ಶೇರ್
 
Comments
SVAMITVA Scheme helps in making rural India self-reliant: PM Modi
Ownership of land and house plays a big role in the development of the country. When there is a record of property, citizens gain confidence: PM
SVAMITVA Scheme will help in strengthening the Panchayati Raj system for which efforts are underway for the past 6 years: PM

ನಾನು ತಮ್ಮ ಮನೆಗಳ ಸ್ವಾಮಿತ್ವ ಪತ್ರ ಅಥವಾ ಆಸ್ತಿ ಪತ್ರಗಳನ್ನು ಪಡೆದ ಮತ್ತು ಡೌನ್ ಲೋಡ್ ಮಾಡಿಕೊಂಡಿರುವ 1 ಲಕ್ಷ ಜನರನ್ನು ಅಭಿನಂದಿಸುತ್ತೇನೆ. ಇಂದು ನೀವು ನಿಮ್ಮ ಕುಟುಂಬದವರ ಜೊತೆ ಕುಳಿತಿರುವಾಗ , ಸಂಜೆ ಜೊತೆಯಲ್ಲಿ ಆಹಾರ ಸೇವಿಸುತ್ತಿರುವಾಗ , ನನಗೆ ಖಂಡಿತವಾಗಿಯೂ ಗೊತ್ತಿದೆ, ನೀವು ಹಿಂದೆಂದೂ ಇಲ್ಲದ ಸಂತೋಷವನ್ನು ಅನುಭವಿಸಿರುತ್ತೀರಿ ಎಂಬುದಾಗಿ . ನೀವು ಈಗ ಹೆಮ್ಮೆಯಿಂದ ನಿಮ್ಮ ಮಕ್ಕಳಿಗೆ ಹೇಳಬಹುದು “ ನೋಡಿ ಈಗ ಇದು ನಿಮ್ಮ ಆಸ್ತಿ, ನಿಮಗೆ ಇದು ಅನುವಂಶಿಕವಾಗಿ ಬರುತ್ತದೆ” ಎಂಬುದಾಗಿ. ಅನುವಂಶೀಯವಾಗಿ ಬಂದ ಆಸ್ತಿಯ ಬಗ್ಗೆ ನಮ್ಮಲ್ಲಿ ದಾಖಲೆಗಳು ಇರಲಿಲ್ಲ. ಆದರೆ ಈ ಪತ್ರಗಳನ್ನು ಪಡೆದ ಬಳಿಕ ನಾವು ಸಶಕ್ತರಾಗಿದ್ದೇವೆ ಎಂಬ ಭಾವನೆ ನಿಮ್ಮದಾಗಿದೆ. ಈ ಸಂಜೆ ಎಂಬುದು ನಿಮಗೆ ಬಹಳ ಹರ್ಷದ ಸಂಗತಿ. ಹೊಸ ಕನಸುಗಳನ್ನು ಕಟ್ಟಲು ಮತ್ತು ಮಕ್ಕಳೊಂದಿಗೆ ಹೊಸ ಕನಸುಗಳ ಬಗ್ಗೆ ಚರ್ಚಿಸಲು ಇದು ಅವಕಾಶ. ಆದುದರಿಂದ ನಾನು ನಿಮ್ಮೆಲ್ಲರನ್ನೂ ಇಂದು ನೀವು ಹಕ್ಕುಗಳನ್ನು ಪಡೆದುದಕ್ಕಾಗಿ ಅಭಿನಂದಿಸುತ್ತೇನೆ.

ಈ ಹಕ್ಕು ಒಂದು ರೀತಿಯಲ್ಲಿ ಕಾನೂನು ದಾಖಲೆ. ನಿಮ್ಮ ಮನೆ ನಿಮಗೆ ಸೇರಿದ್ದು; ನೀವು ನಿಮ್ಮ ಮನೆಯಲ್ಲಿ ವಾಸಿಸುತ್ತೀರಿ. ಈ ಮನೆಯಲ್ಲಿ ಏನು ಮಾಡಬೇಕು ಎಂಬುದನ್ನು ನೀವು ನಿರ್ಧರಿಸುತ್ತೀರಿ. ಇದರಲ್ಲಿ ಸರಕಾರವಾಗಲೀ, ನೆರೆ ಹೊರೆಯ ಜನತೆಯಾಗಲೀ ಮಧ್ಯಪ್ರವೇಶಿಸುವುದಿಲ್ಲ. ಈ ಯೋಜನೆ ನಮ್ಮ ದೇಶದ ಗ್ರಾಮಗಳಲ್ಲಿ ಚಾರಿತ್ರಿಕ ಬದಲಾವಣೆಗಳನ್ನು ತರಲಿದೆ.ಇದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿರುತ್ತೇವೆ.

ಇಂದು ಈ ಕಾರ್ಯಕ್ರಮದಲ್ಲಿ , ನನ್ನ ಸಂಪುಟ ಸಹೋದ್ಯೋಗಿಯಾದ ಶ್ರೀ ನರೇಂದ್ರ ಸಿಂಗ್ ಥೋಮರ್ ಜಿ, ಹರ್ಯಾಣಾ ಮುಖ್ಯಮಂತ್ರಿ ಶ್ರೀ ಮನೋಹರ ಲಾಲ್ ಜಿ, ಉಪ ಮುಖ್ಯಮಂತ್ರಿ ಶ್ರೀ ದುಶ್ಯಂತ್ ಚೌತಾಲಾ ಜೀ, ಉತ್ತರಾಖಂಡ ಮುಖ್ಯಮಂತ್ರಿ ಶ್ರೀ ತ್ರಿವೇಂದ್ರ ಸಿಂಗ್ ರಾವತ್ ಜೀ, ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ ಜೀ, ಮಧ್ಯ ಪ್ರದೇಶದ ಮುಖ್ಯ ಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಜೀ, ಹಾಗು ವಿವಿಧ ರಾಜ್ಯಗಳ ಮಂತ್ರಿಗಳು ಮತ್ತು ಸ್ವಾಮಿತ್ವ ಯೋಜನೆಯ ಫಲಾನುಭವಿಗಳು ಇಂದಿಲ್ಲಿ ನಮ್ಮೊಂದಿಗೆ ಹಾಜರಿದ್ದಾರೆ. ನರೇಂದ್ರ ಸಿಂಗ್ ಜೀ ಅವರು ಹೇಳಿರುವಂತೆ 1.25 ಕೋಟಿಗೂ ಅಧಿಕ ಮಂದಿ ದಾಖಲಾತಿ ಮಾಡಿಕೊಂಡು ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಸೇರಿದ್ದಾರೆ. ಇದರರ್ಥ, ಇಂದಿನ ಈ ಸಭೆಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಈ ಸ್ವಾಮಿತ್ವ ಯೋಜನೆ ಎಷ್ಟೊಂದು ಆಕರ್ಷಕ ಮತ್ತು ಎಷ್ಟೊಂದು ಶಕ್ತಿ ಶಾಲಿ ಹಾಗು ಮಹತ್ವದ್ದು ಎಂಬುದಕ್ಕೆ ಸಾಕ್ಷಿಯಾಗಿದೆ!.

ಇಂದು ದೇಶವು ಆತ್ಮ ನಿರ್ಭರ ಭಾರತ್ ಅಭಿಯಾನದ ದಿಕ್ಕಿನಲ್ಲಿ ಇನ್ನೊಂದು ಪ್ರಮುಖ ಹೆಜ್ಜೆಯನ್ನಿಟ್ಟಿದೆ. ಸ್ವಾಮಿತ್ವ ಯೋಜನೆ ಗ್ರಾಮಗಳಲ್ಲಿಯ ನಮ್ಮ ಸಹೋದರಿಯರು ಮತ್ತು ಸಹೋದರರು ಸ್ವಾವಲಂಬಿಯಾಗಲು ಬಹಳ ದೊಡ್ಡ ಸಹಾಯವನ್ನು ಮಾಡುತ್ತದೆ. ಇಂದು ಹರ್ಯಾಣಾ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ, ಮತ್ತು ಉತ್ತರ ಪ್ರದೇಶಗಳ ಸಾವಿರಾರು ಕುಟುಂಬಗಳಿಗೆ ಅವರ ಮನೆಗಳ ಕಾನೂನು ಬದ್ದ ದಾಖಲೆಗಳ ಪತ್ರವನ್ನು ಹಸ್ತಾಂತರಿಸಲಾಗಿದೆ. ಮುಂದಿನ ಮೂರು –ನಾಲ್ಕು ವರ್ಷಗಳಲ್ಲಿ ದೇಶದಲ್ಲಿಯ ಪ್ರತೀ ಗ್ರಾಮದ ಪ್ರತೀ ಮನೆಗಳಿಗೆ ಇಂತಹ ಪ್ರಾಪರ್ಟಿ ಕಾರ್ಡುಗಳನ್ನು ನೀಡಲಾಗುವುದು.

