New National Education Policy focuses on learning instead of studying and goes ahead of the curriculum to focus on critical thinking: PM
National Education Policy stresses on passion, practicality and performance: PM Modi
Education policy and education system are important means of fulfilling the aspirations of the country: PM Modi

ನಮಸ್ಕಾರ

ಗೌರವಾನ್ವಿತ ರಾಷ್ಟ್ರಪತಿಗಳೇ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಖ್ ಜಿ, ಸಂಜಯ್ ಧೋತ್ರೆ ಜಿ, ಎಲ್ಲಾ ಗೌರವಾನ್ವಿತ ರಾಜ್ಯಪಾಲರುಗಳೇ, ಲೆಫ್ಟಿನೆಂಟ್ ಗವರ್ನರ್ ಗಳೇ, ರಾಜ್ಯಗಳ ಶಿಕ್ಷಣ ಸಚಿವರುಗಳೇ, ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಡಾ. ಕಸ್ತೂರಿರಂಗನ್ ಜಿ ಮತ್ತು ಅವರ ತಂಡ, ನಾನಾ ವಿಶ್ವವಿದ್ಯಾಲಯಗಳ ಉಪಕುಲಪತಿಗಳೇ, ಶೈಕ್ಷಣಿಕ ತಜ್ಞರೇ ಮತ್ತು ಈ ಸಮಾವೇಶದಲ್ಲಿ ಭಾಗವಹಿಸಿರುವ ಎಲ್ಲಾ ಮಹಿಳೆಯರೇ ಮತ್ತು ಮಹನಿಯರೇ.

ಮೊದಲಿಗೆ ನಾನು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಆಭಾರಿಯಾಗಿದ್ದೇನೆ. ಈ ಸಮಾವೇಶ, ರಾಷ್ಟ್ರೀಯ ಶಿಕ್ಷಣ ನೀತಿ ಹಿನ್ನೆಲೆಯಲ್ಲಿ ಅತ್ಯಂತ ಪ್ರಮುಖ ಮತ್ತು ಪ್ರಸ್ತುತವಾಗಿದೆ. ಇಂದಿನ ಸಮಾವೇಶದಲ್ಲಿ ನೂರಾರು ವರ್ಷಗಳ ಬೋಧನೆಯ ಅನುಭವ ಮೇಳೈಸಿದೆ. ನಾನು ಎಲ್ಲರನ್ನೂ ಸ್ವಾಗತಿಸುತ್ತೇನೆ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಮಾನ್ಯರೇ,

ಶಿಕ್ಷಣ ದೇಶದ ಆಶೋತ್ತರಗಳನ್ನು ಈಡೇರಿಸುವಲ್ಲಿ ಶಿಕ್ಷಣ ನೀತಿ ಮತ್ತು ಶಿಕ್ಷಣ ವ್ಯವಸ್ಥೆ ಅತ್ಯಂತ ಪ್ರಮುಖ ಮಾಧ್ಯಮವಾಗಿದೆ. ಶಿಕ್ಷಣದ ಜವಾಬ್ದಾರಿ, ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದ ಆಡಳಿತದ ಮೇಲಿದ್ದರೂ, ನೀತಿ ನಿರೂಪಣೆಯಲ್ಲಿ ಅವರ ಹಸ್ತಕ್ಷೇಪ ಕನಿಷ್ಠವಾಗಿರಬೇಕು ಮತ್ತು ಕಡಿಮೆ ಪ್ರಭಾವವಿರುತ್ತದೆ. ಹೆಚ್ಚು ಹೆಚ್ಚು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಯೋಜನೆಯಲ್ಲಿ ತೊಡಗಿಸಿಕೊಂಡಾಗ ಶಿಕ್ಷಣ ನೀತಿಯ ಪ್ರಸ್ತುತತೆ ಮತ್ತು ಸಮಗ್ರತೆ ಹೆಚ್ಚಾಗುತ್ತದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಕಾರ್ಯ ನಾಲ್ಕೈದು ವರ್ಷಗಳ ಹಿಂದೆ ಆರಂಭವಾಯಿತು. ನಗರ ಮತ್ತು ಹಳ್ಳಿಗಳಲ್ಲಿ ವಾಸಿಸುವ ಲಕ್ಷಾಂತರ ಜನರು ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಅನುಭವಿ  ಜನರಿಂದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಪಡೆಯಲಾಯಿತು. ಕರಡು ಶಿಕ್ಷಣ ನೀತಿಯ ನಾನಾ ಆಯಾಮಗಳ ಬಗ್ಗೆ ಎರಡು ಲಕ್ಷಕ್ಕೂ ಅಧಿಕ ಜನರು ತಮ್ಮ ಸಲಹೆಗಳನ್ನು ನೀಡಿದ್ದರು. ಅದರ ಅರ್ಥ ಪೋಷಕರು, ವಿದ್ಯಾರ್ಥಿಗಳು, ಶೈಕ್ಷಣಿಕ ತಜ್ಞರು, ಶಿಕ್ಷಕರು, ಶೈಕ್ಷಣಿಕ ವ್ಯವಸ್ಥಾಪಕರು, ವೃತ್ತಿಪರರು ಸೇರಿ ಎಲ್ಲರೂ ಇದಕ್ಕೆ ಕೊಡುಗೆ ನೀಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಇದೀಗ ಎಲ್ಲರೂ ಸ್ವಾಗತಿಸಿದ್ದಾರೆ ಮತ್ತು ಅದು ವ್ಯಾಪಕ ಮತ್ತು ವಿಸ್ತೃತ ಸಮಾಲೋಚನೆ ನಂತರ ಅತ್ಯಂತ ಬಲಿಷ್ಠವಾಗಿದೆ.

