ಶೇರ್
 
Comments
ಕಳೆದ 8 ವರ್ಷಗಳಲ್ಲಿ ನಾವು ನಮ್ಮ ಪ್ರಜಾಪ್ರಭುತ್ವವನ್ನು ಬಲಿಷ್ಠ ಮತ್ತು ಚೇತರಿಸಿಕೊಳ್ಳುವಂತೆ ಮಾಡಿದ್ದೇವೆ: ಪ್ರಧಾನಿ ಮೋದಿ
ಭಾರತದಲ್ಲಿ ಮೂಲಸೌಕರ್ಯ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ನಿರ್ಮಿಸುವಲ್ಲಿ ಜಪಾನ್ ಪ್ರಮುಖ ಪಾಲುದಾರ: ಪ್ರಧಾನಿ ಮೋದಿ
ಭಾರತವು ತಂತ್ರಜ್ಞಾನ-ನೇತೃತ್ವದ, ವಿಜ್ಞಾನ-ನೇತೃತ್ವದ, ನಾವೀನ್ಯತೆ-ನೇತೃತ್ವದ ಮತ್ತು ಪ್ರತಿಭೆ-ನೇತೃತ್ವದ ಭವಿಷ್ಯದ ಬಗ್ಗೆ ಆಶಾವಾದಿಯಾಗಿದೆ: ಪ್ರಧಾನಿ ಮೋದಿ

ಭಾರತ್ ಮಾತಾ ಕಿ ಜೈ,

ಭಾರತ್ ಮಾತಾ ಕಿ ಜೈ,

ನಾನು ಪ್ರತಿ ಬಾರಿ ಜಪಾನ್‌ಗೆ ಭೇಟಿ ನೀಡಿದಾಗಲೂ, ನಿಮ್ಮ ಪ್ರೀತಿ ಮತ್ತು ವಾತ್ಸಲ್ಯ ಸಮಯದೊಂದಿಗೆ ಬೆಳೆಯುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಹಲವಾರು ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಅನಿವಾಸಿ ಭಆರತೀಯರು ಇದ್ದಾರೆ. ಜಪಾನ್‌ ಭಾಷೆ, ಅದರ ಉಡುಗೆ ತೊಡುಗೆ, ಸಂಸ್ಕೃತಿ, ಆಹಾರವು ಒಂದು ರೀತಿಯಲ್ಲಿ ನಿಮ್ಮ ಜೀವನದ ಒಂದು ಭಾಗವಾಗಿದೆ. ಅದು ಜೀವನ ಭಾಗವಾಗಲು ಒಂದು ಕಾರಣವೆಂದರೆ ಭಾರತೀಯ ಸಮುದಾಯದ ಸಂಸ್ಕೃತಿಯು ಯಾವಾಗಲೂ ಅಂತರ್ಗತವಾಗಿರುತ್ತದೆ. ಆದರೆ ಅದೇ ಸಮಯದಲ್ಲಿ, ಜಪಾನ್ ತನ್ನ ಸಂಪ್ರದಾಯ, ಅದರ ಮೌಲ್ಯಗಳು, ಈ ಭೂಮಿಯ ಮೇಲಿನ ತನ್ನ ಜೀವನದ ಬಗ್ಗೆ ಹೊಂದಿರುವ ಬದ್ಧತೆ ಬಹಳ ಆಳವಾದದ್ದು. ಮತ್ತೆ ಈಗ ಎರಡೂ ರಾಷ್ಟ್ರಗಳು ಭೇಟಿಯಾಗಿವೆ, ಹಾಗಾಗಿ ಆತ್ಮೀಯತೆಯ ಭಾವನೆ ಬರುವುದು ಸಹಜ.

ಸ್ನೇಹಿತರೆ,

ನೀವು ಇಲ್ಲಿ ನೆಲೆಸಿದ್ದೀರಿ, ಬಹಳಷ್ಟು ಜನರು ಇಲ್ಲೇ ಜೀವನ ಕಟ್ಟಿಕೊಂಡಿದ್ದೀರಿ. ಇಲ್ಲಿ ಅನೇಕರು ಮದುವೆಯಾಗಿದ್ದಾರೆಂದು ನನಗೆ ತಿಳಿದಿದೆ. ಆದರೆ ಇಲ್ಲಿ ಇಷ್ಟು ವರ್ಷ ಬದುಕಿದ್ದರೂ ಭಾರತದ ಬಗೆಗಿನ ನಿಮ್ಮ ಪೂಜ್ಯಭಾವನೆ ಅಚ್ಚಳಿಯದೆ ಉಳಿದುಕೊಂಡಿರುವುದಂತೂ ಸತ್ಯ. ಭಾರತಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಬಂದಾಗ, ನೀವು ಸಂತೋಷದಲ್ಲಿ ಮುಳುಗುತ್ತೀರಿ. ಮತ್ತು ಕೆಲವು ಕೆಟ್ಟ ಸುದ್ದಿಗಳು ಬಂದಾಗ, ಅದು ನಿಮಗೆ ತುಂಬಾ ದುಃಖವನ್ನುಂಟು ಮಾಡುತ್ತದೆ. ಇವುಗಳು ನಮ್ಮ ಜನರ ಗುಣಲಕ್ಷಣಗಳಾಗಿವೆ, ನಾವು ಕೆಲಸ ಮಾಡುವ ಭೂಮಿಗೆ ನಾವು ಹೊಂದಿಕೊಳ್ಳುತ್ತೇವೆ, ನಾವು ಆಳವಾದ ಸಂಪರ್ಕ ಹೊಂದಿದ್ದೇವೆ. ಆದರೆ ನಮ್ಮ ಮಾತೃಭೂಮಿಯ ಬೇರುಗಳೊಂದಿಗೆ ಎಂದಿಗೂ ಸಂಪರ್ಕ ಕಳೆದುಕೊಳ್ಳುವುದಿಲ್ಲ. ಇದೇ ನಮ್ಮ ದೊಡ್ಡ ಶಕ್ತಿಯಾಗಿದೆ.

