ಶೇರ್
 
Comments
ಅಸ್ಸಾಂ, ಈಶಾನ್ಯ ಭಾಗಗಳ ಬೆಳವಣಿಗೆ ಆಧರಿತ ಅಭಿವೃದ್ಧಿ ಮತ್ತು ಸಂಪರ್ಕ, ಸರ್ಕಾರದ ಆದ್ಯತೆ
ರೋ-ಪಾಕ್ಸ್ ಸೇವೆಗಳಿಂದ ಈ ಭಾಗದ ಅಂತರ ಗಣನೀಯವಾಗಿ ತಗ್ಗಿದೆ: ಪ್ರಧಾನಮಂತ್ರಿ

 

ನಮಸ್ಕಾರ ಅಸ್ಸಾಂ!

ಶ್ರೀಮಂತ ಶಂಕರ ದೇವ ಅವರ ಕರ್ಮಭೂಮಿಯಾದ ಮಜುಲಿ ಮತ್ತು ವೈಷ್ಣವ ಧರ್ಮದ ಸಾಂಸ್ಥಿಕ ಕೇಂದ್ರಗಳಾದ ಸತ್ರಾಸ್ ಗಳಿಗೆ ನಾನು ನಮಿಸುತ್ತೇನೆ ಮತ್ತು ಶುಭಾಶಯಗಳು. ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ನಿತಿನ್ ಗಡ್ಕರಿ ಜೀ, ಶ್ರೀ ರವಿ ಶಂಕರ ಪ್ರಸಾದ್ ಜೀ ಮತ್ತು ಶ್ರೀ ಮನ್ ಸುಖ್ ಮಾಂಡವೀಯ ಜೀ, ಅಸ್ಸಾಂ ಮುಖ್ಯಮಂತ್ರಿ ಶ್ರೀ ಸರ್‌ಬಾನಂದ ಸೋನೋವಾಲ್ ಜೀ, ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ಜೀ, ಅಸ್ಸಾಂ ಹಣಕಾಸು ಸಚಿವ ಡಾ. ಹಿಮಂತ ಬಿಸ್ವಾ ಸರ್ಮಾ ಜೀ ಮತ್ತು ಅಸ್ಸಾಂನ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ. ಕೃಷಿಗೆ ಸಂಬಂಧಿಸಿದ ವಸಂತ ಹಬ್ಬವಾದ ಅಲಿ-ಆಯೆ-ಲಿಗ್ಯಾಂಗ್ ಹಬ್ಬದ ಸಂಭ್ರಮ ಎರಡನೇ ದಿನವೂ ಮುಂದುವರಿದಿರುವಂತೆ ಕಾಣುತ್ತಿದೆ. ನಿನ್ನೆ ಮಿಸಿಂಗ್ ಸಮುದಾಯದ ಕೃಷಿ ಹಬ್ಬವಾದರೆ ಇಂದು ಇಡೀ ಅಸ್ಸಾಂ ಮತ್ತು ಮಜೂಲಿ ಸಹಿತ ಈಶಾನ್ಯದ ಅಭಿವೃದ್ಧಿಯ ದೊಡ್ಡ ಹಬ್ಬ.

ಸಹೋದರರೇ ಮತ್ತು ಸಹೋದರಿಯರೇ,

ಭಾರತ ರತ್ನ ಡಾ. ಭೂಪೇನ್ ಹಜಾರಿಕಾ ಒಮ್ಮೆ ಬರೆದಿದ್ದರು: महाबाहु ब्रह्मपुत्र महामिलनर तीर्थ(अ) कत(अ) जुग धरि आहिछे प्रकाखि हमन्वयर अर्थ(अ)! ಅಂದರೆ, ಬ್ರಹ್ಮಪುತ್ರದ ವಿಸ್ತರಣೆ ಭ್ರಾತೃತ್ವ, ಸಹೋದರತ್ವ ಮತ್ತು ಏಕತೆಯ ತೀರ್ಥ ಯಾತ್ರೆ ಎಂದು. ಹಲವಾರು ವರ್ಷಗಳಿಂದ ಈ ಪವಿತ್ರ ನದಿ. ಸೌಹಾರ್ದ ಮತ್ತು ಸಂಪರ್ಕಕ್ಕೆ ಸಮಾನಾರ್ಥಕವಾಗಿದೆ. ಆದರೆ ಬ್ರಹ್ಮಪುತ್ರ ನದಿ ಮೇಲಣ ಸಂಪರ್ಕಕ್ಕೆ ಸಂಬಂಧಿಸಿದ ಕೆಲಸ ಈ ಮೊದಲು ಆದ ರೀತಿಯಲ್ಲಿ ಆಗಲಿಲ್ಲ ಎಂಬುದು ಸತ್ಯ. ಇದರ ಪರಿಣಾಮ, ಅಸ್ಸಾಂನಲ್ಲಿ ಮತ್ತು ಈಶಾನ್ಯದ ಇತರ ಪ್ರದೇಶಗಳಲ್ಲಿ ಸಂಪರ್ಕ ಎನ್ನುವುದು ಸದಾ ಪ್ರಮುಖ ಸವಾಲಾಗಿಯೇ ಉಳಿದು ಬಂದಿತು. ಮಹಾಬಾಹು ಬ್ರಹ್ಮಪುತ್ರದ ಆಶೀರ್ವಾದದೊಂದಿಗೆ ಈ ನಿಟ್ಟಿನಲ್ಲಿ ಕೆಲಸ ಈಗ ಬಹಳ ಬಿರುಸಾಗಿ ನಡೆಯುತ್ತಿದೆ. ಹಲವಾರು ವರ್ಷಗಳಿಂದ ಕೇಂದ್ರ ಮತ್ತು ಅಸ್ಸಾಂಗಳ ಎರಡು ಇಂಜಿನ್ ಸರಕಾರಗಳು ಇಡೀಯ ವಲಯದ ಸಾಂಸ್ಕೃತಿಕ ಮತ್ತು ಭೌಗೋಳಿಕ ದೂರವನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದವು. ನಾವು ಬ್ರಹ್ಮಪುತ್ರದ ಶಾಶ್ವತ ಸ್ಪೂರ್ತಿಯನ್ನು ಒಳಗೊಂಡಂತೆ ಆ ಹಾದಿಯಲ್ಲ್ಲಿ ಸಾಗಿ ಅನುಕೂಲತೆಗಳನ್ನು, ಅವಕಾಶಗಳನ್ನು ಮತ್ತು ಸಂಸ್ಕೃತಿಯನ್ನು ಒದಗಿಸುವ ಸೇತುವೆಗಳನ್ನು ನಿರ್ಮಾಣ ಮಾಡಿದೆವು. ಅಸ್ಸಾಂ ಸಹಿತ ಇಡೀ ಈಶಾನ್ಯದ ಭೌತಿಕ ಮತ್ತು ಸಾಂಸ್ಕೃತಿಕ ಸಮಗ್ರತೆ ಈ ವರ್ಷಗಳಲ್ಲಿ ಸಶಕ್ತೀಕರಣಗೊಂಡಿದೆ.