ಮತ್ತು ಸ್ನೇಹಿತರೇ, ಇಂತಹ ದೊಡ್ಡ, ಬೃಹತ್ ಕೆಲಸವನ್ನು ಕೈಗೆತ್ತಿಕೊಂಡಿರುವುದಕ್ಕೆ ನಾನು ಬಹಳ ಸಂತೋಷಗೊಂಡಿದ್ದೇನೆ. ಈ ದಿನ ಬಹಳ ಮಹತ್ವದ್ದು, ಭಾರತದ ಇತಿಹಾಸದಲ್ಲಿಯೂ ಬಹಳ ಮಹತ್ವ ಹೊಂದಿರುವ ದಿನ. ಇಂದು ದೇಶದ ಬಹಳ ಶ್ರೇಷ್ಟ ವ್ಯಕ್ತಿಗಳಾದ ಇಬ್ಬರು ನಾಯಕರು– ಓರ್ವರು ಭಾರತ ರತ್ನ ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಮತ್ತು ಇನ್ನೋರ್ವರು ಭಾರತ ರತ್ನ ನಾನಾಜಿ ದೇಶಮುಖ್ ಅವರ ಜನ್ಮದಿನ. ಈ ಇಬ್ಬರು ಶ್ರೇಷ್ಟ ನಾಯಕರ ಜನ್ಮದಿನಗಳು ಒಂದೇ ದಿನ ಬರುವುದು ಮಾತ್ರವಲ್ಲ, ಈ ಇಬ್ಬರು ನಾಯಕರೂ ಒಂದೇ ಚಿಂತನೆಯನ್ನು ಹೊಂದಿದವರು ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ,ಪ್ರಾಮಾಣಿಕತೆಗಾಗಿ ಹೋರಾಟ , ದೇಶದ ಬಡವರ ಪರ ಕೆಲಸ ಮಾಡಿದ್ದಲ್ಲದೆ ಗ್ರಾಮಗಳ ಕಲ್ಯಾಣದ ಚಿಂತನೆಯನ್ನು ಹಂಚಿಕೊಂಡವರು ಇವರು. ಇಬ್ಬರೂ ಒಂದೇ ಆದರ್ಶಗಳನ್ನು ಹೊಂದಿದ್ದರು ಮತ್ತು ಅವರ ಪ್ರಯತ್ನಗಳೂ ಒಂದೇ ರೀತಿಯವಾಗಿದ್ದವು.

ಜಯಪ್ರಕಾಶ್ ನಾರಾಯಣ್ ಅವರು ಸಮಗ್ರ ಕ್ರಾಂತಿಗೆ ಕರೆ ನೀಡಿದ್ದರು. ಮತ್ತು ಬಿಹಾರದಿಂದ ಅವರ ಕರೆಗೆ ಬಂದ ಪ್ರತಿಸ್ಪಂದನ ; ಜಯಪ್ರಕಾಶ್ ಜೀ ಅವರು ಕಂಡ ಕನಸು, ನಾನಾಜಿ ಅವರು ಗ್ರಾಮಗಳ ಅಭಿವೃದ್ಧಿಗೆ ತೊಡಗುವಂತೆ ಪ್ರೇರೇಪಿಸಿತು. ನಾನಾಜಿ ಅವರಿಗೆ ಜಯಪ್ರಕಾಶ್ ಬಾಬು ಪ್ರೇರಣೆಯ ಮೂಲವಾದರು. ಈಗ ಬಲವಾದ ಕಾಕತಾಳೀಯವಾದ ಸ್ಥಿತಿಯನ್ನು ನೋಡಿ !. ಗ್ರಾಮಗಳ ಮತ್ತು ಬಡವರ ಗಟ್ಟಿ ಧ್ವನಿ ಜಯಪ್ರಕಾಶ್ ಬಾಬು ಮತ್ತು ನಾನಾಜಿ ಅವರು ಪರಸ್ಪರ ಹಂಚಿಕೊಂಡ ಚಿಂತನೆಯಾಗಿತ್ತು.

ನಾನೆಲ್ಲೋ ಓದಿದ್ದೆ, ಡಾ. ಕಲಾಂ ಅವರು ಚಿತ್ರಕೂಟದಲ್ಲಿ ನಾನಾಜಿ ದೇಶಮುಖ್ ರನ್ನು ಭೇಟಿಯಾಗಿದ್ದರು. , ನಾನಾಜಿ ಅವರು ಕಲಾಂ ಅವರಿಗೆ ಈ ಪ್ರದೇಶದ ಡಜನ್ನಿನಷ್ಟು ಹಳ್ಳಿಗಳು ಕಾನೂನು ಖಟ್ಲೆಗಳಿಂದ ಸಂಪೂರ್ಣ ಮುಕ್ತವಾಗಿವೆ ಎಂದಿದ್ದರು, ಅಂದರೆ ಅಲ್ಲಿ ಯಾರ ವಿರುದ್ದವೂ ಎಫ್.ಐ.ಆರ್. ಇರಲಿಲ್ಲ. ಗ್ರಾಮಗಳ ಜನರು ಕಾನೂನು ಖಟ್ಲೆಗಳಲ್ಲಿ, ವಿವಾದಗಳಲ್ಲಿ ಸಿಕ್ಕಿ ಬಿದ್ದರೆ ಅವರೂ ಉದ್ದಾರವಾಗುವುದಿಲ್ಲ , ಸಮಾಜಕ್ಕೂ ಪ್ರಯೋಜನವಾಗುವುದಿಲ್ಲ ಎಂದು ನಾನಾಜಿ ಹೇಳುತ್ತಿದ್ದರು. ಗ್ರಾಮಗಳಲ್ಲಿಯ ವಿವಿಧ ವಿವಾದಗಳನ್ನು ಅಂತ್ಯಗೊಳಿಸಲು ಸ್ವಾಮಿತ್ವ ಯೋಜನೆ ಪ್ರಮುಖ ಮಾಧ್ಯಮವಾಗಲಿದೆ ಎಂದು ನಾನು ನಂಬುತ್ತೇನೆ.

ಸ್ನೇಹಿತರೇ,

ಜಗತ್ತಿನಾದ್ಯಂತ ಬಹಳಷ್ಟು ತಜ್ಞರು ಭೂಮಿಯ ಮಾಲಕತ್ವ ಮತ್ತು ಮನೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳುತ್ತಾರೆ. ಭೂಮಿಯ ದಾಖಲೆ ಇದ್ದರೆ , ಜನರಿಗೆ ಅವರ ಆಸ್ತಿಯ ಮೇಲೆ ಹಕ್ಕು ಇದ್ದರೆ, ಆಗ ಆ ಆಸ್ತಿ ರಕ್ಷಿಸಲ್ಪಡುತ್ತದೆ, ಆ ನಾಗರಿಕರ ಬದುಕು ಕೂಡಾ ರಕ್ಷಿಸಲ್ಪಡುತ್ತದೆ ಮತ್ತು ನಾಗರಿಕರ ಆತ್ಮವಿಶ್ವಾಸ ಹಲವು ಪಟ್ಟು ಹೆಚ್ಚುತ್ತದೆ. ಆಸ್ತಿಯ ದಾಖಲೆ ಇದ್ದಾಗ , ಅಲ್ಲಿ ಹೂಡಿಕೆಗೆ ಬಹಳಷ್ಟು ಅವಕಾಶಗಳು ಇರುತ್ತವೆ, ಹೊಸ ಉದ್ಯಮಗಳು ಮತ್ತು ಹೊಸ ಆರ್ಥಿಕ ಯೋಜನೆಗಳಿಗೆ ಅವಕಾಶವಾಗುತ್ತದೆ.