ಸ್ನೇಹಿತರೆ,

ಸ್ವಾಮಿ ವಿವೇಕಾನಂದರು ತಮ್ಮ ಐತಿಹಾಸಿಕ ಭಾಷಣಕ್ಕಾಗಿ ಷಿಕಾಗೊಗೆ ಹೋಗುತ್ತಿದ್ದಾಗ, ಅದಕ್ಕೂ ಮೊದಲು ಅವರು ಜಪಾನ್‌ಗೆ ಭೇಟಿ ನೀಡಿದ್ದರು. ಜಪಾನ್ ಅವರ ಮನಸ್ಸು ಮತ್ತು ಹೃದಯದಲ್ಲಿ ಆಳವಾದ ಪ್ರಭಾವ ಬೀರಿತು. ಜಪಾನ್ ಜನರ ದೇಶಪ್ರೇಮ, ಜಪಾನಿಗರ ಆತ್ಮವಿಶ್ವಾಸ, ಅವರ ಶಿಸ್ತು, ಸ್ವಚ್ಛತೆಯ ಬಗ್ಗೆ ಜಪಾನ್ ಜನರ ಜಾಗೃತಿಯನ್ನು ವಿವೇಕಾನಂದರು ಮುಕ್ತಕಂಠದಿಂದ ಹೊಗಳಿದ್ದರು. ಗುರುದೇವ್ ರವೀಂದ್ರನಾಥ್ ಟ್ಯಾಗೋರ್ ಅವರು ಜಪಾನ್ ಅನ್ನು ಆ ಸಮಯದಲ್ಲೇ ಪ್ರಾಚೀನ ಮತ್ತು ಆಧುನಿಕ ದೇಶ ಎಂದು ಹೇಳುತ್ತಿದ್ದರು. "ಜಪಾನ್ ಅನಾದಿ ಕಾಲದ ಪೂರ್ವದಿಂದಲೂ ಅರಳುವ ಕಮಲದಂತೆ ಹೊರಬಂದಿದೆ, ಎಲ್ಲಾ ಸಮಯದಲ್ಲೂ ಅದು ಹೊರಹೊಮ್ಮಿ, ತನ್ನ ದೃಢವಾದ ಹಿಡಿತವನ್ನು ಇಟ್ಟುಕೊಂಡಿದೆ". ಕಮಲದ ಹೂವಿನಂತೆ ತನ್ನ ಬೇರುಗಳಿಗೆ ಗಟ್ಟಿಯಾಗಿ ಅಂಟಿಕೊಂಡಿದೆ. ಅದೇ ಭವ್ಯತೆಯೊಂದಿಗೆ, ಅದು ಎಲ್ಲೆಡೆ ಸೌಂದರ್ಯವನ್ನು ಹೆಚ್ಚಿಸುತ್ತಿದೆ. ನಮ್ಮ ಈ ಮಹಾನ್ ಪುರುಷರ ಇಂತಹ ಧಾರ್ಮಿಕ ಭಾವನೆಗಳು ಜಪಾನ್‌ನೊಂದಿಗಿನ ನಮ್ಮ ಸಂಬಂಧದ ಆಳವನ್ನು ವಿವರಿಸುತ್ತದೆ.

ಸ್ನೇಹಿತರೆ,

ಈ ಬಾರಿ ನಾನು ಜಪಾನ್‌ಗೆ ಬಂದಾಗ, ನಾವು ನಮ್ಮ ರಾಜತಾಂತ್ರಿಕ ಸಂಬಂಧಗಳ 70 ವರ್ಷಗಳನ್ನು, 7 ದಶಕಗಳನ್ನು ಆಚರಿಸುತ್ತಿದ್ದೇವೆ. ನೀವು ಇಲ್ಲಿರುವಾಗ ನೀವೇ ಅನುಭವಿಸುತ್ತಿರುವಿರಿ. ಭಾರತದಲ್ಲೂ ಸಹ, ಭಾರತ ಮತ್ತು ಜಪಾನ್ ಸಹಜ ಪಾಲುದಾರರು ಎಂದು ಎಲ್ಲರೂ ಭಾವಿಸುತ್ತಾರೆ. ಭಾರತದ ಅಭಿವೃದ್ಧಿ ಪಯಣದಲ್ಲಿ ಜಪಾನ್ ಪ್ರಮುಖ ಪಾತ್ರ ವಹಿಸಿದೆ. ಜಪಾನ್ ಜೊತೆಗಿನ ನಮ್ಮ ಬಾಂಧವ್ಯ ಅನ್ಯೋನ್ಯ, ಆಧ್ಯಾತ್ಮಿಕತೆ, ಸಹಕಾರ, ಒಗ್ಗಟ್ಟಿನಿಂದ ಕೂಡಿದೆ. ಆದ್ದರಿಂದ, ಒಂದು ರೀತಿಯಲ್ಲಿ, ಈ ಸಂಬಂಧವು ನಮ್ಮ ಶಕ್ತಿಯಾಗಿದೆ, ಈ ಸಂಬಂಧವು ಗೌರವಾನ್ವಿತವಾಗಿದೆ. ಈ ಸಂಬಂಧವು ಜಗತ್ತಿಗೆ ಸಾಮಾನ್ಯ ಸಂಕಲ್ಪವಾಗಿದೆ. ಜಪಾನ್‌ನೊಂದಿಗಿನ ನಮ್ಮ ಸಂಬಂಧವು ಬುದ್ಧನ, ಬುದ್ಧಿವಂತಿಕೆ, ಜ್ಞಾನದ ಸಂಬಂಧವಾಗಿದೆ. ನಮ್ಮಲ್ಲಿ ಮಹಾಕಾಲ್ ಇದೆ, ಆದ್ದರಿಂದ ಜಪಾನ್‌ನಲ್ಲಿ ಡೈಕೊಕುಟೆನ್ ಇದೆ. ನಮಗೆ ಬ್ರಹ್ಮನಿದ್ದರೆ, ನಮಗೆ ಜಪಾನ್‌ನಲ್ಲಿ ಬೊಂಟೆನ್ ಇದ್ದಾರೆ. ನಮ್ಮ ತಾಯಿ ಸರಸ್ವತಿ, ಆದ್ದರಿಂದ ನಾವು ಜಪಾನ್‌ನಲ್ಲಿ ಬೆಂಜೈಟೆನ್ ಹೊಂದಿದ್ದೇವೆ. ನಮ್ಮ ಮಹಾದೇವಿಯೇ ಲಕ್ಷ್ಮಿ, ಹಾಗಾಗಿ ಜಪಾನಿನಲ್ಲಿ ಕಿಚಿಜೋಟೆನ್ ಇದ್ದಾರೆ. ಹಾಗಾಗಿ ನಮ್ಮಲ್ಲಿ ಗಣೇಶ ಮತ್ತು ಜಪಾನಿನಲ್ಲಿ ಕಾಂಗೀಟೆನ್ ಇದೆ. ಜಪಾನ್‌ನಲ್ಲಿ ಝೆನ್ ಸಂಪ್ರದಾಯವಿದ್ದರೆ, ನಾವು ಧ್ಯಾನವನ್ನು ಆತ್ಮದೊಂದಿಗೆ ಜೀವನಕ್ರಿಯೆಯ ಮಾಧ್ಯಮವೆಂದು ಪರಿಗಣಿಸುತ್ತೇವೆ.

