾರತವನ್ನು ಇತರ ರಾಷ್ಟ್ರಗಳ ಮೇಲೆ ಅವಲಂಬಿತವಾಗಿ ದೇಶವನ್ನು ಆಳಿತು - ಇದರಿಂದ ಅವರು ಆಮದುಗಳೊಂದಿಗೆ ಆಟವಾಡಲು ಮತ್ತು ಸರ್ಕಾರದಲ್ಲಿದ್ದಾಗ ಹಗರಣಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಆದರೆ ಇಂದು, ಭಾರತವು 'ಆತ್ಮನಿರ್ಭರ' (ಸ್ವಾವಲಂಬನೆ) ಮತ್ತು 'ವಿಕಸಿತ ಭಾರತ' (ಅಭಿವೃದ್ಧಿ ಹೊಂದಿದ ಭಾರತ) ನಿರ್ಮಿಸುವ ಅಡಿಪಾಯವನ್ನಾಗಿ ಮಾಡಿದೆ. ನಮ್ಮ ರೈತರು, ಮೀನುಗಾರರು, ಜಾನುವಾರು ಸಾಕಣೆದಾರರು ಮತ್ತು ಉದ್ಯಮಿಗಳ ಬಲದಿಂದ, ಭಾರತವು ಅಭಿವೃದ್ಧಿಯ ಹಾದಿಯಲ್ಲಿ - ಸ್ವಾವಲಂಬನೆಯ ಹಾದಿಯಲ್ಲಿ - ವೇಗವಾಗಿ ಮುನ್ನಡೆಯುತ್ತಿದೆ. ಗುಜರಾತ್‌ನಲ್ಲಿ ನಮ್ಮಲ್ಲಿ ಎಷ್ಟು ಹೈನುಗಾರರಿದ್ದಾರೆ ಎಂಬುದನ್ನು ನೋಡಿ ಮತ್ತು ನಮ್ಮ ಡೇರಿ ಕ್ಷೇತ್ರದ ಬಲವನ್ನು ನೋಡಿ! ಕೆಲವೇ ಗಂಟೆಗಳ ಹಿಂದೆ, ನಾನು ಫಿಜಿಯ ಪ್ರಧಾನ ಮಂತ್ರಿಯನ್ನು ಭೇಟಿಯಾದೆ. ಅವರು ಬಹಳ ಗೌರವ ಮತ್ತು ಮೆಚ್ಚುಗೆಯಿಂದ ಮಾತನಾಡಿದರು, ಅವರು ನಮ್ಮಂತೆಯೇ ತಮ್ಮ ಡೇರಿ ವಲಯ ಮತ್ತು ಸಹಕಾರಿ ಚಳುವಳಿಯನ್ನು ಅಭಿವೃದ್ಧಿಪಡಿಸಲು ಬಯಸುತ್ತೇವೆ ಎಂದು ಹೇಳಿದರು. ಸ್ನೇಹಿತರೆ, ನಮ್ಮ ಡೇರಿ ವಲಯವನ್ನು ಬಲಪಡಿಸಿದವರು ನಮ್ಮ ಹೈನುಗಾರರು. ಅವರಲ್ಲಿ, ನಮ್ಮ ಸಹೋದರಿಯರು ಹೆಚ್ಚಿನ ಕೊಡುಗೆ ನೀಡಿದ್ದಾರೆ. ನಮ್ಮ ಸಹೋದರಿಯರು ತಮ್ಮ ಸಮರ್ಪಣೆಯ ಮೂಲಕ ಡೇರಿ ವಲಯವನ್ನು ಬಲಿಷ್ಠ ಮತ್ತು ಸ್ವಾವಲಂಬಿಯನ್ನಾಗಿ ಮಾಡಿದ್ದಾರೆ, ಇಂದು ವಿಶ್ವಾದ್ಯಂತ ಅದರ ಪ್ರಶಂಸೆ ಮಾಡಲಾಗುತ್ತಿದೆ.

ಆದರೆ ಸ್ನೇಹಿತರೆ,

ಇಂದು ವಿಶ್ವಾದ್ಯಂತದ ರಾಜಕೀಯವು ಆರ್ಥಿಕ ಸ್ವಾರ್ಥದಿಂದ ಹೇಗೆ ನಡೆಸುತ್ತಿದೆ ಎಂಬುದನ್ನು ನಾವು ಸ್ಪಷ್ಟವಾಗಿ ನೋಡಬಹುದು, ಪ್ರತಿಯೊಬ್ಬರೂ ತಮ್ಮದೇ ಆದ ಕಾರ್ಯಸೂಚಿ ನಡೆಸುವಲ್ಲಿ ನಿರತರಾಗಿದ್ದಾರೆ. ಈ ಅಹಮದಾಬಾದ್ ಭೂಮಿಯಿಂದ, ನನ್ನ ಸಣ್ಣ ಉದ್ಯಮಿಗಳಿಗೆ, ನನ್ನ ಅಂಗಡಿಯ ಸಹೋದರ ಸಹೋದರಿಯರಿಗೆ, ನನ್ನ ರೈತ ಸಹೋದರರಿಗೆ, ನನ್ನ ಹೈನುಗಾರ ಸಹೋದರ ಸಹೋದರಿಯರಿಗೆ ನಾನು ಗಾಂಧಿ ಮೆಟ್ಟಿದ ಮಣ್ಣಿನಿಂದ ಹೇಳುತ್ತಿದ್ದೇನೆ - ನನ್ನ ದೇಶದ ಸಣ್ಣ ಉದ್ಯಮಿಗಳು, ರೈತರು ಮತ್ತು ಹೈನುಗಾರರಿಗೆ, ನಿಮ್ಮಲ್ಲಿ ಪ್ರತಿಯೊಬ್ಬರಿಗೂ, ನಾನು ನಿಮಗೆ ನನ್ನ ಪುನರಾವರ್ತಿತ ಭರವಸೆಯನ್ನು ನೀಡುತ್ತೇನೆ. ಮೋದಿ ಅವರಿಗೆ, ನಿಮ್ಮ ಹಿತಾಸಕ್ತಿಗಳೇ ಅತ್ಯುನ್ನತವಾಗಿವೆ. ನನ್ನ ಸರ್ಕಾರವು ಸಣ್ಣ ಉದ್ಯಮಿಗಳು, ರೈತರು ಅಥವಾ ಹೈನುಗಾರರಿಗೆ ಯಾವುದೇ ಹಾನಿಯಾಗಲು ಎಂದಿಗೂ ಬಿಡುವುದಿಲ್ಲ. ಎಷ್ಟೇ ದೊಡ್ಡ ಒತ್ತಡವಿದ್ದರೂ, ಅದನ್ನು ಸಹಿಸಿಕೊಳ್ಳುವ ನಮ್ಮ ಸಾಮರ್ಥ್ಯವನ್ನು ನಾವು ಬಲಪಡಿಸುತ್ತಲೇ ಇರುತ್ತೇವೆ.

ಸ್ನೇಹಿತರೆ,

ಇಂದು, 'ಆತ್ಮನಿರ್ಭರ್ ಭಾರತ ಅಭಿಯಾನ'(ಸ್ವಾವಲಂಬಿ ಭಾರತ ಅಭಿಯಾನ) ಗುಜರಾತ್‌ನಿಂದ ಹೆಚ್ಚಿನ ಶಕ್ತಿ ಪಡೆಯುತ್ತಿದೆ, ಇದರ ಹಿಂದೆ 2 ದಶಕಗಳ ಕಠಿಣ ಪರಿಶ್ರಮವಿದೆ. ಇಂದಿನ ಈ ಯುವ ಪೀಳಿಗೆ ಇಲ್ಲಿ ಪ್ರತಿದಿನ ಕರ್ಫ್ಯೂ ವಿಧಿಸಲಾದ ದಿನಗಳನ್ನು ನೋಡಿಲ್ಲ. ವ್ಯಾಪಾರ ಮತ್ತು ವ್ಯವಹಾರ ಮಾಡುವುದು ಕಷ್ಟಕರವಾಗಿತ್ತು, ಎಲ್ಲೆಲ್ಲೂ ಅಶಾಂತಿಯ ವಾತಾವರಣ ಇತ್ತು. ಆದರೆ ಇಂದು, ಅಹಮದಾಬಾದ್ ಭಾರತದ ಅತ್ಯಂತ ಸುರಕ್ಷಿತ ನಗರಗಳಲ್ಲಿ ಒಂದಾಗಿದೆ, ಇದಕ್ಕೆ ನಿಮ್ಮೆಲ್ಲರ ಸಾಧನೆ ಕಾರಣವಾಗಿದೆ.

