India's Energy Plan aims to ensure energy justice: PM
We plan to achieve ‘One Nation One Gas Grid’ & shift towards gas-based economy: PM
A self-reliant India will be a force multiplier for the global economy and energy security is at the core of these efforts: PM

ಅಮೆರಿಕಾದ ಇಂಧನ ಕಾರ್ಯದರ್ಶಿ, ಗೌರವಾನ್ವಿತ ಡೌನ್ ಬ್ರೌಲೆಟ್ ಅವರೇ,

ಸೌದಿ ಅರೆಬಿಯಾ ಇಂಧನ ಸಚಿವರು, ಸಾಮ್ರಾಜ್ಯದ ದೊರೆ ಅಬ್ದುಲ್ ಅಜೀಜ್ ಅವರೇ,

ಎಚ್ಐಎಸ್ ಮರ್ಕಿಟ್ ಉಪಾಧ್ಯಕ್ಷರಾದ ಡಾ. ಡೇನಿಯಲ್ ಯರ್ಗಿನ್ ಅವರೇ,

ನನ್ನ ಸಂಪುಟ ಸಹೋದ್ಯೋಗಿ ಶ್ರೀ ಧರ್ಮೇಂದ್ರ ಪ್ರಧಾನ್ ಅವರೇ,

ಜಾಗತಿಕ ತೈಲ ಮತ್ತು ಅನಿಲ ಉದ್ಯಮದ ನಾಯಕರೇ,

ನಮಸ್ತೆ,

ಭಾರತ ಇಂಧನ ವೇದಿಕೆ ಸೆರಾವೀಕ್ ನ ನಾಲ್ಕನೇ ಆವೃತ್ತಿಯಲ್ಲಿ ನಿಮ್ಮನ್ನೆಲ್ಲ ನೋಡುತ್ತಿರುವುದು ಸಂತೋಷದ ಸಂಗತಿ. ನಾನು ಇಂಧನ ವಲಯಕ್ಕೆ  ಕೊಡುಗೆ ನೀಡಿರುವುದಕ್ಕಾಗಿ ಡಾ. ಡೇನಿಯಲ್ ಯರ್ಗಿನ್ ಅವರನ್ನು ಅಭಿನಂದಿಸುತ್ತೇನೆ. ಇತ್ತೀಚಿನ ಅವರ ಪುಸ್ತಕ ‘ದಿ ನ್ಯೂ ಮ್ಯಾಪ್’ಗಾಗಿ ಅವರಿಗೆ ಶುಭಾಶಯಗಳನ್ನು ಹೇಳುತ್ತೇನೆ.

ಮಿತ್ರರೇ,

ಈ ವರ್ಷದ ಘೋಷವಾಕ್ಯ ಅತ್ಯಂತ ಹೆಚ್ಚು ಪ್ರಸ್ತುತವಾಗಿದೆ. ಅದು “ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತದ ಇಂಧನ ಭವಿಷ್ಯ’’ವಾಗಿದೆ. ನಾನು ನಿಮಗೆ ಭರವಸೆ ನೀಡುವುದೆಂದರೆ ಭಾರತ ಸಂಪೂರ್ಣ ಇಂಧನವನ್ನು ಹೊಂದಿದೆ ಮತ್ತು ಅದರ ಇಂಧನ ಭವಿಷ್ಯ ಅತ್ಯಂತ ಪ್ರಕಾಶಮಾನವಾಗಿದೆ ಮತ್ತು ಸುಭದ್ರವಾಗಿದೆ, ನಾನು ಏಕೆ ಹಾಗೆ ಹೇಳುತ್ತಿದ್ದೇನೆ ಎಂಬುದನ್ನು ವಿವರಿಸುತ್ತೇನೆ.

