Quote"ಇಂದು, ಭಾರತವು ಜಾಗತಿಕ ವ್ಯಾಪಾರದ ಪ್ರಮುಖ ಕೇಂದ್ರವಾಗುತ್ತಿದ್ದು, ನಾವು ದೇಶದ ಕಡಲ ಶಕ್ತಿಯನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದೇವೆ"
Quote"ಬಂದರುಗಳು, ಹಡಗು ಮತ್ತು ಒಳನಾಡಿನ ಜಲಮಾರ್ಗಗಳ ಕ್ಷೇತ್ರಗಳಲ್ಲಿ 'ಸುಗಮ ವ್ಯಾಪಾರ'ವನ್ನು ಹೆಚ್ಚಿಸಲು ಕಳೆದ 10 ವರ್ಷಗಳಲ್ಲಿ ಅನೇಕ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ"
Quote“ಜಾಗತಿಕ ವ್ಯಾಪಾರದಲ್ಲಿ ಭಾರತದ ಸಾಮರ್ಥ್ಯ ಮತ್ತು ಸ್ಥಾನವನ್ನು ಜಗತ್ತು ಗುರುತಿಸುತ್ತಿದೆ”
Quoteʻವಿಕಸಿತ ಭಾರತʼಕ್ಕಾಗಿ ಭಾರತದ ಕಡಲ ಸಾಮರ್ಥ್ಯವನ್ನು ಹೆಚ್ಚಿಸುವ ಮಾರ್ಗಸೂಚಿಯನ್ನು ʻಕಡಲ ಅಮೃತ್ ಕಾಲ ಯೋಜನೆʼಯು ನಮ್ಮ ಮುಂದಿಡುತ್ತದೆ
Quote"ಕೊಚ್ಚಿಯಲ್ಲಿ ಹೊಸ ʻಡ್ರೈ ಡಾಕ್ʼ ಭಾರತದ ರಾಷ್ಟ್ರೀಯ ಹೆಮ್ಮೆಯಾಗಿದೆ"
Quote"ದೇಶದ ನಗರಗಳಲ್ಲಿ ಆಧುನಿಕ ಮತ್ತು ಹಸಿರು ಜಲ ಸಂಪರ್ಕ ಜಾಲ ನಿರ್ಮಾಣದಲ್ಲಿ ʻಕೊಚ್ಚಿ ಶಿಪ್ ಯಾರ್ಡ್ʼ ಪ್ರಮುಖ ಪಾತ್ರ ವಹಿಸುತ್ತಿದೆ"

ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಜಿ, ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ಜಿ, ನನ್ನ ಸಂಪುಟ ಸಹೋದ್ಯೋಗಿಗಳೆ, ಇಲ್ಲಿರುವ ಇತರೆ ಗಣ್ಯರೆ, ಮಹಿಳೆಯರು ಮತ್ತು ಮಹನೀಯರೆ!

ಶ್ರೀ ಸರ್ಬಾನಂದ ಸೋನೋವಾಲ್ ಜಿ ಅವರ ತಂಡ, ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಜಿ ಮತ್ತು ನಮ್ಮ ಸಹೋದ್ಯೋಗಿಗಳಾದ ಶ್ರೀ ವಿ. ಮುರಳೀಧರನ್ ಜಿ ಮತ್ತು ಶ್ರೀ ಶಾಂತನು ಠಾಕೂರ್ ಜಿ ಅವರಿಗೆ ನಾನು ನನ್ನ ಕೃತಜ್ಞತೆವ್ಯಕ್ತಪಡಿಸುತ್ತೇನೆ.

(ಮಲಯಾಳಂನಲ್ಲಿ ಶುಭಾಶಯಗಳು)

ಇಂದು ನನಗೆ ಬಹಳ ಮಹತ್ವದ ದಿನ. ಬೆಳಗ್ಗೆ ಗುರುವಾಯೂರು ದೇವಸ್ಥಾನದಲ್ಲಿ ಗುರುವಾಯೂರಪ್ಪನ ಆಶೀರ್ವಾದ ಪಡೆಯುವ ಭಾಗ್ಯ ನನ್ನದಾಯಿತು. ಈಗ ಕೇರಳ ಅಭಿವೃದ್ಧಿಯ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ನನಗೆ ಈ ಅವಕಾಶ ಸಿಕ್ಕಿದ್ದರಿಂದ ನಾನು ಕೇರಳದ ದೇವರಂತಿರುವ ಜನತೆಯ ಮಧ್ಯೆ ನನ್ನನ್ನು ಕಂಡುಕೊಂಡಿದ್ದೇನೆ.