 

ಸ್ನೇಹಿತರೆ,

ಗುಜರಾತ್‌ನಲ್ಲಿ ಸೃಷ್ಟಿಯಾಗಿರುವ ಶಾಂತಿ ಮತ್ತು ಭದ್ರತೆಯ ವಾತಾವರಣವು ನಮ್ಮ ಸುತ್ತಲೂ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತಿದೆ. ಇಂದು ಗುಜರಾತ್ ಮಣ್ಣಿನಲ್ಲಿ ಪ್ರತಿಯೊಂದು ರೀತಿಯ ಕೈಗಾರಿಕೆಗಳು ವಿಸ್ತರಿಸುತ್ತಿವೆ. ನಮ್ಮ ಗುಜರಾತ್ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿರುವುದನ್ನು ನೋಡಿ ಇಡೀ ರಾಜ್ಯವು ಹೆಮ್ಮೆಪಡುತ್ತಿದೆ. ನೀವು, ವಿಶೇಷವಾಗಿ ನಿಮ್ಮಲ್ಲಿರುವ ಹಿರಿಯ ಸಹೋದರ ಸಹೋದರಿಯರೆ, ಪ್ರತ್ಯೇಕ ಗುಜರಾತ್‌ಗಾಗಿ ಚಳುವಳಿ ನಡೆಯುತ್ತಿರುವಾಗ, 'ಮಹಾಗುಜರಾತ್ ಚಳುವಳಿ' ನಡೆಯುತ್ತಿತ್ತು - ಅನೇಕ ಜನರು ನಮಗೆ, "ನೀವು ಗುಜರಾತ್ ಅನ್ನು ಏಕೆ ಪ್ರತ್ಯೇಕಿಸಲು ಬಯಸುತ್ತೀರಿ? ನೀವು ಹಸಿವಿನಿಂದ ಸಾಯುವಿರಿ. ನಿಮ್ಮ ಬಳಿ ಏನಿದೆ? ಖನಿಜಗಳಿಲ್ಲ, ದೀರ್ಘಕಾಲಿಕ ನದಿಗಳಿಲ್ಲ. 10 ವರ್ಷಗಳ ಪೈಕಿ 7 ವರ್ಷ ಬರಗಾಲವೇ ಇರುತ್ತದೆ. ಗಣಿಗಳಿಲ್ಲ, ಕೈಗಾರಿಕೆಗಳಿಲ್ಲ, ಹೆಚ್ಚು ಕೃಷಿ ಇಲ್ಲ. ಒಂದು ಕಡೆ ರಾನ್ ಇದೆ, ಇನ್ನೊಂದು ಕಡೆ ಪಾಕಿಸ್ತಾನವಿದೆ - ನೀವು ಏನು ಮಾಡುತ್ತೀರಿ?" ಎಂದು ಅವರು ನಮ್ಮನ್ನು ಅಣಕಿಸಿದರು, "ಉಪ್ಪನ್ನು ಹೊರತುಪಡಿಸಿ, ನಿಮ್ಮಲ್ಲಿ ಏನೂ ಇಲ್ಲ." ಆದರೆ ಸ್ವಂತ ಕಾಲಿನ ಮೇಲೆ ನಿಲ್ಲುವ ಜವಾಬ್ದಾರಿ ಗುಜರಾತ್ ಮೇಲೆ ಬಿದ್ದಾಗ, ಗುಜರಾತ್ ಜನರು ಹಿಂದೆ ಸರಿಯಲಿಲ್ಲ. ಇಂದು, ಒಮ್ಮೆ ಗುಜರಾತ್‌ನಲ್ಲಿ ಏನಿದೆ ಎಂದು ಕೇಳಿದವರಿಗೆ - ನಮ್ಮಲ್ಲಿ ಒಂದೇ ಒಂದು ವಜ್ರದ ಗಣಿ ಇಲ್ಲದಿರಬಹುದು, ಆದರೆ ಪ್ರಪಂಚದ 10 ವಜ್ರಗಳಲ್ಲಿ 9 ವಜ್ರಗಳನ್ನು ಇಲ್ಲೇ ಗುಜರಾತ್‌ನಲ್ಲಿ ಸಂಸ್ಕರಿಸಿ ಹೊಳಪು ಮಾಡಲಾಗುತ್ತದೆ.

ಸ್ನೇಹಿತರೆ

ಕೆಲವು ತಿಂಗಳ ಹಿಂದೆ, ನಾನು ದಾಹೋದ್‌ಗೆ ಬಂದಿದ್ದೆ. ಅಲ್ಲಿನ ರೈಲ್ವೆ ಕಾರ್ಖಾನೆಯಲ್ಲಿ ಶಕ್ತಿಯುತ ವಿದ್ಯುತ್ ಲೋಕೋಮೋಟಿವ್ ಎಂಜಿನ್‌ಗಳನ್ನು ತಯಾರಿಸಲಾಗುತ್ತಿದೆ. ಇಂದು, ಗುಜರಾತ್‌ನಲ್ಲಿ ತಯಾರಾದ ಮೆಟ್ರೋ ಕೋಚ್‌ಗಳನ್ನು ಇತರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇದರ ಹೊರತಾಗಿ, ಅದು ಮೋಟಾರ್‌ಸೈಕಲ್‌ಗಳಾಗಲಿ ಅಥವಾ ಕಾರುಗಳಾಗಲಿ, ಗುಜರಾತ್ ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸುತ್ತಿದೆ. ಭಾರತ ಮತ್ತು ವಿಶ್ವಾದ್ಯಂತದ ದೊಡ್ಡ ಕಂಪನಿಗಳು ಇಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸುತ್ತಿವೆ. ಗುಜರಾತ್ ಈಗಾಗಲೇ ವಿಮಾನಗಳ ವಿವಿಧ ಭಾಗಗಳನ್ನು ತಯಾರಿಸುತ್ತಿದೆ ಮತ್ತು ಅವುಗಳನ್ನು ರಫ್ತು ಮಾಡುತ್ತಿದೆ. ಈಗ ಸಾರಿಗೆ ವಿಮಾನಗಳನ್ನು ತಯಾರಿಸುವ ಕೆಲಸವು ವಡೋದರಾದಲ್ಲಿಯೂ ಪ್ರಾರಂಭವಾಗಿದೆ. ವಿಮಾನಗಳನ್ನು ಇಲ್ಲಿ ಗುಜರಾತ್‌ನಲ್ಲಿಯೇ ತಯಾರಿಸಲಾಗುತ್ತಿದೆ - ಅದು ನಮಗೆ ಹೆಮ್ಮೆ ತರುವುದಿಲ್ಲವೇ? ಈಗ ಗುಜರಾತ್ ಕೂಡ ವಿದ್ಯುತ್ ವಾಹನ ತಯಾರಿಕೆಗೆ ಪ್ರಮುಖ ಕೇಂದ್ರವಾಗುತ್ತಿದೆ. ಆಗಸ್ಟ್ 26ರಂದು, ನಾನು ಹಂಸಲ್‌ಪುರಕ್ಕೆ ಹೋಗುತ್ತಿದ್ದೇನೆ, ಅಲ್ಲಿ ವಿದ್ಯುತ್ ವಾಹನ ತಯಾರಿಕೆಗೆ ಸಂಬಂಧಿಸಿದ ಒಂದು ದೊಡ್ಡ ಉಪಕ್ರಮ ಪ್ರಾರಂಭಿಸಲಾಗುತ್ತಿದೆ. ಇಂದು, ಎಲ್ಲಾ ಆಧುನಿಕ ಎಲೆಕ್ಟ್ರಾನಿಕ್ ಸಾಧನಗಳನ್ನು ಸೆಮಿಕಂಡಕ್ಟರ್ ಗಳಿಲ್ಲದೆ ತಯಾರಿಸಲು ಸಾಧ್ಯವಿಲ್ಲ. ಗುಜರಾತ್ ಈಗ ಸೆಮಿಕಂಡಕ್ಟರ್ ವಲಯದಲ್ಲಿಯೂ ದೊಡ್ಡ ಹೆಸರು ಮಾಡಲಿದೆ. ಜವಳಿ, ರತ್ನಾಭರಣಗಳು ಈಗಾಗಲೇ ಗುಜರಾತ್‌ನ ಹೆಗ್ಗುರುತಾಗಿವೆ. ಔಷಧಿಗಳು ಮತ್ತು ಲಸಿಕೆಗಳ ವಿಷಯಕ್ಕೆ ಬಂದರೆ, ಭಾರತದ ಒಟ್ಟು ಔಷಧ ಉತ್ಪನ್ನಗಳ ರಫ್ತಿನಲ್ಲಿ ಗುಜರಾತ್ ಸುಮಾರು ಮೂರನೇ ಒಂದು ಭಾಗವನ್ನು ಹೊಂದಿದೆ.