ಮಿತ್ರರೇ,

ಈ ವರ್ಷ ಇಂಧನ ವಲಯಕ್ಕೆ ಸವಾಲಿನ ವರ್ಷವಾಗಿದೆ. ಇಂಧನ ಬೇಡಿಕೆ ಬಹುತೇಕ ಒಂದನೇ ಮೂರರಷ್ಟು ಕುಸಿದಿದೆ. ಬಂಡವಾಳ ಹೂಡಿಕೆ ನಿರ್ಧಾರಗಳ ಮೇಲೆ ಪರಿಣಾಮವಾಗಿದೆ. ಜಾಗತಿಕ ಮುಂಚೂಣಿ ಸಂಸ್ಥೆಗಳು ಮುಂದಿನ ಕೆಲವು ವರ್ಷಗಳ ಕಾಲ ಜಾಗತಿಕ ಇಂಧನ ಬೇಡಿಕೆಯ ಮೇಲೆ ವ್ಯತಿರಿಕ್ತ ಪರಿಣಾಮಗಳಾಗಿವೆ ಎಂದು ಅಂದಾಜಿಸಿವೆ. ಆದರೆ ಆ ಏಜೆನ್ಸಿಗಳು ಭಾರತ ಅತ್ಯಂತ ಪ್ರಮುಖ ಇಂಧನ ಬಳಕೆ ರಾಷ್ಟ್ರವಾಗಲಿದೆ ಎಂದು ಅಂದಾಜಿಸಿವೆ. ದೀರ್ಘಾವಧಿಯವರೆಗೆ ಭಾರತದ ಇಂಧನ ಬಳಕೆ ಬಹುತೇಕ ದುಪ್ಪಟ್ಟಾಗುವ ನಿರೀಕ್ಷೆ ಇದೆ.

ಮಿತ್ರರೇ,

ನಾವು ಹಲವು ವಲಯಗಳಲ್ಲಿ ಕ್ರಿಯಾಶೀಲತೆ ಅನುರಣಿಸುತ್ತಿರುವುದನ್ನು ಕಾಣಬಹುದಾಗಿದೆ. ಉದಾಹರಣೆಗೆ  ವೈಮಾನಿಕ ಕ್ಷೇತ್ರವನ್ನು ತೆಗೆದುಕೊಳ್ಳಿ, ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಭಾರತ ಮೂರನೇ ಅತಿದೊಡ್ಡ ಹಾಗೂ  ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೈಮಾನಿಕ ಮಾರುಕಟ್ಟೆಯನ್ನು ಹೊಂದಿದೆ. ಭಾರತೀಯ ವಿಮಾನಗಳು 2024ರ ವೇಳೆಗೆ ತಮ್ಮ ಗಾತ್ರವನ್ನು 600 ರಿಂದ 1200ಕ್ಕೆ ಹೆಚ್ಚಿಸಿಕೊಳ್ಳಲಿವೆ. ಇದು ಅತಿದೊಡ್ಡ ಜಿಗಿತವಾಗಲಿದೆ.

ಮಿತ್ರರೇ,

ಇಂಧನ ಲಭ್ಯತೆ ಕೈಗೆಟಕುವಂತೆ ಮತ್ತು ವಿಶ್ವಾಸಾರ್ಹವಾಗಿರಬೇಕು ಎಂದು ಭಾರತ ನಂಬಿದೆ. ಆಗ ಮಾತ್ರ ಸಾಮಾಜಿಕ–ಆರ್ಥಿಕ ಪರಿವರ್ತನೆಗಳು ಸಾಧ್ಯ. ಇಂಧನ ವಲಯ ಒಂದು ರೀತಿಯಲ್ಲಿ ಜನರನ್ನು ಸಬಲೀಕರಣಗೊಳಿಸುತ್ತದೆ ಮತ್ತು ಜನರ ಜೀವನವನ್ನು ಸುಗಮಗೊಳಿಸುತ್ತದೆ, ಭಾರತ ಶೇ.100ರಷ್ಟು ವಿದ್ಯುದೀಕರಣ ಸಾಧಿಸಿದೆ, ಎಲ್ ಪಿ ಜಿ ವ್ಯಾಪ್ತಿ ಹೆಚ್ಚಳವಾಗಿದೆ. ಈ ಬದಲಾವಣೆಗಳಿಂದಾಗಿ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರು, ನಮ್ಮ ಮಧ್ಯಮ ವರ್ಗ ಮತ್ತು ಭಾರತೀಯ ಮಹಿಳೆಯರಿಗೆ ವಿಶೇಷ ರೀತಿಯಲ್ಲಿ ಸಹಾಯಕವಾಗಿದೆ.

