ಶ್ರೀ ವಿನೀತ್ ಜೈನ್,  ಭಾರತ ಮತ್ತು ವಿದೇಶಗಳಿಂದ ಆಗಮಿಸಿದ ವಿಶೇಷ ಅತಿಥಿಗಳೇ, ಎಲ್ಲರಿಗೂ ಶುಭ ಮುಂಜಾನೆ. 

ನಿಮ್ಮೆಲ್ಲರೊಂದಿಗೆ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಮತ್ತೊಮ್ಮೆ ಪಾಲ್ಗೊಳ್ಳುತ್ತಿರುವುದಕ್ಕೆ ನನಗೆ ಸಂತೋಷವೆನಿಸುತ್ತಿದೆ. ವ್ಯಾಪಾರ ಶೃಂಗಸಭೆಗೆ ನಿಮ್ಮ ಥೀಮ್ ನ ವಿಷಯದ ಮೊದಲ ಪದವನ್ನು ಸಮಾಜ ಎಂದು ಆಯ್ದುಕೊಂಡಿದ್ದಕ್ಕೆ ನಿಮಗೆ ಅಭಿನಂದಿಸಬಯಸುತ್ತೇನೆ. 

 ಅಭಿವೃದ್ಧಿಯನ್ನು ಸಮರ್ಥನೀಯವಾಗಿಸುವುದು ಹೇಗೆ ಎಂಬ ಸವಾಲಿನ ಬಗ್ಗೆ ಇಲ್ಲಿಯ ಜನರು ಚರ್ಚಿಸುತ್ತಿರುವುದನ್ನೂ ಕಂಡು ನನಗೆ ಸಂತೋಷವೆನಿಸುತ್ತಿದೆ. ಇದು ನಿಮ್ಮ ಥೀಮ್ ನ 2 ನೇ ಪದವಾಗಿದೆ. 

ಮತ್ತು ಈ ಸಮ್ಮೇಳನದ ಥೀಮ್ ನ 2 ನೇ ಪದವಾದ ಮಾಪನೀಯತೆ ಬಗ್ಗೆ ಮಾತನಾಡಿದಾಗ, ಭಾರತಕ್ಕಾಗಿ ಪರಿಹಾರಗಳ ಕುರಿತು ನೀವು ನಿಜವಾಗಿಯೂ ಚರ್ಚಿಸುತ್ತಿದ್ದೀರಿ ಎಂಬ ಭರವಸೆ ಮತ್ತು ವಿಶ್ವಾಸವನ್ನು ಅದು ನನಗೆ ನೀಡುತ್ತದೆ.   

ಸ್ನೇಹಿತರೇ,

2013 ರ ದ್ವಿತೀಯಾರ್ಧ ಮತ್ತು 2014 ರ ಆರಂಭದ ದಿನಗಳಲ್ಲಿ ದೇಶ ಎದುರಿಸುತ್ತಿದ್ದ ಸವಾಲುಗಳ ಬಗ್ಗೆ ಇಲ್ಲಿ ನೆರೆದಿರುವ ನಿಮ್ಮೆಲ್ಲರಿಗಿಂತ ಚೆನ್ನಾಗಿ ಯಾರು ತಾನೆ ಅರಿಯಬಲ್ಲರು;

ಹತೋಟಿ ಮೀರಿದ ಹಣದುಬ್ಬರ ಪ್ರತಿ ಕುಟುಂಬದ ಬೆನ್ನು ಮೂಳೆ ಮುರಿಯುವಂತೆ ಮಾಡಿತ್ತು.  

ಚಾಲ್ತಿ ಖಾತೆ ಕೊರತೆ ಮತ್ತು ರಾಜ್ಯದ ಆದಾಯದ ಕೊರತೆಯಲ್ಲಿ ಹೆಚ್ಚಳ ದೇಶದ ಆರ್ಥಿಕ ಸ್ಥಿತಿಗೆ ಬಹುದೊಡ್ಡ ಬೆದರಿಕೆ ಒಡ್ಡಿತ್ತು. 

ಈ ಎಲ್ಲ ಮಾನದಂಡಗಳು ಕತ್ತಲೆ ಕವಿದ ಭವಿಷ್ಯವನ್ನು ಸೂಚಿಸುತ್ತಿದ್ದವು

ದೇಶ ಸಂಪೂರ್ಣ ಕಾರ್ಯ ನೀತಿಯ ನಿಷ್ಕ್ರೀಯ ಸ್ಥಿತಿ ಎದುರಿಸುತ್ತಿತ್ತು

ಇದು ಆರ್ಥಿಕತೆ ಯಾವ ಹಂತ ತಲುಪಬೇಕಿತ್ತೋ ಅದನ್ನು ಸಾಧಿಸಲಾಗದಂತೆ ತಡೆಯೊಡ್ಡಿತ್ತು.

ಫ್ರೆಜೈಲ್ ಫೈವ್ ಕ್ಲಬ್ ನ ಈ ಸದಸ್ಯ ರಾಷ್ಟ್ರದ ಆರೋಗ್ಯದ ಬಗ್ಗೆ ಜಾಗತಿಕ ಬಳಗ ಚಿಂತೆಗೀಡಾಗಿತ್ತು.

ಪ್ರಸ್ತುತ ಉದ್ಭವಿಸಿದ ಸನ್ನಿವೇಶಕ್ಕೆ ಶರಣಾಗುವ ಗ್ರಹಿಕೆ ಮೂಡಿತ್ತು.   

ಸ್ನೇಹಿತರೆ,

ಇಂಥ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಜನರ ಸೇವೆಗೆ ಮುಂದಾಯಿತು ಮತ್ತು ಇಂದು ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತಿದೆ.

2014 ರ ನಂತರ ಹಿಂಜರಿಕೆಯನ್ನು ಭರವಸೆಗೆ ಪರಿವರ್ತಿಸಲಾಯಿತು.

ಅಡೆತಡೆಗಳನ್ನು ಆಶಾವಾದಕ್ಕೆ ಬದಲಾಯಿಸಲಾಯಿತು.

ಮತ್ತು

ಸಮಸ್ಯೆಗಳನ್ನು ಉಪಕ್ರಮಗಳಿಗೆ ಮಾರ್ಪಡಿಸಲಾಯಿತು

2014 ರಿಂದ ಭಾರತ ಎಲ್ಲ ಅಂತಾರಾಷ್ಟ್ರೀಯ ಶ್ರೇಯಾಂಕಗಳು ಮತ್ತು ಸೂಚ್ಯಂಕಗಳಲ್ಲಿ ಗಣನೀಯ ಅಭಿವೃದ್ಧಿಯನ್ನು ಸಾಧಿಸಿದೆ.

ಇದು ಕೇವಲ ಭಾರತ ಹೇಗೆ ಬದಲಾಗುತ್ತಿದೆ ಎಂಬುದನ್ನು ಮಾತ್ರವಲ್ಲ ಭಾರತದ ಕುರಿತು ವಿಶ್ವದ ಗ್ರಹಿಕೆ ಕೂಡಾ ಬದಲಾಗುತ್ತಿರುವುದನ್ನು ತೋರಿಸುತ್ತದೆ. 