ಸ್ನೇಹಿತರೆ,

ಇಂದು ಸೌರ, ಪವನ ಮತ್ತು ಪರಮಾಣು ಇಂಧನ ಕ್ಷೇತ್ರಗಳಲ್ಲಿ ಭಾರತ ವೇಗವಾಗಿ ಮುನ್ನಡೆಯುತ್ತಿದೆ. ಈ ಪ್ರಗತಿಗೆ ಗುಜರಾತ್‌ನ ಕೊಡುಗೆ ಅತ್ಯಧಿಕವಾಗಿದೆ. ಇದೀಗ, ವಿಮಾನ ನಿಲ್ದಾಣದಿಂದ ಬರುವಾಗ, ಒಂದು ಭವ್ಯವಾದ ರೋಡ್‌ಶೋ ಇತ್ತು - ನಿಜಕ್ಕೂ ಗಮನಾರ್ಹವಾಗಿತ್ತು! ನೀವೆಲ್ಲರೂ ಅದ್ಭುತಗಳನ್ನು ಮಾಡಿದ್ದೀರಿ. ರೋಡ್‌ಶೋ ಸ್ವತಃ ಭವ್ಯವಾಗಿತ್ತು, ಜನರು ಛಾವಣಿಗಳ ಮೇಲೆ, ಬಾಲ್ಕನಿಗಳಲ್ಲಿ ನಿಂತಿದ್ದರು. ಸ್ವಾಭಾವಿಕವಾಗಿ, ನಾನು ಅವರನ್ನು ಗೌರವದಿಂದ ಸ್ವಾಗತಿಸಿದೆ, ಆದರೆ ನನ್ನ ಕಣ್ಣುಗಳು ಸುತ್ತಮುತ್ತಲ ಪ್ರದೇಶಗಳ ಮೇಲೆ ನೆಟ್ಟಾಗ, ಹೆಚ್ಚಿನ ಮನೆಗಳ ಛಾವಣಿಗಳ ಮೇಲೆ ಸೌರ ಮೇಲ್ಛಾವಣಿ ವಿದ್ಯುತ್ ಸ್ಥಾವರಗಳು ಇರುವುದನ್ನು ನಾನು ಗಮನಿಸಿದೆ. ಗುಜರಾತ್ ಹಸಿರು ಶಕ್ತಿ ಮತ್ತು ಪೆಟ್ರೋಕೆಮಿಕಲ್‌ಗಳ ಪ್ರಮುಖ ಕೇಂದ್ರವಾಗುತ್ತಿದೆ. ದೇಶದ ಪೆಟ್ರೋಕೆಮಿಕಲ್ ಅಗತ್ಯಗಳನ್ನು ಪೂರೈಸುವಲ್ಲಿ ಗುಜರಾತ್ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ಪ್ಲಾಸ್ಟಿಕ್ ಉದ್ಯಮ, ಸಿಂಥೆಟಿಕ್ ಫೈಬರ್, ರಸಗೊಬ್ಬರಗಳು, ಔಷಧಿಗಳು, ಬಣ್ಣ ಉದ್ಯಮ, ಸೌಂದರ್ಯವರ್ಧಕಗಳು - ಇವೆಲ್ಲವೂ ಹೆಚ್ಚಾಗಿ ಪೆಟ್ರೋಕೆಮಿಕಲ್ ವಲಯವನ್ನು ಅವಲಂಬಿಸಿವೆ. ಗುಜರಾತ್‌ನಲ್ಲಿ, ಹಳೆಯ ಕೈಗಾರಿಕೆಗಳು ವಿಸ್ತರಿಸುತ್ತಿವೆ. ನನಗೆ ಇನ್ನೂ ನೆನಪಿದೆ - ಜನರು ನಿರಂತರವಾಗಿ ದುಃಖ ಅನುಭವಿಸುತ್ತಿದ್ದ ಸಮಯವಿತ್ತು. 30 ವರ್ಷಗಳ ಹಿಂದಿನ ಪರಿಸ್ಥಿತಿಯನ್ನು ನೆನಪಿಸಿಕೊಳ್ಳುವವರಿಗೆ ಜನರು ಏನು ಕೂಗುತ್ತಿದ್ದರು ಎಂದು ತಿಳಿದಿದೆ: "ಗಿರಣಿಗಳು ಮುಚ್ಚಿವೆ, ಗಿರಣಿಗಳು ಮುಚ್ಚಿವೆ, ಗಿರಣಿಗಳು ಮುಚ್ಚಿವೆ." ಪ್ರತಿದಿನ, ಇದು ಒಂದೇ ಕಥೆಯಾಗಿತ್ತು. ಯಾವುದೇ ನಾಯಕರು ಬಂದಾಗಲೆಲ್ಲಾ, ಪತ್ರಕರ್ತರು ಒಂದೇ ಪ್ರಶ್ನೆಯನ್ನು ಕೇಳುತ್ತಿದ್ದರು: "ಗಿರಣಿಗಳು ಮುಚ್ಚಿವೆ, ನೀವು ಅದರ ಬಗ್ಗೆ ಏನು ಮಾಡುತ್ತೀರಿ?" ಆಗ, ಅದು ಕಾಂಗ್ರೆಸ್ ಪಕ್ಷದ ಅಡಿಯಲ್ಲಿತ್ತು. ಆದರೆ ಇಂದು, ಗಿರಣಿಗಳ ಸೈರನ್ ಗಳು ಮೌನವಾಗಿರಬಹುದು, ಆದರೆ ಗುಜರಾತ್‌ನ ಪ್ರತಿಯೊಂದು ಮೂಲೆಯಲ್ಲಿಯೂ ಅಭಿವೃದ್ಧಿಯ ಧ್ವಜವು ಎತ್ತರಕ್ಕೆ ಹಾರುತ್ತಿದೆ. ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದೆ, ಈ ಎಲ್ಲಾ ಪ್ರಯತ್ನಗಳು ಸ್ವಾವಲಂಬಿ ಭಾರತದ ದೃಷ್ಟಿಕೋನವನ್ನು ಬಲಪಡಿಸುತ್ತಿವೆ. ಇದರ ಪರಿಣಾಮವಾಗಿ, ಗುಜರಾತ್‌ನ ಯುವಕರಿಗೆ ನಿರಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತಿದೆ.

 

ಸ್ನೇಹಿತರೆ,

ಉದ್ಯಮ, ಕೃಷಿ ಅಥವಾ ಪ್ರವಾಸೋದ್ಯಮ ಯಾವುದೇ ಇರಲಿ, ಅತ್ಯುತ್ತಮ ಸಂಪರ್ಕ ಬಹಳ ಮುಖ್ಯ. ಕಳೆದ 20-25 ವರ್ಷಗಳಲ್ಲಿ ಗುಜರಾತ್‌ನ ಸಂಪರ್ಕವು ಸಂಪೂರ್ಣವಾಗಿ ಪರಿವರ್ತನೆಗೊಂಡಿದೆ. ಇಂದಿಗೂ ಸಹ, ಇಲ್ಲಿ ಅನೇಕ ರಸ್ತೆ ಮತ್ತು ರೈಲು ಯೋಜನೆಗಳನ್ನು ಉದ್ಘಾಟಿಸಲಾಗಿದೆ, ಶಂಕುಸ್ಥಾಪನೆ ನೆರವೇರಿಸಲಾಗಿದೆ. ವೃತ್ತಾಕಾರದ ರಸ್ತೆ, ಅಂದರೆ ಸರ್ದಾರ್ ಪಟೇಲ್ ವರ್ತುಲ ರಸ್ತೆಯನ್ನು ಈಗ ಮತ್ತಷ್ಟು ವಿಸ್ತಾರಗೊಳಿಸಲಾಗುತ್ತಿದೆ. ಇದು 6 ಪಥಗಳ ವಿಸ್ತಾರದ ರಸ್ತೆಯಾಗುತ್ತಿದೆ. ಇದು ನಗರದ ಅತ್ಯಂತ ಜನದಟ್ಟಣೆ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅದೇ ರೀತಿ, ವಿರಮ್‌ಗಮ್-ಖುದಾದ್-ರಾಂಪುರ ರಸ್ತೆಯ ವಿಸ್ತರಣೆಯು ಇಲ್ಲಿನ ರೈತರು ಮತ್ತು ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸುತ್ತದೆ. ಈ ಹೊಸ ಅಂಡರ್‌ಪಾಸ್‌ಗಳು ಮತ್ತು ರೈಲ್ವೆ ಓವರ್‌ಬ್ರಿಡ್ಜ್‌ಗಳು ನಗರದ ಸಂಪರ್ಕವನ್ನು ಮತ್ತಷ್ಟು ಸುಧಾರಿಸುತ್ತವೆ.

ಸ್ನೇಹಿತರೆ,

ಹಳೆಯ ಕೆಂಪು ಬಸ್‌ಗಳು ಮಾತ್ರ ಓಡುತ್ತಿದ್ದ ಕಾಲವಿತ್ತು. ಜನರು ಹೇಳುತ್ತಿದ್ದರು - ನೀವು ಎಲ್ಲಿಗೆ ಹೋಗಬೇಕೆಂದರೆ, ನೀವು "ಕೆಂಪು ಬಸ್‌ನಲ್ಲಿ ಹೋಗುತ್ತೀರಿ". ಆದರೆ ಇಂದು, ಬಿಆರ್‌ಟಿಎಸ್ 'ಜನ್‌ಮಾರ್ಗ್'(ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಕಾರಿಡಾರ್) ಮತ್ತು ಎಸಿ-ಎಲೆಕ್ಟ್ರಿಕ್ ಬಸ್‌ಗಳು ಹೊಸ ಸೌಲಭ್ಯಗಳನ್ನು ಒದಗಿಸುತ್ತಿವೆ. ಮೆಟ್ರೋ ರೈಲು ಕೂಡ ವೇಗವಾಗಿ ವಿಸ್ತರಿಸುತ್ತಿದೆ, ಇದು ಅಹಮದಾಬಾದ್ ಜನರಿಗೆ ಸರಾಗದ ಪ್ರಯಾಣ ಖಚಿತಪಡಿಸಿದೆ.

ಸ್ನೇಹಿತರೆ,

ಗುಜರಾತ್‌ನ ಪ್ರತಿಯೊಂದು ನಗರದ ಸುತ್ತಲೂ ದೊಡ್ಡ ಕೈಗಾರಿಕಾ ಕಾರಿಡಾರ್ ಇವೆ. ಆದರೆ 10 ವರ್ಷಗಳ ಹಿಂದಿನವರೆಗೂ, ಬಂದರುಗಳು ಮತ್ತು ಅಂತಹ ಕೈಗಾರಿಕಾ ಸಮೂಹಗಳ ನಡುವೆ ಉತ್ತಮ ರೈಲು ಸಂಪರ್ಕದ ಕೊರತೆಯಿತ್ತು. ನೀವು 2014ರಲ್ಲಿ ನನ್ನನ್ನು ದೆಹಲಿಗೆ ಕಳುಹಿಸಿದಾಗ, ಗುಜರಾತ್‌ನ ಈ ಸಮಸ್ಯೆಯನ್ನು ಪರಿಹರಿಸುವ ಕೆಲಸವನ್ನು ನಾನು ಪ್ರಾರಂಭಿಸಿದೆ. ಕಳೆದ 11 ವರ್ಷಗಳಲ್ಲಿ, ಗುಜರಾತ್‌ನಲ್ಲಿ ಸುಮಾರು 3,000 ಕಿಲೋಮೀಟರ್ ಹೊಸ ರೈಲ್ವೆ ಹಳಿಗಳನ್ನು ಹಾಕಲಾಗಿದೆ. ಗುಜರಾತ್‌ನ ಸಂಪೂರ್ಣ ರೈಲ್ವೆ ಜಾಲವು 100 ಪ್ರತಿಶತ ವಿದ್ಯುದ್ದೀಕರಣಗೊಂಡಿದೆ. ಇಂದು ಗುಜರಾತ್ ಪಡೆದಿರುವ ರೈಲ್ವೆ ಯೋಜನೆಗಳು ರೈತರು, ಕೈಗಾರಿಕೆಗಳು ಮತ್ತು ಯಾತ್ರಾರ್ಥಿಗಳಿಗೆ ಸಮಾನವಾಗಿ ಪ್ರಯೋಜನ ಒದಗಿಸುತ್ತಿದೆ.