ಮಿತ್ರರೇ,

ಭಾರತೀಯ ಇಂಧನ ಯೋಜನೆ ಇಂಧನ ನ್ಯಾಯದ ಗುರಿಯನ್ನು ಹೊಂದಿದೆ. ಅದು ಸುಸ್ಥಿರ ಬೆಳವಣಿಗೆಗೆ ಜಾಗತಿಕ ಬದ್ಧತೆಗಳನ್ನು ಸಂಪೂರ್ಣವಾಗಿ ಪಾಲನೆ ಮಾಡಲಿದೆ. ಅದರ ಅರ್ಥ ಭಾರತೀಯರ ಜೀವನವನ್ನು ಸುಧಾರಿಸಲು ಹೆಚ್ಚಿನ ಇಂಧನ ಅಗತ್ಯವಿದೆ. ಆದರೆ ಅದರಲ್ಲಿ ಕಡಿಮೆ ಇಂಗಾಲವಿರಬೇಕು.

ಮಿತ್ರರೇ,

ನಮ್ಮ ಇಂಧನ ವಲಯ ಬೆಳವಣಿಗೆ ಆಧಾರಿತ, ಕೈಗಾರಿಕಾ ಸ್ನೇಹಿ ಮತ್ತು ಪರಿಸರ ಪ್ರಜ್ಞೆಯುಳ್ಳದ್ದಾಗಿದೆ. ಅದೇ ಕಾರಣಕ್ಕಾಗಿ ಭಾರತ ನವೀಕರಿಸಬಹುದಾದ ಇಂಧನ ಮೂಲಗಳ ವಲಯದಲ್ಲಿ ಅತ್ಯಂತ ಸಕ್ರಿಯ ರಾಷ್ಟ್ರಗಳಲ್ಲಿ ಒಂದಾಗಿದೆ.

ಮಿತ್ರರೇ,

ಕಳೆದ ಆರು ವರ್ಷಗಳಲ್ಲಿ 36 ಕೋಟಿಗೂ ಅಧಿಕ ಅಥವಾ 360 ಮಿಲಿಯನ್ ಎಲ್ಇಡಿ ಬಲ್ಬ್ ಗಳನ್ನು ವಿತರಿಸಲಾಗಿದೆ. ಎಲ್ಇಡಿ ಬಲ್ಬ್ ಗಳ ವೆಚ್ಚ ಸುಮಾರು ಹತ್ತು ಪಟ್ಟು ತಗ್ಗಿಸಲಾಗಿದೆ. ಕಳೆದ ಆರು ವರ್ಷಗಳಲ್ಲಿ ಸುಮಾರು 1.1 ಕೋಟಿ ಅಥವಾ 11 ಮಿಲಿಯನ್ ಸ್ಮಾರ್ಟ್ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಈ ಎಲ್ಲ ಕ್ರಮಗಳಿಂದಾಗಿ ಸುಮಾರು ಪ್ರತಿ ವರ್ಷ ಸುಮಾರು 60 ಬಿಲಿಯನ್ ಯೂನಿಟ್ ಇಂಧನ ಉಳಿತಾಯವಾಗುವ ಅಂದಾಜಿದೆ. ಹಸಿರುಮನೆ ಗಾಜಿನ ಪರಿಣಾಮ ಬೀರುವ ವಾರ್ಷಿಕ ಸುಮಾರು 4.5 ಕೋಟಿ ಅಥವಾ 45 ಮಿಲಯನ್ ಟನ್ ಕಾರ್ಬನ್ ಡೈಆಕ್ಸೈಡ್ ತಗ್ಗಿದೆ ಹಾಗೂ ವಾರ್ಷಿಕ ಸುಮಾರು 24,000 ಕೋಟಿ ರೂ. ಅಥವಾ 240 ಬಿಲಿಯನ್ ಹಣ ಉಳಿತಾಯವಾಗಿದೆ. ಇಂತಹ ಕ್ರಮಗಳಿಂದಾಗಿ ಶುದ್ಧ ಇಂಧನ ಹೂಡಿಕೆಗೆ ಭಾರತ ಅತ್ಯಾಕರ್ಷಕ ಮಾರುಕಟ್ಟೆ ತಾಣವಾಗಿ ರೂಪುಗೊಂಡಿದೆ ಎಂದು ವರದಿಗಳು ತಿಳಿಸಿವೆ. 

