ಶ್ರೀ ಮೈಖೆಲ್ ಬ್ಲೂಂಬರ್ಗ್ ಅವರೇ, ಚಿಂತಕರೆ, ಕೈಗಾರಿಕೆಗಳ ನಾಯಕರೇ, ಬ್ಲೂಂ ಬರ್ಗ್ ನೂತನ ಆರ್ಥಿಕ ವೇದಿಕೆಯಲ್ಲಿ ಭಾಗಿಯಾಗಿರುವ ಗೌರವಾನ್ವಿತರೇ,

ಮೈಕೆಲ್ ಮತ್ತು ಬ್ಲೂಂಬರ್ಗ್ ಫಿಲಾಂಥ್ರಪೀಸ್ ನಲ್ಲಿನ ಅವರ ತಂಡವು ಮಾಡುತ್ತಿರುವ ಮಹತ್ತರ ಕಾರ್ಯಗಳಿಗೆ ನನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸುವ ಮೂಲಕ ನಾನು ಮಾತು ಪ್ರಾರಂಭಿಸುತ್ತೇನೆ. ಭಾರತದ ಸ್ಮಾರ್ಟ್ ನಗರ ಅಭಿಯಾನದ ವಿನ್ಯಾಸದಲ್ಲಿ ಈ ತಂಡವು ನೀಡಿದ ಬೆಂಬಲವು ತುಂಬಾ ಉತ್ತಮವಾಗಿದೆ.

ಸ್ನೇಹಿತರೆ,

ನಾವು ನಮ್ಮ ಇತಿಹಾಸದಲ್ಲಿ ಬಹಳ ಮುಖ್ಯವಾದ ಹಂತದಲ್ಲಿದ್ದೇವೆ. ವಿಶ್ವದ ಅರ್ಧಕ್ಕಿಂತ ಹೆಚ್ಚು ನಾಗರಿಕರು ಈಗಾಗಲೇ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಮುಂದಿನ ಎರಡು ದಶಕಗಳಲ್ಲಿ, ಭಾರತ ಮತ್ತು ಕೆಲವು ಆಫ್ರಿಕದ ರಾಷ್ಟ್ರಗಳು ನಗರೀಕರಣದ ದೊಡ್ಡ ಅಲೆಗೆ ಸಾಕ್ಷಿಯಾಗಲಿವೆ. ಆದರೆ ಕೋವಿಡ್ -19 ಸಾಂಕ್ರಾಮಿಕವು ಪ್ರಪಂಚದ ಮುಂದೆ ಅಗಾಧ ಸವಾಲುಗಳನ್ನು ಒಡ್ಡಿದೆ. ನಮ್ಮ ಬೆಳವಣಿಗೆಯ ಚಾಲಕ ಶಕ್ತಿಗಳಾಗಿರುವ ನಗರಗಳು ಸಹ ನಮ್ಮ ದುರ್ಬಲ ವಲಯಗಳಾಗಿವೆ ಎಂದು ಅದು ನಮಗೆ ತೋರಿಸಿದೆ. ವಿಶ್ವದಾದ್ಯಂತದ ಅನೇಕ ನಗರಗಳು ಮಹಾ ಕುಸಿತದ ನಂತರದ ಕೆಟ್ಟ ಆರ್ಥಿಕ ಕುಸಿತದ ಅಂಚಿನಲ್ಲಿರುವುದಾಗಿ ಘೋಷಿಸಿಕೊಂಡಿವೆ. ನಗರದಲ್ಲಿ ವಾಸಿಸುವುದಕ್ಕೆ ಪ್ರತಿನಿಧಿಸುವ ವಿಷಯಗಳು ಪ್ರಶ್ನಾರ್ಥಕ ಚಿಹ್ನೆ ಎದುರಿಸುತ್ತಿವೆ. ಸಮುದಾಯ ಕೂಟಗಳು, ಕ್ರೀಡಾ ಚಟುವಟಿಕೆಗಳು, ಶಿಕ್ಷಣ ಮತ್ತು ಮನರಂಜನೆಯಂತಹ ವಿಷಯಗಳು ಈ ಹಿಂದಿನಂತೆ ಇಲ್ಲ. ಇಡೀ ವಿಶ್ವದ ಮುಂದಿರುವ ದೊಡ್ಡ ಪ್ರಶ್ನೆ ಹೇಗೆ ಪುನಾರಂಭ ಮಾಡಬೇಕು ಎಂಬುದಾಗಿದೆ? ಪುನರ್ ಜೋಡಣೆಯಾಗದೆ ಪುನಾರಂಭ ಸಾಧ್ಯವೇ ಇಲ್ಲ. ಅದು ಮನೋಸ್ಥಿತಿಯ ಮರು ಜೋಡಣೆ, ಪ್ರಕ್ರಿಯೆಯ ಮರು ಹೊಂದಿಸುವಿಕೆ ಮತ್ತು ಅಭ್ಯಾಸದ ಪುನರ್ ಹೊಂದಿಸುವಿಕೆ.