ಈ ಶೀಘ್ರಗತಿಯ ಬದಲಾವಣೆಗಳನ್ನು ಮೆಚ್ಚಿಕೊಳ್ಳದ ಕೆಲವರಿದ್ದಾರೆ ಎಂಬುದರ ಅರಿವು ನನಗಿದೆ.

ಶ್ರೇಯಾಂಕಗಳಿಂದ ಸುಧಾರಣೆಯನ್ನು ಕಾಗದದ ಮೇಲೆ ಮಾತ್ರ ಮಾಡಲು ಸಾಧ್ಯ ವಾಸ್ತವದಲ್ಲಿ ಯಾವ ಬದಲಾವಣೆ ಆಗುವುದಿಲ್ಲ ಎಂಬುದು  ಅವರ ಸಲಹೆ.

ಇದು ಸತ್ಯಕ್ಕೆ ದೂರವಾದದ್ದು ಎಂದು ನನಗನ್ನಿಸುತ್ತದೆ. ಶ್ರೇಯಾಂಕಗಳು ಮಂದಗತಿಯ ದಿಕ್ಸೂಚಿಗಳಿದ್ದಂತೆ

ವಾಸ್ತವ ಬದಲಾವಣೆ ಮೊದಲಾದರೂ ಶ್ರೇಯಾಂಕದಲ್ಲಿ ಕೆಲ ಸಮಯದ ನಂತರ ಗೋಚರಿಸುತ್ತವೆ.

ವ್ಯಾಪಾರ ಸರಳೀಕರಣದ ಉದಾಹರಣೆಯನ್ನೇ ತೆಗೆದುಕೊಳ್ಳಿ. ನಾಲ್ಕು ವರ್ಷಗಳಲ್ಲಿ ನಮ್ಮ ಶ್ರೇಯಾಂಕ 142 ನೇ ಸ್ಥಾನದಿಂದ ಐತಿಹಾಸಿಕ ವೃದ್ಧಿ ಕಂಡು 77 ನೇ ಸ್ಥಾನಕ್ಕೆ ತಲುಪಿದೆ.

ಆದರೆ ವಾಸ್ತವ ಪರಿಸ್ಥಿತಿ ಸುಧಾರಣೆಗಳಿಂದಲೇ  ಶ್ರೇಯಾಂಕದಲ್ಲಿ ಬದಲಾವಣೆ ಮುಂಚೂಣಿಯಲ್ಲಿದೆ.  

ಈಗ ಹೊಸ ವ್ಯಾಪಾರ ಆರಂಭಕ್ಕೆ ನಿರ್ಮಾಣದ ಪರವಾನಿಗೆಗಳು ಬೇಗ ಲಭಿಸುತ್ತವೆ ಮತ್ತು ಅದೇ ರೀತಿ ವಿದ್ಯುತ್ ಸಂಪರ್ಕ ಮತ್ತು ಇತರ ಅನುಮೋದನೆಗಳು ಶೀಘ್ರವೇ ದೊರೆಯುತ್ತಿವೆ.

ಸಣ್ಣ ವ್ಯಾಪಾರಸ್ಥರಿಗೆ ಕೂಡಾ ಅನುಸರಣೆ ಸರಳವಾಗಿದೆ.

40 ಲಕ್ಷ ರೂಪಾಯಿವರೆಗಿನ ವಹಿವಾಟು ಹೊಂದಿರುವ ವ್ಯಾಪಾರಕ್ಕೆ ಈಗ ಜಿ ಎಸ್ ಟಿ ನೊಂದಣಿ ಮಾಡಿಸಿಕೊಳ್ಳುವ ಅವಶ್ಯಕತೆಯಿಲ್ಲ. 

60 ಲಕ್ಷ ರೂಪಾಯಿವರೆಗಿನ ವಹಿವಾಟು ಹೊಂದಿರುವ ವ್ಯಾಪಾರಕ್ಕೆ ಈಗ ಆದಾಯ ತೆರಿಗೆ ಪಾವತಿಸುವ ಅವಶ್ಯಕತೆಯಿಲ್ಲ. 

1.5 ಕೋಟಿ ರೂಪಾಯಿವರೆಗಿನ ವಹಿವಾಟು ಹೊಂದಿರುವ ವ್ಯಾಪಾರ ಈಗ ಅತ್ಯಲ್ಪ ತೆರಿಗೆ ದರದೊಂದಿಗೆ ಸಂಯೋಜನಾ ವ್ಯವಸ್ಥೆಗೆ  ಅರ್ಹತೆ ಪಡೆಯುತ್ತವೆ.

ಇದೇ ರೀತಿ ವಿಶ್ವದ ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತದ ರಾಂಕಿಂಗ್ 2013 ರ 65 ಕ್ಕೆ ಹೋಲಿಸಿದಲ್ಲಿ 2017 ರಲ್ಲಿ 40 ಕ್ಕೇರಿದೆ.

ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರ ಸಂಖ್ಯೆ 45 ಪ್ರತಿಶತ ಹೆಚ್ಚಿದೆ, ಮಾನ್ಯತೆ ಪಡೆದ ಹೋಟಲ್ ಗಳ ಸಂಖ್ಯೆ 50 ಪ್ರತಿಶತ ಹೆಚ್ಚಿದೆ ಮತ್ತು 2013 ರಿಂದ 2017 ರ ಮಧ್ಯೆ ಪ್ರವಾಸೋದ್ಯಮದಲ್ಲಿ ವಿದೇಶಿ ವಿನಿಮಯ ಗಳಿಕೆ ದರವೂ 50 ಪ್ರತಿಶತ ಹೆಚ್ಚಿದೆ

ಇದರಂತೆ, ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ ನಲ್ಲಿ ಭಾರತದ ಶ್ರೇಯಾಂಕವು 2014 ರಲ್ಲಿ ಇದ್ದ 76, 2018 ಕ್ಕೆ 57 ಕ್ಕೇರಿತು.

ಹೊಸ ಆವಿಷ್ಕಾರಗಳಲ್ಲಿನ ಈ ಅಲೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಸುಧಾರಣೆಯನ್ನು  ಸಂಸ್ಕೃತಿಯಲ್ಲೂ ಕಾಣಬಹುದಾಗಿದೆ. ಸಲ್ಲಿಸಿರುವ ಪೇಟೆಂಟ್ ಗಳು ಮತ್ತು ಟ್ರೇಡ್ ಮಾರ್ಕ್ ಗಳ ಸಂಖ್ಯೆಯಲ್ಲೂ ಹೆಚ್ಚಳ ಕಾಣಿಸುತ್ತಿದೆ.

ಸ್ನೇಹಿತರೇ,

ಹೊಸ ಶೈಲಿಯ ಆಡಳಿತದಿಂದಾಗಿರುವ ಈ ಬದಲಾವಣೆ ಆಗಾಗ ಆಸಕ್ತಿಕರ ರೀತಿಯಲ್ಲಿ ಕಂಡುಬರುತ್ತದೆ.

2014ರಿಂದ ಹೇಗೆ ಪರಿಸ್ಥಿತಿಗಳು ಬದಲಾಗಿವೆ ಎಂಬುದಕ್ಕೆ ನಾನು ನಿಮಗೆ ಆಸಕ್ತಿಕರ ಉದಾಹರಣೆ ಕೊಡಲು ಬಯಸುತ್ತೇನೆ.