ಮಿತ್ರರೇ,

ನಾನು ಮೊದಲು ಹೇಳಿದಂತೆ ಭಾರತ ಸದಾ ಜಾಗತಿಕ ಒಳಿತನ್ನು ಮನಸ್ಸಿನಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ. ನಾವು ಜಾಗತಿಕ ಸಮುದಾಯಕ್ಕೆ ನೀಡಿರುವ ಬದ್ಧತೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗದಲ್ಲಿ ನಡೆಯುತ್ತಿದ್ದೇವೆ.

ಒಟ್ಟು ಸ್ಥಾಪಿತ ನವೀಕರಿಸಬಹುದಾದ ಇಂಧನ ಮೂಲಗಳ ಸಾಮರ್ಥ್ಯವನ್ನು 2022ರ ವೇಳೆಗೆ 175 ಗಿಗಾವ್ಯಾಟ್ ಸಾಮರ್ಥ್ಯದ ಗುರಿ ಹೊಂದಲಾಗಿತ್ತು, ಇದೀಗ ಅದನ್ನು 2030ರ ವೇಳೆಗೆ 450 ಗಿಗಾವ್ಯಾಟ್ ಗೆ ಹೆಚ್ಚಳದ ಗುರಿಯನ್ನು ವಿಸ್ತರಿಸಿದ್ದೇವೆ. ವಿಶ್ವದ ಕೈಗಾರಿಕಾ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಅತಿ ಕಡಿಮೆ ಇಂಗಾಲ ಹೊರಹಾಕುವ ದೇಶಗಳಲ್ಲಿ ಒಂದಾಗಿದೆ, ಆದರೂ ಹವಾಮಾನ ವೈಪರೀತ್ಯದ ವಿರುದ್ಧದ ಹೋರಾಟದ ಎಲ್ಲ ಪ್ರಯತ್ನಗಳನ್ನು ಭಾರತ ಮುಂದುವರಿಸಲಿದೆ.

ಮಿತ್ರರೇ,

ಕಳೆದ ಆರು ವರ್ಷಗಳಿಂದೀಚೆಗೆ ಇಂಧನ ವಲಯದಲ್ಲಿ ಸುಧಾರಣೆಗಳ ಪಯಣ ಅತ್ಯಂತ ಹೆಚ್ಚಿನ ವೇಗ ಪಡೆದುಕೊಂಡಿವೆ. ಹಲವು ಮಹತ್ವದ ಸುಧಾರಣೆಗಳನ್ನು ಇಂಧನ ವಲಯದಲ್ಲಿ ಕೈಗೊಳ್ಳಲಾಗಿದೆ. 2019ರ ಫೆಬ್ರವರಿಯಿಂದೀಚೆಗೆ ಶೋಧನಾ ಮತ್ತು ಪರವಾನಗಿ ನೀತಿಯಲ್ಲಿ ಸುಧಾರಣೆಗಳನ್ನು ತರಲಾಗಿದೆ. ‘ಆದಾಯ’ ದಿಂದ ‘ಉತ್ಪತ್ತಿ’ ಗರಿಷ್ಠಗೊಳಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ, ಹೆಚ್ಚಿನ ಪಾರದರ್ಶಕತೆ ಹಾಗೂ 2025ರ ವೇಳೆಗೆ ವಾರ್ಷಿಕ ಸಂಸ್ಕರಣಾ ಸಾಮರ್ಥ್ಯವನ್ನು 250 ರಿಂದ 400 ಮಿಲಿಯನ್ ಮೆಟ್ರಿಕ್ ಟನ್ ಗೆ ಹೆಚ್ಚಿಸುವ ಗುರಿ ಸಾಧನೆಗೆ ನಿಯಮಾವಳಿಗಳನ್ನು ರೂಪಿಸಲಾಗಿದೆ. ಗೃಹ ಬಳಕೆ ಅನಿಲ ಉತ್ಪಾದನೆ ಮಾಡುವುದು ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ, ‘ಒಂದು ರಾಷ್ಟ್ರ, ಒಂದು ಅನಿಲ ಗ್ರಿಡ್’ ಸಾಧಿಸುವ ಗುರಿ ಇದೆ ಮತ್ತು ಅನಿಲ ಆಧಾರಿತ ಆರ್ಥಿಕತೆಯನ್ನಾಗಿ ಪರಿವರ್ತಿಸಲಾಗುವುದು.