ಅದು ಗ್ರಾಮಗಳಲ್ಲಿನ ಶಿಕ್ಷಕರಾಗಿರಬಹುದು ಅಥವಾ ಹೆಸರಾಂತ ಶೈಕ್ಷಣಿಕ ತಜ್ಞರಾಗಿರಬಹುದು, ಪ್ರತಿಯೊಬ್ಬರೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಮ್ಮದೇ ಶಿಕ್ಷಣ ನೀತಿ ಎಂದು ಪರಿಗಣಿಸುತ್ತಿದ್ದಾರೆ. ಪ್ರತಿಯೊಬ್ಬರೂ ಇಂತಹ ಸುಧಾರಣೆಗಳನ್ನು ಹಿಂದಿನ ಶಿಕ್ಷಣ ನೀತಿಯಲ್ಲೇ ಬರಬೇಕಿತ್ತು ಎಂದು ಬಯಸುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಿಕೊಳ್ಳುವುದರ ಹಿಂದೆ ಇದೊಂದು ಪ್ರಮುಖ ಕಾರಣವಿದೆ.

ಶಿಕ್ಷಣ ನೀತಿಯ ವಿಧಾನವನ್ನು ನಿರ್ಧರಿಸಿದ ನಂತರ ರಾಷ್ಟ್ರ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದೆ. ಇದೀಗ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಅದರ ಅನುಷ್ಠಾನ ಕುರಿತಂತೆ ದೇಶಾದ್ಯಂತ ವ್ಯಾಪಕ ಚರ್ಚೆ ಮತ್ತು ಸಂವಾದಗಳು ನಡೆಯುತ್ತಿವೆ. ರಾಷ್ಟ್ರೀಯ ಶಿಕ್ಷಣ ನೀತಿ ಕೇವಲ ಶಾಲಾ ವ್ಯವಸ್ಥೆಯಲ್ಲಿ ಸುಧಾರಣೆಗಳಿಗೆ ಸೀಮಿತವಾದುದಲ್ಲ, ಹಾಗಾಗಿ ಇಂತಹ ಸಮಗ್ರ ಸಮಾಲೋಚನೆಗಳು ಅತ್ಯಗತ್ಯ. 21ನೇ ಶತಮಾನದ ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸ್ವರೂಪಗಳಿಗೆ ಹೊಸ ದಿಕ್ಕನ್ನು ಈ ಶಿಕ್ಷಣ ನೀತಿ ನೀಡಲಿದೆ.

ಈ ನೀತಿಯು ಭಾರತವನ್ನು ಸ್ವಾವಲಂಬಿ ಅಥವಾ ಆತ್ಮನಿರ್ಭರ ಮಾಡುವ ಗುರಿ ಹೊಂದಿದೆ. ಸಹಜವಾಗಿಯೇ ನಮ್ಮ ಸಿದ್ಧತೆಗಳು ಮತ್ತು ಜಾಗೃತಿ ಕೂಡ ಒಂದಕ್ಕೊಂದು ಸಮ್ಮಿಳಿತವಾಗಬೇಕು. ಬಹುತೇಕ ಮಂದಿ ರಾಷ್ಟ್ರೀಯ ಶಿಕ್ಷಣ ನೀತಿಯ ಸೂಕ್ಷ್ಮ ಅಂಶಗಳನ್ನು ಅಧ್ಯಯನ ಮಾಡಿದ್ದೀರಿ. ಆದ್ದರಿಂದ ಆ ಅಂಶಗಳ ಕುರಿತು ಮತ್ತು ಸುಧಾರಣೆಯ ತೀವ್ರತೆಯ ಉದ್ದೇಶಗಳ ಕುರಿತು ನಿರಂತರ ಸಮಾಲೋಚನೆಗಳು ಅತ್ಯಂತ ಪ್ರಮುಖವಾಗಿವೆ. ಎಲ್ಲ ಸಂದೇಹ ಮತ್ತು ಪ್ರಶ್ನೆಗಳನ್ನು ನಿವಾರಿಸಿದ ನಂತರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ.