 

21ನೇ ಶತಮಾನದಲ್ಲಿಯೂ ನಾವು ಭಾರತ ಮತ್ತು ಜಪಾನ್‌ನ ಈ ಸಾಂಸ್ಕೃತಿಕ ಸಂಬಂಧಗಳನ್ನು ಸಂಪೂರ್ಣ ಬದ್ಧತೆಯಿಂದ ಮುನ್ನಡೆಸುತ್ತಿದ್ದೇವೆ. ನಾನು ಕಾಶಿಯ ಸಂಸದನಾಗಿದ್ದಾಗ ಜಪಾನ್‌  ಮಾಜಿ ಪ್ರಧಾನಿ ಶಿಂಜೊ ಅಬೆ ಅವರು ಕಾಶಿಗೆ ಭೇಟಿ ನೀಡಿದ್ದರು ಎಂದು ಬಹಳ ಹೆಮ್ಮೆಯಿಂದ ಹೇಳಲು ಬಯಸುತ್ತೇನೆ. ಕಾಶಿಗೆ ಅದ್ಭುತವಾದ ಉಡುಗೊರೆ ನೀಡಿದರು. ಕಾಶಿಯಲ್ಲಿ ಜಪಾನ್‌ ಸಹಯೋಗದಲ್ಲಿ ಮಾಡಿದ ರುದ್ರಾಕ್ಷಿ ಮತ್ತು ಒಂದು ಕಾಲದಲ್ಲಿ ನನ್ನ ಕೆಲಸದ ಸ್ಥಳವಾಗಿದ್ದ ಅಹಮದಾಬಾದ್ ನಲ್ಲಿ ಝೆನ್ ಉದ್ಯಾನ ಮತ್ತು ಕೈಜೆನ್ ಅಕಾಡೆಮಿ ನಮ್ಮನ್ನು ತುಂಬಾ ಹತ್ತಿರಕ್ಕೆ ತರುವ ಉಡುಗೊರೆಗಳಾಗಿವೆ. ನೀವೆಲ್ಲರೂ ಜಪಾನಿನಲ್ಲಿರುವಾಗ ಈ ಐತಿಹಾಸಿಕ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದ್ದೀರಿ.

ಸ್ನೇಹಿತರೆ,

ಭಗವಾನ್ ಬುದ್ಧ ತೋರಿಸಿದ ಮಾರ್ಗವನ್ನು ಅನುಸರಿಸಲು ಇಂದಿನ ಜಗತ್ತಿಗೆ ಬಹುಶಃ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಿದೆ. ಹಿಂಸಾಚಾರ, ಅರಾಜಕತೆ, ಭಯೋತ್ಪಾದನೆ ಅಥವಾ ಹವಾಮಾನ ಬದಲಾವಣೆಯಾಗಿರಲಿ, ಪ್ರಪಂಚದ ಪ್ರತಿಯೊಂದು ಸವಾಲಿನಿಂದ ಮಾನವೀಯತೆಯನ್ನು ಉಳಿಸುವ ಮಾರ್ಗ ಇದು. ಭಗವಾನ್ ಬುದ್ಧನ ನೇರ ಆಶೀರ್ವಾದವನ್ನು ಹೊಂದಲು ಭಾರತವು ಅದೃಷ್ಟಶಾಲಿಯಾಗಿದೆ. ಅವರ ಆಲೋಚನೆಗಳನ್ನು ಅಳವಡಿಸಿಕೊಂಡು ಭಾರತವು ಮಾನವೀಯತೆಯ ಸೇವೆಯನ್ನು ಮುಂದುವರಿಸಿದೆ. ಸವಾಲುಗಳು ಎಷ್ಟೇ ಇರಲಿ, ಎಷ್ಟೇ ದೊಡ್ಡದಾಗಿರಲಿ, ಭಾರತವು ಅವುಗಳಿಗೆ ಪರಿಹಾರಗಳನ್ನು ಹುಡುಕುತ್ತಿದೆ. ಕೊರೊನಾ 100 ವರ್ಷಗಳಲ್ಲಿ ವಿಶ್ವದಲ್ಲೇ ದೊಡ್ಡ ಬಿಕ್ಕಟ್ಟು ಉಂಟುಮಾಡಿದೆ. ಇದು ನಮ್ಮ ಮುಂದೆ ಇದೆ. ಅದು ಪ್ರಾರಂಭವಾದಾಗ, ಮುಂದೆ ಏನಾಗುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ. ಆರಂಭದಲ್ಲಿ, ಇದು ಎಲ್ಲೋ ಇದೆ ಎಂದು ತೋರುತ್ತಿತ್ತು. ಇದನ್ನು ಹೇಗೆ ನಿರ್ವಹಿಸಬೇಕೆಂದು ಯಾರಿಗೂ ತಿಳಿದಿರಲಿಲ್ಲ, ಲಸಿಕೆ ಇರಲಿಲ್ಲ, ಲಸಿಕೆ ಯಾವಾಗ ಬರುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಲಸಿಕೆ ಬರುತ್ತದೋ ಇಲ್ಲವೋ ಎಂಬ ಅನುಮಾನವೂ ಇತ್ತು. ಸುತ್ತಲೂ ಅನಿಶ್ಚಿತ ವಾತಾವರಣವಿತ್ತು. ಅಂತಹ ಸಂದರ್ಭಗಳಲ್ಲಿಯೂ ಭಾರತವು ವಿಶ್ವದ ದೇಶಗಳಿಗೆ ಲಸಿಕೆಗಳನ್ನು ಕಳುಹಿಸಿತು. ಲಸಿಕೆ ಲಭ್ಯವಾದಾಗ, ಭಾರತವು ಮೇಡ್ ಇನ್ ಇಂಡಿಯಾ ಲಸಿಕೆಯನ್ನು ತನ್ನ ಕೋಟಿಗಟ್ಟಲೆ ನಾಗರಿಕರಿಗೆ ಮತ್ತು ವಿಶ್ವದ ನೂರಕ್ಕೂ ಹೆಚ್ಚು ದೇಶಗಳಿಗೆ ಪೂರೈಸಿತು.

 

 

ಸ್ನೇಹಿತರೆ,

ಭಾರತವು ತನ್ನ ಆರೋಗ್ಯ ಸೇವೆಗಳನ್ನು ಇನ್ನಷ್ಟು ಸುಧಾರಿಸಲು ಅಭೂತಪೂರ್ವ ಹೂಡಿಕೆಗಳನ್ನು ಮಾಡುತ್ತಿದೆ. ದೂರದ ಪ್ರದೇಶಗಳಲ್ಲೂ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಲು ದೇಶದಲ್ಲಿ ಲಕ್ಷಗಟ್ಟಲೆ ಹೊಸ ಕ್ಷೇಮ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ಒ) ಭಾರತದ ಆಶಾ ಕಾರ್ಯಕರ್ತೆಯರಿಗೆ, ಆಶಾ ಸಹೋದರಿಯರಿಗೆ ಡೈರೆಕ್ಟರ್ ಜನರಲ್ ಅವರ ಗ್ಲೋಬಲ್ ಹೆಲ್ತ್ ಲೀಡರ್ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ನೀವು ಬಹುಶಃ ಇಂದು ಕೇಳಿರಬಹುದು, ಅದನ್ನು ತಿಳಿದಾಗ ನಿಮಗೆ ಸಂತೋಷವಾಗುತ್ತದೆ. ಭಾರತದ ಲಕ್ಷಾಂತರ ಆಶಾ ಸಹೋದರಿಯರು ಹಳ್ಳಿಯೊಳಗೆ ತಾಯಿಯ ಆರೈಕೆಯಿಂದ ಲಸಿಕೆ, ಪೋಷಣೆಯಿಂದ ಸ್ವಚ್ಛತೆಯವರೆಗೆ ದೇಶದ ಆರೋಗ್ಯ ಅಭಿಯಾನವನ್ನು ವೇಗಗೊಳಿಸುತ್ತಿದ್ದಾರೆ. ಇಂದು, ನಮ್ಮ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾನು ಅವರಿಗೆ ವಂದಿಸುತ್ತೇನೆ.