ಸ್ನೇಹಿತರೆ,

ನಮ್ಮ ಸರ್ಕಾರ ನಗರಗಳಲ್ಲಿ ವಾಸಿಸುವ ಬಡವರಿಗೆ ಘನತೆಯ ಜೀವನ ನೀಡಲು ಬದ್ಧವಾಗಿದೆ. ಇದಕ್ಕೆ ನೇರ ಪುರಾವೆ ನಮ್ಮ ರಾಮಪಿರ್ ನೋ ಟೆಕ್ರೋ, ನಮ್ಮ ರಾಮಪಿರ್‌ನ ತಿಲಾ, ಇದನ್ನು ವಿಮಾನ ನಿಲ್ದಾಣಕ್ಕೆ ಹೋಗುವಾಗ ನೋಡಬಹುದು.  ಪೂಜ್ಯ ಬಾಪೂಜಿ ಯಾವಾಗಲೂ ಬಡವರ ಘನತೆಗೆ ಒತ್ತು ನೀಡಿದ್ದರು. ಇಂದು, ಸಬರಮತಿ ಆಶ್ರಮದ ಪ್ರವೇಶ ದ್ವಾರದಲ್ಲಿ ಬಡವರಿಗಾಗಿ ನಿರ್ಮಿಸಲಾದ ಹೊಸ ಮನೆಗಳು ಇದಕ್ಕೆ ಜೀವಂತ ಉದಾಹರಣೆಯಾಗಿದೆ. ಬಡವರಿಗೆ 1,500 ಪಕ್ಕಾ ಮನೆಗಳನ್ನು ನೀಡುವುದು ಎಂದರೆ ಲೆಕ್ಕವಿಲ್ಲದಷ್ಟು ಹೊಸ ಕನಸುಗಳಿಗೆ ಅಡಿಪಾಯ ಹಾಕಿದಂತೆ. ಈ ಮನೆಗಳಲ್ಲಿ ವಾಸಿಸುವವರ ಮುಖಗಳಲ್ಲಿ ಕಂಡುಬರುವ ಸಂತೋಷವು ಈ ನವರಾತ್ರಿ ಮತ್ತು ದೀಪಾವಳಿಯಲ್ಲಿ ಇನ್ನೂ ಹೆಚ್ಚಾಗಿರುತ್ತದೆ. ಇದರೊಂದಿಗೆ, ಪೂಜ್ಯ ಬಾಪೂಜಿ ಅವರಿಗೆ ನಿಜವಾದ ಗೌರವವಾಗಿ, ಬಾಪು ಅವರ ಸಬರಮತಿ ಆಶ್ರಮದ ನವೀಕರಣವೂ ನಡೆಯುತ್ತಿದೆ. ನಮ್ಮ ಇಬ್ಬರು ಮಹಾನ್ ವ್ಯಕ್ತಿಗಳು - ಸರ್ದಾರ್ ಸಾಹಿಬ್ ಅವರ ಭವ್ಯ ಪ್ರತಿಮೆ, ಏಕತೆಯ ಪ್ರತಿಮೆ, ನಾವು ಆ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ಆ ಸಮಯದಲ್ಲಿ, ನಾನು ಸಬರಮತಿ ಆಶ್ರಮದ ಕೆಲಸವನ್ನು ಕೈಗೆತ್ತಿಕೊಳ್ಳಲು ಬಯಸಿದ್ದೆ, ಆದರೆ ಆಗ ಕೇಂದ್ರ ಸರ್ಕಾರವು ನಮಗೆ ಬೆಂಬಲ ನೀಡಲಿಲ್ಲ. ಬಹುಶಃ, ಅವರು ಗಾಂಧೀಜಿ ಅವರ ಬೆಂಬಲಿಗರಾಗಿರಲಿಲ್ಲ. ಆ ಕಾರಣದಿಂದಾಗಿ, ನಾನು ಆ ಕೆಲಸವನ್ನು ಎಂದಿಗೂ ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಆದರೆ ನೀವು ನನ್ನನ್ನು ದೆಹಲಿಗೆ ಕಳುಹಿಸಿದಾಗಿನಿಂದ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ಭಾರತ ಮತ್ತು ಜಗತ್ತಿಗೆ ಸ್ಫೂರ್ತಿಯ ದೊಡ್ಡ ಕೇಂದ್ರವಾಗಿ ಮಾರ್ಪಟ್ಟಿದೆ, ಸಬರಮತಿ ಆಶ್ರಮದ ನವೀಕರಣ ಕಾರ್ಯ ಪೂರ್ಣಗೊಂಡಾಗ, ನನ್ನ ಮಾತುಗಳನ್ನು ಗಮನಿಸಿ ಸ್ನೇಹಿತರೆ, ನಮ್ಮ ಸಬರಮತಿ ಆಶ್ರಮವು ಇಡೀ ಜಗತ್ತಿನಲ್ಲಿ ಶಾಂತಿಗೆ ಸ್ಫೂರ್ತಿ ನೀಡುವ ಶ್ರೇಷ್ಠ ನೆಲೆಯಾಗಲಿದೆ.

 

ಸ್ನೇಹಿತರೆ,

ನಮ್ಮ ಕಾರ್ಮಿಕ ಕುಟುಂಬಗಳು ಉತ್ತಮ ಜೀವನ ಪಡೆಯುವುದೇ ನಮ್ಮ ಧ್ಯೇಯವಾಗಿದೆ. ಅದಕ್ಕಾಗಿಯೇ, ಹಲವು ವರ್ಷಗಳ ಹಿಂದೆಯೇ ಗುಜರಾತಿನ ಕೊಳೆಗೇರಿಗಳಲ್ಲಿ ವಾಸಿಸುವವರಿಗೆ ಪಕ್ಕಾ ಗೇಟೆಡ್ ಸೊಸೈಟಿಗಳನ್ನು ನಿರ್ಮಿಸಲು ನಾವು ಉಪಕ್ರಮ ತೆಗೆದುಕೊಂಡಿದ್ದೇವೆ. ಕಳೆದ ವರ್ಷಗಳಲ್ಲಿ, ಗುಜರಾತಿನಲ್ಲಿ ಕೊಳೆಗೇರಿಗಳ ಬದಲಿಗೆ ಮನೆಗಳನ್ನು ನಿರ್ಮಿಸಲಾದ ಅನೇಕ ಯೋಜನೆಗಳು ಪೂರ್ಣಗೊಂಡಿವೆ, ಈ ಅಭಿಯಾನವು ನಿರಂತರವಾಗಿ ನಡೆಯುತ್ತಿದೆ.

ಸ್ನೇಹಿತರೆ,

ಯಾರೂ ಕಾಳಜಿ ವಹಿಸದ ಜನರಿಗೆ ಮೋದಿ ಗೌರವ ನೀಡುತ್ತಾರೆ. ನಾನು ಈ ಬಾರಿ ಕೆಂಪುಕೋಟೆಯಿಂದ ಹೇಳಿದ್ದೆ - ಹಿಂದುಳಿದವರಿಗೆ ಆದ್ಯತೆ ನೀಡುವುದು ಮತ್ತು ನಗರ ಬಡವರ ಜೀವನವನ್ನು ಸುಲಭಗೊಳಿಸುವುದು ಸಹ ನಮ್ಮ ದೊಡ್ಡ ಆದ್ಯತೆಯಾಗಿದೆ. ಬೀದಿ ವ್ಯಾಪಾರಿಗಳನ್ನು ಸಹ ಈ ಹಿಂದೆ ಯಾರೂ ನೋಡಿಕೊಳ್ಳಲಿಲ್ಲ. ನಮ್ಮ ಸರ್ಕಾರ ಅವರಿಗಾಗಿ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಪ್ರಾರಂಭಿಸಿತು. ಇಂದು, ಈ ಯೋಜನೆಯ ಕಾರಣದಿಂದಾಗಿ, ದೇಶಾದ್ಯಂತ ಸುಮಾರು 70 ಲಕ್ಷ ಬೀದಿ ವ್ಯಾಪಾರಿಗಳು ಬ್ಯಾಂಕುಗಳಿಂದ ಸಾಲ ಪಡೆಯಲು ಸಮರ್ಥರಾಗಿದ್ದಾರೆ. ಇದು ಗುಜರಾತ್‌ನಲ್ಲಿ ಲಕ್ಷಾಂತರ ಜನರಿಗೆ ಪ್ರಯೋಜನ ನೀಡಿದೆ.

ಸ್ನೇಹಿತರೆ,

ಕಳೆದ 11 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಜಗತ್ತಿಗೆ, ಇದು ಒಂದು ಅದ್ಭುತ - 25 ಕೋಟಿ ಜನರು ಬಡತನದಿಂದ ಹೊರಬರುತ್ತಿದ್ದಾರೆ ಎಂಬ ದೊಡ್ಡ ಅಂಕಿಅಂಶ. ವಿಶ್ವಾದ್ಯಂತದ ಎಲ್ಲಾ ಆರ್ಥಿಕತೆಗಳು ಇಂದು ಇದರ ಬಗ್ಗೆ ಚರ್ಚಿಸುತ್ತಿವೆ.