ನಾವೀಗ ವಿವಿಧ ಬಗೆಯ ಸ್ಪರ್ಧೆಗಳನ್ನು ಎದುರಿಸುತ್ತಿದ್ದೇವೆ.

ಸಚಿವಾಲಯಗಳ ನಡುವಿನ ಸ್ಪರ್ಧೆ,

ರಾಜ್ಯಗಳ ನಡುವಿನ ಸ್ಪರ್ಧೆ,

ಅಭಿವೃದ್ಧಿಗಾಗಿ ಸ್ಪರ್ಧೆ,

ಗುರಿಯನ್ನು ಸಾಧಿಸುವ ಸ್ಪರ್ಧೆ.

ಭಾರತ, ಮೊದಲು ಶೇ 100 ರಷ್ಟು ನೈರ್ಮಲ್ಯ ಸಾಧಿಸುತ್ತದೆಯೋ ಅಥವಾ ಶೇ 100 ರಷ್ಟು ವಿದ್ಯುದೀಕರಣ ಹೊಂದುತ್ತದೆಯೋ ಎಂಬುದಕ್ಕೆ ಸ್ಪರ್ಧೆ ಇಂದು ಏರ್ಪಟ್ಟಿದೆ.

ಎಲ್ಲಾ ವಸತಿ ಪ್ರದೇಶಗಳಿಗೆ ಮೊದಲು ರಸ್ತೆ ಸಂಪರ್ಕ ದೊರೆಯುತ್ತದೆಯೋ ಅಥವಾ ಮೊದಲು ಎಲ್ಲ ಮನೆಗಳಿಗೆ ಅನಿಲ ಸಂಪರ್ಕ ಲಭಿಸುತ್ತದೆಯೋ ಎಂಬುದರ ನಡುವಿನ ಸ್ಪರ್ಧೆ.

ಯಾವ ರಾಜ್ಯ ಹೆಚ್ಚು ಬಂಡವಾಳ ಹೂಡಿಕೆಯನ್ನು ಆಕರ್ಷಿಸುತ್ತದೆ ಎಂಬುದರ ಸ್ಪರ್ಧೆಯಿದೆ.

There is competition as to which states will build houses for the poor fastest.

ಯಾವ ರಾಜ್ಯ ಬಡವರಿಗೆ ಅತ್ಯಂತ ಶೀಘ್ರಗತಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡುತ್ತದೆ ಎಂಬುದರ ಬಗ್ಗೆ ಸ್ಪರ್ಧೆ.

ಮಹಾತ್ವಾಕಾಂಕ್ಷೆ ಹೊಂದಿರುವ ಯಾವ ಜಿಲ್ಲೆ ಅತ್ಯಂತ ವೇಗವಾಗಿ ಪ್ರಗತಿ ಹೊಂದುವುದು ಎಂಬ ಸ್ಪರ್ಧೆ.

2014 ರ ಮೊದಲೂ ನಾವು ವಿವಿಧ ಬಗೆಯ ಸ್ಪರ್ಧೆಗಳ ಬಗ್ಗೆ ಕೇಳಿಪಟ್ಟಿದ್ದೇವೆ.

ಸಚಿವಾಲಯಗಳ ನಡುವಿನ ಸ್ಪರ್ಧೆ,

ವ್ಯಕ್ತಿಗಳ ನಡುವಿನ ಸ್ಪರ್ಧೆ,

ಭ್ರಷ್ಟಾಚಾರದಲ್ಲಿ ಸ್ಪರ್ಧೆ,

ವಿಳಂಬ ಮಾಡುವುದರಲ್ಲಿ ಸ್ಪರ್ಧೆ.

ಯಾರು ಹೆಚ್ಚು ಭ್ರಷ್ಟಾಚಾರ ಮಾಡಬಲ್ಲರು ಎಂಬುದರ ಸ್ಪರ್ಧೆ,

ಯಾರು ಅತ್ಯಂತ ವೇಗವಾಗಿ ಭ್ರಷ್ಟಾಚಾರ ಮಾಡಬಲ್ಲರು ಎಂಬ ಸ್ಪರ್ಧೆ,

ಭ್ರಷ್ಟಾಚಾರದಲ್ಲಿ ಯಾರು ಆವಿಷ್ಕಾರ ಮಾಡಬಲ್ಲರು ಎಂಬುದರ ಸ್ಪರ್ಧೆ.

ಕಲ್ಲಿದ್ದಲು ಅಥವಾ ಸ್ಪೆಕ್ಟ್ರಮ್ ಯಾವುದು ಹೆಚ್ಚು ಹಣ ಗಳಿಸಿಕೊಡುತ್ತೆ ಎಂಬ ಸ್ಪರ್ಧೆ.

ಸಿ ಡಬ್ಲ್ಯೂ ಜಿ ಅಥವಾ ರಕ್ಷಣಾ ಒಪ್ಪಂದಗಳು ಯಾವುದು ಹೆಚ್ಚು ಹಣ ಗಳಿಸಿಕೊಡುತ್ತೆ ಎಂಬ ಸ್ಪರ್ಧೆ.

ನಾವು ಇವೆಲ್ಲವನ್ನೂ ನೋಡಿದ್ದೇವೆ ಮತ್ತು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಂತಹ ಕ್ರೀಡಾಳುಗಳನ್ನೂ ಕಂಡಿದ್ದೇವೆ.

ನೀವು ಯಾವ ರೀತಿಯ ಸ್ಪರ್ಧೆಗೆ ಆದ್ಯತೆ ನೀಡುತ್ತೀರಿ ಎಂಬುದನ್ನು ನಿಮಗೇ ಬಿಡುತ್ತೇನೆ.

ಸ್ನೇಹಿತರೇ

ದಶಕಗಳಿಂದ ಭಾರತದಲ್ಲಿ ಕೆಲವು ವಿಷಯಗಳು ಅಸಾಧ್ಯವೆಂದೇ ಬಿಂಬಿಸಲಾಗಿತ್ತು. ಆದರೆ 2014 ರ ನಂತರ ನಮ್ಮ ರಾಷ್ಟ್ರ ಸಾಧಿಸಿರುವ ಪ್ರಗತಿಯನ್ನು ಕಂಡು 130 ಕೋಟಿ ಭಾರತೀಯರು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬ ವಿಶ್ವಾಸ ನನ್ನಲ್ಲಿ ಮೂಡಿದೆ.  

नामुमकिन अब मुमकिन है.

ಸ್ವಚ್ಛ ಭಾರತ ಅಸಾಧ್ಯವೆಂದು ಹೇಳಲಾಗಿತ್ತು ಆದರೆ ಭಾರತದ ಜನತೆ ಅದನ್ನು ಸಾಧಿಸಿ ತೋರಿಸಿದ್ದಾರೆ.

ಭಾರತದಲ್ಲಿ ಭೃಷ್ಟಾಚಾರ ಮುಕ್ತ ಸರ್ಕಾರ ಅಸಾಧ್ಯವೆಂದು ಹೇಳಲಾಗಿತ್ತು ಆದರೆ ಭಾರತದ ಜನತೆ ಅದನ್ನು ಸಾಧಿಸಿ ತೋರಿಸಿದ್ದಾರೆ.