ಭೂ ದಾಖಲೆ ಇದ್ದರೆ ಅದರ ಆಧಾರದಲ್ಲಿ ಬ್ಯಾಂಕಿನಿಂದ ಸಾಲ ಸುಲಭವಾಗಿ ಸಿಗುತ್ತದೆ. ಮತ್ತು ಉದ್ಯೋಗದ ಹೊಸ ಮಾರ್ಗ ಹಾಗು ಸ್ವ–ಉದ್ಯೋಗದ ಮಾರ್ಗ ತೆರೆದುಕೊಳ್ಳುತ್ತದೆ. ಅದರೆ ಸಮಸ್ಯೆ ಇರುವುದು ಜಗತ್ತಿನಲ್ಲಿ ಮೂರನೇ ಒಂದರಷ್ಟು ಜನರು ಮಾತ್ರವೇ ಇಂದು ಅವರ ಆಸ್ತಿಯ ದಾಖಲೆಗಳನ್ನು ಹೊಂದಿದ್ದಾರೆ. ಜಗತ್ತಿನ ಮೂರನೇ ಎರಡರಷ್ಟು ಜನತೆಗೆ ಅದು ದೊರೆತಿಲ್ಲ. ಇಂತಹ ಸ್ಥಿತಿಯಲ್ಲಿ ಅಭಿವೃದ್ಧಿ ಶೀಲ ದೇಶಗಳಲ್ಲಿ ಒಂದಾದ ಭಾರತದಲ್ಲಿ ಜನರಿಗೆ ಅವರ ಆಸ್ತಿಯ ಬಗ್ಗೆ ನಿಖರವಾದ ದಾಖಲೆ ಇರುವುದು ಬಹಳ ಮುಖ್ಯ. ಮತ್ತು ತಮ್ಮ ವೃದ್ಧಾಪ್ಯದಲ್ಲಿರುವವರಿಗೆ, ಶಿಕ್ಷಿತರಲ್ಲದವರಿಗೆ ಮತ್ತು ಕಠಿಣತಮ ಜೀವನವನ್ನು ಬದುಕಿದವರಿಗೆ ಭರವಸೆಯ , ಆತ್ಮ ವಿಶ್ವಾಸದ ಹೊಸ ಬದುಕನ್ನು ಆರಂಭಿಸಲು ಇದರಿಂದ ಅವಕಾಶವಾಗಲಿದೆ.

ಸ್ವಾಮಿತ್ವ ಯೋಜನೆ ಮತ್ತು ಅದರಡಿ ಲಭ್ಯವಾಗುವ ಪ್ರಾಪರ್ಟಿ ಕಾರ್ಡ್ ಅಥವಾ ಆಸ್ತಿ ದಾಖಲೆಯು ಶೋಷಿತರ, ಅವಕಾಶವಂಚಿತ ಗ್ರಾಮಸ್ಥರ ಕಲ್ಯಾಣವನ್ನು ಖಾತ್ರಿಗೊಳಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆ. ಈ ಆಸ್ತಿ ದಾಖಲೆಯು ಗ್ರಾಮಸ್ಥರಿಗೆ ಯಾವುದೇ ವಿವಾದ ಇಲ್ಲದೆ ಆಸ್ತಿಯನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಸಹಾಯ ಮಾಡುತ್ತದೆ.ಆಸ್ತಿ ದಾಖಲೆ ಪಡೆದ ಬಳಿಕ ಗ್ರಾಮಗಳಲ್ಲಿಯ ಜನರು ತಮ್ಮ ಮನೆಗಳನ್ನು ವಶಪಡಿಸಿಕೊಳ್ಳಬಹುದಾದ ಭಯದಿಂದ ಮುಕ್ತರಾಗುತ್ತಾರೆ ಮತ್ತು ಯಾರಾದರು ಬಂದು ನಕಲಿ ಪತ್ರಗಳನ್ನು ತೋರಿಸುವ ಮೂಲಕ ತಮ್ಮ ಹಕ್ಕುಗಳನ್ನು ಮಂಡಿಸುವುದು ಅಸಾಧ್ಯವಾಗುತ್ತದೆ–ಇಂತಹ ಕೃತ್ಯಗಳೆಲ್ಲ ನಿಲ್ಲುತ್ತವೆ. ಆಸ್ತಿ ದಾಖಲೆ ಪಡೆದ ಬಳಿಕ ,ಗ್ರಾಮೀಣ ಮನೆಗಳಿಗೂ ನಿಮಗೆ ಸುಲಭದಲ್ಲಿ ಬ್ಯಾಂಕುಗಳಿಂದ ಸಾಲವೂ ಲಭಿಸುತ್ತದೆ.

ಸ್ನೇಹಿತರೇ,

ಇಂದು ಹಳ್ಳಿಗಳಲ್ಲಿರುವ ಬಹಳಹ್ಟು ಯುವಜನರು ತಮ್ಮದೇ ಆದ ಏನಾದರೂ ಉದ್ಯಮ ಸ್ಥಾಪಿಸುವ ಆಶಯ ಹೊಂದಿದ್ದಾರೆ, ಅವರು ಸ್ವಾವಲಂಬಿಯಾಗುವ ಆಕಾಂಕ್ಷೆ ಹೊಂದಿದ್ದಾರೆ. ಮನೆ ಹೊಂದಿದ್ದರೂ, ಮತ್ತು ಒಂದು ತುಂಡು ಭೂಮಿ ಹೊಂದಿದ್ದರೂ ಅವರಲ್ಲಿ ಯಾವುದೇ ಕಾಗದ ಪತ್ರಗಳು ಅಥವಾ ಸರಕಾರಿ ದಾಖಲೆಗಳು ಇರಲಿಲ್ಲ. ಯಾರೊಬ್ಬರೂ ಅವರ ಅಳಲನ್ನು ಕೇಳಲು ಸಿದ್ದರಿರಲಿಲ್ಲ. ಅವರಿಗೆ ಯಾವುದೂ ಸಿಗುತ್ತಿರಲಿಲ್ಲ. ಈಗ ಈ ಪತ್ರಗಳು ಅವರ ಹೆಸರಿನಲ್ಲಿವೆ ಮತ್ತು ಅವರು ಸಾಲ ಪಡೆಯಬಹುದು ಮತ್ತು ಅವರು ಅದನ್ನು ಹಕ್ಕು ಎಂದು ಕೇಳಬಹುದು. ಈಗ ಸ್ವಾಮಿತ್ವ ಯೋಜನೆ ಅಡಿಯಲ್ಲಿ ಲಭಿಸಿದ ಆಸ್ತಿ ದಾಖಲೆ ತೋರಿಸಿದರೆ ಬ್ಯಾಂಕುಗಳಿಂದ ಅವರಿಗೆ ಸಾಲ ಪಡೆಯುವುದು ಸುಲಭವಾಗಲಿದೆ.

ಸ್ನೇಹಿತರೇ,

ಈ ಸ್ವಾಮಿತ್ವ ಪತ್ರದ ಇನ್ನೊಂದು ಪ್ರಯೋಜನ ಎಂದರೆ ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ಹೊಸ ಸೌಲಭ್ಯಗಳ ಅಭಿವೃದ್ಧಿ. ಡ್ರೋನ್ ಮ್ಯಾಪಿಂಗ್ ನಂತಹ ಹೊಸ ತಂತ್ರಜ್ಞಾನ ಮತ್ತು ಸರ್ವೇಯ ಜೊತೆ ಪ್ರತೀ ಗ್ರಾಮದ ಭೂದಾಖಲೆಗಳನ್ನು ನಿಖರವಾಗಿ ಮಾಡಬಹುದು. ಮತ್ತು ಯೋಜನೆಯ ಆರಂಭದಲ್ಲಿ ನಾನು ಅಧಿಕಾರಿಗಳ ಜೊತೆ ಮಾತನಾಡುತ್ತಿರುವಾಗ ಗ್ರಾಮಗಳಲ್ಲಿ ನಕ್ಷೆಗಳಿಗಾಗಿ ಮತ್ತು ಮ್ಯಾಪಿಂಗ್ ಗಾಗಿ ಡ್ರೋನ್ ಗಳನ್ನು ಹಾರಿಸುವಾಗ , ಗ್ರಾಮಸ್ಥರು ತಮ್ಮ ಭೂಮಿಯ ಬಗ್ಗೆ ಆಸಕ್ತಿ ವಹಿಸುವುದು ಸಹಜ ಇದರ ಜೊತೆಗೆ ಪ್ರತಿಯೊಬ್ಬರೂ ಡ್ರೋನ್ ಸಹಾಯದಿಂದ ನೋಡುವಾಗ ಇಡೀ ಗ್ರಾಮ ಹೇಗೆ ಕಾಣುತ್ತದೆ ಎಂಬುದರ ಬಗ್ಗೆ ಕುತೂಹಲ ಹೊಂದಿರುತ್ತಿದ್ದರು ಎಂದು ಅಧಿಕಾರಿಗಳು ನನಗೆ ತಿಳಿಸಿದರು. ತಮ್ಮ ಹಳ್ಳಿ, ಗ್ರಾಮ ಹೇಗೆ ಕಾಣುತ್ತದೆ ಎಂಬುದನ್ನು ನೋಡಲು ಅವರು ಇಚ್ಚಿಸುತ್ತಿದ್ದರು. ಮತ್ತು ಅವರಿಗೆ ಅದನ್ನು ಕಡ್ದಾಯವಾಗಿ ಸ್ವಲ್ಪ ಹೊತ್ತು ಮೇಲಿನಿಂದ ತೋರಿಸಬೇಕಿತ್ತು ಎನ್ನುತ್ತಾರೆ ಅಧಿಕಾರಿಗಳು. ಇದು ಗ್ರಾಮಗಳ ಬಗ್ಗೆ ಬಹಳ ಪ್ರೀತಿಯನ್ನು ಅವರಲ್ಲಿ ಉದ್ದೀಪಿಸುತ್ತಿತ್ತು.