ಸ್ನೇಹಿತರೆ,

ಒಬ್ಬ ಬಡ ವ್ಯಕ್ತಿ ಬಡತನದಿಂದ ಹೊರಬಂದಾಗ, ಅವನು ನವ ಮಧ್ಯಮ ವರ್ಗದ ರೂಪದಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮುತ್ತಾನೆ. ಇಂದು ಈ ನವ ಮಧ್ಯಮ ವರ್ಗ ಮತ್ತು ನಮ್ಮ ಸಾಂಪ್ರದಾಯಿಕ ಮಧ್ಯಮ ವರ್ಗ ಒಟ್ಟಾಗಿ ದೇಶದ ದೊಡ್ಡ ಶಕ್ತಿಯಾಗುತ್ತಿವೆ. ನವ ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗ ಎರಡನ್ನೂ ಸಬಲೀಕರಣಗೊಳಿಸುವುದು ನಮ್ಮ ನಿರಂತರ ಪ್ರಯತ್ನವಾಗಿದೆ. ಅಹಮದಾಬಾದ್‌ನಲ್ಲಿರುವ ನಮ್ಮ ಸಹೋದರರಿಗೆ, ಒಳ್ಳೆಯ ಸುದ್ದಿ ಇದೆ - ಬಜೆಟ್‌ನಲ್ಲಿ 12 ಲಕ್ಷ ರೂಪಾಯಿ ತನಕದ ಆದಾಯಕ್ಕೆ ವರಮಾನ ತೆರಿಗೆ ವಿನಾಯಿತಿ ಘೋಷಿಸಿದ ದಿನ, ವಿರೋಧ ಪಕ್ಷಗಳಿಗೆ ಇದು ಹೇಗೆ ಸಾಧ್ಯ ಎಂದು ಅರ್ಥವಾಗಲಿಲ್ಲ.

ಸ್ನೇಹಿತರೆ,

ಸಿದ್ಧರಾಗಿ - ನಮ್ಮ ಸರ್ಕಾರವು ಜಿಎಸ್‌ಟಿಯಲ್ಲೂ ಸುಧಾರಣೆಗಳನ್ನು ತರುತ್ತಿದೆ, ಈ ದೀಪಾವಳಿಗೆ ಮೊದಲು ನಿಮಗಾಗಿ ಒಂದು ದೊಡ್ಡ ಉಡುಗೊರೆ ಸಿದ್ಧಪಡಿಸಲಾಗುತ್ತಿದೆ. ಜಿಎಸ್‌ಟಿ ಸುಧಾರಣೆಯಿಂದಾಗಿ, ನಮ್ಮ ಸಣ್ಣ ಉದ್ಯಮಶೀಲರು ಪ್ರಯೋಜನ ಪಡೆಯುತ್ತಾರೆ, ಅನೇಕ ವಸ್ತುಗಳ ಮೇಲಿನ ತೆರಿಗೆಯೂ ಕಡಿಮೆಯಾಗುತ್ತದೆ. ಅದು ವ್ಯಾಪಾರ ಸಮುದಾಯವಾಗಲಿ ಅಥವಾ ನಮ್ಮ ಕುಟುಂಬಗಳಾಗಲಿ, ಪ್ರತಿಯೊಬ್ಬರೂ ಈ ದೀಪಾವಳಿಯಲ್ಲಿ ಸಂತೋಷದ ಡಬಲ್ ಬೋನಸ್ ಪಡೆಯಲಿದ್ದಾರೆ.

ಸ್ನೇಹಿತರೆ,

ಈಗಷ್ಟೇ ನಾನು ಪಿಎಂ ಸೂರ್ಯ ಘರ್ ಉಪಕ್ರಮದ ಬಗ್ಗೆ ಮಾತನಾಡುತ್ತಿದ್ದೆ. ಈಗ, ಪ್ರಧಾನ ಮಂತ್ರಿ ಸೂರ್ಯ ಘರ್: ಮಫ್ತ್ ಬಿಜ್ಲಿ ಯೋಜನೆಯ ಮೂಲಕ, ನಾವು ವಿದ್ಯುತ್ ಬಿಲ್‌ಗಳನ್ನು ಶೂನ್ಯಕ್ಕೆ ತರುತ್ತಿದ್ದೇವೆ. ಗುಜರಾತ್ ಒಂದರಲ್ಲೇ, ಸುಮಾರು 6 ಲಕ್ಷ ಕುಟುಂಬಗಳು ಇಲ್ಲಿಯವರೆಗೆ ಈ ಯೋಜನೆಗೆ ಸೇರಿವೆ. ಗುಜರಾತ್‌ನಲ್ಲಿಯೇ ಈ ಕುಟುಂಬಗಳಿಗೆ ಸರ್ಕಾರ 3 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಒದಗಿಸಿದೆ. ಇದರ ಪರಿಣಾಮವಾಗಿ, ಅವರು ಈಗ ಪ್ರತಿ ತಿಂಗಳು ತಮ್ಮ ವಿದ್ಯುತ್ ಬಿಲ್‌ಗಳಲ್ಲಿ ಗಣನೀಯ ಮೊತ್ತವನ್ನು ಉಳಿಸುತ್ತಿದ್ದಾರೆ.

 

ಸ್ನೇಹಿತರೆ,

ಇಂದು ಅಹಮದಾಬಾದ್ ನಗರವು ಕನಸುಗಳು ಮತ್ತು ಸಂಕಲ್ಪಗಳ ನಗರವಾಗುತ್ತಿದೆ. ಆದರೆ ಒಂದು ಕಾಲದಲ್ಲಿ ಜನರು ಅಹಮದಾಬಾದ್ ಅನ್ನು 'ಗರ್ದಾಬಾದ್' ಎಂದು ಕರೆದು ಅಪಹಾಸ್ಯ ಮಾಡುತ್ತಿದ್ದರು. ಎಲ್ಲೆಡೆ ಧೂಳು ಮತ್ತು ಕೊಳಕು ಹಾರುತ್ತಿದೆ, ಕಸದ ರಾಶಿಗಳು - ಅದು ನಗರದ ದುರದೃಷ್ಟಕರವಾಗಿ ಮಾರ್ಪಟ್ಟಿತ್ತು. ಇಂದು, ಸ್ವಚ್ಛತೆಯ ವಿಷಯದಲ್ಲಿ, ಅಹಮದಾಬಾದ್ ದೇಶದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಇದು ಅಹಮದಾಬಾದ್‌ನ ಪ್ರತಿಯೊಬ್ಬ ನಾಗರಿಕರ ಸಹಕಾರದಿಂದ ಮಾತ್ರ ಸಾಧ್ಯವಾಗಿದೆ.

ಆದರೆ ಸ್ನೇಹಿತರೆ,

ಈ ಸ್ವಚ್ಛತೆ, ಈ 'ಸ್ವಚ್ಛತಾ' ಅಭಿಯಾನವು ಕೇವಲ ಒಂದು ದಿನಕ್ಕೆ ಸೀಮಿತವಾಗಿಲ್ಲ. ಇದು ಪೀಳಿಗೆಯಿಂದ ಪೀಳಿಗೆಗೆ, ಪ್ರತಿದಿನ ಮಾಡಬೇಕಾದ ಕೆಲಸ. ಸ್ವಚ್ಛತೆಯನ್ನು ಅಭ್ಯಾಸ ಮಾಡಿಕೊಳ್ಳಿ, ಆಗ ಮಾತ್ರ ನಾವು ಬಯಸಿದ ಫಲಿತಾಂಶಗಳನ್ನು ಸಾಧಿಸುತ್ತೇವೆ.

ಸ್ನೇಹಿತರೆ,

ನಮ್ಮ ಸಬರಮತಿ ನದಿ ಮೊದಲು ಹೇಗಿತ್ತು? ಅದು ಬತ್ತಿದ ಚರಂಡಿಯಂತಿತ್ತು, ಅದರಲ್ಲಿ ಸರ್ಕಸ್‌ಗಳು ನಡೆಯುತ್ತಿದ್ದವು, ಮಕ್ಕಳು ಅಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ಪರಿಸ್ಥಿತಿಯನ್ನು ಬದಲಾಯಿಸಲು ಅಹಮದಾಬಾದ್‌ನ ಜನರು ಸಂಕಲ್ಪ ಮಾಡಿದರು. ಈಗ, ಸಬರಮತಿ ನದಿ ದಂಡೆ ಈ ನಗರಕ್ಕೆ ಹೆಮ್ಮೆ ತರುತ್ತಿದೆ.

ಸ್ನೇಹಿತರೆ,

ಕಂಕಾರಿಯಾ ಸರೋವರದ ನೀರು ಕೂಡ ಹಸಿರಿನಿಂದ ಕೂಡಿ, ಕಳೆಗಳಿಂದಾಗಿ ದುರ್ವಾಸನೆ ಬೀರುತ್ತಿತ್ತು. ಅದರ ಸುತ್ತಲೂ ನಡೆಯುವುದೇ ಕಷ್ಟಕರವಾಗಿತ್ತು, ಅದು ಸಮಾಜವಿರೋಧಿ ಶಕ್ತಿಗಳಿಗೆ ನೆಚ್ಚಿನ ಸ್ಥಳವಾಗಿತ್ತು - ಯಾರೂ ಅಲ್ಲಿಗೆ ಹೋಗಲು ಧೈರ್ಯ ಮಾಡುತ್ತಿರಲಿಲ್ಲ. ಇಂದು ಇದು ಭೇಟಿ ನೀಡಬಹುದಾದ ಉತ್ತಮ ಸ್ಥಳಗಳಲ್ಲಿ ಒಂದಾಗಿದೆ. ಅದು ಸರೋವರದಲ್ಲಿ ದೋಣಿ ವಿಹಾರವಾಗಲಿ ಅಥವಾ ಕಿಡ್ಸ್ ಸಿಟಿಯಲ್ಲಿ ಮಕ್ಕಳಿಗೆ ವಿನೋದ ಮತ್ತು ಕಲಿಕೆಯಾಗಲಿ, ಇದೆಲ್ಲವೂ ಅಹಮದಾಬಾದ್‌ನ ಬದಲಾಗುತ್ತಿರುವ ಚಿತ್ರದ ಭಾಗವಾಗಿದೆ. ಕಂಕಾರಿಯಾ ಕಾರ್ನಿವಲ್ - ಇದು ಅಹಮದಾಬಾದ್‌ನ ದೊಡ್ಡ ಆಕರ್ಷಣೆಯಾಗಿ ಮಾರ್ಪಟ್ಟಿದೆ, ನಗರಕ್ಕೆ ಹೊಸ ಗುರುತು ನೀಡುತ್ತದೆ.