ಸ್ನೇಹಿತರೆ,

ಕೆಲವೇ ದಿನಗಳ ಹಿಂದೆ, ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ ಸಂದರ್ಭದಲ್ಲಿ, ನಾನು ಕೇರಳದಲ್ಲಿರುವ ರಾಮಾಯಣಕ್ಕೆ ಸಂಬಂಧಿಸಿದ 4 ಪವಿತ್ರ ದೇವಾಲಯಗಳಾದ ನಾಲಂಬಲಂ ಬಗ್ಗೆ ಮಾತನಾಡಿದ್ದೆ. ಈ ದೇವಾಲಯಗಳು ರಾಜ ದಶರಥನ ನಾಲ್ವರು ಪುತ್ರರಿಗೆ ಸಂಬಂಧಿಸಿವೆ ಎಂಬುದು ಕೇರಳದ ಹೊರಗಿನ ಅನೇಕರಿಗೆ ತಿಳಿದಿಲ್ಲ. ಅಯೋಧ್ಯೆಯ ಶ್ರೀರಾಮ ಮಂದಿರ ಶಂಕುಸ್ಥಾಪನೆಗೆ ಕೆಲವು ದಿನಗಳ ಮೊದಲು ತ್ರಿಪ್ರಯಾರ್‌ನ ಶ್ರೀ ರಾಮಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಾಗ್ಯ ಸಿಕ್ಕಿದ್ದು ನಿಜಕ್ಕೂ ಅದೃಷ್ಟವೇ ಸರಿ. ಮಹಾಕವಿ ಎಝುತಚ್ಚನ್ ಬರೆದ ಮಲಯಾಳಂ ರಾಮಾಯಣದ ಪದ್ಯಗಳನ್ನು ಕೇಳುವುದೇ ಒಂದು ಆನಂದ. ಹೆಚ್ಚುವರಿಯಾಗಿ, ಕೇರಳದ ಅನೇಕ ಪ್ರತಿಭಾವಂತ ಕಲಾವಿದರ ಆಕರ್ಷಕ ಪ್ರದರ್ಶನಗಳು ಶಾಶ್ವತವಾದ ಪ್ರಭಾವ ಬೀರಿವೆ. ಕೇರಳದ ಜನರು ಕಲೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ವಾತಾವರಣ ಬೆಳೆಸಿದ್ದಾರೆ, ಅವಧಪುರಿಯನ್ನು ನೆನಪಿಸುವ ವಾತಾವರಣವನ್ನು ಸೃಷ್ಟಿಸಿದ್ದಾರೆ.

ಸ್ನೇಹಿತರೆ,

'ಆಜಾದಿ ಕಾ ಅಮೃತ ಕಾಲ್' ಸಮಯದಲ್ಲಿ ನಮ್ಮ ದೇಶದ ಪ್ರತಿಯೊಂದು ರಾಜ್ಯವೂ ಭಾರತದ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ವಿಶಿಷ್ಟ ಪಾತ್ರ ವಹಿಸುತ್ತಿದೆ. ಜಾಗತಿಕ ಜಿಡಿಪಿಯಲ್ಲಿ ಮಹತ್ವದ ಪಾಲು ಹೊಂದಿರುವ ಭಾರತವು ಪ್ರವರ್ಧಮಾನಕ್ಕೆ ಬಂದ ಕಾಲದಲ್ಲಿ, ನಮ್ಮ ಬಂದರುಗಳು ಮತ್ತು ಬಂದರು ನಗರಗಳು ನಮ್ಮ ನಿಜವಾದ ಶಕ್ತಿಯಾಗಿದ್ದವು. ಪ್ರಸ್ತುತ, ಭಾರತವು ಮತ್ತೊಮ್ಮೆ ಜಾಗತಿಕ ವ್ಯಾಪಾರದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿರುವುದರಿಂದ, ನಾವು ನಮ್ಮ ಕಡಲ ಸಾಮರ್ಥ್ಯಗಳನ್ನು ಹೆಚ್ಚಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ. ಕೊಚ್ಚಿಯಂತಹ ಕರಾವಳಿ ನಗರಗಳ ಸಾಮರ್ಥ್ಯ ವಿಸ್ತರಿಸಲು ಕೇಂದ್ರ ಸರ್ಕಾರ ಸಂಪೂರ್ಣ ಸಮರ್ಪಿತವಾಗಿದೆ. ಬಂದರು ಸಾಮರ್ಥ್ಯ ಹೆಚ್ಚಿಸಲು ಮತ್ತು ಬಂದರು ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ, ಹಾಗೆಯೇ ಸಾಗರಮಾಲಾ ಯೋಜನೆಯು ಬಂದರು ಸಂಪರ್ಕವನ್ನು ವಿಸ್ತರಿಸುತ್ತಿದೆ.