ಸ್ನೇಹಿತರೇ,

ಈ ದಿನ ಅಸ್ಸಾಂ ಸಹಿತ ಇಡೀಯ ಈಶಾನ್ಯಕ್ಕೆ ಸಮಗ್ರ ದೃಷ್ಟಿ ವಿಸ್ತರಣೆಯನ್ನು ಮಾಡಲಿರುವ ದಿನ. ಡಾ. ಭೂಪೇನ್ ಹಜಾರಿಕಾ ಸೇತುವೆ, ಬೋಗಿಬೀಲ್ ಸೇತುವೆ ಅಥವಾ ಸರೈಘಾಟ್ ಸೇತುವೆ ಸಹಿತ ಹಲವು ಸೇತುವೆಗಳು ಇಂದು ಅಸ್ಸಾಂನ ಜನಜೀವನವನ್ನು ಸುಲಭಗೊಳಿಸಲಿವೆ. ಇದು ನಮ್ಮ ವೀರ ಸೈನಿಕರಿಗೆ ಬಹಳ ಅನುಕೂಲತೆಗಳನ್ನು ಒದಗಿಸಲಿದೆ. ಜೊತೆಗೆ ದೇಶದ ಭದ್ರತೆಯನ್ನು ಬಲಪಡಿಸಲಿದೆ. ಅಸ್ಸಾಂನ ಬೇರೆ ಬೇರೆ ಭಾಗಗಳನ್ನು ಈಶಾನ್ಯದ ಜೊತೆ ಜೋಡಿಸುವ ಆಂದೋಲನಕ್ಕೆ ಇಂದು ಹೆಚ್ಚಿನ ಬಲ ನೀಡಲಾಗಿದೆ. ಮತ್ತೆರಡು ಪ್ರಮುಖ ಸೇತುವೆಗಳ ನಿರ್ಮಾಣ ಕಾರ್ಯ ಇಂದು ಆರಂಭವಾಗುತ್ತಿದೆ. ಕೆಲ ವರ್ಷಗಳ ಹಿಂದೆ ನಾನು ಮಜೂಲಿ ದ್ವೀಪಕ್ಕೆ ಹೋದಾಗ, ಅಲ್ಲಿಯ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದೆ. ಸರ್‌ಬಾನಂದ ಸೋನೋವಾಲ್ ಜೀ ಅವರ ಸರಕಾರ ಈ ಕಷ್ಟಗಳನ್ನು ಸಂಪೂರ್ಣ ಅರ್ಪಣಾ ಭಾವದಿಂದ ನಿವಾರಿಸಲು ಪಯತ್ನಿಸಿರುವುದು ನನಗೆ ಸಂತೋಷ ತಂದಿದೆ. ಅಸ್ಸಾಂನ ಮೊದಲ ಹೆಲಿಪೋರ್ಟ್ ಮಜೂಲಿಯಲ್ಲಿ ಬಂದಿದೆ.

ಸಹೋದರರೇ ಮತ್ತು ಸಹೋದರಿಯರೇ,

ಈಗ, ಮಜೂಲಿಯ ಜನತೆಗೆ ತ್ವರಿತ ಮತ್ತು ಸುರಕ್ಷೆಯುಳ್ಳ ರಸ್ತೆಯ ಅವಕಾಶಗಳು ಲಭಿಸಲಿವೆ. ನಿಮ್ಮ ಹಲವಾರು ವರ್ಷಗಳ ಬೇಡಿಕೆಯು ಸೇತುವೆಗೆ ಶಿಲಾನ್ಯಾಸ ಮಾಡುವ ಮೂಲಕ ಈಡೇರಲಿದೆ. ಕಾಲಿಬಾರಿ ಘಾಟ್ ನಿಂದ ಜೋರ್ಹಟನ್ನು ಸಂಪರ್ಕಿಸುವ ಎಂಟು ಕಿಲೋ ಮೀಟರ್ ಉದ್ದದ ಸೇತುವೆ ಮಜೂಲಿಯ ಸಾವಿರಾರು ಕುಟುಂಬಗಳ ಜೀವನಾಧಾರವಾಗಲಿದೆ. ಈ ಸೇತುವೆ ನಿಮ್ಮಲ್ಲಿ ಭರವಸೆಯನ್ನು ಮೂಡಿಸಲಿದೆ ಮತ್ತು ಅನುಕೂಲತೆಗಳನ್ನು ಒದಗಿಸಲಿದೆ. ಅದೇ ರೀತಿ ಮೇಘಾಲಯದಲ್ಲಿ ಧುಬ್ರಿಯಿಂದ ಫುಲ್ಬಾರಿವರೆಗಿನ 19 ಕಿಲೋ ಮೀಟರ್ ಉದ್ದದ ಸೇತುವೆ ಸಿದ್ದವಾದಾಗ ಅದು ಬರಾಕ್ ಕಣಿವೆಯ ಸಂಪರ್ಕವನ್ನು ಬಲಪಡಿಸಲಿದೆ. ಈ ಸೇತುವೆ ಕೂಡಾ ಅಸ್ಸಾಂನಿಂದ ಮೇಘಾಲಯ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾಗಳಿಗೆ ಇರುವ ದೂರವನ್ನು ಗಮನೀಯವಾಗಿ ಕಡಿಮೆ ಮಾಡಲಿದೆ. ಕಲ್ಪಿಸಿಕೊಳ್ಳಿ-ಮೇಘಾಲಯ ಮತ್ತು ಅಸ್ಸಾಂ ನಡುವಣ ರಸ್ತೆ ಮೂಲಕ ಇರುವ 250 ಕಿಲೋ ಮೀಟರ್ ದೂರ ಭವಿಷ್ಯದಲ್ಲಿ ಬರೇ 19-20 ಕಿಲೋ ಮೀಟರಿಗೆ ಇಳಿಯಲಿದೆ. ಈ ಸೇತುವೆ ಇತರ ದೇಶಗಳ ಅಂತಾರಾಷ್ಟ್ರೀಯ ಸಂಚಾರಕ್ಕೂ ಬಹಳ ಅಗತ್ಯ.

