ಶೇರ್
 
Comments

ಸ್ವಚ್ಛ ಭಾರತವು 2019ರಲ್ಲಿ ನಡೆಯಲಿರುವ ಮಹಾತ್ಮ ಗಾಂಧಿಯವರ 150ನೇ ಜನ್ಮ ಜಯಂತಿಗೆ ದೇಶವು ಸಲ್ಲಿಸಬಹುದಾದ ಅತಿದೊಡ್ಡ ಕೃತಜ್ಞತೆಯಾಗಿರಲಿದೆ- 2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ರಾಜಪಥದಲ್ಲಿ ಚಾಲನೆ ನೀಡಿದ ಬಳಿಕ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ ಮಾತಿದು. ಸ್ವಚ್ಛ ಭಾರತ ಅಭಿಯಾನವನ್ನು ದೇಶದ ಉದ್ದಗಲಕ್ಕೂ ರಾಷ್ಟ್ರೀಯ ಚಳವಳಿ ರೂಪದಲ್ಲಿ ಜಾರಿಗೆ ತರಲಾಗುತ್ತಿದೆ.

ಈ ಸಾಮೂಹಿಕ ಅಭಿಯಾನದ ನೇತೃತ್ವ ವಹಿಸಿದ್ದ ಪ್ರಧಾನ ಮಂತ್ರಿಗಳು ಮಹಾತ್ಮಾ ಗಾಂಧೀಜಿಯವರ ಸ್ವಚ್ಛ ಮತ್ತು ಆರೋಗ್ಯಕರ ಭಾರತದ ಕನಸನ್ನು ಈಡೇರಿಸಬೇಕು ಎಂದು ಜನತೆಗೆ ಕರೆ ನೀಡಿದರು. ಖುದ್ದು ಶ್ರೀ ನರೇಂದ್ರ ಮೋದಿಯವರೇ ಮಂದಿರ ಮಾರ್ಗ ಪೊಲೀಸ್ ಠಾಣೆಯಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಿದ್ದರು. ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ, ದೇಶಾದ್ಯಂತ ಸಾಮೂಹಿಕ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದ ಪ್ರಧಾನ ಮಂತ್ರಿಗಳು ಖುದ್ದು ಪೊರಕೆ ಹಿಡಿದು ಸ್ವಚ್ಛತೆ ಆರಂಭಿಸಿದ್ದರು. ಜನರು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಲೂ ಬಾರದು, ಇತರರಿಗೆ ಉಗುಳಲೂ ಬಿಡಬಾರದು ಎಂದು ಕಿವಿಮಾತು ಹೇಳಿದರು. ನಾವು ಗಲೀಜು ಮಾಡುವುದಿಲ್ಲ, ಗಲೀಜು ಮಾಡಲೂ ಬಿಡುವುದಿಲ್ಲ ಎನ್ನುವುದು ಮಂತ್ರವಾಗಬೇಕು ಎಂದು ಪ್ರಧಾನ ಮಂತ್ರಿಗಳು ಹೇಳಿದ್ದರು. ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ಶ್ರೀ ನರೇಂದ್ರ ಮೋದಿಯವರು 9 ಗಣ್ಯರಿಗೆ ಆಹ್ವಾನವನ್ನೂ ನೀಡಿದ್ದರು. ಅಲ್ಲದೆ ಮತ್ತೆ ತಲಾ 9 ಮಂದಿಗೆ ಆಹ್ವಾನ ನೀಡುವಂತೆ ಆ ಗಣ್ಯರನ್ನು ಕೋರಿದ್ದರು.ಜನರಿಗೆ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡುವ ಮೂಲಕ ಸ್ವಚ್ಛಭಾರತ ಅಭಿಯಾನವನ್ನು ರಾಷ್ಟ್ರೀಯ ಆಂದೋಲನವಾಗಿ ಪರಿವರ್ತಿಸಿದರು. ಸ್ವಚ್ಛ ಭಾರತ ಚಳವಳಿ ಮೂಲಕ ಜನರಲ್ಲಿ ಜವಬ್ದಾರಿಯ ಅರಿವನ್ನು ಮೂಡಿಸಿದರು. ದೇಶದ ಜನರು ಸ್ವ ಇಚ್ಛೆಯಿಂದ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಆರಂಭಿಸಿರುವುದರಿಂದ, ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸು ಈಡೇರುವ ಆಸೆಗಳು ಮೂಡಲಾರಂಭಿಸಿವೆ.