ಜನರಿಗೆ ಅವರ ಬಾಕಿ ಪಾವತಿಸುವ ಪ್ರಕ್ರಿಯಯಿಂದ ಭೃಷ್ಟಾಚಾರ ನಿರ್ಮೂಲನೆ ಅಸಾಧ್ಯವೆಂದು ಹೇಳಲಾಗಿತ್ತು ಆದರೆ ಭಾರತದ ಜನತೆ ಅದನ್ನು ಸಾಧಿಸಿ ತೋರಿಸಿದ್ದಾರೆ.

ತಂತ್ರಜ್ಞಾನದ ಶಕ್ತಿಯನ್ನು ಬಳಸುವುದು ಬಡವರಿಂದ ಅಸಾಧ್ಯ ಎಂದು ಹೇಳಲಾಗುತ್ತಿತ್ತು, ಆದರೆ ಭಾರತೀಯರು ಅದನ್ನು ಸಾಧ್ಯವಾಗಿಸುತ್ತಿದ್ದಾರೆ.

ನೀತಿ ನಿರೂಪಣೆಯಲ್ಲಿ ಸ್ವ ವಿವೇಚನೆ ಮತ್ತು ಸ್ವೇಚ್ಛಾಚಾರ ನಿರ್ಮೂಲನೆ ಅಸಾಧ್ಯ ಎಂದು ಹೇಳಲಾಗುತ್ತಿತ್ತು. ಆದರೆ  ಭಾರತೀಯರು ಅದನ್ನು ಸಾಧ್ಯವಾಗಿಸುತ್ತಿದ್ದಾರೆ.

ಭಾರತದಲ್ಲಿ ಆರ್ಥಿಕ ಸುಧಾರಣೆ ಅಸಾಧ್ಯ ಎಂದು ಹೇಳಲಾಗುತ್ತಿತ್ತು. ಆದರೆ  ಭಾರತೀಯರು ಅದನ್ನು ಸಾಧ್ಯವಾಗಿಸುತ್ತಿದ್ದಾರೆ.

ಸರ್ಕಾರಗಳು ಅಭಿವೃದ್ಧಿಶೀಲ ಮತ್ತು ಅದೇ ಸಮಯಕ್ಕೆ ಬಡವರ ಪರವಾಗಿರಲು ಸಾಧ್ಯವಿಲ್ಲ ಎಂಬ ಗ್ರಹಿಕೆ ಅಥವಾ ಸಿದ್ಧಾಂತವಿತ್ತು ಆದರೆ ಇವೆರಡೂ ಒಟ್ಟಿಗೇ ಸಾಧಿಸಲಾಗುತ್ತದೆ ಎಂಬುದನ್ನು ಭಾರತದ ಜನತೆ ಸಾಬೀತುಪಡಿಸಿದ್ದಾರೆ.

ಹಣದುಬ್ಬರ ಸಮಸ್ಯೆ ಎದುರಿಸದೇ ಅಭಿವೃದ್ಧಿಶೀಲ ಆರ್ಥಿಕತೆ ದೀರ್ಘಕಾಲದವರೆಗೆ ಬೆಳೆಯಲು ಸಾಧ್ಯವಿಲ್ಲ ಎಂಬ ಗ್ರಹಿಕೆ ಅಥವಾ ಸಿದ್ಧಾಂತದ ಬಗ್ಗೆ ನನಗೆ ಹೇಳಲಾಗಿತ್ತು ;

1991 ರ ನಂತರದ ಉದಾರೀಕರಣದ ಬಳಿಕ ನಮ್ಮ ದೇಶದಲ್ಲಿ ಆಡಳಿಕ್ಕೆ ಬಂದ ಬಹುತೇಕ ಸರ್ಕಾರಗಳು ಈ ಸಮಸ್ಯೆಯನ್ನು ಎದುರಿಸಬೇಕಾಯಿತು. ಇದನ್ನು ತಜ್ಞರು ಅಲ್ಪ ಅಭಿವೃದ್ಧಿಯ ನಂತರದ ಆರ್ಥಿಕತೆಯ ‘ಹೆಚ್ಚಿದ ತಾಪ’ ಎಂದೇ ಕರೆಯುತ್ತಾರೆ.

 ಇದರ ಪರಿಣಾಮವಾಗಿ ನಾವು ಸಮರ್ಥನೀಯ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಲೇ ಇಲ್ಲ

ನೀವೆಲ್ಲ ನೆನಪಿಸಿಕೊಳ್ಳುವುದಾದರೆ 1991 ರಿಂದ 1996 ರವರೆಗೂ ಇದ್ದಂತಹ ನಮ್ಮ ಸರ್ಕಾರದ ಸಮಯದಲ್ಲಿ ಸರಾಸರಿ ಅಭಿವೃದ್ಧಿ 5% ರಷ್ಟಿತ್ತು ಹಾಗೂ ಹಣದುಬ್ಬರ ಸರಾಸರಿ 10 ಪ್ರತಿಶತಕ್ಕಿಂತಲೂ ಹೆಚ್ಚಿತ್ತು:

ನಮಗಿಂತಲೂ ಮೊದಲು 2009 ರಿಂದ 14 ರವರೆಗಿನ ಸರ್ಕಾರ ಆಡಳಿತಾವಧಿಯಲ್ಲಿ ಸರಾಸರಿ ಅಭಿವೃದ್ಧಿ ಸುಮಾರು 6% ರಷ್ಟಿತ್ತು ಹಾಗೂ ಹಣದುಬ್ಬರ ಕೂಡಾ ಎರಡಂಕಿಗಳಲ್ಲಿತ್ತು.

ಸ್ನೇಹಿತರೆ,

2014 ರಿಂದ 2019 ರವರೆಗೆ ದೇಶ ಸರಾಸರಿ ಅಭಿವೃದ್ಧಿಯನ್ನು ಸುಮಾರು 7.4% ರಷ್ಟು ಹಾಗೂ ಹಣದುಬ್ಬರ ಅದಕ್ಕಿಂತ ಕಡಿಮೆ 4.5% ರಷ್ಟು ದಾಖಲಾಗಿದೆ.

ಭಾರತೀಯ ಆರ್ಥಿಕತೆಯ ಉದಾರೀಕರಣದ ನಂತರ ಯಾವುದೇ ಸರ್ಕಾರದ ಆಡಳಿತಾವಧಿಯಲ್ಲಿ ಕಂಡಂತಹ ಹೆಚ್ಚಿನ ಅಭಿವೃದ್ಧಿ ಹಾಗೂ ಕಡಿಮೆ ಹಣದುಬ್ಬರ ದರ ಇದಾಗಿದೆ.

ಈ ಬದಲಾವಣೆಗಳು ಮತ್ತು ಸುಧಾರಣೆಗಳೊಂದಿಗೆ ನಮ್ಮ ಅರ್ಥವ್ಯವಸ್ಥೆ ಮುಂದುವರಿಯುತ್ತಿದ್ದಂತೆ ಪರಿವರ್ತನೆಯಾಗುತ್ತಿದೆ.

ಭಾರತೀಯ ಆರ್ಥಿಕತೆ ತನ್ನ ಹಣಕಾಸು ಸಂಪನ್ಮೂಲಗಳ ಗುಚ್ಛವನ್ನು ವಿಸ್ತರಿಸಿಕೊಂಡಿದೆ. 