ಸಹೋದರರೇ ಮತ್ತು ಸಹೋದರಿಯರೇ,

ಮಹಾಬಾಹು ಬ್ರಹ್ಮಪುತ್ರ ಕಾರ್ಯಕ್ರಮವನ್ನು ಇಂದು ಆರಂಭಿಸಲಾಗಿದ್ದು, ಇದು ಬ್ರಹ್ಮಪುತ್ರ ಮತ್ತು ಬರಾಕ್ ಸಹಿತ ಅಸ್ಸಾಂನ ಹಲವು ನದಿಗಳ ಕೊಡುಗೆಯನ್ನು ಇನ್ನಷ್ಟು ಶ್ರೀಮಂತಗೊಳಿಸಲಿದೆ. ಈ ಕಾರ್ಯಕ್ರಮವು ಈ ವಲಯದಾದ್ಯಂತ ಬ್ರಹ್ಮಪುತ್ರ ನೀರಿನೊಂದಿಗೆ ಜಲ ಸಂಪರ್ಕ ಮತ್ತು ಬಂದರು ಕೇಂದ್ರಿತ ಅಭಿವೃದ್ಧಿಯನ್ನು ಇನ್ನಷ್ಟು ಬಲಪಡಿಸಲಿದೆ. ಈ ಆಂದೋಲನದ ಆರಂಭದಲ್ಲಿ 3 ರೋ ಪಾಕ್ಸ್ ಸೇವೆಗಳನ್ನು ನೇಮತಿ-ಮಜೂಲಿ, ಉತ್ತರ ಮತ್ತು ದಕ್ಷಿಣ ಗುವಾಹಟಿ ಮತ್ತು ಧುಬ್ರಿ-ಹಟ್ಸಿಂಗಿಮಾರಿ ನಡುವೆ ಇಂದು ಕಾರ್ಯಾರಂಭ ಮಾಡಲಾಗಿದೆ. ಇದರೊಂದಿಗೆ ದೇಶದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ರೋ ಪಾಕ್ಸ್ ಸೇವೆಯೊಂದಿಗೆ ಜೋಡಿಸಲ್ಪಟ್ಟ ಪ್ರಮುಖ ರಾಜ್ಯವಾಗಿ ಅಸ್ಸಾಂ ಮೂಡಿ ಬಂದಿದೆ. ಇದಲ್ಲದೆ, ಬ್ರಹ್ಮಪುತ್ರದ ನಾಲ್ಕು ಸ್ಥಳಗಳಲ್ಲಿ ಪ್ರವಾಸಿ ಜೆಟ್ಟಿಗಳನ್ನು ಅಭಿವೃದ್ಧಿ ಮಾಡುವ ಮತ್ತು ಜೋಗಿಗೋಪಾ ಬಳಿಯಲ್ಲಿ ಒಳನಾಡು ಜಲ ಸಾರಿಗೆ ಟರ್ಮಿನಲ್ ನಿರ್ಮಾಣವನ್ನೂ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳು ಮಜೂಲಿ ಸಹಿತ ಅಸ್ಸಾಂಗೆ ಮತ್ತು ಈಶಾನ್ಯಕ್ಕೆ ಉತ್ತಮ ಸಂಪರ್ಕವನ್ನು ಒದಗಿಸಲಿವೆ. ಇದರಿಂದ ಈ ವಲಯದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಲಿದೆ. 2016 ರಲ್ಲಿ ನೀವು ಕೊಟ್ಟ ಮತ ಇಷ್ಟೆಲ್ಲಾ ಫಲಿತಾಂಶಗಳನ್ನು ತಂದಿದೆ. ನಿಮ್ಮ ಮತದ ಶಕ್ತಿ ಈಗ ಅಸ್ಸಾಂನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ಗುಲಾಮಗಿರಿಯ ಅವಧಿಯಲ್ಲಿಯೂ ದೇಶದಲ್ಲಿ ಅಸ್ಸಾಂ ಅತ್ಯಂತ ಸಮೃದ್ಧ ಮತ್ತು ಹೆಚ್ಚು ಕಂದಾಯ ತರುವ ರಾಜ್ಯಗಳಲ್ಲಿ ಒಂದಾಗಿತ್ತು. ಚಹಾ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಬ್ರಹ್ಮಪುತ್ರ-ಪದ್ಮಾ-ಮೇಘನಾ ನದಿಗಳ ಮೂಲಕ ಮತ್ತು ರೈಲು ಮಾರ್ಗಗಳ ಚಿತ್ತಗಾಂಗ್ ಮತ್ತು ಕೋಲ್ಕೊತ್ತಾ ಬಂದರುಗಳಿಗೆ ತಲುಪುತ್ತಿದ್ದವು. ಈ ಸಂಪರ್ಕ ಜಾಲವು ಅಸ್ಸಾಂನ ಸಮೃದ್ಧಿಗೆ ಪ್ರಮುಖ ಕಾರಣವಾಗಿತ್ತು. ಆದರೆ ಸ್ವಾತಂತ್ರ್ಯದ ಬಳಿಕ, ಈ ಮೂಲಸೌಕರ್ಯವನ್ನು ಆಧುನೀಕರಣ ಮಾಡಬೇಕಿತ್ತಾದರೂ, ಅದನ್ನು ಹಾಗೆಯೇ ಬಿಡಲಾಯಿತು. ಜಲಮಾರ್ಗಗಳತ್ತ ಗಮನವನ್ನು ಕೊಡಲಿಲ್ಲ. ಮತು ಇದರ ಪರಿಣಾಮವಾಗಿ ಅದು ಬಹುತೇಕ ನಿರ್ಲಕ್ಷಕ್ಕೆ ಒಳಗಾಯಿತು. ಅಭಿವೃದ್ಧಿಗೆ ಸಂಬಂಧಿಸಿದ ಈ ನಿರ್ಲಕ್ಷ ಈ ವಲಯದಲ್ಲಿ ಗೊಂದಲ ಮತ್ತು ಅಶಾಂತಿಗೆ ಕಾರಣವಾಯಿತು. ಇದನ್ನು ಸರಿಪಡಿಸುವ ಯತ್ನ ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಕಾಲದಲ್ಲಿ ಆರಂಭವಾಯಿತು. ಈಗ, ಆ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸಿ, ಅವುಗಳಿಗೆ ವೇಗ ದೊರಕಿಸಿಕೊಡಲಾಗುತ್ತಿದೆ. ಈಗ, ಅಸ್ಸಾಂನ ಅಭಿವೃದ್ಧಿ ಆದ್ಯತೆಯಾಗಿದೆ ಮತ್ತು ಅದಕ್ಕಾಗಿ ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ಕಳೆದ ಐದು ವರ್ಷಗಳಲ್ಲಿ, ಅಸ್ಸಾಂನಲ್ಲಿ ಬಹುಮಾದರಿಯ ಸಂಪರ್ಕ ವ್ಯವಸ್ಥೆಯನ್ನು ಮರು ಸ್ಥಾಪನೆ ಮಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಸ್ಸಾಂನ್ನು ಮತ್ತು ಈಶಾನ್ಯವನ್ನು ಇತರ ಪೂರ್ವ ಏಶ್ಯಾದ ದೇಶಗಳ ಜೊತೆ ನಮ್ಮ ಸಾಂಸ್ಕೃತಿಕ ಮತ್ತು ವ್ಯಾಪಾರ ಸಂಬಂಧಗಳ ಕೇಂದ್ರವನ್ನಾಗಿಸಲು ಪ್ರಯತ್ನಗಳು ನಡೆಯುತ್ತಿವೆ. ಆದುದರಿಂದ ಒಳನಾಡು ಜಲಮಾರ್ಗಗಳನ್ನು ಪ್ರಮುಖ ಶಕ್ತಿಯಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಇತ್ತೀಚೆಗೆ ಬಾಂಗ್ಲಾದೇಶದ ಜೊತೆ ಜಲ ಸಂಪರ್ಕವನ್ನು ಹೆಚ್ಚಿಸುವುದಕ್ಕಾಗಿ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ. ಹೂಗ್ಲಿ ನದಿಯ ಮೇಲಿನಿಂದ ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳನ್ನು ಬೆಸೆಯುವ ಭಾರತ-ಬಾಂಗ್ಲಾ ದೇಶ ಶಿಷ್ಟಾಚಾರ ಮಾರ್ಗ ಕಾರ್ಯಗತವಾಗುತ್ತಿದೆ. ಇದರಿಂದ ಮೇಘಾಲಯ, ಮಿಜೋರಾಂ, ಮಣಿಪುರ ಮತ್ತು ತ್ರಿಪುರಾಗಳಿಗೆ ಪರ್ಯಾಯ ಸಂಪರ್ಕ ಒದಗಿ ಬರಲಿದೆ ಜೊತೆಗೆ ಅಸ್ಸಾಂನಿಂದ ಹಾಲ್ದಿಯಾ, ಕೋಲ್ಕೊತ್ತಾ, ಗುವಾಹಟಿ ಮತ್ತು ಜೋಗಿಗೋಪಾಗಳಿಗೂ ಸಂಪರ್ಕ ಬೆಸೆಯಲಿದೆ. ಆ ಮೂಲಕ ಈಶಾನ್ಯವನ್ನು ಭಾರತದ ಇತರ ಭಾಗಗಳ ಜೊತೆ ಜೋಡಿಸುವ ಅತ್ಯಂತ ಕಿರಿದಾದ ವ್ಯವಸ್ಥೆಯ ಮೇಲಣ ಅವಲಂಬನೆ ಕಡಿಮೆಯಾಗಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ಜೋಗಿಗೋಪಾದ ಐ.ಡಬ್ಲ್ಯು.ಟಿ. ಟರ್ಮಿನಲ್ ಅನ್ನು ಪರ್ಯಯ ಮಾರ್ಗವಾಗಿ ಇನ್ನಷ್ಟು ಬಲಪಡಿಸಲಾಗುತ್ತದೆ ಮತ್ತು ಅಸ್ಸಾಂನ್ನು ಕೋಲ್ಕೊತ್ತಾ, ಹಾಲ್ದಿಯಾ ಬಂದರಿನೊಂದಿಗೆ ಜಲಮಾರ್ಗದೊಂದಿಗೆ ಬೆಸೆಯಲಾಗುತ್ತದೆ. ಈ ಟರ್ಮಿನಲ್ ಭೂತಾನದ ಮತ್ತು ಬಾಂಗ್ಲಾದೇಶದ ಸರಕುಗಳ ಸಾಗಾಣಿಕೆ, ನಿರ್ವಹಣೆ ಮತ್ತು ಜೋಗಿಗೋಫಾದ ಬಹುಮಾದರಿ ಸಾಗಾಣಿಕಾ ಪಾರ್ಕಿನ ಸರಕುಗಳು ಹಾಗು ಬ್ರಹ್ಮಪುತ್ರ ನದಿಯ ಮೇಲಣ ವಿವಿಧ ಸ್ಥಳಗಳಿಗೆ ಸಾಗಾಟವಾಗುವ ಸರಕುಗಳ ಸಾಗಾಟಕ್ಕೂ ಅನುಕೂಲತೆಗಳನ್ನು ಒದಗಿಸಲಿದೆ.

