ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫಿನ್ಲೆಂಡ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಅಲೆಕ್ಸಾಂಡರ್ ಸ್ಟಬ್ ಅವರೊಂದಿಗೆ ಇಂದು ದೂರವಾಣಿ ಸಂಭಾಷಣೆ ನಡೆಸಿದರು.
ಡಿಜಿಟಲೀಕರಣ, ಸುಸ್ಥಿರತೆ ಮತ್ತು ಚಲನಶೀಲತೆ ಕ್ಷೇತ್ರಗಳು ಸೇರಿದಂತೆ ಉಭಯ ದೇಶಗಳ ನಡುವಿನ ನಡೆಯುತ್ತಿರುವ ಸಹಯೋಗದ ಯೋಜನೆಗಳನ್ನು ಉಭಯ ನಾಯಕರು ಮಾಹಿತಿ ವಿನಿಮಯ ಮಾಡಿಕೊಳ್ಳುವ ಮೂಲಕ ಪರಿಶೀಲಿಸಿದರು. ಕ್ವಾಂಟಮ್, 5ಜಿ-6ಜಿ, ಕೃತಕ ಬುದ್ಧಿಮತ್ತೆ ಮತ್ತು ಸೈಬರ್-ಸೆಕ್ಯುರಿಟಿ ಕ್ಷೇತ್ರಗಳನ್ನು ಒಳಗೊಂಡಂತೆ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಆಳಗೊಳಿಸಲು ಅವರುಗಳು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ಉಕ್ರೇನ್ ನಲ್ಲಿನ ಪರಿಸ್ಥಿತಿ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ನಿಕಟವಾದ ಭಾರತ-ಇಯು ಸಂಬಂಧಗಳಿಗೆ ಫಿನ್‌ಲ್ಯಾಂಡ್ ನ ಬೆಂಬಲವನ್ನು ಅಧ್ಯಕ್ಷರಾದ ಶ್ರೀ ಸ್ಟಬ್ ಅವರು ವ್ಯಕ್ತಪಡಿಸಿದರು ಮತ್ತು ಪರಸ್ಪರ ಲಾಭದಾಯಕ ಎಫ್‌ಟಿಎಯನ್ನು ಶೀಘ್ರವಾಗಿ ತೀರ್ಮಾನಿಸುವುದಾಗಿ ತಿಳಿಸಿದರು.
ಉಭಯ ನಾಯಕರು ಸಂಪರ್ಕದಲ್ಲಿರಲು ಸಹಮತ ವ್ಯಕ್ತಪಡಿಸಿದರು.
Had a fruitful conversation with President Alexander Stubb. Finland is an important partner country in the EU. We are committed to elevating our ties. Exchanged our perspectives on regional and global issues, including the situation in Ukraine.@alexstubb
— Narendra Modi (@narendramodi) April 16, 2025