ಹೂಡಿಕೆಯ ಅವಶ್ಯಕತೆಗಳಿಗೆ ಬ್ಯಾಂಕ್ ಗಳ ಸಾಲಗಳ ಮೇಲೆ ಅವಲಂಬಿತವಾಗಿಲ್ಲ.

ಉದಾಹರಣೆಗೆ ಬಂಡವಾಳ ಮಾರುಕಟ್ಟೆಯಿಂದ ನಿಧಿ ಸಂಗ್ರಹ 

2011-12 ರಿಂದ 2013-14 ರ ಅವಧಿಯಲ್ಲಿ ಅಂದರೆ ಈ ಸರ್ಕಾರದ ಆಡಳಿತಾವಧಿಗೂ 3 ವರ್ಷ ಮೊದಲು,

ಈಕ್ವಿಟಿ ಮೂಲಕ ಸಂಗ್ರಹಿಸಲಾದ ಸರಾಸರಿ ಮೊತ್ತ ವಾರ್ಷಿಕ ಸುಮಾರು 14 ಸಾವಿರ ಕೋಟಿ ರೂಪಾಯಿಯಾಗಿತ್ತು.

ಕಳೆದ ನಾಲ್ಕು ವರ್ಷಗಳಲ್ಲಿ ಈ ಮೊತ್ತ ವಾರ್ಷಿಕ 43 ಸಾವಿರ ಕೋಟಿ ರೂಪಾಯಿಯಾಗಿದೆ. ಇದು ಸುಮಾರು 3 ಪಟ್ಟು ವೃದ್ಧಿಸಿದೆ.

2011 ರಿಂದ 2014 ರ ಅವಧಿಯಲ್ಲಿ ಪರ್ಯಾಯ ಹೂಡಿಕೆ ನಿಧಿ ಒಟ್ಟು ಮೊತ್ತ 4 ಸಾವಿರ ಕೋಟಿಗಿಂತ ಕಡಿಮೆ.    

ಆರ್ಥಿಕತೆಯಲ್ಲಿ ಹಣಕಾಸಿನ ನೆರವಿನ ಮೂಲವನ್ನು ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.

ಮತ್ತು ನೀವು ಇದರ ಫಲಿತಾಂಶವನ್ನು ಕಾಣಬಹುದಾಗಿದೆ. – 2014 ರಿಂದ 2018 ರವರೆಗೆ 4 ವರ್ಷಗಳಲ್ಲಿ ಪರ್ಯಾಯ ಹೂಡಿಕೆ ನಿಧಿಯಿಂದ ಸಂಗ್ರಹಿಸಿದ ಮೊತ್ತ 81 ಸಾವಿರ ಕೋಟಿಗಿಂತಲೂ ಹೆಚ್ಚು.

ಇದು 20 ಪಟ್ಟಿಗಿಂತಲೂ ಹೆಚ್ಚಿನ ಏರಿಕೆಯಾಗಿದೆ.

ಇದರಂತೆಯೇ ಕಾರ್ಪೋರೇಟ್ ಬಾಂಡ್ ಗಳ ಖಾಸಗಿ ನಿಯೋಜನೆ ಉದಾಹರಣೆಯನ್ನು ನೊಡೋಣ

2011 ರಿಂದ 2014 ರವರೆಗೆ ಸಂಗ್ರಹಿಸಲಾದ ನಿಧಿಯ ಸರಾಸರಿ ಮೊತ್ತ ಅಂದಾಜು 3 ಲಕ್ಷ ಕೋಟಿ ಅಥವಾ 40 ಬಿಲಿಯನ್ ಡಾಲರ್ ಆಗಿದೆ.

ಈಗ ಕಳೆದ ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆ ಸರಾಸರಿ 2.5 ಲಕ್ಷ ಕೋಟಿ ಅಥವಾ 75 ಬಿಲಿಯನ್ ಡಾಲರ್ ಗಳಿಗೆ ಏರಿಕೆಯಾಗಿದೆ. ಇದು ಸುಮಾರು 75% ರಷ್ಟು ಹೆಚ್ಚಾದಂತಾಗಿದೆ.

ಈ ಎಲ್ಲ ಉದಾಹರಣೆಗಳು ಭಾರತದ ಆರ್ಥಿಕತೆಯಲ್ಲಿ ತೋರಿಸುವ ವಿಶ್ವಾಸದ ಸಂಕೇತವಾಗಿದೆ.

ಇಂದು ಸ್ಥಳೀಯ ಹೂಡಿಕೆದಾರರು ಮಾತ್ರವಲ್ಲದೆ ವಿಶ್ವದೆಲ್ಲೆಡೆಯ ಹೂಡಿಕೆದಾರರು ಇಂಥ ವಿಶ್ವಾಸವನ್ನು

ತೋರಿಸುತ್ತಿದ್ದಾರೆ.

ಮತ್ತು ಚುನಾವಣಾ ಪೂರ್ವ ವರ್ಷಗಳ ಧೋರಣೆಯನ್ನು ಬದಲಿಸುತ್ತಾ ಭಾರತದ ಬಗ್ಗೆ ತೋರಿಸಲಾದ ಈ ವಿಶ್ವಾಸ ಮುಂದುವರಿಯುತ್ತಲೇ ಇದೆ.

ಕಳೆದ 4 ವರ್ಷಗಳಲ್ಲಿ ದೇಶ ಪಡೆದ ವಿದೇಶಿ ನೇರ ಬಂಡವಾಳ ಹೂಡಿಕೆ 2014 ಕ್ಕಿಂತ ಮುಂಚಿನ 7 ವರ್ಷಕ್ಕೆ ಸಮನಾಗಿದೆ.

ಇದೆಲ್ಲವನ್ನೂ ಸಾಧಿಸಲು ಭಾರತದ ಪರಿವರ್ತನೆಗೆ ಸುಧಾರಣೆಗಳ ಅಗತ್ಯವಿದೆ.  

ಮತ್ತು ದಿವಾಳಿತನದ ಸಂಹಿತೆ, ಜಿ ಎಸ್ ಟಿ, ರಿಯಲ್ ಎಸ್ಟೇಟ್ ಅಧಿನಿಯಮ ಮೊದಲಾದವುಗಳ ಮೂಲಕ ಮುಂಬರುವ ದಶಕಗಳಲ್ಲಿ ಹೆಚ್ಚಿನ ಅಭಿವೃದ್ಧಿಗೆ ಸಧೃಡ ಅಡಿಪಾಯ ಹಾಕಲಾಗಿದೆ.  

ನಾಲ್ಕು ವರ್ಷಗಳ ಹಿಂದೆ, ಸುಸ್ತಿದಾರರು ಆರ್ಥಿಕ ಮತ್ತು ಕಾರ್ಯಾಚರಣೆ ಸಾಲದಾತರಿಗೆ ಪೂರ್ವನಿಯೋಜಿತವಾಗಿ 3 ಲಕ್ಷ ಕೋಟಿ ಅಥವಾ 40 ಬಿಲಿಯನ್ ಡಾಲರ್ ಗಳಷ್ಟು ಹಣವನ್ನು ವಾಪಸ್ ನೀಡುತ್ತಾರೆ ಎಂದು ಯಾರು ನಂಬಿದ್ದರು.

