ಇಂಡೋನೇಷ್ಯಾದ ಸುಲವೆಸಿ ವಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪ ಮತ್ತು ಸುನಾಮಿಗಳಿಂದಾದ ಅಮೂಲ್ಯ ಜೀವ ಹಾನಿಗಳಿಗಾಗಿ ಪ್ರಧಾನಮಂತ್ರಿ ಅವರು ಅತೀವ ಸಂತಾಪ ವ್ಯಕ್ತಪಡಿಸಿದರು
ಪ್ರಧಾನಮಂತ್ರಿ ಅವರು ಸಾಗರ ಕಿನಾರೆಯ ನೆರೆದೇಶ ಹಾಗೂ ಸ್ನೇಹ ರಾಷ್ಟ್ರ ಇಂಡೋನೇಷ್ಯಾಕ್ಕೆ ಭಾರತದಿಂದ ಸಾಧ್ಯವಾಗುವ ಎಲ್ಲ ರೀತಿಯ ಸಹಾಯ ನೀಡುವುದಾಗಿ ಪ್ರಧಾನಮಂತ್ರಿ ಅವರು ಇಂಡೋನೇಷ್ಯಾದ ಅಧ್ಯಕ್ಷರಿಗೆ ತಿಳಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಇಂಡೋನೇಷ್ಯಾ ಗಣತಂತ್ರದ ಅಧ್ಯಕ್ಷ ಘನತೆವೆತ್ತ ಜೊಕೊ ವಿಡೊಡೊ ಅವರಿಗೆ ದೂರವಾಣಿ ಕರೆ ಮಾಡಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂಡೋನೇಷ್ಯಾ ಗಣತಂತ್ರದ ಅಧ್ಯಕ್ಷ ಘನತೆವೆತ್ತ ಜೊಕೊ ವಿಡೊಡೊ ಅವರಿಗೆ ದೂರವಾಣಿ ಕರೆ ಮಾಡಿದರು.

ಇಂಡೋನೇಷ್ಯಾದ ಸುಲವೆಸಿ ವಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪ ಮತ್ತು ಸುನಾಮಿಗಳಿಂದಾದ ಅಮೂಲ್ಯ ಜೀವ ಹಾನಿಗಳಿಗಾಗಿ ಪ್ರಧಾನಮಂತ್ರಿ ಅವರು ವಯುಕ್ತಿಕವಾಗಿ ಹಾಗೂ ಭಾರತದ ಜನತೆಯ ಪರವಾಗಿ ಅತೀವ ಸಂತಾಪ ವ್ಯಕ್ತಪಡಿಸಿದರು.

ಚಿಂತಾಜನಕವಾದ ನೈಸರ್ಗಿಕ ವಿಪತ್ತಿನಿಂದ ಸರ್ವನಾಶವಾದರೂ ಸವಾಲುಗಳನ್ನು ಎದುರಿಸಿ ಸ್ಥಿತಿಸ್ಥಾಪಕತ್ವದಿಂದ ಮತ್ತು ಧೈರ್ಯಶಾಲಿಗಳಾಗಿ ಪುಟಿದೆದ್ದು ನಿಂತ ಇಂಡೋನೇಷ್ಯಾದ ಜನತೆಯನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು.

ಅಂತರರಾಷ್ಟ್ರೀಯ ಸಹಾಯಕ್ಕಾಗಿ ಇಂಡೋನೇಷ್ಯಾ ಮಾಡಿದ ಮನವಿಗೆ ಸ್ಪಂದಿಸಿ, ಪ್ರಧಾನಮಂತ್ರಿ ಅವರು ಸಾಗರ ಕಿನಾರೆಯ ನೆರೆದೇಶ ಹಾಗೂ ಸ್ನೇಹ ರಾಷ್ಟ್ರ ಇಂಡೋನೇಷ್ಯಾಕ್ಕೆ ಭಾರತದಿಂದ ಸಾಧ್ಯವಾಗುವ ಎಲ್ಲ ರೀತಿಯ ಸಹಾಯ ನೀಡುವುದಾಗಿ ಪ್ರಧಾನಮಂತ್ರಿ ಅವರು ಇಂಡೋನೇಷ್ಯಾದ ಅಧ್ಯಕ್ಷರಿಗೆ ತಿಳಿಸಿದರು.

ಸಂತಾಪ ಮತ್ತು ಸಹಾಯಗಳನ್ನು ವ್ಯಕ್ತಪಡಿಸಿದ್ದಕಾಗಿ ಪ್ರಧಾನಮಂತ್ರಿ ಅವರಿಗೆ ಅಧ್ಯಕ್ಷ ವಿಡೊಡೊ ಅವರು ಧನ್ಯವಾದ ಸಲ್ಲಿಸಿದರು.

ಭಾರತದ ಪರಿಹಾರ ಸಹಾಯದ ವಿವರಗಳು ರಾಜತಾಂತ್ರಿಕ ಮತ್ತು ಅಧಿಕೃತ ಕಚೇರಿ ವ್ಯವಸ್ಥೆಗಳ ಮೂಲಕ ನಡೆಸಿಕೊಳ್ಳಲು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ.

 
Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'PM Modi Is One Of Our Greatest Friends': Netanyahu Says Israel Is 'Investing Heavily' In India Ties

Media Coverage

'PM Modi Is One Of Our Greatest Friends': Netanyahu Says Israel Is 'Investing Heavily' In India Ties
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 04 ಆಗಸ್ಟ್ 2026
August 04, 2026

From Auto PLI to Ramsar Sites: How India is Winning on Every Front Under PM Modi