ಸಹೋದರರೇ ಮತ್ತು ಸಹೋದರಿಯರೇ,

ಇದುವರೆಗೆ ಹಳ್ಳಿಗಳಲ್ಲಿ, ಗ್ರಾಮಗಳಲ್ಲಿ ಶಾಲೆಗಳನ್ನು ,ಆಸ್ಪತ್ರೆಗಳನ್ನು , ಮಾರುಕಟ್ಟೆಗಳನ್ನು ಅಥವಾ ಇತರ ಸಾರ್ವಜನಿಕ ಸವಲತ್ತುಗಳನ್ನು ಎಲ್ಲಿ ನಿರ್ಮಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಅಧಿಕಾರಿಗಳ ಇಚ್ಚಾನುಸಾರ ಅಥವಾ ಕೆಲವು ಬಲಿಷ್ಟ ವ್ಯಕ್ತಿಗಳ ಇಚ್ಚೆ ಅಲ್ಲಿ ಕೆಲಸ ಮಾಡುತ್ತಿತ್ತು. ಪ್ರತಿಯೊಂದನ್ನು ಅವರವರ ಇಚ್ಚಾನುಸಾರ ಮಾಡಲಾಗುತ್ತಿತ್ತು. ಈಗ ಆ ಮ್ಯಾಪ್ , ನಕ್ಷೆ ಸಿದ್ದವಾಗಿದೆ, ಪ್ರತೀ ನಿರ್ಮಾಣದ ಬಗ್ಗೆ ಸುಲಭದಲ್ಲಿ ನಿರ್ಧಾರ ಕೈಗೊಳ್ಳಬಹುದು. ಅಲ್ಲಿ ಯಾವುದೇ ವಿವಾದ ಇರಲಾರದು. ಮತ್ತು ನಿಖರವಾದ ಭೂ ದಾಖಲೆಗಳಿಂದಾಗಿ ಗ್ರಾಮಗಳ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ಸುಲಭದಲ್ಲಿ ಮಾಡಬಹುದು.

ಸ್ನೇಹಿತರೇ,

ಕಳೆದ 6 ವರ್ಷಗಳಲ್ಲಿ ನಮ್ಮ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಮತ್ತು ಅದನ್ನು ಸ್ವಾಮಿತ್ವ ಯೋಜನೆಯಿಂದಲೂ ಬಲಪಡಿಸಲಾಗುತ್ತಿದೆ. ಗ್ರಾಮ ಪಂಚಾಯತ್ ಗಳಿಗೆ ಹಲವಾರು ಯೋಜನೆಗಳನ್ನು ರೂಪಿಸಬೇಕಾದ ಮತ್ತು ಅನುಷ್ಟಾನಿಸಬೇಕಾದ ಜವಾಬ್ದಾರಿ ಇದೆ. ಈಗ ಗ್ರಾಮಗಳ , ಹಳ್ಳಿಗಳ ಜನತೆ ಅವರ ಹಳ್ಳಿಗಳ ಅಭಿವೃದ್ಧಿಗೆ ಏನು ಬೇಕು ಮತ್ತು ಮತ್ತು ಅಲ್ಲಿಯ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಿದ್ದಾರೆ.

ಈಗ ಪಂಚಾಯತ್ ಗಳ ಎಲ್ಲ ಕೆಲಸವೂ ಆನ್ ಲೈನ್ ಮೂಲಕ ಆಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪಂಚಾಯತ್ ಮಾಡಿದ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಜಿಯೋ –ಟ್ಯಾಗಿಂಗ್ ನ್ನು ಕಡ್ದಾಯ ಮಾಡಲಾಗಿದೆ. ಬಾವಿಯನ್ನು ನಿರ್ಮಾಣ ಮಾಡಲಾಗಿದ್ದರೆ , ನನ್ನ ಕಚೇರಿ ಕೂಡಾ ಯಾವ ಮೂಲೆಯಲ್ಲಿ ಆ ಬಾವಿ ನಿರ್ಮಾಣವಾಗಿದೆ ಎಂಬುದನ್ನು ನೋಡಬಹುದು. ಇದು ತಂತ್ರಜ್ಞಾನದ ಆಶೀರ್ವಾದ. ಮತ್ತು ಅದು ಕಡ್ಡಾಯ. ಶೌಚಾಲಯವನ್ನು ನಿರ್ಮಾಣ ಮಾಡಿದಾಗಲೂ , ಶಾಲೆ ನಿರ್ಮಾಣ ಮಾಡಿದಾಗಲೂ ಜಿಯೋ ಟ್ಯಾಗಿಂಗ್ ಮಾಡಲಾಗುತ್ತದೆ. ಸಣ್ಣ ಅಣೆಕಟ್ಟು ಕಟ್ಟಿದಾಗಲೂ ಜಿಯೋ ಟ್ಯಾಗಿಂಗ್ ಮಾಡಲಾಗುತ್ತದೆ. ಇದರ ಪರಿಣಾಮವಾಗಿ ಹಣಕಾಸನ್ನು ಬೇರೆಡೆಗೆ ತಿರುಗಿಸುವುದು ನಿಲ್ಲುತ್ತದೆ. ಪ್ರತಿಯೊಂದನ್ನೂ ತೋರಿಸಬೇಕಾಗುತ್ತದೆ ಮತ್ತು ಅದನ್ನು ನೋಡಬಹುದಾಗಿರುತ್ತದೆ.

ಸ್ನೇಹಿತರೇ,

ಸ್ವಾಮಿತ್ವ ಯೋಜನೆ ನಮ್ಮ ಗ್ರಾಮ ಪಂಚಾಯತ್ ಗಳಿಗೆ ವ್ಯವಸ್ಥಿತ ರೀತಿಯಲ್ಲಿ ಗ್ರಾಮ ಆಡಳಿತ ವ್ಯವಸ್ಥೆಯನ್ನು ಪುರಸಭೆ ಮತ್ತು ನಗರ ಪಾಲಿಕೆಗಳಂತೆ ಸುಲಭ ಮಾಡಲಿದೆ. ಗ್ರಾಮ ಪಂಚಾಯತುಗಳು ಗ್ರಾಮಗಳಲ್ಲಿ ಸವಲತ್ತು ಅಭಿವೃದ್ಧಿಗೆ ಸರಕಾರದಿಂದ ನೆರವು ಪಡೆಯುವುದಲ್ಲದೆ, ಗ್ರಾಮಗಳಲ್ಲಿಯೇ ಸಂಪನ್ಮೂಲಗಳನ್ನು ಗಳಿಸಲು ಸಾಧ್ಯವಾಗಲಿದೆ. ಇದೇ ರೀತಿಯಲ್ಲಿ ಗ್ರಾಮಸ್ಥರಿಗೆ ಒದಗಿಸಲಾದ ದಾಖಲೆಗಳು ಗ್ರಾಮ ಪಂಚಾಯತ್ ಗಳನ್ನು ಬಲಪಡಿಸಲು ಸಹಾಯ ಮಾಡಲಿವೆ.

ಸ್ನೇಹಿತರೇ,

ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ಯಾವಾಗಲೂ ಹೇಳಲಾಗುತ್ತದೆ. ಆದರೆ ವಾಸ್ತವ ಎಂದರೆ ಭಾರತದ ಗ್ರಾಮಗಳನ್ನು ಅವುಗಳ ಅದೃಷ್ಟಕ್ಕೆ ಬಿಡಲಾಗಿದೆ. ಶೌಚಾಲಯಗಳ ಕೊರತೆಯಿಂದ ಯಾವ ಸ್ಥಳ ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದೆ ? . ಅದೆಂದರೆ ಗ್ರಾಮಗಳು, ಹಳ್ಳಿಗಳು. ವಿದ್ಯುತ್ ಇಲ್ಲದೆ ಯಾವ ಪ್ರದೇಶಗಳು ಬಹಳ ತೊಂದರೆಗೀಡಾಗಿವೆ ?. ಅವುಗಳೆಂದರೆ ಹಳ್ಳಿಗಳು . ಕತ್ತಲೆಯಲ್ಲಿ ಬದುಕಬೇಕಾದವರು ಯಾರು ?. ಗ್ರಾಮಸ್ಥರು!. ಕಟ್ಟಿಗೆಗಳಿಂದ ಅಡುಗೆ ಮಾಡಬೇಕಾದ ಅನಿವಾರ್ಯತೆ ಎಲ್ಲಿತು ?. ಅದು ಗ್ರಾಮಗಳಲ್ಲಿತ್ತು, ಹಳ್ಳಿಗಳಲ್ಲಿತ್ತು!. ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿದಿದ್ದ ಜನರು ಯಾರು ? . ಗ್ರಾಮಸ್ಥರು.!.