ಇದು ದಿವಾಳಿತನ ಮತ್ತು ದಿವಾಳಿತನದ ಸಂಹಿತೆಯ ಪರಿಣಾಮವಾಗಿದೆ. ಇದು ನಮ್ಮ ದೇಶದ ಆರ್ಥಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಹಂಚಿಕೆ ಮಾಡಲು ಸಹಾಯ ಮಾಡುತ್ತದೆ.

ಇಷ್ಟು ವರ್ಷಗಳಿಂದ ನಿರ್ಲಕ್ಷಿಸಲಾದ ಆರ್ಥಿಕತೆಯನ್ನು ಸರಿಪಡಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಜೊತೆಗೆ “ನಿಧಾನವಾಗಿ ಚಲಿಸಿ, ಕಾರ್ಯ ಪ್ರಗತಿಯಲ್ಲಿದೆ” ಎಂಬ ಎಚ್ಚರಿಕೆ ಫಲಕವನ್ನು ಹಾಕಲು ಕೂಡಾ ನಿರ್ಧರಿಸಿದ್ದೇವೆ.   

ಸಮಾಜದ ದೊಡ್ಡ ವರ್ಗದ ಯೋಗಕ್ಷೇಮಕ್ಕಾಗಿ ಕೆಲಸವನ್ನು ನಿಲ್ಲಿಸದೇ ಈ ಎಲ್ಲ ಸುಧಾರಣೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ.

ಸ್ನೇಹಿತರೆ,

ಭಾರತ 130 ಕೋಟಿ ಮಹತ್ವಾಕಾಂಕ್ಷಿಗಳಿರುವ ದೇಶ ಹಾಗಾಗಿ ಅಭಿವೃದ್ಧಿ ಹಾಗೂ ಪ್ರಗತಿಗೆ ಒಂದೇ ದೃಷ್ಟಿಕೋನವಿರಲು ಸಾಧ್ಯವಿಲ್ಲ.

ಆರ್ಥಿಕ ಪರಿಸ್ಥಿತಿ, ಜಾತಿ, ಉಪಜಾತಿ, ಭಾಷೆ ಮತ್ತು ಧರ್ಮಗಳೆಲ್ಲವನ್ನೂ ಹೊರತುಪಡಿಸಿ ನವಭಾತರದ ನಮ್ಮ ದೃಷ್ಟಿಕೋನ ಸಮಾಜದ ಎಲ್ಲ ವರ್ಗಗಳಿಗೂ ಸೇವೆ ಸಲ್ಲಿಸಲಿದೆ.

ಭಾರತದ 130 ಕೋಟಿ ಮಹತ್ವಾಕಾಂಕ್ಷಿಗಳು ಮತ್ತು ಅವರ ಕನಸುಗಳನ್ನು ಪೂರೈಸಲು ನವ ಭಾರತ ನಿರ್ಮಾಣಕ್ಕೆ ನಾವು ಬಹಳ ಶ್ರಮಿಸುತ್ತಿದ್ದೇವೆ.   

ಭೂತಕಾಲದ ಸಮಸ್ಯೆಗಳನ್ನು ಪರಿಹರಿಸುತ್ತಾ ಭವಿಷ್ಯದ ಸವಾಲುಗಳನ್ನು ಎದುರಿಸುವುದನ್ನು ನವ ಭಾರತದ ನಮ್ಮ ದೃಷ್ಟಿಕೋನ ಒಳಗೊಂಡಿದೆ.

ಆದ್ದರಿಂದ ಇಂದು ಭಾರತ ತನ್ನ ಅತ್ಯಂತ ವೇಗದ ರೈಲು ನಿರ್ಮಾಣದ ಜೊತೆಗೆ ಮಾನವ ರಹಿತ ರೈಲ್ವೇ ಕ್ರಾಸಿಂಗ್ ಗಳನ್ನು ತೆಗೆದುಹಾಕಿದೆ.

ಇಂದು ಭಾರತ ಐಐಟಿ ಮತ್ತು ಎಐಐಎಂಗಳನ್ನು ಎಷ್ಟು ವೇಗವಾಗಿ ನಿರ್ಮಿಸುತ್ತಿದೆಯೋ, ಅದೇ ವೇಗದಲ್ಲಿ  ದೇಶಾದ್ಯಂತ ಇರುವ ಎಲ್ಲ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸುತ್ತಿದೆ.   

ಇಂದು ಭಾರತ ದೇಶಾದ್ಯಂತ 100 ಸ್ಮಾರ್ಟ್ ನಗರಗಳನ್ನು ನಿರ್ಮಿಸುವುದರ ಜೊತೆಗೆ 100 ಮಹತ್ವಾಕಾಂಕ್ಷೆ ಜಿಲ್ಲೆಗಳ ತ್ವರಿತ ಪ್ರಗತಿಯನ್ನೂ ಖಾತರಿಪಡಿಸುತ್ತಿದೆ.

ಇಂದು ಭಾರತ ವಿದ್ಯುತ್ ನಿವ್ವಳ ರಫ್ತುದಾರ ರಾಷ್ಟ್ರವಾಗುವುದರ ಜೊತೆಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ವಿದ್ಯುಚ್ಛಕ್ತಿಯಿಲ್ಲದೇ ಕತ್ತಲೆಯಲ್ಲಿದ್ದ ಕೋಟ್ಯಾಂತರ ಮನೆಗಳಿಗೆ ಬೆಳಕನ್ನು ನೀಡಿದೆ.

ಇಂದು ಭಾರತ ಮಂಗಳ ಗ್ರಹಕ್ಕೆ ಮಾನವನನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿರುವಾಗ, ಅದರೊಟ್ಟಿಗೆ ಪ್ರತಿ ಭಾರತೀಯನಿಗೂ ಸೂರನ್ನು ಖಚಿತಪಡಿಸುತ್ತಿದೆ.

ಇಂದು ಭಾರತ ವಿಶ್ವಮಟ್ಟದ ಆರ್ಥಿಕತೆಯಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದರ ಜೊತೆಗೆ ಅದೇ ವೇಗದಲ್ಲಿ ಬಡತನ ನಿರ್ಮೂಲನೆಯನ್ನೂ ಮಾಡುತ್ತಿದೆ.    

ಸ್ನೇಹಿತರೆ,

ನಾವು ಎ ಬಿ ಸಿ ಮನಸ್ಥಿತಿಯಿಂದ ಮುಂದೆ ಸಾಗಿದ್ದೇವೆ – ಅಂದರೆ

ಎ- ಅವಾಯ್ಡಿಂಗ್ (ತಪ್ಪಿಸುವುದು)

ಬಿ – ಬರಿಯಿಂಗ್ (ಹೂಳುವುದು)

ಸಿ – ಕನ್ಫ್ಯೂಸಿಂಗ್ (ಗೊಂದಲಮಯ)

ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವ ಬದಲು ಅದನ್ನು ಬಗೆಹರಿಸುತ್ತೇವೆ.