ಮಾನ್ಯರೇ,

ಇಂದು ಜಗತ್ತಿನಲ್ಲಿ ಬದಲಾಗುತ್ತಿರುವ ಉದ್ಯೋಗ ಮತ್ತು ದುಡಿಯುವ ಸ್ವರೂಪದ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಅತ್ಯಂತ ಕ್ಷಿಪ್ರ ಬದಲಾವಣೆಗಳಾಗುತ್ತಿವೆ. ಈ ನೀತಿ ದೇಶದ ಯುವ ಜನಾಂಗವನ್ನು ಭವಿಷ್ಯದ ಬೇಡಿಕೆಗಳಿಗೆ ಅನುಗುಣವಾಗಿ ಜ್ಞಾನ ಮತ್ತು ಕೌಶಲ್ಯ ಎರಡನ್ನೂ ನೀಡಿ ಸಜ್ಜುಗೊಳಿಸಲಿದೆ. ಹೊಸ ಶಿಕ್ಷಣ ನೀತಿಯು ಓದುವುದಕ್ಕಿಂತ ಹೆಚ್ಚಾಗಿ ಕಲಿಕೆಯ ಮೇಲೆ ಗಮನ ಹರಿಸುತ್ತದೆ ಮತ್ತು ಪಠ್ಯಕ್ರಮವನ್ನು ಮೀರಿ ವಿಮರ್ಶಾತ್ಮಕ ಚಿಂತನೆಗೆ ಒತ್ತು ನೀಡುತ್ತದೆ. ಪ್ರಕ್ರಿಯೆಗಿಂತ ಭಾವೋದ್ರೇಕಕ್ಕೆ, ಪ್ರಾಯೋಗಿಕತೆ ಮತ್ತು ಕಾರ್ಯಕ್ಷಮತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹೊಸ ಶಿಕ್ಷಣ ನೀತಿಯು ಕಲಿಕೆಯ ಫಲಶ್ರುತಿ ಮತ್ತು ಶಿಕ್ಷಕರ ತರಬೇತಿ ಮತ್ತು ಪ್ರತಿ ವಿದ್ಯಾರ್ಥಿಯ ಸಬಲೀಕರಣದತ್ತ ಕೇಂದ್ರೀಕರಿಸುತ್ತದೆ.

ಒಂದು ರೀತಿಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ‘ಒಂದು ಗಾತ್ರ ಎಲ್ಲರಿಗೂ ಹೊಂದುತ್ತದೆ’ ಎಂಬ ಮನೋಭಾವದಿಂದ ಹೊರತರುವ ಒಂದು ಗಂಭೀರ ಪ್ರಯತ್ನವಾಗಿದೆ ಮತ್ತು ನೀವೆಲ್ಲಾ ಹಿರಿಯರು, ಇದು ಒಂದು ಸಾಮಾನ್ಯ ಪ್ರಯತ್ನವಲ್ಲ, ಅಸಮಾನ್ಯ ಪ್ರಯತ್ನ ಎಂದು ಭಾವಿಸಬಹುದು. ಈ ನೀತಿಯಲ್ಲಿ ಹಲವು ದಶಕಗಳ ಹಿಂದಿನ ಶಿಕ್ಷಣ ನೀತಿಯಲ್ಲಿನ ಎಲ್ಲ ನ್ಯೂನತೆಗಳು ಮತ್ತು ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಮಗ್ರ ಸಮಾಲೋಚನೆ ನಡೆಯಲಿದೆ. ದೀರ್ಘಕಾಲದಿಂದ ಮಕ್ಕಳಿಗೆ ಶಾಲಾ ಚೀಲಗಳು ಮತ್ತು ಮಂಡಳಿ ಪರೀಕ್ಷೆಗಳಿಂದ ಭಾರೀ  ಹೊರೆಯಾಗುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿದ್ದವು, ಇದರಿಂದ ಕುಟುಂಬದ ಮತ್ತು ಸಮಾಜದ ಮೇಲೆ ಒತ್ತಡ ಸೃಷ್ಟಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ನೀತಿ, ಆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲಿದೆ. ನಮ್ಮ ದೇಶದಲ್ಲಿ ಹೀಗೆ ಹೇಳಲಾಗುವುದು. सा विद्या या विमुक्         ಅಂದರೆ ಜ್ಞಾನ ನಮ್ಮ ಮನಸ್ಸನ್ನು ಮುಕ್ತಗೊಳಿಸುತ್ತದೆ ಎಂದು.