 

|

ಸ್ನೇಹಿತರೆ,

ಇಂದು ರಾಷ್ಟ್ರವು ತನ್ನ ಅತಿದೊಡ್ಡ ಡ್ರೈ ಡಾಕ್ ಅನ್ನು ಇಲ್ಲಿ ಪಡೆದುಕೊಂಡಿದೆ. ಅಲ್ಲದೆ, ಹಡಗು ನಿರ್ಮಾಣ, ಹಡಗು ದುರಸ್ತಿ ಮತ್ತು ಎಲ್‌ಪಿಜಿ ಆಮದು ಟರ್ಮಿನಲ್‌ಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಸಹ ಇಂದು ಉದ್ಘಾಟಿಸಲಾಗಿದೆ. ಈ ಬೆಳವಣಿಗೆಗಳು ಕೇರಳ ಮತ್ತು ಭಾರತದ ದಕ್ಷಿಣ ಭಾಗದ ಪ್ರಗತಿಯನ್ನು ವೇಗಗೊಳಿಸಲು ಸಿದ್ಧವಾಗಿವೆ. ಕೊಚ್ಚಿನ್ ಶಿಪ್‌ಯಾರ್ಡ್ 'ಮೇಡ್ ಇನ್ ಇಂಡಿಯಾ' ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ನಿರ್ಮಿಸಿದ ಐತಿಹಾಸಿಕ ಹಿರಿಮೆ ಹೊಂದಿದೆ. ಈ ಹೊಸ ಸೌಲಭ್ಯಗಳೊಂದಿಗೆ ನೌಕಾನೆಲೆಯ ಸಾಮರ್ಥ್ಯ ಹಲವು ಪಟ್ಟು ಹೆಚ್ಚಲಿದೆ. ಈ ಸೌಲಭ್ಯಗಳಿಗಾಗಿ ನಾನು ಕೇರಳದ ಮಹಾನ್ ಜನತೆಯನ್ನು ಅಭಿನಂದಿಸುತ್ತೇನೆ.

ಸ್ನೇಹಿತರೆ,

ಕಳೆದ ದಶಕದಲ್ಲಿ ಕೇಂದ್ರ ಸರ್ಕಾರವು ಬಂದರುಗಳು, ಹಡಗು ಮತ್ತು ಒಳನಾಡು ಜಲಮಾರ್ಗ ಕ್ಷೇತ್ರಗಳಲ್ಲಿ 'ಸುಲಭ ವ್ಯವಹಾರ' ಹೆಚ್ಚಿಸಲು ಹಲವಾರು ಸುಧಾರಣೆಗಳನ್ನು ಜಾರಿಗೆ ತಂದಿದೆ. ಈ ಸುಧಾರಣೆಗಳು ಬಂದರುಗಳಿಗೆ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಿವೆ, ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ. ಭಾರತೀಯ ನಾವಿಕರಿಗೆ ಸಂಬಂಧಿಸಿದ ಕಾನೂನುಗಳಲ್ಲಿನ ಪರಿಷ್ಕರಣೆಗಳು ಕಳೆದ ದಶಕದಲ್ಲಿ ಅವರ ಸಂಖ್ಯೆಯಲ್ಲಿ 140% ಏರಿಕೆಗೆ ಕಾರಣವಾಗಿವೆ. ಒಳನಾಡಿನ ಜಲಮಾರ್ಗಗಳ ಬಳಕೆಯು ದೇಶದೊಳಗೆ ಪ್ರಯಾಣಿಕರ ಮತ್ತು ಸರಕು ಸಾಗಣೆ ಎರಡಕ್ಕೂ ಹೊಸ ಉತ್ತೇಜನ ನೀಡಿದೆ.