ಪ್ರಧಾನ ಮಂತ್ರಿಗಳು ತಮ್ಮ ಮಾತು, ಸಂದೇಶ ಮತ್ತು ಕೃತಿಯ ಮೂಲಕ ಸ್ವಚ್ಛ ಭಾರತದ ಸಂದೇಶವನ್ನು ಜನರಿಗೆ ತಲುಪಿಸಿದ್ದಾರೆ. ವಾರಣಾಸಿಯಲ್ಲೂ ಅವರು ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದ್ದಾರೆ. ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ವಾರಣಾಸಿಯ ಗಂಗಾ ತಟದಲ್ಲಿನ ಅಸ್ಸಿ ಘಾಟ್ ಸ್ವಚ್ಛತೆಗೆ ಚಾಲನೆ ನೀಡಿದ್ದಾರೆ. ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸಿದ ಸಾವಿರಾರು ಮಂದಿಯ ಜೊತೆ ಖುದ್ದು ಪ್ರಧಾನಿಯವರೂ ಸೇರಿಕೊಂಡರು. ನೈರ್ಮಲೀಕರಣದ ಅನಿವಾರ್ಯತೆಯನ್ನು ಮನಗೊಂಡಿರುವ ಪ್ರಧಾನಿಯವರು ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಶೌಚಾಲಯಗಳ ಹೆಚ್ಚಳಕ್ಕೆ ಆದ್ಯತೆ ನೀಡಿದ್ದಾರೆ.ವಿವಿಧ ಕ್ಷೇತ್ರಗಳ ಜನರು ಸ್ವ-ಇಚ್ಛೆಯಿಂದ ಈ ಸಾಮೂಹಿಕ ಆಂದೋಲನದಲ್ಲಿ ಭಾಗಿಯಾಗುತ್ತಿದ್ದಾರೆ. ಸರಕಾರಿ ಅಧಿಕಾರಿಗಳಿಂದ ಹಿಡಿದು ಜವಾನರವರೆಗೆ, ಬಾಲಿವುಡ್ ನಟರಿಂದ ಹಿಡಿದು ಕ್ರೀಡಾಪಟುಗಳವರೆಗೆ, ಕೈಗಾರಿಕೋದ್ಯಮಗಳಿಂದ ಆರಂಭಿಸಿ ಆಧ್ಯಾತ್ಮಿಕ ನಾಯಕರವರೆಗೆ, ಈ ಕಾರ್ಯಕ್ಕಾಗಿ ಎಲ್ಲರೂ ಕೈಜೋಡಿಸಿದ್ದಾರೆ. ದೇಶಾದ್ಯಂತ ಲಕ್ಷಾಂತರ ಜನರು ಪ್ರತಿದಿನ ಈ ಆಂದೋಲನಕ್ಕೆ ಧುಮುಕುತ್ತಿದ್ದಾರೆ. ಸರಕಾರಿ ಇಲಾಖೆಗಳು, ಎನ್ ಜಿ ಇಗಳು, ಸ್ಥಳೀಯ ಸಮುದಾಯ ಕೇಂದ್ರಗಳು ಭಾರತವನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.ಅಲ್ಲದೆ, ಪ್ರಧಾನ ಮಂತ್ರಿಯವರು ಸಾಮಾಜಿಕ ಜಾಲ ತಾಣಗಳ ಮೂಲಕವೂ ಜನಸಾಮಾನ್ಯರ ಪಾಲ್ಗೊಳ್ಳುವಿಕೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ತೆಮ್ಸುತುಲಾ ಇಂಸಾಂಗ್, ದರ್ಶಿಕಾ ಶಾ ಸೇರಿದಂತೆ ಹಲವು ಸ್ವಯಂ ಸೇವಕ ಗುಂಪುಗಳು ವಾರಣಾಸಿಯಲ್ಲಿ ಆಯೋಜಿಸಿದ್ದ ಮಿಷನ್ ಪ್ರಭುಘಾಟ್ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸ್ವಚ್ಛ ಭಾರತ ಆಂದೋಲನದ ಅಂಗವಾಗಿ, ‘#MyCleanIndia’ ಇಂಡಿಯಾ ಹ್ಯಾಶ್ ಟ್ಯಾಗ್ ಆರಂಭಿಸಲಾಗಿದ್ದು, ಆಂದೋಲನ ಕುರಿತು ಮಾಹಿತಿಗಳನ್ನು ನೀಡಲಾಗುತ್ತಿದೆ. ಜನಸಾಮಾನ್ಯರು ಮಾಡುತ್ತಿರುವ ಕೆಲಸಗಳನ್ನು ಈ ಮೂಲಕ ಎಲ್ಲರಿಗೂ ತಿಳಿಸಲಾಗುತ್ತಿದೆ.