ಮಕ್ಕಳು ಮೂಲ ಹಂತದಲ್ಲಿ ತಮ್ಮ ಸಂಸ್ಕೃತಿ, ಭಾಷೆ ಮತ್ತು ಪರಂಪರೆ ಜೊತೆ ಬೆರೆತರೆ, ಶಿಕ್ಷಣ ಅತ್ಯಂತ ಪರಿಣಾಮಕಾರಿಯಾಗುವುದು ಮಾತ್ರವಲ್ಲದೆ, ಅತ್ಯಂತ ಸುಲಭವಾಗಲಿದೆ. ಮಕ್ಕಳೂ ಕೂಡ ಅದರ ಜೊತೆ ಹೊಂದಿಕೊಳ್ಳುತ್ತಾರೆ. ಹೊಸ ಶಿಕ್ಷಣ ನೀತಿಯಲ್ಲಿ ಯಾವುದೇ ಒತ್ತಡ, ಕೊರತೆ, ಪ್ರಭಾವವಿಲ್ಲದೆ  ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಸಲಾಗುವುದು. ವಾಸ್ತವ ಅರ್ಥದಲ್ಲಿ ಅದು ನಮ್ಮ ಶಿಕ್ಷಣ ನೀತಿಯ ಭಾಗವಾಗಿದೆ. ಬೇರೆ ಬೇರೆ ಬಗೆಯ ಕೋರ್ಸ್ ಗಳ ಬಗೆಗಿನ ವಿದ್ಯಾರ್ಥಿಗಳ ಮೇಲಿನ ಒತ್ತಡಗಳು ತಗ್ಗಲಿವೆ.

ಇದೀಗ ನಮ್ಮ ಯುವಕರು ತಮ್ಮ ಆಸಕ್ತಿ ಮತ್ತು ಯೋಗ್ಯತೆಗೆ ಅನುಗುಣವಾಗಿ ವ್ಯಾಸಂಗ ಮಾಡಬಹುದಾಗಿದೆ. ಮೊದಲು ವಿದ್ಯಾರ್ಥಿಗಳು ಒತ್ತಡದ ಕಾರಣಕ್ಕೆ ತಮ್ಮ ಸಾಮರ್ಥ್ಯ ಮೀರಿದ ವಿಭಾಗಗಳನ್ನು ವಿದ್ಯಾರ್ಥಿಗಳು ಆಯ್ದುಕೊಳ್ಳುತ್ತಿದ್ದರು. ಅವರು ಅದನ್ನು ಅರ್ಥ ಮಾಡಿಕೊಳ್ಳುವ ವೇಳೆಗೆ ತುಂಬಾ ತಡವಾಗಿರುತ್ತಿತ್ತು. ಅದರ ಪರಿಣಾಮ ವಿದ್ಯಾರ್ಥಿಗಳು ಒಂದೊ ಕಾಲೇಜಿನಿಂದ ಹೊರಗುಳಿಯುತ್ತಿದ್ದ ಅಥವಾ ಹೇಗೋ ಪದವಿಯನ್ನು ಪೂರೈಸುತ್ತಿದ್ದರು. ನನಗೆ ಅದು ಅರ್ಥವಾಗುತ್ತದೆ, ವಾಸ್ತವದಲ್ಲಿ ನನಗಿಂತ ನಿಮಗೆ ಚೆನ್ನಾಗಿ ಗೊತ್ತು, ಇದು ನಮ್ಮ ದೇಶದಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ ಎಂಬುದು. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ಸಮಸ್ಯೆಗಳಿಗೆ ಪರಿಹಾರವಿದೆ. ವಿದ್ಯಾರ್ಥಿಗಳಿಗೂ ಕೂಡ ಇದರಿಂದ ಶೈಕ್ಷಣಿಕವಾಗಿ ಹೆಚ್ಚಿನ  ಪ್ರಯೋಜನವಾಗಲಿದೆ.