ಸ್ನೇಹಿತರೆ,

ಎರಡು ವಿಶ್ವ ಯುದ್ಧಗಳ ನಂತರದ ಐತಿಹಾಸಿಕ ಪುನರ್ನಿರ್ಮಾಣ ಪ್ರಯತ್ನಗಳು ನಮಗೆ ಹಲವಾರು ಪಾಠಗಳನ್ನು ಕಲಿಸಿವೆ ಎಂದು ನಾನು ಭಾವಿಸುತ್ತೇನೆ. ವಿಶ್ವ ಮಹಾ ಯುದ್ಧಗಳ ನಂತರ, ಇಡೀ ಪ್ರಪಂಚವು ಹೊಸ ವಿಶ್ವ ಕ್ರಮದಲ್ಲಿ ಕಾರ್ಯ ನಿರ್ವಹಿಸಿದೆ. ಹೊಸ ಶಿಷ್ಟಾಚಾರಗಳನ್ನು ಅಭಿವೃದ್ಧಿಪಡಿಸಲಾಯಿತು ಮತ್ತು ಪ್ರಪಂಚವು ಸ್ವತಃ ಬದಲಾಯಿತು. ಕೋವಿಡ್-19 ಪ್ರತಿ ಕ್ಷೇತ್ರದಲ್ಲೂ ಹೊಸ ಶಿಷ್ಟಾಚಾರಗಳನ್ನು ಅಭಿವೃದ್ಧಿಪಡಿಸಲು ಇದೇ ರೀತಿಯ ಅವಕಾಶವನ್ನು ನಮಗೆ ನೀಡಿದೆ. ಭವಿಷ್ಯಕ್ಕಾಗಿ ನಾವು ಚೇತರಿಕೆಯ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಬಯಸಿದರೆ ಈ ಅವಕಾಶವನ್ನು ಜಗತ್ತು ಪಡೆದುಕೊಳ್ಳಬೇಕು. ನಾವು ಕೋವಿಡೋತ್ತರ ವಿಶ್ವದ ಅವಶ್ಯಕತೆಗಳ ಬಗ್ಗೆ ಯೋಚಿಸಬೇಕು. ನಮ್ಮ ನಗರ ಕೇಂದ್ರಗಳ ಪುನಶ್ಚೇತನಗೊಳಿಸುವಿಕೆಯು ಒಂದು ಉತ್ತಮ ಆರಂಭವಾಗಿದೆ.

ಸ್ನೇಹಿತರೆ,

ನಾನು ಇಲ್ಲಿ, ಭಾರತೀಯ ನಗರಗಳ ಧನಾತ್ಮಕ ಮಗ್ಗುಲಿನ ಬಗ್ಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಭಾರತೀಯ ನಗರಗಳು ಈ ಸಂಕಷ್ಟದ ಸಮಯದಲ್ಲಿ ವಿಶಿಷ್ಟ ಉದಾಹರಣೆಯನ್ನು ನೀಡಿವೆ. ಲಾಕ್ ಡೌನ್ ಕ್ರಮಗಳ ವಿರುದ್ಧ ವಿಶ್ವದಾದ್ಯಂತ ಪ್ರತಿರೋಧದ ಘಟನೆಗಳು ನಡೆದವು. ಆದಾಗ್ಯೂ ಭಾರತೀಯ ನಗರಗಳು ಕಟ್ಟುನಿಟ್ಟಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿದವು. ಏಕೆಂದರೆ, ನಮ್ಮ ನಗರಗಳ ಕಟ್ಟಡ ಸಮುಚ್ಛಯಗಳು ನಮಗೆ ಕೇವಲ ಕಾಂಕ್ರೀಟ್ ಅಲ್ಲ, ಅದು ಸಮುದಾಯ. ಸಾಂಕ್ರಾಮಿಕವು, ಸಮಾಜವಾಗಿ ಮತ್ತು ವ್ಯವಹಾರವಾಗಿ, ನಮ್ಮ ಜನರು ನಮ್ಮ ದೊಡ್ಡ ಸಂಪನ್ಮೂಲ ಎಂದು ಪುನಃ ಒತ್ತಿ ಹೇಳಿದೆ. ಈ ಪ್ರಮುಖ ಮತ್ತು ಮೂಲಭೂತ ಸಂಪನ್ಮೂಲವನ್ನು ಪೋಷಿಸುವ ಮೂಲಕ ಕೋವಿಡ್ ನಂತರದ ಜಗತ್ತನ್ನು ನಿರ್ಮಿಸಬೇಕಾಗಿದೆ. ನಗರಗಳು ಬೆಳವಣಿಗೆಯ ರೋಮಾಂಚಕ ಚಾಲಕ ಶಕ್ತಿಗಳಾಗಿವೆ. ಹೆಚ್ಚು ಅಗತ್ಯವಿರುವ ಈ ಬದಲಾವಣೆಯನ್ನು ಮಾಡುವ ಶಕ್ತಿಯನ್ನು ಅವರು ಹೊಂದಿದ್ದಾರೆ.

ಜನರು ಸಾಮಾನ್ಯವಾಗಿ ನಗರಗಳಿಗೆ ವಲಸೆ ಹೋಗುತ್ತಾರೆ ಕಾರಣ ನಗರಗಳು ಕೆಲಸ ನೀಡುತ್ತವೆ. ಆದರೆ, ನಾವು ನಗರಗಳು ಜನರಿಗೆ ಕೆಲಸ ಮಾಡುವಂತೆ ಮಾಡುವ ಸಮಯವಿದೇ ಅಲ್ಲವೇ? ನಗರಗಳನ್ನು ಜನರಿಗೆ ಹೆಚ್ಚು ವಾಸಯೋಗ್ಯವಾಗಿಸುವ ನಮ್ಮ ಪ್ರಕ್ರಿಯೆಯನ್ನು ವೇಗಗೊಳಿಸಲು ಕೋವಿಡ್ -19 ಅವಕಾಶ ನೀಡಿದೆ. ಇದು ಉತ್ತಮ ವಸತಿ ಸೌಲಭ್ಯಗಳು, ಉತ್ತಮ ಕೆಲಸದ ವಾತಾವರಣ, ಕಡಿಮೆ ಮತ್ತು ಪರಿಣಾಮಕಾರಿ ಪ್ರಯಾಣವನ್ನೂ ಒಳಗೊಂಡಿದೆ. ಲಾಕ್ ಡೌನ್ ಸಮಯದಲ್ಲಿ, ಅನೇಕ ನಗರಗಳು ಸ್ವಚ್ಛ ಸರೋವರಗಳು, ನದಿಗಳು ಮತ್ತು ಸ್ವಚ್ಛ ಗಾಳಿಯನ್ನು ಕಂಡವು. ನಮ್ಮಲ್ಲಿ ಹಲವರು ನಾವು ಹಿಂದೆಂದೂ ಗಮನಿಸದ ಪಕ್ಷಿಗಳ ಚಿಲಿಪಿಲಿ ಕೇಳಿದೆವು. ಈ ಎಲ್ಲ ವೈಶಿಷ್ಟ್ಯ ಇರುವ ಮತ್ತು ಇದು ವಿನಾಯಿತಯಾಗದ ಸುಸ್ಥಿರ ನಗರಗಳನ್ನು ನಾವು ನಿರ್ಮಿಸಲು ಸಾಧ್ಯವಿಲ್ಲವೇ? ಭಾರತದಲ್ಲಿ ನಗರದ ಸೌಕರ್ಯಗಳನ್ನು ಒಳಗೊಂಡ ಆದರೆ ಹಳ್ಳಿಯ ಸ್ಫೂರ್ತಿಯನ್ನು ಹೊಂದಿರುವ ನಗರ ಕೇಂದ್ರಗಳನ್ನು ನಿರ್ಮಿಸುವುದು ನಮ್ಮ ಪ್ರಯತ್ನವಾಗಿದೆ.