ಸ್ನೇಹಿತರೇ ,

ಹಲವಾರು ವರ್ಷಗಳ ಕಾಲ ಅಧಿಕಾರದಲ್ಲಿದ್ದವರು ಬಹಳ ದೊಡ್ಡ ದೊಡ್ದ ಭರವಸೆಗಳನ್ನು ನೀಡಿದ್ದರು ಆದರೆ ಗ್ರಾಮಗಳನ್ನು ಮತ್ತು ಬಡ ಜನರನ್ನು ಸಮಸ್ಯೆಯಲ್ಲಿಯೇ ಉಳಿಸಿದರು. ನಾನದನ್ನು ಮಾಡಲಾರೆ. ನಿಮ್ಮ ಆಶೀರ್ವಾದದೊಂದಿಗೆ ನಾನು ನಿಮಗೆ ಏನೆಲ್ಲ ಮಾಡಬಹುದೋ ಅದೆಲ್ಲವನ್ನೂ ಮಾಡುತ್ತೇನೆ. ನಾನು ನಿಮಗಾಗಿ ಕೆಲಸ ಮಾಡಲು ಇಚ್ಚಿಸುತ್ತೇನೆ. ನಾನು ಗ್ರಾಮಗಳಿಗೆ ಬಹಳ ಕೆಲಸ ಮಾಡಬೇಕೆಂದಿದ್ದೇನೆ; ನಾನು ಬಡವರಿಗಾಗಿ ಕೆಲಸ ಮಾಡಲು ಇಚ್ಚಿಸುತ್ತೇನೆ, ಸಂತ್ರಸ್ತರ ಪರವಾಗಿ ಕೆಲಸ ಮಾಡಲು ಬಯಸುತ್ತೇನೆ, ಶೋಷಿತರು ಮತ್ತು ಅವಕಾಶ ವಂಚಿತರ ಪರವಾಗಿ ಕೆಲಸ ಮಾಡಲು ಬಯಸುತ್ತೇನೆ. ಅವರು ಯಾರೂ ಇತರರನ್ನು ಆಶ್ರಯಿಸಬೇಕಿಲ್ಲ. ಅವರು, ಇತರರ ಇಚ್ಚೆಯ ಗುಲಾಮರಾಗಬೇಕಿಲ್ಲ.

ಆದರೆ ಸ್ನೇಹಿತರೇ,

ಕಳೆದ ಆರು ವರ್ಷಗಳಲ್ಲಿ , ಇಂತಹ ಪ್ರತಿಯೊಂದು ವಿಷಯಗಳನ್ನು ಪರಿಹರಿಸಲು , ನಾವು ಒಂದೊಂದನ್ನೇ ಕೈಗೆತ್ತಿಕೊಂಡು ಕಾರ್ಯನಿರತರಾದೆವು ಮತ್ತು ಅದರ ಫಲಿತಾಂಶಗಳನ್ನು ಗ್ರಾಮಗಳಿಗೆ ಮತ್ತು ಬಡವರಿಗೆ ವಿತರಿಸಿದೆವು. ಇಂದು, ದೇಶವು ಯಾವುದೇ ಪಕ್ಷಪಾತರಹಿತವಾಗಿ ಅಭಿವೃದ್ಧಿ ಹೊಂದುತ್ತಿದೆ. ಪ್ರತಿಯೊಬ್ಬರೂ, ಈ ಯೋಜನೆಗಳ ಪ್ರಯೋಜನಗಳನ್ನು ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ಪಡೆಯುತ್ತಿದ್ದಾರೆ.

ಸ್ವಾಮಿತ್ವದಂತಹ ಯೋಜನೆಯನ್ನು ಈ ಮೊದಲೂ ಮಾಡಬಹುದಿತ್ತು. ನನಗೆ ಸ್ಪಷ್ಟವಾಗಿ ಗೊತ್ತಿದೆ, ಆ ಸಮಯದಲ್ಲಿ ಡ್ರೋನ್ ಗಳಿರಲಿಲ್ಲ, ಆದರೆ ಗ್ರಾಮಸ್ತರ ಜೊತೆಗೆ ಕುಳಿತುಕೊಂಡು ಪರಿಹಾರಗಳ ಬಗ್ಗೆ ಚಿಂತಿಸಬಹುದಿತ್ತು. ಆದರೆ ಅದಾಗಲಿಲ್ಲ. ಇದಾಗಿದ್ದರೆ , ಅಲ್ಲಿ ಯಾವುದೇ ಮಧ್ಯವರ್ತಿಗಳು ಇರುತ್ತಿರಲಿಲ್ಲ. ಭ್ರಷ್ಟಾಚಾರ, ದಲ್ಲಾಳಿಗಳು, ಅಥವಾ ಯಾವುದೇ ರೀತಿಯ ಕಡ್ಡಾಯಗಳು ಇರುತ್ತಿರಲಿಲ್ಲ. ಈಗ ರೂಪಿಸಲಾದ ಯೋಜನೆಯ ಶಕ್ತಿ ಇರುವುದು ತಂತ್ರಜ್ಞಾನದಲ್ಲಿ ಅಂದರೆ ಡ್ರೋನ್ ಗಳಲ್ಲಿ. ಈ ಮೊದಲು ನೆಲದ ಮ್ಯಾಪಿಂಗ್ ಕ್ಷೇತ್ರದಲ್ಲಿ ದಲ್ಲಾಳಿಗಳು ಮೇಲುಗೈ ಸಾಧಿಸುತ್ತಿದ್ದರು. ಆದರೆ ಈಗ ನಕ್ಷೆಗಳನ್ನು ಡ್ರೋನ್ ಮೂಲಕ ಮಾಡಲಾಗುತ್ತದೆ. ಡ್ರೋನ್ ಏನನ್ನು ನೋಡುತ್ತದೆಯೋ ಅದನ್ನು ಕಾಗದದಲ್ಲಿ ದಾಖಲಿಸಲಾಗುತ್ತದೆ.

ಸ್ನೇಹಿತರೇ,

ಕಳೆದ ಆರು ವರ್ಷಗಳಲ್ಲಿ ಗ್ರಾಮೀಣ ನಿವಾಸಿಗಳಿಗಾಗಿ ಮಾಡಲಾದ ಕೆಲಸವನ್ನು ಸ್ವಾತಂತ್ರ್ಯ ಬಂದ ಆರು ದಶಕಗಳಾದರೂ ಮಾಡಲಾಗಿರಲಿಲ್ಲ. ಗ್ರಾಮೀಣ ಪ್ರದೇಶದ ಕೋಟ್ಯಾಂತರ ಜನರಿಗೆ ಆರು ದಶಕಗಳ ಕಾಲ ಬ್ಯಾಂಕ್ ಖಾತೆಯ ಸೌಲಭ್ಯವನ್ನು ನಿರಾಕರಿಸಲಾಗಿತ್ತು. ಈ ಬ್ಯಾಂಕ್ ಖಾತೆಗಳನು ಅಂತಿಮವಾಗಿ ಈಗ ತೆರೆಯಲಾಯಿತು. ಗ್ರಾಮೀಣ ಪ್ರದೇಶದಲ್ಲಿರುವ ಕೋಟ್ಯಾಂತರ ಜನರಿಗೆ ಆರು ದಶಕಗಳಿಂದ ವಿದ್ಯುತ್ ಸಂಪರ್ಕ ಲಭ್ಯ ಇರಲಿಲ್ಲ. ಇಂದು ಅಂತಿಮವಾಗಿ ವಿದ್ಯುತ್ ಎಲ್ಲಾ ಮನೆ ಮನೆಗಳನ್ನು ತಲುಪಿದೆ. ಆರು ದಶಕಗಳಿಂದ ಗ್ರಾಮೀಣ ಪ್ರದೇಶದ ಕೋಟ್ಯಾಂತರ ಕುಟುಂಬಗಳಿಗೆ ಶೌಚಾಲಯ ಸೌಲಭ್ಯ ಇರಲಿಲ್ಲ. ಇಂದು ಹಲವಾರು ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಸ್ನೇಹಿತರೇ,