ಸ್ನೇಹಿತರೇ,

ಸಾಮಾನ್ಯ ಮನುಷ್ಯನಿಗೆ ಆರಾಮದಾಯಕ ಸವಲತ್ತುಗಳನ್ನು ಒದಗಿಸುವುದು ಆದ್ಯತೆಯಾಗಿದ್ದಲ್ಲಿ ಮತ್ತು ಸರಕಾರದ ಅಭಿವೃದ್ಧಿಯ ಗುರಿ ಅತ್ಯಂತ ಸ್ಪಷ್ಟವಾಗಿದ್ದರೆ ಹೊಸ ಅವಕಾಶಗಳು ನಿರ್ಮಾಣವಾಗುತ್ತವೆ. ಮಜೂಲಿ ಮತ್ತು ನೇಮತಿ ನಡುವಣ ರೋ-ಪಾಕ್ಸ್ ಸೇವೆ ಇದರಲ್ಲೊಂದು ಯೋಜನೆ. ನೀವಿನ್ನು ರಸ್ತೆ ಮೂಲಕ 425 ಕಿಲೋ ಮೀಟರ್ ದೂರ ಸಾಗಬೇಕಾಗಿಲ್ಲ. ನೀವು ರೋ ಪಾಕ್ಸ್ ಮೂಲಕ ಬರೇ 12 ಕಿಲೋ ಮೀಟರ್ ಪ್ರಯಾಣಿಸಿದರೆ ಸಾಕು. ಮತ್ತು ನೀವು ನಿಮ್ಮ ಸೈಕಲ್, ಸ್ಕೂಟರ್, ಬೈಕ್ ಅಥವಾ ಕಾರನ್ನು ಈ ಹಡಗಿನ ಮೂಲಕ ಸಾಗಿಸಬಹುದು. ಈ ಮಾರ್ಗದಲ್ಲಿ ಸಂಚಾರ ನಡೆಸುವ ಎರಡು ಹಡಗುಗಳು 1600 ಪ್ರಯಾಣಿಕರನ್ನು ಮತ್ತು ಡಜನ್ನುಗಟ್ಟನೆ ವಾಹನಗಳನ್ನು ಏಕಕಾಲದಲ್ಲಿ ಸಾಗಿಸಬಲ್ಲವು. ಅದೇ ಸೌಲಭ್ಯ ಈಗ ಗುವಾಹಟಿಯ ಜನರಿಗೂ ಲಭ್ಯವಾಗಲಿದೆ. ಈಗ ಉತ್ತರ ಮತ್ತು ದಕ್ಷಿಣ ಗುವಾಹಟಿಯ ನಡುವಣ ದೂರ 40 ಕಿಲೋ ಮೀಟರಿನಿಂದ ಬರೇ 3 ಕಿಲೋ ಮೀಟರಿಗೆ ಇಳಿಯಲಿದೆ. ಅದೇ ರೀತಿ ಧುಬ್ರಿ ಮತ್ತು ಹಟ್ಸಿಂಗಿಮರಿಯ ನಡುವಣ ದೂರ ಸುಮಾರು 225 ಕಿಲೋ ಮೀಟರ್ ಇದ್ದದ್ದು 30 ಕಿಲೋ ಮೀಟರಿಗೆ ಇಳಿಯಲಿದೆ.

