ಕಚ್ಚಾ ವಸ್ತುಗಳಿಂದ ಸಿದ್ಧಪಡಿಸಿದ ಉತ್ಪನ್ನಗಳವರೆಗಿನ ಜವಳಿ ಕ್ಷೇತ್ರದ ವರೆಗಿನ ಸಂಪೂರ್ಣ ಮೌಲ್ಯವರ್ಧಿತ ಸರಪಳಿಯನ್ನು ಒಂದೇ ಸೂರಿನಡಿ ಒಳಗೊಂಡ ವಿಶಿಷ್ಟ ಕಾರ್ಯಕ್ರಮ ಇದಾಗಿದೆ
120ಕ್ಕೂ ಹೆಚ್ಚು ದೇಶಗಳ ನೀತಿ ನಿರೂಪಕರು ಮತ್ತು ಜಾಗತಿಕ ಸಿ.ಇ.ಒ.ಗಳು, ಪ್ರದರ್ಶಕರು, ಅಂತಾರಾಷ್ಟ್ರೀಯ ಖರೀದಿದಾರರು ಭಾಗವಹಿಸಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 16, 2025 ರಂದು ಸಂಜೆ 4 ಗಂಟೆಗೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುವ “ಭಾರತ್ ಟೆಕ್ಸ್ 2025”ರಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಫೆಬ್ರವರಿ 14-17,2025 ರಿಂದ ಭಾರತ ಮಂಟಪದಲ್ಲಿ ನಡೆಯಲಿರುವ ಬೃಹತ್ ಜಾಗತಿಕ ಕಾರ್ಯಕ್ರಮವಾದ “ಭಾರತ್ ಟೆಕ್ಸ್ 2025” ವಿಶಿಷ್ಟ ಕಾರ್ಯಕ್ರಮವಾಗಿದೆ. ಏಕೆಂದರೆ, ಇದು ಕಚ್ಚಾ ವಸ್ತುಗಳಿಂದ ಹಿಡಿದು, ಪರಿಕರಗಳು ಸೇರಿದಂತೆ ಸಿದ್ಧಪಡಿಸಿದ ಉತ್ಪನ್ನಗಳವರೆಗೆ ಸಂಪೂರ್ಣ ಜವಳಿ ಕ್ಷೇತ್ರದ ಮೌಲ್ಯವರ್ಧಿತ ಸರಪಳಿಯನ್ನು ಒಂದೇ ಸೂರಿನಡಿ ತರುತ್ತದೆ.

ಭಾರತ್ ಟೆಕ್ಸ್ 2025ರ ವೇದಿಕೆಯು ಜವಳಿ ಉದ್ಯಮದ ಅತಿದೊಡ್ಡ ಮತ್ತು ಅತ್ಯಂತ ಸಮಗ್ರ ಕಾರ್ಯಕ್ರಮವಾಗಿದ್ದು, ಎರಡು ಸ್ಥಳಗಳಲ್ಲಿ ಹರಡಿರುವ ಬೃಹತ್ ಪ್ರದರ್ಶನವನ್ನು ಒಳಗೊಂಡಿರುತ್ತದೆ ಮತ್ತು ಸಂಪೂರ್ಣ ಜವಳಿ ಪರಿಸರ ವ್ಯವಸ್ಥೆಯನ್ನು ಪ್ರದರ್ಶಿಸುತ್ತದೆ. ಇದು 70 ಕ್ಕೂ ಹೆಚ್ಚು ಸಮ್ಮೇಳನ ಅಧಿವೇಶನಗಳು, ದುಂಡುಮೇಜಿನ ಸಭೆಗಳು, ಪ್ಯಾನಲ್ ಚರ್ಚೆಗಳು ಮತ್ತು ಮಾಸ್ಟರ್ ತರಗತಿಗಳನ್ನು ಒಳಗೊಂಡ ಜಾಗತಿಕ ಮಟ್ಟದ ಸಮ್ಮೇಳನವನ್ನು ಸಹ ಒಳಗೊಂಡಿರುತ್ತದೆ. ಇದು ವಿಶೇಷ ನಾವೀನ್ಯತೆ ಮತ್ತು ಸ್ಟಾರ್ಟ್ ಅಪ್ ಮಂಟಪಗಳನ್ನು ಒಳಗೊಂಡಿರುವ ಪ್ರದರ್ಶನವನ್ನು ಒಳಗೊಂಡಿರುತ್ತದೆ. ಇದು ಹ್ಯಾಕಥಾನ್ಗಳನ್ನು ಆಧರಿಸಿದ ಸ್ಟಾರ್ಟ್ ಅಪ್ ಪಿಚ್ ಫೆಸ್ಟ್ ಮತ್ತು ನಾವೀನ್ಯತೆ ಉತ್ಸವಗಳು, ಟೆಕ್ ಟ್ಯಾಂಕ್ ಗಳು ಮತ್ತು ವಿನ್ಯಾಸ ಸವಾಲುಗಳನ್ನು ಪ್ರಮುಖ ಹೂಡಿಕೆದಾರರ ಮೂಲಕ ಸ್ಟಾರ್ಟ್ ಅಪ್ ಗಳಿಗೆ ಹಣಕಾಸು ಅವಕಾಶಗಳನ್ನು ಒದಗಿಸುತ್ತದೆ.