ಮಿತ್ರರೇ,

ದೀರ್ಘಾವಧಿಯ ವರೆಗೆ ವಿಶ್ವ ಕಚ್ಚಾ ತೈಲ ಬೆಲೆ ರೋಲರ್ ಕೋಸ್ಟರ್ ನಂತೆ ಏರಿಳಿಕೆಯಾಗುತ್ತಿದೆ. ನಾವು ಜವಾಬ್ದಾರಿಯುತ ದರ ನಿಗದಿ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಅನಿಲ ಮತ್ತು ತೈಲ ಎರಡಕ್ಕೂ ಪಾರದರ್ಶಕ ಮತ್ತು ಸರಳ ಮಾರುಕಟ್ಟೆಯ ನಿರ್ಮಾಣ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ.

ಮಿತ್ರರೇ,

ನೈಸರ್ಗಿಕ ಅನಿಲದ ದೇಶೀಯ ಉತ್ಪಾದನೆ ಹೆಚ್ಚಳವಾಗಬೇಕು. ಅನಿಲ ಶೋಧನಾ ಮಾರುಕಟ್ಟೆ ಬೆಲೆ ಏಕರೂಪವಾಗಿರಬೇಕು. ನಾವು ಕಳೆದ ತಿಂಗಳ ಆರಂಭದಲ್ಲಿ ನೈಸರ್ಗಿಕ ಅನಿಲ ಮಾರುಕಟ್ಟೆಗಳ ಸುಧಾರಣೆಗಳನ್ನು ಘೋಷಿಸಿದ್ದೆವು. ಇದರಿಂದ ಇ–ಬಿಡ್ಡಿಂಗ್ ಮೂಲಕ ನೈಸರ್ಗಿಕ ಅನಿಲ ಮಾರಾಟದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಗಲಿದೆ. ಈ ವರ್ಷದ ಜೂನ್ ನಲ್ಲಿ ಭಾರತದ ಮೊದಲ ಸ್ವಯಂಚಾಲಿತ ರಾಷ್ಟ್ರಮಟ್ಟದ ಅನಿಲ ವ್ಯಾಪಾರ ವೇದಿಕೆಯನ್ನು ಉದ್ಘಾಟಿಸಲಾಯಿತು. ಅದು ಅನಿಲದ ಮಾರುಕಟ್ಟೆ ದರ ಶೋಧಕ್ಕೆ ನಿರ್ದಿಷ್ಟ ಮಾನದಂಡವನ್ನು ನಿಗದಿಪಡಿಸಲಿದೆ.