ಸ್ನೇಹಿತರೆ,

ಅಹಮದಾಬಾದ್ ಇಂದು ಪ್ರವಾಸೋದ್ಯಮದ ಆಕರ್ಷಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಅಹಮದಾಬಾದ್ ಯುನೆಸ್ಕೊ ವಿಶ್ವ ಪರಂಪರೆಯ ನಗರವಾಗಿದೆ. ಅದು ಹಳೆಯ ನಗರದ ದ್ವಾರಗಳಾಗಲಿ, ಸಬರಮತಿ ಆಶ್ರಮವಾಗಲಿ ಅಥವಾ ಇಲ್ಲಿನ ಪರಂಪರೆಯ ತಾಣಗಳಾಗಲಿ, ನಮ್ಮ ನಗರವು ಇಂದು ವಿಶ್ವ ಭೂಪಟದಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತದೆ. ಈಗ, ಹೊಸ ಮತ್ತು ಆಧುನಿಕ ರೀತಿಯ ಪ್ರವಾಸೋದ್ಯಮವೂ ಇಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ನಾವು ಮೊದಲು ಪ್ರವಾಸೋದ್ಯಮದ ಬಗ್ಗೆ ಮಾತನಾಡುತ್ತಿದ್ದಾಗ, ಅಹಮದಾಬಾದ್ ಅಥವಾ ಗುಜರಾತ್‌ಗೆ ದಸಾದಾ ಕಚೇರಿ ದಾಖಲೆ(ಗುಜರಾತ್ ಸರ್ಕಾರದ ಅಧಿಕೃತ ವೆಬ್ ಸೈಟ್)ಗಳಲ್ಲಿ ಉಲ್ಲೇಖವಿರಲಿಲ್ಲ. ಆ ದಿನಗಳಲ್ಲಿ, ಪ್ರವಾಸೋದ್ಯಮದ ವಿಷಯಕ್ಕೆ ಬಂದಾಗ, ಗುಜರಾತ್‌ನ ಜನರು, "ಅಬುಗೆ ಹೋಗೋಣ" ಎಂದು ಹೇಳುತ್ತಿದ್ದರು ಮತ್ತು ದಕ್ಷಿಣ ಗುಜರಾತ್‌ನ ಜನರು ಡಿಯು ಮತ್ತು ದಮನ್‌ಗೆ ಹೋಗುತ್ತಿದ್ದರು. ಅವೇ ನಮ್ಮ ಇಡೀ ಪ್ರಪಂಚವಾಗಿತ್ತು. ಧಾರ್ಮಿಕ ಒಲವು ಹೊಂದಿರುವ ಪ್ರಯಾಣಿಕರು ಸೋಮನಾಥ, ದ್ವಾರಕ ಅಥವಾ ಅಂಬಾಜಿಗೆ ಭೇಟಿ ನೀಡುತ್ತಿದ್ದರು - ಅಂತಹ 4  ಅಥವಾ 5 ಸ್ಥಳಗಳು ಮಾತ್ರ. ಆದರೆ ಇಂದು, ಗುಜರಾತ್ ಪ್ರವಾಸೋದ್ಯಮಕ್ಕೆ ಪ್ರಮುಖ ತಾಣವಾಗಿದೆ. ಕಚ್‌ನ ರಣ್‌ನಲ್ಲಿ, ವೈಟ್ ರಣ್ ವೀಕ್ಷಿಸಲು ಇಡೀ ಜಗತ್ತೇ ಒಲವು ತೋರುತ್ತಿದೆ. ಜನರು ಏಕತೆಯ ಪ್ರತಿಮೆ ನೋಡಲು ಬಯಸುತ್ತಿದ್ದಾರೆ, ಅವರು ಬೆಟ್ ದ್ವಾರಕದಲ್ಲಿರುವ ಸೇತುವೆ ನೋಡಲು ಬರುತ್ತಾರೆ ಮತ್ತು ಅದನ್ನು ದಾಟಲು ತಮ್ಮ ವಾಹನಗಳಿಂದ ಇಳಿದು ನಡೆಯುತ್ತಾರೆ. ನನ್ನ ಸ್ನೇಹಿತರೆ, ನೀವು ನಿರ್ಧಾರ ತೆಗೆದುಕೊಂಡ ನಂತರ ಫಲಿತಾಂಶಗಳು ಬರುತ್ತವೆ. ಇಂದು, ಅಹಮದಾಬಾದ್ ಸಂಗೀತ ಕಚೇರಿಗಳ ಆರ್ಥಿಕತೆಯ ಪ್ರಮುಖ ಕೇಂದ್ರವಾಗುತ್ತಿದೆ. ಕೆಲವು ತಿಂಗಳ ಹಿಂದೆ, ಇಲ್ಲಿ ನಡೆದ ಕೋಲ್ಡ್‌ಪ್ಲೇ ಸಂಗೀತ ಕಚೇರಿಯ ಬಗ್ಗೆ ಇಡೀ ವಿಶ್ವವೇ ಮಾತನಾಡಿತು. ಒಂದು ಲಕ್ಷ ಜನರ ಆಸನ ಸಾಮರ್ಥ್ಯದೊಂದಿಗೆ, ಅಹಮದಾಬಾದ್‌ನ ಕ್ರೀಡಾಂಗಣವು ಸಹ ಆಕರ್ಷಣೆಯ ಕೇಂದ್ರವಾಗಿದೆ. ಅಹಮದಾಬಾದ್ ಭವ್ಯ ಸಂಗೀತ ಕಚೇರಿಗಳು ಮತ್ತು ಪ್ರಮುಖ ಕ್ರೀಡಾಕೂಟಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಇದು ತೋರಿಸುತ್ತದೆ.

 

ಸ್ನೇಹಿತರೆ,

ಆರಂಭದಲ್ಲಿ ನಾನು ಹಬ್ಬಗಳ ಬಗ್ಗೆ ಮಾತನಾಡಿದ್ದೆ. ಇದು ಹಬ್ಬಗಳ ಕಾಲ - ನವರಾತ್ರಿ, ವಿಜಯದಶಮಿ, ಧನ್ ತೇರಸ್, ದೀಪಾವಳಿ, ಎಲ್ಲವೂ ಬರುತ್ತಿವೆ. ಇವು ನಮ್ಮ ಸಂಸ್ಕೃತಿಯ ಹಬ್ಬಗಳು, ಆದರೆ ಅವು 'ಆತ್ಮನಿರ್ಭರ'(ಸ್ವಾವಲಂಬನೆ)  ಹಬ್ಬಗಳಾಗಬೇಕು. ಆದ್ದರಿಂದ, ನಾನು ಮತ್ತೊಮ್ಮೆ ನಿಮಗೆ ನನ್ನ ಮನವಿ ಪುನರಾವರ್ತಿಸಲು ಬಯಸುತ್ತೇನೆ. ಪೂಜ್ಯ ಬಾಪೂಜಿ ಅವರ ಪುಣ್ಯಭೂಮಿಯಿಂದ, ನಾನು ಭಾರತದ ನನ್ನ ನಾಗರಿಕರಿಗೂ ಮನವಿ ಮಾಡುತ್ತಿದ್ದೇನೆ. ನಾವು ನಮ್ಮ ಜೀವನದಲ್ಲಿ ಒಂದು ಮಂತ್ರವನ್ನು ಅಳವಡಿಸಿಕೊಳ್ಳಬೇಕು - ನಾವು ಏನೇ ಖರೀದಿಸಿದರೂ ಅದು ಭಾರತದಲ್ಲಿ ತಯಾರಾಗಾಬೇಕು, ಅದು ಸ್ವದೇಶಿಯಾಗಿರಬೇಕು.  ಮನೆ ಅಲಂಕಾರಕ್ಕಾಗಿ, ನೀವು ಭಾರತದಲ್ಲಿ ತಯಾರಿಸಿದ ವಸ್ತುಗಳನ್ನು ಖರೀದಿಸಬೇಕು. ಸ್ನೇಹಿತರಿಗೆ ಉಡುಗೊರೆಗಳಿಗಾಗಿ, ಭಾರತದ ಜನರಿಂದ ಭಾರತದಲ್ಲಿ ತಯಾರಿಸಿದವುಗಳನ್ನು ಮಾತ್ರ ಆರಿಸಬೇಕು. ನಾನು ವಿಶೇಷವಾಗಿ ಅಂಗಡಿಯವರು ಮತ್ತು ವ್ಯಾಪಾರಿಗಳಿಗೆ ಇದನ್ನು ಹೇಳಲು ಬಯಸುತ್ತೇನೆ - ಈ ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯಲು ನೀವು ಹೆಚ್ಚಿನ ಕೊಡುಗೆ ನೀಡಬಹುದು. ನೀವು ವಿದೇಶಿ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ ಎಂದು ದೃಢವಾಗಿ ನಿರ್ಧರಿಸಿ, "ಇಲ್ಲಿ ಸ್ವದೇಶಿ ಮಾತ್ರ ಮಾರಾಟವಾಗುತ್ತದೆ" ಎಂದು ಹೆಮ್ಮೆಯಿಂದ ಹೇಳುವ ಫಲಕವನ್ನು ಹಾಕಿ. ನಮ್ಮ ಈ ಸಣ್ಣ ಪ್ರಯತ್ನಗಳಿಂದ, ಈ ಹಬ್ಬಗಳು ಭಾರತದ ಸಮೃದ್ಧಿಯ ಭವ್ಯ ಆಚರಣೆಗಳಾಗಿ ಬದಲಾಗುತ್ತವೆ.