ಸ್ನೇಹಿತರೇ,

ನಮ್ಮ ಸರಕಾರ ಬರೇ ಜಲಮಾರ್ಗಗಳನ್ನು ಮಾತ್ರವೇ ಅಭಿವೃದ್ಧಿ ಮಾಡುತ್ತಿರುವುದಲ್ಲ, ಇ-ಪೋರ್ಟಲುಗಳನ್ನೂ ಇಂದು ಆರಂಭಿಸಲಾಗಿದೆ. ಖಚಿತ ಮಾಹಿತಿಗಾಗಿ ಇದನ್ನು ಬಳಸುವವರಿಗಾಗಿ ಈ ಸೌಲಭ್ಯವನ್ನು ಖಾತ್ರಿಪಡಿಸಲಾಗಿದೆ. ಕಾರ್-ಡಿ ಪೋರ್ಟಲ್ ಸಕಾಲದಲ್ಲಿ ರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುವ ಎಲ್ಲಾ ಸರಕು ಮತ್ತು ಕ್ರೂಸ್ ಸಂಬಂಧಿ ಸಂಚಾರ ದತ್ತಾಂಶ ಮಾಹಿತಿಯನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಜಿ.ಐ.ಎಸ್. ಆಧಾರಿತ ಭಾರತ್ ಮ್ಯಾಪ್ ಪೋರ್ಟಲ್ ಇಲ್ಲಿಗೆ ಭೇಟಿ ನೀಡುವವರಿಗೆ ಅಥವಾ ವ್ಯಾಪಾರೋದ್ಯಮಕ್ಕಾಗಿ ಬರುವವರಿಗೆ ನೆರವಾಗುತ್ತದೆ. ಬಹು ಮಾದರಿ ಸಂಪರ್ಕವನ್ನು ಆತ್ಮ ನಿರ್ಭರ ಭಾರತಕ್ಕಾಗಿ ಅಭಿವೃದ್ಧಿ ಮಾಡಲಾಗುತ್ತಿದೆ ಮತ್ತು ಅಸ್ಸಾಂ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ಅಸ್ಸಾಂ ಮತ್ತು ಈಶಾನ್ಯಕ್ಕೆ ಜಲ ಮಾರ್ಗ-ರೈಲ್ವೇ-ಹೆದ್ದಾರಿ ಸಂಪರ್ಕದೊಂದಿಗೆ ಅಂತರ್ಜಾಲ ಸಂಪರ್ಕವೂ ಅಷ್ಟೇ ಅವಶ್ಯ. ಈ ನಿಟ್ಟಿನಲ್ಲಿ ಏಕ ಕಾಲಕ್ಕೆ ಕೆಲಸ ಕಾರ್ಯಗಳು ನಡೆಯುತ್ತಿವೆ. ನೂರಾರು ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಈಶಾನ್ಯದ ಮೊದಲ ದತಾಂಶ ಕೇಂದ್ರ ಗುವಾಹಟಿಯಲ್ಲಿ ತಲೆ ಎತ್ತಲಿದೆ ಮತ್ತು ಅದು ದೇಶದಲ್ಲಿ ಆರನೇಯದಾಗಿರುತ್ತದೆ. ಈಶಾನ್ಯದ ಎಲ್ಲಾ ಎಂಟು ರಾಜ್ಯಗಳಿಗೆ ಈ ಕೇಂದ್ರವು ದತ್ತಾಂಶ ಕೇಂದ್ರ ತಾಣವಾಗಿ ನೆರವಾಗಲಿದೆ. ಇ-ಆಡಳಿತಕ್ಕೆ ಈ ದತ್ತಾಂಶ ಕೇಂದ್ರ ಹೆಚ್ಚಿನ ಬಲ, ವೇಗ ದೊರಕಿಸಿಕೊಡಲಿದೆ. ಅಸ್ಸಾಂ ಸಹಿತ ಈಶಾನ್ಯದಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ಯಮ ಮತ್ತು ನವೋದ್ಯಮಕ್ಕೂ ಇದರಿಂದ ಸಹಾಯವಾಗಲಿದೆ. ಬಿ.ಪಿ.ಒ. ಪರಿಸರ ವ್ಯವಸ್ಥೆಯನ್ನು ಇದು ಬಲಪಡಿಸಲಿದೆ. ಅದನ್ನು ಈಶಾನ್ಯದ ಯುವಜನತೆಗಾಗಿ ಕಳೆದ ಕೆಲವು ವರ್ಷಗಳಿಂದ ಅಭಿವೃದ್ಧಿಪಡಿಸಲಾಗುತ್ತಿದೆ. ಈ ರೀತಿಯಲ್ಲಿ ಕೇಂದ್ರವು ಈಶಾನ್ಯದಲ್ಲಿ ಡಿಜಿಟಲ್ ಭಾರತದ ಚಿಂತನೆಯನ್ನು, ಮುನ್ನೋಟವನ್ನು ಬಲಪಡಿಸುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ಭಾರತ ರತ್ನ ಡಾ. ಭೂಪೇನ್ ಹಜಾರಿಕಾ ಬರೆದಿದ್ದಾರೆ: कर्मइ आमार धर्म, आमि नतुन जुगर नतुन मानब, आनिम नतुन स्वर्ग, अबहेलित जनतार बाबे धरात पातिम स्वर्ग, ಅಂದರೆ, ನಮ್ಮ ಕೆಲಸವೇ ನಮ್ಮ ಧರ್ಮ, ನಾವು ಹೊಸ ಕಾಲಮಾನದ ಹೊಸ ಜನರು, ನಿರ್ಲಕ್ಷಿಸಲ್ಪಟ್ಟವರಿಗಾಗಿ ನಾವು ಈ ಭೂಮಿಯಲ್ಲಿ ಸ್ವರ್ಗವನ್ನು ನಿರ್ಮಾಣ ಮಾಡುತ್ತೇವೆ. ಸರಕಾರ ಇಡೀ ದೇಶದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಈ ಸ್ಪೂರ್ತಿಯೊಂದಿಗೆ ಕೆಲಸ ಮಾಡುತ್ತಿದೆ. ಅಸ್ಸಾಂ ಮತ್ತು ಈಶಾನ್ಯ ಭಾರತವೂ ಇಂದು ಇದರಲ್ಲಿ ಸೇರಿದೆ. ಅಸ್ಸಾಮೀ ಸಂಸ್ಕೃತಿ, ಆಧ್ಯಾತ್ಮ, ಬುಡಕಟ್ಟು ಜನರ ಶ್ರೀಮಂತ ಪರಂಪರೆ, ಮತ್ತು ಜೀವವೈವಿಧ್ಯಗಳು ಬ್ರಹ್ಮಪುತ್ರದ ಸುತ್ತಮುತ್ತ ಬೆಳೆದು ನಿಂತ ಪರಂಪರೆಗಳು. ಶ್ರೀಮಂತ ಶಂಕರ ದೇವ ಜೀ ಅವರು ಈ ಪರಂಪರೆಯನ್ನು ಸಶಕ್ತಗೊಳಿಸಲು ಮಜೂಲಿ ದ್ವೀಪಕ್ಕೆ ಬಂದಿದ್ದರು. ಅಂದಿನಿಂದ ಮಜೂಲಿ ಕೂಡಾ ಆಧ್ಯಾತ್ಮದ ಕೇಂದ್ರವಾಗಿ, ಅಸ್ಸಾಂನ ಸಂಸ್ಕೃತಿಯ ಆತ್ಮವಾಗಿ ಗುರುತಿಸಲ್ಪಡುತ್ತಿದೆ. ನೀವೆಲ್ಲರೂ ಸಾತ್ರಿಯಾ ಸಂಸ್ಕೃತಿ ಅನುಸರಿಸಿಕೊಂಡು ಬಂದಿರುವ ರೀತಿ ಶ್ಲಾಘನೀಯ. ಮುಖ ಶಿಲ್ಪ (ಮುಖ ಕವಚ ಕಲೆ) ಮತ್ತು ರಾಸ್ ಹಬ್ಬಕ್ಕೆ ದೇಶದಲ್ಲಿರುವ ಮತ್ತು ವಿಶ್ವಕ್ಕಿರುವ ಉತ್ಸಾಹ, ರೋಮಾಂಚನ ಅದ್ಭುತ. ನೀವು ಮಾತ್ರ ಈ ಶಕ್ತಿಯನ್ನು ಮತ್ತು ಈ ಆಕರ್ಷಣೆಯನ್ನು ಹೊಂದಿದ್ದೀರಿ. ಇದನ್ನು ಉಳಿಸಿಕೊಂಡು ಮುಂದಕ್ಕೆ ಕೊಂಡೊಯ್ಯಬೇಕು.

