ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು ವಾಷಿಂಗ್ಟನ್ ಡಿಸಿಯಲ್ಲಿ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು.

ಭಾರತೀಯ ಸಮುದಾಯ ಭಾರತದಿಂದ ಯಾವುದೇ ಸಂದರ್ಭದಲ್ಲಿ ಶುಭ ಸುದ್ದಿ ಬಂದರೆ ಸಂಭ್ರಮಿಸುತ್ತದೆ, ಮತ್ತು ಭಾರತ ಹೊಸ ಎತ್ತರ ಏರುವುದನ್ನು ಬಯಸುತ್ತದೆ ಎಂದರು. ಅಮೆರಿಕದ ಆರ್ಥಿಕತೆಗೆ ಕೊಡುಗೆ ನೀಡುವಲ್ಲಿ ಭಾರತೀಯ ಸಮುದಾಯದ ಪಾತ್ರವನ್ನು ಅವರು ಶ್ಲಾಘಿಸಿದರು. ಭಾರತದಲ್ಲಿರುವ ಜನರು ಈಗ ಅವಕಾಶ ಪಡೆಯುತ್ತಿದ್ದಾರೆ ಮತ್ತು ಅಲ್ಲಿ ಸೂಕ್ತ ವಾತಾವರಣ ಇದೆ ಎಂದರು. ಶೀಘ್ರವೇ ದೇಶ ಪರಿವರ್ತನೆ ಆಗುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಮೇಲೆ ಒಂದೇ ಒಂದು ಸಣ್ಣ ಭ್ರಷ್ಟಾಚಾರದ ಆರೋಪವೂ ಇಲ್ಲ ಎಂದು ಪ್ರತಿಪಾದಿಸಿದರು.

ಭ್ರಷ್ಟಾಚಾರ ತಗ್ಗಿಸುವಲ್ಲಿ ತಂತ್ರಜ್ಞಾನದ ಪಾತ್ರದ ಬಗ್ಗೆ ಪ್ರಧಾನಿ ಮಾತನಾಡಿದರು. ನೇರ ಸವಲತ್ತು ವರ್ಗಾವಣೆಯ ಬಗ್ಗೆ ವಿವರಿಸಿದ ಅವರು, ಸಬ್ಸಿಡಿ ನೀಡಿಕೆಯಲ್ಲಿನ ದೊಡ್ಡ ಪ್ರಮಾಣದ ಸೋರಿಕೆ ನಿಂತಿದೆ, ಅರ್ಹರಿಗೆ ಲಾಭ ದೊರಕುತ್ತಿದೆ ಎಂದರು. ಎಲ್.ಪಿ.ಜಿ. ಸಬ್ಸಿಡಿ ಮರಳಿಸಿದ ಕುಟುಂಬಗಳ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. 5 ಕೋಟಿ ಬಡ ಕುಟುಂಬಗಳಿಗೆ ಎಲ್.ಪಿ.ಜಿ. ನೀಡಿಕೆಯ ಮುನ್ನೋಟವನ್ನು ವಿವರಿಸಿದರು.“ನಾನು ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಚಿಂತಿಸುವಾಗ, ನಾನು ಆರೋಗ್ಯಪೂರ್ಣ ಭಾರತದ ಚಿಂತನೆ ಮಾಡುತ್ತೇನೆ, ಅದರಲ್ಲೂ ದೇಶದ ಮಹಿಳೆಯರ ಮತ್ತು ಮಕ್ಕಳ ಉತ್ತಮ ಆರೋಗ್ಯದ ಬಗ್ಗೆ. ” ಚಿಂತಿಸುತ್ತೇನೆ ಎಂದರು.

.

“ನಾನು ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಚಿಂತಿಸುವಾಗ, ನಾನು ಆರೋಗ್ಯಪೂರ್ಣ ಭಾರತದ ಚಿಂತನೆ ಮಾಡುತ್ತೇನೆ, ಅದರಲ್ಲೂ ದೇಶದ ಮಹಿಳೆಯರ ಮತ್ತು ಮಕ್ಕಳ ಉತ್ತಮ ಆರೋಗ್ಯದ ಬಗ್ಗೆ. ” ಚಿಂತಿಸುತ್ತೇನೆ ಎಂದರು.

ಪ್ರಧಾನಮಂತ್ರಿಯವರು ಭಯೋತ್ಪಾದನೆಯ ಬಗ್ಗೆ ಮಾತನಾಡಿ, ಈಗ ಜಗತ್ತು ಅದು ಒಡ್ಡುವ ಭೀತಿಯನ್ನು ಅರಿತಿದೆ ಎಂದರು. ಈ ನಿಟ್ಟಿನಲ್ಲಿ ಇತ್ತೀಚೆಗೆ ಭಾರತ ಕೈಗೊಂಡ ನಿರ್ದಿಷ್ಟ ಪ್ರದೇಶದ ಮೇಲಿನ ದಾಳಿಯ ಕುರಿತು ಮಾತನಾಡಿದರು.

.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಾತ್ರವನ್ನು ಶ್ಲಾಘಿಸಿದ ಪ್ರಧಾನಿ, ಅದರಲ್ಲೂ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಸುಷ್ಮಾ ಸ್ವರಾಜ್ ವಿಶ್ವಾದ್ಯಂತ ಇರುವ ಜನರ ಸಂಕಷ್ಟದಲ್ಲಿ ನೆರವಾಗುತ್ತಿದ್ದಾರೆ ಎಂದರು.

.

 

 

 

 

 

 

 

 

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
A Milestone in Financial Inclusion: The Success Story of PMSBY

Media Coverage

A Milestone in Financial Inclusion: The Success Story of PMSBY
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ಮೇ 2026
May 09, 2026

Citizens Celebrate India’s Civilisational & Economic Awakening Under PM Narendra Modi