ಮಾನ್ಯರೇ,

ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಯುವಕರನ್ನು ಕೌಶಲ್ಯ ಹೊಂದಿದವರನ್ನಾಗಿ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ನಮ್ಮ ಯುವಕರು ಬಾಲ್ಯದಿಂದಲೇ ವೃತ್ತಿಪರ ಕಲಿಕೆಯ ಬೆಳವಣಿಗೆಗೆ ತೆರೆದುಕೊಳ್ಳುವುದರಿಂದ ಭವಿಷ್ಯಕ್ಕೆ ಉತ್ತಮ ರೀತಿಯಲ್ಲಿ ಸಜ್ಜಾಗಲಿದ್ದಾರೆ. ಪ್ರಾಯೋಗಿಕ ಕಲಿಕೆ, ದೇಶದಲ್ಲಿ ನಮ್ಮ ಯುವ ಮಿತ್ರರ ಉದ್ಯೋಗದ ಸಂಭವನೀಯತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚಾಗಲಿದೆ. ನಮ್ಮ ದೇಶದಲ್ಲಿ ಹೀಗೆ ಹೇಳಲಾಗುತ್ತದೆ.    नो भद्राः क्रतवो यन्तु विश्वतः ಅಂದರೆ ಯಾವುದೇ ದಿಕ್ಕಿನಿಂದ ಬಂದರೂ ಸರಿಯೇ, ಎಲ್ಲರೂ ಒಳ್ಳೆಯ ಚಿಂತನೆಗಳನ್ನು ಸ್ವೀಕರಿಸಬೇಕೆಂದು. ಪುರಾತನ ಕಾಲದಿಂದಲೂ ಭಾರತ, ಜ್ಞಾನದ ಕೇಂದ್ರವಾಗಿದೆ. 21ನೇ ಶತಮಾನದಲ್ಲಿ ಭಾರತವನ್ನು ಜ್ಞಾನದ ಆರ್ಥಿಕತೆಯನ್ನಾಗಿ ರೂಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅದನ್ನು ಸಾಧಿಸುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ಒಂದು ದಿಟ್ಟ ಹೆಜ್ಜೆಯಾಗಿದೆ.  

ಹೊಸ ಶಿಕ್ಷಣ ನೀತಿ, ಸಾಮಾನ್ಯ ಕುಟುಂಬಗಳ ಯುವಕರಿಗಾಗಿ ಭಾರತದಲ್ಲಿ ಉತ್ತಮ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಬಾಗಿಲುಗಳನ್ನು ತೆರೆಯಲಿದೆ ಮತ್ತು ಪ್ರತಿಭಾ ಪಲಾಯನ ಸಮಸ್ಯೆಯನ್ನು ತಡೆಯಲಿದೆ. ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅಗ್ರ ಕ್ಯಾಂಪಸ್ ಗಳು ಸ್ಥಾಪನೆಯಾದರೆ, ಶಿಕ್ಷಣಕ್ಕಾಗಿ ವಿದೇಶಗಳಿಗೆ ಹೋಗುವ ಪ್ರವೃತ್ತಿ ತಗ್ಗುತ್ತದೆ ಮತ್ತು ನಮ್ಮ  ವಿಶ್ವವಿದ್ಯಾಲಯ ಮತ್ತು ಕಾಲೇಜುಗಳು ಹೆಚ್ಚು ಹೆಚ್ಚು ಸ್ಪರ್ಧಾತ್ಮಕಗೊಳ್ಳುತ್ತವೆ. ಆನ್ ಲೈನ್ ಶಿಕ್ಷಣ ಇದರ ಇನ್ನೊಂದು ಆಯಾಮವಾಗಿದ್ದು, ಅದು ಸ್ಥಳೀಯ ಅಥವಾ ಅಂತಾರಾಷ್ಟ್ರೀಯ ಶಾಲಾ ಪದ್ಧತಿಯ ಎಲ್ಲ ಮಿತಿಗಳನ್ನು ದೂರ ಮಾಡಲಿವೆ.