ಸ್ನೇಹಿತರೆ,

ಆರಂಭದಲ್ಲಿ ಹಲವು ಬಾರಿ ಜನರು ನಿರಾಶೆಗೆ ಒಗ್ಗಿಕೊಂಡಿದ್ದಿರಬಹುದು. ನಾನು ಮೊದಲು ನದಿ ದಂಡೆಯ ಬಗ್ಗೆ ಮಾತನಾಡಿದಾಗ, ಎಲ್ಲರೂ ಅದಕ್ಕೆ ನಕ್ಕರು ಎಂಬುದು ನನಗೆ ನೆನಪಿದೆ. "ನದಿ ದಂಡೆ ಬಂದಿದೆಯೋ ಇಲ್ಲವೋ?" ನಾನು ಏಕತಾ ಪ್ರತಿಮೆಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದಾಗ, ಎಲ್ಲರೂ ನನ್ನನ್ನು ಅಪಹಾಸ್ಯ ಮಾಡುತ್ತಾ, "ಚುನಾವಣೆಗಳು ಬರುತ್ತಿವೆ, ಅದಕ್ಕಾಗಿಯೇ ಮೋದಿ ಜಿ ಇದನ್ನು ಪ್ರಸ್ತಾಪಿಸುತ್ತಿದ್ದಾರೆ" ಎಂದು ಹೇಳಿದರು. ಆದರೆ ಹೇಳಿ, ಏಕತಾ ಪ್ರತಿಮೆಯನ್ನು ನಿರ್ಮಿಸಲಾಗಿದೆಯೇ ಅಥವಾ ಇಲ್ಲವೇ? ಇಂದು, ಜಗತ್ತು ಅದನ್ನು ಆಶ್ಚರ್ಯದಿಂದ ನೋಡುತ್ತದೆಯೇ ಅಥವಾ ಇಲ್ಲವೇ? ನಾನು ಕಚ್‌ನಲ್ಲಿ ರಣ್ ಉತ್ಸವದ ಬಗ್ಗೆ ಮಾತನಾಡಿದಾಗ, ಜನರು, "ಯಾರು ಕಚ್‌ಗೆ ಹೋಗುತ್ತಾರೆ? ರಣ್ ಗೆ ಯಾರು ಹೋಗುತ್ತಾರೆ?" ಎಂದು ಕೇಳಿದರು. ಆದರೆ ಇಂದು, ಉದ್ದನೆಯ ಸರತಿ ಸಾಲುಗಳಿವೆ. ಜನರು 6 ತಿಂಗಳ ಮುಂಚಿತವಾಗಿ ತಮ್ಮ ಪ್ರವಾಸಗಳನ್ನು ಬುಕ್ ಮಾಡುತ್ತಾರೆ. ಅದು ಸಂಭವಿಸಿದೆಯೋ ಇಲ್ಲವೋ? ಗುಜರಾತ್‌ನಲ್ಲಿ ವಿಮಾನ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುತ್ತಿದೆ - ಯಾರಾದರೂ ಅದನ್ನು ಊಹಿಸಿರಬಹುದೇ? ನಾನು ಮೊದಲು ಗಿಫ್ಟ್ ಸಿಟಿಯನ್ನು ದೃಶ್ಯೀಕರಿಸಿದಾಗ, ಬಹುತೇಕ ಎಲ್ಲರೂ ಅದನ್ನು ಗೇಲಿ ಮಾಡುತ್ತಿದ್ದರು - ಅಂತಹ ವಿಷಯ ಹೇಗೆ ಸಂಭವಿಸಬಹುದು, ಅಂತಹ ಕಟ್ಟಡಗಳನ್ನು ಹೇಗೆ ನಿರ್ಮಿಸಬಹುದು ಎಂದು ಕೇಳುತ್ತಿದ್ದರು. ಆದರೆ ಇಂದು, ಗಿಫ್ಟ್ ಸಿಟಿ ಭಾರತದ ಹೆಮ್ಮೆಯ ಅಧ್ಯಾಯಗಳಲ್ಲಿ ಒಂದನ್ನು ಬರೆಯುತ್ತಿದೆ. ನಾನು ಇದನ್ನೆಲ್ಲಾ ನಿಮಗೆ ನೆನಪಿಸುತ್ತಿದ್ದೇನೆ, ಏಕೆಂದರೆ ನೀವು ಈ ರಾಷ್ಟ್ರದ ಸಾಮರ್ಥ್ಯವನ್ನು ಎಚ್ಚರಿಕೆಯಿಂದ ನೋಡಬೇಕೆಂದು ನಾನು ಬಯಸುತ್ತೇನೆ. ನೀವು ಅದನ್ನು ಗೌರವಿಸಿದರೆ, ನೀವು ಅದಕ್ಕೆ ನಿಮ್ಮನ್ನು ಅರ್ಪಿಸಿಕೊಂಡರೆ, ಭಾರತದ ಜನರು ನಿಮ್ಮ ಸಂಕಲ್ಪವನ್ನು ಎಂದಿಗೂ ವಿಫಲಗೊಳಿಸಲು ಬಿಡುವುದಿಲ್ಲ. ಈ ದೇಶದ ಜನರು ತಮ್ಮ ಬೆವರು ಮತ್ತು ರಕ್ತವನ್ನು ನೀಡುತ್ತಾರೆ. ಹಲವಾರು ಭಯೋತ್ಪಾದಕ ದಾಳಿಗಳ ನಂತರ, ಶತ್ರುಗಳಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ನಂಬಲಾಗಿದ್ದ ಕಾಲವಿತ್ತು. ಆದರೆ ಭಾರತವು ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಿ ಅವರ ಲಾಂಚ್ ಪ್ಯಾಡ್‌ಗಳನ್ನು ನಾಶಪಡಿಸಿತು. ಭಾರತವು ವಾಯುದಾಳಿಗಳನ್ನು ನಡೆಸಿ ಅವರ ತರಬೇತಿ ಕೇಂದ್ರಗಳನ್ನು ಸ್ಫೋಟಿಸಿತು. ಭಾರತವು ಆಪರೇಷನ್ ಸಿಂದೂರ್ ನಡೆಸಿ ಅವರ ಅಡಗುತಾಣಗಳನ್ನು ಹೊಡೆದುರುಳಿಸಿತು. ಭಾರತದ ಚಂದ್ರಯಾನವು ಶಿವಶಕ್ತಿ ಕೇಂದ್ರದಲ್ಲಿ ಇಳಿಯಿತು, ಅಲ್ಲಿಗೆ ಯಾರೂ ಹೋಗಿರಲಿಲ್ಲ, ಆದರೆ ಅಲ್ಲಿ ನಮ್ಮ ತ್ರಿವರ್ಣ ಧ್ವಜ ಹಾರಿತು. ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೋದರು. ಈಗ ಗಗನ ಯಾನಕ್ಕೆ  ಸಿದ್ಧತೆಗಳು ನಡೆಯುತ್ತಿವೆ. ನಮ್ಮದೇ ಆದ ಬಾಹ್ಯಾಕಾಶ ಕೇಂದ್ರ ನಿರ್ಮಿಸುವ ಕೆಲಸವೂ ನಡೆಯುತ್ತಿದೆ. ಸ್ನೇಹಿತರೆ, ಈ ಪ್ರತಿಯೊಂದು ಘಟನೆಗಳು ನಾವು ನಂಬಿಕೆಯಿಂದ, ಸಮರ್ಪಣೆಯಿಂದ, ದೇವರ ರೂಪವಾದ ಜನರ ಆಶೀರ್ವಾದ ಮತ್ತು ಬೆಂಬಲದೊಂದಿಗೆ ಸಂಕಲ್ಪ ಮಾಡಿದರೆ ನಾವು ಯಶಸ್ಸನ್ನು ಸಾಧಿಸುತ್ತೇವೆ ಎಂಬುದನ್ನು ಸಾಬೀತುಪಡಿಸುತ್ತದೆ. ಅದೇ ವಿಶ್ವಾಸದಿಂದ ನಾನು ಹೇಳುತ್ತೇನೆ, ಈ ರಾಷ್ಟ್ರವು ಸ್ವಾವಲಂಬಿಯಾಗುತ್ತದೆ. ಈ ದೇಶದ ಪ್ರತಿಯೊಬ್ಬ ನಾಗರಿಕನು "ವೋಕಲ್ ಫಾರ್ ಲೋಕಲ್"ಗೆ ವಾಹಕನಾಗುತ್ತಾನೆ. ಪ್ರತಿಯೊಬ್ಬ ನಾಗರಿಕನು ಸ್ವದೇಶಿ ಮಂತ್ರದ ಮೂಲಕ ಬದುಕುತ್ತಾನೆ. ತದನಂತರ, ನಾವು ಎಂದಿಗೂ ಇತರರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಿಸುವುದಿಲ್ಲ.

ಸ್ನೇಹಿತರೆ,

ಕೋವಿಡ್ ಪರಿಸ್ಥಿತಿ ಇದ್ದಾಗ, ಮೊದಲು ಜಗತ್ತಿನಲ್ಲಿ ಎಲ್ಲೋ ತಯಾರಿಸಿದ ಲಸಿಕೆ ನಮ್ಮ ದೇಶವನ್ನು ತಲುಪಲು 30-40 ವರ್ಷಗಳು ಬೇಕಾಗುತ್ತಿತ್ತು. ಕೋವಿಡ್ ಸಮಯದಲ್ಲಿ ಏನಾಗುತ್ತದೆ ಎಂದು ಜನರು ಅನುಮಾನಿಸುತ್ತಿದ್ದರು. ಆದರೆ ಈ ದೇಶವೇ ನಿರ್ಧರಿಸಿತು, ತನ್ನದೇ ಆದ ಲಸಿಕೆ ತಯಾರಿಸಿತು, ಅದನ್ನು 140 ಕೋಟಿ ನಾಗರಿಕರಿಗೆ ತಲುಪಿಸಿತು. ಇದು ನಮ್ಮ ದೇಶದ ಶಕ್ತಿ. ಆ ಶಕ್ತಿಯ ಮೇಲಿನ ನಂಬಿಕೆಯೊಂದಿಗೆ, ಗುಜರಾತ್‌ನ ನನ್ನ ಸ್ನೇಹಿತರಿಗೆ ನಾನು ಹೇಳಬಯಸುತ್ತೇನೆ - ನೀವು ನನಗೆ ಕಲಿಸಿದ ಪಾಠಗಳು, ನೀವು ನನಗೆ ಕಲಿಸಿದ ರೀತಿ, ನೀವು ನನ್ನಲ್ಲಿ ತುಂಬಿದ ಶಕ್ತಿ ಮತ್ತು ಉತ್ಸಾಹ - 2047ರ ಹೊತ್ತಿಗೆ ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವ ಹೊತ್ತಿಗೆ, ಈ ರಾಷ್ಟ್ರವು 'ವಿಕಸಿತ ಭಾರತ'ವಾಗುತ್ತದೆ.