ಹಲವು ದಶಕಗಳ ಕಾಲ ಗ್ರಾಮೀಣ ಬಡವರು ಅನಿಲ ಸಂಪರ್ಕದ ಬಗ್ಗೆ ಯೋಚಿಸುವುದಕ್ಕೂ ಸಾಧ್ಯವಿರಲಿಲ್ಲ. ಇಂದು ಅನಿಲ ಸಂಪರ್ಕ ಬಡವರ ಮನೆಗಳನ್ನು ತಲುಪಿದೆ. ದಶಕಗಳ ಕಾಲ ಕೋಟ್ಯಾಂತರ ಗ್ರಾಮೀಣ ಕುಟುಂಬಗಳು ತಮ್ಮದೇ ಆದ ಮನೆಯನ್ನೂ ಹೊಂದಿರಲಿಲ್ಲ. ಇಂದು ಸುಮಾರು 2 ಕೋಟಿ ಬಡ ಕುಟುಂಬಗಳು ಪಕ್ಕಾ ಮನೆಯನ್ನು ಹೊಂದಿವೆ ಮತ್ತು ಇದರಿಂದ ಹೊರಗುಳಿದವರು ಸದ್ಯವೇ ಪಕ್ಕಾ ಮನೆಯನ್ನು ಪಡೆಯುವಂತಾಗಲು ನಾನು ನನ್ನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ದಶಕಗಳ ಕಾಲ ಯಾರೊಬ್ಬರೂ ಗ್ರಾಮೀಣ ಮನೆಗಳಲ್ಲಿ ಕೊಳವೆ ಮೂಲಕ ಕುಡಿಯುವ ನೀರು ಪೂರೈಕೆಯನ್ನು ಕಲ್ಪಿಸುವುದಕ್ಕೆ ಸಾಧ್ಯ ಇರಲಿಲ್ಲ. ನಮ್ಮ ತಾಯಿಯಂದಿರು ಮತ್ತು ಸಹೋದರಿಯರು ತಮ್ಮ ತಲೆಯ ಮೇಲೆ ಬೃಹತ್ ಗಾತ್ರದ ಕೊಡಗಳನ್ನು ಹೊತ್ತುಕೊಂಡು ಹಲವು ಕಿಲೋಮೀಟರ್ ದೂರ ನಡೆಯಬೇಕಿತ್ತು. ಈಗ ಪ್ರತಿಯೊಂದು ಮನೆಯನ್ನೂ ನೀರು ತಲುಪಿದೆ. ಇಂದು ಜಲ–ಜೀವನ ಆಂದೋಲನವನ್ನು ದೇಶದಲ್ಲಿಯ ಇಂತಹ 15 ಕೋಟಿ ಮನೆಗಳಿಗೆ ನೀರೊದಗಿಸುವುದಕ್ಕಾಗಿ ಕೈಗೆತ್ತಿಕೊಳ್ಳಲಾಗಿದೆ. ದೇಶದ ಪ್ರತಿಯೊಂದು ಗ್ರಾಮಕ್ಕೂ ಆಪ್ಟಿಕಲ್ ಫೈಬರ್ ಜಾಲವನ್ನು ವಿಸ್ತರಿಸಲು ಬೃಹತ್ ಆಂದೋಲನವನ್ನು ಕೈಗೆತ್ತಿಕೊಳ್ಳಲಾಗಿದ್ದು, ಅದು ಪ್ರಗತಿಯಲ್ಲಿದೆ. ಮೊದಲು ಜನರು ವಿದ್ಯುತ್ ಪೂರೈಕೆ ಸರಿಯಾಗಿಲ್ಲದಿರುವ ಬಗ್ಗೆ ದೂರುತ್ತಿದ್ದರು, ಈಗ ಮೊಬೈಲ್ ಫೋನುಗಳ ಸಂಪರ್ಕ ದುರ್ಬಲವಾಗಿದೆ ಮತ್ತು ಅದು ಸರಿಯಾಗಿಲ್ಲ ಎಂದು ದೂರುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ಆಪ್ಟಿಕಲ್ ಫೈಬರ್ ನಲ್ಲಿದೆ.

ಸ್ನೇಹಿತರೇ,

ಕೊರತೆ ಇದ್ದಲ್ಲಿ ಶಕ್ತಿಶಾಲಿ ಶಕ್ತಿಗಳ ಎಳೆದಾಟ ಮತ್ತು ಒತ್ತಡ ಜನರನ್ನು ತೊಂದರೆಗೀಡು ಮಾಡುತ್ತಲೇ ಇರುತ್ತದೆ. ಗ್ರಾಮಗಳನ್ನು ಮತ್ತು ಬಡವರನ್ನು ಕೊರತೆಯ ಮಧ್ಯದಲ್ಲಿಯೇ ಉಳಿಸುವುದು ಕೆಲವು ವ್ಯಕ್ತಿಗಳ ರಾಜಕೀಯ ವ್ಯೂಹ ಎಂದು ಚರಿತ್ರೆ ಹೇಳುತ್ತದೆ. ನಾವು ಬಡವರನ್ನು ಅವಕಾಶ ವಂಚಿತ ಸ್ಥಿತಿಯಿಂದ ವಿಮೋಚನೆ ಮಾಡಲು ಆಂದೋಲನವನ್ನು ಕೈಗೊಂಡಿದ್ದೇವೆ.

ಸಹೋದರರೇ ಮತ್ತು ಸಹೋದರಿಯರೇ,

ಇಂತಹ ವ್ಯಕ್ತಿಗಳು ಏನು ಯೋಚಿಸುತ್ತಾರೆಂದರೆ ಗ್ರಾಮಗಳು ಮತ್ತು ಬಡವರು , ರೈತರು ಮತ್ತು ಬುಡಕಟ್ಟು ಜನರು ಸಶಕ್ತೀಕರಣಗೊಂಡರೆ ಅವರ ಬಳಿ ಯಾರೂ ಹೋಗುವುದಿಲ್ಲ ಎಂದು; ಅವರ ವ್ಯಾಪಾರ ಮುಚ್ಚಲ್ಪಡುತ್ತದೆ ಮತ್ತು ಯಾರೊಬ್ಬರೂ ಅವರಲ್ಲಿ ಬೇಡಲು ಹೋಗುವುದಿಲ್ಲ. ಆದುದರಿಂದ , ಅವರು ಗ್ರಾಮಗಳ ಮತ್ತು ಜನರ ಸಮಸ್ಯೆ ಪರಿಹಾರವಾಗದೆ ಹಾಗೆಯೇ ಇರಲಿ ಎಂದು ಆಶಿಸುತ್ತಾರೆ, ಇದರಿಂದ ತಾವು ತಮ್ಮ ಕೆಲಸ ಮುಂದುವರೆಸಬಹುದು ಎಂದು ಲೆಕ್ಕಾಚಾರ ಹಾಕುತ್ತಾರೆ. ಆದುದರಿಂದ, ನಡೆಯುತ್ತಿರುವ ಕೆಲಸವನ್ನು ತಡೆಯುವುದು ಮತ್ತು ಅದನ್ನು ವಿಳಂಬ ಮಾಡುವುದು ಇವರ ಅಭ್ಯಾಸವಾಗಿದೆ.

ಈ ದಿನಗಳಲ್ಲಿ , ಈ ಜನರು ಕೃಷಿ ವಲಯಕ್ಕಾಗಿರುವ ಚಾರಿತ್ರಿಕ ಸುಧಾರಣೆಗಳ ವಿಷಯದಲ್ಲಿಯೂ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಆ ಜನರು ನಿರಾಶರಾಗಿದ್ದಾರೆ, ಹತಾಶರಾಗಿದ್ದಾರೆ. ಆದರೆ ಅವರ ಭಯವು ರೈತರಿಗೆ ಯಾವ ರೀತಿಯಿಂದಲೂ ಸಂಬಂಧಿಸಿದ್ದಲ್ಲ ಎಂಬುದನ್ನು ಈಗ ದೇಶವು ತಿಳಿದುಕೊಳ್ಳಲಾರಂಭಿಸಿದೆ. ದೇಶವಾಸಿಗಳು ಈ ಸರಪಳಿಯನ್ನು ತುಂಡರಿಸಲು ಆರಂಭಿಸಿದ್ದಾರೆ. ಮತ್ತು ಮಧ್ಯವರ್ತಿಗಳ ವ್ಯವಸ್ಥೆಯನ್ನು ನಿವಾರಿಸಲು ಆರಂಭಿಸಿದ್ದಾರೆ. ತಲೆಮಾರುಗಳಿಂದ ಇದ್ದ ಲಂಚ, ದಲ್ಲಾಳಿಗಳ ವ್ಯವಸ್ಥೆಯನ್ನು ತುಂಡರಿಸಿ ಅವರ ಯೋಜನೆಗಳನ್ನು ಮತ್ತು ಉದ್ದೇಶಗಳನ್ನು ಧ್ವಂಸ ಮಾಡಲು ಆರಂಭಿಸಿದ್ದಾರೆ.