ಸ್ನೇಹಿತರೆ,

ಸಾಮೂಹಿಕ ಅಥವಾ ಸಂಘಟಿತ ಪ್ರಯತ್ನಗಳನ್ನು ಮಾಡಿದಾಗ, ಫಲಿತಾಂಶಗಳು ಹೆಚ್ಚು ಅನುಕೂಲಕರವಾಗಿರುತ್ತವೆ. ಕಳೆದ 10 ವರ್ಷಗಳಲ್ಲಿ ನಮ್ಮ ಬಂದರುಗಳು ಎರಡಂಕಿಯ ವಾರ್ಷಿಕ ಬೆಳವಣಿಗೆ ಕಂಡಿವೆ. ಒಂದು ದಶಕದ ಹಿಂದೆ, ಹಡಗುಗಳು ನಮ್ಮ ಬಂದರುಗಳಲ್ಲಿ ಬಂದು ನಿಲ್ಲಲು ದೀರ್ಘಕಾಲ ಕಾಯಬೇಕಿತ್ತು. ಆ ಸಮಯವನ್ನು ಕಡಿಮೆ ಮಾಡಲು ಸಾಕಷ್ಟು ಸಮಯ ತೆಗೆದುಕೊಂಡಿತು. ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಹಡಗು ನಿಲುಗಡೆ ಸಮಯದ ವಿಷಯದಲ್ಲಿ ಭಾರತವು ಜಾಗತಿಕವಾಗಿ ಅನೇಕ ಅಭಿವೃದ್ಧಿ ಹೊಂದಿದ ದೇಶಗಳನ್ನು ಮೀರಿಸಿದೆ.

 

 

|

ಸ್ನೇಹಿತರೆ,

ಪ್ರಸ್ತುತ, ಜಾಗತಿಕ ವ್ಯಾಪಾರದಲ್ಲಿ ಭಾರತದ ಪಾತ್ರವನ್ನು ಇಡೀ ಜಗತ್ತು ಗುರುತಿಸುತ್ತಿದೆ. ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್‌ ಪ್ರಸ್ತಾವನೆಯ ಅನುಮೋದನೆಯು ಈ ಬದ್ಧತೆಗೆ ಉದಾಹರಣೆಯಾಗಿದೆ. ಈ ಕಾರಿಡಾರ್ ಭಾರತದ ಅಭಿವೃದ್ಧಿಯನ್ನು ಗಣನೀಯವಾಗಿ ಮುಂದೂಡಲು ಮತ್ತು ನಮ್ಮ ಕರಾವಳಿ ಆರ್ಥಿಕತೆಯನ್ನು ಹೆಚ್ಚಿಸಲು ಸಜ್ಜಾಗಿದೆ. ಇತ್ತೀಚೆಗೆ 'ಮೇರಿಟೈಮ್(ಸಾಗರ) ಅಮೃತ್ ಕಾಲ್ ವಿಷನ್' ಕೂಡ ಪ್ರಾರಂಭವಾಗಿದೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ನಾವು ನಮ್ಮ ಕಡಲ ಶಕ್ತಿಯನ್ನು ಹೇಗೆ ಬಲಪಡಿಸುತ್ತೇವೆ ಎಂಬುದರ ಕುರಿತು ಇದು ಮಾರ್ಗಸೂಚಿ ಒಳಗೊಂಡಿದೆ. ಭಾರತವನ್ನು ಜಾಗತಿಕವಾಗಿ ಪ್ರಮುಖ ಕಡಲ ಶಕ್ತಿಯಾಗಿ ಸ್ಥಾಪಿಸಲು ಮೆಗಾ ಬಂದರುಗಳು, ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ಕ್ಲಸ್ಟರ್‌ಗಳಂತಹ ಮೂಲಸೌಕರ್ಯಗಳನ್ನು ನಿರ್ಮಿಸಲು ನಾವು ಬಲವಾದ ಒತ್ತು ನೀಡುತ್ತಿದ್ದೇವೆ.