ಆದ್ದರಿಂದ, ಸ್ನೇಹಿತರೆ,

‘ವಿಕಸಿತ ಭಾರತ’ ನಿರ್ಮಿಸಲು ಒಂದು ಪ್ರಮುಖ ಹೆದ್ದಾರಿ ಸ್ವದೇಶಿ (ಸ್ಥಳೀಯ ಸ್ವಾವಲಂಬನೆ). ಮತ್ತೊಂದು ಪ್ರಮುಖ ಹೆದ್ದಾರಿ ಆತ್ಮನಿರ್ಭರ ಭಾರತ(ಸ್ವಾವಲಂಬಿ ಭಾರತ). ವಸ್ತುಗಳನ್ನು ತಯಾರಿಸುವ, ಉತ್ಪಾದಿಸುವ ಎಲ್ಲರಿಗೂ, ನಾನು ಮನವಿ ಮಾಡುತ್ತೇನೆ - ನಿಮ್ಮ ಗುಣಮಟ್ಟವನ್ನು ನಿರಂತರವಾಗಿ ಸುಧಾರಿಸುತ್ತಿರಿ, ನಿಮ್ಮ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುತ್ತಿರಿ. ನೀವು ನೋಡುತ್ತೀರಿ, ಭಾರತದ ಜನರು ಎಂದಿಗೂ ಹೊರಗಿನಿಂದ ಏನನ್ನೂ ಖರೀದಿಸುವ ಅಗತ್ಯವಿಲ್ಲ ಎಂಬುದನ್ನು. ನಾವು ಈ ಚೈತನ್ಯವನ್ನು ಜಾಗೃತಗೊಳಿಸಬೇಕು, ಇಡೀ ವಿಶ್ವದ ಮುಂದೆ ಅಂತಹ ಉದಾಹರಣೆಯನ್ನು ನೀಡಬೇಕು. ನನ್ನ ಸ್ನೇಹಿತರೆ, ಬಿಕ್ಕಟ್ಟನ್ನು ಎದುರಿಸಿದಾಗ, ಅವರು ಎತ್ತರವಾಗಿ ಮತ್ತು ಸದೃಢವಾಗಿ ನಿಲ್ಲುತ್ತಾರೆ, ಅವರು ಫಲಿತಾಂಶಗಳನ್ನು ಸಾಧಿಸುತ್ತಾರೆ ಎಂಬುದಕ್ಕೆ ಅನೇಕ ದೇಶಗಳಿವೆ. ನಮಗೂ ಇದು ಒಂದು ಅವಕಾಶ. ಸಂಕಲ್ಪವನ್ನು ಪೂರೈಸುವ ಶಕ್ತಿಯೊಂದಿಗೆ ನಾವು ಮುಂದುವರಿಯಬೇಕು. ಗುಜರಾತ್ ಯಾವಾಗಲೂ ನನ್ನನ್ನು ಬೆಂಬಲಿಸಿದಂತೆ, ಇಡೀ ರಾಷ್ಟ್ರವು ನನ್ನನ್ನು ಬೆಂಬಲಿಸುತ್ತದೆ ಮತ್ತು ದೇಶವು ಖಂಡಿತವಾಗಿಯೂ ‘ವಿಕಸಿತ ಭಾರತ’ವಾಗಿ ಹೊರಹೊಮ್ಮುತ್ತದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಅಭಿವೃದ್ಧಿಯ ಈ ಅಮೂಲ್ಯ ಉಡುಗೊರೆಗಳನ್ನು ಪಡೆದ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು! ಗುಜರಾತ್ ಮಹತ್ತರವಾಗಿ ಪ್ರಗತಿ ಸಾಧಿಸಲಿ, ಹೊಸ ಎತ್ತರವನ್ನು ತಲುಪಲಿ. ಗುಜರಾತ್ ಯಾವುದೇ ಶಕ್ತಿಯನ್ನು ಹೊಂದಿದ್ದರೂ, ಅದು ಅದನ್ನು ಕ್ರಿಯೆಯ ಮೂಲಕ ಸಾಬೀತುಪಡಿಸುತ್ತದೆ. ನಿಮ್ಮೆಲ್ಲರಿಗೂ ನನ್ನ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ! ಮತ್ತು ಈಗ, ಪೂರ್ಣ ಶಕ್ತಿಯಿಂದ, ನನ್ನೊಂದಿಗೆ ಹೇಳಿ:

ಭಾರತ್ ಮಾತಾ ಕಿ ಜೈ!ಭಾರತ್ ಮಾತಾ ಕಿ ಜೈ!ಭಾರತ್ ಮಾತಾ ಕಿ ಜೈ!

ಧನ್ಯವಾದಗಳು!

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
GST cuts ignite car sales boom! Automakers plan to ramp up output by 40%; aim to boost supply, cut wait times

Media Coverage

GST cuts ignite car sales boom! Automakers plan to ramp up output by 40%; aim to boost supply, cut wait times
NM on the go

Nm on the go

Always be the first to hear from the PM. Get the App Now!
...
After NDA’s landslide Bihar victory, PM Modi takes the centre stage at BJP HQ
November 14, 2025
Bihar has replaced the outdated ‘M-Y formula’ of some parties with a positive and aspirational formula of ‘Mahila and Youth’: PM Modi after NDA’s sweeping victory
This resounding victory reflects the unshakeable trust of Bihar’s citizens who have created a storm with their verdict: PM Modi on NDA’s win in Bihar
Congress today has turned into the Muslim League–Maoist Congress (MMC): PM Modi
Congress has now become a liability, a political parasite that feeds on the vote bank of its partners to regain relevance: PM Modi warns against the opposition
Bihar has defeated lies and upheld the truth: PM Modi from BJP HQ

PM Modi addressed the BJP headquarters in Delhi after the NDA’s historic mandate in Bihar, expressing deep gratitude to the people of the state for their unprecedented support. He said that this resounding victory reflects the unshakeable trust of Bihar’s citizens who have “created a storm” with their verdict. “Bihar Ne Garda Uda Diya,” he remarked.

The PM noted that the people of Bihar have voted decisively for a developed and prosperous state, breaking all past records of voter participation. He paid homage to Loknayak Jayaprakash Narayan and Bharat Ratna Karpoori Thakur, reiterating that this mandate strengthens the NDA’s resolve to take Bihar’s development to new heights.

PM Modi highlighted how the election results have demolished the old politics built on caste equations and appeasement. He said that Bihar has replaced the outdated ‘M-Y formula’ of some parties with a positive and aspirational formula of ‘Mahila and Youth’. He saluted the energy of Bihar’s youth, the strength of its women and the contribution of farmers, labourers, traders and fishermen. He congratulated the entire NDA leadership for their unity and relentless hard work. He also thanked BJP Karyakartas across India, as well as the people of Nagrota in Jammu & Kashmir and Nuapada in Odisha, for ensuring the BJP’s victories in the by-elections.

PM Modi strongly criticised the Congress party, stating that a party which ruled India for decades has now completely lost the people’s trust. He said the Congress has been out of power in Bihar for 35 years, in Gujarat for 30 years, for nearly four decades in Uttar Pradesh and for close to five decades in West Bengal. PM Modi said, “Despite three consecutive Lok Sabha elections, the Congress has failed to cross even the three-digit mark. Even after the 2024 Lok Sabha polls, six states went to the polls and in none of them could the Congress cross 100 seats.”

He blatantly pointed out that in just one election held today, the NDA has won more MLAs than the Congress could secure across six elections combined. He said Congress’ politics has now been reduced entirely to negative politics, from slogans like “Chowkidar chor hai” to disrupting Parliament, attacking every institution, raising doubts on EVMs, targeting the Election Commission, making false allegations of vote theft, dividing society on caste and religious lines and even pushing agendas that strengthen India’s enemies rather than the nation.

PM Modi said the Congress today has turned into the “Muslim League–Maoist Congress (MMC),” and this mindset drives its entire agenda. He added that even within the Congress, a separate faction is now emerging which is uncomfortable with this negative politics. The path on which the Congress’ leadership is dragging the party has created deep frustration and discontent inside their own ranks, he said, adding that another major split in the Congress cannot be ruled out.

The PM also warned that even Congress’ allies now realise that Congress is dragging everyone down with its negativity. Recalling what he said during the Bihar elections, PM Modi reiterated that the Congress leadership has been “diving into a political swamp”. He reminded allied parties that Congress has now become a liability, a political parasite that feeds on the vote bank of its partners to regain relevance.

He said Congress’ partners must stay alert because the party’s approach is harming everyone associated with it. PM Modi remarked that in Bihar, the RJD has been left speechless after the results. As he had predicted during the campaign, the clash between the Congress and the RJD will soon come out in the open.

The PM emphasised that this mandate is equally a victory for India’s democracy. He said that the conduct of a peaceful, high-turnout election, especially in a state that once suffered from Maoist influence and widespread electoral violence reinforces the public’s trust in the Election Commission. He also remarked that Bihar’s youth have strongly supported the drive towards clean and accurate electoral rolls.

Concluding his address, PM Modi said that the people of Bihar have given their verdict against dynasty politics, corruption and misrule, and have voted affirmatively for stability, development and dignity. He said the NDA will work with renewed determination to fulfil the aspirations of every family in Bihar, honour the trust placed in them and accelerate the journey towards a Viksit Bihar and a Viksit Bharat.