ಒಂದು ಕಡೆಯಲ್ಲಿ ಕೋಟ್ಯಾಂತರ ಭಾರತೀಯರ ಕೈಗಳು ನವಭಾರತ ಅಭಿವೃದ್ಧಿಯಲ್ಲಿ ತೊಡಗಿದ್ದರೆ , ಇಂತಹ ವ್ಯಕ್ತಿಗಳ ನೈಜ ಬಣ್ಣ ಇತರರೆದುರು ಅನಾವರಣಗೊಳ್ಳುತ್ತಿದೆ. ದೇಶವನ್ನು ಲೂಟಿ ಮಾಡಲು ಭಾಗಿಯಾದವರನ್ನು ಗುರುತಿಸಲು ದೇಶವು ಆರಂಭ ಮಾಡಿದೆ. ಇದರಿಂದಾಗಿ ಈ ಜನರು ಈಗಿನ ದಿನಗಳಲ್ಲಿ ಪ್ರತಿಯೊಂದಕ್ಕೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ಬಡವರ ಬಗ್ಗೆಯೂ ಕಾಳಜಿ ಹೊಂದಿಲ್ಲ, ಗ್ರಾಮಗಳು ಅಥವಾ ದೇಶದ ಬಗ್ಗೆಯೂ ಕಳಕಳಿ ಹೊಂದಿಲ್ಲ. ಅವರು ಪ್ರತೀ ಉತ್ತಮ ಕೆಲಸದಲ್ಲೂ ತಗಾದೆ ತೆಗೆಯುತ್ತಾರೆ. ಈ ಜನರು ದೇಶದ ಅಭಿವೃದ್ಧಿಯನ್ನು ತಡೆಯುವುದನ್ನು ಇಚ್ಚಿಸುತ್ತಾರೆ. ಈ ಜನರು ನಮ್ಮ ಗ್ರಾಮಗಳು, ಬಡವರು, ನಮ್ಮ ರೈತರು, ನಮ್ಮ ಕಾರ್ಮಿಕ ಸಹೋದರರು, ಸಹೋದರಿಯರು ಸ್ವಾವಲಂಬಿಯಾಗುವುದನ್ನು ತಡೆಯಲು ಇಚ್ಚಿಸುತ್ತಾರೆ. ಇಂದು ನಾವು ಎಂ.ಎಸ್.ಪಿ.ಯನ್ನು 1.5 ಪಟ್ಟು ಹೆಚ್ಚಿಸಿದ್ದೇವೆ, ಅವರದನ್ನು ಮಾಡಲಿಲ್ಲ. ರೈತರಿಗೆ, ಪಶುಪಾಲಕ ರೈತರಿಗೆ ಮತ್ತು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಿರುವುದರಿಂದ ಕಪ್ಪು ಹಣದ ಮೂಲವೇ ಮುಚ್ಚಲ್ಪಟ್ಟಿದೆ. ಮತ್ತು ಅವರಿಗೆ ಕಷ್ಟಗಳುಂಟಾಗಿವೆ. ಯೂರಿಯಾಕ್ಕೆ ಬೇವು ಲೇಪನ ಅವರಿಗೆ ತೊಂದರೆ ಕೊಡುತ್ತಿದೆ ಮತ್ತು ಅವರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದೆ. ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆಯಿಂದಾಗಿ ತೊಂದರೆ ಅನುಭವಿಸುತ್ತಿರುವವರು , ಇಂದು ಚಡಪಡಿಸುತ್ತಿದ್ದಾರೆ. ರೈತರು ಮತ್ತು ಕೃಷಿ ಕಾರ್ಮಿಕರು ವಿಮೆ ಮತ್ತು ಪೆನ್ಷನ್ ಪಡೆಯುತ್ತಿರುವುದರಿಂದ ಸಮಸ್ಯೆ ಎದುರಿಸುತ್ತಿರುವವರು ಇಂದು ಕೃಷಿ ಸುಧಾರಣೆಗಳನ್ನು ವಿರೋಧಿಸುತ್ತಿದ್ದಾರೆ. ಆದರೆ ರೈತರು ಅವರೊಂದಿಗೆ ಹೋಗಲು ತಯಾರಿಲ್ಲ. ರೈತರು ಅವರನ್ನು ಗುರುತಿಸಿದ್ದಾರೆ.

ಸ್ನೇಹಿತರೇ,

ದಲ್ಲಾಳಿಗಳು, ಮಧ್ಯವರ್ತಿಗಳು, ಮತ್ತು ಲಂಚ ಪಡೆಯುತ್ತಿರುವವರ ಸಹಕಾರದಿಂದ ರಾಜಕೀಯ ಮಾಡುವ ಈ ಜನರು ಎಷ್ಟಾದರೂ ಸುಳ್ಳುಗಳನ್ನು ಹರಡಲಿ ಚಿಂತೆ ಇಲ್ಲ, ದೇಶ ಮುನ್ನಡೆಯುವುದನ್ನು ತ್ಯಜಿಸುವುದಿಲ್ಲ. ದೇಶವು ಗ್ರಾಮಗಳನ್ನು ಮತ್ತು ಬಡವರನ್ನು ಸ್ವಾವಲಂಬಿಯನ್ನಾಗಿಸಲು ನಿರ್ಧರಿಸಿದೆ ಹಾಗು ಭಾರತದ ಸಾಮರ್ಥ್ಯವನ್ನು ಗುರುತಿಸಲು ನಿರ್ಧರಿಸಿದೆ.

ಸ್ವಾಮಿತ್ವ ಯೋಜನೆಯು ಈ ನಿರ್ಧಾರವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಮತ್ತು ಇಂದು , ಇಷ್ಟೊಂದು ಅಲ್ಪ ಸಮಯದಲ್ಲಿ ಒಂದು ಲಕ್ಷ ಕುಟುಂಬಗಳು ಇದರ ಪ್ರಯೋಜನಗಳನ್ನು ಪಡೆದಿರುವುದಕ್ಕೆ ನಾನವರನ್ನು ಅಭಿನಂದಿಸುತ್ತೇನೆ. ಮತ್ತು ನಾನು ನರೇಂದ್ರ ಸಿಂಗ್ ಜಿ ಮತ್ತು ಅವರ ಇಡೀಯ ತಂಡವನ್ನು ಇಂದು ಅಭಿನಂದಿಸುತ್ತೇನೆ. ಇಷ್ಟೊಂದು ಅಲ್ಪ ಕಾಲದಲ್ಲಿ ಇಂತಹ ಪ್ರಮುಖ ಕೆಲಸ ಸಾಧಿಸಿದವರನ್ನು ನಾನು ಅಭಿನಂದಿಸಲಿಚ್ಛಿಸುತ್ತೇನೆ. ಇದು ಸಣ್ಣ ಕೆಲಸ ಅಲ್ಲ. ಗ್ರಾಮಗಳಿಂದ ಗ್ರಾಮಗಳಿಗೆ ಹೋಗಿ ಮತ್ತು ಅದರಲ್ಲೂ ಈ ಲಾಕ್ ಡೌನ್ ಅವಧಿಯಲ್ಲಿ ಈ ಕೆಲಸ ಮಾಡಿದ್ದಾರೆ. ನಾವು ಅವರಿಗೆ ಸಾಕಷ್ಟು ಧನ್ಯವಾದಗಳನ್ನು ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ !.

ಈ ಸರಕಾರದ ಪ್ರತೀ ಹಂತದ ಪ್ರತಿಯೊಬ್ಬ ಅಧಿಕಾರಿಯೂ ಮಾಡಿರುವ ಕೆಲಸದಿಂದಾಗಿ , ನಾವು ನಾಲ್ಕು ವರ್ಷ ಕಾಯಬೇಕಾಗಿಲ್ಲ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ನಾವು ಅದಕ್ಕೆ ಸಾಕಷ್ಟು ಮುಂಚಿತವಾಗಿ ಇಡೀ ದೇಶಕ್ಕೆ ಈ ಸೌಲಭ್ಯವನ್ನು ಒದಗಿಸುವ ಸಾಧ್ಯತೆ ಇದೆ. ಯಾಕೆಂದರೆ ಇದು ಎಷ್ಟೊಂದು ಬೃಹತ್ ಕೆಲಸ ಎಂದರೆ ಮತ್ತು ಏಪ್ರಿಲ್ ತಿಂಗಳಲ್ಲಿ ನಾನಿದನ್ನು ಪ್ರಸ್ತಾಪಿಸಿದಾಗ , ನಾನು ಬಹಳ ಹೆಚ್ಚಿನದನ್ನು ಅಪೇಕ್ಷಿಸುತ್ತಿದ್ದೇನೆ ಎಂದು ಅನಿಸುತ್ತಿತ್ತು. ಆದರೆ ಅವರು ನಾನೇನು ಕೇಳಿದ್ದೇನೋ ಅದಕ್ಕಿಂತ ಹೆಚ್ಚಿನದನ್ನು ಮಾಡಿದ್ದಾರೆ. ಮತ್ತು ಅದಕ್ಕಾಗಿ ನರೇಂದ್ರ ಸಿಂಗ್ ಜೀ ಅವರ ಇಡೀಯ ತಂಡಕ್ಕೆ ಮತ್ತು ಅವರ ಇಲಾಖೆಯ ಎಲ್ಲಾ ಜನರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಮತ್ತು ಇದೇ ಸಂದರ್ಭದಲ್ಲಿ ಇಂದು ಈ ಸೌಲಭ್ಯ ಪಡೆದ ಕುಟುಂಬಗಳು ಭರವಸೆ , ವಿಶ್ವಾಸದ ಭಾವನೆಯನ್ನು ಬೆಳೆಸಿಕೊಂಡಿವೆ. ನಿಮ್ಮ ಮುಖದಲ್ಲಿರುವ ಹರ್ಷ ನನಗೆ ದೊಡ್ಡ ತೃಪ್ತಿ ತಂದಿದೆ. ನಿಮ್ಮ ಸಂತೋಷ ನನ್ನ ಸಂತೋಷಕ್ಕೆ ಕಾರಣವಾಗಿದೆ. ನಿಮ್ಮ ಕನಸನ್ನು ಸಾಧಿಸಲು ನಿಮಗೆ ದೊರೆತಿರುವ ಅವಕಾಶ ನನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಸಹಾಯ ಮಾಡಲಿದೆ.