ಸ್ನೇಹಿತರೆ,

ಇಂದು ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತ ಹೇಗೆ ಸಹಾಯ ಮಾಡುತ್ತಿದೆ. ಇದಕ್ಕೆ ಇನ್ನೊಂದು ಉದಾಹರಣೆ ಪರಿಸರ. ಹವಾಮಾನ ಬದಲಾವಣೆ ಇಂದು ಜಗತ್ತು ಎದುರಿಸುತ್ತಿರುವ ಪ್ರಮುಖ ಬಿಕ್ಕಟ್ಟಾಗಿದೆ. ನಾವು ಭಾರತದಲ್ಲೂ ಈ ಸವಾಲನ್ನು ನೋಡಿದ್ದೇವೆ, ಆ ಸವಾಲಿನಿಂದ ಪರಿಹಾರ ಕಂಡುಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳಲು ನಾವು ಮುಂದೆ ಸಾಗಿದ್ದೇವೆ. ಭಾರತವು 2070ರ ವೇಳೆಗೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನುನಿವ್ವಳ ಶೂನ್ಯಕ್ಕೆ ನಿಯಂತ್ರಿಸಲು ಬದ್ಧತೆ ಹಾಕಿಕೊಂಡಿದೆ. ನಾವು ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದಂತಹ ಜಾಗತಿಕ ಉಪಕ್ರಮಗಳನ್ನು ಮುನ್ನಡೆಸಿದ್ದೇವೆ. ಹವಾಮಾನ ಬದಲಾವಣೆಯಿಂದಾಗಿ, ಇಡೀ ವಿಶ್ವದ ಮೇಲೆ ನೈಸರ್ಗಿಕ ವಿಕೋಪದ ಅಪಾಯವೂ ಹೆಚ್ಚಾಗಿದೆ. ಈ ವಿಪತ್ತುಗಳ ಅಪಾಯಗಳು ಮತ್ತು ಅವುಗಳಿಂದ ಉಂಟಾಗುವ ಮಾಲಿನ್ಯವನ್ನು ಜಪಾನ್‌ ಜನರಿಗಿಂತ ಬೇರೆ ಯಾರು ಅರ್ಥ ಮಾಡಿಕೊಳ್ಳಲಾರರು. ಜಪಾನ್ ಸಹ ನೈಸರ್ಗಿಕ ವಿಕೋಪಗಳ ವಿರುದ್ಧ ಹೋರಾಡುವ ಬಲಿಷ್ಠ ಸಾಮರ್ಥ್ಯವನ್ನು ನಿರ್ಮಿಸಿದೆ. ಜಪಾನ್‌ ಜನರು ಈ ಸವಾಲುಗಳನ್ನು ಎದುರಿಸಿದ ರೀತಿ,  ಪ್ರತಿಯೊಬ್ಬರಿಗೂ ಕಲಿಯುವಂಥದ್ದು. ಅದು ಪರಿಹಾರ ಕಂಡುಹಿಡಿದಿದೆ, ಸೂಕ್ತ ವ್ಯವಸ್ಥೆಗಳನ್ನು ಸಹ ಅಭಿವೃದ್ಧಿಪಡಿಸಿದೆ. ಆ ರೀತಿಯಲ್ಲಿ ವ್ಯಕ್ತಿಗಳಿಗೂ ತರಬೇತಿ ನೀಡಿದೆ.  ಇದು ಸ್ವತಃ ಪ್ರಶಂಸನೀಯವಾಗಿದೆ. ಈ ದಿಸೆಯಲ್ಲಿ ಭಾರತವು ವಿಕೋಪ ಮೂಲಸೌಕರ್ಯ ನಿರ್ವಹಣಾ ಮೈತ್ರಿಕೂಟ(ಸಿಡಿಆರ್ ಐ)ದಲ್ಲಿ ಮುನ್ನಡೆ ಸಾಧಿಸಿದೆ.

ಸ್ನೇಹಿತರೆ,

ಭಾರತವು ಇಂದು, ಹಸಿರು ಭವಿಷ್ಯ, ಹಸಿರು ಉದ್ಯೋಗ ಸೃಷ್ಟಿಯ ಸ್ಪಷ್ಟ ಮಾರ್ಗಸೂಚಿಗಾಗಿ ಅತ್ಯಂತ ವೇಗವಾಗಿ ಚಲಿಸುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿಗೆ ವ್ಯಾಪಕ ಉತ್ತೇಜನ ನೀಡಲಾಗುತ್ತಿದೆ. ಹಸಿರು ಹೈಡ್ರೋಜನ್ ಅನ್ನು ಹೈಡ್ರೋಕಾರ್ಬನ್‌ಗಳಿಗೆ ಪರ್ಯಾಯವಾಗಿ ಬಳಸಲು ವಿಶೇಷ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಜೈವಿಕ ಇಂಧನಕ್ಕೆ ಸಂಬಂಧಿಸಿದ ಸಂಶೋಧನೆಗಳು ಮತ್ತು ಮೂಲಸೌಕರ್ಯಗಳ ನಿರ್ಮಾಣಕ್ಕೆ ಬಹುದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಈ ದಶಕದ ಅಂತ್ಯದ ವೇಳೆಗೆ ಭಾರತವು ತನ್ನ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇಕಡ 50ರಷ್ಟು ಉರವಲುಯೇತರ(ನಾನ್-ಫಾಸಿಲ್) ಇಂಧನದಿಂದ ಪೂರೈಸಲು ಸಂಕಲ್ಪ ಮಾಡಿದೆ.