ಸ್ನೇಹಿತರೆ,

ಕೇರಳದಲ್ಲಿ ಇಂದು ಉದ್ಘಾಟನೆಯಾದ 3 ಯೋಜನೆಗಳು ಸಮುದ್ರ ವಲಯದಲ್ಲಿ ಈ ಪ್ರದೇಶದ ಉಪಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಹೊಸದಾಗಿ ಪರಿಚಯಿಸಲಾದ ಡ್ರೈ ಡಾಕ್ ಭಾರತಕ್ಕೆ ರಾಷ್ಟ್ರೀಯ ಹೆಮ್ಮೆಯ ಮೂಲವಾಗಿದೆ. ಇದರ ನಿರ್ಮಾಣವು ದೊಡ್ಡ ಹಡಗುಗಳು ಮತ್ತು ಹಡಗುಗಳ ಡಾಕಿಂಗ್ ಅನ್ನು ಶಕ್ತಗೊಳಿಸುತ್ತದೆ. ಅಲ್ಲದೆ, ಹಡಗು ನಿರ್ಮಾಣ ಮತ್ತು ದುರಸ್ತಿ ಚಟುವಟಿಕೆಗಳನ್ನು ಸುಗಮಗೊಳಿಸುತ್ತದೆ, ವಿಶೇಷವಾಗಿ ಭಾರತದ ವಿದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಈ ಕ್ರಮವು ಹಿಂದೆ ವಿದೇಶಕ್ಕೆ ಕಳುಹಿಸಲಾದ ಹಣವನ್ನು ದೇಶಕ್ಕೆ ಮರಳಿಸುತ್ತದೆ. ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ಕ್ಷೇತ್ರಗಳಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

ಸ್ನೇಹಿತರೆ,

ಇಂದು ಅಂತಾರಾಷ್ಟ್ರೀಯ ಹಡಗು ದುರಸ್ತಿ ಸೌಲಭ್ಯವೂ ಉದ್ಘಾಟನೆಯಾಗಿದೆ. ಈ ಯೋಜನೆಯು ಕೊಚ್ಚಿಯನ್ನು ಭಾರತ ಸೇರಿದಂತೆ ಏಷ್ಯಾ ಖಂಡದಲ್ಲೇ ಪ್ರಮುಖ ಹಡಗು ದುರಸ್ತಿ ಕೇಂದ್ರವಾಗಿ ರೂಪಿಸುತ್ತದೆ. ಈ ಯೋಜನೆಯೊಂದಿಗೆ, ಕೊಚ್ಚಿ ಭಾರತ ಮತ್ತು ಏಷ್ಯಾದ ಪ್ರಮುಖ ಹಡಗು ದುರಸ್ತಿ ಕೇಂದ್ರವಾಗಲಿದೆ. ಐಎನ್ಎಸ್ ವಿಕ್ರಾಂತ್ ನಿರ್ಮಾಣ ಸಮಯದಲ್ಲಿ ಹಲವಾರು ಎಂಎಸ್ಎಂಇಗಳು ಹೇಗೆ ಬೆಂಬಲ ಪಡೆದವು ಎಂಬುದನ್ನು ನಾವು ನೋಡಿದ್ದೇವೆ. ಅಂತೆಯೇ, ಹಡಗು ನಿರ್ಮಾಣ ಮತ್ತು ದುರಸ್ತಿಗಾಗಿ ಮಹತ್ವದ ಸೌಲಭ್ಯಗಳನ್ನು ಸೃಷ್ಟಿಸುವುದರೊಂದಿಗೆ, ಎಂಎಸ್ಎಂಇಗಳಿಗೆ ಹೊಸ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹೊಸದಾಗಿ ನಿರ್ಮಿಸಲಾದ ಎಲ್ಪಿಜಿ  ಆಮದು ಟರ್ಮಿನಲ್ ಕೊಚ್ಚಿ, ಕೊಯಮತ್ತೂರು, ಈರೋಡ್, ಸೇಲಂ, ಕ್ಯಾಲಿಕಟ್, ಮಧುರೈ ಮತ್ತು ತಿರುಚ್ಚಿಯ ಎಲ್ಪಿಜಿ ಅಗತ್ಯಗಳನ್ನು ಪೂರೈಸುತ್ತದೆ, ಈ ಪ್ರದೇಶಗಳಲ್ಲಿ ಕೈಗಾರಿಕಾ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