ಅದನ್ನು ಹೂಳುವ ಬದಲಾಗಿ, ಅಗೆದು ಹೊರತೆಗೆದು ಜನರಿಗೆ ತಿಳಿಸಿದ್ದೇವೆ

ಮತ್ತು

ವ್ಯವಸ್ಥೆಯನ್ನು

ಗೊಂದಲಕ್ಕೀಡುಮಾಡುವ ಬದಲು ನಾವು ಅದರ ಸಂಭಾವ್ಯ ಪರಿಹಾರವನ್ನು ಪ್ರದರ್ಶಿಸಿದೆವು.

ಇದು ನಾವು ಸಾಮಾಜಿಕ ವಲಯದಲ್ಲಿ ಸಕಾರಾತ್ಮಕ ಮಧ್ಯಸ್ಥಿಕೆವಹಿಸುವುದನ್ನು ಹೆಚ್ಚಿಸಲು ನಮ್ಮಲ್ಲಿ ಆತ್ಮವಿಶ್ವಾಸ ತುಂಬಿದೆ. 

ನಾವು ವಾರ್ಷಿಕ ರೂ.6000 ಗಳ ನೆರವು ನೀಡಿ 12 ಕೋಟಿ ಸಣ್ಣ ಮತ್ತು ಬಡ ಹಿಡುವಳಿದಾರರನ್ನು ತಲುಪುತ್ತಿದ್ದೇವೆ. ಇದು ಮುಂದಿನ 10 ವರ್ಷಗಳವರೆಗೆ 7.5 ಲಕ್ಷ ಕೋಟಿ ರೂಪಾಯಿಗಳು ಅಥವಾ 100 ಬಿಲಿಯನ್ ಡಾಲರ್ ಗಳಷ್ಟು ವರ್ಗಾವಣೆ ಆಗಲಿದೆ.

ನಾವು ಅನೌಪಚಾರಿಕ ವಲಯದ ಕಾರ್ಮಿಕರಿಗಾಗಿ ಪಿಂಚಣಿ ಯೋಜನೆಯನ್ನೂ ರೂಪಿಸುತ್ತಿದ್ದೇವೆ.

ಈ ಸರ್ಕಾರದ  ಅಭಿವೃದ್ಧಿಯ ಇಂಜಿನ್ 2 ಸಮಾನಾಂತರ ಹಳಿಗಳ ಮೇಲೆ ಚಲಿಸುತ್ತಿದೆ. ಮೊದಲನೇಯದ್ದು ಎಲ್ಲರಿಗೂ, ಅದರಲ್ಲೂ ಪ್ರತ್ಯೇಕವಾಗಿ ಸೌಲಭ್ಯ ವಂಚಿತರಿಗೆ ಸಾಮಾಜಿಕ ಮೂಲಭೂತ ಸೌಕರ್ಯ ಒದಗಿಸುವುದು ಮತ್ತು ಎರಡನೇಯದ್ದು ಎಲ್ಲರಿಗೂ, ಅದರಲ್ಲೂ ಪ್ರತ್ಯೇಕವಾಗಿ ಮುಂದಿನ ಪೀಳಿಗೆಯವರು ತಮ್ಮ ಕನಸುಗಳನ್ನು ಭವಿಷ್ಯವನ್ನಾಗಿ ರೂಪಿಸಿಕೊಳ್ಳಲು ಭೌತಿಕ  ಮೂಲಭೂತ ಸೌಕರ್ಯ ಒದಗಿಸುವುದು.

ಹಿಂದೆ ಏನಾಯಿತು ಎಂಬುದು ನಮ್ಮ ಕೈಯಲ್ಲಿಲ್ಲ. ಆದರೆ ಮುಂದೇನಾಗಲಿದೆ ಎಂಬುದು ಖಂಡಿತ ನಮ್ಮ ಕೈಯಲ್ಲಿದೆ.

ಹಿಂದೆ ಕೈಗಾರಿಕಾ ಕ್ರಾಂತಿಗಳಲ್ಲಿ ಪಾಲ್ಗೊಳ್ಳಲಾಗಿಲ್ಲ ಎಂದು ನಾವು ನೊಂದುಕೊಳ್ಳುತ್ತಿದ್ದೆವು ಆದರೆ ಇಂದು ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತ ಒಂದು ಸಕ್ರೀಯ ಪಾಲುದಾರಿಕಾ ರಾಷ್ಟ್ರವಾಗಿರುವುದು ಹೆಮ್ಮೆಯ ವಿಷಯವಾಗಿದೆ.

ನಮ್ಮ ಕೊಡುಗೆಯ ವ್ಯಾಪ್ತಿ ಮತ್ತು ಪ್ರಮಾಣ ವಿಶ್ವವನ್ನು ಚಕಿತಗೊಳಿಸಲಿದೆ.

ಮೊದಲ 3 ಕೈಗಾರಿಕಾ ಕ್ರಾಂತಿಗಳ ಬಸ್ ನಲ್ಲಿ ಪಯಣಿಸುವ ಅವಕಾಶವನ್ನು ಭಾರತ ಕಳೆದುಕೊಂಡಿರಬಹುದು ಆದರೆ ಈ ಬಾರಿ ಭಾರತ ಆ ಬಸ್ ನ್ನು ಏರುವುದಷ್ಟೇ ಅಲ್ಲ ಸ್ವತಃ ಮುನ್ನಡೆಸಲಿದೆ.

 ಆವಿಷ್ಕಾರ ಮತ್ತು ತಂತ್ರಜ್ಞಾನ ಈ ಅಡಿಗಲ್ಲನ್ನು ಪುನಃ ಸ್ಥಾಪಿಸಲಿವೆ.

ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಗಳು, ಮೇಕ್ ಇನ್ ಇಂಡಿಯಾ ಮತ್ತು ಇನ್ನೋವೇಟ್ ಇಂಡಿಯಾದಂತಹ ಉಪಕ್ರಮಗಳ ಮೇಲೆ ಬೆಳಕು ಚೆಲ್ಲಿರುವುದರ ಪ್ರತಿಫಲ ರೂಪದಲ್ಲಿ ಭಾರತ ಹೇರಳವಾದ ಲಾಭಾಂಶವನ್ನು ಕ್ರೋಢೀಕರಿಸುತ್ತಿದೆ.

2013 -14 ರಲ್ಲಿ ಸುಮಾರು 4 ಸಾವಿರ ಪೇಟೆಂಟ್ ಗಳಿಸಲಾಗಿತ್ತು, 2017-18 ರಲ್ಲಿ 13 ಸಾವಿರಕ್ಕೂ ಹೆಚ್ಚು ಪೇಟೆಂಟ್ ಗಳಿಸಲಾಗಿದೆ ಎಂಬುದು ನಿಮಗೆ ತಿಳಿದಿದೆಯೇ?

ಇದು 3 ಪಟ್ಟು ಹೆಚ್ಚಳ!

ಇದೇ ರೀತಿ ಟ್ರೇಡ್ ಮಾರ್ಕ್ ಗಳ ನೊಂದಣಿ ಸಂಖ್ಯೆ 2013 -14 ರಲ್ಲಿ ಸುಮಾರು 68 ಸಾವಿರದಷ್ಟಿದ್ದುದು 2016-17 ರಲ್ಲಿ ಸುಮಾರು 2.5 ಲಕ್ಷದಷ್ಟು ಹೆಚ್ಚಳವಾಗಿದೆ ಎಂಬುದು ನಿಮಗೆ ಗೊತ್ತೇ?  