ಭಾರತ್ ಟೆಕ್ಸ್ 2025 ನೀತಿ ನಿರೂಪಕರು ಮತ್ತು ಜಾಗತಿಕ ಸಿಇಒಗಳು, 5000 ಕ್ಕೂ ಹೆಚ್ಚು ಪ್ರದರ್ಶಕರು, 120 ಕ್ಕೂ ಹೆಚ್ಚು ದೇಶಗಳಿಂದ 6000 ಅಂತಾರಾಷ್ಟ್ರೀಯ ಖರೀದಿದಾರರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಅಂತರರಾಷ್ಟ್ರೀಯ ಜವಳಿ ತಯಾರಕರ ಒಕ್ಕೂಟ (ಐ.ಟಿ.ಎಂ.ಎಫ್.), ಅಂತಾರಾಷ್ಟ್ರೀಯ ಹತ್ತಿ ಸಲಹಾ ಸಮಿತಿ (ಐಸಿಎಸಿ), ಯುರಾಟೆಕ್ಸ್, ಜವಳಿ ವಿನಿಮಯ ಕೇಂದ್ರ, ಯು.ಎಸ್. ಫ್ಯಾಷನ್ ಉದ್ಯಮ ಸಂಘಟನೆ (ಯು.ಎಸ್.ಎಫ್.ಐ.ಎ.) ಸೇರಿದಂತೆ ಪ್ರಪಂಚದಾದ್ಯಂತದ 25 ಕ್ಕೂ ಹೆಚ್ಚು ಪ್ರಮುಖ ಜಾಗತಿಕ ಜವಳಿ ಕ್ಷೇತ್ರದ ಒ್ಕೂಟ ಸಂಸ್ಥೆಗಳು ಮತ್ತು ಸಂಘಗಳು ಸಹ  ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತವೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
How India became the world's most prolific IPO market

Media Coverage

How India became the world's most prolific IPO market
NM on the go

Nm on the go

Always be the first to hear from the PM. Get the App Now!
...
Prime Minister pays homage to Adi Shankaracharya
April 21, 2026

The Prime Minister, Shri Narendra Modi, paid tributes to one of India’s greatest spiritual luminaries, Adi Shankaracharya, on his Jayanti today. Shri Modi remarked that his profound teachings, thoughts and philosophy of Advaita Vedanta continue to guide innumerable people globally. And his efforts to revitalise spiritual thought and establish spiritual centres across the nation remain a lasting inspiration."May his wisdom continue to illuminate our path and strengthen our commitment to truth, compassion and collective well-being", Shri Modi added.

The Prime Minister posted on X:

"On the sacred occasion of Adi Shankaracharya Jayanti, paying homage to one of India’s greatest spiritual luminaries. His profound teachings, thoughts and philosophy of Advaita Vedanta continue to guide innumerable people globally. He emphasised harmony, discipline and the oneness of all existence. His efforts to revitalise spiritual thought and establish spiritual centres across the nation remain a lasting inspiration. May his wisdom continue to illuminate our path and strengthen our commitment to truth, compassion and collective well-being."