ಮತ್ತು, ಆದುದರಿಂದ ಸಹೋದರರೇ ಮತ್ತು ಸಹೋದರಿಯರೇ, ನಾನು ನಿಮಗಿಂತ ಹೆಚ್ಚು ಸಂತೋಷದಲ್ಲಿದ್ದೇನೆ. ಯಾಕೆಂದರೆ ಇಂದು ಒಂದು ಲಕ್ಷ ಕುಟುಂಬಗಳು ತಮ್ಮ ಆಸ್ತಿ ದಾಖಲೆಗಳೊಂದಿಗೆ ವಿಶ್ವದೆದುರು ಆತ್ಮ ವಿಶ್ವಾಸದಿಂದ ಎದ್ದು ನಿಂತಿವೆ. ಇದೊಂದು ದೊಡ್ಡ ಅವಕಾಶ ಮತ್ತು ಅದೂ ಜೆ.ಪಿ. ಅವರ ಜನ್ಮದಿನದಂದು, ನಾನಾಜಿ ಅವರ ಜನ್ಮ ದಿನದಂದು. ಇದಕ್ಕಿಂತ ಹೆಚ್ಚು ಸಂತೋಷ ಯಾವುದರಲ್ಲಿದ್ದೀತು ?.

ನಾನು ನಿಮ್ಮೆಲ್ಲರಿಗೂ ಶುಭಾಶಯಗಳನ್ನು ಹಾರೈಸುತ್ತೇನೆ. ಮತ್ತು ಇದೇ ವೇಳೆ ನಾವು ಕೊರೊನಾ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ದೇಶಾದ್ಯಂತ ಮುಖಗವಸು ಧರಿಸುವ , ದೈಹಿಕ ಅಂತರ ಕಾಪಾಡುವ ಮತ್ತು ಆಗಾಗ ಸಾಬೂನಿನಿಂದ ಕೈತೊಳೆಯುವ ಆಂದೋಲನವನ್ನು ಕೈಗೊಂಡಿದ್ದೇವೆ. ನಿಮ್ಮ ಗ್ರಾಮಗಳು ಮತ್ತು ನಿಮ್ಮ ಕುಟುಂಬ ಮತ್ತು ನೀವು ಅನಾರೋಗ್ಯಕ್ಕೀಡಾಗುವುದನ್ನು ನಾವು ಆಶಿಸುವುದಿಲ್ಲ. ಆ ಬಗ್ಗೆ ನಾವು ಕಳವಳ ಹೊಂದಿದ್ದೇವೆ. ಮತ್ತು ಈ ಖಾಯಿಲೆಗೆ ವಿಶ್ವದಲ್ಲಿ ಇನ್ನೂ ಔಷಧಿ ಸಿಕ್ಕಿಲ್ಲ ಎಂಬುದೂ ನಮಗೆ ತಿಳಿದಿದೆ.

ನೀವು ನನ್ನ ಕುಟುಂಬದವರು .. ಮತ್ತು ಆದುದರಿಂದ ನಾನು ನಿಮ್ಮನ್ನು ಕೋರುತ್ತೇನೆ , “ಜಬ್ ತಕ್ ದವಾಯಿ ನಹಿ, ತಬ್ ತಕ್ ಧಿಹಾಲೆ ನಹಿ” ( ಗುಣಮುಖವಾಗಿಸುವ ಔಷಧಿ ಸಿಗುವವರೆಗೆ ಅಜಾಗ್ರತೆ ಸಲ್ಲದು ) . ಈ ಮಂತ್ರವನ್ನು ಮರೆಯ ಬೇಡಿ. ಮತ್ತು ಈ ನಂಬಿಕೆಯೊಂದಿಗೆ , ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಸಂತೋಷ , ಸಂಭ್ರಮವನ್ನು ಹಾರೈಸುತ್ತೇನೆ. ಮತ್ತು ನನ್ನ ಶುಭ ಹಾರೈಕೆಗಳು !.

ಬಹಳ ಧನ್ಯವಾದಗಳು

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Indian startups raise $10 billion in a quarter for the first time, report says

Media Coverage

Indian startups raise $10 billion in a quarter for the first time, report says
...

Nm on the go

Always be the first to hear from the PM. Get the App Now!
...
PM to visit UP on October 20 and inaugurate Kushinagar International Airport
October 19, 2021
ಶೇರ್
 
Comments
PM to participate in an event marking Abhidhamma Day at Mahaparinirvana Temple
PM to lay foundation stone of Rajkiya Medical College, Kushinagar and also inaugurate & lay foundation stone of various development projects in Kushinagar

Prime Minister Shri Narendra Modi will visit Uttar Pradesh on 20th October, 2021. At around 10 AM, the Prime Minister will inaugurate the Kushinagar International Airport. Subsequently, at around 11:30 AM, he will participate in an event marking Abhidhamma Day at Mahaparinirvana Temple. Thereafter, at around 1:15 PM, the Prime Minister will attend a public function to inaugurate and lay the foundation stone of various development projects in Kushinagar.

Inauguration of Kushinagar International Airport

The inauguration of the Kushinagar International Airport will be marked by the landing of the inaugural flight at the airport from Colombo, Sri Lanka, carrying Sri lankan delegation of over hundred Buddhist Monks & dignitaries including the 12-member Holy Relic entourage bringing the Holy Buddha Relics for Exposition. The delegation also comprises of Anunayakas (deputy heads) of all four Nikatas (orders) of Buddhism in Sri Lanka i.e Asgiriya, Amarapura, Ramanya, Malwatta as well as five ministers of the Government of Sri Lanka led by Cabinet Minister Namal Rajapakshe.

The Kushinagar International Airport has been built at an estimated cost of Rs. 260 crore. It will facilitate domestic & international pilgrims to visit the Mahaparinirvana sthal of Lord Buddha and is an endeavour in connecting the Buddhist pilgrimage holy sites around the world. The airport will serve nearby districts of Uttar Pradesh and Bihar and is an important step in boosting the investment & employment opportunities in the region.

Abhidhamma Day at Mahaparinirvana Temple

Prime Minister will visit the Mahaparinirvana temple, offer Archana and Chivar to the reclining statue of Lord Buddha and also plant a Bodhi tree sapling.

Prime Minister will participate in an event, organised to mark Abhidhamma Day. The day symbolises the end of three-month rainy retreat – Varshavaas or Vassa – for the Buddhist Monks, during which they stay at one place in vihara & monastery and pray. The event will also be attended by eminent Monks from Sri Lanka, Thailand, Myanmar, South Korea, Nepal, Bhutan and Cambodia, as well as Ambassadors of various countries.

Prime Minister will also walk through the exhibition of Paintings of Ajanta frescos, Buddhist Sutra Calligraphy and Buddhist artefacts excavated from Vadnagar and other sites in Gujarat.

Inauguration & laying of Foundation Stone of development projects

Prime Minister will participate in a public function at Barwa Jangal, Kushinagar. In the event, he will lay the foundation stone of Rajkiya Medical College, Kushinagar which will be built at a cost of over Rs 280 crore. The Medical college will have a 500 bed hospital and provide admissions to 100 students in MBBS course in academic session 2022-2023. Prime Minister will also inaugurate & lay the foundation stone of 12 development projects worth over Rs 180 crore.