ಸಹೋದರರೇ ಮತ್ತು ಸಹೋದರಿಯರೇ,

ನಾನು ಸರ್‌ಬಾನಂದ ಸೋನೋವಾಲಾ ಜೀ ಮತ್ತು ಅವರ ಇಡೀಯ ತಂಡವನ್ನು ಮಜೂಲಿ ಮತ್ತು ಅಸ್ಸಾಂನ ಈ ಸಾಂಸ್ಕೃತಿಕ, ಧಾರ್ಮಿಕ ಮತ್ತು ನೈಸರ್ಗಿಕ ಸಾಮರ್ಥ್ಯವನ್ನು ಎತ್ತರಿಸಲು ನಡೆಸುತ್ತಿರುವ ಶ್ಲಾಘನೀಯ ಕೆಲಸಗಳಿಗಾಗಿ ಅಭಿನಂದಿಸುತ್ತೇನೆ. ಸತ್ರಾಸ್ ಮತ್ತು ಇತರ ಪ್ರಮುಖ ಸ್ಥಳಗಳನ್ನು ಅತಿಕ್ರಮಣದಿಂದ ತೆರವು ಮಾಡಲು ಕ್ರಮಗಳು, ಸಾಂಸ್ಕೃತಿಕ ವಿಶ್ವವಿದ್ಯಾಲಯದ ಸ್ಥಾಪನೆ, ಮಜೂಲಿಗೆ “ಜೀವ ವೈವಿಧ್ಯ ಪಾರಂಪರಿಕ ತಾಣ” ಸ್ಥಾನ ಮಾನ, ತೇಜಪುರ-ಮಜೂಲಿ-ಶಿವಸಾಗರ ಪಾರಂಪರಿಕ ಸರ್ಕ್ಯೂಟ್, ನಮಾಮಿ ಬ್ರಹ್ಮಪುತ್ರ ಮತ್ತು ನಮಾಮಿ ಬರಾಕ್ ಗಳು ಅಸ್ಸಾಂನ ಗುರುತಿಸುವಿಕೆಯನ್ನು ಇನ್ನಷ್ಟು ಬಲಪಡಿಸಲಿವೆ.

ಇಂದು ಉದ್ಘಾಟನೆ ಮಾಡಲಾದ ಅಥವಾ ಶಿಲಾನ್ಯಾಸ ಮಾಡಲಾದ ಸಂಪರ್ಕ ಯೋಜನೆಗಳು ಅಸ್ಸಾಂನ ಪ್ರವಾಸೋದ್ಯಮಕ್ಕೆ ಹೊಸ ದ್ವಾರಗಳನ್ನು ತೆರೆಯಲಿವೆ. ಅಸ್ಸಾಂ ಕ್ರೂಸ್ ಪ್ರವಾಸೋದ್ಯಮಕ್ಕೆ ದೇಶದಲ್ಲಿಯೇ ಪ್ರಮುಖ ತಾಣವಾಗಲಿದೆ. ನೇಮತಿ, ಬಿಸ್ವನಾಥ ಘಾಟ್, ಗುವಾಹಟಿ, ಮತ್ತು ಜೋಗಿಗೋಪಾಗಳಲ್ಲಿ ಪ್ರವಾಸಿ ಜೆಟ್ಟಿಗಳ ಅಭಿವೃದ್ಧಿಯಿಂದ ಅಸ್ಸಾಂನ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ದೊರೆಯಲಿದೆ. ದೇಶದ ಅಥವಾ ವಿದೇಶದ ಹೆಚ್ಚು ಖರ್ಚು ಮಾಡಲು ಸಾಮರ್ಥ್ಯ ಇರುವವರು ಕ್ರೂಸ್ ನಲ್ಲಿ ಪ್ರವಾಸ ಕೈಗೊಂಡರೆ ಅದರಿಂದ ಅಸ್ಸಾಂನ ಯುವ ಜನತೆಯ ಆದಾಯದ ದಾರಿಗಳೂ ಹೆಚ್ಚಾಗಲಿವೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಡಿಮೆ ವಿದ್ಯಾಭ್ಯಾಸ ಇರುವವರೂ ಮತ್ತು ಕಡಿಮೆ ಹೂಡಿಕೆ ಮಾಡಿದವರೂ ಕೌಶಲ್ಯ ಯುಕ್ತ ವೃತ್ತಿಪರರಂತೆ ಆದಾಯ ಗಳಿಸಬಲ್ಲರು. ಅಭಿವೃದ್ಧಿಯು ಬಡವರಲ್ಲಿ ಬಡವರಿಗೂ ಮತ್ತು ಸಾಮಾನ್ಯ ನಾಗರಿಕರಿಗೂ ಮುಂದೆ ಬರಲು ಅವಕಾಶಗಳನ್ನು ಕೊಡಬಲ್ಲದು ಎಂಬುದಕ್ಕೆ ಇದು ಉದಾಹರಣೆ. ನಾವು ಈ ರೀತಿಯ ಅಭಿವೃದ್ಧಿಗೆ ವೇಗ ನೀಡಬೇಕು ಮತ್ತು ಅದನ್ನು ನಿಭಾಯಿಸಬೇಕು. ನಾವೆಲ್ಲರೂ ಒಗ್ಗೂಡಿ ಅಸ್ಸಾಂನ್ನು ಮತ್ತು ಈಶಾನ್ಯವನ್ನು ಆತ್ಮನಿರ್ಭರ ಭಾರತದ ಬಲಿಷ್ಟವಾದ ಕಂಭವನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ಮತ್ತೊಮ್ಮೆ , ನಾನು ನಿಮ್ಮೆಲ್ಲರನ್ನೂ ಅಭಿವೃದ್ಧಿಯ ಹೊಸ ಯೋಜನೆಗಳಿಗಾಗಿ ಅಭಿನಂದಿಸುತ್ತೇನೆ.

ಬಹಳ ಬಹಳ ಧನ್ಯವಾದಗಳು!

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
PM Modi to embark on 3-day visit to US to participate in Quad Leaders' Summit, address UNGA

Media Coverage

PM Modi to embark on 3-day visit to US to participate in Quad Leaders' Summit, address UNGA
...

Nm on the go

Always be the first to hear from the PM. Get the App Now!
...
ಅಮೆರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಪ್ರಧಾನಮಂತ್ರಿಯವರ ನಿರ್ಗಮನ ಹೇಳಿಕೆ
September 22, 2021
ಶೇರ್
 
Comments

ಅಮೆರಿಕಾದ ಅಧ್ಯಕ್ಷ ಗೌರವಾನ್ವಿತ ಜೋ ಬೈಡೆನ್ ಅವರ ಆಹ್ವಾನದ ಮೇರೆಗೆ 2021ರ ಸೆಪ್ಟಂಬರ್ 22ರಿಂದ 25ರವರೆಗೆ ಅಮೆರಿಕಾಕ್ಕೆ ಭೇಟಿ ನೀಡುತ್ತಿದ್ದೇನೆ.

ನನ್ನ ಈ ಭೇಟಿಯ ವೇಳೆ ಅಧ್ಯಕ್ಷ ಬೈಡೆನ್ ಅವರೊಂದಿಗೆ ಭಾರತ-ಅಮೆರಿಕಾ ಜಾಗತಿಕ ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಪರಾಮರ್ಶೆ ಮತ್ತು ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಸಲಾಗುವುದು. ಎರಡೂ ರಾಷ್ಟ್ರಗಳ ನಡುವೆ ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರದ ಅವಕಾಶಗಳನ್ನು ಅನ್ವೇಷಿಸುವ ಕುರಿತು ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅವರೊಂದಿಗಿನ ಭೇಟಿಯನ್ನು ಎದುರು ನೋಡುತ್ತಿದ್ದೇನೆ.

ನಾನು ಅಧ್ಯಕ್ಷ ಬೈಡನ್, ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಮಂತ್ರಿ ಯೋಶಿಹೈದ್ ಸುಗಾ ಅವರೊಂದಿಗೆ ಮೊದಲ ಭೌತಿಕ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗಹಿಸಲಿದ್ದೇನೆ. ಶೃಂಗಸಭೆಯು ಈ ವರ್ಷ ಮಾರ್ಚ್ ನಲ್ಲಿ ನಡೆದ ವರ್ಚುವಲ್ ಶೃಂಗಸಭೆಯ ಫಲಿತಾಂಶಗಳ ಪ್ರಗತಿಯನ್ನು ಪರಾಮರ್ಶಿಸಲು ಅವಕಾಶ ಒದಗಿಸಲಿದೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ನಮ್ಮ ಸಮಾನ ಹಂಚಿಕೆಯ ದೃಷ್ಟಿಕೋನದ ಆಧಾರದ ಮೇಲೆ ಭವಿಷ್ಯದ ಸಹಭಾಗಿತ್ವದ ಆದ್ಯತೆಗಳನ್ನು ಗುರುತಿಸಲು ನೆರವಾಗಲಿದೆ.

ನಾನು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮಾರಿಸನ್ ಮತ್ತು ಜಪಾನ್ ನ ಪ್ರಧಾನಮಂತ್ರಿ ಸುಗಾ ಅವರನ್ನು ಭೇಟಿ ಮಾಡಿ ತಮ್ಮ ದೇಶಗಳೊಂದಿಗಿನ ಬಲವಾದ ದ್ವಿಪಕ್ಷೀಯ ಸಂಬಂಧಗಳ ಸ್ಥಿತಿಗತಿ ಪರಾಮರ್ಶೆ ನಡೆಸಲಾಗುವುದು ಮತ್ತು  ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ನಮ್ಮ ಉಪಯುಕ್ತ ವಿನಿಮಯವನ್ನು ಮುಂದುವರಿಸುತ್ತೇನೆ.

ಕೋವಿಡ್-19 ಸಾಂಕ್ರಾಮಿಕ, ಭಯೋತ್ಪಾದನೆಯನ್ನು ಎದುರಿಸುವ ಅಗತ್ಯತೆ, ಹವಾಮಾನ ವೈಪರೀತ್ಯ ಮತ್ತು ಇತರೆ ಪ್ರಮುಖ ಸಮಸ್ಯೆಗಳನ್ನು ಒಳಗೊಂಡಂತೆ ಜಾಗತಿಕ ಸವಾಲುಗಳನ್ನು ಕೇಂದ್ರೀಕರಿಸುವ ವಿಶ್ವಸಂಸ್ಥೆಯ ಮಹಾಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ನಾನು ನನ್ನ ಪ್ರವಾಸವನ್ನು ಮುಕ್ತಾಯಗೊಳಿಸಲಿದ್ದೇನೆ.

ನನ್ನ ಈ ಅಮೆರಿಕಾ ಭೇಟಿ, ಅಮೆರಿಕಾದೊಂದಿಗಿನ ಸಮಗ್ರ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆಯ ಬಲವರ್ಧನೆಗೆ ಮತ್ತು ನಮ್ಮ ಕಾರ್ಯತಂತ್ರ ಪಾಲುದಾರರಾದ ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗಿನ ಸಂಬಂಧ ಬಲಪಡಿಸಲು ಮತ್ತು ಪ್ರಮುಖ ಜಾಗತಿಕ ಸಮಸ್ಯೆಗಳ ಕುರಿತು ನಮ್ಮ ಸಹಯೋಗವನ್ನು ಮುಂದುವರಿಸಲು ಒಂದು ಸುಸಂದರ್ಭವಾಗಿದೆ.