ಮಿತ್ರರೇ,

ನಾವು ‘ಆತ್ಮನಿರ್ಭರ ಭಾರತ’ ನಿರ್ಮಾಣ ಮಾಡುವ ದೂರದೃಷ್ಟಿಯನ್ನು ಹೊಂದಿದ್ದೇವೆ. ಸ್ವಾವಲಂಬಿ ಭಾರತ, ಜಾಗತಿಕ ಆರ್ಥಿಕತೆಯ ಶಕ್ತಿಯನ್ನು ಹಲವು ಪಟ್ಟು ಹೆಚ್ಚಿಸಲಿದೆ ಮತ್ತು ಈ ಎಲ್ಲ ಪ್ರಯತ್ನಗಳಿಗೆ ಇಂಧನ ಭದ್ರತೆ ಅತ್ಯಂತ ಮುಖ್ಯವಾದುದು. ನಮ್ಮ ಕೆಲಸ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತಿದೆ ಎಂಬುದನ್ನು ನಿಮಗೆ ತಿಳಿಸಲು ಸಂತೋಷವಾಗುತ್ತಿದೆ. ಇಂತಹ ಸವಾಲಿನ ಸಮಯದಲ್ಲೂ  ತೈಲ ಮತ್ತು ಅನಿಲ ಮೌಲ್ಯ ಸರಣಿಯಲ್ಲಿ ಹೆಚ್ಚಿನ ಪ್ರಮಾಣದ ಬಂಡವಾಳ ಹೂಡಿಕೆಯಾಗುತ್ತಿದೆ. ಇತರೆ ವಲಯಗಳಲ್ಲೂ ಸಹ ಅದೇ ರೀತಿಯ ಶುಭ ಸೂಚನೆಗಳು ಕಂಡುಬರುತ್ತಿವೆ. ಪ್ರಮುಖ ಜಾಗತಿಕ ಇಂಧನ ರಾಷ್ಟ್ರಗಳೊಂದಿಗೆ ಸರ್ಕಾರ ಕಾರ್ಯತಾಂತ್ರಿಕ ಮತ್ತು ಸಮಗ್ರ ಇಂಧನ ಪಾಲುದಾರಿಕೆಗಳನ್ನು ಹೊಂದುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಭಾರತದ ನೆರೆ–ಹೊರೆ ಮೊದಲು ನೀತಿಯ ಭಾಗವಾಗಿ ನಮ್ಮ ನೆರೆಯ ರಾಷ್ಟ್ರಗಳೊಂದಿಗೆ ಇಂಧನ ಕಾರಿಡಾರ್ ಅಭಿವೃದ್ಧಿಗೊಳಿಸುವುದಕ್ಕೆ ಒತ್ತು ನೀಡಲಾಗಿದ್ದು, ಅದು ಪರಸ್ಪರ ರಾಷ್ಟ್ರಗಳಿಗೆ ಅನುಕೂಲಕಾರಿ.

ಮಿತ್ರರೇ,

ಸೂರ್ಯನ ಕಿರಣಗಳು ಮನುಕುಲದ ಪ್ರಗತಿಯ ಪಯಣವನ್ನು ಪ್ರಕಾಶಮಾನಗೊಳಿಸುತ್ತದೆ. ಏಳು ಕುದುರೆಗಳು ಸೂರ್ಯದೇವರ ರಥವನ್ನು ಎಳೆದೊಯ್ಯುತ್ತಿರುವಂತೆ ಭಾರತದ ಇಂಧನ ನಕ್ಷೆ, ಏಳು ಪ್ರಮುಖ ಚಾಲನಾ ಅಂಶಗಳನ್ನು ಒಳಗೊಂಡಿವೆ. ಆ ಬದಲಾವಣೆಯ ಚಾಲನಾ ಶಕ್ತಿಗಳೆಂದರೆ, 

ಮಿತ್ರರೇ,

1.     ಅನಿಲ ಆಧಾರಿತ ಆರ್ಥಿಕತೆಯತ್ತ ಸಾಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳನ್ನು ಚುರುಕುಗೊಳಿಸುವುದು.

2.    ಬರಿದಾಗುವ ಇಂಧನಗಳು ವಿಶೇಷವಾಗಿ ಪೆಟ್ರೋಲಿಯಂ ಮತ್ತು ಕಲ್ಲಿದ್ದಲು ಶುದ್ಧ ರೀತಿಯಲ್ಲಿ ಬಳಕೆ ಮಾಡುವುದು.

3.    ಜೈವಿಕ ಇಂಧನಗಳಿಗೆ ಒತ್ತು ನೀಡಲು ದೇಶೀಯ ಮೂಲಗಳಿಗೆ ಹೆಚ್ಚಿನ ಆದ್ಯತೆ ನೀಡುವುದು.