ಮಾನ್ಯರೇ,

ಯಾವುದೇ ಒಂದು ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಬದಲಾವಣೆಗಳನ್ನು ಮಾಡಲು ಹೊರಟಾಗ ಕೆಲವು ಸಂದೇಹಗಳು ಮತ್ತು ಆತಂಕಗಳು ಕಾಡುವುದು ಸಹಜ ಮತ್ತು ನಾವು ಅವುಗಳನ್ನು ನಿವಾರಿಸಿ ಹೊಸ ವ್ಯವಸ್ಥೆಯ ಸೃಷ್ಟಿಯತ್ತ ಸಾಗಬೇಕಿದೆ. ವಿದ್ಯಾರ್ಥಿಗಳು ಸಾಕಷ್ಟು ಸ್ವಾತಂತ್ರ್ಯವನ್ನು ಪಡೆಯುವುದರಿಂದ ಪೋಷಕರು ಯೋಚಿಸಬಹುದು. ಈ ವಿಭಾಗಗಳು ದೂರವಾದರೆ ಅವರು ಹೇಗೆ ಕಾಲೇಜುಗಳಲ್ಲಿ ಪ್ರವೇಶವನ್ನು ಪಡೆಯುತ್ತಾರೆ ಮತ್ತು ತಮ್ಮ ಮಕ್ಕಳ ಭವಿಷ್ಯ ಏನಾಗುತ್ತದೆ ಎಂದು ಯೋಚಿಸಬಹುದು. ಅಂತೆಯೇ ಶಿಕ್ಷಕರು ಮತ್ತು ಪ್ರೊಫೆಸರ್ ಗಳ ಮನಸ್ಸಿನಲ್ಲಿಯೂ ಸಹ ಹೊಸ ಬದಲಾವಣೆಗಳಿಗೆ ಹೇಗೆ ತಮಗೆ ತಾವೇ ಸಜ್ಜುಗೊಳಿಸಿಕೊಳ್ಳುವುದು? ಹೇಗೆ ಹೊಸ ಪಠ್ಯಕ್ರಮಗಳನ್ನು ನಿರ್ವಹಿಸುವುದು ಎಂಬ ಪ್ರಶ್ನೆಗಳು ಮೂಡಬಹುದು.

ಮಾನ್ಯರೇ,

ಹಲವು ಪ್ರಶ್ನೆಗಳು ನಿಮ್ಮಲ್ಲೂ ಮೂಡಬಹುದು ಮತ್ತು ನೀವು ಆ ಬಗ್ಗೆ ಚರ್ಚೆಗಳನ್ನೂ ಮಾಡಬಹುದು. ಬಹುತೇಕ ಈ ಪ್ರಶ್ನೆಗಳು ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದವು. ಅವು ಹೇಗೆಂದರೆ ಯಾವ ರೀತಿ ಪಠ್ಯಕ್ರಮವನ್ನು ಸಿದ್ಧಪಡಿಸುವುದು?, ಸ್ಥಳೀಯ ಭಾಷೆಗಳಲ್ಲಿ ಹೇಗೆ ಪಠ್ಯಕ್ರಮ ಮತ್ತು ವಿಷಯವನ್ನು ರೂಪಿಸುವುದು?, ಗ್ರಂಥಾಲಯಗಳಿಗೆ ಸಂಬಂಧಿಸಿದಂತೆ ಶಿಕ್ಷಣದ ಆನ್ ಲೈನ್ ಮತ್ತು ಡಿಜಿಟಲ್ ಪಠ್ಯವನ್ನು ಸಿದ್ಧಪಡಿಸಲು ನೀತಿಯಡಿ ಉದ್ದೇಶಿಸಲಾಗಿದ್ದು, ಅದು ಹೇಗೆ ರೂಪುಗೊಳ್ಳುತ್ತದೆ. ಸಂಪನ್ಮೂಲಗಳ ಕೊರತೆಯಲ್ಲಿ ನಾವು ನಮ್ಮ ಗುರಿಗಳನ್ನು ತಲುಪುತ್ತೇವೆಯೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಸ್ವಾಭಾವಿಕವಾಗಿ ಆಡಳಿತದ ಬಗ್ಗೆ ನಮ್ಮ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಬಹುದು. ಈ ಎಲ್ಲ ಪ್ರಶ್ನೆಗಳು ಅತ್ಯಂತ ಪ್ರಮುಖವಾದವು ಕೂಡ.