ಸ್ನೇಹಿತರೆ,

ಸಾಂಕ್ರಾಮಿಕದ ವೇಳೆ ನಮ್ಮ ಕೆಲಸ ಮುಂದುವರಿಸಲು ತಂತ್ರಜ್ಞಾನ ನಮಗೆ ನೆರವಾಯಿತು. ವಿಡಿಯೋ ಕಾನ್ಫರೆನ್ಸಿಂಗ್ ನಂಥ ಸರಳ ಸಾಧನಕ್ಕೆ ಧನ್ಯವಾದಗಳು, ನಾನು ಇನ್ನೂ ಅನೇಕ ಸಭೆಗಳನ್ನು ಮಾಡಬಲ್ಲೆ. ಇದು ಅಂತರ ನಿವಾರಿಸಲು ಮತ್ತು ನಿಮ್ಮೆಲ್ಲರೊಂದಿಗೆ ಮಾತನಾಡಲು ಸಹಕಾರಿಯಾಗಿದೆ. ಆದರೆ ಇದು ಕೋವಿಡ್ ನಂತರದ ಜಗತ್ತಿಗೆ ಆಸಕ್ತಿದಾಯಕ ಪ್ರಶ್ನೆಯನ್ನೂ ಒಡ್ಡುತ್ತದೆ. ವೀಡಿಯೊ–ಕಾನ್ಫರೆನ್ಸಿಂಗ್‌ ನಂತಹ ಕೋವಿಡ್–ಸಮಯದ ಕಲಿಕೆಯೊಂದಿಗೆ ನಾವು ಮುಂದುವರಿಯುತ್ತೇವೆಯೇ? ಅಥವಾ ಸಮ್ಮೇಳನದಲ್ಲಿ ಭಾಗವಹಿಸಲು ನಾವು ಖಂಡಗಳಾದ್ಯಂತ ಪ್ರಯಾಣಿಸುತ್ತೇವೆಯೇ? ನಗರ ವ್ಯವಸ್ಥೆಗಳಲ್ಲಿನ ಒತ್ತಡವನ್ನು ತಗ್ಗಿಸುವುದು ನಮ್ಮ ಆಯ್ಕೆಗಳನ್ನು ಅವಲಂಬಿಸಿರುತ್ತದೆ.

ಈ ಆಯ್ಕೆಗಳು ಉತ್ತಮ ಕೆಲಸ – ಜೀವನ ಸಮತೋಲನವಾಗಿ ನಿರ್ವಹಿಸಲು ನೆರವಾಗುತ್ತವೆ. ಇಂದಿನ ಯುಗದಲ್ಲಿ, ಎಲ್ಲಿಂದ ಬೇಕಾದರೂ ಕೆಲಸ ಮಾಡುವಂತೆ, ಎಲ್ಲಿ ಬೇಕಾದರೂ ಜೀವಿಸುವಂತೆ, ಯಾವುದೇ ಸ್ಥಳದಿಂದ ಜಾಗತಿಕ ಪೂರೈಕೆ ಸರಪಳಿಗೆ ಸೇರ್ಪಡೆಯಾಗುವಂತೆ ಜನರನ್ನು ಸಬಲೀಕರಿಸುವುದು ಅತ್ಯಗತ್ಯವಾಗಿದೆ. ಹೀಗಾಗಿಯೇ ನಾವು ತಂತ್ರಜ್ಞಾನ ಮತ್ತು ಜ್ಞಾನಾಧಾರಿತ ಸೇವಾ ವಲಯದ ಮಾರ್ಗಸೂಚಿಗಳನ್ನು ಸರಳೀಕರಿಸಿದ್ದೇವೆ. ಇದು ಮನೆಯಿಂದಲೇ ಕಾರ್ಯ ನಿರ್ವಹಿಸಲು ಮತ್ತು ಎಲ್ಲಿಂದ ಬೇಕಾದರೂ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುತ್ತದೆ.