4.   2030ರ ವೇಳೆಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ 450 ಗಿಗಾವ್ಯಾಟ್ ಇಂಧನ ಉತ್ಪಾದಿಸುವ ಗುರಿ ಸಾಧಿಸುವುದು.

5.    ಸಾರಿಗೆ ವ್ಯವಸ್ಥೆಯಲ್ಲಿ ಇಂಗಾಲವನ್ನು ತಗ್ಗಿಸುವ ದೃಷ್ಟಿಯಿಂದ ವಿದ್ಯುನ್ಮಾನ ವಾಹನಗಳ ಬಳಕೆಗೆ ಹೆಚ್ಚಿನ ಉತ್ತೇಜನ ನೀಡುವುದು.

6.    ಹೈಡ್ರೋಜನ್ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ಇಂಧನಗಳತ್ತ ಸಾಗುವುದು.

7.   ಎಲ್ಲ ಇಂಧನ ವ್ಯವಸ್ಥೆಗಳಲ್ಲಿ ಡಿಜಿಟಲ್ ಅನುಶೋಧನೆಗೆ ಒತ್ತು ನೀಡುವುದು

ಕಳೆದ ಆರು ವರ್ಷಗಳಿಂದೀಚೆಗೆ ಈ ಎಲ್ಲಾ ಅಂಶಗಳನ್ನೊಳಗೊಂಡ ಉತ್ಕೃಷ್ಟ ಇಂಧನ ನೀತಿಗಳನ್ನು ಹೊಂದಿದ್ದು, ಅವುಗಳನ್ನು ಮುಂದುವರಿಸಲಾಗುತ್ತಿದೆ.

ಮಿತ್ರರೇ,

ಭಾರತ ಇಂಧನ ವೇದಿಕೆ – ಸೆರಾ ವೀಕ್ ಇದು ಉದ್ಯಮ, ಸರ್ಕಾರ ಮತ್ತು ಸಮಾಜದ ನಡುವೆ ಒಂದು ಉತ್ತಮ ವೇದಿಕೆಯಾಗಿದೆ. ಈ ಸಮಾವೇಶದಲ್ಲಿ ಉತ್ತಮ ಇಂಧನ ಭವಿಷ್ಯಕ್ಕಾಗಿ ಫಲಪ್ರದ ಸಮಾಲೋಚನೆಗಳು ನಡೆಯಲಿವೆ ಎಂಬ ವಿಶ್ವಾಸ ನನಗಿದೆ. ನಾನು ಮತ್ತೊಮ್ಮೆ ಹೇಳುವುದೆಂದರೆ ಭಾರತದ ಇಂಧನ ಇಡೀ ವಿಶ್ವವನ್ನು ಶಕ್ತಿಶಾಲಿಗೊಳಿಸುತ್ತದೆ.

ಮತ್ತೊಮ್ಮೆ ಧನ್ಯವಾದಗಳು

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Ecommerce order volumes up 31% during Independence Day sales

Media Coverage

Ecommerce order volumes up 31% during Independence Day sales
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the importance of self-respect, courage and steadfastness
August 18, 2026

The Prime Minister, Shri Narendra Modi has shared a Sanskrit Subhashitam highlighting the importance of living with self-respect, courage and dignity. He emphasised that true valour and strength lie in remaining steadfast in one’s principles and values, without compromising them under any circumstances.

The Prime Minister shared a Sanskrit Subhashitam-

“उद्यच्छेदेव न नमेदुद्यमो ह्येव पौरुषम्।
अप्यपर्वणि भज्येत न नमत्वेव कस्यचित्॥”

The Subhashitam conveys that a person should always live with self-respect, courage and dignity. True valor and strength lie in never compromising one's principles and values under any circumstances, but remaining steadfast in one's ideals with truth, patience and self-pride.

The Prime Minister wrote on X;

“उद्यच्छेदेव न नमेदुद्यमो ह्येव पौरुषम्।

अप्यपर्वणि भज्येत न नमत्वेव कस्यचित्॥”