ಸ್ನೇಹಿತರೆ,

ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇದು ಭಾರತೀಯರ ವಿಶ್ವಾಸವಾಗಿದೆ. ಈ ಆತ್ಮವಿಶ್ವಾಸ ಇಂದು ಪ್ರತಿಯೊಂದು ಕ್ಷೇತ್ರದಲ್ಲೂ, ಪ್ರತಿ ದಿಕ್ಕಿನಲ್ಲೂ, ಪ್ರತಿ ಹೆಜ್ಜೆಯಲ್ಲೂ ಗೋಚರಿಸುತ್ತಿದೆ. ಕಳೆದ 2 ವರ್ಷಗಳಲ್ಲಿ ಜಾಗತಿಕ ಪೂರೈಕೆ ಸರಪಳಿ ಹಾನಿಗೊಳಗಾದ ರೀತಿಯಲ್ಲಿ, ಸಂಪೂರ್ಣ ಪೂರೈಕೆ ಸರಪಳಿ ಅಸ್ತವ್ಯಸ್ತವಾಗಿದೆ. ಇಂದು, ಇದು ಇಡೀ ಜಗತ್ತಿಗೆ ಬಹು ದೊಡ್ಡ ಬಿಕ್ಕಟ್ಟಾಗಿದೆ. ಭವಿಷ್ಯದಲ್ಲಿ ಅಂತಹ ಪರಿಸ್ಥಿತಿ ತಪ್ಪಿಸಲು, ನಾವು ಸ್ವಾವಲಂಬನೆಯ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದ್ದೇವೆ. ಸ್ವಾವಲಂಬನೆಯ ಈ ಸಂಕಲ್ಪ ಮಾತ್ರ ಅಲ್ಲ. ಭಾರತ. ಸ್ಥಿರವಾದ, ವಿಶ್ವಾಸಾರ್ಹ ಜಾಗತಿಕ ಪೂರೈಕೆ ಸರಪಳಿಗಾಗಿ ದೊಡ್ಡ ಹೂಡಿಕೆ ದೇಶಯಾಗಿದೆ. ಇಂದು, ಭಾರತವು ಕೆಲಸ ಮಾಡುವ ವೇಗ ಮತ್ತು ಪ್ರಮಾಣವು ಅಭೂತಪೂರ್ವವಾಗಿದೆ ಎಂದು ಇಡೀ ವಿಶ್ವವೇ ಅರಿತುಕೊಳ್ಳುತ್ತಿದೆ. ಭಾರತವು ತನ್ನ ಮೂಲಸೌಕರ್ಯ, ಸಾಂಸ್ಥಿಕ ಸಾಮರ್ಥ್ಯ ವರ್ಧನೆಗೆ ಒತ್ತು ನೀಡುತ್ತಿರುವ ಪ್ರಮಾಣವು ಅಭೂತಪೂರ್ವವಾಗಿದೆ ಎಂದು ಇಡೀ ವಿಶ್ವವೇ ಇಂದು ನೋಡುತ್ತಿದೆ. ನಮ್ಮ ಈ ಸಾಮರ್ಥ್ಯವನ್ನು ಬೆಳೆಸುವಲ್ಲಿ ಜಪಾನ್ ಪ್ರಮುಖ ಪಾಲುದಾರನಾಗಿರುವುದು ನನಗೆ ಖುಷಿ ತಂದಿದೆ. ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು, ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್, ಸಮರ್ಪಿತ ಸರಕು ಸಾಗಣೆ ಕಾರಿಡಾರ್, ಇವು ಭಾರತ-ಜಪಾನ್ ಸಹಕಾರಕ್ಕೆ ಉತ್ತಮ ಉದಾಹರಣೆಗಳಾಗಿವೆ.

ಸ್ನೇಹಿತರೆ,

ಭಾರತದಲ್ಲಿ ಆಗುತ್ತಿರುವ ಬದಲಾವಣೆಗಳಲ್ಲಿ ಇನ್ನೂ ಒಂದು ವಿಶೇಷವಿದೆ. ನಾವು ಭಾರತದಲ್ಲಿ ಬಲವಾದ, ಚೇತರಿಕೆ ಸ್ವಭಾವದ ಮತ್ತು ಜವಾಬ್ದಾರಿಯುತ ಪ್ರಜಾಪ್ರಭುತ್ವ ಹೊಂದಿದ್ದೇವೆ. ಕಳೆದ 8 ವರ್ಷಗಳಲ್ಲಿ, ನಾವು ಅದನ್ನು ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯ ಮೂಲವನ್ನಾಗಿ ಮಾಡಿದ್ದೇವೆ. ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಭಾಗವಾಗಿದ್ದೇವೆ ಎಂದು ಎಂದಿಗೂ ಹೆಮ್ಮೆಪಡದ ನಮ್ಮ ಸಮಾಜದ ಜನರು, ಇಂದು ಭಾರತದ ಬೃಹತ್ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಸೇರುತ್ತಿದ್ದಾರೆ. ಪ್ರತಿ ಬಾರಿ, ಪ್ರತಿ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದೆ. ಇಲ್ಲಿ ನಮ್ಮ ತಾಯಿ ಮತ್ತು ಸಹೋದರಿಯರು ಸಂತೋಷಪಡುತ್ತಾರೆ. ನೀವು ಭಾರತದ ಚುನಾವಣೆಗಳನ್ನು ಸೂಕ್ಷ್ಮವಾಗಿ ನೋಡಿದರೆ, ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಮತದಾನ ಮಾಡುತ್ತಿರುವುದು ಗಮನಕ್ಕೆ ಬರುತ್ತದೆ. ಭಾರತದಲ್ಲಿ ಪ್ರಜಾಪ್ರಭುತ್ವವು ಸಾಮಾನ್ಯ ನಾಗರಿಕರ ಹಕ್ಕುಗಳ ಬಗ್ಗೆ ಎಷ್ಟು ಜಾಗೃತವಾಗಿದೆ, ಅದು ಎಷ್ಟು ಸಮರ್ಪಿತವಾಗಿದೆ ಮತ್ತು ಅದು ಪ್ರತಿಯೊಬ್ಬ ನಾಗರಿಕನನ್ನು ಎಷ್ಟು ಶಕ್ತಿಯುತಗೊಳಿಸುತ್ತಿದೆ ಎಂಬುದೇ ಸಾಕ್ಷಿಯಾಗಿದೆ.

ಸ್ನೇಹಿತರೆ,

ಮೂಲಭೂತ ವೈಶಿಷ್ಟ್ಯಗಳೊಂದಿಗೆ, ನಾವು ಭಾರತದ ಆಶಯಕ್ಕೆ ಹೊಸ ಆಯಾಮವನ್ನು ನೀಡುತ್ತಿದ್ದೇವೆ. ಭಾರತದಲ್ಲಿ, ಅಂತರ್ಗತ ವ್ಯವಸ್ಥೆ, ಸೋರಿಕೆಮುಕ್ತ ಆಡಳಿತ, ಅಂದರೆ, ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ವಿತರಣಾ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತಿದೆ. ಇದರಿಂದಾಗಿ ಅರ್ಹರು ಯಾವುದೇ ತೊಂದರೆಗಳಿಲ್ಲದೆ, ಯಾವುದೇ ಶಿಫಾರಸುಗಳಿಲ್ಲದೆ, ಯಾವುದೇ ಭ್ರಷ್ಟಾಚಾರವಿಲ್ಲದೆ ಸರ್ಕಾರದದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ತಂತ್ರಜ್ಞಾನದ ಬಳಕೆ ಮತ್ತು ನೇರ ನಗದು ವರ್ಗಾವಣೆ ಯೋಜನೆಯು ಕೊರೊನಾ ಸಂಕಷ್ಟ ಅವಧಿಯಲ್ಲಿ ಕಳೆದ 2 ವರ್ಷಗಳಲ್ಲಿ ಕಾಡಿನಲ್ಲಿ ವಾಸಿಸುವ ನಮ್ಮ ಜನರು, ವಿಶೇಷವಾಗಿ ಭಾರತದ ದೂರದ ಹಳ್ಳಿಗಳಲ್ಲಿ ವಾಸಿಸುವವರ ಹಕ್ಕುಗಳನ್ನು ರಕ್ಷಿಸಲು ಸಹಾಯ ಮಾಡಿದೆ.