ಸ್ನೇಹಿತರೆ,

ಅಗ್ಗದ ಮನೆಗಳ ಲಭ್ಯತೆ ಇಲ್ಲದೆ ನಮ್ಮ ನಗರಗಳು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಇದನ್ನು ಮನಗಂಡು, 2015ರಲ್ಲಿ ಸರ್ವರಿಗೂ ಸೂರು ಕಾರ್ಯಕ್ರಮ ಆರಂಭಿಸಿದ್ದೇವೆ. ನಾವು ಈ ದಾರಿಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದೇವೆ ಎಂದು ತಿಳಿಸಲು ಹರ್ಷಿಸುತ್ತೇನೆ. ನಾವು 2022ರ ಗುರಿಯ ಗಡುವಿಗೆ ಮೊದಲೇ ನಗರ ಪ್ರದೇಶದ ಆಕಾಂಕ್ಷಿತ ಕುಟುಂಬಗಳಿಗೆ 1 ಕೋಟಿ ಅಥವಾ 10 ದಶಲಕ್ಷ ಮನೆಗಳನ್ನು ವಿತರಿಸಿದ್ದೇವೆ. ಈ ಸಾಂಕ್ರಾಮಿಕ ಸೃಷ್ಟಿಸಿರುವ ವಾತಾವರಣ ನೋಡಿ, ನಾವು ಅಗ್ಗದ ಬಾಡಿಗೆ ಮನೆಗಳ ಉಪಕ್ರಮವನ್ನೂ ಆರಂಭಿಸಿದ್ದೇವೆ. ನಾವು ರಿಯಲ್ ಎಸ್ಟೇಟ್ ನಿಯಂತ್ರಣ ಕಾಯಿದೆ ರೂಪಿಸಿದ್ದೇವೆ. ಇದು ರಿಯಲ್ ಎಸ್ಟೇಟ್ ವಲಯದ ಸ್ವರೂಪವನ್ನೇ ಬದಲಾಯಿಸಿದೆ. ಜೊತೆಗೆ ಇದನ್ನು ಹೆಚ್ಚು ಗ್ರಾಹಕ ಕೇಂದ್ರಿತ ಮತ್ತು ಪಾರದರ್ಶಕಗೊಳಿಸಿದೆ.

ಸ್ನೇಹಿತರೆ,

ಚೇತರಿಕೆಯ ನಗರಗಳ ರಚನೆಗೆ ಸುಸ್ಥಿರ ಸಾರಿಗೆ ಮುಖ್ಯವಾಗಿದೆ. 27 ನಗರಗಳಲ್ಲಿ ಮೆಟ್ರೋ ರೈಲು ಕಾಮಗಾರಿ ನಡೆಯುತ್ತಿದೆ. 2022ರ ಹೊತ್ತಿಗೆ ದೇಶದಲ್ಲಿ 1000 ಕಿಲೋಮೀಟರ್ ಮೆಟ್ರೊ ರೈಲು ವ್ಯವಸ್ಥೆಯನ್ನು ರೂಪಿಸುವ ಹಾದಿಯಲ್ಲಿದ್ದೇವೆ. ನಮ್ಮ ಮೇಕ್ ಇನ್ ಇಂಡಿಯಾ, ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ಉತ್ಪಾದನೆಗಾಗಿ ಅಪಾರವಾದ ಸ್ಥಳೀಯ ಸಾಮರ್ಥ್ಯದ ಅಭಿವೃದ್ಧಿಗೆ ಕಾರಣವಾಗಿದೆ. ಇದು ನಮ್ಮ ಸುಸ್ಥಿರ ಸಾರಿಗೆ ಗುರಿಗಳತ್ತ ದೊಡ್ಡ ಮಟ್ಟದಲ್ಲಿ ಮುನ್ನುಗ್ಗಲು ನೆರವಾಗಿದೆ.