ಸ್ಬಚ್ಛ ಭಾರತ ಅಭಿಯಾನವು, ಜನಾಂದೋಲನವಾಗಿ ಮಾರ್ಪಟ್ಟಿದೆ. ಜನಸಾಮಾನ್ಯರು ದೊಡ್ಡ ಪ್ರಮಾಣದಲ್ಲಿ, ಭಾರತವನ್ನು ಸ್ವಚ್ಛಗೊಳಿಸುವ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಸ್ತೆಗಳನ್ನು ಗುಡಿಸಲು ಪೊರಕೆಗಳನ್ನು ಕೈಗೆತ್ತಿಕೊಂಡಿದ್ದಾರೆ, ಕಸವನ್ನು ತೆಗೆದು ಬೇರೆಡೆ ಸಾಗಿಸುತ್ತಿದ್ದಾರೆ, ನೈರ್ಮಲೀಕರಣದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಹೀಗೆ ನಾನಾ ವಿಧಾನಗಳ ಮೂಲಕ ದೇಶ ಸೇವೆ ಮಾಡುತ್ತಿದ್ದಾರೆ. ಸ್ವಚ್ಛತೆಯೇ ದೇವರನ್ನು ತಲುಪುವ ಮಾರ್ಗ ಎಂಬ ಅರಿವು ಎಲ್ಲರಲ್ಲೂ ಮೂಡತೊಡಗಿದೆ.


More about Prime Minister’s Swachh Bharat Mission

Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Over 26.69 crore Covid-19 vaccine doses provided to states, UTs: Health ministry

Media Coverage

Over 26.69 crore Covid-19 vaccine doses provided to states, UTs: Health ministry
...

Nm on the go

Always be the first to hear from the PM. Get the App Now!
...
PM Modi Adorns Colours of North East
March 22, 2019
ಶೇರ್
 
Comments

The scenic North East with its bountiful natural endowments, diverse culture and enterprising people is brimming with possibilities. Realising the region’s potential, the Modi government has been infusing a new vigour in the development of the seven sister states.

Citing ‘tyranny of distance’ as the reason for its isolation, its development was pushed to the background. However, taking a complete departure from the past, the Modi government has not only brought the focus back on the region but has, in fact, made it a priority area.

The rich cultural capital of the north east has been brought in focus by PM Modi. The manner in which he dons different headgears during his visits to the region ensures that the cultural significance of the region is highlighted. Here are some of the different headgears PM Modi has carried during his visits to India’s north east!