ಸ್ನೇಹಿತರೆ,

ಭಾರತದ ಬ್ಯಾಂಕಿಂಗ್ ವ್ಯವಸ್ಥೆಯು ಈ ಕಷ್ಟಕರ ಸಂದರ್ಭಗಳಲ್ಲಿಯೂ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಒಂದು ಕಾರಣವೆಂದರೆ ಭಾರತದಲ್ಲಿ ಬಂದಿರುವ ಡಿಜಿಟಲ್ ಕ್ರಾಂತಿ. ಡಿಜಿಟಲ್ ನೆಟ್‌ವರ್ಕ್ ಸೃಷ್ಟಿಸಿದ ಶಕ್ತಿ, ಅದು ಈ ಫಲಿತಾಂಶವನ್ನು ಪಡೆಯುತ್ತಿದೆ. ವಿಶ್ವಾದ್ಯಂತ ಡಿಜಿಟಲ್ ಮತ್ತು ನಗದುರಹಿತ ವಹಿವಾಟುಗಳ ಬಗ್ಗೆ ತಿಳಿದುಕೊಳ್ಳಲು ನೀವು ಸಂತೋಷಪಡುತ್ತೀರಿ. ಜಪಾನ್‌ನಲ್ಲಿಯೂ ನೀವು ತಂತ್ರಜ್ಞಾನದ ಬಗ್ಗೆ ಚೆನ್ನಾಗಿ ತಿಳಿದಿದ್ದೀರಿ. ಆದರೆ ಭಆರತದ ಡಿಜಿಟಲ್ ಕ್ರಾಂತಿಯ ಬಗ್ಗೆ ಕೇಳಿದರೆ ನಿಮಗೆ ಸಂತೋಷವಾಗುತ್ತದೆ, ಆಶ್ಚರ್ಯವಾಗುತ್ತದೆ ಮತ್ತು ಹೆಮ್ಮೆ ಪಡುತ್ತೀರಿ, ಇಡೀ ಪ್ರಪಂಚದಲ್ಲಿ ನಡೆಯುತ್ತಿರುವ ಎಲ್ಲಾ ಡಿಜಿಟಲ್ ವಹಿವಾಟುಗಳಲ್ಲಿ, ಅವುಗಳಲ್ಲಿ 40 ಪ್ರತಿಶತ ಭಾರತದಲ್ಲಿ ನಡೆಯುತ್ತಿವೆ. ಕೊರೊನಾ ಆರಂಭಿಕ ದಿನಗಳಲ್ಲಿ, ಎಲ್ಲವೂ ಸ್ಥಗಿತವಾದಾಗ, ಆ ಬಿಕ್ಕಟ್ಟಿನ ಅವಧಿಯಲ್ಲೂ, ಭಾರತ ಸರ್ಕಾರವು ಒಂದು ಬಟನ್‌ ಸಹಾಯದಿಂದ ಒಂದೇ ಬಾರಿಗೆ ಕೋಟಿಗಟ್ಟಲೆ ಭಾರತೀಯರನ್ನು ಸುಲಭವಾಗಿ ತಲುಪಿತು. ಯಾರಿಗೆ ಸಹಾಯ ಮಾಡಬೇಕಿತ್ತೋ ಅದನ್ನು ಅವರು ಪಡೆದರು, ಸಮಯಕ್ಕೆ ಅದನ್ನು ಪಡೆದರು ಮತ್ತು ಈ ಬಿಕ್ಕಟ್ಟನ್ನು ಎದುರಿಸುವ ಶಕ್ತಿಯನ್ನು ಸಹ ಪಡೆದರು. ಭಾರತದಲ್ಲಿಂದು ಜನರ ನೇತೃತ್ವದ ಆಡಳಿತವು ನಿಜವಾದ ಅರ್ಥದಲ್ಲಿ ಕೆಲಸ ಮಾಡುತ್ತಿದೆ. ಆಡಳಿತದ ಈ ಮಾದರಿಯು ವಿತರಣೆಯನ್ನು ಪರಿಣಾಮಕಾರಿಯಾಗಿಸುತ್ತಿದೆ. ಇದು ಪ್ರಜಾಪ್ರಭುತ್ವದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ನಂಬಿಕೆಗೆ ದೊಡ್ಡ ಕಾರಣವಾಗಿದೆ.