ಸ್ನೇಹಿತರೆ,

ಸ್ಮಾರ್ಟ್, ಸಮೃದ್ಧ ಮತ್ತು ಚೇತರಿಕೆಯ ನಗರಗಳ ಪಯಣದಲ್ಲಿ ತಂತ್ರಜ್ಞಾನ ಬಹು ಮುಖ್ಯ ಸಾಧನವಾಗಿದೆ. ತಂತ್ರಜ್ಞಾನ ನಗರವನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಸಮುದಾಯಗಳನ್ನು ಒಗ್ಗೂಡಿಸಲು ನೆರವಾಗಿದೆ. ಶಿಕ್ಷಣ, ಆರೋಗ್ಯ ಆರೈಕೆ, ಖರೀದಿ, ಆಹಾರದ ಅನುಭವಗಳೆಲ್ಲವೂ ಆನ್‌ ಲೈನ್‌ನಲ್ಲಿ ಸಂಭವಿಸಬಹುದಾದ ಭವಿತವ್ಯವನ್ನು ನಾವು ಕಾಣುತ್ತಿದ್ದೇವೆ. ನಮ್ಮ ನಗರಗಳು ಭೌತಿಕ ಮತ್ತು ಡಿಜಿಟಲ್ ಜಗತ್ತಿನ ಸಮಾನ ಲಕ್ಷಣಕ್ಕೆ ಸಜ್ಜಾಗಬೇಕಿದೆ. ನಮ್ಮ ಕಾರ್ಯಕ್ರಮಗಳು – ಡಿಜಿಟಲ್ ಇಂಡಿಯಾ ಮತ್ತು ನವೋದ್ಯಮ ಭಾರತ ಅಭಿಯಾನಗಳು ಈ ನಿಟ್ಟಿನಲ್ಲಿ ಸಾಮರ್ಥ್ಯಗಳನ್ನು ರೂಪಿಸಲು ಸಹಾಯ ಮಾಡುತ್ತವೆ. ಎರಡು ಹಂತದ ಪ್ರಕ್ರಿಯೆಯ ಮೂಲಕ ನಾವು 100 ಸ್ಮಾರ್ಟ್ ನಗರಗಳನ್ನು ಆಯ್ಕೆ ಮಾಡಿದ್ದೇವೆ. ಇದು ಸಹಕಾರಿ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯ ತತ್ವವನ್ನು ಎತ್ತಿಹಿಡಿಯುವ ರಾಷ್ಟ್ರವ್ಯಾಪಿ ಸ್ಪರ್ಧೆಯಾಗಿದೆ.