 

|

ಸ್ನೇಹಿತರೆ,

ಕೊಚ್ಚಿ ಶಿಪ್‌ಯಾರ್ಡ್ ಪ್ರಸ್ತುತ ಆಧುನಿಕ ಮತ್ತು ಹಸಿರು ತಂತ್ರಜ್ಞಾನ ಹೊಂದಿರುವ 'ಮೇಡ್ ಇನ್ ಇಂಡಿಯಾ' ಹಡಗುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಕೊಚ್ಚಿ ವಾಟರ್ ಮೆಟ್ರೋಗಾಗಿ ನಿರ್ಮಿಸಲಾದ ವಿದ್ಯುತ್ ಹಡಗುಗಳು ಶ್ಲಾಘನೀಯವಾಗಿವೆ. ಅಯೋಧ್ಯೆ, ವಾರಾಣಸಿ, ಮಥುರಾ ಮತ್ತು ಗುವಾಹತಿಗೆ ಎಲೆಕ್ಟ್ರಿಕ್-ಹೈಬ್ರಿಡ್ ಪ್ಯಾಸೆಂಜರ್ ದೋಣಿಗಳನ್ನು ಸಹ ಇಲ್ಲಿ ನಿರ್ಮಿಸಲಾಗುತ್ತಿದೆ. ಆದ್ದರಿಂದ, ಕೊಚ್ಚಿನ್ ಶಿಪ್‌ಯಾರ್ಡ್ ದೇಶದ ನಗರಗಳಲ್ಲಿ ಆಧುನಿಕ ಮತ್ತು ಹಸಿರು ನೀರಿನ ಸಂಪರ್ಕದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಇತ್ತೀಚೆಗೆ ನಾರ್ವೆಗೆ 'ಶೂನ್ಯ ಎಮಿಷನ್ ಎಲೆಕ್ಟ್ರಿಕ್ ಕಾರ್ಗೋ ಫೆರೀಸ್' ಅನ್ನು ತಲುಪಿಸಿದ್ದೀರಿ ಎಂಬುದು ನನಗೆ ತಿಳಿದುಬಂದಿದೆ.  ಹೈಡ್ರೋಜನ್ ಇಂಧನದಲ್ಲಿ ಚಲಿಸುವ ವಿಶ್ವದ ಮೊದಲ ಫೀಡರ್ ಕಂಟೈನರ್ ವೆಸೆಲ್ ನಿರ್ಮಾಣದ ಮೇಲೆ ನಡೆಯುತ್ತಿರುವ ಕೆಲಸವು 'ಮೇಕ್ ಇನ್ ಇಂಡಿಯಾ - ಮೇಕ್ ಫಾರ್ ದಿ ವರ್ಲ್ಡ್'ನ ನಮ್ಮ ದೃಷ್ಟಿಗೆ ನಿಜಕ್ಕೂ ಹೊಂದಿಕೆಯಾಗುತ್ತದೆ. ಕೊಚ್ಚಿನ್ ಶಿಪ್‌ಯಾರ್ಡ್ ಹೈಡ್ರೋಜನ್ ಇಂಧನ ಆಧಾರಿತ ಸಾರಿಗೆಯತ್ತ ಭಾರತವನ್ನು ಮುನ್ನಡೆಸುವ ನಮ್ಮ ಧ್ಯೇಯವನ್ನು ಮುಂದುವರೆಸುತ್ತಿದೆ. ಶೀಘ್ರದಲ್ಲೇ ದೇಶವು ಸ್ವದೇಶಿ ಹೈಡ್ರೋಜನ್ ಇಂಧನ ಕೋಶ ದೋಣಿಗಳನ್ನು ಪಡೆಯಲಿದೆ ಎಂಬ ವಿಶ್ವಾಸ ನನಗಿದೆ.