ಈ ಎಲ್ಲ ಪ್ರತಿಯೊಂದು ಪ್ರಶ್ನೆಗಳಿಗೆ ಉತ್ತರಿಸಲು ನಾವೆಲ್ಲಾ ಸೇರಿ ಕೆಲಸ ಮಾಡುತ್ತಿದ್ದೇವೆ. ಶಿಕ್ಷಣ ಸಚಿವಾಲಯದಲ್ಲಿ ನಿರಂತರ ಸಮಾಲೋಚನೆಗಳು ನಡೆಯುತ್ತಿವೆ. ಎಲ್ಲ ರಾಜ್ಯಗಳಲ್ಲಿನ ಸಂಬಂಧಿಸಿದವರ ಪ್ರತಿಯೊಂದು ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಮುಕ್ತವಾಗಿ ಆಲಿಸಲಾಗುತ್ತಿದೆ. ಅಂತಿಮವಾಗಿ ನಾವೆಲ್ಲರೂ ಸೇರಿ ಸಂದೇಹಗಳು ಮತ್ತು ಆತಂಕಗಳನ್ನು ನಿವಾರಿಸಬೇಕಾಗಿದೆ. ದೂರದೃಷ್ಟಿಯ ಸರಳೀಕರಣದೊಂದಿಗೆ ಈ ನೀತಿಯನ್ನು ರೂಪಿಸಲಾಗಿದ್ದು, ಅದೇ ರೀತಿ ಅದರ ಅನುಷ್ಠಾನಕ್ಕೂ ಕೂಡ ನಾವು ಅತ್ಯಂತ ಗರಿಷ್ಠ ಪ್ರಮಾಣದ ಸರಳತೆಯನ್ನು ಪ್ರದರ್ಶಿಸಬೇಕಿದೆ.

ಈ ಶಿಕ್ಷಣ ನೀತಿ ಕೇವಲ ಸರ್ಕಾರದ ಶಿಕ್ಷಣ ನೀತಿಯಲ್ಲ, ಇದು ದೇಶದ ಶಿಕ್ಷಣ ನೀತಿ. ಹೇಗೆ ವಿದೇಶಾಂಗ ಮತ್ತು ರಕ್ಷಣಾ ನೀತಿಗಳು ರಾಷ್ಟ್ರದ ನೀತಿಗಳಾಗಿರಲಿವೆಯೋ ಹಾಗೂ ಯಾವುದೇ ಸರ್ಕಾರಕ್ಕೆ ಸಂಬಂಧಿಸಿದ್ದಾಗಿರುವುದಿಲ್ಲವೋ ಅಂತೆಯೇ ಈ ಶಿಕ್ಷಣ ನೀತಿ ಕೂಡ ದೇಶಕ್ಕೆ ಸಂಬಂಧಿಸಿದ್ದಾಗಿದ್ದು, ಯಾವುದೇ ಸರ್ಕಾರವಿದ್ದರೂ ಅಥವಾ ದೇಶವನ್ನು ಯಾರೇ ಆಳುತ್ತಿದ್ದರೆ ಎಂಬುದು ಮುಖ್ಯವಲ್ಲ. 30 ವರ್ಷಗಳ ನಂತರ ಈ ಶಿಕ್ಷಣ ನೀತಿಯನ್ನು ರೂಪಿಸಲಾಗಿದ್ದು, ಇದು ದೇಶದ ಆಶೋತ್ತರಗಳನ್ನು ಪ್ರತಿಬಿಂಬಿಸಲಿದೆ.

ಮಾನ್ಯರೇ, ಕ್ಷಿಪ್ರವಾಗಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಮಗ್ರ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ತಂತ್ರಜ್ಞಾನ ನಮ್ಮ ಗ್ರಾಮಗಳಿಗೂ ವಿಸ್ತರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ದೇಶದ ಅತ್ಯಂತ ಕಡುಬಡವರಿಗೂ ಅದು ಲಭ್ಯವಾಗುತ್ತಿರುವುದರಿಂದ, ದುರ್ಬಲರು, ಹಿಂದುಳಿದವರು ಮತ್ತು ಬುಡಕಟ್ಟು ಸಮುದಾಯದವರಿಗೂ ಸಹ ಮಾಹಿತಿ ಲಭ್ಯವಾಗುತ್ತಿದ್ದು, ಅವರ ಜ್ಞಾನವೂ ಸಹ ಹೆಚ್ಚುತ್ತಿದೆ.