ಸ್ನೇಹಿತರೆ,

ಇಂದು ಭಾರತವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಹಾಗಾದರೆ ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಎಲ್ಲಿಗೆ ಕೊಂಡೊಯ್ಯಲು ನಾವು ಯೋಜಿಸುತ್ತಿದ್ದೇವೆ, ಅಂದರೆ ಸ್ವಾತಂತ್ರ್ಯದ 100ನೇ ವರ್ಷದೊಳಗೆ, ನಾವು ಯಾವ ಎತ್ತರವನ್ನು ತಲುಪಲು ಬಯಸುತ್ತೇವೆ? ಇಂದು ಭಾರತವು ಆ ಅಭಿವೃದ್ಧಿ ಮಾರ್ಗಸೂಚಿ ಸಿದ್ಧಪಡಿಸುವಲ್ಲಿ ನಿರತವಾಗಿದೆ. ಸ್ನೇಹಿತರೇ, ಈ ಸ್ವಾತಂತ್ರ್ಯದ ಅಮೃತ ಕಾಲವು ಭಾರತದ ಸಮೃದ್ಧಿಯ ಉದಾತ್ತ ಇತಿಹಾಸವನ್ನು ಬರೆಯಲಿದೆ. ಇವು ನಾವು ತೆಗೆದುಕೊಂಡ ನಿರ್ಣಯಗಳು ಎಂದು ನನಗೆ ತಿಳಿದಿದೆ. ಈ ನಿರ್ಣಯಗಳು ಸ್ವತಃ ದೊಡ್ಡದಾಗಿವೆ. ಆದರೆ ಸ್ನೇಹಿತರೇ, ನಾನು ಬೆಳೆಸಿದ ಪಾಲನೆ, ನಾನು ಪಡೆದ ಮೌಲ್ಯಗಳು ನಮಗೆ  ಅಭ್ಯಾಸವಾಗಿ ಮಾರ್ಪಟ್ಟಿವೆ. ನಾನು ಬೆಣ್ಣೆಯ ಮೇಲೆ ಕೆತ್ತನೆ ಮಾಡುವುದನ್ನು ಇಷ್ಟಪಡುವುದಿಲ್ಲ, ನಾನು ಕಲ್ಲಿನ ಮೇಲಿನ ಕೆತ್ತನೆಯನ್ನು ಆನಂದಿಸುತ್ತೇನೆ. ಆದರೆ ಸ್ನೇಹಿತರೇ, ಪ್ರಶ್ನೆ ಮೋದಿ ಬಗ್ಗೆ ಅಲ್ಲ. ಇಂದು ಭಾರತದ 130 ಕೋಟಿ ಜನರು ಮತ್ತು ನಾನು ಜಪಾನ್‌ನಲ್ಲಿ ಕುಳಿತಿರುವ ಜನರ ದೃಷ್ಟಿಯಲ್ಲಿ ಅದನ್ನೇ ನೋಡುತ್ತಿದ್ದೇನೆ, 130 ಕೋಟಿ ದೇಶವಾಸಿಗಳ ಆತ್ಮವಿಶ್ವಾಸ, 130 ಕೋಟಿ ಸಂಕಲ್ಪ, 130 ಕೋಟಿ ಕನಸುಗಳು ಮತ್ತು ಈ 130 ಕೋಟಿ ಕನಸುಗಳನ್ನು ನನಸಾಗಿಸುವ ಈ ಅಗಾಧ ಶಕ್ತಿಯನ್ನು ನೀಡುವುದು ಖಚಿತ. ಪರಿಣಾಮವಾಗಿ ನನ್ನ ಸ್ನೇಹಿತರೇ, ನಾವು ನಮ್ಮ ಕನಸಿನ ಭಾರತವನ್ನು ನೋಡುತ್ತೇವೆ. ಇಂದು ಭಾರತವು ತನ್ನ ನಾಗರಿಕತೆ, ಸಂಸ್ಕೃತಿ, ಸಂಸ್ಥೆಗಳಲ್ಲಿ ಕಳೆದುಹೋದ ನಂಬಿಕೆಯನ್ನು ಮರಳಿ ಪಡೆಯುತ್ತಿದೆ. ಇಂದು ವಿಶ್ವಾದ್ಯಂತ ಪ್ರತಿಯೊಬ್ಬ ಭಾರತೀಯನೂ ಭಾರತದ ಬಗ್ಗೆ ಬಹಳ ಹೆಮ್ಮೆಯಿಂದ, ಕಣ್ಣುಗಳನ್ನು ತೆರೆದು ಮಾತನಾಡುತ್ತಿದ್ದಾರೆ. ಅಂತಹ ಬದಲಾವಣೆ ಬಂದಿದೆ. ಇಂದು ಇಲ್ಲಿಗೆ ಬರುವ ಮೊದಲು, ಭಾರತದ ಹಿರಿಮೆಯಿಂದ ಪ್ರಭಾವಿತರಾಗಿ ತಮ್ಮ ಜೀವನವನ್ನು ಕಳೆಯುತ್ತಿರುವ ಕೆಲವು ಜನರನ್ನು ನೋಡುವ ಅವಕಾಶ ನನಗೆ ಸಿಕ್ಕಿದೆ. ಬಹಳ ಹೆಮ್ಮೆಯಿಂದ ಅವರು ಯೋಗದ ಬಗ್ಗೆ ವಿಷಯಗಳನ್ನು ಹೇಳುತ್ತಿದ್ದರು. ಅವರು ಯೋಗಕ್ಕೆ ಮೀಸಲಾಗಿದ್ದಾರೆ. ಜಪಾನ್‌ನಲ್ಲಿ ಯೋಗದ ಬಗ್ಗೆ ಕೇಳದವರೇ ಇಲ್ಲ. ನಮ್ಮ ಆಯುರ್ವೇದ, ನಮ್ಮ ಸಾಂಪ್ರದಾಯಿಕ ಔಷಧ ಪದ್ಧತಿ, ಇತ್ತೀಚಿನ ದಿನಗಳಲ್ಲಿ ನಮ್ಮ ಸಾಂಬಾರ ಪದಾರ್ಥಗಳಿಗೆ ದೂರದ ಸ್ಥಳಗಳಿಂದ ಬಹಳ ಬೇಡಿಕೆಯಿದೆ. ಜನರು ನಮ್ಮ ಅರಿಶಿನಕ್ಕೆ ಆರ್ಡರ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ನಮ್ಮ ಖಾದಿ ಇಂದು ಮತ್ತೆ ಪುನರುಜ್ಜೀವನಗೊಂಡಿದೆ. ಖಾದಿ ಜಾಗತಿಕವಾಗುತ್ತಿದೆ. ಇದು ಬದಲಾಗುತ್ತಿರುವ ಭಾರತದ ಚಿತ್ರಣ ಸ್ನೇಹಿತರೇ. ಇಂದಿನ ಭಾರತವು ತನ್ನ ಗತಕಾಲದ ಬಗ್ಗೆ ಎಷ್ಟು ಹೆಮ್ಮೆಪಡುತ್ತದೆಯೋ, ಅದು ತಂತ್ರಜ್ಞಾನ ನೇತೃತ್ವದ, ವಿಜ್ಞಾನ ನೇತೃತ್ವದ, ನಾವೀನ್ಯತೆ ನೇತೃತ್ವದ ಮತ್ತು ಪ್ರತಿಭೆ ನೇತೃತ್ವದ ಭವಿಷ್ಯದ ಬಗ್ಗೆ ಅಷ್ಟೇ ಆಶಾವಾದಿಯಾಗಿದೆ. ಜಪಾನ್‌ನಿಂದ ಪ್ರಭಾವಿತರಾದ ಸ್ವಾಮಿ ವಿವೇಕಾನಂದರು ಒಮ್ಮೆ ಹೇಳಿದ್ದರು, ನಾವು ಭಾರತೀಯ ಯುವಕರು ನಮ್ಮ ಜೀವನದಲ್ಲಿ ಒಮ್ಮೆಯಾದರೂ ಜಪಾನ್‌ಗೆ ಭೇಟಿ ನೀಡಬೇಕು. ಈ ವಾಕ್ಯಗಳನ್ನು ಓದಿ ನೀವು ಜಪಾನ್‌ಗೆ ಬಂದಿದ್ದೀರಿ ಎಂದು ನಾನು ನಂಬುವುದಿಲ್ಲ, ಆದರೆ ವಿವೇಕಾನಂದರು ಭಾರತದ ಜನರಿಗೆ ಹೇಳಿದ್ದರು... ಸಹೋದರ, ನೀವು ಒಮ್ಮೆ ಹೋಗಿ ಜಪಾನ್ ಹೇಗಿದೆ ಎಂದು ನೋಡಬೇಕು. ಅವರ ಈ ವಾಕ್ಯವನ್ನು ನಾನು ನಂಬುತ್ತೇನೆ.