ಈ ನಗರಗಳು ಸುಮಾರು ಎರಡು ಲಕ್ಷ ಕೋಟಿ ರೂಪಾಯಿ ಅಥವಾ 30 ಶತಕೋಟಿ ಡಾಲರ್ ಮೌಲ್ಯದ ಯೋಜನೆಗಳನ್ನು ಸಿದ್ಧಪಡಿಸಿದ್ದು, ಸುಮಾರು ಒಂದು ಲಕ್ಷ ನಲವತ್ತು ಸಾವಿರ ಕೋಟಿ ರೂಪಾಯಿ ಅಥವಾ 20 ಶತಕೋಟಿ ಡಾಲರ್ ಮೌಲ್ಯದ ಯೋಜನೆಗಳು ಪೂರ್ಣಗೊಂಡಿವೆ ಅಥವಾ ಪೂರ್ಣಗೊಳ್ಳುವ ಹಂತದಲ್ಲಿದೆ. ತಂತ್ರಜ್ಞಾನದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು, ಅನೇಕ ನಗರಗಳಲ್ಲಿ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳು ಪ್ರಸ್ತುತ ವಿವಿಧ ನಗರಗಳಲ್ಲಿನ ಕೋವಿಡ್ ಪರಿಸ್ಥಿತಿಯನ್ನು ನಿರ್ವಹಿಸಲು ಸಮರ–ಕೊಠಡಿಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಕೊನೆಯದಾಗಿ, ನಾನು ನಿಮ್ಮೆಲ್ಲರಿಗೂ ಒಂದು ವಿಷಯವನ್ನು ತಿಳಿಸಲು ಇಚ್ಛಿಸುತ್ತೇನೆ. ನೀವು ನಗರೀಕರಣದಲ್ಲಿ ಹೂಡಿಕೆ ಮಾಡಲು ಎದಿರು ನೋಡುತ್ತಿದ್ದರೆ, ಭಾರತದಲ್ಲಿ ನಿಮಗೆ ಅದ್ಭುತ ಅವಕಾಶಗಳಿವೆ. ನೀವು ಸಾರಿಗೆ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ನೋಡುತ್ತಿದ್ದರೆ ಭಾರತದಲ್ಲಿ ನಿಮಗೆ ಅಪೂರ್ವ ಅವಕಾಶಗಳಿವೆ. ನಾವಿನ್ಯತೆಯಲ್ಲಿ ಹೂಡಿಕೆ ಮಾಡುವ ಇಚ್ಛೆ ನಿಮಗಿದ್ದರೆ, ಭಾರತದಲ್ಲಿ ನಿಮಗೆ ಅದ್ಭುತ ಅವಕಾಶಗಳಿವೆ. ನಿಮಗೆ ಸುಸ್ಥಿರ ಪರಿಹಾರಗಳಲ್ಲಿ ಹೂಡಿಕೆ ಮಾಡುವುದಿದ್ದರೆ, ಭಾರತದಲ್ಲಿ ಅದಕ್ಕೂ ಅದ್ಭುತ ಅವಕಾಶವಿದೆ. ಈ ಅವಕಾಶಗಳು ಒಂದು ರೋಮಾಂಚಕ ಪ್ರಜಾಪ್ರಭುತ್ವದೊಂದಿಗೆ. ವ್ಯಾಪಾರ ಸ್ನೇಹಿ ವಾತಾವರಣದೊಂದಿಗೆ. ಬೃಹತ್ ಮಾರುಕಟ್ಟೆಯೊಂದಿಗೆ ಬರುತ್ತವೆ. ಭಾರತವನ್ನು ಆದ್ಯತೆಯ ಜಾಗತಿಕ ಹೂಡಿಕೆ ತಾಣವನ್ನಾಗಿ ಮಾಡಲು ಭಾರತ ಯಾವುದೇ ಅವಕಾಶ ಕೈಚೆಲ್ಲುವುದಿಲ್ಲ.

ಸ್ನೇಹಿತರೆ,

ಭಾರತ ನಗರ ಪರಿವರ್ತನೆಯ ನಿಟ್ಟಿನಲ್ಲಿ ಉತ್ತಮವಾಗಿ ಸಾಗಿದೆ. ಎಲ್ಲಾ ಬಾಧ್ಯಸ್ಥರು, ನಾಗರಿಕ ಸಮಾಜ, ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ಮತ್ತು ಮುಖ್ಯವಾಗಿ ನಾಗರಿಕರು ಮತ್ತು ಸಮುದಾಯಗಳ ಸಹಾಯದಿಂದ ನಾವು ಚೇತರಿಕೆಯ ಮತ್ತು ಸಮೃದ್ಧ ಜಾಗತಿಕ ನಗರಗಳ ಕನಸನ್ನು ನನಸಾಗಿಸುತ್ತೇವೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ.

ಧನ್ಯವಾದಗಳು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Silicon Sprint: Why Google, Microsoft, Intel And Cognizant Are Betting Big On India

Media Coverage

Silicon Sprint: Why Google, Microsoft, Intel And Cognizant Are Betting Big On India
NM on the go

Nm on the go

Always be the first to hear from the PM. Get the App Now!
...
PM Modi speaks with PM Netanyahu of Israel
December 10, 2025
The two leaders discuss ways to strengthen India-Israel Strategic Partnership.
Both leaders reiterate their zero-tolerance approach towards terrorism.
PM Modi reaffirms India’s support for efforts towards a just and durable peace in the region.

Prime Minister Shri Narendra Modi received a telephone call from the Prime Minister of Israel, H.E. Mr. Benjamin Netanyahu today.

Both leaders expressed satisfaction at the continued momentum in India-Israel Strategic Partnership and reaffirmed their commitment to further strengthening these ties for mutual benefit.

The two leaders strongly condemned terrorism and reiterated their zero-tolerance approach towards terrorism in all its forms and manifestations.

They also exchanged views on the situation in West Asia. PM Modi reaffirmed India’s support for efforts towards a just and durable peace in the region, including early implementation of the Gaza Peace Plan.

The two leaders agreed to remain in touch.