 

|

ಸ್ನೇಹಿತರೆ,

ನಮ್ಮ ಮೀನುಗಾರರು ನೀಲಿ ಆರ್ಥಿಕತೆ ಮತ್ತು ಬಂದರು ನೇತೃತ್ವದ ಅಭಿವೃದ್ಧಿಗೆ ಅವಿಭಾಜ್ಯ ಅಂಗವಾಗಿದ್ದಾರೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯು ಮೀನುಗಾರಿಕೆಗಾಗಿ ಆಧುನಿಕ ಮೂಲಸೌಕರ್ಯಗಳನ್ನು ಸಕ್ರಿಯವಾಗಿ ಅಭಿವೃದ್ಧಿಪಡಿಸುತ್ತಿದೆ. ಆಳ ಸಮುದ್ರ ಮೀನುಗಾರಿಕೆಗೆ ಆಧುನಿಕ ದೋಣಿಗಳನ್ನು ನೀಡಲು ಕೇಂದ್ರ ಸರ್ಕಾರ ಮೀನುಗಾರರಿಗೆ ಸಹಾಯಧನ ನೀಡುತ್ತಿದೆ. ರೈತರಂತೆ ಮೀನುಗಾರರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡಲಾಗಿದೆ. ಇಂತಹ ಪ್ರಯತ್ನಗಳಿಂದಾಗಿ ಕಳೆದ 10 ವರ್ಷಗಳಲ್ಲಿ ಮೀನು ಉತ್ಪಾದನೆ ಮತ್ತು ರಫ್ತು ಎರಡರಲ್ಲೂ ಹಲವು ಪಟ್ಟು ಹೆಚ್ಚಾಗಿದೆ. ಸಮುದ್ರಾಹಾರ ಸಂಸ್ಕರಣೆಯಲ್ಲಿ ಭಾರತದ ಪಾಲು ಹೆಚ್ಚಿಸಲು ಕೇಂದ್ರ ಸರ್ಕಾರ ಈಗ ಗಮನ ಹರಿಸಿದೆ. ಇದು ಭವಿಷ್ಯದಲ್ಲಿ ನಮ್ಮ ಮೀನುಗಾರರ ಆದಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ಅವರ ಜೀವನವನ್ನು ಸುಧಾರಿಸುತ್ತದೆ. ಕೇರಳ ರಾಜ್ಯದ ತ್ವರಿತ ಅಭಿವೃದ್ಧಿಯನ್ನು ಬಯಸುತ್ತಾ, ಈ ಹೊಸ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.

ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು.

ಧನ್ಯವಾದ!

 

  • Jitendra Kumar May 14, 2025

    ❤️🇮🇳🙏
  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • Devendra Kunwar October 08, 2024

    BJP
  • दिग्विजय सिंह राना September 20, 2024

    हर हर महादेव
  • krishangopal sharma Bjp July 28, 2024

    नमो नमो 🙏 जय भाजपा 🙏
  • krishangopal sharma Bjp July 28, 2024

    नमो नमो 🙏 जय भाजपा 🙏
  • krishangopal sharma Bjp July 28, 2024

    नमो नमो 🙏 जय भाजपा 🙏
  • JBL SRIVASTAVA May 27, 2024

    मोदी जी 400 पार
  • Ravikant Rawal March 08, 2024

    मोदी मोदी
  • Ravikant Rawal March 08, 2024

    मोदी मोदी
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
India's fintech sector ranks 3rd globally in H1 2025 funding round: Tracxn

Media Coverage

India's fintech sector ranks 3rd globally in H1 2025 funding round: Tracxn
NM on the go

Nm on the go

Always be the first to hear from the PM. Get the App Now!
...
Prime Minister condoles the loss of lives in an accident in Sambhal, Uttar Pradesh
July 05, 2025
QuotePM announces ex-gratia from PMNRF

Prime Minister Shri Narendra Modi today condoled the loss of lives in an accident in Sambhal, Uttar Pradesh. He announced an ex-gratia of Rs. 2 lakh from PMNRF for the next of kin of each deceased and Rs. 50,000 to the injured.

The PMO India handle in post on X said:

“Deeply saddened by the loss of lives in an accident in Sambhal, Uttar Pradesh. Condolences to those who have lost their loved ones in the mishap. May the injured recover soon.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi”