ಶೇರ್
 
Comments

ಸ್ನೇಹಿತರೇ,

ಸವಾಲಿನ ಸಮಸ್ಯೆಗಳನ್ನು ಪರಿಹರಿಸಲು ನೀವು ಕಳೆದ 36 ಗಂಟೆಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದೀರಿ.
ನಿಮ್ಮ ಶಕ್ತಿಗೆ ನಮನಗಳು. ನನಗೆ ಆಯಾಸ ಕಾಣಿಸುತ್ತಿಲ್ಲ, ಕೇವಲ ತಾಜಾತನ ಕಾಣಿಸುತ್ತಿದೆ.

ಒಂದು ಕಾರ್ಯ ಸಾಧನೆಯ ನಾನು ಕಾಣುತ್ತಿದ್ದೇನೆ. ಈ ತೃಪ್ತಿಯ ಭಾವವು ಚೆನ್ನೈನ ವಿಶೇಷ ಉಪಹಾರವಾದ – ಇಡ್ಲಿ, ದೋಸೆ, ವಡಾ-ಸಾಂಬಾರ್‌ನಿಂದ ಬಂದಿದೆ ಎಂದು ನಾನು ಭಾವಿಸುತ್ತೇನೆ. ಚೆನ್ನೈ ನಗರವು ನೀಡುವ ಆತಿಥ್ಯವು ಹಿತಕರವಾದುದು. ಇಲ್ಲಿರುವ ಪ್ರತಿಯೊಬ್ಬರೂ, ವಿಶೇಷವಾಗಿ ಸಿಂಗಾಪುರದಿಂದ ಬಂದಿರುವ ನಮ್ಮ ಅತಿಥಿಗಳು ಚೆನ್ನೈ ಅನ್ನು ಆನಂದಿಸಿದ್ದಾರೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ, ಹ್ಯಾಕಥಾನ್ ವಿಜೇತರನ್ನು ನಾನು ಅಭಿನಂದಿಸುತ್ತೇನೆ. ಇಲ್ಲಿ ಸೇರಿರುವ ಪ್ರತಿಯೊಬ್ಬ ಯುವ ಸ್ನೇಹಿತನನ್ನು, ವಿಶೇಷವಾಗಿ ನನ್ನ ವಿದ್ಯಾರ್ಥಿ ಸ್ನೇಹಿತರನ್ನು ನಾನು ಅಭಿನಂದಿಸುತ್ತೇನೆ. ಸವಾಲುಗಳನ್ನು ಎದುರಿಸಲು ಮತ್ತು ಕಾರ್ಯಸಾಧ್ಯವಾದ ಪರಿಹಾರಗಳನ್ನು ಕಂಡುಕೊಳ್ಳುವ ನಿಮ್ಮ ಇಚ್ಚಾಶಕ್ತಿ, ನಿಮ್ಮ ಶಕ್ತಿ, ನಿಮ್ಮ ಉತ್ಸಾಹವು ಕೇವಲ ಸ್ಪರ್ಧೆಯನ್ನು ಗೆಲ್ಲುವುದಕ್ಕಿಂತ ಹೆಚ್ಚಿನದಾದ ಮೌಲ್ಯವನ್ನು ಹೊಂದಿದೆ.

ನನ್ನ ಯುವ ಸ್ನೇಹಿತರೇ, ಇಲ್ಲಿ ಇಂದು ನಾವು ಅನೇಕ ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ಯಾರು ಗಮನ ಹರಿಸುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯುವ ಕ್ಯಾಮೆರಾಗಳಿಗೆ ಸಂಬಂಧಿಸಿದ ಪರಿಹಾರವನ್ನು ನಾನು ವಿಶೇಷವಾಗಿ ಇಷ್ಟಪಡುತ್ತೇನೆ. ಈಗ ಏನಾಗುತ್ತದೆ ಎಂದು ನಿಮಗೆ ತಿಳಿದಿದೆ, ನಾನು ಸಂಸತ್ತಿನಲ್ಲಿ ನನ್ನ ಸ್ಪೀಕರ್ ಜೊತೆ ಮಾತನಾಡುತ್ತೇನೆ. ಇದು ಸಂಸದರಿಗೆ ಬಹಳ ಉಪಯುಕ್ತವಾಗಲಿದೆ ಎಂದು ನನಗೆ ಖಾತ್ರಿಯಿದೆ.

ನನಗೆ, ನೀವು ಪ್ರತಿಯೊಬ್ಬರೂ ವಿಜೇತರು. ಏಕೆ ನೀವು ವಿಜೇತರೆಂದರೆ ನೀವು ಅಪಾಯಗಳನ್ನು ಎದುರಿಸಲು ಹೆದರುವುದಿಲ್ಲ. ಫಲಿತಾಂಶಗಳ ಬಗ್ಗೆ ಚಿಂತಿಸದೆ ನಿಮ್ಮ ಪ್ರಯತ್ನಗಳಿಗೆ ನೀವು ಬದ್ಧರಾಗಿದ್ದೀರಿ.

ಭಾರತ-ಸಿಂಗಾಪುರ್ ಹ್ಯಾಕಥಾನ್ ಅದ್ಭುತ ಯಶಸ್ಸನ್ನು ಗಳಿಸಲು ನೆರವು ಮತ್ತು ಬೆಂಬಲವನ್ನು ನೀಡಿದ್ದಕ್ಕಾಗಿ ಸಿಂಗಾಪುರದ ಶಿಕ್ಷಣ ಸಚಿವ ಶ್ರೀ ಓಂಗ್ ಯೆ ಕುಂಗ್ ಮತ್ತು ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯ (ಎನ್‌ಟಿಯು) ದವರಿಗೆ ವಿಶೇಷವಾಗಿ ಧನ್ಯವಾದ ಹೇಳಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ.

ಭಾರತದ ವತಿಯಿಂದ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಇನ್ನೋವೇಶನ್ ಸೆಲ್, ಐಐಟಿ-ಮದ್ರಾಸ್ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಗಳು ಭಾರತ-ಸಿಂಗಾಪುರ್ ಹ್ಯಾಕಥಾನ್‌ನ 2 ನೇ ಆವೃತ್ತಿ ಅತ್ಯಂತ ಯಶಸ್ವಿಯಾಗಲು ಅದ್ಭುತವಾದ ಕೆಲಸವನ್ನು ಮಾಡಿವೆ.

ಸ್ನೇಹಿತರೇ,

ಮೊದಲಿನಿಂದಲೂ ಪ್ರಯತ್ನವೊಂದು ಯಶಸ್ವಿಯಾಗುವುದನ್ನು ನೋಡುವುದರಲ್ಲಿ ಕೆಲವು ತೃಪ್ತಿಕರವಾದ ವಿಷಯಗಳಿವೆ.
ಹಿಂದಿನ ಸಿಂಗಾಪುರ ಭೇಟಿಯ ಸಮಯದಲ್ಲಿ ನಾನು ಜಂಟಿ ಹ್ಯಾಕಥಾನ್‌ನ ಈ ಕಲ್ಪನೆಯನ್ನು ಸೂಚಿಸಿದ್ದೆ. ಕಳೆದ ವರ್ಷ ಇದನ್ನು ಸಿಂಗಾಪುರದ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಈ ವರ್ಷ ಇದನ್ನು ಮದ್ರಾಸ್‌ ಐಐಟಿಯ ಐತಿಹಾಸಿಕ, ಆದರೆ ಆಧುನಿಕ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ.

ಸ್ನೇಹಿತರೇ,
ಕಳೆದ ವರ್ಷ, ಹ್ಯಾಕಥಾನ್‌ನ ಗಮನವು ಸ್ಪರ್ಧೆಯಾಗಿತ್ತು ಎಂದು ನನಗೆ ತಿಳಿಸಲಾಗಿದೆ. ಈ ಬಾರಿ ಪ್ರತಿ ತಂಡವು ಸಮಸ್ಯೆಗಳನ್ನು ಪರಿಹರಿಸಲು ಒಟ್ಟಾಗಿ ಕೆಲಸ ಮಾಡಿದ ಎರಡೂ ದೇಶಗಳ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಆದ್ದರಿಂದ ನಾವು ಸ್ಪರ್ಧೆಯಿಂದ ಸಹಯೋಗಕ್ಕೆ ತೆರಳಿದ್ದೇವೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

ನಮ್ಮ ಎರಡೂ ದೇಶಗಳು ಎದುರಿಸುತ್ತಿರುವ ಸವಾಲುಗಳನ್ನು ಜಂಟಿಯಾಗಿ ನಿಭಾಯಿಸಲು ನಮಗೆ ಅಗತ್ಯವಿರುವ ಶಕ್ತಿ ಇದು.

ಸ್ನೇಹಿತರೇ,

ಈ ರೀತಿಯ ಹ್ಯಾಕಥಾನ್‌ಗಳು ಯುವಕರಿಗೆ ಅದ್ಭುತವಾಗಿರುತ್ತವೆ. ಸ್ಪರ್ಧಿಗಳು ಜಾಗತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಲಭ್ಯತೆಯನ್ನು ಪಡೆಯುತ್ತಾರೆ ಮತ್ತು ಅವರು ಅದನ್ನು ಸಮಯದ ಚೌಕಟ್ಟಿನಲ್ಲಿ ಮಾಡಬೇಕು.

ಸ್ಪರ್ಧಿಗಳು ತಮ್ಮ ಆಲೋಚನೆಗಳನ್ನು, ಅವರ ನವೀನ ಕೌಶಲ್ಯಗಳನ್ನು ಪರೀಕ್ಷಿಸಬಹುದು. ಇಂದಿನ ಹ್ಯಾಕಥಾನ್‌ಗಳಲ್ಲಿ ಕಂಡುಬರುವ ಪರಿಹಾರಗಳು ನಾಳಿನ ಸ್ಟಾರ್ಟ್ ಅಪ್ ಗಳು ಎಂದು ನಾನು ದೃಢವಾಗಿ ನಂಬಿದ್ದೇನೆ.

ನಾವು ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಮಾಡುತ್ತಿದ್ದೇವೆ.

ಈ ಉಪಕ್ರಮವು ಸರ್ಕಾರಿ ಇಲಾಖೆಗಳು, ಉದ್ಯಮಕ್ಕೆ ಸಂಬಂಧಿಸಿದವರು ಮತ್ತು ಎಲ್ಲಾ ಪ್ರಮುಖ ಸಂಸ್ಥೆಗಳನ್ನು ಒಟ್ಟುಗೂಡಿಸುತ್ತದೆ.
ನಾವು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ ನ ಪರಿಹಾರಗಳಿಗೆ, ಹಣ ಒದಗಿಸಿ, ಅವುಗಳನ್ನು ಸ್ಟಾರ್ಟ್ ಅಪ್‌ಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತೇವೆ.

ಇದೇ ರೀತಿಯ ಮಾರ್ಗಗಳಲ್ಲಿ, ಈ ಜಂಟಿ ಹ್ಯಾಕಥಾನ್‌ನಿಂದ ಬಂದ ಆಲೋಚನೆಗಳ ಕುರಿತು ಉದ್ಯಮಗಳನ್ನು ರಚಿಸುವ ಸಾಧ್ಯತೆಯನ್ನು ಎನ್‌ಟಿಯು, ಎಮ್‌ಎಚ್‌ಆರ್‌ಡಿ ಮತ್ತು ಎಐಸಿಟಿಇ ಜಂಟಿಯಾಗಿ ಅನ್ವೇಷಿಸುತ್ತವೆ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೇ,

ಭಾರತ ಇಂದು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯಲು ಸಜ್ಜಾಗಿದೆ.

ಇದರಲ್ಲಿ ನಾವೀನ್ಯತೆ ಮತ್ತು ಸ್ಟಾರ್ಟ್ ಅಪ್ ಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.

ಈಗಾಗಲೇ, ಭಾರತವು ಸ್ಟಾರ್ಟ್ ಅಪ್ ಸ್ನೇಹಪರ ಪರಿಸರ ವ್ಯವಸ್ಥೆಗಳಲ್ಲಿ ಮೊದಲ ಮೂರರಲ್ಲಿ ಒಂದಾಗಿದೆ. ನಾವು ಕಳೆದ ಐದು ವರ್ಷಗಳಲ್ಲಿ, ಇನ್ನೋವೇಶನ್ ಮತ್ತು ಇನ್ಕ್ಯುಬೇಷನ್ ಗೆ ಹೆಚ್ಚಿನ ಒತ್ತು ನೀಡಿದ್ದೇವೆ.

ಅಟಲ್ ಇನ್ನೋವೇಶನ್ ಮಿಷನ್, ಪಿಎಂ ರಿಸರ್ಚ್ ಫೆಲೋಶಿಪ್, ಸ್ಟಾರ್ಟ್ ಅಪ್ ಇಂಡಿಯಾ ಅಭಿಯಾನಗಳು 21 ನೇ ಶತಮಾನದ ಭಾರತದ ಅಡಿಪಾಯವಾಗಿದ್ದು, ಇದು ಆವಿಷ್ಕಾರ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ.

ನಾವು ಈಗ 6 ನೇ ತರಗತಿಯಲ್ಲಿಯೇ ನಮ್ಮ ವಿದ್ಯಾರ್ಥಿಗಳಿಗೆ ಯಂತ್ರ ಕಲಿಕೆ, ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್‌ನಂತಹ ಆಧುನಿಕ ತಂತ್ರಜ್ಞಾನಕ್ಕೆ ಒಡ್ಡಿಕೊಳ್ಳುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ.

ಆವಿಷ್ಕಾರಕ್ಕೆ ಮಾಧ್ಯಮವಾಗುವಂತಹ ವ್ಯವಸ್ಥೆಯನ್ನು ಶಾಲೆಯಿಂದ ಉನ್ನತ ಶಿಕ್ಷಣದ ಸಂಶೋಧನೆಯವರೆಗೆ ಸೃಷ್ಟಿಸಲಾಗುತ್ತಿದೆ.

ಸ್ನೇಹಿತರೇ,

ನಾವು ಎರಡು ದೊಡ್ಡ ಕಾರಣಗಳಿಗಾಗಿ ಇನ್ನೋವೇಶನ್ ಮತ್ತು ಇನ್ಕ್ಯುಬೇಷನ್ ಅನ್ನು ಪ್ರೋತ್ಸಾಹಿಸುತ್ತಿದ್ದೇವೆ, ಒಂದು – ಭಾರತದ ಸಮಸ್ಯೆಗಳನ್ನು ಪರಿಹರಿಸಲು, ಜೀವನವನ್ನು ಸುಲಭಗೊಳಿಸಲು ನಾವು ಸುಲಭ ಪರಿಹಾರಗಳನ್ನು ಬಯಸುತ್ತೇವೆ. ಇನ್ನೊಂದು, ಭಾರತದಲ್ಲಿ ನಾವು ಇಡೀ ಜಗತ್ತಿಗೆ ಬೇಕಾದ ಪರಿಹಾರಗಳನ್ನು ಹುಡುಕಲು ಬಯಸುತ್ತೇವೆ.

ಜಾಗತಿಕ ಅಪ್ಲಿಕೇಶನ್‌ಗಾಗಿ ಭಾರತೀಯ ಪರಿಹಾರಗಳು – ಇದು ನಮ್ಮ ಗುರಿ ಮತ್ತು ನಮ್ಮ ಬದ್ಧತೆ.

ಬಡ ದೇಶಗಳ ಅಗತ್ಯತೆಗಳನ್ನು ಪೂರೈಸಲು ನಮ್ಮ ಕಡಿಮೆ ವೆಚ್ಚದ ಪರಿಹಾರಗಳು ಲಭ್ಯವಾಗಬೇಕೆಂದು ನಾವು ಬಯಸುತ್ತೇವೆ – ಬಡವರು ಮತ್ತು ಹೆಚ್ಚು ವಂಚಿತರು ಅವರು ಎಲ್ಲಿಯೇ ವಾಸವಿದ್ದರೂ ಅವರಿಗೆ ನೆರವಾಗಲು ಭಾರತೀಯ ಆವಿಷ್ಕಾರಗಳಿರುತ್ತವೆ.