ಇದು ಸರಿಸುಮಾರು 4 ಪಟ್ಟು  ಹೆಚ್ಚಳ!

ಇಂದು ಭಾರತದಲ್ಲಿ ನೋಂದಾಯಿತ 44 ಪ್ರತಿಶತ ಸ್ಟಾರ್ಟ್ ಅಪ್ ಗಳು 2 ನೇ ಮತ್ತು 3 ನೇ ಶ್ರೇಣಿಯ ನಗರಗಳಿಂದಲೇ ಬಂದಂತಹವು ಎಂದು ತಿಳಿದು ನಿಮಗೆ ಸಂತೋಷವಾಗಬಹುದು. 

ದೇಶದಾದ್ಯಂತ ನೂರಾರು ಅಟಲ್ ಟಿಂಕರಿಂಗ್ ಲ್ಯಾಬ್ ಗಳ ಜಾಲ ರಚನೆಯಾಗುತ್ತಿದ್ದು ಆವಿಷ್ಕಾರದ ವಾತಾವರಣ ಸೃಷ್ಟಿಗೆ ಸಹಾಯ ಮಾಡಲಿದೆ.

ಇದು ನಮ್ಮ ವಿದ್ಯಾರ್ಥಿಗಳು ನಾಳಿನ ಪರಿವರ್ತಕರಾಗಲು ಸಹಾಯವಾಗುವಂಥ ಗಟ್ಟಿಮುಟ್ಟಾದ ತಳಪಾಯವನ್ನು ಹಾಕಿಕೊಡಲಿದೆ.

 ಹಾವಾಡಿಗ ಸಮುದಾಯದಿಂದ ಬಂದ ಪುಟ್ಟ ಬಾಲಕಿಯೊಬ್ಬಳು ಅಕ್ಷರಶಃ ಹೇಗೆ ಮೌಸ್ ನೆಡೆಗೆ ಆಕರ್ಷಿತಗೊಳ್ಳುತ್ತಿದ್ದಾಳೆ ಮತ್ತು ಡಿಜಿಟಲ್ ಇಂಡಿಯಾವನ್ನು ಸಾಕಾರಗೊಳಿಸುತ್ತಿದ್ದಾಳೆ ಎಂಬುದನ್ನು ಕಂಡು ನಾನು ಪ್ರಭಾವಿತನಾಗಿದ್ದೇನೆ. 

ಗ್ರಾಮಗಳಲ್ಲಿ ಯುವಕರು ಹೇಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ವೈ ಫೈ ಮತ್ತು ಡಿಜಿಟಲ್ ಪರಿಕರಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದನ್ನು ಕಂಡು ಅಷ್ಟೇ ಸಂಭ್ರಮವೆನಿಸುತ್ತದೆ.

ತಂತ್ರಜ್ಞಾನ ನಮ್ಮ ದೇಶದಲ್ಲಿ ಉಳ್ಳವರು ಮತ್ತು ಇಲ್ಲದವರ ಮಧ್ಯದ ಅಂತರವನ್ನು ತಗ್ಗಿಸುವ ಸೇತುವೆಯಾಗಿದೆ.

ಇಂಥ ಕಥೆಗಳು ಭಾರತದ ಇತಿಹಾಸದಲ್ಲಿ ಹೊಸ  ಅಧ್ಯಾಯಗಳನ್ನು ಬರೆಯುತ್ತಿವೆ.

ಸ್ನೇಹಿತರೇ,

ಜನರ ಬೆಂಬಲ ಮತ್ತು ಪಾಲುದಾರಿಕೆಯಿಂದ 2014 ರಿಂದೀಚೆಗೆ ಭಾರತ ಶರವೇಗದಿಂದ ಮುನ್ನಡೆಯುತ್ತಿದೆ.

ಇದು ಜನರ ಪಾಲ್ಗೊಳ್ಳುವಿಕೆಯಿಲ್ಲದೇ ಸಾಧ್ಯವೇ ಇರಲಿಲ್ಲ.

ಬೆಳೆಯಲು, ಏಳ್ಗೆ ಹೊಂದಲು ಮತ್ತು ಉತ್ಕೃಷ್ಟತೆಯನ್ನು ಸಾಧಿಸಲು  ನಮ್ಮ ದೇಶ ಎಲ್ಲ ನಾಗರಿಕರಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತಿದೆ ಎಂಬ ಭರವಸೆಯನ್ನು ಈ ಅನುಭವಗಳು ಮೂಡಿಸುತ್ತವೆ. 

ನಾವು ಭಾರತ 10 ಟ್ರಿಲಿಯನ್ ಡಾಲರ್ ಆರ್ಥಿಕತೆಗಳಿಸುವಂತೆ ಮಾಡುವುದನ್ನು ಎದುರು ನೋಡುತ್ತೇವೆ.

ಭಾರತನ್ನು 3 ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಪರಿವರ್ತಿಸುವುದನ್ನು ಎದುರು ನೋಡುತ್ತೇವೆ.

ಭಾರತವನ್ನು ಅನಿಯಮಿತ ಸ್ಟಾರ್ಟ್ ಅಪ್ ಗಳ ದೇಶವಾಗಿಸಬಯಸುತ್ತೇವೆ. 

ಪರ್ಯಾಯ ಇಂಧನ ಮೂಲಗಳೆಡೆಗೆ ವಿಶ್ವನ್ನು ಕೊಂಡೊಯ್ಯುವ ನಾಯಕತ್ವವಹಿಸಬಯಸುತ್ತೇವೆ.

ನಮ್ಮ ಜನರಿಗೆ ಸುಭದ್ರ ಇಂಧನ ಭದ್ರತೆ ನೀಡಬಯಸುತ್ತೇವೆ

ಆಮದು ಅವಲಂಬನೆಯನ್ನು ತಗ್ಗಿಸಬಯಸುತ್ತೇವೆ

ನಾವು ಭಾರತವನ್ನು ಇಲೆಕ್ಟ್ರಿಕಲ್ ವಾಹನಗಳು ಮತ್ತು ಶಕ್ತಿ ಸಂಗ್ರಹ ಉಪಕರಣಗಳಲ್ಲಿ ವಿಶ್ವನಾಯಕನನ್ನಾಗಿಸಬಯಸುತ್ತೇವೆ.

ಈ ಗುರಿಗಳನ್ನು ಮನದಲ್ಲಿಟ್ಟುಕೊಂಡು ನಾವೆಲ್ಲರೂ ನವಭಾರತದ ಕನಸುಗಳನ್ನು ನನಸಾಗಿಸಲು ನಮ್ಮನ್ನು ತೊಡಗಿಸಿಕೊಳ್ಳೋಣ.

ಧನ್ಯವಾದಗಳು

ಅನಂತ ಅನಂತ ಧನ್ಯವಾದಗಳು

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India receives $386 billion financial commitment from banks for green push

Media Coverage

India receives $386 billion financial commitment from banks for green push
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 16 ಸೆಪ್ಟೆಂಬರ್ 2024
September 16, 2024

100 Days of PM Modi 3.0: Delivery of Promises towards Viksit Bharat

Holistic Development across India – from Heritage to Modern Transportation – Decade of PM Modi