ಸ್ನೇಹಿತರೆ,

ಇಂದಿನ ಯುಗಕ್ಕೆ ಅನುಗುಣವಾಗಿ ವಿವೇಕಾನಂದ ಜೀ ಅಂದು ಹೇಳಿದ್ದ ಅದೇ ಸದುದ್ದೇಶವನ್ನು ನಾನಿಂದು ಪ್ರಸ್ತಾಪಿಸುತ್ತಿದ್ದು, ಜಪಾನ್‌ನ ಪ್ರತಿಯೊಬ್ಬ ಯುವಕನು ತನ್ನ ಜೀವನದಲ್ಲಿ ಒಮ್ಮೆಯಾದರೂ ಭಾರತಕ್ಕೆ ಭೇಟಿ ನೀಡಬೇಕು ಎಂದು ನಾನು ಹೇಳಲು ಬಯಸುತ್ತೇನೆ. ನಿಮ್ಮ ಕೌಶಲ್ಯದಿಂದ, ನಿಮ್ಮ ಪ್ರತಿಭೆಯಿಂದ, ನಿಮ್ಮ ಉದ್ಯಮಶೀಲತೆಯಿಂದ ನೀವು ಜಪಾನ್‌ನ ಈ ಪವಿತ್ರ ಭೂಮಿಯನ್ನು ಮಂತ್ರಮುಗ್ಧಗೊಳಿಸಿದ್ದೀರಿ. ನೀವು ಜಪಾನ್‌ನಲ್ಲಿ ಭಾರತೀಯತೆಯ ಬಣ್ಣಗಳನ್ನು, ಭಾರತದ ಸಾಧ್ಯತೆಗಳನ್ನು ನಿರಂತರವಾಗಿ ಪರಿಚಯಿಸಬೇಕು. ಅದು ನಂಬಿಕೆ ಅಥವಾ ಸಾಹಸವಾಗಿರಲಿ, ಭಾರತವು ಜಪಾನ್‌ಗೆ ಸಹಜ ಪ್ರವಾಸಿ ತಾಣವಾಗಿದೆ. ಆದ್ದರಿಂದ ಭಾರತಕ್ಕೆ ಬನ್ನಿ, ಭಾರತವನ್ನು ನೋಡಿ, ಭಾರತದೊಂದಿಗೆ ತೊಡಗಿಸಿಕೊಳ್ಳಿ, ಈ ಸಂಕಲ್ಪದೊಂದಿಗೆ ನಾನು ಜಪಾನ್‌ನಲ್ಲಿರುವ ಪ್ರತಿಯೊಬ್ಬ ಭಾರತೀಯ ಅದರೊಂದಿಗೆ ತೊಡಗಿಸಿಕೊಳ್ಳುವಂತೆ  ವಿನಂತಿಸುತ್ತೇನೆ. ನಿಮ್ಮ ಅರ್ಥಪೂರ್ಣ ಪ್ರಯತ್ನದಿಂದ ಭಾರತ-ಜಪಾನ್ ಸ್ನೇಹವು ಹೊಸ ಎತ್ತರ ಪಡೆಯುತ್ತದೆ ಎಂಬುದು ನನಗೆ ಖಾತ್ರಿಯಿದೆ. ಈ ಅದ್ಭುತ ಸ್ವಾಗತವನ್ನು ನಾನು ನೋಡುತ್ತಿದ್ದೆ, ಸುತ್ತಲೂ ಉತ್ಸಾಹ, ಘೋಷಣೆಗಳು, ಕಾತುರ ಮತ್ತು ನಿಮ್ಮಲ್ಲಿ ನೀವು ಬದುಕಲು ಪ್ರಯತ್ನಿಸುತ್ತಿರುವ ಭಾರತ, ಇದು ನಿಜವಾಗಿಯೂ ನನ್ನ ಹೃದಯ ಸ್ಪರ್ಶಿಸಿದೆ. ನಿಮ್ಮ ಈ ಪ್ರೀತಿ, ವಾತ್ಸಲ್ಯ ಸದಾ ಉಳಿಯಲಿ. ನೀವು ಇಲ್ಲಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ. ಕೆಲವು ಸ್ನೇಹಿತರು ಟೋಕಿಯೊ ಮಾತ್ರವಲ್ಲದೆ ಹೊರಗಿನಿಂದಲೂ ಇಲ್ಲಿಗೆ ಬಂದಿದ್ದಾರೆ ಎಂದು ನನಗೆ ತಿಳಿದುಬಂತು. ನಾನು ಹಿಂದೆ ಜಪಾನ್ ನ ಬೇರೆ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಈ ಬಾರಿ ಹೋಗಲಾಗುತ್ತಿಲ್ಲ, ನೀವೇ ಎಲ್ಲರೂ ಇಲ್ಲಿಗೆ ಬಂದಿದ್ದೀರಿ. ಆದರೆ ನಿಮ್ಮೆಲ್ಲರನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿರುವುದು ಇಷ್ಟವಾಗಿದೆ. ಮತ್ತೊಮ್ಮೆ ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ಹೃದಯಾಂತರಾಳದಿಂದ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಭಾರತ್ ಮಾತಾ ಕೀ ಜೈ, ಭಾರತ್ ಮಾತಾ ಕೀ ಜೈ, ತುಂಬು ಧನ್ಯವಾದಗಳು.

Explore More
Today's India is an aspirational society: PM Modi on Independence Day

ಜನಪ್ರಿಯ ಭಾಷಣಗಳು

Today's India is an aspirational society: PM Modi on Independence Day
India at 75: How aviation sector took wings with UDAN

Media Coverage

India at 75: How aviation sector took wings with UDAN
...

Nm on the go

Always be the first to hear from the PM. Get the App Now!
...
PM thanks World Leaders for their greetings on 76th Independence Day
August 15, 2022
ಶೇರ್
 
Comments

The Prime Minister, Shri Narendra Modi has thanked World Leaders for their greetings and wishes on the occasion of 76th Independence Day.

In response to a tweet by the Prime Minister of Australia, the Prime Minister said;

"Thank you for your Independence Day wishes, PM Anthony Albanese. The friendship between India and Australia has stood the test of time and has benefitted both our peoples greatly."

In response to a tweet by the President of Maldives, the Prime Minister said;

"Grateful for your wishes on our Independence Day, President @ibusolih. And for your warm words on the robust India-Maldives friendship, which I second wholeheartedly."

In response to a tweet by the President of France, the Prime Minister said;

"Touched by your Independence Day greetings, President @EmmanuelMacron. India truly cherishes its close relations with France. Ours is a bilateral partnership for global good."

In response to a tweet by the Prime Minister of Bhutan, the Prime Minister said;

"I thank @PMBhutan Lotay Tshering for his Independence Day wishes. All Indians cherish our special relationship with Bhutan - a close neighbour and a valued friend."

In response to a tweet by the Prime Minister of Commonwealth of Dominica, the Prime Minister said;

"Thank you, PM Roosevelt Skerrit, for your greetings on our Independence Day. May the bilateral relations between India and the Commonwealth of Dominica continue to grow in the coming years."

In response to a tweet by the Prime Minister of Mauritius, the Prime Minister said;

"Honoured to receive your Independence Day wishes, PM Pravind Kumar Jugnauth. India and Mauritius have very deep cultural linkages. Our nations are also cooperating in a wide range of subjects for the mutual benefit of our citizens."

In response to a tweet by the President of Madagascar, the Prime Minister said;

"Thank you President Andry Rajoelina for wishing us on our Independence Day. As a trusted developmental partner, India will always work with Madagascar for the welfare of our people."

In response to a tweet by the Prime Minister of Nepal, the Prime Minister said;

"Thank you for the wishes, PM @SherBDeuba. May the India-Nepal friendship continue to flourish in the years to come."