ನಾನು ಗಮನಿಸುತ್ತಿದ್ದೇನೆ ಇಂದು ನಮ್ಮ ಹಲವು ಯುವ ಮಿತ್ರರು ತಮ್ಮ ವಿಡಿಯೋ ಬ್ಲಾಗ್ ಮೂಲಕ ವಿಡಿಯೋ ಸ್ಟ್ರೀಮಿಂಗ್ ಚಾನಲ್ ಗಳನ್ನು ನಡೆಸುತ್ತಿದ್ದಾರೆ ಮತ್ತು ಪ್ರತಿಯೊಂದು ವಿಷಯದ ಕುರಿತು ಉತ್ತಮ ಬೋಧನೆಯನ್ನು ಲಭ್ಯವಾಗುವಂತೆ ಮಾಡಿದ್ದಾರೆ. ಇದು ಬಡ ಬಾಲಕ ಅಥವಾ ಬಾಲಕಿ ಊಹಿಸಿಕೊಳ್ಳಲು ಸಹ ಸಾಧ್ಯವಿರಲಿಲ್ಲ. ತಂತ್ರಜ್ಞಾನ ಸುಲಭವಾಗಿ ತಲುಪುತ್ತಿರುವುದರಿಂದ ಪ್ರಾದೇಶಿಕ ಮತ್ತು ಸಾಮಾಜಿಕ ಅಸಮತೋಲನ ಸಮಸ್ಯೆ ಅತ್ಯಂತ ಪರಿಣಾಮಕಾರಿಯಾಗಿ ತಗ್ಗುತ್ತಿದೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಗರಿಷ್ಠ ಪ್ರಮಾಣದ ತಾಂತ್ರಿಕ ಪರಿಹಾರಗಳ ಬಳಕೆಯನ್ನು ಉತ್ತೇಜಿಸುವುದು ನಮ್ಮ ಹೊಣೆಗಾರಿಕೆಯಾಗಿದೆ.

ಮಾನ್ಯರೇ,

ಯಾವುದೇ ವ್ಯವಸ್ಥೆ, ಅದರ ಒಳಗೊಳ್ಳುವಿಕೆ ಮತ್ತು ಸೇರ್ಪಡೆಯಿಂದಾಗಿ ಅದು ಪರಿಣಾಮಕಾರಿಯಾಗುತ್ತದೆ ಮತ್ತು ಅದು ಆಡಳಿತ ಪದ್ಧತಿಯನ್ನು ಅವಲಂಬಿಸಿದೆ. ಈ ನೀತಿ ಕೂಡ ಆಡಳಿತಕ್ಕೆ ಸಂಬಂಧಿಸಿದಂತೆ ಅದೇ ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಉನ್ನತ ಶಿಕ್ಷಣದ ಪ್ರತಿಯೊಂದು ಅಂಶಗಳಲ್ಲಿಯೂ ಅದು ಶೈಕ್ಷಣಿಕವಾಗಿರಬಹುದು, ತಾಂತ್ರಿಕ ಅಥವಾ ವೃತ್ತಿಪರವಾಗಿರಬಹುದು, ಶಿಕ್ಷಣದ ಪ್ರತಿಯೊಂದು ವಿಧಾನದಲ್ಲೂ ಸೋಮಾರಿತನವನ್ನು ಹೋಗಲಾಡಿಸಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಆಡಳಿತಾತ್ಮಕ ಹಂತಗಳನ್ನು ಕನಿಷ್ಠಗೊಳಿಸುವ ಮೂಲಕ ಉತ್ತಮ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India leads globally in renewable energy; records highest-ever 31.25 GW non-fossil addition in FY 25-26: Pralhad Joshi.

Media Coverage

India leads globally in renewable energy; records highest-ever 31.25 GW non-fossil addition in FY 25-26: Pralhad Joshi.
NM on the go

Nm on the go

Always be the first to hear from the PM. Get the App Now!
...
Prime Minister lauds Suprabhatam programme on Doordarshan for promoting Indian traditions and values
December 08, 2025

The Prime Minister has appreciated the Suprabhatam programme broadcast on Doordarshan, noting that it brings a refreshing start to the morning. He said the programme covers diverse themes ranging from yoga to various facets of the Indian way of life.

The Prime Minister highlighted that the show, rooted in Indian traditions and values, presents a unique blend of knowledge, inspiration and positivity.

The Prime Minister also drew attention to a special segment in the Suprabhatam programme- the Sanskrit Subhashitam. He said this segment helps spread a renewed awareness about India’s culture and heritage.

The Prime Minister shared today’s Subhashitam with viewers.

In a separate posts on X, the Prime Minister said;

“दूरदर्शन पर प्रसारित होने वाला सुप्रभातम् कार्यक्रम सुबह-सुबह ताजगी भरा एहसास देता है। इसमें योग से लेकर भारतीय जीवन शैली तक अलग-अलग पहलुओं पर चर्चा होती है। भारतीय परंपराओं और मूल्यों पर आधारित यह कार्यक्रम ज्ञान, प्रेरणा और सकारात्मकता का अद्भुत संगम है।

https://www.youtube.com/watch?v=vNPCnjgSBqU”

“सुप्रभातम् कार्यक्रम में एक विशेष हिस्से की ओर आपका ध्यान आकर्षित करना चाहूंगा। यह है संस्कृत सुभाषित। इसके माध्यम से भारतीय संस्कृति और विरासत को लेकर एक नई चेतना का संचार होता है। यह है आज का सुभाषित…”