ಸ್ನೇಹಿತರೇ, ತಂತ್ರಜ್ಞಾನವು ದೇಶಗಳ, ಅಷ್ಟೇ ಏಕೆ ಖಂಡಗಳ ಜನರನ್ನು ಒಂದುಗೂಡಿಸುತ್ತದೆ ಎಂದು ನಾನು ಪ್ರಾಮಾಣಿಕವಾಗಿ ನಂಬಿದ್ದೇನೆ. ಸಚಿವ ಓಂಗ್ ಅವರ ಸಲಹೆಗಳನ್ನು ನಾನು ಸ್ವಾಗತಿಸುತ್ತೇನೆ.

ಎನ್‌ಟಿಯು, ಸಿಂಗಾಪುರ ಸರ್ಕಾರ ಮತ್ತು ಭಾರತ ಸರ್ಕಾರದ ಬೆಂಬಲದೊಂದಿಗೆ ಭಾಗವಹಿಸಲು ಆಸಕ್ತಿ ಹೊಂದಿರುವ ಏಷ್ಯಾದ ದೇಶಗಳನ್ನು ಒಳಗೊಂಡ ಇದೇ ರೀತಿಯ ಹ್ಯಾಕಥಾನ್ ಅನ್ನು ನಡೆಸಲು ನಾನು ಈ ಅವಕಾಶವನ್ನು ತೆಗೆದುಕೊಳ್ಳುತ್ತೇನೆ.
ಏಷ್ಯಾದ ದೇಶಗಳಲ್ಲಿನ ಅತ್ಯುತ್ತಮ ಬುದ್ಧಿವಂತರು ‘ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯನ್ನು’ ತಗ್ಗಿಸಲು ನವೀನ ಪರಿಹಾರಗಳನ್ನು ನೀಡಲು ಸ್ಪರ್ಧಿಸಲಿ.

ಈ ಉಪಕ್ರಮವನ್ನು ಭರ್ಜರಿ ಯಶಸ್ಸಿಗೆ ಕಾರಣರಾದ ಎಲ್ಲ ಸ್ಪರ್ಧಿಗಳು ಮತ್ತು ಸಂಘಟಕರನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ.

ನೀವು ಶ್ರೀಮಂತ ಸಂಸ್ಕೃತಿ, ಉತ್ತಮ ಪರಂಪರೆ ಮತ್ತು ಆಹಾರವನ್ನು ನೀಡುವ ಚೆನ್ನೈನಲ್ಲಿದ್ದೀರಿ. ಇದು ಸ್ಪರ್ಧಿಗಳು, ವಿಶೇಷವಾಗಿ ಸಿಂಗಾಪುರದ ನಮ್ಮ ಸ್ನೇಹಿತರು ಚೆನ್ನೈನಲ್ಲಿ ತಮ್ಮ ವಾಸ್ತವ್ಯವನ್ನು ಆನಂದಿಸಲು ನಾನು ಕೇಳಿಕೊಳ್ಳುತ್ತೇನೆ. ಕಲ್ಲಿನ ಕೆತ್ತನೆಗಳು ಮತ್ತು ಕಲ್ಲಿನ ದೇವಾಲಯಗಳಿಗೆ ಹೆಸರುವಾಸಿಯಾದ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೆಂದು ಘೋಷಿಸಲಾಗಿರುವ ಮಹಾಬಲಿಪುರಂನಂತಹ ಸ್ಥಳಗಳಿಗೆ ಭೇಟಿ ನೀಡಲು ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ.

ಧನ್ಯವಾದಗಳು! ತುಂಬು ಧನ್ಯವಾದಗಳು! 

 
ದೇಣಿಗೆ
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
BRICS summit to focus on strengthening counter-terror cooperation: PM Modi

Media Coverage

BRICS summit to focus on strengthening counter-terror cooperation: PM Modi
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ನವೆಂಬರ್ 2019
November 13, 2019
ಶೇರ್
 
Comments

PM Narendra Modi reaches Brazil for the BRICS Summit; To put forth India’s interests & agenda in the 5 Nation Conference

Showering appreciation, UN thanks India for gifting solar panels

New India on the rise under the leadership of PM Narendra Modi